ಕಲರವ

Posts Tagged ‘facts

1714 ರಿಂದ 1727ರವರೆಗೆ ಇಂಗ್ಲೆಂಡನ್ನು ಆಳಿದ ದೊರೆ ಕಿಂಗ್ ಜಾರ್ಜ್‍ಗೆ ಇಂಗ್ಲೀಷ್ ಮಾತಾಡಲು, ಬರೆಯಲು ಬರುತ್ತಿರಲಿಲ್ಲ!

……….

ಜಗತ್ತಿನಲ್ಲೇ ಅತಿ ಪ್ರಸಿದ್ಧವಾದ ಹಾಡು ಎಂಬ ಕೀರ್ತಿಯನ್ನು ಗಳಿಸಿರುವುದು ಹುಟ್ಟು ಹಬ್ಬದ ದಿನ ಹಾಡುವ ‘ಹ್ಯಾಪಿ ಬರ್ಥ್ ಡೇ..ಟು ಯು…’ ಹಾಡು. ಇದನ್ನು ಸಂಯೋಜಿಸಿದವರು ಅಮೇರಿಕಾದ ಕೆಂಟುಕಿ ಪ್ರದೇಶದ ಇಬ್ಬರು ಶಾಲಾ ಶಿಕ್ಷಕರಾದ ಮಿಲ್ಡ್ರೆಡ್ ಹಾಗೂ ಪ್ಯಾಟಿ ಹಿಲ್ . ೧೮೯೩ರಲ್ಲಿ ಅವರು ಹೊರತಂದ ‘ಗುಡ್ ಮಾರ್ನಿಂಗ್ ಟು ಯು’ ಆಲ್ಬಮ್ಮಿನಲ್ಲಿ ಈ ಗೀತೆಯೂ ಸೇರಿತ್ತು.

……….

ಜಾನ್ ಕೆನಡಿ ತನ್ನ ಪ್ರೇಯಸಿ ಜ್ಯಾಕಲಿನ್‍ಳಿಗೆ ಬರೆದಿದ್ದನೆಲ್ಲಲಾದ ಅತ್ಯಂತ ಚಿಕ್ಕ ಪ್ರೇಮಪತ್ರದಲ್ಲಿದ್ದದ್ದು:
“Jackie I wish you were here.” (ಜಾಕಿ, ನೀನು ಇಲ್ಲಿರಬೇಕಿತ್ತು ಅನ್ನಿಸುತ್ತಿದೆ)

………

ಚಂಬಲ್ ಕಣಿವೆ ರಾಣಿ ಎಂದೇ ಖ್ಯಾತಿ ಹಾಗೂ ಕುಖ್ಯಾತಿಯನ್ನು ಸಂಪಾದಿಸಿದ್ದವರು ಪೂಲನ್ ದೇವಿ. ಆಕೆ ಡಕಾಯಿತಿಯನ್ನು ರಾಜಕೀಯವನ್ನು ಪ್ರವೇಶಿಸಿದ್ದರು. ಒಮ್ಮೆ ಕೆಲಸ ಮುಗಿಸಿಕೊಂಡು ಟಾಟಾ ಸುಮೋದಲ್ಲಿ ಮನೆಗೆ ಹಿಂತಿರುಗುವಾಗ ಮೊಟಾರ್ ಬೈಕ್ ಸವಾರನೊಬ್ಬ ಆಕೆಯನ್ನು ಅಡ್ಡಗಟ್ಟಿ ಗನ್ ತೋರಿಸಿ ಬೆದರಿಸಿ ಪರ್ಸ್ ಕದ್ದು ಮುವತ್ತೈದು ಸಾವಿರ ರೂಪಾಯಿ ದರೋಡೆ ಮಾಡಿದ್ದ!

………

No amount of advance planning will ever replace dumb luck.

Smoking is a dying art.

……..

ಆ…ಆ… ಆಕ್ಷೀ!

ಯಾರಾದರೂ ಸೀನಿದಾಗ ‘ದೇವರು ಕಾಪಾಡಲಿ’ ಎಂದು ಹೇಳುವ ಸಂಪ್ರದಾಯ ಹಲವೆಡೆ ಇದೆ. ಇದಕ್ಕೆ ಕಾರಣವಿಲ್ಲದಿಲ್ಲ. ಒಮ್ಮೆ ನೀವು ಸೀನಿದಾಗ ನಿಮ್ಮ ಹೃದಯ ಒಂದು ಮಿಲಿ(ಸಾವಿರದಲ್ಲಿ ಒಂದು ಭಾಗ) ಸೆಕೆಂಡಿನಷ್ಟು ಕಾಲ ಸ್ತಬ್ಧವಾಗುತ್ತದೆ!

ನೀವು ಜೋರಾಗಿ ಸೀನುವಾಗ ನಿಮ್ಮ ಎದೆಗೂಡು ಜಖಂಗೊಳ್ಳಬಹುದು.

ಸೀನನ್ನು ನೀವು ಹತ್ತಿಕ್ಕಲು ಪ್ರಯತ್ನಿಸಿದರೆ ನಿಮ್ಮ ತಲೆಯಲ್ಲಿ ಅಥವಾ ಕತ್ತಿನಲ್ಲಿರುವ ರಕ್ತನಾಳ ಹರಿದು ನೀವು ಸತ್ತೇ ಹೋಗಬಹುದು!

ಸೀನುವಾಗ ಕಣ್ಣು ಮುಚ್ಚಿಕೊಳ್ಳುತ್ತೇವೆ ಅಲ್ಲವೇ? ಒಂದು ವೇಳೆ ನೀವು ಕಣ್ಣುಗಳನ್ನು ತೆರೆದಿರಿಸಿಕೊಂಡದ್ದೇ ಆದಲ್ಲಿ ನಿಮ್ಮ ಸೀನಿನ ಆರ್ಭಟಕ್ಕೆ ಕಣ್ಣುಗುಡ್ಡೆ ಹೊರಬಂದುಬಿಡಬಹುದು!


Blog Stats

  • 69,009 hits
ಸೆಪ್ಟೆಂಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
27282930