ಕಲರವ

Posts Tagged ‘quotes

ಈ ತಿಂಗಳ ಸಂಚಿಕೆಯ ಮುಖಪುಟ ಲೇಖನವನ್ನು ಮನೆಯಿಂದ ದೂರ ಉಳಿಯುವ ಅನಿವಾರ್ಯತೆ ಇರುವ ಇಲ್ಲವೆ ಆಯ್ಕೆಯನ್ನು ಮಾಡಿಕೊಂಡವರ ಬಗ್ಗೆ ಚರ್ಚಿಸುವುದಕ್ಕೆ ಮೀಸಲಿಡಲಾಗಿದೆ. ಇದಕ್ಕೆ ಪೂರಕವಾಗಿ ಪ್ರತಿ ಪುಟದ ಅಡಿಯಲ್ಲಿ ಮನೆ, ಕುಟುಂಬ ವ್ಯವಸ್ಥೆ, ಜೀವನದಲ್ಲಿನ ತೃಪ್ತಿಯ ಬಗ್ಗೆ ಹಿರಿಯರು, ಬುದ್ಧಿವಂತರು, ಚಿಂತಕರು ನುಡಿದ ಸಾಲುಗಳನ್ನು ಆರಿಸಿ ಪ್ರಕಟಿಸಲಾಗಿದೆ. ಇವು ನಿಮಗಿಷ್ಟವಾಗಬಹುದು ಎಂಬ ನಿರೀಕ್ಷೆ ನಮ್ಮದು…

…………………..

ಮನುಷ್ಯ ತನಗೇನು ಬೇಕು ಎಂಬುದನ್ನು ಅರಸಿ ಜಗತ್ತೆಲ್ಲಾ ಸುತ್ತುವನು. ಕಡೆಗೆ ಅದನ್ನು ಪಡೆಯುವುದಕ್ಕೆ ಮನೆಗೆ ಹಿಂದಿರುಗುವನು.
-ಜಾರ್ಜ್ ಮೂರ್

ಪಯಣವೇ ನನ್ನ ಮನೆ.
– ಮ್ಯುರಿಯಲ್ ರುಕೇಯ್ಸರ್

ವಿದೇಶಕ್ಕೆ ಹೋಗಿ, ಆಗ ಸ್ವದೇಶದಲ್ಲಿನ ಒಳ್ಳೆಯ ಅಂಶಗಳು ಗಮನಕ್ಕೆ ಬರುತ್ತವೆ.
– ಗಯಟೆ

ನೀವೇ ಇರದಿದ್ದ ಮೇಲೆ ಅದು ನಿಮ್ಮ ಮನೆ ಹೇಗಾದೀತು?
– ವೀಡನ್ ಗ್ರಾಸ್‌ಮಿಥ್

ಅದನ್ನು ಪಂಗಡ ಎನ್ನಿ, ಗುಂಪು ಎನ್ನಿ, ಪರಿಚಯ ಎನ್ನಿ, ಸಂಬಂಧ ಎನ್ನಿ, ಕುಟುಂಬ ಎನ್ನಿ, ನೀವು ಯಾರೇ ಆದರೂ ನಿಮಗೆ ಅಂಥದ್ದೊಂದು ಬೇಕು.
– ಜೆಸ್ಸಾಮಿನ್ ವೆಸ್ಟ್

ತಮ್ಮ ಮಕ್ಕಳು ಮನೆಗೆ ಹಿಂದಿರುಗಲು ಅನುಮತಿಸುವ ಜೀವಿಗಳೆಂದರೆ ಮನುಷ್ಯರು ಮಾತ್ರ.
– ಬಿಲ್ ಕಾಸ್ಬಿ

ಕುಟುಂಬವೆಂಬುದು ಇತಿಹಾಸದ ಕೊಂಡಿ, ಭವಿಷ್ಯಕ್ಕೆ ಸೇತುವೆ.
-ವಿಲ್ ಡುರಾಂಟ್

ಕುಟುಂಬ ನಾಗರೀಕತೆಯ ಜೀವ ಕೇಂದ್ರ.
– ಕೊಲೆಟ್

ಇರಲು ಬಯಸುವ ಅತಿಥಿಯನ್ನು ಹೊರಡಿಸುವುದು, ಹೊರಟು ನಿಂತಿರುವವನನ್ನು ನಿಲ್ಲಲ್ಲು ಆಗ್ರಹಿಸುವುದರಷ್ಟೇ ಅಸಭ್ಯ.
– ಹೊಮರ್

ಮಕ್ಕಳು ಏನು ಬಯಸುತ್ತಾರೆ ಎಂಬುದನ್ನು ತಿಳಿದು ಅದನ್ನೇ ಮಾಡುವಂತೆ ಸಲಹೆ ನೀಡುವುದೇ ಮಕ್ಕಳಿಗೆ ಮಾರ್ಗದರ್ಶನ ಮಾಡುವ ಉತ್ತಮ ವಿಧಾನ.
– ಹೆಲೆನ್ ಕೆಲ್ಲರ್

ಹೋಟೆಲ್‌ಗಳ ಅತ್ಯಂತ ಶ್ರೇಷ್ಠ ಉಪಯೋಗವೆಂದರೆ, ಅವು ಮನೆಯಿಂದ ತಪ್ಪಿಸಿಳ್ಳಬಯಸುವವರಿಗೆ ಆಶ್ರಯ ಕೊಡುತ್ತವೆ.
-ಜಾರ್ಜ್ ಬರ್ನಾಡ್ ಶಾ

ಮಕ್ಕಳು ನಿಮ್ಮ ಬದುಕಿನಲ್ಲಿ ಪ್ರಾಮುಖ್ಯತೆಯನ್ನು ತರುತ್ತಾರೆ.
– ಎರ್ಮಾ ಬಾಂಬೆಕ್

ಮನುಷ್ಯನನ್ನು ಹೊಂದಿದ  ನಾಲ್ಕು ಗೋಡೆಗಳ ಯಾವುದೇ ಕಟ್ಟಡ ಮನೆಯಾಗುತ್ತದೆ.
– ಹೆಲೆನ್ ರೌಲಂಡ್

ನಾನು ಕಡೆಯ ಸಲ ಮನೆಗೆ ಹೋದಾಗ ಎಲ್ಲರೂ ಒಟ್ಟಿಗೆ ಸುತ್ತಾಡುವ ಯೋಜನೆ ಹಾಕಿಕೊಂಡಿದ್ದೆವು. ಆದರೆ ಎಲ್ಲಿಗೂ ಹೋಗಲಿಲ್ಲ. ಏಕೆಂದರೆ ಎಲ್ಲರೂ ಒಟ್ಟಿಗೆ ಇರುವ ಸಮಯವೇ ನಮಗೆ ಬೆಲೆಬಾಳುವ ಸಂಗತಿಯಾಗಿ ಕಂಡಿತು.
– ಎಮಿಲಿ ವ್ಯಾಟ್ಸನ್

ನಾನು ನನ್ನಿಡೀ ಜೀವನವನ್ನು ಜಗತ್ತು ಸುತ್ತುವುದರಲ್ಲಿ ಕಳೆಯಬಯಸುತ್ತೇನೆ. ಇನ್ನೊಂದು ಜೀವನ ಸಿಕ್ಕುವ ಹಾಗಿದ್ದರೆ ಅದನ್ನು ನನ್ನ ದೇಶದಲ್ಲಿ ಕಳೆಯ ಬಯಸುತ್ತೇನೆ.
– ವಿಲಿಯಂ ಹಜ್ಲಿಟ್

ನಾನು ನನ್ನ ಮಕ್ಕಳನ್ನು ಎಲ್ಲೆಲ್ಲಿಗೆಲ್ಲಾ ಕರೆದೊಯ್ದಿದ್ದೇನೆ. ಆದರೆ ಕಳ್ನನ್ಮಕ್ಳು ಯಾವಾಗ್ಲೂ ಮನೆಯ ದಾರಿಯನ್ನು ಹುಡುಕಿಕೊಂಡು ಬಿಡ್ತಾರೆ!
– ರಾಬರ್ಟ್ ಒರ್ಬೆನ್

ಮನೆಯಲ್ಲಿ ಸುರಕ್ಷಿತವಾಗಿದ್ದಾಗ ಹೊರಗೆ ಸಾಹಸ ಮಾಡೋಣ ಅನ್ನಿಸುತ್ತದೆ. ಹೊರಗೆ ಸಾಹಸ ಮಾಡಬೇಕಾದ ಸಮಯ ಬಂದಾಗ ಮನೆಯಲ್ಲಿ ಸುರಕ್ಷಿತವಾಗಿರುವುದು ಒಳಿತು ಅನ್ನಿಸುತ್ತದೆ.
– ಥಾರ್ನ್‍ಟನ್ ವಿಲ್ಡರ್

…………………..

The best way to keep children home is to make the home atmosphere pleasant-and let the air out of the tires.
–    Dorothy Parker

Home is where the heart is, so your real home’s in your chest.
–    Joss Whedon, Zack Whedon, Maurissa Tancharoen, and Jed Whedon

Home is where one starts from.
– T. S. Eliot

In every conceivable manner, the family is link to our past, bridge to our future.
– Alex Haley

The family is the nucleus of civilization.
– Ariel and Will Durant

It is not a bad thing that children should occasionally, and politely, put parents in their place.
–  Colette

I have found the best way to give advice to your children is to find out what they want and then advise them to do it.
– Harry S Truman

A man can’t make a place for himself in the sun if he keeps taking refuge under the family tree.
– Helen Keller

Call it a clan, call it a network, call it a tribe, call it a family:
Whatever you call it, whoever you are, you need one.
– Jane Howard

Writing is a solitary occupation. Family, friends, and society are the natural enemies of the writer. He must be alone, uninterrupted, and slightly savage if he is to sustain and complete an undertaking.
– Jessamyn West

I love people. I love my family, my children . . . but inside myself is a place where I live all alone and that’s where you renew your springs that never dry up.
– Pearl S. Buck

It is equally offensive to speed a guest who would like to stay and to detain one who is anxious to leave.
–    Homer

A man travels the world over in search of what he needs and returns home to find it.
– George Moore

The most important work you and I will ever do will be within the walls of our own homes.
– Harold B. Lee

There is plenty of peace in any home where the family doesn’t make the mistake of trying to get together.
– Kin Hubbard

The journey is my home.
– Muriel Rukeyser

Home is the place where, when you have to go there, they have to take you in.
– Robert Frost

ಹುಟ್ಟಿನಿಂದಲೇ ಒಬ್ಬ ನಾಯಕನಾಗುತ್ತಾನಾ ಇಲ್ಲವೇ ನಾಯಕನ್ನು ತಯಾರು ಮಾಡಲಾಗುತ್ತದಾ?ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ನಾಯಕತ್ವದ ಗುಣ ಜನ್ಮದತ್ತವಾದದ್ದಾ ಅಥವಾ ಪರಿಶ್ರಮದಿಂದ ಬೆಳೆಸಿಕೊಳ್ಳಬಹುದಾದದ್ದಾ? ನಾಯಕನಲ್ಲಿರಬೇಕಾದ ಗುಣಗಳು ಎಂಥವು? ಬದುಕು ನಾಯಕನನ್ನು ರೂಪಿಸುತ್ತದಾ?
ಈ ಪ್ರಶ್ನೆಗಳನ್ನು ಮೂಲವಾಗಿಟ್ಟುಕೊಂಡು ಜಗತ್ತಿನಲ್ಲಿ ಲಕ್ಷಾಂತರ ಲೀಡರ್ ಶಿಪ್‌ಗೆ ಸಂಬಂಧಿಸಿದ ಪುಸ್ತಕಗಳು ಬೆಳಕು ಕಂಡಿವೆ. ಆದರೆ ಒಂದೇ ಒಂದು ಸಾಲು ಹೇಳುವ ಸತ್ಯದಷ್ಟು ಪರಿಣಾಮಕಾರಿಯಾಗಿ ಬೇರಾವ ಪುಸ್ತಕವೂ ಇರದು. ಈ ಸಂಚಿಕೆಯ ಪುಟಗಳ quoteಗಳ ತುಂಬಾ ಲೀಡರನ ಹುರುಪೇ ತುಂಬಿದೆ.
-ಸಂ

…………………………

ಅಗೋ ಅಲ್ಲಿ ನನ್ನ ಜನರು ಹೋಗುತ್ತಿದ್ದಾರೆ. ನಾನವರನ್ನು ಹಿಂಬಾಲಿಸಬೇಕು, ಏಕೆಂದರೆ ನಾನು ಅವರ ನಾಯಕ. – ಅಲೆಕ್ಝಾಂಡರ್ ಲೆಡ್ರು-ರಾಲಿನ್

ನಿಜವಾದ ನಾಯಕ ಮುಂದೇ ನಡೆಯಬೇಕಿಲ್ಲ, ಆತ ದಾರಿ ತೋರಿದರೂ ಸಾಕು. – ಹೆನ್ರಿ ಮಿಲ್ಲರ್

ನಿಮ್ಮ ಕೆಲಸಗಳು ಇತರರಿಗೆ ಹೆಚ್ಚು ಕನಸು ಕಾಣಲು, ಹೆಚ್ಚು ಕಲಿಯಲು, ಹೆಚ್ಚು ಕೆಲಸಮಾಡಲು ಹಾಗೂ ಹೆಚ್ಚಿನದನ್ನು ಸಾಧಿಸಲು ಸ್ಫೂರ್ತಿಯಾಗುತ್ತದೆಂದರೆ ನೀವು ಒಬ್ಬ ನಾಯಕ. -ಜಾನ್ ಕ್ವಿನ್ಸಿ ಆಡಮ್ಸ್

ಕೆಲಸವನ್ನು ಹೇಗೆ ಸಾಧಿಸುವುದು ಎಂಬುದನ್ನು ಜನರಿಗೆ ಹೇಳಲು ಹೋಗಬೇಡಿ. ಸಾಧಿಸಬೇಕಾದ್ದು ಏನು ಎಂದು ಹೇಳಿ ಸಾಕು, ಅವರು ತಮ್ಮ ಸ್ವಂತಿಕೆಯಿಂದ ನಿಮ್ಮನ್ನು ದಂಗುಬಡಿಸುತ್ತಾರೆ. – ಜಾರ್ಜ್ ಪ್ಯಾಟನ್

ಒಳ್ಳೆಯ ಸೇನಾಧಿಪತಿ ಕೇವಲ ಗೆಲುವಿನ ದಾರಿಯನ್ನು ಕಾಣುವುದಿಲ್ಲ, ಗೆಲುವು ಯಾವಾಗ ಅಸಾಧ್ಯ ಎಂಬುದನ್ನೂ ಕಾಣುತ್ತಾನೆ. -ಪಾಲಿಬಿಯಸ್

ಸಾವಿರದಲ್ಲಿ ಕೇವಲ ಒಬ್ಬ ಗಂಡಸು ನಾಯಕನಾಗುತ್ತಾನೆ. ಉಳಿದ ೯೯೯ ಮಂದಿ ಹೆಂಗಸರನ್ನು ಹಿಂಬಾಲಿಸುತ್ತಾರೆ. -ಗ್ರೌಖೊ ಮಾರ್ಕ್ಸ್

ಇತರರ ಬಾಳಿಗೆ ಬೆಳಕನ್ನು ತರುವವರು ತಮ್ಮನ್ನು ತಾವು ಅದರಿಂದ ಅಡಗಿಸಿಕೊಳ್ಳಲಾಗದು. – ಜೇಮ್ಸ್ ಮ್ಯಾಥ್ಯೂ ಬ್ಯಾರಿ

ಕುದುರೆಯ ಮೇಲೆ ಕೂತರೆ ತಾನು ಹಾಸ್ಯಾಸ್ಪದವಾಗಿ ಕಾಣಿಸಬಹುದು ಎಂದು ಯೋಚಿಸುವವನು ಒಳ್ಳೆಯ ದಂಡನಾಯಕನಾಗಲಾರ. – ಅಡ್ಲಾಯ್ ಸ್ಟೀವನ್‌ಸನ್

ಯಶಸ್ಸಿಗೆ ಸೂತ್ರವನ್ನು ಕೊಡಲು ನನಗೆ ಸಾಧ್ಯವಿಲ್ಲ. ಆದರೆ ಸೋಲಿಗೆ ಸೂತ್ರವನ್ನು ಕೊಡಬಲ್ಲೆ: ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸು. – ಹರ್ಬರ್ಟ್ ಬಿ. ಸ್ವೊಪ್

ನನಗೆ ಇತರರಿಗಿಂತ ದೂರದ್ದನ್ನು ಕಾಣಲು ಸಾಧ್ಯವಾಗಿರುವುದು ಬಲಿಷ್ಟರ ಭುಜಗಳ ಮೇಲೆ ನಿಂತಿರುವುದಕ್ಕೆ. -ಐಸಾಕ್ ನ್ಯೂಟನ್

ಪ್ರೀತಿಯಿಲ್ಲದ ವಿಮರ್ಶೆ ಹಾಗೂ ವಿಮರ್ಶೆ ಇಲ್ಲದೆ ಪ್ರೀತಿ ಮಾಡುವವರ ನಡುವೆ ಸಿಕ್ಕಿ ಬಿದ್ದ ನಾಯಕನ ಬಗ್ಗೆ ಅನುಕಂಪವಿರಲಿ. – ಜಾನ್ ಗಾರ್ಡನರ್

ನನಗನ್ನಿಸುತ್ತೆ, ನಾಯಕತ್ವ ಅಂದರೆ ಒಂದು ಕಾಲದಲ್ಲಿ ತೋಳ್ಬಲ ಎಂದುಕೊಳ್ಳಲಾಗುತ್ತಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಜನರೊಂದಿಗೆ ಬೆರೆಯಬಲ್ಲವನೇ ನಾಯಕ. -ಮೋ.ಕ.ಗಾಂಧಿ

ನಾಯಕತ್ವದ ಹೊಣೆ ಹೆಚ್ಚು ನಾಯಕರನ್ನು ಬೆಳೆಸುವುದೇ ಹೊರತು ಹೆಚ್ಚು ಹಿಂಬಾಲಕರನ್ನು ಗಳಿಸುವುದಲ್ಲ. – ರಾಲ್ಫ್ ನಡರ್

ನಿಮ್ಮ ಭಯವನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ, ನಿಮ್ಮಲ್ಲಿರುವ ಲವಲವಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳಿ. -ರಾಬರ್ಟ್ ಲೂಯಿಸ್ ಸ್ಟೀವನ್ ಸನ್

ನಾಯಕನಾದವು ಹಲವು ವೇಳೆ ನಿಷ್ಟುರನಾಗಬೇಕಾಗುತ್ತದೆ. – ಅಲನ್ ಅಟ್ರಿ

ಇವತ್ತಿನ ಜಗತ್ತಿನಲ್ಲಿ ನಾಯಕತ್ವವಿರುವುದು ಅಧಿಕಾರದಲ್ಲಲ್ಲ, ಪ್ರಭಾವದಲ್ಲಿ. -ಕೆನ್ ಬ್ಲಾಚಾರ್ಡ್

ಹಿಂಬಾಲಿಸುವ ಎಲ್ಲರಲ್ಲೂ ಮುನ್ನಡೆಯುವ ಕೆಚ್ಚನ್ನು ಹುಟ್ಟಿಸಬಲ್ಲವನೇ ನಾಯಕ. -ಅನಾಮಿಕ

………………………

The history of the world is but the
biography of great men.
-Thomas Carlyle

Leadership should be born out of the understanding of the needs of those who would be affected by it.
-Marian Anderson

He who has never learned to obey
cannot be a good commander.
-Aristotle

The ultimate measure of a man is not where he stands in moments of comfort, but where he stands at times of challenge and controversy.
-Martin Luther King, Jr.

When I give a minister an order, I leave it to him to find the means to carry it out.
-Napoleon Bonaparte

To do great things is difficult; but to command great things is more difficult.
-Friedrich Nietzsche

Management is doing things right; leadership is doing the right things.
-Peter F. Drucker

Leadership is the art of getting someone else to do something you want done because he wants to do it.
-Dwight Eisenhower

A sense of humor is part of the art of leadership, of getting along with people, of getting things done. –Dwight D. Eisenhower

Leadership can be thought of as a capacity to define oneself to others in a way that clarifies and expands a vision of the future.
-Edwin H. Friedman

The art of leadership is saying no, not yes. It is very easy to say yes.
– Tony Blair

The only safe ship in a storm is leadership.
– Faye Wattleton

A leader must have the courage to act against an expert’s advice.
-James Callaghan

Time is neutral and does not change things. With courage and initiative, leaders change things.
– Jesse Jackson

A leader takes people where they want to go. A great leader takes people where they don’t necessarily want to go, but ought to be.
– Rosalynn Carter

Leaders aren’t born they are made. And they are made just like anything else, through hard work. And that’s the price we’ll have to pay to achieve that goal, or any goal.
– Vince Lombardi

The manager asks how and when; the leader asks what and why.
– Warren Bennis

…………………………


Blog Stats

  • 69,182 hits
ಅಕ್ಟೋಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031

Top Clicks

  • ಯಾವುದೂ ಇಲ್ಲ