ಕಲರವ

Posts Tagged ‘ಲೋಟ

ಹಣೆ ಬರಹ

ಜಪಾನಿನ ಒಂದು ಮುಖ್ಯವಾದ ಯುದ್ಧದಲ್ಲಿ ತನ್ನ ಸೈನ್ಯವು ಬಹುತೇಕ ನಾಶವಾಗಿದ್ದರೂ, ಸೈನಿಕರು ದಣಿದಿದ್ದರೂ ಸೈನ್ಯಾಧಿಕಾರಿಗೆ ಗೆಲುವು ಸಾಧ್ಯವೆಂಬ ಭರವಸೆಯಿತ್ತು. ಆದರೆ ಸೈನಿಕರು ಸಂಶಯದಲ್ಲಿದ್ದರು. ಪುನಃ ಯುದ್ಧವನ್ನು ಮುಂದುವರೆಸುವುದೆಂದು ಸೈನ್ಯಾಧಿಕಾರಿ ನಿರ್ಧರಿಸಿದ.
ಸೈನ್ಯವು ಯುದ್ಧಕ್ಕೆ ತೆರಳುತ್ತಿದ್ದಾಗ ದಾರಿಯಲ್ಲಿ ಒಂದು ದೇವಾಲಯದ ಬಳಿ ಪ್ರಾರ್ಥನೆಗಾಗಿ ನಿಂತಿತು. ತನ್ನ ಸೈನಿಕರೊಂದಿಗೆ ಪ್ರಾರ್ಥನೆ ಮುಗಿಸಿದ ಬಳಿಕ ಸೈನ್ಯಾಧಿಕಾರಿಯು ಕಿಸೆಯಿಂದ ಒಂದು ನಾಣ್ಯವನ್ನು ಹೊರ ತೆಗೆದು, “ಸೈನಿಕರೇ, ಈ ನಾಣ್ಯವನ್ನು ನಾನೀಗ ಚಿಮ್ಮಿಸುತ್ತೇನೆ. ಅದರ ಮುಂಭಾಗ ಕಂಡರೆ, ನಾವು ಗೆಲ್ಲುತ್ತೇವೆ. ಹಿಂಭಾಗ ಕಂಡರೆ ನಾವು ಸೋಲುತ್ತೇವೆ.” ಎಂದು ಹೇಳಿ ನಾಣ್ಯವನ್ನು ಮೇಲಕ್ಕೆ ಚಿಮ್ಮಿಸಿದನು. ಎಲ್ಲರೂ ಕುತೂಹಲದಿಂದ ಅದು ಕೆಳಗೆ ಬೀಳುವುದನ್ನೇ ಕಾಯುತ್ತಿದ್ದರು. ನಾಣ್ಯ, ಮುಂಭಾಗ ಕಾಣುವಂತೆ ಕೆಳಗೆ ಬಿತ್ತು. ಸೈನಿಕರು ತಮ್ಮ ಎದೆಯಲ್ಲಿ ಭರವಸೆಯನ್ನು ತುಂಬಿಕೊಂಡು ವೀರಾವೇಶದಿಂದ ಶತ್ರುಗಳೊಂದಿಗೆ ಕಾದಿದರು. ಕಡೆಗೆ ಯುದ್ಧದಲ್ಲಿ ಗೆಲುವು ಸಾಧಿಸಿದರು.

“ವಿಧಿಯನ್ನು ಯಾರೂ ಬದಲಾಯಿಸಲಾಗುವುದಿಲ್ಲ.” ಎಂದು ಒಬ್ಬ ಸೈನಿಕ ಸೈನ್ಯಾಧಿಕಾರಿಗೆ ಹೇಳಿದನು.

“ನಿಜವಾಗಿಯೂ”, ಎನ್ನುತ್ತಾ ಸೈನ್ಯಾಧಿಕಾರಿಯು ನಾಣ್ಯವನ್ನು ಎಲ್ಲರಿಗೂ ತೋರಿಸಿದನು. ಅದರ ಎರಡೂ ಮುಖಗಳು ಒಂದೇ ರೀತಿ ಇದ್ದವು!

Hotei.jpg

ಲೋಟ ಒಡೆದಿತ್ತು

ಇಕ್ಯು ಎಂಬ ಜೆನ್ ಗುರು ಬಾಲ್ಯದಿಂದಲೇ ಮಹಾ ಬುದ್ಧಿವಂತನಾಗಿದ್ದ. ಅವನ ಗುರುವಿನ ಬಳಿ ಬಹಳ ಬೆಲೆ ಬಾಳುವ ಒಂದು ಅಮೂಲ್ಯವಾದ ಚಹಾ ಲೋಟವಿತ್ತು. ಒಂದು ದಿನ, ಪಾತ್ರೆಗಳನ್ನು ಜೋಡಿಸುತ್ತಿದ್ದಾಗ ಅಕಸ್ಮಾತಾಗಿ ಅವನು ಆ ಲೋಟವನ್ನು ಕೆಳಕ್ಕೆ ಬೀಳಿಸಿ ಒಡೆದುಬಿಟ್ಟನು! ಗುರುವಿನ ಹೆಜ್ಜೆ ಸಪ್ಪಳವನ್ನು ಕೇಳಿದ ಕೂಡಲೇ ಅವನು ಕೇಳಿದನು, “ಗುರುಗಳೇ, ಜನರೇಕೆ ಸಾಯುತ್ತಾರೆ?” ಗುರು ಹೇಳಿದನು, “ಅದು ಸಹಜ ಮಗೂ, ಸ್ವಲ್ಪ ಕಾಲ ಜೀವಿಸಿದ ನಂತರ ಎಲ್ಲವೂ ಸಾಯಲೇ ಬೇಕು.”
ಇಕ್ಯು ಲೋಟದ ಚೂರುಗಳನ್ನು ತೋರಿಸುತ್ತಾ ಹೇಳಿದನು, “ಗುರುಗಳೇ, ತಮ್ಮ ಲೋಟಕ್ಕೆ ಸಾಯುವ ಕಾಲ ಬಂದಿತ್ತು!”


Blog Stats

  • 69,182 hits
ಅಕ್ಟೋಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031

Top Clicks

  • ಯಾವುದೂ ಇಲ್ಲ