ಕಲರವ

Posts Tagged ‘ನುಡಿಮುತ್ತುಗಳು

ಗೆಳೆತನ ವೈನ್ ಇದ್ದ ಹಾಗೆ; ಕಾಲ ಕಳೆದಷ್ಟೂ ರುಚಿಗಟ್ಟುತ್ತಾ ಹೋಗುತ್ತದೆ ಎಂಬ ಮಾತಿದೆ. ನಾವು ಬಯಸಲಿ ಬಿಡಲಿ, ನಮ್ಮ ಅರಿವಿಗೆ ಬಾರದಂತೆ ನಾವು ಗೆಳೆತನದ ನವಿರಾದ ಬಳ್ಳಿಗಳನ್ನು ನಮ್ಮ ಸುತ್ತಲೂ ಹಬ್ಬಿಸಿಕೊಂಡಿರುತ್ತೇವೆ.ನಾವು ಎತ್ತರೆತ್ತರಕ್ಕೆ ಬೆಳೆದಷ್ಟೂ, ವಿಶಾಲವಾದಷ್ಟೂ ನಮ್ಮನ್ನಪ್ಪುವ ಬಳ್ಳಿಗಳೂ ಹೆಚ್ಚಾಗುತ್ತವೆ, ಆಪ್ಯಾಯಮಾನವಾಗುತ್ತವೆ.

ಇಂತಹ ಅಪ್ಪಟ ಮಧುರ ಅನುಭೂತಿಯಾದ ಗೆಳೆತನವೆನ್ನು ಅಕ್ಷರಗಳಲ್ಲಿ ಹಿಡಿದಿಡಲು, ಪದಗಳ ಸಹಾಯದಿಂದ ಅಮೂರ್ತ ಸ್ನೇಹಕ್ಕೆ ಆಕಾರ ಕೊಡಲು ಹಲವರು ಪ್ರಯತ್ನಿಸಿದ್ದಾರೆ. ಅವರ ಆ ಪ್ರಯತ್ನಗಳ, ಅವುಗಳಲ್ಲಿನ ಯಶಸ್ಸಿನ ಭ್ರಮೆಗಳ, ಸೋಲಿನ ಶರಣಾಗತಿಯ ಝಲಕ್ಕುಗಳು ಈ ಸಂಚಿಕೆಯ ಪ್ರತಿ ಪುಟದ ತಳದಲ್ಲಿ ನುಡಿಮುತ್ತುಗಳಾಗಿ ಜಾಗ ಪಡೆದಿವೆ. ಓದುವ ಖುಷಿ ನಿಮ್ಮದು.

– ‘ಡ್ರೈವರ್’

……………………………………………………………………………

ಎರಡು ದೇಹಗಳಲ್ಲಿ ಉಸಿರಾಡುವ ಒಂದೇ ಜೀವವೆಂದರೆ ಅದು ಸ್ನೇಹ.
-ಅರಿಸ್ಟಾಟಲ್

ನಿನ್ನ ನಿಜವಾದ ಗೆಳೆಯ ಎಂದಿಗೂ ನಿನ್ನ ಹಾದಿಗೆ ಅಡ್ಡ ಬರುವುದಿಲ್ಲ, ನೀನು ಅಡ್ಡಹಾದಿ ಹಿಡಿಯದಿದ್ದರೆ.
– ಅರ್ನಾಲ್ಡ್ .ಎಚ್.ಗ್ಲಾಸೋವ್

ನಿನ್ನ ಬಗ್ಗೆ ಎಲ್ಲವನ್ನೂ ತಿಳಿದೂ ನಿನ್ನನ್ನು ಇಷ್ಟ ಪಡುವವನೇ ಗೆಳೆಯ.
– ಎಲ್ಬರ್ಟ್ ಹಬ್ಬಾರ್ಡ್

ಭಯ ಒಳ್ಳೆಯ ಗೆಳೆಯರಾಗಬಹುದಾದವರನ್ನು ಅಪರಿಚಿತರನ್ನಾಗಿ ಉಳಿಸಿಬಿಡುತ್ತದೆ.
– ಶಿರ್ಲಿ ಮೆಕ್ಲೈನ್

ತೀರಾ ಪ್ರಾಮಾಣಿಕರಾಗಿದ್ದೇವೆ ಎಂದು ತೋರಿಸಿಕೊಳ್ಳುವುದು ಗೆಳೆಯರ ಪಾಲಿಗೆ ಒಳ್ಳೆಯದು ಆದರೆ ಗೆಳೆತನಕ್ಕಲ್ಲ.
– ಮಿಗ್ನನ್ ಮೆಕ್ ಲಾಫಿಂಗ್

ನಾನು ಬದಲಾದಾಗ ಬದಲಾಗುವ, ನಾನು ಹೇಳಿದ್ದಕ್ಕೆಲ್ಲಾ ತಲೆಬಾಗುವ ಗೆಳೆಯ ಬೇಕಿಲ್ಲ, ಆ ಕೆಲಸವನ್ನು ನನ್ನ ನೆರಳು ಇನ್ನೂ ಚೆನ್ನಾಗಿ ಮಾಡುತ್ತದೆ.
– ಪ್ಲುಟಾರ್ಚ್

ನಿಮ್ಮ ಶತೃವನ್ನು ನಿರ್ನಾಮ ಮಾಡುವ ಅತ್ಯಂತ ಶ್ರೇಷ್ಠ ವಿಧಾನವೆಂದರೆ ಆತನನ್ನು ಗೆಳೆಯನನ್ನಾಗಿ ಮಾಡಿಕೊಳ್ಳುವುದು.
– ಅಬ್ರಹಾಂ ಲಿಂಕನ್

ಪ್ರತಿಯೊಬ್ಬನೂ ಒಳ್ಳೆಯ ಸ್ನೇಹದ ಬೇಟೆಯಲ್ಲಿ ತನ್ನ ಜೀವನವನ್ನು ಕಳೆಯುತ್ತಾನೆ.
– ರಾಲ್ಫ್ ವಾಲ್ಡೋ ಎಮರ್ಸನ್

ಮನಸ್ಸುಗಳನ್ನು ಆಳವಾಗಿಸಿಕೊಳ್ಳುವ ಉದ್ದೇಶ ಹೊರತುಪಡಿಸಿ ಬೇರಾವ ಉದ್ದೇಶವೂ ಸ್ನೇಹಕ್ಕಿರಬಾರದು.
– ಖಲೀಲ್ ಗಿಬ್ರಾನ್

ಬೇರೆಯವರ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದರಿಂದ ನೀವು ಎರಡೇ ತಿಂಗಳಲ್ಲಿ ಪಡೆಯುವ ಗೆಳೆಯರನ್ನು, ನಿಮ್ಮಲ್ಲಿ ಆಸಕ್ತಿ ಇರುವವರನ್ನು ಹುಡುಕುತ್ತಾ ಎರಡು ವರ್ಷದಲ್ಲಿಯೂ ಪಡೆಯಲಾರಿರಿ.
– ಬರ್ನಾರ್ಡ್ ಮೆಲ್ಟರ್

ಸ್ವಾತಂತ್ರ್ಯ ಇಲ್ಲದ ಜಾಗದಲ್ಲಿ ಗೆಳೆತನ ಬದುಕಿರಲು ಸಾಧ್ಯವಿಲ್ಲ.
-ವಿಲಿಯಂ ಪೆನ್

ಕೊನೆಯಲ್ಲಿ ನಮಗೆ ನೆನಪಿನಲ್ಲಿ ಉಳಿಯುವುದು ನಮ್ಮ ಎದುರಾಳಿಗಳ ಮಾತುಗಳಲ್ಲ, ನಮ್ಮ ಸ್ನೇಹಿತರ ಮೌನ.
– ಮಾರ್ಟಿನ್ ಲುಥರ್ ಕಿಂಗ್

ಸ್ನೇಹಿತರು: ಸಂಬಂಧಿಕರನ್ನು ಕೊಟ್ಟದ್ದಕ್ಕಾಗಿ ದೇವರು ಮಾಡಿಕೊಂಡ ಪ್ರಾಯಶ್ಚಿತ.
– ಹುಗ್ ಕಿಂಗ್ಸ್ ಮಿಲ್

ನಮ್ಮೊಂದಿಗಿನ ನಮ್ಮ ಸ್ನೇಹ ಬಹಳ ಮುಖ್ಯ. ಅದಿಲ್ಲದಿದ್ದರೆ ಜಗತ್ತಿನ ಯಾರೊಂದಿಗೂ ಸ್ನೇಹ ಬೆಳಸಲಾಗುವುದಿಲ್ಲ.
– ಎಲಿಯನೊರ್ ರೂಸ್‌ವೆಲ್ಟ್

ನೀವು ಪ್ರೀತಿಸಿದವರ ಗೆಳೆಯರನ್ನು ಪರಿಚಯಿಸಿಕೊಳ್ಳುವುದು ಅಷ್ಟು ಸುಲಭದ ವಿಷಯವಲ್ಲ.
-ಅನಾಮಿಕ

ಸ್ನೇಹ ಮುರಿಯಿತು ಎಂದರೆ ಅಲ್ಲಿ ಸ್ನೇಹವಿರಲೇ ಇಲ್ಲ ಎಂದರ್ಥ.
– ಅನಾಮಿಕ

ಗೆಳಯನಿರುವ ಯಾವನೂ ಅನುಪಯುಕ್ತನಲ್ಲ.
– ರಾಬರ್ಟ್ ಲೂಯಿಸ್ ಸ್ಟೀವನ್‌ಸನ್

……………………………………………………………………………

Wishing to be friends is quick work, but friendship is a slow ripening fruit.
-Aristotle

I value the friend who for me finds time on his calendar, but I cherish the friend who for me does not consult his calendar.
-Robert Brault

The only way to have a friend is to be one.
-Ralph Waldo Emerson

Without wearing any mask we are conscious of, we have a special face for each friend.
– Oliver Wendell Holmes

Friendship is unnecessary, like philosophy, like art… It has no survival value; rather it is one of those things that give value to survival.
– C. S. Lewis

I always felt that the great high privilege, relief and comfort of friendship was that one had to explain nothing.
– Katherine Mansfield

If it’s very painful for you to criticize your friends – you’re safe in doing it. But if you take the slightest pleasure in it, that’s the time to hold your tongue.
– Alice Duer Miller

True friends stab you in the front.
– Oscar Wilde

The most I can do for my friend is simply be his friend.
– Henry David Thoreau

“The best mirror is an old friend.”
-George Herbert

Friendship is essentially a partnership.”
– Aristotle (4th century B.C.)

Grief can take care of itself, but to get the full value of a joy you must have somebody to divide it with.
– Mark Twain

I have lost friends, some by death, others through sheer inability to cross the street.
– Virginia Woolf

A true friend is one who overlooks your failures and tolerates your success!– Doug Larson

“Good friends are like stars…. You don’t always see them, but you know they are always there”

“True friendship is like sound health; the value of it is seldom known until it is lost.”

Charles Caleb Colton quotes

“Friendship is when silence between two people is comfortable.”

………………………………………………………………………….


Blog Stats

  • 68,988 hits
ಸೆಪ್ಟೆಂಬರ್ 2021
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
27282930  

Top Clicks

  • ಯಾವುದೂ ಇಲ್ಲ