Archive for the ‘ದಿ ವರ್ಡಿಕ್ಟ್’ Category
ದಿ ವರ್ಡಿಕ್ಟ್
Posted ಮೇ 25, 2009
on:(ನಮ್ಮ ಪ್ರಯತ್ನಕ್ಕೆ ನಿಮ್ಮ ತೀರ್ಪು)
ಸಾಹಿತ್ಯದಂಬರದಲ್ಲಿ ಮತ್ತೊಂದು ಮಹಾನಕ್ಷತ್ರವೇ ಸಡಗರ
ಪತ್ರಿಕಾರಂಗದಲ್ಲಿ ಈ ರೀತಿಯ ಒಳ್ಳೆಯ ಸಡಗರದ, ಸದಭಿರುಚಿಯ ಪತ್ರಿಕೆ ತುಂಬಾ ವಿರಳ. ಅತಿ ಅಪರೂಪ. ಅಪರಿಚಿತನಾದ ನನಗೆ ಎರಡು ಪುಸ್ತಕ ಕಳುಹಿಸಿದ್ದೀರಿ, ತುಂಬಾ ಧನ್ಯವಾದಗಳು. ಇದರ ಯಶಸ್ಸಿಗಾಗಿ ನಾನು ದುಡೀತೀನಿ ಕಣ್ರಿ. ಯಾಕಂದ್ರೆ ಸಾಹಿತ್ಯದಲ್ಲಿ ದೊಡ್ಡವರ ಮಾತು ಮಾತ್ರ ನಡೆಯುತ್ತದೆ. ಆದ್ರೆ ನೀವೆಲ್ಲ ವಿದ್ಯಾರ್ಥಿಗಳು. ನನಗೆ ತುಂಬಾ ಹೆಮ್ಮೆ. ಎಷ್ಟು ಹೇಳಿದರೂ ಕಡಿಮೆ.
ಹಾಗೆಯೇ ಸರ್‌ಜಿ, ನಾನು ಬರೆದಿರುವ ಕೆಲವು ಹನಿಗವನ, ನಗೆಹನಿ ‘ಸಡಗರ’ದಲ್ಲಿ ಪ್ರಕಟಿಸಲು ಕೋರುತ್ತೇನೆ. ಹಾಗೆಯೇ ದಯಮಾಡಿ ಎಲ್ಲಾ ಪತ್ರಿಕೆಗಳಲ್ಲಿರುವಂತೆ ‘ಸ್ನೇಹ’ದ ಬಗ್ಗೆ ಅಂಕಣ ಪ್ರಾರಂಭಿಸಿ. ‘ಸ್ನೇಹ’ ಅಂಕಣದಿಂದ ಪರಿಚಯವಾಗಿ ‘ಸಡಗರ’ ತುಂಬು ಸಡಗರದಿಂದ ಕರುನಾಡಿನ ಮೂಲೆ ಮೂಲೆಯಲ್ಲೂ ಓಡಾಡಲಿ ಎಂದು ಹಾರೈಸುವೆ.
– ಸಿದ್ದು.ಬಿ.ಮಠಪತಿ
ಗುಲಬರ್ಗಾ
ಚಂದ್ರಯಾನ ಜುಟ್ಟಿನ ಮಲ್ಲಿಗೆಯೇ
ಚಂದ್ರಯಾನದ ಪ್ರಯೋಜನ ಹಾಗೂ ಅಪ್ರಸ್ತುತತೆಯ ಬಗ್ಗೆ ಮೂಡಿ ಬಂದ ಡಿಬೇಟ್ ಅದ್ಭುತವಾಗಿತ್ತು. ನಮ್ಮ ದೇಶದಲ್ಲಿ ವಿಜ್ಞಾನ ಹೆಚ್ಚು ಚರ್ಚೆಗೊಳಗಾಗುವುದಿಲ್ಲ. ದೊಡ್ಡ ದೊಡ್ಡ ಪತ್ರಿಕೆಗಳಲ್ಲಿ, ಟಿವಿ ಚಾನೆಲ್ಲುಗಳಲ್ಲಿ ರಾಜಕೀಯ, ಸಿನೆಮಾ, ಫ್ಯಾಶನ್ನು, ಸಾಹಿತ್ಯಕ್ಕೆ ಕೊಡುವ ಪ್ರಾಮುಖ್ಯತೆಯನ್ನು ವಿಜ್ಞಾನಕ್ಕೆ ಕೊಡುವುದಿಲ್ಲ.
‘ಸಡಗರ’ದಲ್ಲಿ ವಿಜ್ಞಾನ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ಲೇಖನಗಳು ಹೆಚ್ಚೆಚ್ಚು ಮೂಡಿ ಬರಲಿ.
– ಮಂಜುನಾಥ್, ಶ್ರವಣಬೆಳಗೊಳ
ಮುಷ್ಟಿಯಲ್ಲಿ ಮಿಲೇನಿಯಂ
ನಾಗೇಶ್ ಹೆಗಡೆಯವರು ನನ್ನ ಅಚ್ಚುಮೆಚ್ಚಿನ ಬರಹಗಾರರಲ್ಲಿ ಒಬ್ಬರು. ಪ್ರಕೃತಿಯ ಬಗ್ಗೆ, ವಿಜ್ಞಾನ ತಂತ್ರಜ್ಞಾನದ ಬಗ್ಗೆ ವಿಸ್ಮಯವನ್ನು, ಕುತೂಹಲವನ್ನು ನನ್ನಲ್ಲಿ ಬಿತ್ತಿದವರು ಅವರು. ತೇಜಸ್ವಿಯವರ ಹಾಗೂ ನಾಗೇಶ್ ಹೆಗಡೆಯವರ ವೈಜ್ಞಾನಿಕ ಬರಹಗಳನ್ನು ಓದಿಯೇ ನಾನು ವಿಜ್ಞಾನದ ವಿದ್ಯಾರ್ಥಿಯಾದದ್ದಕ್ಕೆ ಹೆಮ್ಮೆಯನ್ನು ಪಡುತ್ತಿದ್ದದ್ದು.
ಮಿಲೇನಿಯಂ ಸಂಭ್ರಮದ ನೆಪದಲ್ಲಿ ವಿಜ್ಞಾನ ಹಾಗೂ ಅದರ ಸಾಮಾಜಿಕ ಮುಖದ ಅನಾವರಣವನ್ನು ಮಾಡಿಸುವ ‘ಮುಷ್ಟಿಯಲ್ಲಿ ಮಿಲೇನಿಯಂ’ ಕೃತಿಯ ಪರಿಚಯ ಮಾಡಿಸಿದ ಸುಪ್ರೀತ್‌ಗೆ ಥ್ಯಾಂಕ್ಸ್.
-ಸಂಧ್ಯಾ.ಎಸ್, ಚಿಕ್ಕಮಗಳೂರು
ತೂರಿದ ಕಲ್ಲಿನದ್ಯಾವ ಧರ್ಮ?
ನಮ್ಮ ಎಲ್ಲಾ ಸಾಮಾಜಿಕ ಚರ್ಚೆಗಳಲ್ಲಿ ಕೋಮುವಾದ, ಅಲ್ಪ ಸಂಖ್ಯಾತರ ಓಲೈಕೆ, ದಿಕ್ಕಿಲ್ಲದ ವಿಚಾರವಾದ, ಹಿಪಾಕ್ರಸಿಗಳು ತುಂಬಿ ಹೋಗಿವೆ. ಈ ಸಂದರ್ಭದಲ್ಲಿ ನಿಮ್ಮ ನೇರ ಅನಿಸಿಕೆಗಳಿಂದ ಕೂಡಿದ ಸಂಪಾದಕೀಯ ಮನಮುಟ್ಟುವಂತಿತ್ತು.
ಹಿಂಸೆಗೆ, ಕ್ರೌರ್ಯಕ್ಕೆ ಯಾವ ಧರ್ಮವೂ ಇಲ್ಲ. ಬಣ್ಣವೂ ಇಲ್ಲ. ಅದನ್ನೆದುರಿಸಲು ಸರಕಾರಕ್ಕೂ ಯಾವ ಧರ್ಮ, ಜಾತಿಯ ಮುಖವಾಡವಿರಬಾರದು. ಈ ಸರಳ ಸತ್ಯವನ್ನು ನಮ್ಮ ರಾಜಕಾರಣಿಗಳು ಅದೆಂದು ಅರ್ಥ ಮಾಡಿಕೊಳ್ಳುತ್ತಾರೋ.
– ರಘು.ವೈ, ಮಂಗಳೂರು
ದಿ ವರ್ಡಿಕ್ಟ್
Posted ಡಿಸೆಂಬರ್ 26, 2008
on:ಯೂಥ್ ಫೋಕಸ್: ಬಂಗಾರದ ಬಿಂದ್ರಾ
ಭಾರತದಲ್ಲಿ ಕ್ರೀಡೆಯೊಂದೇ ಅಲ್ಲ, ಯಾವ ವ್ಯವಸ್ಥೆಯೂ ಸರಿಯಿಲ್ಲ. ಇಂಥ ಪರಿಸ್ಥಿತಿಯಲ್ಲೂ ಪದಕ ಗೆದ್ದಿರುವ ಮೂವರಿಗೂ ನನ್ನ ಅಭಿನಂದನೆಗಳು.. – ಎಂ.ಜಿ.ಹರೀಶ್ (ಬ್ಲಾಗಿನಲ್ಲಿ ಬಂದದ್ದು)
ನಿಮ್ಮ ಪತ್ರಿಕೆ ಉತ್ತಮವಾಗಿ ಮೂಡಿ ಬರುತ್ತಿದೆ. ನಿಮ್ಮ ಪತ್ರಿಕೆ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸುತ್ತೇನೆ. – ಗುರುಪ್ರಸಾದ್.ಎಸ್.ಹಟ್ಟಿಗೌಡರ್
ಇಂತಿ ನಿನ್ನ ಪ್ರೀತಿಯ: ಮೆಸೇಜು ಡಬ್ಬಿ ತೆಗೆದು ಕುಟ್ಟಿ ಕಳಿಸಿದ್ದು ಒಂದೇ ಸಾಲು
ಹಮ್.. ಚನ್ನಾಗಿದೆ.. ನಿಜ, ಮೊದಲ ಸಲದ ಪ್ರೀತಿಯಲ್ಲಿ ಇರೊ excitment, curosity, ಕನಸುಗಳು.. ವಿಶೇಷ.. ಚನ್ನಾಗಿ ಬರೀತೀರಿ. – ನಿವೇದಿತಾ (ಬ್ಲಾಗಿನಲ್ಲಿ ಬಂದದ್ದು)
Excellent, I have also the same feeling! -Guru (In blog)
ಹೇಮಾಂತರಂಗ: ಹುಡುಗೀರ್ಯಾಕೆ ಹೀಗೆ?
ತುಂಬಾ ಚೆನ್ನಾಗಿದೆ. ಹೀಂಗೆ ಕೂತ್ಕೊಂಡು ಫ್ರೆಂಡ್ಸ್ ಜೊತೆ ಮಾತನಾಡಿದ ಹಾಗೆ ಬರಹ ಸರಾಗವಾಗಿ ಓದಿಸಿಕೊಳ್ಳುತ್ತೆ.
ಇನ್ನು ಬದಲಾಗುವ ವಿಷಯಕ್ಕೆ ಬಂದ್ರೆ ಹೆಣ್ಣು ಗಂಡು ಎಲ್ಲಾ ಒಂದೆ. ಬದುಕನ್ನು ನೋಡುವ ನಮ್ಮ ಕಣ್ಣುಗಳು ಬದಲಾದ ಹಾಗೆ ಗೊತ್ತಿದ್ಡೋ ಗೊತ್ತಿಲ್ಲದೆಯೋ ಬೇಕಂತಲೆಯೋ.. ಬೇಡವಾದರೂ..ಎಲ್ಲರೂ ಬದಲಾಗಿಯೇ ಆಗುತ್ತಾರೆ… – ವಿಜಯ್‌ರಾಜ್ (ಬ್ಲಾಗಿನಲ್ಲಿ ಬಂದದ್ದು)
ಹೇಮಾ, ನಮ್ಮ (ಹೆಣ್ಣುಗಳ) ವಿಷಯಕ್ಕೆ ಬಂದಾಗ ಪ್ರತಿ ನಡೆಯೂ ಅರ್ಥವಾಗದ ಸಂಗತಿಯೇ ಆಗಿಬಿಡುತ್ತಲ್ವಾ?
ಕಾಲೇಜಲ್ಲಿರ್ತ ಫ್ಲರ್ಟ್ ಅನಿಸ್ಕೊಂಡ ಹುಡುಗಿ ಆಮೇಲೆ ಸತಿ ಸಾವಿತ್ರಿ ಹಾಗೆ ಬಾಳ್ತಿರೋದನ್ನ ನೋಡಿದೀನಿ. ಹಾಗೇ, ಗೌರಮ್ಮ ಅನಿಸ್ಕೊಳ್ತಿದ್ದ ಹುಡುಗಿ ಕಾಳಿಯಾಗಿದ್ದನ್ನೂ! ಚೆನ್ನಾಗಿದೆ ಬರಹ. – ಚೇತನಾ ತೀರ್ಥಹಳ್ಳಿ (ಬ್ಲಾಗಿನಲ್ಲಿ ಬಂದದ್ದು)
ದಿ ಡಿಬೇಟ್: ದೇಶಪ್ರೇಮಿ V/s ವಿಶ್ವಮಾನವ
ಈ ಇಡಿಯ ಚರ್ಚೆ ಸಕಾಲಿಕ ಮತ್ತು ಸುಸಂಬದ್ಧವಾಗಿದೆ. ಇಂತಹದು ಮತ್ತಷ್ಟು ನಡೆಯಲಿ ಎಂದು ಅಶಿಸುವೆ.
– ಚೇತನಾ ತೀರ್ಥಹಳ್ಳಿ (ಬ್ಲಾಗಿನಲ್ಲಿ ಬಂದದ್ದು)
ನಾನ್ರೀ ಎಡಿಟರ್: ಎರಡು ಸಿನೆಮಾ ಹಾಗೂ ಒಂದು ಮಾತು!
ತುಂಬಾ ಅದ್ಭುತವಾಗಿ ಬರೆದಿದ್ದೀರ ಸುಪ್ರೀತ್. ನಾನು ಕೂಡ ಈ ಸಿನೆಮಾ ನೋಡಿದೆ… ಇದರ ಬಗ್ಗೆ ವಿಮರ್ಶಾತ್ಮಕವಾಗಿ ಬರೆಯಬೇಕು ಅಂದುಕೊಂಡೆ ಆದರೆ ಚಿತ್ರದ ಇಂಪ್ಯಾಕ್ಟಿನಲ್ಲಿ ಮುಳುಗಿ ಹೊಗಿದ್ದೆ… ಹಾಗಾಗಿ ನನ್ನ ಬ್ಲಾಗಿನಲ್ಲಿ ಸುಮ್ಮನೆ ಪರಿಚಯ ತರಹ ಬರೆದಿದ್ದೆ.
ನಿಮ್ಮ ಲೇಖನ ನೊಡಿ ಎಷ್ಟು ಖುಶಿಯಾಯಿತೆಂದರೆ, ಈ ಎರಡೂ ಸಿನೆಮಾ ನೋಡಿದಾಗ ಆದಷ್ಟು…
- ವಿಜಯ್‌ರಾಜ್ (ಬ್ಲಾಗಿನಲ್ಲಿ ಬಂದದ್ದು)
ನಾನಿನ್ನೂ ‘ಮುಂಬೈ ಮೇರಿ ಜಾನ್’ ನೋಡಿಲ್ಲ. ‘ಎ ವೆಡ್‌ನೆಸ್ ಡೇ’ ನೋಡಿದ್ದೇನೆ. ನಾನು ನೋಡಿದ ಅತ್ಯುತ್ತಮ ಚಿತ್ರಗಳಲ್ಲಿ ಖಂಡಿತಾ ಇದೂ ಒಂದು. – ಎಂ.ಜಿ.ಹರೀಶ್
ಕಳೆದ ಎರಡು ‘ಸಡಗರ’ ನೋಡಿದೆ. ತುಂಬಾ ಚೆನ್ನಾಗಿ ಬಂದಿದೆ. ‘ನಾವೆಷ್ಟು ಸ್ವತಂತ್ರರು?’ ಲೇಖನ ತುಂಬಾ ಚೆನ್ನಾಗಿ ಬರೆದಿದ್ದೀರಿ. ನಿಜಕ್ಕೂ ನನಗೆ ಹಿಡಿಸಿತು. ಇನ್ನೂ ಹೆಚ್ಚು, ಹೆಚ್ಚು ಮನದ ವಿಷಯಗಳು ಇರಲಿ. “ಫ್ರೆಂಡ್‌ಷಿಪ್ ಕಾಲಂ” ಒಂದು ಇದ್ದಿದ್ದರೆ ತುಂಬಾ ಮೆರಗು ಬರುತ್ತಿತ್ತು. ಇರಲಿ ಯಾವುದಕ್ಕೂ ನಿಮ್ಮ ಪ್ರಯತ್ನಕ್ಕೆ. ಶುಭವಾಗಲಿ.
– ನಂದಕಿಶೋರ ಗೌಡರ,ಹುಕ್ಕೇರಿ
ಇತ್ತೀಚಿನ ಟಿಪ್ಪಣಿಗಳು