ಕಲರವ

Archive for the ‘ಬಿಡಿ ಲೇಖನ’ Category

-ಬಾಲು ಪ್ರಸಾದ್.ಆರ್, ಬೆಂಗಳೂರು
balamanis999@gmail.com

ಗಿರೀಶ ಭೀಮಾಪುರದ ಸಂತ ಬಸಂತ ಆಂಗ್ಲ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದನು. ಅಪ್ಪ ಸೋಮಣ್ಣ ಸರ್ಕಾರಿ ಉದ್ಯೋಗಿ. ಜೀವನೋಪಾಯಕ್ಕೆ ಚಿಂತೆಯಿಲ್ಲ. ಅಮ್ಮ ಸರೋಜಳಿಗೆ ಮನೆಯ ಕೆಲಸಕ್ಕೆ ನೆರವಾಗುವವಳು, ಕೆಲಸದಾಕೆ ಲಚ್ಚಿ. Untitled picture

ಲಚ್ಚಿ, ಮೂಲತಃ ಲಂಬಾಣಿ ಹುಡುಗಿ. ಬದಲಾದ ಕಾಲಕ್ಕೆ ಹೊಂದಿಕೊಂಡದ್ದರಿಂದ ಆಕೆಯನ್ನು ನೋಡಿದವರ್ಯಾರೂ ಲಂಬಾಣಿ ಎಂದು ಗುರುತಿಸುತ್ತಿರಲಿಲ್ಲ. ವಯಸ್ಸು ೧೩-೧೪ ಇದ್ದಿರಬಹುದು. ಗಿರೀಶನಿಗಿಂತ ಒಂದೆರಡು ವರ್ಷ ದೊಡ್ಡವಳು. ಅಪರೂಪಕ್ಕೊಮ್ಮೆ ಕೈತುಂಬ ಬಿದಿರಿನ ಬಳೆಗಳನ್ನ ತೊಡಿಸಿದರೂ, ಅವು ಯಾವ ತಡೆಯೂ ಇಲ್ಲದೆ ಸರಾಗವಾಗಿ ಸರಿದು ನೆಲಕ್ಕೆ ಬೀಳುತ್ತಿದ್ದವು, ಅಷ್ಟು ತೆಳ್ಳಗಿದ್ದಳು, ಲಚ್ಚಿ. ಬಣ್ಣ ಕಪ್ಪಾದರೂ, ಲಕ್ಷಣವಾಗಿದ್ದಳು. ಅಚ್ಚುಕಟ್ಟಾಗಿ ತಲೆಯನ್ನು ಬಾಚಿ ಜಡೆ ಹೆಣೆದುಕೊಳ್ಳುತ್ತಿದ್ದಳು. ಮೂಗು, ಕಿವಿಗಳಲ್ಲಿ ನಕಲಿ ಆಭರಣಗಳು ಅವಳ ರೂಪಿಗೆ ಮೆರುಗು ತಂದಿದ್ದವು. ಹಣೆಯ ಮೇಲೆ ದಿನಕ್ಕೊಂದು ಸ್ಟಿಕ್ಕರ್. ರಜನೀಕಾಂತ್ ಅವಳ ನೆಚ್ಚಿನ ಹೀರೋ. ಅವಳಪ್ಪನಿಗೆ ಎಂದಾದರೂ ನೂರೋ-ಇನ್ನೂರೋ ಬಂತೆಂದರೆ ಪ್ರೀತಿಯ ಮಗಳಿಗೆ ಒಂದು ರೂಪಾಯಿ ಕೊಡುತ್ತಿದ್ದರಂತೆ. ಅದನ್ನು ಕೂಡಿಟ್ಟು ರಜನೀ ಸಿನೆಮಾ ನೋಡುತ್ತಿದ್ದಳು. ಅವತ್ತಿಗೆ ಭೀಮಾಪುರದ ಟೆಂಟಿನಲ್ಲಿ ಐದು ರೂಪಾಯಿಗೆ ಸಿನೆಮಾ ತೋರಿಸುತ್ತಿದ್ದರು. ಸಿನೆಮಾ ನೋಡಿ ಬಂದು, ಗಿರೀಶ್‌ನ ಎದುರು ರಜನಿಯ ಒಂದೆರಡು ಸ್ಟಂಟ್‌ಗಳನ್ನೂ ಮಾಡಿಬಿಡುತ್ತಿದ್ದಳು. ಶಾಲೆಯನ್ನೇ ನೋಡಿಲ್ಲವಾದರು ಬೆರಳು ತೋರಿಸಿದರೆ ಹಸ್ತವನ್ನೇ ನುಂಗುವಷ್ಟು ಚುರುಕಾಗಿದ್ದಳು. ಕೆಲವೊಮ್ಮೆ ಸರೋಜಮ್ಮನವರು, ಪಕ್ಕದ ಮನೆಯವರು ಹಾಲಿನ ದುಡ್ಡು ಎಷ್ಟು ಕೊಡಬೇಕು, ಲೆಕ್ಕ ಹಾಕು ಎಂದು ಗಿರೀಶನಿಗೆ ಹೇಳಿದರೆ, ಅವನಿಗಿಂತ ಮೊದಲೇ ಲಚ್ಚಿ ಲೆಕ್ಕ ಹಾಕಿಟ್ಟುರುತ್ತಿದ್ದಳು. ಆಗೆಲ್ಲ "ನೀನು ಓದುವಂತಾಗಿದ್ದರೆ ಬಹಳ ಮುಂದೆ ಬರುತ್ತಿದ್ದೆ"- ಎಂದು ಸರೋಜಮ್ಮ ಉದ್ಗರಿಸುತ್ತಿದ್ದರು. ಕೆಲಸಕಾರ್ಯದಲ್ಲೂ ಅಷ್ಟೇ ಚುರುಕುತನ. ಅಷ್ಟೇ ಅಚ್ಚುಕಟ್ಟು. ಸರೋಜಮ್ಮನವರಿಗಂತೂ ಲಚ್ಚಿ ಇದ್ದರೆ, ಹತ್ತು ಕೈಗಳು ನೆರವಿಗಿದ್ದಷ್ಟು ಉತ್ಸಾಹ. ಇದೆಲ್ಲಕ್ಕಿಂತ ಹೆಚ್ಚಿನದ್ದು, ಲಚ್ಚಿಯ ಪ್ರಮಾಣಿಕತೆ ಮತ್ತು ನಿಷ್ಠೆ.

ಲಚ್ಚಿ ಸರೋಜಮ್ಮನ ಮನೆಯಲ್ಲೇ ಉಳಿದುಕೊಂಡಿದ್ದಳು. ಲಚ್ಚಿಗೆ ಇಬ್ಬರು ತಂಗಿಯರು, ಒಬ್ಬ ತಮ್ಮ. ಅವಳಪ್ಪ ಗಂಡು ಮಗನನ್ನು ಮಾತ್ರ ಶಾಲೆಗೆ ಕಳಿಸುತ್ತಿದ್ದರು. ಈ ಬಗ್ಗೆ ಲಚ್ಚಿಗೆ ಎಂದೂ ಅಸಮಾಧಾನವಿರಲಿಲ್ಲ. ಬದಲಾಗಿ, ಸರೋಜಮ್ಮ ಏನಾದರೂ ತಿಂಡಿ ಕೊಟ್ಟರೆ ಅದರಲ್ಲಿ ಕೊಂಚ ಉಳಿಸಿ ತಮ್ಮನಿಗೆ ಕೊಡುತ್ತಿದ್ದಳು. ತನ್ನ ತಮ್ಮ ಓದಿ ಮುಂದುವರೆಯಬೇಕೆಂದು ಕನಸು ಕಂಡಿದ್ದಳು. ಬಡಪಾಯಿ ಅಪ್ಪನ ಮೇಲೆ ಅಪಾರ ಅಭಿಮಾನ. ತನಗೆ ಬರುತ್ತಿದ್ದ ಮೂರ್ಕಾಸಲ್ಲಿ ಆತ ಸಂಸಾರ ತೂಗಿಸುತ್ತಿದ್ದ ಬಗ್ಗೆ ಅವಳಿಗೆ ಹೆಮ್ಮೆಯಿತ್ತು. ಆಡಿ ಕುಣಿವ ವಯಸ್ಸಿನಲ್ಲಿ ಮನೆಕೆಲಸ ಮಾಡುವ ತನ್ನ ಪರಿಸ್ಥಿತಿಯ ಮೇಲೂ ಅವಳಿಗೆ ಅತೃಪ್ತಿಯಿರಲಿಲ್ಲ. ಅತೃಪ್ತಿಯ ಭಾವ ಇಲ್ಲದೆಡೆ ಸುಖವಿರುತ್ತದೆ. ಹಾಗಾಗಿ, ಸರೋಜಮ್ಮನ ಮನೆಯಲ್ಲಿ ಈಕೆ ಅಷ್ಟು ಸುಖವಾಗಿದ್ದಳು. ಗಿರೀಶ ತನ್ನ ಜೊತೆ ಆಟವಾಡಲು ಬಲವಂತಪಡಿಸುತ್ತಿದ್ದ. ಲಚ್ಚಿಯ ತಮ್ಮ-ತಂಗಿಯರು, ಗಿರೀಶ, ಎಲ್ಲರೂ ಸೇರಿ ಕಣ್ಣಾಮುಚ್ಚಾಲೆ ಆಡುತ್ತಿದ್ದರು. ಲಚ್ಚಿ ಮತ್ತು ಗಿರೀಶ ಕ್ರಿಕೆಟ್ ಆಡುತ್ತಿದ್ದರು. ತೆಂಗಿನ ಸೌದೆಯನ್ನು ಸಿಗಿದು ಮಾಡಿದ ಬ್ಯಾಟಾಲ್ಲೇ ಲಚ್ಚಿ ಬೌಂಡರಿ ಬಾರಿಸುತ್ತಿದ್ದಳು. ಒಂದೆರಡು ಇಂಗ್ಲೀಷ್ ಮಾತನ್ನು ಕಲಿತುಬಿಟ್ಟಿದ್ದಳು.

ಹೀಗೇ ಮೂರ್ನಾಲ್ಕು ವರ್ಷಗಳು ಕಳೆದವು. ಲಚ್ಚಿ ವಯಸ್ಸಿಗೆ ಬಂದಳು ಅನ್ನಿಸಿತೋ ಏನೋ, ಅವಳಪ್ಪ ಹದಿನಾರರ ಹುಡುಗಿಗೆ ವರಾನ್ವೇಷಣೆ ನಡೆಸಿಯೇಬಿಟ್ಟರು. ಸರೋಜಮ್ಮನೆ ನಿಂತು ಮದುವೆ ಮಾಡಿದರು. ಮಡಿಲಕ್ಕಿ woman ಹಾಕಿ ಹರಸುವಾಗ ಸರೋಜಮ್ಮನ ಕಣ್ಣುಗಳು ಒದ್ದೆಯಾಗಿದ್ದವು. ಗಿರೀಶನಿಗೆ ಇದ್ಯಾವುದರ ಪರಿವೇ ಇಲ್ಲ. ಇನ್ನು ಮುಂದೆ ಆಟವಾಡಲು ಲಚ್ಚಿ ಇರುವುದಿಲ್ಲ ಎಂದಷ್ಟೇ ಗೊತ್ತು.

ಕಾಲ ಉರುಳಿತು. ಏಳೆಂಟು ವರ್ಷಗಳು ಕಳೆದವು. ಅದೊಂದು ಇಳಿಹೊತ್ತಿನಲ್ಲಿ ಸರೋಜಮ್ಮನ ಮನೆಯೆದುರು ಒಂದು ಹೆಂಗಸು, ಅವಳ ಕಾಲಿಗೆ ಒರಗಿದ ಒಂದು ಹುಡುಗ ಬಂದು ನಿಂತಿದ್ದರು. ಹತ್ತಿರ ಹೋದಾಗ ತಿಳಿದದ್ದು ಆಕೆ ಲಚ್ಚಿ ಎಂದು. ಬಹಳ ವರ್ಷಗಳ ನಂತರ ಲಚ್ಚಿಯನ್ನು ಕಂಡಾಗ ಸರೋಜಮ್ಮನಿಗೆ ಸಂತೋಷವಾಯಿತು. ಲಚ್ಚಿ ಬಲವಂತವಾಗಿ ಮುಖ ಅರಳಿಸಿದಳು. ಒಳಗೆ ಕರೆದರು. ಸರೋಜಮ್ಮ ಗಿರೀಶನನ್ನು ಕರೆದು, ಲಚ್ಚಿಯೊಡನೆ ಮಾತು ಮುಂದುವರೆಸಿದರು. ಲಚ್ಚಿಯನ್ನು ನೋಡಿದ ಗಿರೀಶ, ಅವಳ ಮಾತುಗಳನ್ನು ಕೇಳುತ್ತಾ ಗರ ಬಡಿದವನಂತೆ ನಿಂತ- ನಗು ಅದರ ಸೆಳೆತ ಕಳೆದುಕೊಂಡಿದೆ; ಕಣ್ಣುಗಳಲ್ಲಿ ಕಾಂತಿಯಿಲ್ಲದೆ ಇಂಗಿ ಹೋಗಿವೆ; ಅವಳ ಚುರುಕುತನ ಗಂಡನ ಹೊಡೆತಕ್ಕೆ ಸಿಕ್ಕಿ ಮಂಕಾಗಿದೆ; ಅವಳ ಚಿನಕುರುಳಿ ಮಾತುಗಳು ಅಳುವಾಗಿ ಕರಗಿ ಹೋಗಿವೆ; ಅವಳ ತಾಳಿ, ಓಲೆಗಳು, ಕಾಲುಂಗುರ ಹೆಂಡದಂಗಡಿ ಸೇರಿವೆ; ಟೀವಿ ನೋಡುತ್ತ ಕೂತಲ್ಲೇ ತೂಗುಡಿಸುತ್ತಿದ್ದಾಳೆ; ಅಲ್ಲೇ ನಿದ್ದೆಗೆ ಜಾರಿದ ಆರು ವರ್ಷದ ಮಗನನ್ನು ಎತ್ತುಕೊಂಡು ಹೋಗಿ ಚಾಪೆಯ ಮೇಲೆ ಮಲಗಿಸಲೂ ಅವಳ ತೋಳುಗಳಲ್ಲಿ ಶಕ್ತಿಯಿಲ್ಲ. ಗಿರೀಶನಿಗೆ ಇಬ್ಬರು ಲಚ್ಚಿಯರು ಕಾಣುತ್ತಿದ್ದಾರ್- ತಾನು ಬಿದ್ದಾಗ ಕೈಹಿಡಿದು ಎತ್ತಿದವಳು, ಬೆನ್ನು ತಿಕ್ಕಿ ಸ್ನಾನ ಮಾಡಿಸಿದವಳು, ತನ್ನ ಜೊತೆ ಆಟವಾಡಿ ತನ್ನ ಬಾಲ್ಯ ತುಂಬಿದ ಗೆಳತಿ, ಜೀವನೋತ್ಸಾಹಿ ಲಚ್ಚಿ; ಮತ್ತೊಬ್ಬಳು, ಪಬ್-ಬಾರ್‌ಗಳಲ್ಲಿ ಮೋಜು ಮಾಡುತ್ತಿರುವ ಮಹಿಳೆಯರ ಎದುರು ಹೆಂಡದಾಹಿ ಗಂಡನ ಹೊಡೆತಕ್ಕೆ ಸಿಕ್ಕ ಶೋಷಿತೆ, ನೀನಿಲ್ಲವಾದರೆ ಮತ್ತೊಬ್ಬ ಎನ್ನುವ ಕಾಲದಲ್ಲಿ, ಗಂಡ ಮನೆಯಿಂದ ದಬ್ಬಿದರೂ ಹಣೆಯಲ್ಲಿ ಕುಂಕುಮ, ಕತ್ತಿನಲ್ಲಿ ಅರಿಶಿನದ ದಾರ ಇಟ್ಟುಕೊಂಡ ಗೃಹಿಣಿ, ಓದು, ಉದ್ಯೋಗ, ಸ್ವಂತ ದುಡಿಮೆ ಆಮೇಲೆ ಮದುವೆ ಎನ್ನುವ ಹುಡುಗಿಯರ ಸಮವಯಸ್ಕಳಾಗಿ ಸಂಸಾರ ಸುಖ-ದುಃಖಗಳನ್ನು ಅನುಭವಿಸಿ ಮಗನ ಭವಿಷ್ಯಕ್ಕಾಗಿ ದುಡಿಯುವ ಅನಿವಾರ್ಯತೆ, ತಾನು ಭೂಮಿಗೆ ತಂದ ಮಗನನ್ನು ಸಾಕಲೂ ಹಿಂದೇಟು ಹಾಕಿದ ಗಂಡನನ್ನು ಧಿಕ್ಕರಿಸಿ ಮಗನನ್ನು ಸಾಕುವ ಛಲ ಹೊಂದಿರುವ ಈಕೆಯನ್ನು ಏನೆಂದು ಕರೆಯೋಣ? ಬದುಕಿನ ಪಯಣದಲ್ಲಿ ನನಗಿಂತ ಮುಂದಿರುವ, ಹೆಚ್ಚಿನ ಅನುಭವ ಹೊಂದಿದ ಈಕೆಯನ್ನು ಲಚ್ಚಿ ಎಂದು ಏಕವಚನದಲ್ಲಿ ಕರೆಯಲು ಮನಸ್ಸಾಗದೇ ಕೂತಾಗ, ಗಿರೀಶನಿಗೆ ನೆನಪಾದದ್ದು "ನಿನಗೇ ಬೇರೇ ಹೆಸರೂ ಬೇಕೇ, ಸ್ತ್ರೀ ಅಂದರೇ ಅಷ್ಟೇ ಸಾಕೇ" ಎಂಬ ಅಶ್ವಥ್‌ರ ಧ್ವನಿ.

ರಂಜಿತ್ ಅಡಿಗ, ಕುಂದಾಪುರ

ಬದುಕಿನಲ್ಲಿ ಸದಾ ನೆಗೆಟಿವ್ ಆಗಿ ಯೋಚಿಸುವವರನ್ನು, ಪದೇ ಪದೇ ಸೋಲುವವರನ್ನು ಜಗತ್ತು ಹೀನಾಯವಾಗಿ ನೋಡುತ್ತದೆ. ಅವರು ದೂರ ಬರುವುದು ಕಾಣುತ್ತಲೇ ಜನರಿಗೆ ‘ಅರ್ಜೆಂಟು ಕೆಲಸ’ಗಳು ನೆನಪಾಗುತ್ತವೆ. ಬೇಗ ಎರಡೂ ಕಾಲಿಗೆ ಚೆನ್ನಾಗಿ ಬುದ್ಧಿ ಹೇಳಲು ಕಾರಣಗಳು ಸಿಕ್ಕುತ್ತವೆ.

ಆದರೆ ಸದಾ ನಗೆ ಬೀರುವ, ಗೆಲ್ಲುತಲಿರುವ ವ್ಯಕ್ತಿಗೆ ಅಂಥ ಟ್ರೀಟ್ ಮೆಂಟ್ ಸಿಗುವುದಿಲ್ಲ. ಅಂಥವರನ್ನು ನೋಡಲು ಕಾಯುತ್ತಿರುತ್ತಾರೆ. ಅವರ ಜೊತೆಗೆ ಮತ್ತಷ್ಟು ಹೊತ್ತು ನಿಲ್ಲಲು ತವಕಿಸುತ್ತಿರುತ್ತಾರೆ. ಅರ್ಜೆಂಟು ಕೆಲಸಗಳೆಲ್ಲ ಪಕ್ಕಕ್ಕೆ ನಿಂತು ಯಶಸ್ವಿ ವ್ಯಕ್ತಿಗೆ ದಾರಿ ಬಿಡುತ್ತದೆ.

ಆದರೆ ಅಂಥ ಸ್ಥಿತಿ ತಲುಪುವ ದಾರಿ ಸುಗುಮವಾದುದಲ್ಲ.ಮೇಲಕ್ಕೆ ಸರಾಗವಾಗಿ ಕಂಡರೂroad_to_success ಸಾಕಷ್ಟು ಪರಿಶ್ರಮವಿರುತ್ತದೆ. ಬಾತುಕೋಳಿಯಂತೆ ಸಲಿಲವಾಗಿ ಈಜುತ್ತಿದ್ದರೂ, ಪಟ ಪಟ ಬಡಿಯುವ ಕಾಲಿನ ಶ್ರಮ ಕಾಣುವುದಿಲ್ಲ. ಗೆಲುವಿಗೆ ಅವರು ಕಂಡ ಕನಸಿನ ಬೀಜ, ಕನಸನ್ನು ಪೋಷಿಸಲು ವಿನಿಯೋಗಿಸಿದ ಶ್ರಮ, ನಿದ್ದೆಗೆಟ್ಟ ರಾತ್ರಿಗಳು, ಪಟ್ಟ ಅವಮಾನಗಳು, ‘ಈ ಗುರಿ ಅಸಾಧ್ಯ’ ಎಂಬ ಲೆವೆಲ್ಲಿನಿಂದ ಮತ್ತೆ ಉತ್ಸಾಹದ ಬುಗ್ಗೆಯೊಡೆದು ಸಾಧಿಸುವ ಶ್ರದ್ಧೆ ಇವ್ಯಾವುದೂ ತೋರದು.

ಸಾಮಾನ್ಯ ಮನುಷ್ಯರಿಗೆ ಕನಸು ಕಾಣುವ ಪ್ರವೃತ್ತಿಯಿರುವುದು ಸಹಜ. ಕೆಲವರು ಅದನ್ನು ಕನಸಿನ ಮಟ್ಟಕ್ಕೇ ಉಳಿಸಿ ಮತ್ತೆ ಜೀವನವನ್ನು ಮಾಮೂಲಾಗಿ ಕಳೆದುಬಿಡುತ್ತಾರೆ. ಉಳಿದವರು ಅದರಿಂದಲೇ ಪ್ರೇರಣೆ ಪಡೆದು ಒಂದಿಷ್ಟು ಪ್ರಯತ್ನ ಮಾಡಿದರೂ ಚಿಕ್ಕ ಸೋಲು ಎದುರಾದೊಡನೆ ಸುಸ್ತಾಗುತ್ತಾರೆ. ಗಾಜು ಮುಚ್ಚಿದ ಕಾರಿನೊಳಗಡೆ ಹಾರುವ ನೊಣ ಒಂದೆರಡು ಬಾರಿ ಪ್ರಯತ್ನಿಸಿ ಸಾಧ್ಯವಾದಾಗ ಒಳಗಿನ ಪರಿಸರಕ್ಕೇ ಅಡ್ಜಸ್ಟ್ ಆಗುವಂತೆ ಮತ್ತೆ ರೊಟೀನ್ ಜೀವನಕ್ಕೆ ಶರಣಾಗುತ್ತಾರೆ. 

ಮೊದಲು ಕಂಡ ಕನಸು ಅನನ್ಸಾಗಿಸುವ ಸಾಮರ್ಥ್ಯ ಇದೆಯಾ? ಅದಕ್ಕೆ ಬೇಕಾಗುವ ಸಮಯ, ಪಡಬೇಕಾದ ಕಷ್ಟದ ಅಂದಾಜು ಮಾಡಿ ಸಾಧಿಸಬಲ್ಲೆವಾ ಎಂದು ನಿಯತ್ತಾಗಿ ಪ್ರಶ್ನಿಸಿಕೊಳ್ಳಬೇಕು. ಒಮ್ಮೆ ಹಠ, ಶ್ರದ್ಧೆ ಮೂಡಿದರೆ ಅದರಲ್ಲೆದುರಾಗುವ ಸೋಲುಗಳನ್ನು ತಾತ್ಮಾಲಿಕ ಎಂದೇ ಪರಿಗಣಿಸಿ ಮುನ್ನುಗ್ಗಬೇಕು. ಮಹಾನ್ ಆಟಗಾರರಲ್ಲಿ ಚಿರವಾಗಿ ಉಳಿಯುವ ಹೆಸರಾದ ಸಚಿನ್ ತೆಂಡುಲ್ಕರ್ ಸಹ ಶೂನ್ಯದಿಂದಲೇ ಟೆಸ್ಟ್ ಕ್ರಿಕೆಟ್ ಶುರು ಮಾಡಿದ್ದು ಎಂಬುದು ನೆನಪಿರಲಿ. ಅಮಿತಾಭ್ ಬಚ್ಚನ್ ದನಿಯನ್ನು ಆಕಾಶವಾಣಿಯಲ್ಲಿ ‘ಚೆನ್ನಾಗಿಲ್ಲ’ ಎಂದು ತಿರಸ್ಕರಿಸಲಾಗಿತ್ತು. ಈಗ ಅಂದಾಜಿಗೆ ಸಾವಿರದೈನೂರು ಕೋಟಿಗೆ ಒಡೆಯನಾಗಿರುವ ಶಾರುಕ್ ಚಿಕ್ಕ ಧಾರಾವಾಹಿಗಳಲ್ಲಿ ನಟಿಸುತ್ತಲೇ ಪದಾರ್ಪಣೆ ಮಾಡಿದ್ದು. ಅವರೆಲ್ಲ ತಮ್ಮ ರಂಗದಲ್ಲೆದುರಾದ ಸೋಲಿಗೆ ಹೆದರಿ ‘ಅಯ್ಯೋ! ನನ್ನಿಂದಾಗುವುದಿಲ್ಲ’ ಎಂದು ನಿರ್ಧರಿಸಿದ್ದರೆ ಏನಾಗುತ್ತಿತ್ತು ಊಹಿಸಬಲ್ಲಿರಾ?

ದೇವರು ಬದ್ಕೆಂಬ ಖಾಲಿ ಹಾಳೆ ಕೊಟ್ಟು ಏನಾದರೂ ಬರೀರಿ ಎಂದರೆ ಚಿಕ್ಕಪುಟ್ಟದನ್ನು ಯಾಕೆ ಬರೆಯುವಿರಿ? ದೊಡ್ಡ ಕನಸುಗಳನ್ನೇ ಕಾಣಿರಿ ಎಂದವರು ಶಂಕರ್‌ನಾಗ್. ಬೆಳಿಗೆ ಏಳುತ್ತಿದ್ದಂತೆ ಉತ್ಸಾಹ ಮೂಡಬೇಕು. ಉಳಿದ ಪ್ರಾಣಿಗಳಂತೆ ಬರೀ ಹಸಿವು, ಕಾಮ ಮಾತ್ರ ನಮ್ಮ ಉದ್ದೇಶಗಳಲ್ಲ. ನಾಳಿನ ಸೊಗಸಾದ ಜೀವನದ ಕನಸು ಕಾಣಲು ರಾತ್ರಿಗಳಿವೆ. ಅದನ್ನು ಸಾಧಿಸಲು ಚಂದದ ಹಗಲುಗಳಿವೆ. ಸರಿಯಾಗಿ ನೋಡಿದಲ್ಲಿ ಆಕಾಶದಷ್ಟು ಅವಕಾಶವಿದೆ. ಸಾಧಿಸಬೇಕಾದ್ದನ್ನು ಪೂರ್ಣಗೊಳಿಸಲು ಬೇಕಾದ ಶ್ರದ್ಧೆ, ಅಂಕಿತಭಾವ, ಏಕಾಗ್ರತೆ ಎಲ್ಲವೂ ಬೇರೆಲ್ಲೋ ಇಲ್ಲದೇ ನಮ್ಮ ಮೆದುಳಲ್ಲೇ ಇವೆ.

ಬಹಳಷ್ಟು ಜನ ಆಲೋಚಿಸುತ್ತಾರೆ, ತಮ್ಮನ್ನು ಸರಿಯಾದ ಮಾರ್ಗದಲ್ಲಿ ಗೈಡ್ ಮಾಡುವ, ಸೋಲುಗಳಲ್ಲಿ ಧೈರ್ಯ ಹೇಳುವ, ತಮ್ಮ ಅನುಮಾನಗಳನ್ನು ಪರಿಹರಿಸುವ, ಜಗತ್ತಿಗೆ ಜಗತ್ತೇ ತಮ್ಮೆದುರಿಗೆ ತಿರುಗಿ ಬಿದ್ದರೂ ನಮ್ಮ ಜತೆಯಲ್ಲೇ ಇದ್ದು ಹುಮ್ಮಸ್ಸು ನೀಡುವ ಗೆಳೆಯ ಒಬ್ಬನಿದ್ದರೆ ಎಷ್ಟು ಚೆನ್ನ ಅಲ್ಲವಾ ಎಂದು. ನಿಜ ಅಂಥ ಸ್ನೇಹಿತನಿರಬೇಕು.

ಆದರೆ ಬೇರೊಬ್ಬ ವ್ಯಕ್ತಿಯಲ್ಲಲ್ಲ. ಅವನಲ್ಲೇ ಇರಬೇಕು!

ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅಂತ ಸ್ನೇಹಿತ ಸಿಕ್ಕರೆ ಅದೃಷ್ಟವೇ. ನಮ್ಮಲ್ಲೇ ಇದ್ದರೆ ಸೋತಾಗ ಹೆಗಲಿಗಾಗಿ ಹುಡುಕುವುದಿಲ್ಲ. ನಮ್ಮೊಳಗಿನ ಶಕ್ತಿಗೆ ಬೇರೆಯವರ ಮೇಲೆ ಆಧಾರ ಪಡಬೇಕಿಲ್ಲ.

ಅಂಥ ಸ್ನೇಹಿತ ನಮ್ಮಲ್ಲಿರಬೇಕಾದರೆ ‘ಅವನು’ ಎಲ್ಲ ತಿಳಿದವನಾಗಿರಬೇಕು. ಧೈರ್ಯದ ಮಾತುಗಳು, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಕ್ಷಮತೆ, ಮುನ್ನುಗ್ಗಿಸುವ ಛಾತಿ ಉಳ್ಳವನಾಗಿರಬೇಕಲ್ಲವೆ?

ಅಂತಹ ಸ್ನೇಹಿತನನ್ನು ಬೆಳೆಸಿಕೊಳ್ಳುಲೋಸುಗ ನಾವು ಓದುತ್ತಿರಬೇಕು. ತೆಗೆದುಕೊಳ್ಳುವ ಉಸಿರಿನಂತೆ ಜ್ಞಾನ ದಿನೇ ದಿನೇ ಮೆದುಳ ಜಗದೊಳಗೆ ಸೇರುತ್ತಿರಬೇಕು. ಎದುರಾಗುವ ಸೋಲುಗಳೆಲ್ಲ ಒಳಗಿಳಿಯುವಾಗ ‘ಅನುಭವ’ವಾಗಿ ಮಾರ್ಪಾಡಾಗಬೇಕು.

ಆಗ ಮನ ಮನದ ಒಳಗೂ ಮೂಡುವುದು ಬೆಳಕು. ಹೂದೋಟವಾಗುವುದು ದೇವರು ಕೊಟ್ಟ ಬಯಲು.

ಬೇರೆಯವರಿಗೂ ಸಹಾಯ ಮಾಡುವಷ್ಟು ಬೆಳಕು ನೀಡುವಷ್ಟು ಪ್ರಜ್ವಲಿಸುವುದು ಬದುಕು!

– ನವಿತಾ.ಎಸ್, ಸಾಗರ

ಈ ಸಂಜೆಯ ಬಾನಲ್ಲಿ ಇನ್ನೂ ಚುಕ್ಕಿಗಳು ಬಹಳ ಮೂಡಿಲ್ಲ. ಆದರೆ ಪ್ರೀತಿಯ ಚುಕ್ಕಿಗಳು ಅಲ್ಲಲ್ಲಿ ಜಗದ ಮನಸುಗಳಲ್ಲಿ ಮೂಡುತ್ತಿವೆ. ಜಗದ ಅಚ್ಚರಿಗೆ ಕಾರಣವೇ ಈ ಪ್ರೀತಿ. ಈ ಜಗತ್ತು ಒಂದಲ್ಲ ಒಂದು ದಿನ ನಿರ್ಮಲ ಪ್ರೇಮವನ್ನು ಪರಿಗಣಿಸಲಿದೆ. ಈ ಪ್ರೀತಿಯಲ್ಲಿ ಅದೆಂತಹ ಸೆಳೆತಗಳು, ಎಷ್ಟೋಂದು ನೋಟಗಳು! ಈ ಜಗದ ನಿಯಮಕ್ಕೆ ಮೂಲ ಕಾರಣವೇ ಪ್ರೀತಿ. ಪ್ರತಿ ಗಾಳಿಯ ಸ್ಪರ್ಶಕ್ಕೂ ಮರಗಳು ತೂಗುವುದಿಲ್ಲವೇ? ಪ್ರತಿ ಗುಟುಕಿಗೂ ಪಕ್ಷಿಗಳು ಹಪಹಪಿಸುವುದಿಲ್ಲವೇ? ಇದೆಲ್ಲವೂ ಪ್ರೀತಿಗಾಗಿ.

ಪ್ರಕೃತಿಯಲ್ಲೂ, ನಮ್ಮಲ್ಲೂ ಕೂಡ ಹಾಗೆಯೇ…
ಜಗದ ನಿಯಮದಲ್ಲಿ, ಒತ್ತಡದಲ್ಲಿ ಸಿಕ್ಕ ನಮ್ಮ ಪಾಡು

ವಿಷಣ್ಣತೆಯ ತಣ್ಣಗಿನ ಬದುಕಿನೊಳಗೆ ಕುದಿಯುವ ಮನಸ್ಸುಗಳಂತೆ. ಅಂತಹ ಮನಸ್ಸಿಗೆ ಮುದನೀಡುವ ಕಾಲವೇ ಈ ವಸಂತ.
ಅದಕ್ಕೇ ನಾನು ವಸಂತನನ್ನು ಕಾಯುತ್ತಿರುವುದು. ಮತ್ತೆ ನನ್ನಲ್ಲೂ ವಸಂತ ಬರುತ್ತಾನೆಂದರೆ ಸಾಕು, ಏನೋ ಸಂಭ್ರಮ… ವಸಂತನಿರದ ಮತ್ಯಾವ ಕಾಲವೂ ಕಾಲವೇ ಅಲ್ಲವೆನ್ನುವ ಹುಚ್ಚು ಭಾವ… ನಾನು ವಸಂತನಿಗಾಗಿ ಪ್ರತಿಕ್ಷಣವೂ ನಿರೀಕ್ಷಿಸುವ ಅಭಿಸಾರಿಕೆಯಾದೆ.

ಈ ವಸಂತ ಯಾವಾಗ ಬರುವನೋ… ಗೋತ್ತೇ ಇಲ್ಲ. ಸುಳಿವಿಲ್ಲದೇ ಬರುತ್ತಾನೆ. ನಿನ್ನೆವರೆಗೂ ತಣ್ಣನೆ ಆವರಿಸಿಕೊಂಡಿದ್ದ ಶಿಶಿರನ ಹಿಡಿತವನ್ನು ಮೆಲ್ಲನೆ ಸರಿಸಿ ಬೆಳಗಾಗುವಷ್ಟರಲ್ಲಿ ಬಂದಿದ್ದಾನೆ. ಮಧುರವಾಗಿ ಮೊಳಗಿದ ಕೋಗಿಲೆಯ ಧ್ವನಿ ಕೇಳಿಸಿದಾಗಲೇ ಗೊತ್ತಾಗಿದ್ದು ಅವನು ಬಂದಿದ್ದಾನೆಂದು. ಇಷ್ಟು ದಿನ ಎಲ್ಲಿಗೆ ಹೋಗಿದ್ದವೋ ಸುಳಿವೇ ಇಲ್ಲದ, ಹೆಸರೇ ತಿಳಿಯದೀ ಹಕ್ಕಿಗಳು, ಕೆಂಪನೆ ಹೊಳೆವ ರತ್ನಗಳಂತಹ ಹೂವನ್ನು ಅಲಂಕರಿಸಿಕೊಂಡಿದ್ದ ಗಿಡಗಳು, ಮಂಜಿನ ಜೋಲಿಯನ್ನು ಕಟ್ಟಿದ್ದವು. ಇದೆಲ್ಲ ಆ ಮಾಯಗಾರನ ಆಟವೇ ಸರಿ…

ಈ ಸುಗಂಧ… ಗಾಳಿಯಲ್ಲೆಲ್ಲಾ ಅದರದೇ ಘಮಲು… ಈ ಹೂವಿನ ಗಿಡದಲ್ಲಿ ಅದ್ಯಾವಾಗ ಇಷ್ಟೋಂದು ಬಣ್ಣದ ಹೂವುಗಳಿದ್ದವೋ, ಮೊಗ್ಗು ಬಿಟ್ಟಿದುದೇ ಜ್ಞಾಪಕವಿಲ್ಲ, ಈ ವಸಂತನ ಸ್ಪರ್ಶ ಮಾತ್ರಕ್ಕೆ ಅವುಗಳ ಮೈ ಪುಳಕಗೊಂಡು ಹೂವರಳಿ, ಅದು ದುಂಬಿಗೂ ತಿಳಿದು, ಇಲ್ಲಿ ಈಗ ಅದರದೇ ಝೇಂಕಾರ ಮೂಡಿದೆ, ಇದೇ ತಾನೇ ಪ್ರೀತಿ…?
ಈ ಪ್ರಕೃತಿಯಲ್ಲಿ ಇಂದು ಸಿಂಗಾರೋತ್ಸವ. ಈ ಪ್ರಕೃತಿಯ ಮನೆಯ ಮೂಲೆ ಮೂಲೆಯಲ್ಲೂ ತರತರದ ಬಣ್ಣ. ಈ ಹಸಿರು ಮಂಟಪ, ಚಿಗುರಿನ ತೋರಣ, ಹೂಗಳ ಸುಂದರ ರಂಗೋಲಿ, ಜೊತೆಗೆ ದುಂಬಿಯ ಮಂಗಳವಾದ್ಯ, ಹಕ್ಕಿಗಳ ತಾಳ, ಮಲ್ಲಿಗೆಯ ಸುಗಂಧ, ಮೈತುಂಬ ರೋಮಾಂಚನ.

ವಸಂತ ಬರುವುದು ಹೀಗೆಯೇ… ಅವನು ಸುಮ್ಮನೆ ಬರುವುದೇ ಇಲ್ಲ. ಇನ್ನೇನು ಎಲ್ಲವೂ ಮುಗಿಯಿತು ಎನ್ನುವಾಗ ಪ್ರತಿ ಜೀವಿಯಲ್ಲೂ ಹೊಸತನ ತರುತ್ತಾನೆ. ಹೊಸ ಹುರುಪು ತುಂಬುತ್ತಾನೆ. ವಸಂತ ಬಂದರು ಸಾಕು ನನ್ನ ಮನಸ್ಸಿನಲ್ಲಿರುವ ಎಲ್ಲಾ ಜಂಜಾಟಗಳನ್ನು ಮರೆತು ಕ್ಷಣಕಾಲವಾದರೂ ಅವನ ಮಧುರ ಸಾನಿಧ್ಯದಲ್ಲಿ ಸಾಂತ್ವನಗೊಳ್ಳುತ್ತೇನೆ. ಹಾಗಾಗಿ ವಸಂತನೇ ಬೇಗ ಬಾ…

ಮಬ್ಬು ಮುಗಿಲ ಹಿಂದೆ ಇದ್ದೇ ಇರುವ
ಸೂರ್ಯನಂತೆ ಈಗ ನನ್ನಲ್ಲಿ ಉಳಿದಿರುವುದೊಂದೇ
ಒಂದು… ಅದು ನಿರೀಕ್ಷೆ,
ಮತ್ತೆ ಮತ್ತೆ ಮತ್ತೊಮ್ಮೆ ಬಾ ವಸಂತ… 

– ಶ್ರೀಕಾಂತ್.ಎನ್.ಎಸ್, ಬೆಂಗಳೂರು

ನಮ್ಮ ನಡುವಿನ, ಈಗಿನ ಹೆಣ್ಣು ಮಕ್ಕಳ ನೆನೆದರೆ ಕಣ್ಣ ಮುಂದೆ ಬರುವುದು ಜೀನ್ಸು, ಹೈ ಹೀಲ್ಸು, ಬಳುಕುವ ನಡಿಗೆ. ಇದೆಲ್ಲದರ ಸಂಗಮವೇ, ಹುಡುಗರ ಹರಿದಿರೋ ಜೇಬು! ಒಬ್ಬ ಹುಡುಗಿ ಬಂದು ತನ್ನನ್ನು ಮಾತಾಡಿಸುತ್ತಿದ್ದಂತೆಯೇ ಹುಡುಗರಿಗೆ ಎಲ್ಲಿಲ್ಲದ ರೋಮಾಂಚನ, ಆನಂದ. ತಮ್ಮದೇ ಆದ ಲೋಕಕ್ಕೆ ಹೋಗಿಬಿಡುತ್ತಾರೆ. ಅದೇ ಗುಂಗಿನಲ್ಲಿ ಒಂದಿಷ್ಟು ಪ್ರೇಮಕಥೆಗಳು ಅವರ ಮನಸ್ಸಿನಲ್ಲಿ ಹಾದುಹೋಗುತ್ತವೆ. ಹೀಗೆ ಪ್ರೀತಿ ಅಪ್ಪಳಿಸಿದ ನಾವೆಯಾಗಿ ಅವರು ತಮ್ಮ ಸ್ವಂತಿಕೆಯನ್ನು ಮರೆಯುತ್ತಾ ಅವನತಿಯ ಹಾದಿಯನ್ನು ಹಿಡಿಯುತ್ತಾರೆ. ಇಷ್ಟೆಲ್ಲಾ ಪ್ರೀತಿ ತುಂಬಿದ ಹುಡುಗಾಟದ ಹುಡುಗರ ಮನಸ್ಸಿನ ಚೀತ್ಕಾರಕ್ಕೆ ವರವಾಗಿ ಸಿಗುವುದು, ಹುಡುಗಿಯಿಂದ ಪಾತಾಳಕ್ಕೆ ಹೆದ್ದಾರಿ, ಅವರಿವರಿಂದ ಛೀಮಾರಿ!

ಹುಡುಗಿ ಹುಡುಗನ ಹಿಂದೆ ಹೋದ್ರೆ,
ಅವಳು ಅವನ ಅತಿಥಿ,
ಹುಡುಗ ಹುಡುಗಿ ಹಿಂದೆ ಹೋದ್ರೆ
ಅವತ್ತೇ ಅವನ ತಿಥಿ.

sad

ಹೀಗೆ ತನ್ನವರ ಒಡಲಿಂದ, ಪ್ರೀತಿಯ ಕಡಲಿಗೆ ಜಾರಿ, ತನ್ನವರ ಮರೆತು ತನ್ನವಳಲ್ಲದ ಹುಡುಗಿಗೆ ತನ್ನದೆಲ್ಲವನ್ನೂ ನೀಡಿ, ಅವಳ ಪ್ರೀತಿಯ ಪಡೆಯಲು ತನ್ನ ಪ್ರಾಣದ ಎಡೆಯಿಟ್ಟು ಜೀವಮಾನವಿಡೀ ಕಾಯುತ್ತಾ ಕೂರುತ್ತಾನೆ. ನೈವೇದ್ಯವಾದರೂ ವರ ನೀಡದ ದೇವರ ಹಾಗೆ, ಇಷ್ಟೆಲ್ಲಾ ನೀಡಿದ ಹುಡುಗರಿಗೆ ಒಂದು ಹನಿ ಪ್ರೀತಿಯೂ ನೀಡದೆ, ಕ್ಯೂಸೆಕ್ಸ್ ಗಟ್ಟಲೆ ಕಣ್ಣೀರ ನೀಡಿ, ಅದರಲ್ಲೇ ಅವರನ್ನು ಮುಳುಗಿಸಿ, ತಮ್ಮ ಮನಸ್ಸಿಂದ ಹುಡುಗರನ್ನು ತೊಳೆದುಕೊಂಡು, ಅವರ ಕಣ್ಣೀರ ಜಲಪಾತಕ್ಕೆ ಒಂದು ಅಣೆ ಕಟ್ಟನ್ನು ಕಟ್ಟದೆ ಹೊರಟು ಹೋಗುತ್ತಾಳೆ. ಆದರೆ ಮುಳುಗಿರುವ ಹುಡುಗರು, ಏಳುವುದರಲ್ಲೇ ತಮ್ಮ ಅಂತ್ಯ ಕಾಣುತ್ತಾರೆ.

ಬಳಿ ಬಂದೆ ನೀನು ಕರೆಯದೆ,
ಆಮಂತ್ರಣ ನೀಡಲಿ ನಾನು ಯಾರಿಗೆ?
ದೂರಾದೆ ನೀನು ಹೇಳದೆ
ದೂರು ನೀಡಲಿ ನಾನು ಯಾರಿಗೆ?

ಪ್ರೀತಿಗೆ ಬೇಕಿರುವುದು ಎರಡು ನಿಷ್ಕಲ್ಮಶ, ಸಮಾನ ಭಾವನೆಗಳುಳ್ಳ ಮನಸ್ಸು. ಪ್ರೀತಿ ನೀಡುವ ಮನಸ್ಸಿಗೆ ಪ್ರತಿಯಾಗಿ ಪ್ರೀತಿ ದೊರಕದಿದ್ದರೆ ಅದು ಪ್ರೀತಿ ನೀಡಬೇಕಾದರೂ ಯಾರಿಗೆ, ಏತಕ್ಕೆ? ಹುಡುಗಿಯರ ಮನಸ್ಸು ಸೂಕ್ಷ್ಮ ಎನ್ನುತ್ತಾರೆ, ಆದರೆ ಕನ್ನಡಕ ಹಾಕಿ ಹುಡುಕಿದರೂ ಕಿಂಚಿತ್ತು ಪ್ರೀತಿಯ ಕುರುಹು ಸಿಗುವುದಿಲ್ಲ. ಸಿಕ್ಕರೆ, ಅದು ಕೇವಲ ತಮಗಾಗಿ ಮಡಿದವರ ಅಸ್ಥಿಪಂಜರ. ಅದರ ಮೇಲೆ ಹುಡುಗಿಯರ ನಿತ್ಯದ ಮೆರವಣಿಗೆ, ಉತ್ಸವ ಎಲ್ಲಾ.
ಮೈ ಡಿಯರ್ ಗಯ್ಸ್, ನಿಮ್ಮ ಪ್ರೀತಿಗೆ ಸ್ಪಂದಿಸಿ ನಿಮ್ಮ ಮನಸ್ಸಿನ ತುಡಿತವನ್ನು ಅರಿತು ಬರುವ ಹುಡುಗಿಯರು ಬೆಳದಿಂಗಳ ಹುಣ್ಣಿಮೆಯಂತೆ, ತುಂಬಾ ಅಪರೂಪ. ಆದರೆ ಅವಸರ ಪಡುವ ನೀವುಗಳು, ಅಮವಾಸ್ಯೆಯ ದಿನವೇ ಹುಡುಗಿಯ ಹಿಂದೆ ಹೋಗಿ, ನಿಮ್ಮ ಬದುಕನ್ನು ಮುಂದೆಂದೂ ಬೆಳಕು ಕಾಣದ ಕತ್ತಲಿಗೆ ದೂಡುತ್ತೀರ. ಈ ರೀತಿ ನಮ್ಮ ಉಜ್ವಲವಾದ ಬದುಕಿಗೆ ಕತ್ತಲಿನ ಕೂಪದ ದಾರಿ ತೋರುವ ಪ್ರೀತಿ ನಮಗೆ ಬೇಕೆ? ನಮ್ಮತನವ ಮಾರಿಕೊಂಡು, ನಮ್ಮ ಮನಸ್ಸಿಗೆ ಮಾರಿಯಾಗಿ ಕಾಡುವ ನಾರಿಯರು ಬೇಕೆ?

ಅಂಧಕಾರದ ದಾರಿ ಹಿಡಿಯುತ್ತಿರುವ ನಿಮ್ಮ ಮನಸ್ಸನ್ನು ಸರಿಯಾದ ದಾರಿಯೆಡೆಗೆ ಕರೆದೊಯ್ದು, ನಿಮ್ಮ ಬಾಳಿಗೆ ಒಂದು ರೂಪವ ಕೊಟ್ಟು ಹುಡುಗಿಯರ ಶಾಪ ತಟ್ಟದಂತೆ ಕಾಪಾಡಿಕೊಳ್ಳಿ.

ನಿಮ್ಮ ಬಾಳು ಮಿನುಗುವ ನಕ್ಷತ್ರವಾಗಲಿ, ಸದಾ ವಿಜಯದ ಪಾಂಚಜನ್ಯ ಮೊಳಗಲಿ, ನಿಮ್ಮ ಮನಸ್ಸನ್ನು, ನಿಮ್ಮ ವಯಸ್ಸಿಗೆ ಮಾರಿಕೊಳ್ಳದೆ, ಸಂತೋಷದ ಹಾದಿ ಹಿಡಿದು ಸಂತೃಪ್ತಿಯನ್ನು ಪಡೆಯಿರಿ.

– ಬಾಲು ಪ್ರಸಾದ್.ಆರ್, ಬೆಂಗಳೂರು 

ರವಿಬೆಳಗೆರೆಯವರ ಪ್ರಾರ್ಥನಾ ಶಾಲೆಯ ಯಾವುದಾದರೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕಳೆದೆರಡು ವರ್ಷಗಳಿಂದ ಅಂದುಕೊಳ್ಳೂತ್ತಿದ್ದೆ, ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಶಾಲೆಯ ಶಿಶಿರ ಸಂಭ್ರಮಕ್ಕೆ ತಪ್ಪದೇ ಹಾಜರಿದ್ದೆ. ಕಾರಣ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದವರು ಅಮರ ಯೋಧ ಸಂದೀಪ್ ಉನ್ನಿಕೃಷ್ಣನ್‌ರ ತಂದೆ ಉನ್ನಿಕೃಷ್ಣನ್ ಮತ್ತು ತಾಯಿ ಧನಲಕ್ಷ್ಮಿ. ಆ ಪುಣ್ಯವಂತರನ್ನು ನೋಡಿ, ಅವರ ಮಾತುಗಳನ್ನು ಆಲಿಸಿ ಧನ್ಯನಾಗಲು ಹೋಗಿದ್ದೆ.

“ಭಾವೋದ್ವೇಗಕ್ಕೆ ಒಳಗಾಗಬಾರದು ಅಂತ ನನ್ನ ಹೆಂಡತಿ ಮಾತು ತೊಗೊಂಡಿದ್ದಾಳೆ” – ಎಂದು ಮಾತು ಆರಂಭಿಸಿದ ಉನ್ನಿಕೃಷ್ಣನ್‌ರ ಧ್ವನಿ ಈಗಲೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ಹಾಗಾಗಿ ಅವರ ಧ್ವನಿಯಲ್ಲೇ ಅವರ ಮಾತನ್ನು ಬರೆಯುತ್ತೇನೆ-

“ಇವತ್ತು ನನ್ನ ಮಗ ಸಾಧನೆ ಮಾಡಿದ್ದಾನೆ ಅಂತ ನಾನು ಹೇಳಲ್ಲ. ಅವನ ಕರ್ತವ್ಯವನ್ನಷ್ಟೆ ಮಾಡಿದ್ದಾನೆ. (ಸಭಿಕರಿಂದ ಚಪ್ಪಾಳೆ) ದಯವಿಟ್ಟು clap ಮಾಡಬೇಡಿ. ಮಧ್ಯಮಧ್ಯ clap ಮಾಡೋದು ನನಗಾಗೋಲ್ಲ. ಕೊನೆಗೆ ಬೇಕಿದ್ರೆ ಮಾಡಿ. ನಾನು ಹುಟ್ಟಿದ್ದು ಕೇರಳದಲ್ಲಿ. ಬಹಳ ಬಡತನ. ಒಂದೇ ಹೊತ್ತು ಊಟ. ತಾಯಿ ಕಷ್ಟಪಟ್ಟು ದುಡಿದು ನನ್ನನ್ನು ಶಾಲೆಗೆ ಕಳಿಸುತ್ತಿದ್ದರು. ಶಾಲೆಗೆ ಕಟ್ಟಡ ಇರಲಿಲ್ಲ. ಯಾವುದೋ ಒಂದು ಮುರಿದ ಝೋಪಡಿಯಲ್ಲಿ ಪಾಠ ಮಾಡುತ್ತಿದ್ದರು. ಹತ್ತನೇ ತರಗತಿಯವರೆಗೂ ಅಲ್ಲೇ ಓದಿದೆ. ಮುಂದೆ ಓದಲು ಹಣ ಇರಲಿಲ್ಲ. ಆಗ ಯಾರೋ ಒಬ್ಬರು typing ಕಲಿತರೆ ಕೆಲಸ ಸಿಗುತ್ತೆ ಅಂತ ಹೇಳಿದರು. ಅದಕ್ಕೆ ಏನೋ ಮಾಡಿ typing ಕಲಿತೆ. ಒಂದು ಕಡೆ ಕೆಲಸ ಸಿಕ್ಕಿತು. ನಾಲ್ಕು ರೂಪಾಯಿ ಸಂಬಳ. ಓದು ಮುಂದುವರಿಸಿದೆ.

“ನಂತರ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದೆ. ರೈಲು ಇಳಿದವನಿಗೆ ಗೋಡೆ ಮೇಲೆ ಹಾಕಿದ್ದ ಜಾಹೀರಾತು ಕಾಣಿಸ್ತು. stenographer ಬೇಕಾಗಿದ್ದಾರೆ ಅಂತ ಹಾಕಿದ್ದರು. ಕೂಡಲೇ ಹೋಗಿ ಕೆಲಸ ಗಿಟ್ಟಿಸಿಕೊಂಡೆ. ಸ್ವಲ್ಪ ದಿನಗಳ ನಂತರ ಪತ್ರಿಕೆಯಲ್ಲಿ ಇಸ್ರೋ advertise ನೋಡಿದೆ. stenographer  ಹುದ್ದೆಗೆ call ಮಾಡಿದ್ರು. ಅರ್ಜಿ ಹಾಕಿದೆ. ೧೫ನೇ ಏಪ್ರಿಲ್ ೧೯೭೪ರಂದು ಕೆಲಸ ಸಿಕ್ಕಿತು. ತಿಂಗಳಿಗೆ ೫೩೦ರೂ. ಸಂಬಳ. deducations ಎಲ್ಲ ಹೋಗಿ ೩೫೦ರೂ. ಬರುತ್ತಿತ್ತು. glad_281108_unni1

“೩೧ನೇ ಆಗಸ್ಟ್ ೧೯೭೫ರಂದು ಲಕ್ಷ್ಮಿಯನ್ನು ಮದುವೆಯಾದೆ. ಮೊದಲ ಬಾರಿಗೆ single bedroom ಮನೆ ಮಾಡಿದೆ. ಒಂದು room, ಒಂದು hall ಅಷ್ಟೆ ಇತ್ತು. ಹಾಲ್‌ನ ಒಂದು ಬದಿಯಲ್ಲೇ ಅಡಿಗೆ ಮಾಡಿಕೊಳ್ಳೋಣವೆಂದು ಅಂದುಕೊಂಡೆವು. ನನ್ನ ಹತ್ತಿರ ಇದ್ದದ್ದು ಒಂದು ಚಾಪೆ, ಒಂದು ಬಕೆಟ್, ಮತ್ತೊಂದು ತಟ್ಟೆ. ಅದರ ಜೊತೆಗೆ ಇನ್ನೊಂದು ಚಾಪೆ, ಒಂದು ಜೊತೆ ತಟ್ಟೆ ಮತ್ತು ಲೋಟ ಮತ್ತು ೧೦ಕಿಲೋ ಅಕ್ಕಿ , ಇಷ್ಟನ್ನು ತೆಗೆದುಕೊಂಡು ಹೋಗಿ ಇಟ್ಟೆ. ಅವಳು ಗಂಜಿ ಮಾಡಿದಳು. ಇಬ್ಬರೂ ಕುಡಿದೆವು. ಇನ್ನುಳಿದ ಸಾಮಾನುಗಳನ್ನು ತರಲು ನನ್ಹತ್ತಿರ ಹಣ ಇರಲಿಲ್ಲ, ಮತ್ತು ಅದುವರೆಗೂ ನಾನು ಯಾವತ್ತೂ ಯಾರಲ್ಲಿಯೂ ಕೈಚಾಚಿದವನಲ್ಲ. ಆಗ ಲಕ್ಷ್ಮಿ ಅವಳ ಹತ್ತಿರ ಇದ್ದ ಹಣದಿಂದ ಮನೆಗೆ ಬೇಕಿದ್ದ ಸಾಮಾನುಗಳನ್ನು ತಂದಳು. ಮುಂದೆ ಸಂದೀಪ್ ಹುಟ್ಟಿದ. ಮಗುವಿನಲ್ಲೇ ಹುಷಾರು ತಪ್ಪಿತು . ಎದೆಹಾಲು ಕೊಟ್ಟರೆ ಸರಿಹೋಗುತ್ತೆ ಅಂತ ಡಾಕ್ಟರ್ ಹೇಳಿದ್ರು. ಆದ್ರೆ, ಎದೆಹಾಲು ಕೊಡುವ ಸ್ಥಿತಿಯಲ್ಲಿ ಲಕ್ಷ್ಮಿ ಇರಲಿಲ್ಲ. ಅಷ್ಟು weak ಆಗಿದ್ಲು. (ಗದ್ಗದಿತರಾದರು) ಆವಾಗ ಅವಳು ಹೇಳಿದ್ಲು, ’ರೀ, ನಮಗಿದೊಂದೇ ಮಗು ಸಾಕು. ಇವನನ್ನೇ ಚೆನ್ನಾಗಿ ಸಾಕೋಣ. ನಮ್ಮ ಕೈಲಿ ಆಗೋಂತ best foodನ ಕೊಡೋಣ ಮತ್ತು best educationನ ಕೋಡಬೇಕು’-ಅಂತ. ಅವತ್ತಿನಿಂದ ಅಗತ್ಯ ಬಿದ್ದಾಗ ಸಾಲ ಮಾಡಲು ಶುರು ಮಾಡ್ದೆ.

“ಇವತ್ತು ನನ್ನ ಮಗನ ಸಾಧನೆಗೆ ಎಲ್ಲರೂ ಹೊಗಳ್ತಾರೆ. ಆದರೆ ಸಂದೀಪ್‌ಗೋಸ್ಕರ ನಾನೇನನ್ನೂ ಮಾಡ್ಲಿಲ್ಲ. ಎಲ್ಲ ಅಲ್ಲಿ ಕೂತಿದ್ದಾಳಲ್ಲ, ಆ ತಾಯಿಯದು. ಸಂದೀಪ್ ಅವಳ ಮಗ. (ಒಂದು ಕ್ಷಣ ಮೌನ) Now you can clap.(ಚಪ್ಪಾಳೆಗಳು). ನಾನೇನಾದ್ರೂ ಮಾಡಿದ್ರೆ ಅದು ಒಂದೇಒಂದು. ಸಂದೀಪ್‌ನನ್ನು ಶಾಲೆಗೆ ಸೇರಿಸಲುapplicationಗಾಗಿ ರಾತ್ರಿಯೇ ಹೋಗಿದ್ದೆ. ಬೆಳಿಗ್ಗೆ ೬ಗಂಟೆಗೆ ಜನ ಬರಲು ಆರಂಭಿಸಿದ್ದರು. Queueನಲ್ಲಿ ನಾನೇ first. Applicationಗೆ ೨೮ರೂ. ನಂತರ ಶಾಲೆಗೆ ಸೇರಿಸುವಾಗಲೂ ಪುಸ್ತಕ ಬಟ್ಟೆಗಳಿಗೆ ಹಣ ಬೇಕಾದಾಗ, ಲಕ್ಷ್ಮಿ ತನ್ನ ಬಳೆಗಳನ್ನು ಕೊಟ್ಟು ಹಣ ತರಲು ಹೇಳಿದಳು. ಮೊದಲ ದಿನ, ಸಂದೀಪ್‌ನನ್ನು ಶಾಲೆಗೆ ಕರೆದೊಯ್ದೆವು. Classನಲ್ಲಿ ಕೂರಿಸಿ ಹೊರಗೆ ಬಂದೆವು. ಕಿಟಕಿ ಸಂದಿನಿಂದ ನೋಡಿದೆವು. ಎಲ್ಲ ಪುಟಾಣಿಗಳು ಅಳುತ್ತಿದ್ದಾರೆ, ಆದರೆ ಸಂದೀಪ್ ಅಳುತ್ತಿಲ್ಲ. ನಮಗೆ ಖುಷಿಯಾಯಿತು. ಅವತ್ತಿನಿಂದ ಸಂದೀಪ್ ತಿರುಗಿ ನೋಡಿದ್ದೇ ಇಲ್ಲ. ಯಾವತ್ತೂ ಒಂದೇಒಂದುhealth problemಅವನಿಗೆ ಬರ್ಲಿಲ್ಲ. sports, games, studies ಎಲ್ಲದ್ರಲ್ಲೂ ಮುಂದಿದ್ದ. ಹೈಸ್ಕೂಲಿನಲ್ಲಿದ್ದಾಗ House captainಆಗಿದ್ದ. Tenthನಲ್ಲಿ ೮೭% ತೆಗೆದುಕೊಂಡಿದ್ದ. ಇಂಗ್ಲೀಷ್‌ನಲ್ಲಿ ೯೮. ಯಾವತ್ತೂ ಒಂದೇಒಂದು complaint  ಇರಲಿಲ್ಲ. ಕೇವಲ appreciationಗೆ ಅಥವಾ progress report ತೆಗೆದುಕೊಳ್ಳೋದಕ್ಕೆ ಮಾತ್ರ ನಾವು ಶಾಲೆಗೆ ಹೋಗಬೇಕಿತ್ತು. ಪಿಯುಸಿ ಅದೇ ಶಾಲೆಯಲ್ಲಿ ಮಾಡ್ತೀನಿ ಅಂದ. ಅವನಿಗೆ seಚಿಣ ಸಿಕ್ಕಿತು. ಆದರೆ, ಅವನ ಸ್ನೇಹಿತನೊಬ್ಬನಿಗೆ ಸಿಗಲಿಲ್ಲ. ಆ ಹುಡುಗ ಕಡು ಬಡವರು. ’ನೀನು ಬಂದು ನನ್ನ ಸ್ನೇಹಿತನಿಗೆ seat ಕೊಡಲು ಕೇಳಬೇಕು’ ಅಂತ ಸಂದೀಪ್ ಹೇಳಿದ. ನಾನು ಹೋಗಿ ಕೇಳ್ದೆ. ಸ್ನೇಹಿತನಿಗೂ seat ಕೊಟ್ರು. ಆ ಹುಡುಗ ಇಲ್ಲೇ, ಈ ಊರಲ್ಲೇ ಇದ್ದಾನೆ. ಮೊನ್ನೆ ಸಂದೀಪ್‌ನ body ಬಂದಾಗ್ಲೂ ಇಲ್ಲೇ ಇದ್ದ. ಪಿಯುಸಿ ನಂತರ ಇಂಜಿನಿಯರಿಂಗ್ ಮಾಡಿಸ್ಬೇಕು ಅಂತ ನಾವು ಅಂದುಕೊಂಡಿದ್ವಿ. ಆದರೆ, ಅಷ್ಟೊತ್ತಿಗಾಗಲೇ ಸಂದೀಪ್ ಎನ್‌ಡಿಎ ಪರೀಕ್ಷೆ ಬರೆದು ೧೪ನೇ ರ‍್ಯಾಂಕ್ ತೆಗೆದುಕೊಂಡಿದ್ದ. Armyಗೆ ಸೇರ್ಬೇಕು ಅಂತ ಎಂಟನೇ classನಲ್ಲೇ ನಿರ್ಧರಿಸಿದ್ದನಂತೆ!! (ನನ್ನ ಮೈ ಝುಂ ಅಂತು). ನಾವೂ ಒಪ್ಪಿದೆವು. ಆದರೆ, ದೃಷ್ಟಿದೋಷ ಇದ್ದಿದ್ದರಿಂದ navy ಸಿಗಲಿಲ್ಲ. ನಂತರ cadet trainingಗೆ ಹೋದ. ಇಂಡಿಯನ್ ಮಿಲಿಟರಿ ಅಕಾಡೆಮಿ(IMA)ಗೆ select ಆದ. ದೇಶದಲ್ಲೇ ಅತಿ ಕಷ್ಟಕರವಾದ training  ಅದು. Remember, ೭೫% of selected are dropouts. ಅದರಲ್ಲೂ ಕೂಡ ನನ್ನ ಮಗ pass ಆಗಿದ್ದ. ಅವನು training ನಲ್ಲಿ ಇದ್ದಾಗ ನಾವೂ ಕೆಲವೊಮ್ಮೆ ಹೋಗಿದ್ವಿ. ಒಂದು ಬಾರಿ ಹೋಗಿದ್ದಾಗ ಹೀಗಾಯ್ತು. IMA Campusನಲ್ಲಿ ಒಂದು ಸಮಾಧಿಯಿದೆ. ಅದು ೧೯೭೧ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವಿಶೇಷ ಸಾಧನೆ ಮಾಡಿ ಅಮರನಾದ ಯೋಧನದ್ದು. ಆ ಸಮಾಧಿಯ ಮೇಲೆ ಒಂದು roof ಇದೆ. ಅದರ ಮೇಲೆ ಬರೆದಿದ್ದ ಒಂದಷ್ಟು ಹೆಸರುಗಳನ್ನು ತೋರಿಸಿ ಸಂದೀಪ್ ಹೇಳಿದ್ದ-’ಅಪ್ಪ, ಇವರೆಲ್ಲ ಇಲ್ಲೇ training  ಪಡೆದು army ಸೇರಿ ದೇಶಕ್ಕಾಗಿ ಪ್ರಾಣ ತೆತ್ತವರು. ನನ್ನ ಹೆಸರೂ ಇಲ್ಲಿ ಬರಬೇಕು ಅಂತ ನನಗಾಸೆ’. ಅವತ್ತು ನಾನದಕ್ಕೆ ಹಾಗೇ ನಕ್ಕು ಸುಮ್ಮನಾಗಿದ್ದೆ. ಇವತ್ತು ಅವನ ಹೆಸರನ್ನು ಅಲ್ಲಿ ಬರೆದಿದ್ದಾರೆ.(ಮೌನ)

ಅವನು training ನಲ್ಲಿ ಇದ್ದಾಗ ನಾವೂ ಕೆಲವೊಮ್ಮೆ ಹೋಗಿದ್ವಿ. ಒಂದು ಬಾರಿ ಹೋಗಿದ್ದಾಗ ಹೀಗಾಯ್ತು. IMA Campusನಲ್ಲಿ ಒಂದು ಸಮಾಧಿಯಿದೆ. ಅದು ೧೯೭೧ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವಿಶೇಷ ಸಾಧನೆ ಮಾಡಿ ಅಮರನಾದ ಯೋಧನದ್ದು. ಆ ಸಮಾಧಿಯ ಮೇಲೆ ಒಂದು roof ಇದೆ. ಅದರ ಮೇಲೆ ಬರೆದಿದ್ದ ಒಂದಷ್ಟು ಹೆಸರುಗಳನ್ನು ತೋರಿಸಿ ಸಂದೀಪ್ ಹೇಳಿದ್ದ-’ಅಪ್ಪ, ಇವರೆಲ್ಲ ಇಲ್ಲೇ training  ಪಡೆದು army ಸೇರಿ ದೇಶಕ್ಕಾಗಿ ಪ್ರಾಣ ತೆತ್ತವರು. ನನ್ನ ಹೆಸರೂ ಇಲ್ಲಿ ಬರಬೇಕು ಅಂತ ನನಗಾಸೆ’. ಅವತ್ತು ನಾನದಕ್ಕೆ ಹಾಗೇ ನಕ್ಕು ಸುಮ್ಮನಾಗಿದ್ದೆ. ಇವತ್ತು ಅವನ ಹೆಸರನ್ನು ಅಲ್ಲಿ ಬರೆದಿದ್ದಾರೆ.

“ಆನಂತರ ಎನ್‌ಎಸ್‌ಜಿಗೆ ಸೇರಿದ. Usually,  ಕಮಾಂಡೋಗಳು ತಾವು NSGಯಲ್ಲಿರೋದನ್ನು ತಮ್ಮ ಮನೆಯವರಿಗೂ ಹೇಳುವುದಿಲ್ಲ. ನಮಗೂ ಸುಮಾರು ದಿನಗಳ ನಂತರ ಅವನು NSGಯಲ್ಲಿರೋದು ಗೊತ್ತಾಯಿತು. ಅವನು ಮುಂಬೈ operationಗೆ ಹೋಗಿದ್ದಾನೆ ಅಂತ ಗೊತ್ತಿರಲಿಲ್ಲ. ಅವತ್ತು ಬೆಳಿಗ್ಗೆ ನಾನು ಎಂದಿನಂತೆ ವಾಕ್ ಹೋಗಿಬಂದು news ನೋಡ್ತಾ ಕುಳಿತಿದ್ದೆ. ಲಕ್ಷ್ಮಿ kitchen ನಲ್ಲಿ ಇದ್ದಳು. ಆಗ `ಮೇಜರ್ ಸಂದೀಪ್ ಉನ್ನಿಕೃಷ್ಣನ್ passed away’ ಅಂತ ಬಂತು. ಯಾವುದೋ ಒಂದು ಶಕ್ತಿ ನನ್ನ ದೇಹವನ್ನು ದೂಡಿ ಹೊರಗೆ ಹೋದಂತಾಯಿತು. (ಮೌನ) ನಂತರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದ್ವಿ. ನಂತರ body ಬಂತು. ಎಲ್ಲ ಕಾರ್ಯಗಳನ್ನು ಮಾಡಿದ್ವಿ.

“ನಂತರ ಸಂದೀಪ್‌ನ collegue  ಸಂಜಯ್ ಅಂತ, New Taj operationನಲ್ಲಿದ್ದ. ಸಂದೀ2008112950940401 ಪ್ Old Taj operationನಲ್ಲಿದ್ದ. ಸಂದೀಪ್ ಏನಾದ್ರೂ ತಪ್ಪು ಮಾಡಿದ್ನಾ, ಅದಕ್ಕೆ ಈ ರೀತಿ ಆಯ್ತಾ ಅಂತ ಅವನಲ್ಲಿ ಕೇಳಿದೆ. ಅವನು ಹೇಳಿದ-`Never sir, ಮತ್ತೊಬ್ಬ ಕಮಾಂಡೋವನ್ನ ಉಳೀಸೋದಕ್ಕೆ ಹೋಗಿ ಹೀಗಾಯ್ತು. Old Tajಗೆ ನಾಲ್ಕು RDX ಇಡಲಾಗಿತ್ತು. ಆದರೆ Detonaters ಇಲ್ಲದ ಕಾರಣ ಅವು explode ಆಗಲಿಲ್ಲ. ಸಂದೀಪ್ ಆ ಎಲ್ಲ RDXಗಳನ್ನ deactivate ಮಾಡಿದ್ದ’- ಅಂತ.

“ಸಂದೀಪ್‌ಗೆ ಯಾವುದೇ bad habits ಇರಲಿಲ್ಲ. ಅವನಿಗೆ ಅವನ ತರಹದವನೇ roommate ಬೇಕು ಅಂತ ಕೇಳಿದ್ದ. ಆದರೆ NSGಯಲ್ಲಿ ಆ ರೀತಿ ಮಾಡೋಕ್ಕಾಗೋಲ್ಲ. ಅವನು ಯಾಕೆ NDA exam ಬರೆದ ಅಂತ ಹೇಳಿದ್ದ. Because, NDA is the only instituition where there is no reservation. I hate reservations; I hate recommendations. ನಮ್ಮ ದೇಶ ಯಾಕೆ ಇನ್ನೂ ಮುಂದುವರಿದಿಲ್ಲ ಅಂತ minister ಕೇಳಿದ್ರಲ್ಲ, (ಸಚಿವೆ ಶೋಭಾ ಕರಂದ್ಲಾಜೆ)(ಕೋಪದಿಂದ) ಇದಕ್ಕಿಂತ ಬೇಕಾ. ಮೊನ್ನೆ ಸಿಲಿಂಡರ್ ತರೋದಿಕ್ಕೆ ಹೋಗಿದ್ದೆ. ಖಾಲಿ ಸಿಲಿಂಡರ್‌ನ ಕೆಳಗಿಟ್ಟು filled oneನ ನಾನೇ ಎತ್ತಿ ನನ್ನ vehicleಗೆ ಇಟ್ಟುಕೊಂಡಿದ್ದೀನಿ , ಆದರೂ ಸಿಲಿಂಡರ್‌ನವನು ಹತ್ತು ರೂಪಾಯಿ ಕೇಳ್ತಾನೆ, Bribery. ಸಂದೀಪ್‌ಗೆ ಬೆಂಗಳೂರಂದ್ರೆ ಇಷ್ಟ. ಇಲ್ಲಿ briibe ಕೊಡ್ದೆ ಏನೂ ಆಗಲ್ಲ, ಆದ್ರೂ ಯಾಕೆ ಈ ಊರನ್ನ ಇಷ್ಟ ಪಡ್ತೀಯಾ? ಅಂತ ಕೇಳಿದ್ದೆ. ’ಇಲ್ಲಿ atleast bribe  ಕೊಟ್ರಾದ್ರೂ ಕೆಲ್ಸ ಆಗುತ್ತೆ’ ಅಂತ ಹೇಳಿದ್ದ. (ಮೌನ)

“ದಾಳಿ ಆಗಿ ಇಷ್ಟು ದಿನಗಳಾಯ್ತು. ಏನ್ ಮಾಡ್ತಾ ಇದೆ ನಮ್ಮ ಸರ್ಕಾರ. ಭಯೋತ್ಪಾದನೆಯನ್ನು ಹತ್ತಿಕ್ಕಿ ಅಂತ Afghanistanಗೆ ಕೇಳ್ತಾ ಇದೆ, Bangladeshಗೆ ಕೇಳ್ತಾ ಇದೆ. I appreciate our Railway minister, Lalu Prasad. ಯಾವುದೇ scamನಲ್ಲಿ ಅವರಿರಬಹುದು.But, I appreciate his Courage. He said-’ಪತ್ಥರ್ ಸೆ ಮಾರೂಂಗಾ ಪಾಕಿಸ್ತಾನ್ ಕೋ, ಪತ್ಥರ್ ಸೆ’.  ಪ್ರತಿಯೊಬ್ಬ ಭಾರತೀಯನೂ ಪಾಕಿಸ್ತಾನಕ್ಕೆ ಒಂದೊಂದು ಕಲ್ಲು ಹೊಡೆದರೆ, ಪಾಕಿಸ್ತಾನ ಮುಚ್ಚಿಹೋಗುತ್ತೆ. ಅಂಥ ಪಾಕಿಸ್ತಾನದ ಎದುರು ಯುದ್ಧಕ್ಕೆ ಹೆದರಿ ಕೂತಿದ್ದಾರೆ.

“ಸಂದೀಪ್ ಬದುಕಿದ್ದಿದ್ದರೆ ಇನ್ನೊಂದಿಷ್ಟು ದೇಶಸೇವೆ ಮಾಡುತ್ತಾ ಇದ್ದ. ನನ್ನ ಮಗ ಹೋದ ಅಂತ ಬೇಸರ ಇಲ್ಲ. ಆದರೆ ಸಾಯಲಿಕ್ಕೇ ಅಂತ ಬಂದ ಕಳ್ಳರ ಕೈಯಲ್ಲಿ ಸತ್ತನಲ್ಲ ಅಂತ ಬೇಸರ. (ಭಾವಪರವಶರಾಗಿ) A GEM lost to the theives. Sandeep was a gem. He was a gem. ಇವತ್ತು ರವಿ ಬೆಳಗೆರೆಯವರು ಹೇಳ್ತಾರೆ, `ನನ್ನ ಮಗನನ್ನು ನಿಮ್ಮ ಮಗ ಅಂದುಕೊಳ್ಳಿ. ಅವನು ಇನ್ನು ಮುಂದೆ ನಿಮ್ಮ ಜೊತೆಯಲ್ಲೇ ಇದ್ದು ನಿಮ್ಮ ಸೇವೆ ಮಾಡ್ತಾನೆ’ ಅಂತ. ನೀವೂ ಎಲ್ಲಾ ಹಾಗೆ ಹೇಳ್ತೀರಾ. ನಿಮ್ಮ ಮಕ್ಕಳು ನಾನು ಹೇಳಿದ್ದನ್ನು ಮಾಡಬಹುದು; ನನ್ನನ್ನು ಗೌರವಿಸಬಹುದು, ಆದರೆ ನನ್ನನ್ನು ಬೈಯ್ಯೋಕಾಗತ್ತ? ಸಂದೀಪ್ ನನ್ನನ್ನ ಅರ್ಥ ಮಾಡ್ಕೊಂಡಿದ್ದ, ನನ್ನನ್ನ criticize ಮಾಡ್ತಾ ಇದ್ದ, ನನ್ನ ಜೊತೆ ಜಗಳ ಮಾಡ್ತಾ ಇದ್ದ. ಹಾಗೆ, ನೀವು ಮಾಡ್ತೀರಾ ಎಂದು ಒಂದೇ ಉಸಿರಲ್ಲಿ ಹೇಳಿ ಮಾತು ನಿಲ್ಲಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಾರ್ಥನಾ ನರ್ಸರಿಯ ಪುಟಾಣಿಗಳು ತಮ್ಮ ಸಹಜ ಮುಗ್ಧತೆಯಿಂದ ಪುಣ್ಯಕೋಟಿಯ ಕಥೆಯನ್ನು ತೆರೆದಿಟ್ಟರು. ಪುಣ್ಯಕೋಟಿ ಹುಲಿಗೆ ಆಹಾರವಾಗಲು ಹೊರಡುವಾಗ ಅದರ ಕಂದಮ್ಮ ’ಯಾರ ಮೊಲೆಯನು ಕುಡಿಯಲಿ, ಯಾರ ನೆರಳಿಗೆ ಹೋಗಲಿ, ಯಾರ ಆಸರೆಯಲಿ ನಾ ಬದುಕಲಿ’ ಎಂದು ರೋದಿಸುತ್ತಾ ಮತ್ತೆ ಮತ್ತೆ ತಾಯಿಯನ್ನು ಅಪ್ಪಿಕೊಳ್ಳುವ ದೃಶ್ಯ, ಅರಿವಿಲ್ಲದೆಯೇ ಕಣ್ಣಿನಲ್ಲಿ ನೀರು ತರಿಸಿತ್ತು; ಆ ಮಹಾಮಾತೆಯ ಕರುಳು ಇನ್ನೆಷ್ಟು ನೊಂದಿತೋ ಏನೋ!!!

ಒಂದು ಕಥೆ ನೆನಪಿಗೆ ಬರುತ್ತಿದೆ. ಒಬ್ಬ ವೃದ್ಧನಿರುತ್ತಾನೆ. ಅವನ ದೊಡ್ಡ ಮಗ ರೋಮ್‌ನ ಚಕ್ರವರ್ತಿ ಟಿಬೇರಿಯಸ್‌ನ ಆಸ್ಥಾನ ಕವಿಯಾಗಿರುತ್ತಾನೆ. ಪ್ರಖಾಂಡ ಪಾಂಡಿತ್ಯವುಳ್ಳ ಗ್ರಂಥಗಳನ್ನು ರಚಿಸಿರುತ್ತಾನೆ. ವೃದ್ಧನ major-sandeep-unnikrishnan ಮತ್ತೊಬ್ಬ ಮಗ ಸೈನ್ಯ ಸೇರಿ ದೂರದ ಊರಿನಲ್ಲಿರುತ್ತಾನೆ. ಒಮ್ಮೆ ವೃದ್ಧನ ಕನಸಿನಲ್ಲಿ ದೇವದೂತನೊಬ್ಬ ಬಂದು ಹೀಗೆನ್ನುತ್ತಾನೆ- ನಿನ್ನ ಮಗನೊಬ್ಬನ ಮಾತು ಶತಮಾನಗಳ ಕಾಲ ಜನಮಾನಸದಲ್ಲಿ ನೆನಪಿನಲ್ಲಿರುತ್ತದೆ. ವೃದ್ಧನಿಗೆ ಬದುಕು ಸಾರ್ಥಕ ಎನಿಸುತ್ತದೆ. ಮರುದಿನವೇ ಸಾವನ್ನಪ್ಪಿದ ವೃದ್ಧನಿಗೆ ಸ್ವರ್ಗದಲ್ಲಿ ಅದೇ ದೇವದೂತ ಎದುರಾಗುತ್ತಾನೆ. ವೃದ್ಧನ ಇಚ್ಛೆಯ ಮೇರೆಗೆ ಕಾಲವನ್ನು ನಾಲ್ಕು ಶತಮಾನ ಮುಂದಕ್ಕೆ ತಳ್ಳುತ್ತಾನೆ. ವೃದ್ಧನಿಗೆ ಆಶ್ಚರ್ಯ ಕಾದಿರುತ್ತದೆ. ಅವನ ಎರಡನೆಯ ಮಗನ ಮಾತು ಎಲ್ಲೆಡೆ ಪ್ರಚಲಿತದಲ್ಲಿರುತ್ತದೆ.  ಮಿಲಿಟರಿಯಲ್ಲಿದ್ದ ಆತನ ಸ್ನೇಹಿತನಿಗೆ ವಿಚಿತ್ರ ಖಾಯಿಲೆ ಅಂಟಿಕೊಳ್ಳುತ್ತದೆ. ಅದನ್ನು ಗುಣಪಡಿಸಬಲ್ಲವನು ಒಬ್ಬನೇ ವೈದ್ಯನೆಂದು ತಿಳಿದು, ಅವನ ಹುಡುಕಾಟದಲ್ಲಿ ವರ್ಷಗಟ್ಟಲೆ ಅಲೆಯುತ್ತಾನೆ. ನಂತರ ತಿಳಿಯುತ್ತದೆ, ಆ ವೈದ್ಯ ದೇವರ ಮಗನೆಂದು. ಆ ವೈದ್ಯನನ್ನು ಕಂಡು ಹೇಳುತ್ತಾನೆ- ’ನೀನು ನನ್ನ ಮನೆಗೆ ಬರಬೇಕೆಂದು ಬಯಸುವಷ್ಟು ದೊಡ್ಡವನು ನಾನಲ್ಲ. ಆದರೆ, ನನ್ನ ಸೇವಕನೊಡನೆ ಮಾತನಾಡಿ, ಅವನನ್ನು ಬದುಕಿಸು’- ಎಂದು. ಈ ಮಾತು ಹೇಗೆ ಶತಮಾನಗಳ ಕಾಲ ಬಾಳಿತೋ ಹಾಗೇ ಮೇಜರ್ ಸಂದೀಪ್‌ರ ಸಾಧನೆ ಕೂಡ ಸಾವಿರ ವರ್ಷ ಸ್ಥಿರವಾಗಿ ನಿಲ್ಲುತ್ತದೆ. ನಮ್ಮಂತ ಯುವಕರಿಗೆ ಅವರ ಕಣ್ಣುಗಳೇ ಸ್ಫೂರ್ತಿಯ ಸೆಲೆ. ಇಂದಿನ ಮಕ್ಕಳಲ್ಲಿ ತ್ಯಾಗ, ಶೌರ್ಯ, ದೇಶಪ್ರೇಮ ಮುಂತಾದ ಗುಣಗಳನ್ನು ಬಿತ್ತಲು ಬೇಕಾದ ಆದರ್ಶ, ಸಂದೀಪ್‌ರ ಸಾಧನೆ.

ಇಷ್ಟು ಹೇಳಿ ಈ ಲೇಖನ ಮುಗಿಯಬೇಕಿತ್ತು. ಆದರೆ ಈ ಲೇಖನ ಬರೆಯುವಾಗ ನನ್ನ ಅನುಭವಕ್ಕೆ ಬಂದ ಒಂದು ಸನ್ನಿವೇಶ; ಅದನ್ನು ನಿಮ್ಮೋಡನೆ ಹೇಳಿಕೊಳ್ಳಬೇಕೆಂದಿದ್ದೇನೆ. ಈ ಲೇಖನ ಬರೆಯಲು ನಾನು ಎರಡು ಹಾಳೆಗಳನ್ನು ತೆಗೆದುಕೊಂಡು ಕೂತೆ. ಆ ಎರಡೂ ಹಾಳೆಗಳ ಒಂದೊಂದು ಬದಿಗಳು ತುಂಬಿದ್ದವು. ಉಳಿದ ಬದಿಗಳಲ್ಲಿ ನಾನು ಲೇಖನ ಬರೆಯುತ್ತಾ ಹೋದೆ. ನಂತರ ಪಕ್ಕದಲ್ಲಿದ್ದ ಮೂರನೇ ಹಾಳೆ ಎಳೆದುಕೊಂಡಾಗ ಒಂದು ಕ್ಷಣ ಮೂಕವಿಸ್ಮಿತನಾದೆ ! ಆ ಹಾಳೆಗಳ ಒಂದು ಬದಿಗಳಲ್ಲಿ ಇದ್ದುದು ಸ್ವಾತಂತ್ರ್ಯ ಯೋಧ ಖುದೀರಾಮ್ ಬೋಸ್‌ರ ಜೀವನಗಾಥೆ! ಖುದೀರಾಮ್ ಬೋಸ್ ಕೂಡಾ ಬಾಲ್ಯದಿಂದಲೇ ಬ್ರಿಟೀಷರ ವಿರುದ್ಧ ಹೋರಾಡಿ, ೧೯ನೇ ವರ್ಷದಲ್ಲೇ ತನ್ನ ಉಸಿರನ್ನ ಅರ್ಪಿಸಿದ್ದರು. ಒಬ್ಬ ಹುಟ್ಟು ದೇಶಪ್ರೇಮಿಯ ಸಾಹಸಗಾಥೆಯ ಹಿಂದೆ ಮತ್ತೊಬ್ಬ ಅಮರ ಯೋಧನ ಕೀರ್ತಿಚರಿತೆ!!! ಅದೂ ನಾನು ಖುದೀರಾಮ್‌ರ ಲೇಖನ ಬರೆದು ಮೂರು ವರ್ಷಗಳೇ ಕಳೆದಿದ್ದವು!!! ಮೂರು ವರ್ಷಗಳಿಂದ ಈ ಕಾಗದ ಸಂದೀಪ್‌ರ ಹೆಸರಿಗಾಗಿ ಕಾಯುತ್ತಿತ್ತಾ!!? ಪ್ರತಿಯೊಂದು ವಸ್ತುವಿನಲ್ಲೂ ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ವಿಶ್ವಚೇತನವೊಂದು ಇರುತ್ತದೆ ಎಂಬ ತತ್ವಜ್ಞಾನಿಯ ಮಾತು ನೆನಪಾಯಿತು. Life attracts life ಎಂಬ ಮೂರು ಪದಗಳ ತಾತ್ಪರ್ಯದ ಅನ್ವೇಷಣೆಯಲ್ಲಿದ್ದ ನನಗೆ, ಅದೂ ತಿಳಿಯಿತು. ಸಾಮಾನ್ಯವಾಗಿ, ನಾನು ಇಂಥ ಘಟನೆಗಳನ್ನು coincedence ಎಂದು ಸ್ವೀಕರಿಸಿ, ಆ ಸನ್ನಿವೇಶವನ್ನು ಹೆಣೆದ `ಕಾಲದೇವ’ನೆಡೆಗೆ ಒಮ್ಮೆ ನಗು ಚೆಲ್ಲಿ ಸುಮ್ಮನಾಗುತ್ತೇನೆ. ಆದರೆ, ಇಂದೇಕೋ, ಈ ಘಟನೆಯನ್ನು ಒಂದು coincedence ಎಂದು ಮನಸ್ಸು ಒಪ್ಪುತ್ತಿಲ್ಲ; ನಗುವೂ ಬರುತ್ತಿಲ್ಲ.

He was all in his tears. A man who had demonstrated tremendous character in grilling times on court and conquered the world with a tennis racquet in hand was crying like a child who’s forcefully taken away from his mother. Yes it was Pete Samprass, the snapshots are still fresh in our memory when he sat in his chair after his last match and wept covering his face. “Good bye” is one of the hardest things to say I felt, that too for one last time is even harder. And now its Dada’s turn to say it to all his fans and supporters the same two words- good bye. 1559_photo.jpg

He could’ve done it two years ago when he was sacked from the Indian cricket team and when that ugly episode of the spat with Greg Chappel consumed his stature. To him controversies were nothing new but this one along with the horrible run of form he was in, it was shutters closed as for as his cricketing carrier was concerned. It seemed like Ganguly would be either a coach or a commentator the next time we would be seeing him. But then it was the adversity that got the better out of him. He was not the one to give up. Like a true champion he battled his way through all the odds and demonstrated one of the most staggering comebacks in the history of cricket. Ganguly who was once welcomed with short pitched stuff every time he went out to bat made his comeback in the fast and bouncy pitches of South Africa. And from then on to two years down the lane he never looked back for once. And now when he lines himself up to play his last test series against the Aussies, every single game he leaves us with the impression that he is not finished yet!

Many say he is not the most elegant of batsman, his not the soundest of techniques, he not very swift between the wickets and he is not very athletic fieldsman to meet the international standards. Yes of course, I know we all have a bad habit of comparing him with Sachin and Rahul for elegance and technique. But still Saurav was Saurav all the way. He holds a record that would make anyone proud. With just his hand eye co-ordination and pure talent defining his batting craft he has over 17000 runs in international cricket. Moreover he has played at the highest level for almost 16 years since his debut in 1992. He played the game in the hard way. That itself is a greatest tribute to any player. ps.jpg

The “Prince of Calcutta” has had his share of ups and downs in his career like everybody has. He was a man of aggression and met fire with fire. He has been the most successful Indian captain and most charismatic of all Indian captains. He was a captain with far-sightedness and it was he who brought Yuvraj, Kaif, Sehwag, Zaheer, H.Singh into Indian team. Whenever India toured down under the entire Australian media would be activated just because of him. He was the one who played mind games with the aussies that too in their soil. He was the one who took his shirt off and made those open chested celebrations in England . Dada has left a lasting impression on Indian cricket and he will be missed for these things in the future.

There are many questions to be answered as he announces his retirement. His exclusion from the Irani cup was really unfair given any justification. Yet he decided to walk out on his own terms. He couldn’t have asked for a better time than the ongoing series. Breaking the Aussie supremacy in world cricket in a very convincing manner would be the most satisfying thing in his carrier. And as I complete this article Saurav completed his century in second test at Mohali. What a way to say goodbye to the Aussies!

For a player who has spent his entire life pursuing his love in the heat of expectations both by the people and the self, to wake up in the morning and think all those are a thing of past is a real hard feeling, how big or small the player might be in terms of numbers and statistics. Sometimes this sporting world would be a cruel place. You retire at a age when you actually start to mature. The time here is so short and the space here is so less. Well thats life isn’t it? When you say goodbye…..

ಟ್ಯಾಗ್ ಗಳು: , ,

gandhi1.jpg 19.jpg

ಓಶೋ ರಜನೀಶ್ ಜಗತ್ತು ಕಂಡ ಅತ್ಯಂತ ವಿವಾದಾಸ್ಪದ ವ್ಯಕ್ತಿ. ಮಧ್ಯಪ್ರದೇಶದ ಜೈನ ಕುಟುಂಬವೊಂದರಲ್ಲಿ ಹುಟ್ಟಿದ ರಜನೀಶ್ ಬಾಲ್ಯದಿಂದಲೇ ಸ್ವತಂತ್ರ ಚಿಂತನೆಯೆಡೆಗೆ ಒಲವು ಹೊಂದಿದ್ದ. ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ತನಗೆ ಜ್ಞಾನೋದಯವಾಯಿತು ಎಂದು ಹೇಳಿಕೊಳ್ಳುವ ಈತ ಜಗತ್ತಿನ ಎಲ್ಲಾ ಧರ್ಮಗಳ ಬಗ್ಗೆ ಅತ್ಯಂತ ವಸ್ತುನಿಷ್ಠವಾದ, ಹಿಂದೆ ಯಾರೂ ಹೇಳಿರದಿದ್ದ ಸಂಗತಿಗಳನ್ನು ಹೇಳಿದ. ನಂಬಿಕೆಗಳನ್ನು ಬಿತ್ತುವ, ಆ ಮೂಲಕ ಸ್ವತಂತ್ರ ಚಿಂತನೆಯನ್ನು ನಾಶ ಮಾಡುವ ಎಲ್ಲಾ ವ್ಯವಸ್ಥೆಗಳನ್ನೂ ಖಂಡಿಸಿದ. ಮನುಷ್ಯ ತತ್‌ಕ್ಷಣಕ್ಕೆ ಮಾತ್ರ ಸ್ಪಂದಿಸಬೇಕು. ಯಾವ ಪೂರ್ವಾಗ್ರಹವಿಲ್ಲದೆ, ಭವಿಷ್ಯತ್ತಿನ ಬಗ್ಗೆ ಯೋಜನೆಯಿಲ್ಲದೆ ಈ ಕ್ಷಣದಲ್ಲಿ ಬದುಕಬೇಕು ಎಂದು ಹೇಳಿದ. ಜಗತ್ತಿನ ಯಾವ ವ್ಯಕ್ತಿಯನ್ನೂ, ನಂಬಿಕೆಗಳನ್ನೂ ಬಿಡದೆ ಜಾಲಾಡಿದವ ಈತ. ೧೯೯೦ರಂದು ಹೃದಯಾಘಾತದಿಂದ ನಿಧನನಾದ.

ಇಡೀ ಜಗತ್ತೇ ಮಹಾತ್ಮಾ ಗಾಂಧಿಯನ್ನು ಅಹಿಂಸಾ ಮಾರ್ಗದ ಅನ್ವೇಷಕ ಎಂದು ಕೊಂಡಾಡಿದರೆ ಈತ ಗಾಂಧಿಯನ್ನು ಕುಟಿಲ ರಾಜಕಾರಣಿ ಎಂದು ಕರೆದ. ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ, ಸತ್ಯಾಗ್ರಹವೆಲ್ಲವೂ ಕೇವಲ ರಾಜಕೀಯ ತಂತ್ರಗಳು ಎಂದು ವಾದಿಸಿದ. ಗಾಂಧೀಜಿಯ ಸರಳತೆ ಢೋಂಗಿಯದು ಎಂದು ಜರೆದ. ಅವರ ಆಧ್ಯಾತ್ಮ, ಶಿಸ್ತು, ಬ್ರಹ್ಮಚರ್ಯ, ದೇವರ ಕಲ್ಪನೆ ಎಲ್ಲವನ್ನೂ ಲೇವಡಿ ಮಾಡಿದ.

ನಿಜವಾದ ಚಿನ್ನವನ್ನು ಯಾವ ಒರಗೆ ಹಚ್ಚಿದರೂ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತದೆಯೇ ಹೊರತು ಕಳೆಗುಂದುವುದಿಲ್ಲ. ಹೀಗಾಗಿ ಗಾಂಧಿಜಯಂತಿಯನ್ನು ಆಚರಿಸಿರುವ ಈ ತಿಂಗಳಿನಲ್ಲಿ ಓಶೋ ರಜನೀಶ್ ಗಾಂಧಿಯ ಬಗ್ಗೆ ಮಾತಾಡಿರುವ ಬಗ್ಗೆ ಸ್ವಲ್ಪ ತಿಳಿಯೋಣ. ಇದರಲ್ಲಿ ನಮಗೆ ಗಾಂಧೀಜಿಯ ವ್ಯಕ್ತಿತ್ವದ ಬಗ್ಗೆ, ಘನತೆಯ ಬಗ್ಗೆ ಹೊಸತೊಂದು ಆಯಾಮ ಸಿಕ್ಕಬಹುದು. ಯಾರನ್ನೂ ಕಣ್ಣು ಮುಚ್ಚಿ ಒಪ್ಪಬಾರದು ಎಂಬ ಎಚ್ಚರಿಕೆಯಿದ್ದರೆ ನಮ್ಮ ಪ್ರಯತ್ನ ಹೆಚ್ಚು ಪ್ರಯೋಜನಕಾರಿಯಾಗಬಲ್ಲದು.

***

… ನನ್ನ ಪ್ರಕಾರ ಮಹಾತ್ಮ ಗಾಂಧಿ ಒಬ್ಬ ಕಪಟ ರಾಜಕಾರಣಿ. ಅಹಿಂಸೆಯನ್ನು ಅಳವಡಿಸಿಕೊಳ್ಳುವ ಮೂಲಕ ಆತ ಎಷ್ಟೋ ಸಂಗತಿಗಳನ್ನು ತನಗೆ ಹಿತವಾಗುವಂತೆ ನಿರ್ವಹಿಸಿದ. ಎಲ್ಲಾ ಜೈನರು ಆತನ ಅನುಯಾಯಿಗಳಾದರು. ತಾವು ನಂಬಿದ ಅಂಹಿಸೆಯ ತತ್ವವನ್ನು ಬೆಂಬಲಿಸುವ ಒಬ್ಬ ವ್ಯಕ್ತಿಯನ್ನು ಅವರು ಆತನಲ್ಲಿ ಕಂಡಿದ್ದರು. ಗಾಂಧಿ ಜೈನನಾಗಿರಲಿಲ್ಲ. ಆತ ಕೇವಲ ಶೇ ೯ರಷ್ಟು ಜೈನನಾಗಿದ್ದ. ನಾನು ಗಾಂಧಿಯನ್ನು ಹೀಗೆ ವರ್ಣಿಸಲು ಇಚ್ಚಿಸುತ್ತೇನೆ: ಆತ ಹುಟ್ಟಿನಿಂದ ಹಿಂದು ಆದರೆ ಆತ ಕೇವಲ ಶೇ ೧ರಷ್ಟು ಹಿಂದು. ಆತ ಹುಟ್ಟಿದ್ದು ಜೈನರು ಹೆಚ್ಚು ಸಂಖ್ಯೆಯಲ್ಲಿದ್ದ ಗುಜರಾತಿನಲ್ಲಿ ಹೀಗಾಗಿ ಆತ ಶೇ ೯ರಷ್ಟು ಜೈನ. ಉಳಿದ ಶೇ ೯೦ರಷ್ಟು ಆತ ಕ್ರಿಶ್ಚಿಯನ್ ಆಗಿದ್ದ. ಮೂರು ಬಾರಿ ಆತ ಕ್ರೈಸ್ತನಾಗಿ ಮತಾಂತರವಾಗುವ ಹಂತದಲ್ಲಿದ್ದ.
ಅಹಿಂಸೆಯ ಮೂಲಕ ಆತ ಜೈನರ ಬೆಂಬಲ ಪಡೆದ, ಹಿಂಸೆಯ ಅಭ್ಯಾಸವಿಲ್ಲದ ಮೇಲ್ವರ್ಗದ ಹಿಂದುಗಳ ಬೆಂಬಲವೂ ಗಾಂಧಿಗೆ ಸಿಕ್ಕಿತು. ಕ್ರಿಸ್ತ ಪ್ರತಿಪಾದಿಸಿದ ಅಹಿಂಸೆ ಹಾಗೂ ಶಾಂತಿಯ ಬಗ್ಗೆ ಮಾತಾಡಿದ್ದಕ್ಕಾಗಿ ಕ್ರಿಶ್ಚಿಯನ್ ಮಿಶಿನರಿಗಳನ್ನು ಪ್ರಭಾವಿಸುವಲ್ಲಿ ಆತ ಯಶಸ್ವಿಯಾದ. ಇವೆಲ್ಲವಕ್ಕಿಂತಲೂ ಮುಖ್ಯವಾದ ಸಂಗತಿಯೊಂದಿದೆ. ಭಾರತ ಎರಡು ಸಾವಿರ ವರ್ಷಗಳಿಂದ ಒಂದು ಗುಲಾಮ ರಾಷ್ಟ್ರವಾಗಿತ್ತು. ಸ್ವಾತಂತ್ರ್ಯ ಎಂದರೇನು ಎಂಬುದನ್ನೇ ಅದು ಮರೆತುಹೋಗಿತ್ತು. ಈಗಲೂ ಈ ದೇಶ ಸ್ವತಂತ್ರವಾಗಿಲ್ಲ, ಇದರ ಮನಸ್ಸು ಇನ್ನೂ ಗುಲಾಮಗಿರಿಯಲ್ಲೇ ಉಳಿದಿದೆ…

ಭಾರತೀಯರು ಹೋರಾಡಲು ಭಯ ಪಡುತ್ತಾರೆ. ಹಿಂದೆಯೂ ಅವರೆಂದೂ ಹೋರಾಡಿದವರಲ್ಲ. ಸಣ್ಣ ಗುಂಪೊಂದು ಇಡೀ ದೇಶವನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಸಾಧ್ಯವಿತ್ತು. ಈ ದೇಶದ ಯಾಜಮಾನ್ಯ ಒಂದು ಗುಂಪಿನಿಂದ ಮತ್ತೊಂದಕ್ಕೆ ವರ್ಗಾವಣೆಯಾಗುತ್ತಾ ಬಂದಿತೇ ವಿನಾ ಭಾರತ ಗುಲಾಮಗಿರಿಯಿಂದ ಹೊರಬರಲಿಲ್ಲ.
ಎರಡನೆಯದಾಗಿ, ಭಾರತೀಯರು ಹೋರಾಡುವುದಕ್ಕೆ ಸಿದ್ಧರಿಲ್ಲ ಹಾಗೂ ಹೋರಾಟಕ್ಕೆ ಅಗತ್ಯವಾದ ಶಸ್ತ್ರಾಸ್ತ್ರ ಭಾರತೀಯರಲ್ಲಿ ಇಲ್ಲ ಎಂಬುದನ್ನು ಬುದ್ಧಿವಂತ ಗಾಂಧಿ ಅರಿತಿದ್ದ.
ಮೂರನೆಯದಾಗಿ, ಬ್ರಿಟನ್ ವಿಶ್ವದ ಶಕ್ತಿಶಾಲಿ ಸಾಮ್ರಾಜ್ಯ ಎಂಬುದರ ಅರಿವು ಗಾಂಧಿಗಿತ್ತು. ಅವರೊಂದಿಗೆ ಶಸ್ತ್ರ ಸಜ್ಜಿತವಾಗಿ ಸೆಣಸಿ ಗೆಲ್ಲುವುದು ಅಸಾಧ್ಯದ ಮಾತಾಗಿತ್ತು. ಭಾರತೀಯರ ಬಳಿ ಶಸ್ತ್ರಾಸ್ತ್ರಗಳಿರಲಿಲ್ಲ, ಯುದ್ಧ ಪರಿಣಿತಿ ಪಡೆದ ಯೋಧರಿರಲಿಲ್ಲ, ಯುದ್ಧದ ಬಗ್ಗೆ ಏನೂ ತಿಳಿದಿರಲಿಲ್ಲ.

ಈ ಸಂದರ್ಭದಲ್ಲಿ ಅಹಿಂಸೆಯೆಂಬುದು ಗಾಂಧಿ ಬಳಸಿದ ಅತ್ಯಂತ ಯಶಸ್ವಿ ರಾಜಕೀಯ ತಂತ್ರಗಾರಿಕೆಯಾಗಿತ್ತು…
ಹೀಗಾಗಿ ಗಾಂಧೀಜಿಯ ಅಹಿಂಸೆ ಆಧ್ಯಾತ್ಮಿಕ ತತ್ವವಲ್ಲ. ಇದು ಅನೇಕ ತಥ್ಯಗಳಿಂದ ಸಾಬೀತೂ ಆಗಿದೆ. ‘ಭಾರತ ಸ್ವತಂತ್ರವಾದ ತಕ್ಷಣ ಸೈನ್ಯವನ್ನು ವಿಸರ್ಜಿಸಲಾಗುವುದು, ಶಸ್ತ್ರಾಸ್ತ್ರಗಳನ್ನೆಲ್ಲಾ ಸಮುದ್ರಕ್ಕೆ ಎಸೆಯಲಾಗುವುದು’ ಎಂದು ಗಾಂಧಿ ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಮಾಣ ಮಾಡಿದ್ದರು. ‘ನೀವು ಹೀಗೆ ಮಾಡಿದರೆ ಬೇರೆಯವರು ಆಕ್ರಮಣ ಮಾಡುತ್ತಾರೆ. ಆಗ ಏನು ಮಾಡುವಿರಿ?’ ಎಂದು ಕೇಳಿದಾಗ, “ನಾವು ಅವರನ್ನು ನಮ್ಮ ಅತಿಥಿಗಳೆಂದು ಭಾವಿಸಿ ನಮ್ಮ ದೇಶಕ್ಕೆ ಸ್ವಾಗತಿಸುತ್ತೇವೆ. ‘ನಾವು ಇಲ್ಲಿ ವಾಸವಿದ್ದೇವೆ, ನೀವೂ ನಮ್ಮ ಜೊತೆ ವಾಸಿಸಬಹುದು’ ಎಂದು ಅವರಿಗೆ ಹೇಳುತ್ತೇವೆ” ಎಂದಿದ್ದರು.

ಸ್ವಾತಂತ್ರ್ಯ ಬಂದ ನಂತರ ಇದೆಲ್ಲವೂ ಮರೆತುಹೋಯ್ತು. ಸೈನ್ಯವನ್ನು ವಿಸರ್ಜಿಸಲಿಲ್ಲ, ಶಸ್ತ್ರಾಸ್ತ್ರಗಳನ್ನು ಸಮುದ್ರಕ್ಕೆ ಎಸೆಯಲೂ ಇಲ್ಲ. ವಿಪರ್ಯಾಸವೆಂದರೆ ಸ್ವತಃ ಗಾಂಧಿಯೇ ಪಾಕಿಸ್ತಾನದ ಮೇಲಿನ ಮೊದಲ ಯುದ್ಧವನ್ನು ಆಶೀರ್ವದಿಸಿದ್ದರು. ಭಾರತೀಯ ವಾಯು ಸೇನೆಯ ಮೂರು ಯುದ್ಧ ವಿಮಾನಗಳು ಅವರ ಆಶೀರ್ವಾದ ಪಡೆಯಲು ಧಾವಿಸಿದ್ದವು. ಗಾಂಧೀಜಿ ತಮ್ಮ ಮನೆಯಿಂದ ಹೊರಬಂದು ವಿಮಾನಗಳನ್ನು ಹರಸಿದ್ದರು. ತನ್ನ ಬದುಕಿಡೀ ಮಾತಾಡಿದ ಅಹಿಂಸೆಯನ್ನು ಆತ ಸಂಪೂರ್ಣವಾಗಿ ಮರೆತಿದ್ದ…

***

ಹಿಂದೂ ಮುಸ್ಲೀಮರು ಬೇರೆಯಲ್ಲ. ಇಬ್ಬರೂ ಒಂದೇ, ಇಬ್ಬರ ನಡುವೆ ವ್ಯತ್ಯಾಸವಿಲ್ಲ ಎಂಬ ಗಾಂಧಿಯ ಹಾಡು ಶುದ್ಧ ಸುಳ್ಳು ಎಂಬುದು ಸಾಬೀತಾಗಿದೆ. ಇದಕ್ಕೆ ಗಾಂಧಿಯ ಮಗ ಹರಿದಾಸ್‌ನ ಉದಾಹರಣೆ ಸಾಕು. ಆತ ಹುಟ್ಟಿನಿಂದಲೇ ಬಂಡಾಯಗಾರನಾಗಿದ್ದ. ಆತನನ್ನು ನಾನು ತುಂಬಾ ಇಷ್ಟ ಪಡುತ್ತೇನೆ, ತನ್ನ ತಂದೆಗಿಂತ ಆತ ಎಷ್ಟೋ ಮೇಲು.
ಹರಿದಾಸ್ ಶಾಲೆಗೆ ಹೋಗಬಯಸಿದ್ದ. ಆದರೆ ಗಾಂಧಿ ಆತನಿಗೆ ಅನುಮತಿ ಕೊಡಲಿಲ್ಲ. ಶಾಲೆಯ ಶಿಕ್ಷಣ ಜನರನ್ನು ಕಲುಷಿತಗೊಳಿಸುತ್ತದೆ ಎಂಬುದು ಗಾಂಧಿಯ ನಂಬಿಕೆಯಾಗಿತ್ತು. ಹೀಗಾಗಿ ತನ್ನ ಮಕ್ಕಳಿಗೆ ಶಾಲೆಯ ಶಿಕ್ಷಣ ಬೇಡ ಎಂಬುದು ಆತನ ನಿಲುವಾಗಿತ್ತು. ತನ್ನ ಮಕ್ಕಳು ಧಾರ್ಮಿಕ ಗ್ರಂಥಗಳನ್ನು ಓದಲು ಶಕ್ಯವಾಗುವಂತೆ ತಾನೇ ಅವರಿಗೆ ಬೋಧಿಸುತ್ತೇನೆ ಎಂದು ಗಾಂಧಿ ಹೇಳುತ್ತಿದ್ದ. ಆದರೆ ಹರಿದಾಸ್ ಹಠಮಾರಿಯಾಗಿದ್ದ. ತನ್ನ ಓರಗೆಯ ಹುಡುಗರು ಕಲಿಯುವುದನ್ನು ತಾನೂ ಕಲಿಯಬೇಕು ಎಂದು ಹಠಹಿಡಿದಿದ್ದ. ‘ಒಂದು ವೇಳೆ ನೀನು ಶಾಲೆಗೆ ಹೋದರೆ ನನ್ನ ಮನೆಯಲ್ಲಿ ನಿನಗೆ ಸ್ಥಾನವಿಲ್ಲ’ ಎಂದು ಗಾಂಧಿ ಬೆದರಿಕೆ ಹಾಕಿದ.

ಅಹಿಂಸಾತ್ಮಕ ವ್ಯಕ್ತಿಯ ವರ್ತನೆ ಹೀಗಿರುತ್ತದೆ ಎಂದು ನಿಮಗನ್ನಿಸುತ್ತದೆಯೇ, ಅದರಲ್ಲೂ ಅಬೋಧನಾದ ತನ್ನ ಮಗನ ಬಗೆಗೆ? ಆತನ ಬೇಡಿಕೆಯೇನು ಅಪರಾಧವಾಗಿರಲಿಲ್ಲ. ತಾನು ವೇಶ್ಯೆಯ ಬಳಿಗೆ ಹೋಗಬೇಕು ಎಂದೇನು ಆತ ಕೇಳಿರಲಿಲ್ಲ. ತಾನು ಶಾಲೆಗೆ ಹೋಗಬೇಕು ಹಾಗೂ ಉಳಿದೆಲ್ಲಾ ಹುಡುಗರ ಹಾಗೆ ಕಲಿಯಬೇಕು ಎಂಬುದಷ್ಟೇ ಆತನ ಬೇಡಿಕೆಯಾಗಿತ್ತು. ಹರಿದಾಸನ ವಾದ ಸರಿಯಾಗಿತ್ತು. ಆತ ಹೇಳಿದ, “ನೀವೂ ಶಾಲೆಯ ಶಿಕ್ಷಣವನ್ನು ಪಡೆದಿದ್ದೀರಿ ಆದರೆ ಕಲುಷಿತಗೊಂಡಿಲ್ಲ. ಹೀಗಿರುವಾಗ ನಿಮಗೆ ಭಯ ಏಕೆ? ನಾನು ನಿಮ್ಮ ಮಗ. ನೀವು ಪಾಶ್ಚಾತ್ಯ ಶಿಕ್ಷಣ ಪಡೆಯಬಹುದಾದರೆ, ಬ್ಯಾರಿಸ್ಟರ್ ಪದವಿಯನ್ನು ಪಡೆಯಬಹುದಾದರೆ ನಾನೇಕೆ ಪಡೆಯಕೂಡದು? ನಿಮಗೇಕೆ ಇಷ್ಟು ಅಪನಂಬಿಕೆ?”

ಗಾಂಧಿ ಹೇಳಿದರು, “ನನ್ನ ಕೊನೆಯ ಮಾತನ್ನು ನಾನು ಹೇಳಿದ್ದೇನೆ. ನನ್ನ ಜೊತೆ ಈ ಮನೆಯಲ್ಲಿ ಇರಬೇಕೆಂದರೆ ಶಾಲೆಗೆ ಹೋಗಕೂಡದು. ಒಂದು ವೇಳೆ ಶಾಲೆಗೆ ಹೋಗಬೇಕೆಂಬುದೇ ನಿನ್ನ ನಿರ್ಧಾರವಾದರೆ ಈ ಮನೆಯಲ್ಲಿ ನಿನಗೆ ಜಾಗವಿಲ್ಲ.”

ಆ ಹುಡುಗ ನನಗೆ ಇಷ್ಟವಾಗುತ್ತಾನೆ. ಆತ ಮನೆಯನ್ನು ಬಿಡಲು ನಿರ್ಧರಿಸುತ್ತಾನೆ. ತಂದೆಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಬೇಡುತ್ತಾನೆ. ಗಾಂಧಿ ಆಶಿರ್ವಾದ ನೀಡಲು ಅಶಕ್ತರಾಗಿರುತ್ತಾರೆ.

ನನಗೆ ಗಾಂಧಿಯ ವರ್ತನೆಯಲ್ಲಿ ಅಹಿಂಸೆಯಾಗಲೀ, ಪ್ರೀತಿಯಾಗಲೀ ಕಾಣುವುದಿಲ್ಲ. ಇಂಥ ಸಣ್ಣ ಸಣ್ಣ ಘಟನೆಗಳಲ್ಲಿ ನೀವು ನಿಜವಾದ ಮನುಷ್ಯನನ್ನು ಕಾಣಲು ಸಾಧ್ಯವೇ ಹೊರತು ಭಾಷಣಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಅಲ್ಲ.

ಮನೆ ತೊರೆದ ಹರಿದಾಸ ತನ್ನ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡು ಶಾಲೆಗೆ ಹೋಗುತ್ತಾನೆ. ಎಷ್ಟೋ ವೇಳೆ ತನ್ನ ತಾಯಿಯನ್ನು ನೋಡುವುದಕ್ಕೆ ಪ್ರಯತ್ನಿಸಿ ಮನೆಗೆ ಹೋಗುತ್ತಾನೆ ಆದರೆ ಅವನಿಗೆ ಆಕೆಯನ್ನು ನೋಡಲಾಗುವುದಿಲ್ಲ. ಆತ ಪದವಿಯನ್ನು ಪಡೆದ ನಂತರ ಗಾಂಧಿ ಹಿಂದೂ ಮುಸ್ಲಿಂ ಐಕ್ಯತೆಯ ಬಗ್ಗೆ ಎಷ್ಟು ಸತ್ಯ ನಿಷ್ಠರಾಗಿದ್ದಾರೆ ಎಂದು ಪರೀಕ್ಷಿಸಲು ಮಹಮ್ಮದೀಯನಾಗುತ್ತಾನೆ. ಆತ ನಿಜಕ್ಕೂ ವರ್ಣರಂಜಿತ ವ್ಯಕ್ತಿತ್ವದವನು.

ಆತ ಮಹಮ್ಮದೀಯನಾದ ನಂತರ ‘ಹರಿದಾಸ’ ಎಂಬ ಅರ್ಥವನ್ನೇ ಕೊಡುವ ಅರೇಬಿಕ್ ಹೆಸರನ್ನು ಇಟ್ಟುಕೊಳ್ಳುತ್ತಾನೆ. ಅಬ್ದ್ ಎಂದರೆ ಅರೇಬಿಕ್ ಭಾಷೆಯಲ್ಲಿ ದೇವರು. ಅಬ್ದುಲ್ಲಾ ಎಂದರೆ ದೇವರ ಸೇವಕ. ಹೀಗೆ ಹರಿದಾಸ್ ಗಾಂಧಿ ಅಬ್ದುಲ್ಲಾ ಗಾಂಧಿಯಾಗುತ್ತಾನೆ.

ಈ ಸಂಗತಿಯನ್ನು ತಿಳಿದ ಗಾಂಧಿ ತೀವ್ರವಾದ ಆಘಾತಕ್ಕೊಳಗಾಗುತ್ತಾರೆ. ಕುಪಿತರಾಗುತ್ತಾರೆ. ಕಸ್ತೂರ ಬಾ, “ಏಕಿಷ್ಟು ಕೋಪಗೊಳ್ಳುತ್ತೀರಿ? ಪ್ರತಿ ಮುಂಜಾವು, ಪ್ರತಿ ಸಾಯಂಕಾಲಗಳಲ್ಲಿ ನೀವು ಹಿಂದೂ ಮುಸಲ್ಮಾನರು ಇಬ್ಬರೂ ಒಂದೇ ಎಂದು ಹೇಳುತ್ತೀರಿ. ನೀವು ಹೇಳಿದ್ದನ್ನೇ ಆತ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿರಬಹುದು. ‘ಹಿಂದೂ ಮುಸಲ್ಮಾನರಿಬ್ಬರೂ ಒಂದೇ ಎನ್ನುವುದಾದರೆ, ಇಷ್ಟು ದಿನ ಹಿಂದೂ ಆಗಿ ಬಾಳಿದ್ದೇನೆ. ಇನ್ನು ಮುಂದೆ ಮುಸಲ್ಮಾನನಾಗಿ ಬದುಕಿ ನೋಡೋಣ’ ಎಂದು ತೀರ್ಮಾನಿಸಿರಬಹುದು” ಎನ್ನುತ್ತಾರೆ ನಗುತ್ತಾ.

ಗಾಂಧೀಜಿ ವ್ಯಗ್ರರಾಗಿ, “ಇದು ನಗುವಂತಹ ಸಂಗತಿಯಲ್ಲ. ಈ ಕ್ಷಣದಿಂದ ಆತನಿಗೆ ನನ್ನ ಆಸ್ತಿಯ ಮೇಲೆ ಯಾವ ಒಡೆತನವೂ ಇಲ್ಲ. ಆತ ನನ್ನ ಮಗನೇ ಅಲ್ಲ. ಇನ್ನೆಂದೂ ಆತನನ್ನು ನಾನು ನೋಡಲು ಇಚ್ಚಿಸುವುದಿಲ್ಲ.” ಎನ್ನುತ್ತಾರೆ. ಭಾರತದಲ್ಲಿ ಒಬ್ಬ ವ್ಯಕ್ತಿ ಸತ್ತಾಗ ಆತನ ಚಿತೆಗೆ ಬೆಂಕಿ ಕೊಡುವ ಕರ್ತವ್ಯ ಆ ವ್ಯಕ್ತಿಯ ಹಿರಿಯ ಮಗನದ್ದು. ಗಾಂಧೀಜಿ ತಮ್ಮ ವಿಲ್‌ನಲ್ಲಿ ಹೀಗೆ ಬರೆಸುತ್ತಾರೆ: “ಹರಿದಾಸ ನನ್ನ ಮಗನಲ್ಲ. ನಾನು ಸತ್ತ ನಂತರ ಆತ ನನ್ನ ಚಿತೆಗೆ ಬೆಂಕಿ ಇಡಬಾರದು ಎಂಬುದು ನನ್ನ ಇಚ್ಛೆ.”

ಎಂಥಾ ಕೋಪ! ಎಂಥಾ ಹಿಂಸೆ!

ಹರಿದಾಸನನ್ನು ನಾನು ವೈಯಕ್ತಿಕವಾಗಿ ಬಲ್ಲೆ. ಆತ ಹೇಳಿದ, “ನನ್ನ ತಂದೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವುದಕ್ಕಾಗಿಯೇ ನಾನು ಮಹಮ್ಮದೀಯನಾದದ್ದು. ನಾನು ಎಣಿಸಿದಂತೆಯೇ ಅವರು ವರ್ತಿಸಿದರು. ಅವರು ಹೇಳಿದ ಧರ್ಮಗಳ ಸಮಾನತೆ – ಹಿಂದು, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ ಧರ್ಮಗಳೆಲ್ಲಾ ಸಮಾನ- ಎಂಬುದು ಅರ್ಥಹೀನ. ಇದೆಲ್ಲ ಕೇವಲ ರಾಜಕೀಯ. ಅದನ್ನೇ ನಾನು ಸಾಬೀತು ಪಡಿಸಬೇಕಿತ್ತು, ಸಾಬೀತು ಪಡಿಸಿದೆ.”

‘ಮನುಷ್ಯನು ಬೇರೆಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠ…’ ಇದನ್ನು ಹೇಳಿದವರಾರು? ‘ಮಾನವ ಜನ್ಮ ಬಹು ದೊಡ್ಡದು…’ ಹೀಗಂತ ಹೇಳಿದ್ದು ಯಾರು? ಎಲ್ಲವನ್ನೂ ಹೇಳಿಕೊಂಡಿರುವುದು ಮನುಷ್ಯರಾದ ನಾವೇ! ಹೀಗೇ ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ತನ್ನನ್ನೇ ಸರ್ವಶ್ರೇಷ್ಠ, ಎಲ್ಲಕ್ಕೂ ತಾನೇ ಆದಿ ಅಂತ್ಯ ಹೀಗೆಲ್ಲಾ ಕಲ್ಪಿಸಿಕೊಳ್ಳುತ್ತಾನೆ. ಆದರೆ ಇವೆಲ್ಲವೂ ಸತ್ಯವೆಂಬುದನ್ನು ಹೇಳುವವರ್ಯಾರೂ ಇಲ್ಲ. ಅದರಂತೆಯೇ ಈತನ ಪಾರುಪತ್ಯ ಇಲ್ಲಿಗೇ ಮುಗಿಯದು. ಇತರರೆಲ್ಲರೂ ತನ್ನಂತೆಯೇ, ತಾನು ಹೇಳಿದಂತೆಯೇ ನಡೆಯಬೇಕೆಂದು ಬಯಸುತ್ತಾನೆ. ಆದರೆ…

ಯಾರೇ ಆಗಲಿ ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರುವುದು ಅಸಾಧ್ಯ. ಮನುಷ್ಯನ ಮನಸ್ಸಿನ ಬಲಹೀನತೆ ಯಾರನ್ನೂ ಹೊರತಾಗಿಸಿಲ್ಲ. ನಗು, ಅಳು, ಕೋಪ, ತಾಪ ಯಾವುದಾದರೊಂದು ಸಮಯದಲ್ಲಿ ಎಲ್ಲರನ್ನೂ ಬಾಧಿಸಿರುವಂತೆಯೇ ಹುಟ್ಟಿನಿಂದ ಸಾಯುವವರೆಗೆ ಬರೀ ಸುಖವನ್ನೇ ಉಂಡಿರುವವರ್ಯಾರೂ ಇಲ್ಲ… ಈ ಸುದೀರ್ಘ ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ನಗು-ಅಳುವಿನ ಗೆಳೆತನದಲ್ಲಿ ಮಿಂದು ಹೋಗಲೇ ಬೇಕು. ಅದರಲ್ಲೂ ಇಂದಿನ ಆಧುನಿಕ ಬದುಕಿನಲ್ಲಿ ಉದ್ವೇಗ, ಒತ್ತಡ ಯಾರನ್ನೂ ಬಿಟ್ಟಿಲ್ಲ. ಇಂಥವುಗಳೆಲ್ಲವುಗಳ ನಡುವೆ ಸಿಕ್ಕಿಹಾಕಿಕೊಂಡು ಹಸನ್ಮುಖಿಗಳಾಗಿದ್ದು, ಮನದ ಏರಿಳಿತಗಳನ್ನು ಹೊರಹಾಕದೆ ಸ್ಥಿತಪ್ರಜ್ಞರಾಗಿ ಇರುವಂತಹ ಪುನೀತರಿಗೆ ಹ್ಯಾಟ್ಸಾಫ್ ಹೇಳಲೇಬೇಕು.

ಇಂತಹ ಶಾಂತ ಯೋಗಿಗಳಿಗೂ ಸಹ ಕೆಲವೊಮ್ಮೆ ಮಂದಿಯ ಚುಚ್ಚು ಮಾತುಗಳು ಕಾಡಿಸದಿರವು. ಗೆಳೆಯರು, ಸಂಬಂಧಿಗಳ ಮಾತುಗಳೊಮ್ಮೆಯಾದರೂ ‘ಯೋಗಿ’ಯ ನಿದ್ರಾಭಂಗಕ್ಕೆ ಕಾರಣವಾಗಿದ್ದರೆ ಅದು ಅಚ್ಚರಿಯ ಸಂಗತಿಯಲ್ಲ. ಇದು ಅವರದೋ, ಇವರದೋ ಅಥವಾ ಮತ್ತೊಬ್ಬರದೋ ವಿಚಾರವಲ್ಲ, ಇದಕ್ಕೆ ನಾವೂ ಕೂಡಾ ಹೊರತಾಗಿಲ್ಲ…! ನಾವೂ ಕೂಡ ಎಷ್ಟೋ ಬಾರಿ ಹೀಗೆಲ್ಲಾ ಮಾಡಿ ತಿಳಿದೋ, ತಿಳಿಯದೆಯೋ ಇನ್ನೊಬ್ಬರ ಮನಸ್ಸಿಗೆ ಕಿರಿಕಿರಿ, ಬೇಸರ ಉಂಟು ಮಾಡಿರುತ್ತೇವೆ. ಕೋಪ ಕೆರಳಿಸಿರುತ್ತೇವೆ. ಅವರ ಸಹನೆ ಕೆಡಿಸಿರುತ್ತೇವೆ.

ಒಮ್ಮೆಮ್ಮೆ ತೀರಾ ಅನಿವಾರ್ಯವಾದ ಅಥವಾ ಅತೀ ಮುಖ್ಯವಾದ ಕೆಲಸವೊಂದರಲ್ಲಿ ತೊಡಗಿಕೊಂಡು ಅದರಲ್ಲೇ ಮುಳುಗಿ ಹೋಗಿರುತ್ತೇವೆ. ಅದೇ ಸಮಯದಲ್ಲಿ ಯಾರಾದರೂ ಲಗ್ಗೆಯಿಟ್ಟು ಕಾರ್ಯ ಭಂಗ ಮಾಡುತ್ತಾರೆ. ಆ ಕ್ಷಣದಲ್ಲಿ ಹುಟ್ಟುವ ಕೋಪ ಊಹಿಸಲಸಾಧ್ಯ. ಇನ್ನು ಕೆಲವಾರು ಸಂದರ್ಭಗಳಲ್ಲಿ ನಾವು ತುಂಬಾ ದುಃಖದಲ್ಲಿದ್ದಾಗ ಯಾರೋ ಬಂದು ಕ್ಷುಲ್ಲಕ ಸಂಗತಿಗಳನ್ನು ಮಾತನಾಡಿ, ಜೋಕ್ ಕಟ್ ಮಾಡಿ ನಗುತ್ತಾರೆ. ಮದದಿಂದ ಮನದ ಕದವ ತಟ್ಟಿ ಕೋಪಕ್ಕೆ ಕಾರಣವಾಗುತ್ತಾರೆ. ಇದನ್ನು ಓದಿದ ನಿಮಗೆ ಇವೆಲ್ಲಾ ಸಾಮಾನ್ಯವೆನಿಸಿದರೂ ಇಂತಹ ಸಂದರ್ಭಗಳಲ್ಲಿ ಆಗುವ ಕಿರಿಕಿರಿ, ಮನಸ್ಸಲ್ಲಿ ಮೂಡುವ ಕಹಿ ಸಾಮಾನ್ಯವಲ್ಲ. ಇದಕ್ಕೆಲ್ಲಾ ಕಾರಣ ಮತ್ತೊಬ್ಬರ ಮನಸ್ಸಿನ ಕೋಣೆಯನ್ನು ಪ್ರವೇಶಿಸುವ ಮುನ್ನ ಕದ ತಟ್ಟದೆ ಒಳಕ್ಕೆ ನುಗ್ಗುವುದು!!

ನೀವೂ ಕೂಡ ಸೂಕ್ಷ್ಮ  ಮನಸ್ಸಿನವರಾಗಿದ್ದಲ್ಲಿ ಖಂಡಿತಾ ಇವನ್ನೆಲ್ಲಾ ಅವಾಯ್ಡ್ ಮಾಡಿ ಸಭ್ಯತೆ ಮೆರೆದು, ಎಲ್ಲರ ಮೆಚ್ಚಿನ ವ್ಯಕ್ತಿಯಾಗಬಹುದು. ಇದಕ್ಕಾಗಿ ಅಂಥಾ ಶ್ರಮವನ್ನೇನೂ ಪಡಬೇಕಿಲ್ಲ. ಯಾವ ಬಗೆಯ ಸಾಹಸದ ಅಗತ್ಯವೂ ಇಲ್ಲ. ಎದುರಿಗಿರುವ ವ್ಯಕ್ತಿಯ ಮನಸ್ಥಿತಿ ಎಂಥದ್ದು ಎಂದು ಅರಿಯುವ ಆಸಕ್ತಿ, ತಾಳ್ಮೆ ನಿಮ್ಮಲ್ಲಿದ್ದರೆ ಅಷ್ಟೇ ಸಾಕು.

ಏನಾದರೂ ಮಾತಾಡುವ ಮುನ್ನ ಈ ಸಂಗತಿಗಳನ್ನು ಗಮನಿಸಿದರೆ ಒಳಿತು:

* Be careful about your thoughts when you are alone.
Be careful about your words when you are in crowd. ಎಂಬ ವಿವೇಕಾನಂದರ ಮಾತು ನೆನಪಲ್ಲಿರಲಿ.

* ಮಾತು ಮುತ್ತಿನ ಹಾರದಂತಿರಬೇಕು… ಎಂಬ ಬಸವಣ್ಣನವರ ನುಡಿ ಮನದಲ್ಲಿರಲಿ.

* ಇನ್ನೊಬ್ಬರ ಬಳಿ ಮಾತಾಡುವ ಮುನ್ನ ಅವರು ಯಾವ ಮೂಡಿನಲ್ಲಿರುವರೋ ಕೊಂಚ ಗಮನಿಸಿ, ದಿಢೀರಂತ ಎದುರು ಹೋಗಿ ಏನೂ ಹೇಳಬೇಡಿ.

* ಯಾವುದಾದರೂ ಮುಖ್ಯವಾದ ವಿಷಯವನ್ನು ಹೇಳುವುದಿದ್ದರೆ ಕೇಳುಗರ ಮನಸ್ಥಿತಿಯನ್ನು ಅರಿತು ಮಾತನಾಡಿದರೆ ಸಮಯ, ಪ್ರಯತ್ನ ಎಲ್ಲ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಬಲವಂತದ ಮಾಘಸ್ನಾನ ಯಾವ ಕಾರಣಕ್ಕೂ ಒಳ್ಳೆಯದಲ್ಲ. ಸುಮ್ಮನೆ ಅವರಿವರಿಂದ ‘ಅನಾಸಿನ್’, ‘ಹೆಡ್ಡೇಕ್ ಪಾರ್ಟಿ’ ಎಂದೆಲ್ಲಾ ಹೇಳಿಸಿಕೊಳ್ಳುವುದು ಬೇಡ.

* ನಿಮ್ಮೆದುರಿರುವವರು ಖುಶಿಯಲ್ಲಿದ್ದರೆ ಯಾವ ವಿಷಯವನ್ನಾದರೂ ಧೈರ್ಯವಾಗಿ ಮಾತಾಡಿ. ಆದರೆ ಅವರಿಗೆ ಸಂಬಧಿಸಿದಂತಹ ವಿಷಯಗಳನ್ನು ಮಾತಾಡಿ ಖುಶಿ ಹಾಳು ಮಾಡಬೇಡಿ.

ಯಾವ ಸಂದರ್ಭದಲ್ಲೇ ಆಗಲಿ ನಮ್ಮಿಂದ ಇನ್ನೊಬ್ಬರಿಗೆ ಖುಷಿ ನೀಡಲಾಗದಿದ್ದರೂ ದುಃಖವನ್ನಂತೂ ನೀಡಬಾರದು. ಇನ್ನೊಬ್ಬರ ಮನಸ್ಸಿನ ಆನಂದ ಕಿತ್ತುಕೊಳ್ಳುವ/ ಅವರಿಗೆ ಕಿರಿಕಿರಿಯನ್ನುಂಟು ಮಾಡುವ, ಮನಸ್ಸಿಗೆ ಘಾಸಿ ಮಾಡುವ ಅಧಿಕಾರ ಖಂಡಿತಾ ನಮಗಿಲ್ಲ. ಮನೆಗೆ ಹೇಗೆ ಅನಪೇಕ್ಷಿತ ಅತಿಥಿಯಾಗಬಾರದೋ, ಅಂತೆಯೇ ಮನಸ್ಸಿಗೂ ಕೂಡ ಬೇಕಾಬಿಟ್ಟಿಯಾಗಿ ಲಗ್ಗೆಯಿಡಬಾರದು… ಕರೆಯದೆ ಬರುವ ಅತಿಥಿಗೆ ನಾವೇ ಆಗಲಿ ಯಾವ ಬಗೆಯ ಸತ್ಕಾರ ಮಾಡಲು ಸಾಧ್ಯ, ನೀವೇ ಯೋಚಿಸಿ… ಅಂತೆಯೇ ಆಲಿಸಲು ಬಾರದ ಮನದ ಮುಂದೆ ಮುತ್ತಿನ ಧಾರೆಯು ಕಲ್ಲಿನ ಮೇಲೆ ಎರೆದ ಎಣ್ಣೆಯಂತಾಗುತ್ತದೆ. ದೃಢ ನಿಶ್ಚಯವನ್ನು ಮಾಡಿ ವ್ಯಕ್ತಿತ್ವ ಬದಲಿಸಿಕೊಂಡು ಉನ್ನತಿಯೆಡೆಗೆ ಸಾಗಿ… ಎಲ್ಲರ ಪ್ರೀತಿ ಪಾತ್ರರಾಗಿ…

– ಶ್ರೀಧರ್.ಜಿ.ಎಸ್
ಯು.ವಿ.ಸಿ.ಇ

– ರಂಜಿತ್ ಅಡಿಗ

ಪ್ರೀತಿಯೇ ಹಾಗೆ!

ಬದುಕಿನಲ್ಲಿ ಎಲ್ಲಾ ಸಾಧಿಸಿದವನಿಗೆ ತೃಪ್ತಿ ಸಿಗಬಹುದು. ‘ಅಬ್ಬ! ಎಲ್ಲ ಸಾಧಿಸಿದೆ… ಇನ್ನು ಸಾಕು’ ಅನ್ನಿಸಬಹುದು. ಆದರೆ ಪ್ರೀತಿಯ ವಿಷಯದಲ್ಲಿ ಎದೆಯ ಮಡಿಕೆಗೆ ಎಂದಿಗೂ ತೂತು. ಪ್ರೀತಿ ಎಷ್ಟು ಸಿಕ್ಕಿದರೂ ಅವರ ದಾಹ ನೀಗದು. ಜಗತ್ತನ್ನೇ ಗೆದ್ದೆ ಅಂದವನೂ ಪ್ರೀತಿಯ ವಿಷಯದಲ್ಲಿ ಮೊಣಕಾಲೂರಿ ಬೇಡಲೇಬೇಕು. ಹಿಡಿ ಪ್ರೀತಿಗಾಗಿ ಫಕೀರನಾಗಲೇ ಬೇಕು. ಯಾಕೆಂದರೆ…

ಪ್ರೀತಿಯೇ ಹಾಗೆ!

ಪ್ರೀತಿಯೆಂದರೆ ಎದೆಯ ಹಸಿವು. ಉಸಿರು, ನೀರು, ಆಹಾರ ದೇಹಕ್ಕೆಷ್ಟು ಅಗತ್ಯವೋ ಅಷ್ಟೇ ಅಗತ್ಯ ಹೃದಯದ ಹಸಿವು ನೀಗಲೂ ಇದೆ. ಪ್ರೀತಿ ಎಂಬುದು ಬೊಗಳೆ… ಇಂಪ್ರಾಕ್ಟಿಕಲ್ ಅಂದವನೂ ಒಂದು ಘಟ್ಟದಲ್ಲಿ ಪ್ರೀತಿಯ ಕೊರತೆಯಿಂದ ಹಪಹಪಿಸಲೇಬೇಕು. ಎದೆಯ ಏಕಾಂಗಿತನಕ್ಕೆ ಸಂಗಾತಿಯನ್ನು ಅರಸಲೇ ಬೇಕು.
ಪ್ರೀತಿಯೆಂದರೆ ಹೃದಯದ ಹಸಿವು, ಯಾಕೆಂದರೆ… ಹೃದಯವುಳ್ಳ ಪ್ರತಿ ಜೀವವೂ ಪ್ರೀತಿಗಾಗಿ ತುಡಿಯುತ್ತಿರುತ್ತದೆ. ಸ್ವಲ್ಪ ಪ್ರೀತಿಯ ತೋರಿದರೆ ನಾಯಿಗಳು ಕೊನೆವರೆಗೂ ನೆನಪಿರಿಸಿಕೊಳ್ಳುತ್ತವೆ. ದನಗಳು ತೋರುವ ಪ್ರೀತಿ ಅದನ್ನು ಸಾಕಿದವರಿಗೇ ಗೊತ್ತು. ಬೆಕ್ಕಿನಿಂದ ಸಿಕ್ಕುವ ಪ್ರೀತಿಯ ನೆಕ್ಕುವಿಕೆ ಅದನ್ನು ಪ್ರೀತಿಸಿದವರಿಗೆ ಮಾತ್ರ. ಬರಿಯ ಸಾಕು-ಪ್ರಾಣಿಗಳಷ್ಟೇ ಅಲ್ಲ. ಭಾವನೆಗಳು, ಪ್ರೀತಿಯ ಹಂಚುವಿಕೆ ಕ್ರೂರ ಪ್ರಾಣಿಗಳಲ್ಲೂ ಇರುತ್ತದೆ. ವ್ಯಾಘ್ರನ ಇನ್ನೊಂದು ಮುಖ ‘ಧರಣಿ ಮಂಡಲ ಮಧ್ಯದೊಳಗೆ’ ಕಥೆಯಲ್ಲೂ ಕಾಣಸಿಗುತ್ತದೆ.

ಪ್ರೀತಿ-ಪ್ರೇಮ ಯಾವಾಗಲೂ ಹಚ್ಚ ಹಸಿರು. ಮಾನವ ಜನ್ಮ ಉಗಮವಾದಾಗಿನಿಂದಲೂ ಪ್ರತಿ ಮನಸ್ಸನ್ನು ಕಾಡಿದೆ. ಪ್ರತಿಯೊಬ್ಬರನ್ನೂ ಕ್ಷಣಕಾಲ ಚಲಿಸುವಂತೆ ಮಾಡಿದೆ. ಎಲ್ಲ ರೀತಿಯ ಕಥೆಗಳು ಮನುಷ್ಯನಿಗೆ ಬೋರ್ ಹೊಡೆಸಿದರೂ… ಪ್ರೀತಿ ಪ್ರೇಮ ಅಂದೊಡನೆ ಮನ ಅರಳುತ್ತದೆ. ಅದೇ ಕಥೆಯನ್ನು ಮತ್ತೆ ಮತ್ತೆ ಕೇಳುವಂತೆ ಅನುಭವಿಸುವಂತೆ ಮಾಡುವ ಶಕ್ತಿ ಪ್ರೇಮಕ್ಕಿದೆ. ಹೀಗಾಗಿ ಪ್ರೇಮದ ವಿಷಯ ಮಾತ್ರ ಸಾಹಿತ್ಯದಲ್ಲಿ, ಸಿನೆಮಾದಲ್ಲಿ ಅಜರಾಮರ.

ಕಲಿಗಾಲದಲ್ಲಿ ಎಲ್ಲದರಲ್ಲೂ ಕಲಬೆರಕೆ ಉಂಟಾಗುವಂತೆ ಪ್ರೀತಿಯಲ್ಲೂ ಆಗಿದೆ. ಪ್ರೇಮವೆಂಬುದು ಪೊಸೆಸಿವ್‌ನೆಸ್ ಆದಾಗ… ವಿಕೃತಿಯ ಹುಟ್ಟು. ತನಗೇ ಬೇಕೆಂಬ ಸ್ವಾರ್ಥ. ಹೀಗಾಗಿ ಪ್ರೇಮ ಎಂಬ ಪವಿತ್ರ ಪದದ ಮೇಲೆ ಮನುಷ್ಯನಿಗೆ ಹೇಕರಿಕೆ ಉಂಟಾಗುತ್ತಿದೆ. ಅನ್ ಕಂಡೀಶನಲ್ ಆಗಿ ಪ್ರೇಮಿಸುವ, ಪ್ರೇಮವೆಂದರೆ ಕೊನೆಯವರೆಗೆ ಸಂಗಾತಿಯನ್ನು ಕಂಫರ್ಟ್ ಆಗಿರಿಸುವ… ಅದೂ ಖಾಯಂ ಆಗಿರುವ ಭಾವನೆ ಎಂಬುದು ಅರ್ಥ ಮಾಡಿಕೊಳ್ಳದೇ, ಕ್ಷಣಿಕ ಆವೇಶಗಳಿಗೆ ಮಣಿದು, ಆಕರ್ಷಣೆಗಳಿಗೇ ಸೋಲುವ ಯುವ ಹೃದಯಗಳು ಸಾಕಷ್ಟು.
ಪ್ರೇಮವೆಂದರೆ ಪರಸ್ಪರ ನೀಡುವ ಗೌರವ. ‘ನಿನಗೆ ಬೇಕಾದ್ದನ್ನು ನೀಡಲು ಸಾಧ್ಯವಾಗದೇ ಇರಬಹುದು… ಆದರೆ ಎಂದಿಗೂ ಕಣ್ಣೀರು ಹಾಕಿಸಲಾರೆ… ಕೊನೆವರೆಗೂ ಕಷ್ಟದಲ್ಲಿ- ಇಷ್ಟದಲ್ಲಿ ಜತೆಗೇ ಇರುವೆ… ನೆಮ್ಮದಿಯನ್ನು ನೀಡುವೆ’ ಎಂಬ ಭಾವನೆಯೇ ಪ್ರೇಮ.

ಪಕ್ವ ಪ್ರೇಮಕ್ಕೆ ಹಣದ, ಸೌಂದರ್ಯದ ಹಂಗಿಲ್ಲ. ಸುಂದರ ಭವಿಷ್ಯಕ್ಕೆ ಜತೆಯಾಗಿ ನಡೆವುದೇ ಪ್ರೇಮ.
ಬದುಕು ಎಲ್ಲವನ್ನೂ ಸುಲಭವಾಗಿ ನೀಡದು. ಅದರ ದಾರಿ ಬಲುದೂರ. ಸಾಧನೆಯ, ನೆಮ್ಮದಿಯ ಗುರಿ ತಲುಪಲು ಕಷ್ಟದ ಬಿಸಿಲಿನಲ್ಲಿ ಬರಿಗಾಲ ನಡಿಗೆ. ಪ್ರೇಮವೆಂಬುದು ಅದರಲ್ಲಿನ ತಂಪು ನೆರಳು. ಬದುಕಿನ ದಾರಿಯಲ್ಲಿ ಸುಸ್ತಾದವನಿಗೆ ದೊರಕುವ ಅಮೃತ. ಅಮೃತ ಕುಡಿದೊಡನೆ ಮತ್ತೆ ಸುಸ್ತನ್ನೆಲ್ಲ ಕೊಡವಿ ಎದ್ದು ನಿಲ್ಲಬೇಕು. ಮತ್ತೆ ನೆಮ್ಮದಿಯತ್ತ ನಡೆಯಬೇಕು.

ಪ್ರೇಮವೆಂದರೆ ಬರಿಯ ಅಮೃತವಷ್ಟೇ ಅಲ್ಲ. ಪರಸ್ಪರ ಗೌರವ, ತ್ಯಾಗ, ಹೊಂದಾಣಿಕೆ, ಕಾಳಜಿ, ಕೊನೆವರೆಗೂ ಜತೆಗಿರುವ ಸ್ಥೈರ್ಯಗಳೆಂಬ ಪಂಚಾಮೃತ. ಸಾಧನೆಯ ಮಾರ್ಗದಲ್ಲಿ ಬೇಸರ, ಸುಸ್ತಾಗದೇ ಪ್ರೇಮದ ಅಮೃತ ಪಾತ್ರೆ ಜತೆಗಿರಲಿ; ಅನುದಿನವೂ ಪಕ್ವ ಪ್ರೇಮಕ್ಕೆ ಜಯವಾಗಲಿ!

The word laconic, meaning terse, pithy, expressing a meaning in few words, has an interesting origin that dates back to the Greek wars, more than 2600 years ago.

The people of Laconia, a state of ancient Greece, were famous for their valor and for their brevity of speech. They never used more words than were strictly necessary to express themselves. Philip of Macedonia, desiring to become the emperor of all Greece, raised a huge army and waged war against all the states one by one, until each acknowledged him as their overlord. Finally, he sent a letter to the Laconians, which read “If I go down into your country, I will level your great city to the ground.”

In a few days, an answer was brought back to him. It contained a single word – “If”. This short, but telling reply effectively took the wind out of his sails.

The Laconians’ brevity of speech has been immortalized in the expression laconic, which today means ‘expressing oneself in few words’.

-Abhay Kumar, II yr MBBS, BMCRI

ಟ್ಯಾಗ್ ಗಳು: ,

Blog Stats

  • 71,866 hits
ಮಾರ್ಚ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

Top Clicks

  • ಯಾವುದೂ ಇಲ್ಲ