ಕಲರವ

ಪ್ರೀತಿಯ ಹಚ್ಚಿಕೊಂಡಿರೋ ಹುಚ್ಚು ಹುಡುಗರಿಗೆ

Posted on: ಮೇ 16, 2009

– ಶ್ರೀಕಾಂತ್.ಎನ್.ಎಸ್, ಬೆಂಗಳೂರು

ನಮ್ಮ ನಡುವಿನ, ಈಗಿನ ಹೆಣ್ಣು ಮಕ್ಕಳ ನೆನೆದರೆ ಕಣ್ಣ ಮುಂದೆ ಬರುವುದು ಜೀನ್ಸು, ಹೈ ಹೀಲ್ಸು, ಬಳುಕುವ ನಡಿಗೆ. ಇದೆಲ್ಲದರ ಸಂಗಮವೇ, ಹುಡುಗರ ಹರಿದಿರೋ ಜೇಬು! ಒಬ್ಬ ಹುಡುಗಿ ಬಂದು ತನ್ನನ್ನು ಮಾತಾಡಿಸುತ್ತಿದ್ದಂತೆಯೇ ಹುಡುಗರಿಗೆ ಎಲ್ಲಿಲ್ಲದ ರೋಮಾಂಚನ, ಆನಂದ. ತಮ್ಮದೇ ಆದ ಲೋಕಕ್ಕೆ ಹೋಗಿಬಿಡುತ್ತಾರೆ. ಅದೇ ಗುಂಗಿನಲ್ಲಿ ಒಂದಿಷ್ಟು ಪ್ರೇಮಕಥೆಗಳು ಅವರ ಮನಸ್ಸಿನಲ್ಲಿ ಹಾದುಹೋಗುತ್ತವೆ. ಹೀಗೆ ಪ್ರೀತಿ ಅಪ್ಪಳಿಸಿದ ನಾವೆಯಾಗಿ ಅವರು ತಮ್ಮ ಸ್ವಂತಿಕೆಯನ್ನು ಮರೆಯುತ್ತಾ ಅವನತಿಯ ಹಾದಿಯನ್ನು ಹಿಡಿಯುತ್ತಾರೆ. ಇಷ್ಟೆಲ್ಲಾ ಪ್ರೀತಿ ತುಂಬಿದ ಹುಡುಗಾಟದ ಹುಡುಗರ ಮನಸ್ಸಿನ ಚೀತ್ಕಾರಕ್ಕೆ ವರವಾಗಿ ಸಿಗುವುದು, ಹುಡುಗಿಯಿಂದ ಪಾತಾಳಕ್ಕೆ ಹೆದ್ದಾರಿ, ಅವರಿವರಿಂದ ಛೀಮಾರಿ!

ಹುಡುಗಿ ಹುಡುಗನ ಹಿಂದೆ ಹೋದ್ರೆ,
ಅವಳು ಅವನ ಅತಿಥಿ,
ಹುಡುಗ ಹುಡುಗಿ ಹಿಂದೆ ಹೋದ್ರೆ
ಅವತ್ತೇ ಅವನ ತಿಥಿ.

sad

ಹೀಗೆ ತನ್ನವರ ಒಡಲಿಂದ, ಪ್ರೀತಿಯ ಕಡಲಿಗೆ ಜಾರಿ, ತನ್ನವರ ಮರೆತು ತನ್ನವಳಲ್ಲದ ಹುಡುಗಿಗೆ ತನ್ನದೆಲ್ಲವನ್ನೂ ನೀಡಿ, ಅವಳ ಪ್ರೀತಿಯ ಪಡೆಯಲು ತನ್ನ ಪ್ರಾಣದ ಎಡೆಯಿಟ್ಟು ಜೀವಮಾನವಿಡೀ ಕಾಯುತ್ತಾ ಕೂರುತ್ತಾನೆ. ನೈವೇದ್ಯವಾದರೂ ವರ ನೀಡದ ದೇವರ ಹಾಗೆ, ಇಷ್ಟೆಲ್ಲಾ ನೀಡಿದ ಹುಡುಗರಿಗೆ ಒಂದು ಹನಿ ಪ್ರೀತಿಯೂ ನೀಡದೆ, ಕ್ಯೂಸೆಕ್ಸ್ ಗಟ್ಟಲೆ ಕಣ್ಣೀರ ನೀಡಿ, ಅದರಲ್ಲೇ ಅವರನ್ನು ಮುಳುಗಿಸಿ, ತಮ್ಮ ಮನಸ್ಸಿಂದ ಹುಡುಗರನ್ನು ತೊಳೆದುಕೊಂಡು, ಅವರ ಕಣ್ಣೀರ ಜಲಪಾತಕ್ಕೆ ಒಂದು ಅಣೆ ಕಟ್ಟನ್ನು ಕಟ್ಟದೆ ಹೊರಟು ಹೋಗುತ್ತಾಳೆ. ಆದರೆ ಮುಳುಗಿರುವ ಹುಡುಗರು, ಏಳುವುದರಲ್ಲೇ ತಮ್ಮ ಅಂತ್ಯ ಕಾಣುತ್ತಾರೆ.

ಬಳಿ ಬಂದೆ ನೀನು ಕರೆಯದೆ,
ಆಮಂತ್ರಣ ನೀಡಲಿ ನಾನು ಯಾರಿಗೆ?
ದೂರಾದೆ ನೀನು ಹೇಳದೆ
ದೂರು ನೀಡಲಿ ನಾನು ಯಾರಿಗೆ?

ಪ್ರೀತಿಗೆ ಬೇಕಿರುವುದು ಎರಡು ನಿಷ್ಕಲ್ಮಶ, ಸಮಾನ ಭಾವನೆಗಳುಳ್ಳ ಮನಸ್ಸು. ಪ್ರೀತಿ ನೀಡುವ ಮನಸ್ಸಿಗೆ ಪ್ರತಿಯಾಗಿ ಪ್ರೀತಿ ದೊರಕದಿದ್ದರೆ ಅದು ಪ್ರೀತಿ ನೀಡಬೇಕಾದರೂ ಯಾರಿಗೆ, ಏತಕ್ಕೆ? ಹುಡುಗಿಯರ ಮನಸ್ಸು ಸೂಕ್ಷ್ಮ ಎನ್ನುತ್ತಾರೆ, ಆದರೆ ಕನ್ನಡಕ ಹಾಕಿ ಹುಡುಕಿದರೂ ಕಿಂಚಿತ್ತು ಪ್ರೀತಿಯ ಕುರುಹು ಸಿಗುವುದಿಲ್ಲ. ಸಿಕ್ಕರೆ, ಅದು ಕೇವಲ ತಮಗಾಗಿ ಮಡಿದವರ ಅಸ್ಥಿಪಂಜರ. ಅದರ ಮೇಲೆ ಹುಡುಗಿಯರ ನಿತ್ಯದ ಮೆರವಣಿಗೆ, ಉತ್ಸವ ಎಲ್ಲಾ.
ಮೈ ಡಿಯರ್ ಗಯ್ಸ್, ನಿಮ್ಮ ಪ್ರೀತಿಗೆ ಸ್ಪಂದಿಸಿ ನಿಮ್ಮ ಮನಸ್ಸಿನ ತುಡಿತವನ್ನು ಅರಿತು ಬರುವ ಹುಡುಗಿಯರು ಬೆಳದಿಂಗಳ ಹುಣ್ಣಿಮೆಯಂತೆ, ತುಂಬಾ ಅಪರೂಪ. ಆದರೆ ಅವಸರ ಪಡುವ ನೀವುಗಳು, ಅಮವಾಸ್ಯೆಯ ದಿನವೇ ಹುಡುಗಿಯ ಹಿಂದೆ ಹೋಗಿ, ನಿಮ್ಮ ಬದುಕನ್ನು ಮುಂದೆಂದೂ ಬೆಳಕು ಕಾಣದ ಕತ್ತಲಿಗೆ ದೂಡುತ್ತೀರ. ಈ ರೀತಿ ನಮ್ಮ ಉಜ್ವಲವಾದ ಬದುಕಿಗೆ ಕತ್ತಲಿನ ಕೂಪದ ದಾರಿ ತೋರುವ ಪ್ರೀತಿ ನಮಗೆ ಬೇಕೆ? ನಮ್ಮತನವ ಮಾರಿಕೊಂಡು, ನಮ್ಮ ಮನಸ್ಸಿಗೆ ಮಾರಿಯಾಗಿ ಕಾಡುವ ನಾರಿಯರು ಬೇಕೆ?

ಅಂಧಕಾರದ ದಾರಿ ಹಿಡಿಯುತ್ತಿರುವ ನಿಮ್ಮ ಮನಸ್ಸನ್ನು ಸರಿಯಾದ ದಾರಿಯೆಡೆಗೆ ಕರೆದೊಯ್ದು, ನಿಮ್ಮ ಬಾಳಿಗೆ ಒಂದು ರೂಪವ ಕೊಟ್ಟು ಹುಡುಗಿಯರ ಶಾಪ ತಟ್ಟದಂತೆ ಕಾಪಾಡಿಕೊಳ್ಳಿ.

ನಿಮ್ಮ ಬಾಳು ಮಿನುಗುವ ನಕ್ಷತ್ರವಾಗಲಿ, ಸದಾ ವಿಜಯದ ಪಾಂಚಜನ್ಯ ಮೊಳಗಲಿ, ನಿಮ್ಮ ಮನಸ್ಸನ್ನು, ನಿಮ್ಮ ವಯಸ್ಸಿಗೆ ಮಾರಿಕೊಳ್ಳದೆ, ಸಂತೋಷದ ಹಾದಿ ಹಿಡಿದು ಸಂತೃಪ್ತಿಯನ್ನು ಪಡೆಯಿರಿ.

4 Responses to "ಪ್ರೀತಿಯ ಹಚ್ಚಿಕೊಂಡಿರೋ ಹುಚ್ಚು ಹುಡುಗರಿಗೆ"

ಬರೀ ಒಂದೇ ಕಣ್ಣು ಬಿಟ್ಟು ನೋಡ್ತಿದೀರಲ್ಲ ಸರ್, ಎರಡೂ ಕಣ್ಣು ಬಿಟ್ ನೋಡಿ, ಹುಡುಗರಿಂದ ಮೋಸ ಹೋದ ಹೆಣ್ಣು ಜೀವಗಳು ಕಣ್ಣಿಗೆ ಬಿದ್ದೀತು. ಅಂದ ಹಾಗೆ ಸಾಧ್ಯವಾದರೆ ನಿಮ್ಮ ಮದುವೆಗೆ ನನ್ನನ್ನು ಕರೆಯಿರಿ, ನಿಮ್ಮ ಹೆಂಡ್ತೀಗೆ ಈ ಲೇಖನವನ್ನು ಪ್ರೆಸೆಂಟ್ ಮಾಡ್ತೀನಿ, >>ಅಂಧಕಾರದ ದಾರಿ ಹಿಡಿಯುತ್ತಿರುವ ನಿಮ್ಮ ಮನಸ್ಸನ್ನು ಸರಿಯಾದ ದಾರಿಯೆಡೆಗೆ ಕರೆದೊಯ್ದು, ನಿಮ್ಮ ಬಾಳಿಗೆ ಒಂದು ರೂಪವ ಕೊಟ್ಟು>> ಬಹುಶಃ ಆಕೆಗೆ ಈ ಕೆಲಸ ಮಾಡಲು ಅನುಕೂಲವಾದೀತು! 😉

Be calm……..
but one thing “girls are alwayas selfish”
Bcoz when she maiden should fear for parents
once she married should fear for husband
even she in old age shold fear for children
its our culture
these critairies make her becomes a “selfish”

ನಿಮ್ಮ ಮಾತು ಸತ್ಯ ಚೆನ್ನಾಗಿ ಬರೆದಿದ್ದೀರಿ….
ನೀವು ಹುಡಿಗಿಯರ ಸ್ವಾರ್ಥಕ್ಕೆ ಬಲಿಯಾಗುವ ಹುಡುಗರ ಭವಿಷ್ಯವನ್ನು ನೋಡುವ ರೀತಿ ಬಹುವಾಗಿ ಮೆಚ್ಚುತ್ತೆ…..ಬರಿ ಸ್ವಾರ್ಥವೇ ತು೦ಬಿರುವ ಪ್ರಪ೦ಚಕ್ಕೆ ಒಂದು ಅರ್ಥಪೂರ್ಣ ಬರಹ..

sir, hudugiyar bagge swalp yochane madi?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 67,741 hits
ಮೇ 2009
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031

Top Clicks

  • ಯಾವುದೂ ಇಲ್ಲ
%d bloggers like this: