ಕಲರವ

ಮಚೆಂಪು ಕಾಲಂ: ನಮ್ ದುಡ್ನಾಸೆ ಅತಿಯಾಯ್ತಲ್ವಾ?

Posted on: ಮೇ 22, 2009

– ಮಚೆಂಪು

‘ಮಚ್ಚಿ ನಾಲ್ಕ್ ವರ್ಷ ನಾವ್ ಕಣ್ಣಿಗೆ ಎಣ್ಣೆ ಬಿಟ್ಕಂಡು, ಹೊಟ್ಟೆಗ್ ಇನ್ನೇನೋ ಬಿಟ್ಕಂಡು ಓದೋದ್ಯಾಕೆ?’ coffee ಬಾರ್ ಎದುರು ನಿಂತು ನಾನು ಮಲ್ಲಿ ಮಾತಾಡ್ತಿದ್ವಿ. ಬಾರ್ ಅನ್ನೋ ಹೆಸ್ರು ಕಂಡ್ ಕೂಡ್ಲೆ ನಾನು ವೇದಾಂತಿ ಆಗೋಯ್ತಿನಿ ಅನ್ನೋದು ಮಲ್ಲಿಯಾದಿಯಾಗಿ ನನ್ ದೋಸ್ತರೆಲ್ಲರ ಆರೋಪ. ಅವತ್ತೂ ಅಂಗೇ ಆಯ್ತು. ನಾನು ನಮ್ ದೇಶದ ಲಕ್ಷಾಂತರ ಮಂಡಿ engineering ಹುಡುಗ್ರ ಜೀವ್ನದ ಅರ್ಥವನ್ನೇ question ಮಾಡ್ಬಿಟ್ಟಿದ್ದೆ.

ಮಲ್ಲಿ ಕಾಫಿ ಹೀರಿ ತುಸು ಸುಧಾರಿಸ್ಕಂಡು ಶುರು ಹಚ್ಕಂಡ, ‘ನೋಡ್ ಶಿಷ್ಯ, ನಾಲ್ಕ್ ವರ್ಷ ಕಷ್ಟ ಬಿದ್ ಓದೋದು ಯಾರಪ್ಪನ್ ಉದ್ಧಾರ ಮಾಡಕೂ ಅಲ್ಲ. ದೇಶ ಸೇವೆಗೂ, ವಿದ್ಯಾರ್ಜನೆಗೂ ಅಲ್ಲ. ಈ ಕಂಪ್ನಿಗಳು expect ಮಾಡೋ ಅಗ್ರಿಗೇಟ್ maintain ಮಾಡೋಕಷ್ಟೇ. ಒಂದ್ಸಲ ಒಂದ್ ಒಳ್ಳೇ ಕಂಪ್ನೀಲಿ ಪ್ಲೇಸ್ ಆಗ್ಬಿಟ್ರೆ ಸಾಕು. ಮೊದ್ಲ ಸಂಬ್ಳದಲ್ಲಿ ಒಂದ್ ಎನ್ ಸೀರೀಸ್ ಮೊಬೈಲು, ಎರಡ್ನೇ ತಿಂಗ್ಳ್ ಸಂಬ್ಳದಲ್ಲಿ ಒಂದು ಜಿಂಕ್ ಚಾಕ್ ಐಪಾಡು…’

ಮಗಂದು ಹಗಲುಗನಸಿನ ಮ್ಯಾಟನಿ ಶೋ ಶುರುವಾಯ್ತು ಅಂದ್ಕಂಡು ನಾನು, ‘ಮುಚ್ಚಲೇ ಸಾಕು, ಕಂಪ್ನಿಗಳು ಕಂಡ್ ಕಂಡವ್ರಿಗೆಲ್ಲಾ ಪಿಂಕ್ ಸ್ಲಿಪ್ಪು ಕೊಟ್ಟು ಮನೀಗ್ ಕಳಿಸ್ತಿದ್ರೆ ಇವ್ನಿಗೆ ಆಗ್ಲೇ ಫೈ ಇಯರ್ ಪ್ಲಾನು’ ಅಂತ ದಬಾಯಿಸಿ ಒಂದು ಆಲೂ ಬನ್ನಿಗೆ ಆರ್ಡರ್ ಮಾಡಿದೆ.

ರಾತ್ರಿ ಊಟ ಮುಗ್ಸಿ ರೆಕಾರ್ಡ್ ಬರಿಯೋಕೆ ಕುಂತಾಗ ಮತ್ತೆ ಅದೇ ಪ್ರಶ್ನೆ ತಲೆಯಾಗೆ ಗುಯ್‍ಗುಡೋಕೆ ಶುರುವಾಯ್ತು. ಇಷ್ಟೆಲ್ಲ ಒದ್ಕಂಡು, ಬರ್ಕಂಡು ಮಾಡೋದೆಲ್ಲ ಒಂದಿನ ಕೆಲ್ಸಕ್ಕೆ ಸೇರ್ಕಳ್ಳಕಾ. ಓದೋಕ್ ಮುಂಚೆನೇ ವರ್ಷಕ್ಕೆ ಇಷ್ಟ್ ಲಕ್ಷ ಕೊಡೋ ಕಂಪ್ನಿ ಮೇಲೆ ಕಣ್ ಮಡಗಿ ಅಗ್ರಿಗೇಟು ಸಂಪಾದ್ಸೋದು, ನಾವ್ ಬದುಕಿರೋದೇ ಆ ಕಂಪ್ನಿನೀನ ಅದ್ರ ಯಜಮಾನ್ನ ಉದ್ಧಾರ ಮಾಡೋಕೆ ಅಂದ್ಕಂಡು ನಲಿಯೋದು. ಅಮೇರಿಕಾದ ಕಂಪ್ನಿ ಆದ್ರಂತೂ engineering ಮೊದ್ಲ ದಿನದಿಂದ್ಲೇ ಕಾವೇರಿ ನದಿಗೆ ಥೇಮ್ಸ್ ನದಿ ಸ್ಮೆಲ್ಲು ಬರ್ತಿದೆ ಅಂತ imagine ಮಾಡ್ಕಳದು, ಕನ್ನಡ ಪೇಪರ್ ಕಂಡ್ರೆ ಮೈಲಿಗೆಯಾದವ್ರ ಹಾಗೆ ಮುಖ ಸಿಂಡರಿಸಿಕೊಳ್ಳೋದು, ಹಳ್ಳಿಯೋವ್ರು, ಆರ್ಡಿನರಿ ಬಟ್ಟೆ ಹಾಕ್ಕಂಡಿರೋರು ಕಂಡ್ರೆ ಸಿಲ್ಲಿಯಾಗಿ ನೋಡದು, ಉಪ್ಪಿಟ್ಟು, ಚಿತ್ರನ್ನ, ಅವಲಕ್ಕಿ, ಚಪಾತಿ, ರೊಟ್ಟಿನೆಲ್ಲ ಮ್ಯೂಸಿಯಂ ಶೋ ಪೀಸ್ ಕಂಡಂಗೆ ಕಾಣೋದು, ಪಿಜ್ಜಾ, ಬರ್ಗರು, ಬ್ರೆಡ್ಡು ಜಾಮು ಅಂತ ಜಪ ಮಾಡದು, ಐಪಾಡಲ್ಲಿ ಅಪ್ಪಿ ತಪ್ಪಿನೂ ಸಿ.ಅಶ್ವತ್ ಹಾಡಿದ ಭಾವಗೀತೆ ಕೇಳ್ಬಾರ್ದು, ಅದ್ಯಾವನೋ ಅಲ್ಲಿ ಅಮೆರಿಕಾದಲ್ಲಿ ತಂತಿ ಹರಿದುಹೋಗೊ ಅಂಗೆ ಗಿಟಾರ್ ಕೆರೆದ್ರೆ ಅದ್ನೇ ಭಕ್ತಿಗೀತೆಯಂಗೆ ಕೇಳಿ ಪಾವನರಾಗ್ತಾರೆ. ಅಮೇರಿಕಾಗೆ ಹೋಗೋ ಕನಸ್ ಕಾಣ್ತಾ ಇಲ್ಲೇ ಅಮೇರಿಕನ್ ಆಗಿ ಹೋಗ್ತಾರೆ.

ಅದು ಹಾಳಾಗ್ ಹೋಗ್ಲಿ, ಓದ್ನಾದ್ರೂ ನೆಟ್ಟಗೆ ಮಾಡ್ತೀವಾ? ಹಿಂದೆ ನಮ್ ಗುರುಕುಲಗಳಲ್ಲಿ ವಿದ್ಯಾಭ್ಯಾಸ ಮುಗಿದ್ ಮೇಲೆ ಗುರುಗಳು ಶಿಷ್ಯನ್ನ ಕರೆದು, ‘ಮಗು ನಾನ್ ಕಲಿತಿರೋದ್ನೆಲ್ಲಾ ನಿಂಗೆ ಧಾರೆಯೆರ್ದಿದೀನಿ. ನಂಗೆ ತಿಳ್ದಿರೋದೇ ಇಷ್ಟು. ಇನ್ನು ಹೆಚ್ಚಿಂದು ಬೇಕಂದ್ರೆ ಇಂಥವ್ರ ಹತ್ರ ಹೋಗ್ ಕಲಿ. ಸಾಕನ್ನಿಸಿದ್ರೆ ನಿನ್ ವಿದ್ಯೆ ಸಮಾಜಕ್ಕೆ ಉಪಯೋಗ ಹಾಗಂಗೆ ಬದುಕು. ಒಳ್ಳೇದ್ ಮಾಡು’ ಅಂತ ಹರಸ್ತಾ ಇದ್ರು. ಇಂಥ ಗುರುಕುಲ ಇರೋದು ನಮ್ ಮಕ್ಳನ್ನ  ಉದ್ಧಾರ ಮಾಡಕ್ಕೆ ಅದ್ಕಂಡು ರಾಜ್ರು ಕಣ್ಮುಚ್ಕಂಡು ಸೌಲಭ್ಯ ಕೊಡೋರು, ಊರ ಜನ ಅಕ್ಕಿ ಬೇಳೆ ಕಳ್ಸೋರು. ಗುರುಗಳು ತಮ್ ಹೊಟ್ಟೆ ಬಟ್ಟೆಗೆಷ್ಟ್ ಬೇಕೋ ಅಷ್ಟು ತಕ್ಕೊಂಡು ಶಿಷ್ಯರ್ನ ತಯಾರ್ ಮಾಡೋರು.

ಈಗೇನಾಗಿದೆ? ಗುರು ಅವ್ರಪ್ಪಂದು ಲಕ್ಷ ಲಕ್ಷ ಕೊಟ್ಟು ಓದಿರ್ತಾನೆ. ಒಂದ್ಸಲ ಡಿಗ್ರಿ ಕೈಗ್ ಸಿಕ್ಮೇಲೆ ಅದ್ನ ಝೆರಾಕ್ಸ್ ಮಶೀನಲ್ಲಿ ಹಾಕಿ ನೂರು ಸಾವಿರ ಕಾಪಿ ತೆಗೆದಂಗೆ ನೋಟು ಸಂಪಾದಿಸೋಕೆ ನಿಲ್ತಾನೆ. ಒಂದ್ ಕಾಲೇಜಲ್ಲಿ ಸಾಕಾಗಿಲ್ಲ ಅಂತ ಎರಡು ಮೂರಕ್ಕೆ guest faculty ಆಗಿ ಹೋಗ್ತಾನೆ, ಅದೂ ಸಾಲಲ್ಲ ಅಂದ್ರೆ ಮನೇಲೆ ಅಂಗಡಿ ತೆಕ್ಕೋತಾನೆ. ಶಿಷ್ಯಂಗೆ ವಿದ್ಯೆ ಧಾರೆಯೆರೆಯೋ ಬದ್ಲಿಗೆ ಅವ್ನ ದುಡ್ಡಿ ಕಿತ್ಕಂಡು ತನ್ನತ್ರ ಇರೋ ಅಂಥದ್ದೊಂದು ಸರ್ಟಿಫಿಕೇಟು ಸಿಕ್ಕೋ ಹಂಗೆ ಮಾಡ್ತಾನೆ. ‘ತಗಾ, ಇದ್ನ ಮಡಗ್ಕಂಡು ನೀನೂ ಸುಲಿಯೋಕೆ ನಿಂತ್ಕೋ’ ಅಂತ ಹುರಿದುಂಬಿಸ್ತಾನೆ. ಯಾರ್ ಹೆಚ್ ದುಡ್ ಕೊಡ್ತಾರೊ ಅಂಥವ್ರ ಪಾದಕ್ಕೆ ಅಡ್ ಬೀಳು ಅಂತ ಉಪದೇಶ ಮಾಡ್ತಾನೆ. ಎಲ್ಲಿಂದ ಎಲ್ಲೀಗ್ ಬಂದ್ವಿ ಶಿವಾ?

ನಮ್ daily lifeನಾಗೆ, ನಮ್ ಕನಸು, ಆದರ್ಶ, ಗುರಿಗಳೊಳ್ಗೆ ಈ ದುಡ್ಡು ಅನ್ನೋದು ಅದ್ಯಾವಾಗ ಬಂದ್ ಸೇರ್ತೋ ಗೊತ್ತಿಲ್ಲ. ‘ನೀ ಬದುಕಿರೋದು ಉಣ್ಣಕ್ಕಲ್ಲ, ಉಣ್ಣೋದು ಬದುಕೋದಕ್ಕೆ’ ಅಂತಂದ ದೊಡ್ ಮನುಷ್ಯನ ಈ ದೊಡ್ ಮಾತನ್ನ ಮರ್ತು ನಾವು ಬದ್ಕಿರೋದೇ ದುಡ್ ದುಡಿಯೋಕೆ, ನಂಗೆ ಸಾಕಾಗಿ ಮಿಕ್ಕೊವಷ್ಟು ಮಾತ್ರ ಅಲ್ಲ ನಮ್ ಮೊಮ್ಮಕ್ಕಳು ಮರಿಮಕ್ಕಳು ತಿಂದು ಕೊಬ್ಬೋವರ್ಗೆ ಅಂತ ಯೋಚ್ನೆ ಮಾಡಕೆ ಶುರು ಮಾಡಿದ್ವಲ್ಲ, ನಾವು ವಿದ್ಯಾವಂತ್ರು ಅಂದ್ರೆ ಆ ಸರಸ್ವತಿ ವೀಣೆ ತಗೊಂಡು ಬಾರ್ಸಲ್ವಾ? ಸ್ವಲ್ಪ್ ಯೋಚ್ನೆ ಮಾಡ್ರಿ…

ಇಂತಿ,
ನಿಮ್ ಪ್ರೀತಿಯ ಹುಡ್ಗ
ಮಚೆಂಪು

2 Responses to "ಮಚೆಂಪು ಕಾಲಂ: ನಮ್ ದುಡ್ನಾಸೆ ಅತಿಯಾಯ್ತಲ್ವಾ?"

ಒಳ್ಳೆ ಬರಹ, ಆದ್ರೆ ಸ್ವಲ್ಪ ಓವರ್ ಆಯ್ತು ಗುರು! 🙂

ಅಂದಹಾಗೆ ಥೇಮ್ಸ್ ನದಿ ಇರೋದು ಅಮೆರಿಕಾದಲ್ಲಲ್ಲ, ವಾಸ್ನೆ ಬರೋಕೆ ನಮ್ಮ ಕಾವೇರಿ ನದಿ ಥೇಮ್ಸ್‌ ನದಿಯಷ್ಟು ಕೊಳಕಾಗೂ ಇಲ್ಲ!!

(ಮಚೆಂಪುರ ಉತ್ತರ)

ಥ್ಯಾಂಕ್ಸ್.

ನಮ್ಮನಿಮ್ಮಂತೋರಿಗೆ ಲೈಟ್ ಆಗಿ ಹೇಳಿದ್ರೆ ಆಗುತ್ತೆ, ಆದ್ರೆ ಕೆಲವ್ರಿಗೆ ಓವರ್ ಡೋಸೇ ಬೇಕಾಗುತ್ತೆ ಗುರು.

ನಮ್ ಮೆಟಫರುಗಳ ಮಫ್ಲರು ಕಿತ್ತು ಬಿಸಾಕಿ ಹಿಂಗೆ ಬೆತ್ತಲೆ ಮಾಡುವುದು ಅಪರಾಧ! ಥೇಮ್ಸು, ಕಾವೇರಿ, ಅಮೇರಿಕ, ಯುಕೆ, ವಾಸನೆ ಇವೆಲ್ಲ ಮೆಟಫರುಗಳು ಅಷ್ಟೇ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 69,005 hits
ಮೇ 2009
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031
%d bloggers like this: