ಕಲರವ

Posts Tagged ‘ವಾಚಕರ ವಾಣಿ


ಮುದ್ರಿತ ಪತ್ರಿಕೆಗೆ ಪತ್ರಗಳ ಮೂಲಕ ಓದುಗರು ನೀಡಿದ ಪ್ರತಿಕ್ರಿಯೆಗಳ ದಿ ವರ್ಡಿಕ್ಟ್!

ಫೆಬ್ರವರಿ ಸಂಚಿಕೆಯನ್ನು ಎಲ್ಲಾ ಪತ್ರಿಕೆಗಳು ಪ್ರೀತಿಯ ಬಗೆಗಿನ ಲೇಖನ, ಚರ್ಚೆಗಳಿಗೆ ಮೀಸಲಿಡುವುದು ವಾಡಿಕೆ. ಆದರೆ ನಿಮ್ಮ ಪ್ರಯತ್ನದಲ್ಲಿದ್ದ ಹೊಸತನ, ಇತರೆ ಪತ್ರಿಕೆಗಳ ಅದೇ ‘ಪ್ರೀತಿ ಮಾಯೆ’ ಎಂದು ಹೇಳುವಂತಹ ಹಳಸು ಲೇಖನಗಳನ್ನು ಗುಡಿಸಿ ಹಾಕುವಂತಿತ್ತು. ಪ್ರೀತಿಯ ಬಗ್ಗೆ ಹೊಸತೊಂದು ಆಲೋಚನೆಯನ್ನು ಹುಟ್ಟಿಸುವಲ್ಲಿ, ಪ್ರೀತಿಯ ಮತ್ತೊಂದು ಮಗ್ಗುಲನ್ನು ದರ್ಶಿಸುವಲ್ಲಿ ಯಶಸ್ವಿಯಾಯಿತು. ನಿಮ್ಮ ಪ್ರಯತ್ನಕ್ಕೆ ಹ್ಯಾಟ್ಸಾಫ್!
-ರಾಜಶೇಖರ್, ಮೈಸೂರು

‘ಇಂತಿ ನಿನ್ನ ಪ್ರೀತಿಯ’ ಅಂಕಣದಲ್ಲಿ ಮೂಡಿಬರುತ್ತಿರುವ ಪ್ರೇಮ ಪತ್ರಗಳ ಮಾದರಿಯ ಪತ್ರಗಳು ವಿಶಿಷ್ಟವಾಗಿವೆ. ಒಂದೊಂದು ಪತ್ರವೂ ಪ್ರೀತಿಯ ವಾಸ್ತವವನ್ನು ಮನಮುಟ್ಟುವಂತೆ ಕಟ್ಟಿಕೊಡುತ್ತವೆ. ನಮ್ಮ ಸಿನೆಮಾ, ಧಾರಾವಾಹಿಗಳು, ಸಮೂಹ ಮಾಧ್ಯಮಗಳು ಸೃಷ್ಟಿಸುತ್ತಿರುವ ಭ್ರಮೆಯ ಜಗತ್ತಿನಿಂದ ಹೊರ ಬರಲು ಇವು ನಿಜಕ್ಕೂ ಸಹಾಯ ಮಾಡುವಂತಿವೆ. ಇಂಥ ಲೇಖನಗಳನ್ನು ನಮ್ಮ ಯುವಕರು ಹೆಚ್ಚು ಓದಿದರೆ ಅವರು ಪ್ರೀತಿಯ ಬಗೆಗಿನ ಭ್ರಮೆಯಿಂದ ಮುಕ್ತರಾಗಬಹುದು.
– ಚೇತನಾ, ಹಾಸನ

‘ಸಡಗರ’ ಪತ್ರಿಕೆಯು ನಿತ್ಯನೂತನವಾಗಿ, ಹೊಸ ಪ್ರಯತ್ನಗಳಿಂದ ಕೂಡಿ ಹೊರಬರುತ್ತಿರುವುದು ಸಂತೋಷದ ವಿಷಯ. ನಿಮ್ಮ ಪತ್ರಿಕೆ ಯಾವ ಜನಪ್ರಿಯ ಪ್ರೊಫೆಶನಲ್ ಪತ್ರಿಕೆಗಳಿಂದ ಕಡಿಮೆಯಿಲ್ಲ. ಆದರೆ ಅವುಗಳಲ್ಲಿ ಹಲವಕ್ಕೆ ಇಲ್ಲದ ಅಂತಃಸಾಕ್ಷಿ ನಿಮ್ಮಲ್ಲಿ ಕಂಡುಬರುತ್ತಿದೆ. ಇದು ಸಂತೋಷದ ವಿಷಯ. ನಿಮ್ಮ ಯುವಕರ ತಂಡಕ್ಕೆ ಶುಭಾಶಯಗಳು. ಪತ್ರಿಕೆಗೆ ನನ್ನ ಚಂದಾ ಹಣವನ್ನು ಸ್ವೀಕರಿಸಿ.
ಗಿರಿಧರ್.ಎನ್, ದಾವಣಗೆರೆ


Blog Stats

  • 69,182 hits
ಅಕ್ಟೋಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031

Top Clicks

  • ಯಾವುದೂ ಇಲ್ಲ