Archive for the ‘ಚುರುಮುರಿ’ Category
ಚುರುಮುರಿ
Posted ಮಾರ್ಚ್ 14, 2009
on:ಕೆಲಸದ ಅರ್ಜಿಯನ್ನು ಗುಂಡ ಬಹಳ ಸಮಯದಿಂದ ಗುರಾಯಿಸುತ್ತಿದ್ದ.
ಯಾರ ಕಾಪಿಯನೂ ಮಾಡದೇ ಎಲ್ಲಾ ಜಾಗವನ್ನು ಪ್ರಥಮ ಸಲ ತುಂಬಿದ ಬಳಿಕ ಆತ್ಮವಿಶ್ವಾಸದ ನಂತರ ಇದೊಂದು ಪ್ರಶ್ನೆ ತೀವ್ರವಾಗಿ ತಲೆ(?!) ತಿನ್ನುತಿತ್ತು.
ಬಹಳ ಅಲೋಚಿಸಿದ ಬಳಿಕ ಸ್ಯಾಲರಿ ಎಕ್ಸ್ಪ್ ಪೆಕ್ಟೆಡ್ ಎದುರು ಕೊನೆಗೂ ಯೆಸ್ ಅಂತ ಬರೆದ.
ತಲೆಗೆ ಹುಳ!
ಕುಟುಂಬವೊಂದರಲ್ಲಿ ಪ್ರತಿಯೊಂದು ಮಗುವಿಗೂ ಕನಿಷ್ಠ ನಾಲ್ಕು ಮಂದಿ ಸಹೋದರರೂ, ನಾಲ್ಕು ಮಂದಿ ಸಹೋದರಿಯರೂ ಇದ್ದಾರೆಂದರೆ ಆ ಕುಟುಂಬದಲ್ಲಿ ಅತಿ ಕಡಿಮೆ ಎಂದರೆ ಎಷ್ಟು ಮಂದಿ ಮಕ್ಕಳಿರುತ್ತಾರೆ?
(ಉತ್ತರ: ಹತ್ತು )
ಪ್ರತಿ ಪ್ರತಿಭಾಶಾಲಿಗೂ ಒಂದು ರೀತಿಯ ಮನೋವೈಕಲ್ಯವಿರುತ್ತದೆ.
ಆತನ ಕೃತಿಗಳು ಅದೇ ರೀತಿಯ ವೈಫಲ್ಯವಿರುವವರಿಗೆ ಮೆಚ್ಚಿಗೆ ಆಗುತ್ತದಂತೆ.
ಆ ಪ್ರತಿಭಾಶಾಲಿ ಅದೃಷ್ಟವಂತನಾಗಿದ್ದರೆ ಅದೇ ರೀತಿಯ ವೈಕಲ್ಯದಿಂದ ನರಳುವವರ ಸಂಖ್ಯೆ ಲಕ್ಷಾಂತರ.
– ಮ್ಯಾಕ್ಸ್ ನಾರ್ಡೋ
ಚಾಣಾಕ್ಯ ಉವಾಚ
ಮನುಷ್ಯ ಹುಟ್ಟುವುದು ಒಬ್ಬಂಟಿಯಾಗಿ, ಸಾಯುವುದು ಒಬ್ಬಂಟಿಯಾಗಿ. ಒಬ್ಬಂಟಿಯಾಗಿಯೇ ಆತ ತನ್ನ ಕರ್ಮದ ಫಲ ಉಣ್ಣುತ್ತಾನೆ. ಒಬ್ಬಂಟಿಯಾಗಿಯೇ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುತ್ತಾನೆ.
ಪ್ರೀತಿ ಪ್ರೇಮ ಪ್ರಣಯ
ಮದುವೆಯನ್ನು ಗಟ್ಟಿಯಾಗಿರಿಸುವ ಅತಿ ಮುಖ್ಯ ಮಾತು: ‘ಇವತ್ತು ಅಡಿಗೆ ನಾನು ಮಾಡ್ತೀನಿ.’
ಅನಾಮಿಕ
ಗಂಡಸು ಬದಲಾಗಬಹುದು ಎಂದುಕೊಂಡು ಹೆಂಗಸು,
ಹೆಂಗಸು ಬದಲಾಗಲಾರಳು ಎಂದುಕೊಂಡು ಗಂಡಸು
ಮದುವೆಯಾಗುತ್ತಾರೆ.
ಆದರೆ ಇಬ್ಬರಿಗೂ ನಿರಾಶೆ ಕಟ್ಟಿಟ್ಟ ಬುತ್ತಿ.
-ಆಲ್ಬರ್ಟ್ ಐನ್‍ಸ್ಟೈನ್
Remember, beneath every cynic there lies a romantic, and probably an injured one.
— Glenn Beck
ನಿನ್ ಕಥೆ ಮುಗೀತು!
ಕಡು ನಾಸ್ತಿಕನೊಬ್ಬ ಅಮೇಜಾನಿನ ದಟ್ಟ ಕಾಡುಗಳಲ್ಲಿ ಅಲೆಯುತ್ತಿದ್ದ. ಅಕಸ್ಮಾತಾಗಿ ನೂರಾರು ಮಂದಿಯಿದ್ದ ‘ನರ ಭಕ್ಷಕ’ ಕಾಡು ಜನರ ಮಧ್ಯೆ ಸಿಕ್ಕಿ ಬಿದ್ದ.
ನೂರಾರು ಮಂದಿ ಕ್ರೂರ ಕಾಡು ಜನರನ್ನು ಕಂಡು ನಾಸ್ತಿಕನ ಜಂಗಾ ಬಲವೇ ಉಡುಗಿ ಹೋಯ್ತು. ತನಗೆ ತಾನೇ ತಣ್ಣಗಿನ ಸ್ವರದಲ್ಲಿ ಹೇಳಿಕೊಂಡ, “ಓ ದೇವರೆ, ಇನ್ನು ನನ್ನ ಕಥೆ ಮುಗೀತು!”.
ಆತನ ಕಿವಿಯಲ್ಲಿ ಧ್ವನಿಯೊಂದು ಅನುರಣಿಸಿತು, “ಇಲ್ಲ ಕಥೆ ಮುಗಿದಿಲ್ಲ. ಈಗ ನಿನ್ನೆದುರು ಇರುವ ಕಲ್ಲನ್ನು ತೆಗೆದುಕೊಂಡು ಆ ಮುಖಂಡನ ತಲೆಗೆ ಹೊಡಿ.”
ನಾಸ್ತಿಕ ಕಲ್ಲು ಬೀರಿದ. ಕಲ್ಲೇಟು ತಿಂದ ಮುಖಂಡ ನೆಲಕ್ಕುರುಳಿದ. ನೂರಾರು ಮಂದಿಯ ಗುಂಪು ಹಲ್ಲು ಮಸೆಯುತ್ತಾ ಇವನ ಬಳಿಗೆ ಧಾವಿಸಿದರು.
ದೇವರ ಧ್ವನಿ ಮತ್ತೆ ಮೊಳಗಿತು, “ಹುಂ, ಈಗ ನಿನ್ನ ಕಥೆ ಮುಗೀತು!”
ಚುರುಮುರಿ ಅಕ್ಟೋಬರ್ ಸಂಚಿಕೆ
Posted ನವೆಂಬರ್ 15, 2008
on:ನಾನು ಉಪವಾಸ ಮಾಡಲ್ಲ!
ಒಮ್ಮೆ ಗಾಂಧೀಜಿ ಉಪವಾಸ ಪ್ರಾರಂಭಿಸಿದರು. ಪಕ್ಕದಲ್ಲೇ ವಲ್ಲಭಭಾಯಿ ಪಟೇಲರು ನಿಂತಿದ್ದರು. ಗಾಂಧೀಜಿ ಅವರಿಗೆ ಹೇಳಿದರು: ‘ವಲ್ಲಭ ಭಾಯಿ, ನಿಮಗೂ ಅಪ್ಪಣೆ ಕೊಡುತ್ತೇನೆ ಉಪವಾಸ ಮಾಡಬಹುದು.’
‘ಬೇಡಿ ಬಾಪೂಜಿ, ಖಂಡಿತಾ ಬೇಡಿ. ನಾನಂತೂ ಉಪವಾಸ ಪ್ರಾರಂಭಿಸೋಲ್ಲ’ ಎಂದರು ವಲ್ಲಭಭಾಯಿ.
‘ಏಕೆ?’ ಆಶ್ಚರ್ಯದಿಂದ ಕೇಳಿದರು ಗಾಂಧೀಜಿ.
‘ನೀವು ಉಪವಾಸ ಮಾಡಿದರೆ ಬೇಡ ಎಂದು ಬೇಡಿಕೊಳ್ಳುವವರು ನೂರಾರು ಜನ. ಹಾಗೆ ಮಾಡಿ ನೀವು ಉಪವಾಸ ಮಾಡುವುದನ್ನು ತಪ್ಪಿಸುತ್ತಾರೆ. ನಾನು ಉಪವಾಸ ಮಾಡಿದರೆ ಬೇಡ ಎಂದು ಹೇಳಿ ನಿಲ್ಲಿಸುವವರು ಯಾರೂ ಇಲ್ಲವಲ್ಲ!’
………………………………
ಓಹ್ ಹೌದಾ?
ಭೂಮಿಯ ಮೇಲೆ ಪ್ರತಿ ಸೆಕಂಡಿಗೆ ಸರಾಸರಿ ೧೦೦ ಸಿಡಿಲುಗಳು ಅಪ್ಪಳಿಸುತ್ತವೆಯಂತೆ. ಸಿಡಿಲಿನ ಉದ್ದ ೩೦-೬೦ ಮೀಟರ್ ಇರುತ್ತದೆ. ಇದು ಸೆಕೆಂಡಿಗೆ ೧೬೦-೧೬೦,೦೦೦ ಕಿಮೀ ವೇಗದಲ್ಲಿ ಅಪ್ಪಳಿಸುತ್ತವೆ. ಇದರಿಂದ ಉತ್ಪತ್ತಿಯಾಗುವ ಶಾಖ ೧೭,೦೦೦- ೨೮,೦೦೦ ಸೆ.ನಷ್ಟು ಅಂದರೆ ಸೂರ್ಯನ ತಾಪಮಾನಕ್ಕಿಂತ ಮೂರು ಪಟ್ಟು ಹೆಚ್ಚು!
ಪ್ಲಾಬೋ ಪಿಕಾಸೊ ಎಂಬ ಶ್ರೇಷ್ಠ ಚಿತ್ರ ಕಲಾವಿದನ ಹೆಸರು ನೀವು ಕೇಳಿರಬಹುದು. ಆದರೆ ಆತನ ಪೂರ್ಣ ಹೆಸರನ್ನು ಕೇಳಿರಲಾರಿರಿ. ಇಲ್ಲಿದೆ ನೋಡಿ: ಪ್ಯಾಬ್ಲೋಪೀಗೋ ಜೋಸ್ ಫ್ರಾನ್ಸಿನ್ಕೋಸ್ಕೋಡಿ ಪವುಲಾ ಸಿಸೀನ್ ನೇಪೋಮಿಯೂಸಿನೋ ಕ್ರಿಸ್ಟಿನ್ ಕ್ರಿಸ್ಟೀಯಾನೋ ಡಿಲಾ ಸಾಂಡಿಸಿಮಾ ಪಿಕಾಸೋ !
………………………………
ಖಗೋಳ ಶಾಸ್ತ್ರಜ್ಞ
ಒಬ್ಬ ಖಗೋಳಶಾಸ್ತ್ರಜ್ಞನಿಗೆ ರಾತ್ರಿಯಲ್ಲಿ ಹೊರಹೋಗಿ ನಕ್ಷತ್ರಗಳನ್ನು ವೀಕ್ಷಿಸುವ ಹವ್ಯಾಸವಿತ್ತು. ಒಂದು ರಾತ್ರಿ ಅವನು ನಕ್ಷತ್ರವೀಕ್ಷಣೆ ಮಾಡುತ್ತ ಮಾಡುತ್ತ ಊರ ಹೊರಗಿನ ಪ್ರದೇಶಕ್ಕೆ ಹೊರಟುಹೋದ. ಗಮನವೆಲ್ಲ ಆಕಾಶದಲ್ಲಿ ನೆಟ್ಟಿದ್ದರಿಂದ ಅವನು ಆಯತಪ್ಪಿ ಒಂದು ಬಾವಿಯಲ್ಲಿ ಬಿದ್ದುಬಿಟ್ಟ. ತನಗಾದ ನೋವು, ತರಚುಗಾಯಗಳಿಗಾಗಿ ಅವನು ಗೋಳಿಡುತ್ತ ‘ಕಾಪಾಡಿ!! ಕಾಪಾಡಿ !!’ಎಂದು ಕೂಗುತ್ತಿರುವಾಗ ಒಬ್ಬ ನೆರೆಯವನು ಅವನ ಕೂಗು ಕೇಳಿ ಬಾವಿಯ ಬಳಿ ಹೋದನು.ನಡೆದುದನ್ನು ಕೇಳಿ ಆತ ಬಾವಿಯಲ್ಲಿನ ಖಗೋಳಶಾಸ್ತ್ರಜ್ಞನಿಗೆ ಹೇಳಿದನು “ ಅಯ್ಯಾ ಮೂರ್ಖ ಮುದುಕ, ಆಕಾಶದ ಮೇಲಿರುವ ನಕ್ಷತ್ರದ ಮೇಲೆ ಗಮನ ಕೊಡುವ ನೀನು ನೆಲದ ಮೇಲೇನಿದೆ ಎಂದು ನೋಡುವುದಿಲ್ಲವಲ್ಲ!!”.
(ಈಸೋಪನ ಕಥೆ)
………………………………
ಲಾಲೂ ಬ್ರೈನ್!
ಭಾರತದ ಎಲ್ಲಾ ಷರತ್ತುಗಳಿಗೆ ಒಪ್ಪಿ ಪಾಕಿಸ್ತಾನ ಜಗಳವನ್ನು ನಿಲ್ಲಿಸಿತು.ಸಲೀಸಾಗಿ ಪರಿಹರಿಸಿದ ಲಾಲೂವನ್ನು ಪತ್ರಕರ್ತರೆಲ್ಲಾ ಸುತ್ತುವರೆದರು. ಎಲ್ಲರಲ್ಲೂ ಒಂದೇ ಪ್ರಶ್ನೆ. ಹೇಗೆ ಪರಿಹರಿಸಿದಿರಿ ಎಂದು.
ಲಾಲೂ “ಪಾಕಿಸ್ತಾನದ ಪ್ರಧಾನಿಗೆ ನಾ ಹೇಳಿದ್ದಿಷ್ಟೇ… ಒಂದು ಕಂಡೀಷನ್ ಮೇಲೆ ಕಾಶ್ಮೀರ ನಿಮಗೆ ನೀಡಲಾಗುತ್ತೆ…. ಕಾಶ್ಮೀರದ ಜತೆ ಬಿಹಾರವನ್ನೂ ಫ್ರೀಯಾಗಿ ತೆಗೆದುಕೊಳ್ಳಬೇಕೆಂದೆ…ಅಷ್ಟೇ..”
ಸ್ಯಾಲರಿ ಎಕ್ಸ್‌ಪೆಕ್ಟೆಡ್
ಕೆಲಸದ ಅರ್ಜಿಯನ್ನು ಗುಂಡ ಬಹಳ ಸಮಯದಿಂದ ಗುರಾಯಿಸುತ್ತಿದ್ದ.
ಯಾರ ಕಾಪಿಯನೂ ಮಾಡದೇ ಎಲ್ಲಾ ಜಾಗವನ್ನು ಪ್ರಥಮ ಸಲ ತುಂಬಿದ ಬಳಿಕ ಆತ್ಮವಿಶ್ವಾಸದ ನಂತರ ಇದೊಂದು ಪ್ರಶ್ನೆ ತೀವ್ರವಾಗಿ ತಲೆ(?!) ತಿನ್ನುತಿತ್ತು.
ಬಹಳ ಅಲೋಚಿಸಿದ ಬಳಿಕ ಸ್ಯಾಲರಿ ಎಕ್ಸ್ಪ್ ಪೆಕ್ಟೆಡ್ ಎದುರು ಕೊನೆಗೂ ಯೆಸ್ ಅಂತ ಬರೆದ.
………………………………
ಬುದ್ಧಿವಂತಿಕೆ ಮತ್ತು ಸಂತೋಷ
ಬುದ್ಧಿವಂತಿಕೆ ಮತ್ತು ಸಂತೋಷದ ನಡುವಿನ ವ್ಯತ್ಯಾಸ ಇಷ್ಟೇ.
ತಾನು ಸಂತೋಷವಾಗಿದ್ದೇನೆ ಎಂದುಕೊಳ್ಳುವವನು ನಿಜಕ್ಕೂ ಸಂತೋಷವಾಗಿರುತ್ತಾನೆ. ಆದರೆ ತಾನು ಬುದ್ಧಿವಂತ ಎಂದುಕೊಳ್ಳುವವನು ನಿಜವಾದ ಮೂರ್ಖನಾಗಿರುತ್ತಾನೆ.
– ಚಾರ್ಲ್ಸ್ ಕಾಲ್ಟನ್
………………………………
ಪುರುಷ ಹಾಗೂ ಮಹಿಳೆ
ಪುರುಷನು ಮಾಡುವುದೆಲ್ಲ ಮಹಿಳೆಯನ್ನು ಮೆಚ್ಚಿಸುವುದಕ್ಕಾಗಿ, ಮಹಿಳೆಯು ಮಾಡುವುದೆಲ್ಲ ಕನ್ನಡಿಯನ್ನು ಮೆಚ್ಚಿಸುವುದಕ್ಕಾಗಿ!
………………………………
Murphy`s Laws on Love
The nicer someone is, the farther away (s)he is from you.
Brains x Beauty x Availability = Constant. This constant is always zero.
The amount of love someone feels for you is inversely proportional to how much you love them.
Money can’t buy love, but it sure gets you a great bargaining position.
Availability is a function of time. The minute you get interested is the minute they find someone else.
The more beautiful the woman is who loves you, the easier it is to leave her with no hard feelings.
ಚುರುಮುರಿ
Posted ಸೆಪ್ಟೆಂಬರ್ 20, 2008
on:- In: ಚುರುಮುರಿ
- 2 Comments
ಸತ್ಯ!
ವಯಸ್ಸು ಇಪ್ಪತ್ತಾದಾಗ ಮನುಷ್ಯ ಬೇರೆಯವರು ತನ್ನ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂದು ಯೋಚಿಸುತ್ತಾನೆ.
ವಯಸ್ಸು ನಲವತ್ತಾದಾಗ ಮನುಷ್ಯ ಬೇರೆಯವರು ತನ್ನ ಬಗ್ಗೆ ಏನಾದರೂ ಯೋಚಿಸಿಕೊಳ್ಳಲಿ, ನನಗೇನು ಎಂದು ಭಾವಿಸುತ್ತಾನೆ.
ವಯಸ್ಸು ಅರವತ್ತಾದಾಗ ಆತ ಬೇರೆಯವರು ಅಸಲಿಗೆ ತನ್ನ ಬಗ್ಗೆ ಯೋಚಿಸುತ್ತಲೇ ಇರಲಿಲ್ಲ ಎಂಬುದನ್ನು ಕಂಡುಕೊಳ್ಳುತ್ತಾನೆ.
…………………………..
ಹುಟ್ಟಿದಾಗ ನಾವು ಅಳುತ್ತಿದ್ದೆವು ಉಳಿದವರೆಲ್ಲಾ ಸಂಭ್ರಮಿಸುತ್ತಿದ್ದರು. ನಾವು ಹೇಗೆ ಬದುಕಬೇಕೆಂದರೆ ಸಾಯುವಾಗ ನಾವು ಸಂಭ್ರಮಿಸಬೇಕು, ಉಳಿದವರೆಲ್ಲಾ ಅಳಬೇಕು.
…………………………..
ನೀವು ನನ್ನ ಹೆಂಡತಿಯಾಗಿದ್ರೆ!
ಚರ್ಚಿಲ್ ಅವರನ್ನು ಕುರಿತು ಲೇಡಿ ಆಸ್ಟರ್ ಹೇಳಿದ್ದು:
“ನಾನು ನಿಮ್ಮ ಹೆಂಡತಿಯಾಗಿದ್ದರೆ ನಿಮಗೆ ವಿಷ ಕೊಡುತ್ತಿದ್ದೆ!”
ಥಟ್ಟನೆ ಚರ್ಚಿಲ್ ಕೊಟ್ಟ ಉತ್ತರ, “ನಾನು ನಿಮ್ಮ ಗಂಡನಾಗಿದ್ದರೆ ಅದನ್ನು ಗಟಗಟನೇ ಕುಡಿದುಬಿಡುತ್ತಿದ್ದೆ.”
…………………………..
ಆರ್ಕುಟ್ಟಿನ ಅಂಗಳದಿಂದ ಹಾರಿಬಂದ ಅತಿ ಪುಟ್ಟ ಕತೆ:
“ಮೇನಕೆಯ ಶುಭ್ರಶ್ವೇತ ವಸ್ತ್ರಗಳು ಇನ್ನೂ ಮರದಬುಡದಲ್ಲೇ ಬಿದ್ದಿತ್ತು” ಅಷ್ಟು ಬೆಳ್ಳಗಿರುವ ಬಟ್ಟೆಗಳನ್ನು ತುಳಿದು ಹಾಳುಮಾಡುವ ಮನಸ್ಸಾಗದೇ ವಿಶ್ವಾಮಿತ್ರ ಮರದಿಂದ ಕೆಳಗಿಳಿಯಲೇ ಇಲ್ಲ.
…………………………..
ಓಹ್ ಹೌದಾ!
~ಜಪಾನ್ ದೇಶದ ಟೊಕಿಯೋದಿಂದ ಸುಮಾರು ಎಪ್ಪತ್ತು ಮೈಲು ಫೂರ್ವದಲ್ಲಿರುವ ಇಜೂಓಶಿಮಾ ಎಂಬ ದ್ವೀಪ ಹೆಸರುವಾಸಿ. ಯಾತಕ್ಕೆ ಅಂದಿರಾ? ಆತ್ಮಹತ್ಯೆಗೆ!
~ಚೀನಾದ ‘ಕಿವಾ’ ಜನಾಂಗದಲ್ಲಿ ಒಂದು ಸ್ವಾರಸ್ಯಕರವಾದ ಆಚರಣೆಯಿದೆ. ಹುಡುಗಿಗೆ ಹನ್ನೆರಡು ವರ್ಷವಾದಾಗ ಆಕೆಯನ್ನು ಕೆರೆಯ ಹತ್ತಿರ ಕರೆದುಕೊಂಡು ಹೋಗಿ ಆಕೆಯ ನೆರಳಿಗೆ ಮದುವೆ ಮಾಡುತ್ತಾರಂತೆ. ಇದರಿಂದಾಗಿ ಆಕೆಗೆ ನಿಜ ಮದುವೆಯಿಂದ ಸಂಕಷ್ಟಗಳು ಬರುವುದಿಲ್ಲ ಎಂಬ ನಂಬಿಕೆ!
~ ಜಪಾನಿಯರಲ್ಲಿ ಒಂದು ನಂಬಿಕೆಯಿದೆ: ಭೂಮಿಯ ಕೆಳಗೆ ಕ್ಯಾಟ್ ಫಿಶ್ ಅಲುಗಾಡುವುದರಿಂದ ಭೂಕಂಪ ಸಂಭವಿಸುತ್ತದೆ. ಕಾಶಿಮಾ ಎಂಬ ದೇವಮಾನವ ಆ ಕ್ಯಾಟ್ ಫಿಶ್ ಮಿಸುಕಾಡದ ಹಾಗೆ ಹಿಡಿದುಕೊಂಡಿದ್ದಾನೆ.
…………………………..
ಹುಂಜವೂ ವಜ್ರದ ಹರಳೂ
ತನಗೂ ತನ್ನ ಕೋಳಿಗಳಿಗೂ ಆಹಾರಕ್ಕಾಗಿ ತಿಪ್ಪೆ ಕೆದಕುತ್ತಿದ್ದ ಒಂದು ಹುಂಜಕ್ಕೆ ಒಂದು ವಜ್ರದ ಹರಳು ಸಿಕ್ಕಿತು. ಅದು ವಜ್ರದ ಹರಳಿಗೆ ಹೇಳಿತು: “ನೀನು ನನ್ನ ಬದಲು ನನ್ನ ಯಜಮಾನನಿಗೆ ಸಿಕ್ಕಿದ್ದರೆ ಅವನು ನಿನ್ನನ್ನು ತನ್ನ ಮುಡಿಗೇರಿಸಿಕೊಂಡು ಮೆರೆಸುತ್ತಿದ್ದ. ಆದರೆ ನೀನು ನನಗೆ ಸಿಕ್ಕಿದೆ. ನಿನ್ನಿಂದ ನನಗೆ ಯಾವ ಉಪಯೋಗವೂ ಇಲ್ಲ. ನನಗೆ ಪ್ರಪಂಚದ ಎಲ್ಲ ಒಡವೆಗಳಿಗಿಂತ ಒಂದು ಕಾಳು ಬಾರ್ಲಿ ಸಿಕ್ಕಿದ್ದರೆ ಚೆನ್ನಾಗಿತ್ತು.” (ಈಸೋಪನ ಕಥೆ)
…………………………..
ಚಾಣಾಕ್ಯ ಉವಾಚ
ಭಯ ನಿಮ್ಮನ್ನು ಸಮೀಪಿಸಿದರೆ ಆಕ್ರಮಣ ಮಾಡಿ ಅದನ್ನು ನಾಶ ಮಾಡಿಬಿಡಿ.
…………………………..
ನಾರ್ವೆಯ ಒಂದು ಊರಿನ ಹೆಸರಿದು. ಜಗತ್ತಿನ ಅತಿ ಚಿಕ್ಕ ಹೆಸರು!
ಇತ್ತೀಚಿನ ಟಿಪ್ಪಣಿಗಳು