Archive for the ‘ಮಚೆಂಪು ಕಾಲಂ’ Category
– ಮಚೆಂಪು
‘ಮಚ್ಚಿ ನಾಲ್ಕ್ ವರ್ಷ ನಾವ್ ಕಣ್ಣಿಗೆ ಎಣ್ಣೆ ಬಿಟ್ಕಂಡು, ಹೊಟ್ಟೆಗ್ ಇನ್ನೇನೋ ಬಿಟ್ಕಂಡು ಓದೋದ್ಯಾಕೆ?’ coffee ಬಾರ್ ಎದುರು ನಿಂತು ನಾನು ಮಲ್ಲಿ ಮಾತಾಡ್ತಿದ್ವಿ. ಬಾರ್ ಅನ್ನೋ ಹೆಸ್ರು ಕಂಡ್ ಕೂಡ್ಲೆ ನಾನು ವೇದಾಂತಿ ಆಗೋಯ್ತಿನಿ ಅನ್ನೋದು ಮಲ್ಲಿಯಾದಿಯಾಗಿ ನನ್ ದೋಸ್ತರೆಲ್ಲರ ಆರೋಪ. ಅವತ್ತೂ ಅಂಗೇ ಆಯ್ತು. ನಾನು ನಮ್ ದೇಶದ ಲಕ್ಷಾಂತರ ಮಂಡಿ engineering ಹುಡುಗ್ರ ಜೀವ್ನದ ಅರ್ಥವನ್ನೇ question ಮಾಡ್ಬಿಟ್ಟಿದ್ದೆ.
ಮಲ್ಲಿ ಕಾಫಿ ಹೀರಿ ತುಸು ಸುಧಾರಿಸ್ಕಂಡು ಶುರು ಹಚ್ಕಂಡ, ‘ನೋಡ್ ಶಿಷ್ಯ, ನಾಲ್ಕ್ ವರ್ಷ ಕಷ್ಟ ಬಿದ್ ಓದೋದು ಯಾರಪ್ಪನ್ ಉದ್ಧಾರ ಮಾಡಕೂ ಅಲ್ಲ. ದೇಶ ಸೇವೆಗೂ, ವಿದ್ಯಾರ್ಜನೆಗೂ ಅಲ್ಲ. ಈ ಕಂಪ್ನಿಗಳು expect ಮಾಡೋ ಅಗ್ರಿಗೇಟ್ maintain ಮಾಡೋಕಷ್ಟೇ. ಒಂದ್ಸಲ ಒಂದ್ ಒಳ್ಳೇ ಕಂಪ್ನೀಲಿ ಪ್ಲೇಸ್ ಆಗ್ಬಿಟ್ರೆ ಸಾಕು. ಮೊದ್ಲ ಸಂಬ್ಳದಲ್ಲಿ ಒಂದ್ ಎನ್ ಸೀರೀಸ್ ಮೊಬೈಲು, ಎರಡ್ನೇ ತಿಂಗ್ಳ್ ಸಂಬ್ಳದಲ್ಲಿ ಒಂದು ಜಿಂಕ್ ಚಾಕ್ ಐಪಾಡು…’
ಮಗಂದು ಹಗಲುಗನಸಿನ ಮ್ಯಾಟನಿ ಶೋ ಶುರುವಾಯ್ತು ಅಂದ್ಕಂಡು ನಾನು, ‘ಮುಚ್ಚಲೇ ಸಾಕು, ಕಂಪ್ನಿಗಳು ಕಂಡ್ ಕಂಡವ್ರಿಗೆಲ್ಲಾ ಪಿಂಕ್ ಸ್ಲಿಪ್ಪು ಕೊಟ್ಟು ಮನೀಗ್ ಕಳಿಸ್ತಿದ್ರೆ ಇವ್ನಿಗೆ ಆಗ್ಲೇ ಫೈ ಇಯರ್ ಪ್ಲಾನು’ ಅಂತ ದಬಾಯಿಸಿ ಒಂದು ಆಲೂ ಬನ್ನಿಗೆ ಆರ್ಡರ್ ಮಾಡಿದೆ.
ರಾತ್ರಿ ಊಟ ಮುಗ್ಸಿ ರೆಕಾರ್ಡ್ ಬರಿಯೋಕೆ ಕುಂತಾಗ ಮತ್ತೆ ಅದೇ ಪ್ರಶ್ನೆ ತಲೆಯಾಗೆ ಗುಯ್‍ಗುಡೋಕೆ ಶುರುವಾಯ್ತು. ಇಷ್ಟೆಲ್ಲ ಒದ್ಕಂಡು, ಬರ್ಕಂಡು ಮಾಡೋದೆಲ್ಲ ಒಂದಿನ ಕೆಲ್ಸಕ್ಕೆ ಸೇರ್ಕಳ್ಳಕಾ. ಓದೋಕ್ ಮುಂಚೆನೇ ವರ್ಷಕ್ಕೆ ಇಷ್ಟ್ ಲಕ್ಷ ಕೊಡೋ ಕಂಪ್ನಿ ಮೇಲೆ ಕಣ್ ಮಡಗಿ ಅಗ್ರಿಗೇಟು ಸಂಪಾದ್ಸೋದು, ನಾವ್ ಬದುಕಿರೋದೇ ಆ ಕಂಪ್ನಿನೀನ ಅದ್ರ ಯಜಮಾನ್ನ ಉದ್ಧಾರ ಮಾಡೋಕೆ ಅಂದ್ಕಂಡು ನಲಿಯೋದು. ಅಮೇರಿಕಾದ ಕಂಪ್ನಿ ಆದ್ರಂತೂ engineering ಮೊದ್ಲ ದಿನದಿಂದ್ಲೇ ಕಾವೇರಿ ನದಿಗೆ ಥೇಮ್ಸ್ ನದಿ ಸ್ಮೆಲ್ಲು ಬರ್ತಿದೆ ಅಂತ imagine ಮಾಡ್ಕಳದು, ಕನ್ನಡ ಪೇಪರ್ ಕಂಡ್ರೆ ಮೈಲಿಗೆಯಾದವ್ರ ಹಾಗೆ ಮುಖ ಸಿಂಡರಿಸಿಕೊಳ್ಳೋದು, ಹಳ್ಳಿಯೋವ್ರು, ಆರ್ಡಿನರಿ ಬಟ್ಟೆ ಹಾಕ್ಕಂಡಿರೋರು ಕಂಡ್ರೆ ಸಿಲ್ಲಿಯಾಗಿ ನೋಡದು, ಉಪ್ಪಿಟ್ಟು, ಚಿತ್ರನ್ನ, ಅವಲಕ್ಕಿ, ಚಪಾತಿ, ರೊಟ್ಟಿನೆಲ್ಲ ಮ್ಯೂಸಿಯಂ ಶೋ ಪೀಸ್ ಕಂಡಂಗೆ ಕಾಣೋದು, ಪಿಜ್ಜಾ, ಬರ್ಗರು, ಬ್ರೆಡ್ಡು ಜಾಮು ಅಂತ ಜಪ ಮಾಡದು, ಐಪಾಡಲ್ಲಿ ಅಪ್ಪಿ ತಪ್ಪಿನೂ ಸಿ.ಅಶ್ವತ್ ಹಾಡಿದ ಭಾವಗೀತೆ ಕೇಳ್ಬಾರ್ದು, ಅದ್ಯಾವನೋ ಅಲ್ಲಿ ಅಮೆರಿಕಾದಲ್ಲಿ ತಂತಿ ಹರಿದುಹೋಗೊ ಅಂಗೆ ಗಿಟಾರ್ ಕೆರೆದ್ರೆ ಅದ್ನೇ ಭಕ್ತಿಗೀತೆಯಂಗೆ ಕೇಳಿ ಪಾವನರಾಗ್ತಾರೆ. ಅಮೇರಿಕಾಗೆ ಹೋಗೋ ಕನಸ್ ಕಾಣ್ತಾ ಇಲ್ಲೇ ಅಮೇರಿಕನ್ ಆಗಿ ಹೋಗ್ತಾರೆ.
ಅದು ಹಾಳಾಗ್ ಹೋಗ್ಲಿ, ಓದ್ನಾದ್ರೂ ನೆಟ್ಟಗೆ ಮಾಡ್ತೀವಾ? ಹಿಂದೆ ನಮ್ ಗುರುಕುಲಗಳಲ್ಲಿ ವಿದ್ಯಾಭ್ಯಾಸ ಮುಗಿದ್ ಮೇಲೆ ಗುರುಗಳು ಶಿಷ್ಯನ್ನ ಕರೆದು, ‘ಮಗು ನಾನ್ ಕಲಿತಿರೋದ್ನೆಲ್ಲಾ ನಿಂಗೆ ಧಾರೆಯೆರ್ದಿದೀನಿ. ನಂಗೆ ತಿಳ್ದಿರೋದೇ ಇಷ್ಟು. ಇನ್ನು ಹೆಚ್ಚಿಂದು ಬೇಕಂದ್ರೆ ಇಂಥವ್ರ ಹತ್ರ ಹೋಗ್ ಕಲಿ. ಸಾಕನ್ನಿಸಿದ್ರೆ ನಿನ್ ವಿದ್ಯೆ ಸಮಾಜಕ್ಕೆ ಉಪಯೋಗ ಹಾಗಂಗೆ ಬದುಕು. ಒಳ್ಳೇದ್ ಮಾಡು’ ಅಂತ ಹರಸ್ತಾ ಇದ್ರು. ಇಂಥ ಗುರುಕುಲ ಇರೋದು ನಮ್ ಮಕ್ಳನ್ನ ಉದ್ಧಾರ ಮಾಡಕ್ಕೆ ಅದ್ಕಂಡು ರಾಜ್ರು ಕಣ್ಮುಚ್ಕಂಡು ಸೌಲಭ್ಯ ಕೊಡೋರು, ಊರ ಜನ ಅಕ್ಕಿ ಬೇಳೆ ಕಳ್ಸೋರು. ಗುರುಗಳು ತಮ್ ಹೊಟ್ಟೆ ಬಟ್ಟೆಗೆಷ್ಟ್ ಬೇಕೋ ಅಷ್ಟು ತಕ್ಕೊಂಡು ಶಿಷ್ಯರ್ನ ತಯಾರ್ ಮಾಡೋರು.
ಈಗೇನಾಗಿದೆ? ಗುರು ಅವ್ರಪ್ಪಂದು ಲಕ್ಷ ಲಕ್ಷ ಕೊಟ್ಟು ಓದಿರ್ತಾನೆ. ಒಂದ್ಸಲ ಡಿಗ್ರಿ ಕೈಗ್ ಸಿಕ್ಮೇಲೆ ಅದ್ನ ಝೆರಾಕ್ಸ್ ಮಶೀನಲ್ಲಿ ಹಾಕಿ ನೂರು ಸಾವಿರ ಕಾಪಿ ತೆಗೆದಂಗೆ ನೋಟು ಸಂಪಾದಿಸೋಕೆ ನಿಲ್ತಾನೆ. ಒಂದ್ ಕಾಲೇಜಲ್ಲಿ ಸಾಕಾಗಿಲ್ಲ ಅಂತ ಎರಡು ಮೂರಕ್ಕೆ guest faculty ಆಗಿ ಹೋಗ್ತಾನೆ, ಅದೂ ಸಾಲಲ್ಲ ಅಂದ್ರೆ ಮನೇಲೆ ಅಂಗಡಿ ತೆಕ್ಕೋತಾನೆ. ಶಿಷ್ಯಂಗೆ ವಿದ್ಯೆ ಧಾರೆಯೆರೆಯೋ ಬದ್ಲಿಗೆ ಅವ್ನ ದುಡ್ಡಿ ಕಿತ್ಕಂಡು ತನ್ನತ್ರ ಇರೋ ಅಂಥದ್ದೊಂದು ಸರ್ಟಿಫಿಕೇಟು ಸಿಕ್ಕೋ ಹಂಗೆ ಮಾಡ್ತಾನೆ. ‘ತಗಾ, ಇದ್ನ ಮಡಗ್ಕಂಡು ನೀನೂ ಸುಲಿಯೋಕೆ ನಿಂತ್ಕೋ’ ಅಂತ ಹುರಿದುಂಬಿಸ್ತಾನೆ. ಯಾರ್ ಹೆಚ್ ದುಡ್ ಕೊಡ್ತಾರೊ ಅಂಥವ್ರ ಪಾದಕ್ಕೆ ಅಡ್ ಬೀಳು ಅಂತ ಉಪದೇಶ ಮಾಡ್ತಾನೆ. ಎಲ್ಲಿಂದ ಎಲ್ಲೀಗ್ ಬಂದ್ವಿ ಶಿವಾ?
ನಮ್ daily lifeನಾಗೆ, ನಮ್ ಕನಸು, ಆದರ್ಶ, ಗುರಿಗಳೊಳ್ಗೆ ಈ ದುಡ್ಡು ಅನ್ನೋದು ಅದ್ಯಾವಾಗ ಬಂದ್ ಸೇರ್ತೋ ಗೊತ್ತಿಲ್ಲ. ‘ನೀ ಬದುಕಿರೋದು ಉಣ್ಣಕ್ಕಲ್ಲ, ಉಣ್ಣೋದು ಬದುಕೋದಕ್ಕೆ’ ಅಂತಂದ ದೊಡ್ ಮನುಷ್ಯನ ಈ ದೊಡ್ ಮಾತನ್ನ ಮರ್ತು ನಾವು ಬದ್ಕಿರೋದೇ ದುಡ್ ದುಡಿಯೋಕೆ, ನಂಗೆ ಸಾಕಾಗಿ ಮಿಕ್ಕೊವಷ್ಟು ಮಾತ್ರ ಅಲ್ಲ ನಮ್ ಮೊಮ್ಮಕ್ಕಳು ಮರಿಮಕ್ಕಳು ತಿಂದು ಕೊಬ್ಬೋವರ್ಗೆ ಅಂತ ಯೋಚ್ನೆ ಮಾಡಕೆ ಶುರು ಮಾಡಿದ್ವಲ್ಲ, ನಾವು ವಿದ್ಯಾವಂತ್ರು ಅಂದ್ರೆ ಆ ಸರಸ್ವತಿ ವೀಣೆ ತಗೊಂಡು ಬಾರ್ಸಲ್ವಾ? ಸ್ವಲ್ಪ್ ಯೋಚ್ನೆ ಮಾಡ್ರಿ…
ಇಂತಿ,
ನಿಮ್ ಪ್ರೀತಿಯ ಹುಡ್ಗ
ಮಚೆಂಪು
– ಮಚೆಂಪು
ದೀಪಾವಳಿಯಲ್ಲಿ ಹಾಯಾಗಿ ಪಟಾಕಿಗೆ ಬೆಂಕಿ ಹಚ್ಚಿ ಕುಣಿದು ಕುಪ್ಪಳಿಸಿದ ನಂಗೆ ಮಾರನೆಯ ದಿನಾನೇ ತಲೇಮೇಲೆ ಬೆಂಕಿ ಇಟ್ರು ನಂ universityನವ್ರು. Exam dates unfortunately prepone ಆಗ್ಬಿಟ್ಟಿದೆ. ಕನ್ನಡಕವನ್ನು ತಿರುಗಿಸಿ, ಮುರುಗಿಸಿ, ಉಜ್ಜಿ, ಒರೆಸಿ ನೋಡಿದ್ರೂ ಅದೇ date. ಎಲ್ಲಾ unexpectedಉ. Full tensionಉ. ಏನ್ಮಾಡೋದು ಅನ್ನೋದೆ questionಉ.
ವರ್ಷದ beginning ನಿಂದ ಇಲ್ಲಿಯವರೆಗೆ ಆಗಿರೋ ಎಲ್ಲಾ portion Greek and Latin ಆಗಿಬಿಟ್ಟಿದೆ. Internalsನಲ್ಲಂತೂ ಹೆಂಗೋ ಆ ಕಡೆ, ಈ ಕಡೆ ತಲೆಯಾಡಿಸಿಕೊಂಡು, paperನಲ್ಲಿ ಪುಳಿಯೋಗರೆ ಮಾಡಿ pass ಆಗ್ಬಿಟ್ಟೆ. ಆದ್ರೆ ಇದು ದೊಡ್ಡ examಉ. Squad, examiner, invigilator ಅಂತ ನೂರಾರು ಜನ CIDಗಳು, ಹೆಂಗೆ ಹುಡ್ಗೂರನ್ನ catch ಹಾಕೋದು ಅಂತ ಬಾಲ ಸುಟ್ಟ ಬೆಕ್ಕಿನ ಥರ ಓಡಾಡ್ತಿರ್ತಾರೆ. ಬೆಂಚುಗಳ middleನಲ್ಲಿ ಕಿಲೋಮೀಟರ್‌ಗಟ್ಲೆ gap. Friendshipನ ಇದೊಂದು ಕೆಲಸಕ್ಕೆ ನಿಯತ್ತಾಗಿ ಉಅಪಯೋಗಿಸ್ಕೊಂತಿದ್ದೆ. ಅದಕ್ಕೂ ಕಲ್ಲು ಬಿದ್ದದೆ.
ಕೊನೇ ೨೦ ದಿನ. ಏನಾದ್ರೂ ಆಗ್ಲಿ text bookನ ಅಟ್‍ಲೀಸ್ಟ್ ಹಂಗೆ ಒಮ್ಮೆ ತಿರುಗಾಡಿಸಿ ನೋಡಣ ಅಂತ ರೀಡಿಂಗ್ ರೂಮಿನಲ್ಲಿ ಹೋಗಿ ಕೂತ್ರೆ, ಹಂಗೆ ತಂಪಾಗಿ ನಿದ್ದೆ ಕಣ್ಮೇಲೆ ಬಂದು settle ಆಗ್ಬಿಡುತ್ತೆ. ಅದ್ರಲ್ಲೂ, ನಮ್ಮ hostelನಲ್ಲಿ ಬೆಳಿಗ್ಗೆ ಏನಾದ್ರೂ ದೋಸೆ ತಿಂದಿದ್ದೆ ಅಂದ್ರೆ, ಮುಗೀತು; ಅವತ್ತು ಹಂಗೇ flat. ನಿದ್ದೆ ಬರ್ಬೇಕು, ಆದ್ರೆ ಹೀಗೆ ಬರ್ಬಾರ್ದ timeನಲ್ಲಿ ಬಂದು ಅಟಕಾಯಿಸಿಕೊಂಡ್ರೆ, ನಾನು ಬರ್ಬಾದು ಆಗೋಗ್ಬಿಡ್ತೀನಿ ಅಷ್ಟೇ!
ಇನ್ನೊಂದು ಕಡೆಯಿಂದ ನಮ್ಮ ಹುಡ್ಗೂರು ಬೇರೆ ಟೆನ್ಷನ್ ಕೊಡ್ತಾ ಇದಾರೆ. Bathroom ಗೋದ್ರೂ ಬುಕ್ ಬಿಡಾಕಿಲ್ಲ ಅಂತ ಶಪಥ ಮಾಡ್ಬಿಟ್ಟಿದ್ದಾರೆ. ವರ್ಷ ಇದೀ ತಲೆ ಬಗ್ಗಿಸ್ಕೊಂಡು ಓದಿದಾರೆ, ಈಗ್ಲೂ ‘ಲೋ ಬನ್ರೋ, ಎಷ್ಟು ಓದ್ತೀರಾ? Bore ಆಗ್ತಾ ಇದೆ. ಹಂಗೆ ಕುಕ್ರಳ್ಳಿ ಕೆರೆಗೆ ಹೋಗಿ ಬರಾಣ’ ಅಂದ್ರೆ, “ಮುಂದೋಗಲೋ ಬಂದ್ಬಿಟ್ಟ. ಈ ಸಾರಿ ಪಾಸ್ ಆಗ್ಬೇಕು ಅಂತ ಕನಸು ಕಾಣ್ತಾ ಇದೀವಿ. Disturb ಮಾಡ್ಬೇಡ. ಕಳಚಿಕೋ!” ಅಂತ full fledge ಆಗಿ dialogue ಹೊಡೀತಾ ಇದ್ದಾರೆ. ಈ ಕಡೆ moodಉ ಇಲ್ಲ, ಆ ಕಡೆ foodಉ ಇಳೀತಿಲ್ಲ. ಹಿಂಗಾಗ್ಬಿಟ್ಟಿದೆ ನನ್ನ ಪರಿಸ್ಥಿತಿ.
Actually classes ಇನ್ನೂ ಹತ್ತು ದಿನ ನಡಿಲಿಕ್ಕಿದೆ. ಆದ್ರೆ, classನಲ್ಲಿ ಒಂದು ನರಪಿಳ್ಳೆನೂ ಕಾಣ್ತಾಇಲ್ಲ. ವರ್ಷ ಪೂರ್ತಿ ಥಿಯೇಟರ್‌ನಲ್ಲೇ ಪಾಠ ಕೇಳಿದ ನಂಗೆ, attendance shortage ಆಗಿ, ಯಾರೂ ಇಲ್ಲ ಅಂದ್ರೂ, ಕೂತ್ಕಂಡು ಪಾಠ ಕೇಳೋ ಪರಿಸ್ಥಿತಿ. ನನ್ನ ಹೆಸರು ಎಲ್ಲಾ lecturersಗೂ ಚಿರಪರಿಚಿತ. ಪಾಠ ಮಾಡಿದ್ನ ಕೂದ್ಲೆಲ್ಲಾ ಹರ್ಕಂಡು, ತಲೆ ಒಳಕ್ಕೆ ಒಂದೆರಡು ಅಕ್ಷರಾನ ತೂರಿಸೋಣ ಅಂತ ಹರಸಾಹಸ ಮಾಡಿದ್ರೂ, no use. ಇಡೀ ಒಂದ್ಗಂಟೆ ಪಾಠ ಮಾಡಿ ಕೊನೆಗೆ ಪಾಠದ ಹೆಸರೇನು ಅಂತ ಗೊತ್ತಿರಲಿಲ್ಲ ಅಂತ ಅವರಿಗೆ ತಿಳಿದು ಹೋಗಿದ್ದಕ್ಕೆ ಮೂರು ದಿನ assignment ಕೊಟ್ಟು, ಇರೋ ಅಲ್ಪಸ್ವಲ್ಪ timeನೂ ನುಂಗಿ ನೀರು ಕುಡೀತಾ ಇದಾರೆ.
ಎಲ್ರೂ ನಿದ್ದೆ ಬರ್ಬಾರ್ದು ಅಂತ ಟೀ ಕುಡುದ್ರೆ, ಹಾಳಾದ್ದು, ನಾನು ಟೀ ಕುಡುದ್ರೆ ನಿದ್ದೆ ಇನ್ನೂ accelerate ಆಗುತ್ತೆ. ಆದ್ರೂ ಈ ಟ್ರೆಂಡ್‌ನ ಮಾತ್ರ ನಾನು ಬಿಡದಿಲ್ಲ. Canteen uncleಉ, “ಏನ್ಸಾರ್? ನೀವು ಓದಕ್ಕೆ reading roomಗೆ ಬರ್ತೀರೋ ಅಥವಾ canteenಗೆ ಬರ್ತೀರೋ?” ಅಂತ ಓಪನ್ ಆಗಿ question ಕೇಳಿ ಇರೋ ಚೂರುಪಾರು ಮರ್ಯಾದೀನೂ ಹರಾಜಿಗೆ ಎಳೆದುಬಿಟಿದ್ರು. ಹೆಂಗೋ ಸುಧಾರಿಸಿಕೊಂಡು ದಿನಚರ್ಯಾನಾ ಮುಂದುವರೆಸ್ತಾ ಇದೀನಿ.
ಓದಕ್ಕೆ kgಗಟ್ಲೇ ಇದೆ. ಆದ್ರೆ time ಇರೋದು seconds ಲೆಕ್ಕದಲ್ಲಿ. Last benchನ ‘ದಾದಾ’ ಆದ ನಂಗೆ ಇದು ಕಾಮನ್ನು. ಆದ್ರೆ, ಹೆದರಿಕೆ ಅನ್ನೋದು ನನ್ನಲ್ಲೂ ಇದೆ ಅಂತ ಮೆತ್ತಗೆ ಬಾಯ್ಬಿಡ್ತಾ ಇದೀನಿ. ಯಾರೂ ತಪ್ಪು ತಿಳ್ಕೋಬೇಡಿ. ಇದೊಂದೇ ಸರಿ ನಾನು ಮೊದಲನೆಯ ಬೆಂಚಿನ brilliants ಹತ್ರ ಮೊರೆಹೋಗಿ, ಶರಣಾಗಿ, ಅದೂ ಇದೂ ಹೇಳಿಸಿಕೊಂಡು ಪಾಸ್ ಆಗೋದು. So, once again thanks to them.
Friends! Next time I am going to bring about a change in my writing. Presently ಬರೀತಾ ಇರೋ style ಬೊರ್ ಬಂತು ಅಂತ ಸುಮಾರು ಜನ ಹೇಳಿದ ಪ್ರಕಾರ, ಈ decision ತೆಗೆದುಕೊಂದಿದೀನಿ. ಇದಕ್ಕೆ ತಮ್ಮದೇನಾದ್ರೂ suggestions ಅಥವಾ ಯಾವ ಥರ ಬರೀಬೇಕು ಅನ್ನೋ idea ಏನಾದ್ರೂ ಇದ್ರೆ, ಹಂಗೆ ನಮ್ಮ Editor ಸಾಹೇಬ್ರಿಗೆ ಬಿಸಾಕಿ ಪುಣ್ಯ ಕಟ್ಕಳಿ.
Wishing you belated Diwali wishes…
ನಿಮ್ಮ ಮನೆ ಹುಡುಗ,
ಮಚೆಂಪು
ಎಲ್ರಿಗೂ hi,
ಮುಂಚೆ ಕರೆಕ್ಟ್ ಒಂದು ತಿಂಗ್ಳಿಗೆ ಕೈಸೇರುತ್ತಿದ್ದ ‘ಸಡಗರ’ ಆಮೇಲಾಮೇಲೆ ಕುಂಟುತ್ತಾ, ತೆವಳುತ್ತಾ ಹೊರಬರತೊಡಗಿದಾಗ ನಮ್ ಎಡಿಟರ್ ಸಾಹೇಬ್ರು ‘ಸಡಗರ’ವನ್ನ ಎರಡು ತಿಂಗ್ಳಿಗೆ ಒಂದ್ಸಲ ಅಂತ ಮಾಡೋಣ ಅಂದ್ರು. ನಂಗಂತೂ ಭಯಂಕರ ಬೇಜಾರಾಗೋಗಿತ್ತು. ಯಾಕೆಂದ್ರೆ ತಿಂಗ್ಳಿಗೆ ಒಂದ್ಸರಿಯಾದ್ರೂ ನನ್ನ ಕಷ್ಟ ಸುಖಾನ ನಿಮ್ಮ ಜೊತೆ ಹಂಚ್ಕಂತಾ ಇದ್ದೆ. ಎರಡು ತಿಂಗ್ಳವರ್ಗೂ ಕಾಯ್ಬೇಕು ಅಂದ್ರೆ ಕಷ್ಟ ಆಗ್ತಿತ್ತು. ಆ ದೇವ್ರು ನಮ್ ಎಡಿಟರ್ಗೆ ಒಳ್ಳೆ ಬುದ್ಧಿ ಕೊಟ್ಟು ‘ಸಡಗರ’ ತಿಂಗ್ಳಿಗೆ ಒಂದ್ಸರಿ ಮಾಡೋ ಹಂಗೆ ಮಾಡಿದ್ದಾನೆ.
ಈ ಸಲ ಒಂದು practical problemನ ಹೇಳ್ಕಳಣಾ ಅಂತ ಅನ್ನಿಸ್ತಾ ಇದೆ. ಇದು almost ನನ್ನ ಥರಾ ಇರೋ ಏಕಾಂಗಿಗಳಿಗೆ ಅನ್ವಯಿಸಿದ್ದು. ಅಂದ್ರೆ ತಮ್ಮ parentsಗೆ ಒಬ್ನೇ ಮಗ/ಮಗಳು ಇರೋರಿಗೆ. Professional collegeಗೆ ಬಂದ್ಮೇಲೆ ನಮ್ಮ internals ಮುಗಿದ ಮೇಲೋ, exam ಖತಂ ಆದ್ಮೇಲೋ ಮನೆಗೆ ಹೋಗೋದು ಸಾಮಾನ್ಯ. ಆದ್ರೆ ಊರ್‍ನಲ್ಲಿ ನಮ್ಮ friendsಉ ಸಿಗೋದು ತುಂಬಾ ಕಷ್ಟ. ಯಾಕಂದ್ರೆ ಎಲ್ರಿಗೂ ಒಂದೇ ಟೈಂಗೆ ರಜಾ ಇರೋದಿಲ್ಲ. Atleast ಮನೇಲಿ ಅಣ್ಣ ತಮ್ಮಂದಿರೋ, ಅಕ್ಕ ತಂಗಿಯರೋ ಇದ್ರೆ ಅವರ ಜೊತೆ ಜಗಳ ಮಾಡ್ಕಂಡಾದ್ರೂ time pass ಮಾಡ್ಬೋದು. ಅವ್ರೂ ಇರದಿಲ್ಲ ಅಂದ್ರೆ ಮನೆಗೆ ಹೋಗೋದೇ ಬೇಜಾರಾಗ್ಬಿಡುತ್ತೆ. ಯಾಕಂದ್ರೆ hostelನಲ್ಲಿದ್ದೋರ್‍ಗಂತೂ ಯಾರಾದ್ರೂ ಜೊತೆಗಿದ್ರೆ ಒಂದು ಥರ ‘ಹಿತ’ ಇರುತ್ತೆ ಅಲ್ವಾ?
ಕೆಲೂರು ಕೇಳ್ಬೋದು, “ಮಗಾ! ಮನೇಲಿ ಅಪ್ಪ-ಅಮ್ಮ ಇರ್ತಾರೆ. ಅವ್ರ ಜೊತೆ time pass ಮಾಡ್ಬೋದಲ್ಲ ” ಅಂತ. ಒಪ್ಕೊಂತೀನಿ. ಆದ್ರೆ ನಾನೇ ಅನುಭವಿಸಿದ ಒಂದು factಉ ಹೇಳ್ತೀನಿ. ಕೇಳಿ, ಪ್ರತಿ time ನಾನು ಮನೆಗೆ ಹೋದಾಗ, next morning ನಂದು ನಮ್ಮಮ್ಮಂದು ಒಂದು ಮುಖಾಮುಖಿ ಮಾತುಕತೆ ಇರುತ್ತೆ. ನಾನು ನನ್ನ problemsನ ಹೇಳ್ಕಂತೀನಿ. ಅವ್ಳು ಅದಕ್ಕೆ ತಕ್ಕ suggestionsಉ, promisesಉ ಎಲ್ಲ ಕೊಡ್ತಾಳೆ. ಮತ್ತೆ ನಾನೂ ಅವ್ಳ ಕಷ್ಟಾನೂ ಅಲ್ಪ ಸ್ವಲ್ಪ ಕಿವಿಗೆ ಹಾಕ್ಕಂಡು ಸಾಂತ್ವಾನ ಕೊಡ್ತೀನಿ. ನಂತರ every discussions end uo in past. ಮಾತಾಡ್ತಾ, ಮಾತಾಡ್ತಾ sudden ಆಗಿ ನಿಮ್ಮಪ್ಪ ಹಂಗಿದ್ರು, ನಿಮ್ಮಾವ ಹಿಂಗ್ಮಾಡ್ದ, ನಿಮ್ಮ ಚಿಕ್ಕಪ್ಪ ಸರಿಯಿಲ್ಲ, ನಿಮ್ಮ ದೊಡ್ಡಪ್ಪ ಪೋಲಿ ಅಂತ ಎರ್ರಾಬಿರ್ರಿ ಬಯ್ಯಾಕೆ start ಮಾಡಿತ್ತಕ್ಷಣ ನಾನು silent ಆಗಿ ಎಸ್ಕೇಪು! ಅಪ್ಪನಾದ್ರೂ ಏನ್ಮಾಡ್ತಾರೆ, ಒಂದಿಷ್ಟು advices, ಅದೂ-ಇದೂ ಅಂತ ಕೊಡ್ತಾರೆ. ಹೆಚ್ಚಂದ್ರೆ ಎರಡು ಅರ್ಥ ಇರೋ ಜೋಕು ಮಾಡ್ತಾರೆ. ಹೆಚ್ಚೇನು ಮಾಡಕ್ಕಾಗುತ್ತೆ?
So, ಮನೆಗೆ text books ಒಯ್ತೀನಿ, ಅಲ್ಲಿ ಓದ್ತೀನಿ ಅಂದ್ರೆ ಸತ್ರೂ ಆಗಲ್ಲ. ಚಿತ್ರ ಬರೀತೀನಿ, poems ಬರೀತೀನಿ ಅಂದ್ರೆ ಮನಸ್ಸು ಬರಲ್ಲ. ಹೊರಗೆ ಹೋಗಿ ‘ಕಣ್ಣು ತಂಪು’ ಮಾಡ್ಕಂಡು ಬರಣಾ ಅಂದ್ರೆ ಅಂಕಲ್ ಇದ್ದೋರು, “ಎರಡು ದಿನಕ್ಕೋಸ್ಕರ ಮನೆಗೆ ಬಂದಿದ್ದೀಯ, ಸುಮ್ನೆ ಹೊರಗೆ ತಿರುಗಾಡಿ ಯಾಕೆ ಸುಸ್ತು ಮಾಡ್ಕಂತೀಯ?” ಅಂತ dialogue ಹೊಡೆದ ತಕ್ಷಣ, ಹೊರ ಹೊಮ್ಮುತ್ತಿರುವ josh ಎಲ್ಲ ಮಾಯ! ಟಿ.ವಿ.ನಾದ್ರೂ ಎಷ್ಟು ಅಂತ ನೋಡೋದು. ನಮ್ಮನ್ನ ನೋಡಿ ಆ ಟಿ.ವಿ.ಗೇ ಬೇಜಾರಾಗಿಬಿಡುತ್ತೆ. ‘ದೇವದಾಸ್ ನನ್ಮಗ! ನಂಗೆ ಹಿಂದೆ ಕರೆಂಟ್ ಚುಚ್ಚಿ ಅದೆಷ್ಟು ಮಜಾ ತಗೊಂತಾನೆ.’ ಅಂತ ಆನ್ ಮಾಡಿದ್ರಿಂದ off ಮಾಡೋ ತನಕಾ ಉರ್ಕೊಂತಾ ಇರುತ್ತೇನೋ!
ಇನ್ನು, ಯಾರ್ದೋ ಮನೇಲಿ function ಇದೆ ಅಂತ ನಮ್ಮನ್ನ ಹೋರಿ ಥರ ಅಲ್ಲಿಗೆ ಎಳ್ಕಂಡೋದ್ರೆ, ಅಲ್ಲಿ ನೋಡ್ದೋರೆಲ್ಲ, ಯಾರನ್ನೋ interview ಮಾಡೋಥರ, “ಏನ್ರೀ, ನಿಮ್ಮಗಾನಾ? ಎಷ್ಟೆತ್ತರ ಆಗ್ಬಿಟ್ಟಿದ್ದಾನೆ. ಏನಪ್ಪಾ? ಏನ್ ಮಾಡ್ತಿದ್ದೀಯಾ? ಯಾವೂರು? ಯಾವ ವರ್ಷ? ಇನ್ನೂ ಎಷ್ಟು ವರ್ಷ? ಮುಂದೇನು? ಚೆನ್ನಾಗಿ ಓದ್ತಾ ಇದೀಯಾ? Exam ಯಾವಾಗ?” ಕಸ-ಕಡ್ಡಿ ಎಲ್ಲಾನೂ ಕೇಳ್ತಾರೆ. Silly questionsಉ. ‘ಎಷ್ಟೆತ್ತರ ಬೆಳೆದುಬಿಟ್ಟಿದ್ದಾನೆ, ಮುಂಚೆ ಎಷ್ಟು ಸಣ್ಣಕ್ಕಿದ್ದ’ ಏನು, ಎಲ್ರೂ ಸಣ್ಣಕೇ ಇರೋಕಾಗುತ್ತಾ? ನಮ್ಮ exam ಬಗ್ಗೆ ನಮಗಿಂಥಾ ಅವ್ರಿಗೇ ಹೆಚ್ಚು interestಉ. ಒಬ್ರಿಬ್ರಲ್ಲ, ಅಲ್ಲಿರೋರು ಎಲ್ರೂ ಹಿಂಗೇ. ಒಂದು board ನೇತಾಕ್ಕಂಬೇಕು ಅನ್ನಿಸ್ಬಿಟ್ಟಿರುತ್ತೆ. ಆ function Hall middleನಲ್ಲಿ ನಿಂತ್ಕಂಡು ಜೋರಾಗಿ ಅರುಚ್ಕೊಂಡು biodata ಹೇಳಣಾ ಅನ್ನಿಸುತ್ತೆ. ಅಟ್ಟಿಸ್ಕೊಂಡು ಬಂದು ಬಗ್ಗಿಸಿ ಬಾರ್ಸಿದ್ರೆ ಅಂತ ಭಯ.
ಇನ್ನು ಊರಿಗೆ ಹೋದ್ರೆ ಇನ್ನೂ ಮಜಾ. ಅಮ್ಮ ಇದ್ದೋಳು “ಎಲ್ರ ಮನೆಗೆ ಹೋಗಿ ಒಮ್ಮೆ ಮುಖ ತೋರಿಸ್ಕಂಡು ಬಾ” ಅಂತ ಆಜ್ಞೆ ಕೊಟ್ಟ ತಕ್ಷಣ, ಹೊರಡೋದು. ಪ್ರತಿ ಒಬ್ರ ಮನೇಲೂ ಅರ್ಧರ್ಧ ಗಂಟೆ ಸುಮ್ನೆ ಮುಖ-ಮುಖ ನೋಡ್ಕಂಡು ಕುಂತ್ಕಂಡ್ರೆ, ಕೊನೇಗೆ ಅವ್ರು ಕಾಫಿ ಕೊಟ್ರೆ ಹೋಗ್ತಾನೆ ಅಂತ sketch ಹಾಕ್ಕಂಡು ಒಂದು ದೊಡ್ಡ ಲೋಟದಲ್ಲಿ ಕಾಫಿ ಕೊಡ್ತಾರೆ. “ಚೆನ್ನಾಗಿ ಓದ್ಕೋ. ನಿಮ್ಮ ಆ ಬದ್ಮಾಶ್ ಚಿಕ್ಕಪ್ಪಂಗೆ ನೀನೇನು ಅಂತ ತೋರಿಸ್ಬೇಕು.’’ ಅಂತ ಒಂದು ಜ್ವಾಲೆ ಹೊತ್ತಿಸಿ ಬೀಳ್ಕೊಡ್ತಾರೆ. ಎಲ್ರ ಮನೇಲೂ ಅದೇ tank size ಲೋಟದಲ್ಲಿ coffee ಕುಡ್ದೂ ಕುಡ್ದೂ blood ಎಲ್ಲಾ decoction ಆಗ್ಬಿಟ್ಟಿರುತ್ತೆ.
ಮನೆಗೆ ಹೋದ್ರೆ ‘ಎರಡು ಮೂರು ದಿನಕ್ಕೆ’ ಅಂತ ಹೋಗೋದು. ಏನಕ್ಕೆ ಹೋಗೋದು ಅಂದ್ರೆ relaxationಗೆ ಅಂತ. Change of work is rest ಅಂತಾ ಹೇಳ್ತಾರೆ. But ಈ ರೀತಿ ಆದ್ರೆ, no work no rest. ನಾನು ತುಂಬಾ ಜನರತ್ರ discuss ಮಾಡಿದ್ದೀನಿ. ಆದ್ರೆ ಇನ್ನೂ ನಂಗೊಂದು idea ಸಿಕ್ಕಿಲ್ಲ. “ಏನೋ ಮನೆಗೋಗಿ ಏನ್ ಮಾಡೋದು ಅಂತೀಯ? ನಾಚಿಕೆ ಆಗಲ್ವಾ waste body. Enjoy ಮಾಡೋ’ ಅಂತ ಬಾಯಿಗೆ ಬಂದಂಗೆಲ್ಲ suggestion ಕೊಟ್ಟಿದ್ದಾರೆ. ಅವ್ರು ಮಾಡೋದು ಅಷ್ಟೇ. Content ಇಲ್ದಂಗೆ ಕುಯ್ಯಕ್ಕೆ ಹೇಳ್ಕೊಡ್ಬೇಕಾ?
So, at last; one request. At least ನಿಮ್ಮಲ್ಲೇ ಯಾರಾದ್ರೂ ಒಬ್ಬ ಪುಣ್ಯಾತ್ಮ “ಹಿಂಗೆ ಮಆಡು ತಮ್ಮಾ, ಬದುಕ್ಕಂಟೀಯ” ಅಂತ ಉತ್ತಮ ದಾರಿ ತೋರಿಸಿ ಕೊಟ್ರೆ “ಗುರುವೇ, ಶರಣು” ಅಂತ surrender ಆಗ್ಬಿಡ್ತೀನಿ. ಅಂತಹ golden wordsನ ನಮ್ಮ ಎಡಿಟರ್ ಸಾಹೇಬ್ರು ನನ್ನ ಕಾಲಂನ ಸ್ವಲ್ಪ ಸ್ಪೇಸಿನಲ್ಲಿ ತುಂಬುಸ್ತಾರೆ. ನನ್ನ ಪಿಟೀಲಿನ ಜೊತೆ ನಿಮ್ದು ಸ್ವಲ್ಪ remix ಇರ್ಲಿ. ಮತ್ತೊಂದು ವಿಸ್ಯ. ಈ ರೀತಿ problemಗಳು ತುಂಬಾ ಇರ್ತಾವೆ. ಅದ್ನ ನಮ್-ನಮ್ಮಲ್ಲೇ discuss ಮಾಡ್ಕಂಡು, ಒಳ್ಳೊಳ್ಳೇ ideas ಜೊತೆ ಮೇಲೆ ಬಂದ್ರೆ, ಇಂಥ ಚಿಕ್ಕ ವಿಷಯಗಳೇ ಮುಂದೆ ನಿಮ್ಮ ನಸೀಬನ್ನು ಬದಲಾಯಿಸಬಹುದು. Great people do the same normal work differently. ಹಂಗಂತ ಏನೇನೋ ಮಾಡ್ಬೇಡಿ. ಕೈ ಜೊತೆ ಮೈ ಕೂಡ ಸುಟ್ಟೋಗತ್ತೆ. Ok! So, think on every bit of work you do, ಇಷ್ಟೋತ್ತಂಕ ನನ್ನ ಭಾಷಣ ಬಿಗಿಸಿಕೊಂಡಿದ್ದಕ್ಕೆ ಧನ್ಯವಾದ.
Meet you in the next issue, Bye.
ನಿಮ್ಮ ಪ್ರೀತಿಯ
ಮಚೆಂಪು
ಪ್ರೀತಿಯ ಮಚ್ಚಿಗಳೇ,
ಎಲ್ರಿಗೂ ಈ ಮಚೆಂಪು ಮಾಡೋ ನಮಸ್ಕಾರ.
‘ಈ ನಮ್ ಜನ ಮಾತಾಡೋದೇ ಒಂದು ಮಾಡೋದೇ ಇನ್ನೊಂದು’ ಅಂತ ಗೊಣಗುತ್ತಿದ್ದೆ. As usual ನನ್ನ ಗೊಣಗಾಟವನ್ನ ಕೆಳಲಿಕ್ಕೆ ನನ್ನ ಪಕ್ಕ ಮಲ್ಲಿ ಇದ್ದ. ‘ಏನ್ ಮಚ್ಚಿ, ಮತ್ತೆ ಯಾವ್ದೋ ದೊಡ್ಡ disappointment ಆಗಿರೋ ಹಾಗಿದೆ? ಏನ್ಸಮಾಚಾರ?’ ಅಂದ. ನಾನು ಅವತ್ತು ಬೆಳ್ಗೆ college campusನಲ್ಲಿ ನೋಡಿದ ಘಟನ್ನೇನಾ with details ಅವನಿಗೆ ವಿವರಿಸಿದೆ.
ನಮ್ ಕಾಲೇಜಲ್ಲಿ ಎಲ್ಲಾ ಹುಡುಗ್ರಿಗೂ ಪರಮೇಶಿ ಮೇಷ್ಟ್ರು ಅಂದ್ರೆ ಭಾರಿ ಭಯ, ಭಕ್ತಿ. ಅವರ ಕ್ಲಾಸು ಅಂದರೆ ಯಾರೂ miss ಮಾಡುವುದಿಲ್ಲ. ಹಾಗಂತ ಅವರು ಅಷ್ಟು ಚೆನ್ನಾಗಿ ಪಾಠ ಮಾಡ್ತಾರೆ ಅಂತ ತಿಳ್ಕೋಬೇಡಿ. ನಮ್ಮ university ನವರೇ ಹುಡುಗ್ರಿಗೆ 75 percent ಅಟೆಂಡೆನ್ಸ್ ಸಾಕು. ಇನ್ನುಳಿದ ೨೫% ಕ್ಲಾಸು ಬಂಕ್ ಮಾಡಿ ಊರು ಸುತ್ತಿ ಉದ್ಧಾರ ಮಾಡಲಿ ಎಂದು ಹೇಳಿದ್ದರೂ ಈ ನಮ್ಮ ಪರಮೇಶಿ ಮೇಷ್ಟ್ರ ಕ್ಲಾಸಿಗೆ ಕಂಪಲ್ಸರಿ ತೊಂಭತ್ತೈದು ಪರ್ಸೆಂಟ್ ಅಟೆಂಡೆನ್ಸು ಇರಲೇ ಬೇಕು. ಇಲ್ಲಾ ಅಂದ್ರೆ ಪರೀಕ್ಷೆಗೆ ಕೂರಲು allow ಮಾಡುವುದಿಲ್ಲ. ಅದ್ಕೇ ಕಾಲೇಜ್‌ನ ಹುಡುಗ್ರೆಲ್ಲಾ ಮನೆಯಲ್ಲಿ ದೇವರ ಫೋಟೋ ಮೇಲೆ ಹೂ ತಪ್ಪಿಸಿದರೂ ಪರಮೇಶಿ ಮೇಷ್ಟ್ರ ಕ್ಲಾಸು miss ಮಾಡುವುದಿಲ್ಲ.
ಇವರ ಕ್ಲಾಸು ಹೇಗಿರುತ್ತೆ ಅನ್ನೋದನ್ನ ತಿಳಿಯೋದೇ ಮಜಾ. ಇವ್ರು ಯಾವ ಸಬ್ಜೆಕ್ಟ್ ತಗೋಳ್ತಾರೆ ಅನ್ನೋದೆ ಕ್ಲಾಸಿನ majority ಹುಡುಗ್ರಿಗೆ ಗೊತ್ತಿಲ್ಲ. ಕ್ಲಾಸಿಗೆ ಬರ್ತಿದ್ದ ಹಾಗೆ ‘ಈಗಿನ ಕಾಲ ಅದೇಷ್ಟು ಹಾಳಾಗಿದೆ. ನಮ್ಮ ಕಾಲದಲ್ಲಿ ಹಿಂಗಿರಲಿಲ್ಲ. ಏನು ಹುಡುಗ್ರು ನೀವು… ‘ ಎಂದು ಭಾಷಣಕ್ಕೆ ಶುರುಹಚ್ಚಿಕೊಂಡು, ‘ಮನುಷ್ಯ ವಿಶ್ವ ಮಾನವ ಆಗಬೇಕು, ಜಾತಿ-ಗೀತಿ ನಾಶ ಆಗ್ಬೇಕು, ಮೇಲು-ಕೀಳು ಅನ್ನೋದು ಅಳಿಸಿ ಹೋಗ್ಬೇಕು. We should erase the word discrimination from our society.’ ಎಂದು ಅರ್ಧಗಂಟೆ ಕೊರೆಯೋದು ಅವರ ಅಭ್ಯಾಸ. ಅದೆಂಥಾ ಎದೆವಂತ student ಆದರೂ ಇವರ ಕೊರೆತದ ರಭಸ ತಡೆಯೋಕೆ ಸಾಧ್ಯವಾಗ್ತಿರಲಿಲ್ಲ. ಇವರು ತಮ್ಮದೇ ಭಾಷಣಕ್ಕೆ ತಾವೇ ವಂದನಾರ್ಪಣೆ ಹೇಳಿ ಮುಗಿಸಿ ಪಾಠ ಶುರು ಮಾಡುವಷ್ಟರಲ್ಲಿ ಹುಡುಗರೆಲ್ಲಾ ನಿದ್ರಾ ಲೋಕದಲ್ಲಿ beet ಹಾಕುತ್ತಿರುತ್ತಾರೆ. ಹೀಗಾಗಿ ಇವರು ಯಾವ subject ಪಾಠ ಮಾಡೋದು ಅನ್ನೋದು ಯಾರಿಗೂ ತಿಳಿಯುವುದಿಲ್ಲ. ಅದನ್ನೊಂದು ಭಾರೀ ರಹಸ್ಯ ಎಂದೇ ಹುಡುಗ್ರು ಭಾವಿಸಿಕೊಂಡಿದ್ದಾರೆ.
ಪರಮೇಶಿ ಮೇಷ್ಟ್ರು ಅಂದ್ರೆ ವಿಶ್ವ ಮಾನವ, ಭಾರೀ ಆದರ್ಶವಂತರು ಎಂದು ಇಡೀ ಕಾಲೇಜು ತಿಳಿದುಕೊಂಡಿತ್ತು. ನಾನೂ ‘ಈ ಯಪ್ಪ ದೊಡ್ಡ ಕೊರೆತದ ಆಸಾಮಿಯಾದ್ರೂ ಬೋ ಒಳ್ಳೆ ಮನಿಶ್ಯಾನೆ’ ಅಂತಂದ್ಕಂಡಿದ್ದೆ. ಆದರೆ ಅವತ್ತು ಬೆಳ್ಗೆ ಆಯ್ತಲ್ಲ ಅವರ ವಿಶ್ವರೂಪ ದರ್ಶನ!
ಮೇಷ್ಟ್ರು ಹೆಸರಿಗೆ ಎಷ್ಟೇ ಆದರ್ಶ ಅಂತ ಭೋಂಗು ಬಿಟ್ಟರೂ posh ಆಗಿ ಇರುತ್ತಿದ್ದರು. Honda City ಕಾರಿನಲ್ಲಿ ಜುಮ್ ಅಂತ daily ಕಾಲೇಜಿಗೆ ಬರ್ತಿದ್ರು. ನಾವೊಂದಿಷ್ಟು ಜನ ಹುಡುಗ್ರಿಗೆ ಮಾಡೋಕೆ ಕೆಲಸ ಇಲ್ದಾಗೆಲ್ಲಾ ಪರಮೇಶಿ ಮೇಷ್ಟ್ರು ಕಾರಲ್ಲಿ ಚಾಂಗ್ ಅಂತ ಬಂದು ಇಳಿಯೋದನ್ನೇ slow motionನಲ್ಲಿ ನೋಡಿದಂಗೆ ನೋಡ್ತಾ ಕೂತಿರ್ತಿದ್ವಿ. ಅವತ್ತೂ ಹಂಗೇ ಆಯ್ತು. ನಂದೂ ರೆಕಾರ್ಡ್ ಬರ್ದು ಮುಗ್ದಿದ್ರಿಂದ ನಾನೂ ಕಾಲೇಜ್ ಕಟ್ಟೆ ಮೇಲೆ ನಜ್ರ್ ಹಾಕುತ್ತಾ ಕೂತಿದ್ದೆ.
ಅವತ್ತು ಬೆಳಿಗ್ಗೆ ಮೇಷ್ಟ್ರು ಹೊಂಡಾ ಸಿಟಿ ಕಾರನ್ನ park ಮಾಡಿ ಬರುತ್ತಿದ್ದರು. ಅವರಿನ್ನೂ ಕಾಲೇಜ್ ಕಾಂಪೌಡ್ ಒಳಗೆ ಬಂದಿರಲಿಲ್ಲ ಅಷ್ಟರಲ್ಲಿ ಭಿಕ್ಷುಕಿಯೊಬ್ಳು ತನ್ನ ಮಗನನ್ನು ಎಳೆದು ಕೊಂಡು ಬಂದು ಅವರ ಎದುರು ನಿಂತ್ಲು. ಆಕೆಯ ಮಗನಿಗೆ ಕಾಲು ಕುಂಟುತ್ತಿತ್ತು. ಅವರನ್ನು ನೋಡಿದ್ರೆ ಪ್ರೊಫೆಶನ್ ಭಿಕ್ಷುಕರು ಅನ್ನೋ ಹಂಗಿರ್ಲಿಲ್ಲ. ಅವ್ರಿಬ್ರೂ ಮೇಷ್ಟ್ರ ಹತ್ರ ಬಂದು ದುಡ್ಡಿಗಾಗಿ ಕೈ ಒಡ್ತಾರೆ ಅಂದುಕೊಂಡಿದ್ದೆ. ಆದ್ರೆ ಅವರಿ ಭಿಕ್ಷೆ ಬೇಡಲಿಲ್ಲ. ಒಂದೇ ಸಲಕ್ಕೆ ಮೇಷ್ಟ್ರನ್ನ ಬೈಯ್ಯೋಕೆ ಶುರು ಮಾಡಿದರು. ಆ ಹೆಂಗಸು ತನ್ನ ಮಗನ ಕಾಲನ್ನು ತೋರಿಸುತ್ತಾ ಮೇಷ್ಟ್ರಿಗೆ ಹಿಡಿ ಶಾಪ ಹಾಕ್ತಿದ್ರು. ಮೇಷ್ಟ್ರು ಅವ್ರನ್ನ ನೋಡೇ ಇಲ್ಲ ಅನ್ನೋ ಹಂಗೆ ಕಾಲೇಜು ಕಡೆಗೆ ಹೆಜ್ಜೆ ಹಾಕಿದರು. ಆ ಹೆಂಗಸು ಅವರನ್ನು ಬಿಡೋದಿಲ್ಲ ಅನ್ನೋ ಥರ ಅವ್ರನ್ನೇ ಹಿಂಬಾಲಿಸಿದಳು. ಅವಳ ಮಗ ಹಿಂದೆ ಕಾಲು ಎಳೆದುಕೊಂಡು ಬರುತ್ತಿದ್ದ. ಮೇಷ್ಟ್ರು ಕಾಲೇಜು ಕಾಂಪೌಂಡಿನೊಳಕ್ಕೆ ಬಂದು ಸೆಕ್ಯುರಿಟಿ ಕೈಗೆ ಹತ್ತು ರುಪಾಯಿ ಕೊಟ್ಟು ಏನೀ ಹೇಳಿದ್ರು. ಆ ಸೆಕ್ಯುರಿಟಿಯವ ಈ ತಾಯಿ ಮಗನಿಗೆ ಬಡಿದು ಕಾಲೇಜು ಕ್ಯಾಂಪಸ್ಸಿನಿಂದ ದೂರ ಅಟ್ಟಿದ. ಆ ಹೆಂಗಸು ನೆಟಿಕೆ ಮುರಿಯುತ್ತಾ, ನಮ್ಮ ಸೆಕ್ಯುರಿಟಿಯವನ ಎದುರು ಮಣ್ಣು ಎರಚಿ ಶಾಪ ಹಾಕುತ್ತಾ ಅಳುತ್ತಾ ಹೋದಳು.
ನಂಗೆ ಇಲ್ಲಿ ಏನೋ ಕರಾಮತ್ತು ನಡ್ದಿದೆ ಅನ್ನಿಸ್ತು. ಮೊದ್ಲೇ Sherlok Holmes ತುಂಡು ನಾನು, ಏನು ಸಂಗತಿ ಅನ್ನೋದನ್ನ ತಿಳ್ಕೋಬೇಕು ಅಂತ decide ಮಾಡಿ ಅವ್ರಿಬ್ರನ್ನೂ ಹಿಂಬಾಲಿಸ್ದೆ. ಅವ್ರಿಬ್ರೂ ಕಾಲೇಜು ಪಕ್ಕದ ರಸ್ತೆಯ ಫೂಟ್ ಪಾತ್‌ನ ಮೂಲೆಯಲ್ಲಿ ಕುಳಿತಿದ್ರು. ಅವ್ರನ್ನ ಮಾತಾಡ್ಸಿದೆ.
ಆ ಹುಡ್ಗನ ಹೆಸ್ರು ಮಾಲಿಂಗ. ಅವ್ನು ಗವರ್ನಮೆಂಟ್ ಹೈಸ್ಕೂಲಿನಲ್ಲಿ ಓದ್ತಿದ್ದ. State level ರನ್ನಿಂಗ್ ರೇಸ್ ಚಾಂಪಿಯನ್ ಆಗಿದ್ದ. ಮುಂದಿನ ತಿಂಗಳು ನ್ಯಾಷನಲ್ ಲೆವೆಲ್ ಚಾಪಿಯನ್ ಶಿಪ್‌ಗೆ ಆಡೋಕೆ ಹೋಗ್ಬೇಕಿತ್ತು. ಅವತ್ತು ಸ್ಕೂಲು ಮುಗಿಸ್ಕಂಡು ಮನೆಗೆ ಬರ್ತಿದ್ದ. ರಸ್ತೆ ದಾಟೋಕೆ ಗ್ರೀನ್ ಸಿಗ್ನಲ್ ಇತ್ತು. ಇವನು ಆರಾಮಾಗಿ ಬರ್ತಿದ್ದ ಅಷ್ಟರಲ್ಲಿ ಎಲ್ಲಿಂದ್ಲೋ ಬಂದ ಪರಮೇಶಿ ಮೇಷ್ಟ್ರ ಹೊಂಡಾ ಸಿಟಿ ಕಾರು ಸಿಗ್ನಲ್ ಜಂಪ್ ಮಾಡಿ ಇವನಿಗೆ ಅಪ್ಪಳಿಸಿತು. ಈ Accidentನಲ್ಲಿ ಹುಡುಗನ ಕಾಲು ಮುರಿಯಿತು. ಏನಾಗಿದೆ ಅಂತ ನೋಡೋ ಮಾನವೀಯತೆನೂ ಇಲ್ದೆ ಪರಮೇಶಿ ಮೇಷ್ಟ್ರು ಅಲ್ಲಿಂದ ಓಡಿದ್ದರು. ಪೊಲೀಸರು ಹುಡುಗನೇ ಓಡಿ ಬಂದು ಕಾರಿಗೆ ಬಿದ್ದ ಎಂದರು. ಅವತ್ತಿನಿಂದ ಈ ತಾಯಿ ಮಗ ಪರಮೇಶಿ ಮೇಷ್ಟ್ರ ಬೆನ್ನು ಬಿಡದೆ ಹಿಂಬಾಲಿಸಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದರು.
ನಂಗೆ ಅವ್ರ ಕಥೆ ಕೇಳಿ ತುಂಬಾ ದುಃಖ ಆಯ್ತು. ಪಾರ್ಕಿಂಗ್‌ನಲ್ಲಿ ನಿಂತಿದ್ದ ಪರಮೇಶಿ ಮೇಷ್ಟ್ರ ಕಾರಿಗೆ ದೊಡ್ಡದೊಂದು ಕಲ್ಲು ತೂರಿ ನಾನು ಕಾಲ್ಕಿತ್ತೆ! ಹೇಳಿ friends ನಾನು ಮಾಡಿದ್ದು ತಪ್ಪಾ?
ನಿಮ್ಮ ಪ್ರೀತಿಯ,
ಮಚೆಂಪು
Hi frenz, ಎಲ್ರಿಗೂ ನನ್ನ ಕಾಲಂಗೆ ಸುಸ್ವಾಗತ.
Ok! ಏನು ಮಚ್ಚಿ topicಗೆ ಈ ರೀತಿಯಾದ ಒಂದು unique title ಕೊಟ್ಟೀದ್ದೀಯಾ? ಅಂತ ನೀವು ಕೇಳ್ಬೋದು. ಅದಕ್ಕೆ ಉತ್ತರ ಹೇಳ್ತೀನಿ ಕೇಳಿ. ಇದು ನಾನು ಮನದಾಳದಿಂದ ಬಗೆದು ತೆಗೆದ topic name ಇದ್ರ ಅರ್ಥ ಏನಪ್ಪಾ ಅಂದ್ರೆ, ಈಗಿನ ಜನ್ರು ಎಷ್ಟು careless ಆಗಿ behave ಮಾಡ್ತಾರೆ ಅನ್ನೋದು. Mobile, money, motor ಎಲ್ಲಾ ಕಳ್ಕೊಂಡ್ರೂ ok! ಆದ್ರೆ ಮಕ್ಳನ್ನೇ ಅಲ್ಲಿ ಇಲ್ಲಿ ಬಿಟ್ಟು ಹೋಗ್ತಾರಲ್ಲ. ಅದು ಉರಿಯೋದು. ಮೊನ್ನೆ ಇದೇ ರೀತಿಯಾದ ಒಂದು ಘಟನೆ ನಡೀತು.
ಅವತ್ತಿನ ದಿನ Volley ball ಆಡಿ ಎಲ್ರೂ ಸುಸ್ತಾಗಿದ್ವಿ. ಬಳಲಿ ಬೆಂಡಾಗಿದ್ವಿ. So, decided to have some energy back up. ಅಂದ್ರೆ ಹೊರಗೆ ಹೋಗಿ ತಿನ್ನಕ್ಕೆ decide ಮಾಡಿದ್ವಿ. We were 5 in number. Full ಗಲಾಟೆ ಮಾಡ್ಕೊಡು, ನಗಾಡ್ಕೊಂಡು, ಮಜಾ ತಗೊಂಡು, ರೇಗಿಸ್ಕೊಂಡು, ಕಾಡುಸ್ಕೊಂಡು, ನಡೆದ್ಕೊಂಡು, ಜಿಗಿದ್ಕೊಂಡು ಪಾನಿಪುರಿ ತಿನ್ನಕ್ಕೆ ಹೊರಟಿದ್ವಿ.
ನಮ್ಮ ಹುಡುಗ್ರೆಲ್ಲ ಬೇಲ್ಪುರಿ ಆರ್ಡರ್ ಮಾಡಿದ್ರು. ನಾನು differentಉ ಅಂತ ಮೊದ್ಲೆ ಹೇಳಿದ್ದೀನಿ. ಮಸಾಲೆಪುರಿ ಏನಲೇ? ಯಾವಾಗ್ಲೂ differentಅಂತ ಹೊಡ್ಕೊಂತಿರ್ತೀಯಲ್ಲ, ಅಂಥದ್ದೇನಿದೆ ಅದ್ರಲ್ಲಿ? ಅಂತ ನೀವು ಕೇಳ್ಬೋದು. ನನ್ನ ಪ್ರಕಾರ . Difference makes people recognized. College ಗೆ ಎಲ್ರೂ smart ಆಗಿ dress ಮಾಡ್ಕೊಂಡು ಬರ್ತಾರೆ. ಅದೇ ಒಬ್ಬ ಒಂದಿನ ಕಾಲೇಜ್ಗೆ shirt ಹಾಕ್ದೆ banian ನಲ್ಲಿ ಬಂದ್ರೆ ಅವನು ಹೆಸರುವಾಸಿಯಾಗ್ತಾನೆ. Osama ಕೂಡಾ ಒಂದಿನ ನಂಥರ think ಮಾಡಿದ್ದ ಅನ್ಸುತ್ತೆ, ಅದಕ್ಕೆ ಅವನಿಗೆ ಈ ರೀತಿಯಾದ inspiration ಸಿಕ್ಕಿದ್ದು. Try to be different not to be osama.
ಒಂದು ಪಾನಿಪುರಿಗೂ ಇವ್ನು ಇಷ್ಟೊಂದು think ಮಾಡ್ತಾನಲ್ಲಾ ಅಂತ ಯೋಚ್ನೆ ಮಾಡ್ತಿದ್ದೀರಾ? ತಲೆ ಬೆಳ್ದಿರೋದೇ ಹಾಗೆ, ಏನ್ ಮಾಡ್ತೀರಾ? ಮುಂದೆ ಏನಾಯ್ತು ಅಂತ ನೋಡೀ. ಎಲ್ರೂ ಆರ್ಡರ್ ಮಾಡಿದ್ನ ಗಾಡಿಯವ್ನು ತಂದುಕೊಟ್ಟ.We started eating. ನಾನು ನಂದನ್ನ ಬೇಗ ಮುಗಿಸಿ ಅವ್ರಿವರ ತಟ್ಟೆಗೂ ಕೈ ಹಾಕಿ, ಅವ್ರಿಗೂ ಖಾಲಿ ಮಾಡಕ್ಕೆ help ಮಾಡ್ದೆ. So, everybody finished eating. ಮನೋಜ ದುಡ್ಡುಕೊಟ್ಟ.
ಅಷ್ಟರಲ್ಲಿ ಒಂದು ಹುಡುಗಿ, ಜೊತೆಗೆ ಮಗು ಗಾಡಿಯವ್ನ ಹತ್ರ ಬಂದ್ರು. ನಮ್ಮ ಹುಡುಗ್ರುಗೆ ಜಾಸ್ತಿ ಇದ್ರೆ ಈ ರೀತಿ ಹೋಗೋ-ಬರೋರ ಮೇಲೆಲ್ಲಾ ತಲೆ ಕೆಡಿಸ್ಕೊಳ್ಳೋದು ಹೆಚ್ಚು. So, we started watching. ಹುಡ್ಗಿ ಸುಮಾರು ಚೆನ್ನಾಗಿ ಇದ್ಲು. ಅದಕ್ಕೆ ಅನ್ಸುತ್ತೆ ನಮ್ಮುಡುಗ್ರು ನಿಂತಿದ್ದು. (including me)
ಅವ್ಳು ಬಂದು ಮಗು ನಿಮ್ದಾ? ಅಂತ ಗಾಡಿಯವ್ನ ಹತ್ರ ಕೇಳಿದ್ಲು. ನಾವು ಏನೋ crime story ಅಂತ expect ಮಾಡಿದ್ವಿ. ಅವನು ಅಲ್ಲ ಅಂತ ಹೇಳಿ, ‘ಏನಾಯ್ತು’ ಅಂತ ಕೇಳ್ದ. ‘ಮಗು ದಾರೀಲಿ ಒಂದೇ ಹೋಗ್ತಾ ಇತ್ತು. miss ಆಗಿರ್ಬೇಕು’ ಅಂದ್ಲು. ಅವನು ಸ್ವಲ್ಪ ತಡಕಾಡಿದ. ಅಲ್ಯಾರನ್ನೋ ವಿಚಾರಿಸಿಕೊಂಡು ಬರಲು ಮತ್ತೊಬ್ಬನವನತ್ರ ಹೇಳ್ದ. No result. So, ಮಲ್ಲಿ ಇದ್ದೌನು, ‘ಬನ್ರಲೇ, ನಾವು ಸ್ವಲ್ಪ ಮಾಡಣ’ ಅಂದ.
ತಿರುಗ ಅವಳ ಹತ್ರ ಹೋಗಿ ‘ಏನು’ ಅಂತ ವಿಚಾರಿಸಿದ್ವಿ. ಇವತ್ತಾದ್ರೂ ಒಂದು ಒಳ್ಳೆಯ ಕೆಲ್ಸ ಮಾಡೋಣ ಅಂತ decide ಮಾಡಿದ್ವಿ. ಮಲ್ಲಿಗೆ ಅವರ ಹತ್ರ ಇರಕ್ಕೆ ಹೇಳಿ, ನಾನು, ಉಡುಪಿ, ಮನೋಜ, ಕೇಶವ divide ಆಗಿ We stareted searching for ಮಗು’s parents. We searched for a while. But again failure. ನಾವು ಹಿಂದಿರುಗುವಷ್ಟರಲ್ಲಿ ಆ ಹುಡುಗಿ ಮಗೂನ ಕರ್ಕೊಂಡು ಬಂದು ಒಂದು Xerox ಅಂಗ್ಡಿ ಹತ್ರ ನಿಂತಿದ್ಲು. ಮಲ್ಲಿ ಜೊತೀಗೇ ಇದ್ದ. ನಮ್ಮ ಮಲ್ಲಿ ಆ ಮಗು details ತೆಗೊಳೋ ಬದ್ಲು ಆ ಹುಡ್ಗಿಯ details full ಆಗಿ ತೆಗೊಂಡಿದ್ದ. ಆ xerox ಅಂಗ್ಡಿಯವ್ನು ಮಗೂಗೆ ಒಂದು chocolate ಕೊಟ್ಟು ಸುಮ್ನಿರ್ಸಿದ್ದ.
ಈಗ ನಮ್ಗುಳ್ದಿರೋ ಕೊನೇ ದಾರಿ ಅಂದ್ರ, ಪೋಲೀಸ್ ಸ್ಟೇಷ್ನ್. We started discussing what would be the consequences. ಅದು ದೊಡ್ಡೋರ್ ಮನೆ ಮಗುವಾಗಿದ್ರೆ ನಮ್ಗೆ compliments ಸಿಗುತ್ತೆ ಅಂತಾನೂ, kidnap ಮಾಡಿದ್ದಾಗಿದ್ರೆ, case ನಮ್ಮೇಲೆ turn ಆಗಿ ನಾವು court ಮೆಟ್ಲು ಹತ್ತಬೇಕಾಗುತ್ತೆ ಅಂತಾನೂ opinions ಬಂದ್ವು.. ಆ ಹುಡ್ಗಿ ಬೇರೆ full ಭಯ ಬಿದ್ದೋಗಿದ್ಲು.
ಅವ್ಳು B.com ಓದ್ತಾ ಇದ್ಲಂತೆ. Tution ಗೆ ಹೋಗಿ ಬರ್ಬೇಕಾದ್ರೆ ಮಗು ಸಿಗ್ತು ಅಂತ ಹೇಳಿದ್ಲು. ‘ನಂಗೆ ತುಂಬಾ ಭಯ ಆಗ್ತಿದೆ, ನಮ್ಮಣ್ಣನ್ನ ಕರೀತೀನಿ’ ಅಂತ ಒದ್ದಾಡ್ತಾ ಇದ್ಲು. ನಾವು ಕಳ್ರು ಥರಾ ಕಾಣ್ತಿದ್ವಿ ಅನ್ಸುತ್ತೆ. ಆ time ನಲ್ಲಿ ನಾನು full ಯೋಚ್ನೆಯಲ್ಲಿ ಮುಳುಗೋಗಿದ್ದೆ.
ಒಂದು ಮೂರ್ನಾಲ್ಕು ಜನ ಬಂದು ವಿಚಾರ್ಸಿದ್ರು. ನಾವೂ ಕೆಲೂರ್ನ ವಿಚಾರಿಸಿದ್ವಿ. ಏನೂ ಉಪಯೋಗ ಆಗ್ಲಿಲ್ಲ. ಕೊನೆಗೇ ಆ ಕಡೆಯಿಂದ ಯಾರೋ ಏನೋ ಹುಡ್ಕೊಂಡು ಬರೋ ಥರಾ ಕಂಡ್ರು. ನಾವು ಹೋಗಿ ಮಗು ನಿಮ್ದೇನಾ? ಅಂತ ಕೇಳಿದ್ವಿ. ಅವ್ರು “ಹೌದು” ಅಂದ್ರು. ಅಬ್ಬಾ!ಸದ್ಯ! ಅಂತ ಹಿಂದೆ ತಿರುಗುವಷ್ಟರಲ್ಲಿ ಅವ್ರು ಮಗೂನಾ ಕರ್ಕೊಂಡು ಹೋಗೇ ಬಿಟ್ರು.
ಅರೆರೆ! ಇದೇನಿದು ಆ ಮಗೂನ ಅವ್ರ ಹತ್ರ ಸೇರಿಸೋಕೆ ನಾವು ಪ್ರಾಣಾನೇ ಮುಡಿಪಾಗಿಟ್ಟೀದ್ದೀವಿ. Nonsense!ಒಂದು thanks ಕೂಡ ಇಲ್ಲ. Atleast ಆ ಹುಡ್ಗಿಗಾದ್ರೂ ಹೇಳೋದಲ್ವಾ. mobile ವಾಪಾಸ್ ಸಿಕ್ಕಿದ್ರೂ, ಜೀವ ಬಂದ ಹಾಗೇ ಆಡ್ತಾರೆ, ಅಂಥದ್ರಲ್ಲಿ ಮಗು ಸಿಕ್ಕಿದೆ, ಸ್ವಲ್ಪನಾದ್ರೂ ಕೃತಜ್ಞತೆ ಬೇಡ… ಅದಕ್ಕೆ topic ಹೆಸ್ರು ಆ ಥರ ಹಾಕಿದ್ದು.
`ಮಚ್ಚಾ Tensionನಲ್ಲಿ ಇದ್ರು ಅನ್ಸುತ್ತೆ, ಹೋಗ್ಲಿ ಬಿಡು’ ಅಂದ ಉಡುಪಿ. ನಾನು ‘ಸಾಯ್ಲಿ ಬಿಡು, ಆದ್ರೆ climax ಸರಿಯಾಗ್ಲಿಲ್ಲ’ ಅಂದೆ. ಅಷ್ಟು ಮಾತಾಡಿ ಹಿಂದಿರುಗುವಷ್ಟರಲ್ಲಿ ಹುಡುಗಿ ಮಾಯ! ಅವತ್ತು ನಮ್ಮ ಯಾರ luck ಸರಿ ಇರ್ಲಿಲ್ಲ ಅನ್ಸುತ್ತೆ.
ಅಷ್ಟೊತ್ತಿಗೆ ನಮ್ಮೆಲ್ಲರ್ಗೂ ಸುಸ್ತಾಗಿತ್ತು. ಜ್ಯೂಸ್ ಅಂಗಡಿಗೆ ಗೆ ಹೋಗಿ ಜ್ಯೂಸ್ ಕುಡ್ದು hostel ಸೇರ್ಕೊಂಡ್ವಿ.
ಹೇಗೋ ಮಗೂನಾ ಮನೆಗೆ ಸೇರ್ಸಿದ್ವಿ’. ಅಂತ ಉಸಿರುಬಿಟ್ಟೆ. ಆದ್ರೆ ಈ ರೀತಿ careless ಆಗಿರೋರ್ನ ಸದಾ ಖಂಡಿಸ್ತೀನಿ. very bad ಅದಕ್ಕಿಂತಲೂ ಕೃತಜ್ಞತೆ ತೋರಿಸ್ದಿರೋರ್ನ ಕಂಡ್ರೆ ತದುಕಬೇಕು ಅನ್ಸುತ್ತೆ. Atleast ಒಂದು thanks ಹೇಳೋ ಸ್ವಭಾವನಾ ಬೆಳೆಸ್ಕೊಂಡ್ರೆ ಸಾಕು. ಬೇರೆ ಏ ನು ಬೇಕಿಲ್ಲ. ನೀವೇನಂತೀರ?
ಇತ್ತೀಚಿನ ಟಿಪ್ಪಣಿಗಳು