Archive for ಏಪ್ರಿಲ್ 2009
ಝೆನ್ ಕಥೆಗಳು
Posted ಏಪ್ರಿಲ್ 4, 2009
on:ಪ್ರೀತಿ
ಝೆನ್ ಗುರು ಸುಜುಕಿ ರೋಶಿಯ ಬಳಿ ಯುವತಿಯೊಬ್ಬಳು ಬಂದಳು. ಅವರೆಡೆಗೆ ತನ್ನಲ್ಲಿರುವ ಪ್ರೀತಿಯನ್ನು ನಿವೇದಿಸಿಕೊಂಡಳು. ಇದರಿಂದಾಗಿ ತಾನು ವಿಪರೀತವಾದ ಗೊಂದಲಕ್ಕೆ ಒಳಗಾಗಿರುವುದಾಗಿ ತಿಳಿಸಿದಳು.
“ಚಿಂತಿಸಬೇಡ”, ಸುಜುಕಿ ಹೇಳಿದರು “ನಿನ್ನ ಗುರುವಿನೆಡೆಗೆ ಯಾವ ಭಾವನೆಯನ್ನಾದರೂ ನೀನು ಇಟ್ಟುಕೊಳ್ಳಲು ಅವಕಾಶವಿದೆ. ಅದು ಒಳ್ಳೆಯದು. ಇಬ್ಬರಿಗೂ ಬೇಕಾದ ಸಂಯಮ ನನ್ನಲ್ಲಿದೆ.”
ಟೀ ಪಾತ್ರೆ
ಶಿಷ್ಯನೊಬ್ಬ ಗುರು ಸುಜುಕಿ ರೋಶಿಯನ್ನು ಕೇಳಿದ: “ಜಪಾನಿನಲ್ಲಿ ಟೀಪಾತ್ರೆಗಳನ್ನು ಅಷ್ಟು ನಾಜೂಕಾಗಿ ಏಕೆ ತಯಾರಿಸುತ್ತಾರೆ? ಅವು ಸುಲಭವಾಗಿ ಮುರಿದು ಹೋಗುತ್ತವೆ.”
ಸುಜುಕಿ ಹೇಳಿದರು: “ಅವು ನಾಜೂಕಾಗಿಯೇನು ಇರುವುದಿಲ್ಲ. ಅವುಗಳನ್ನು ಹೇಗೆ ಬಳಸಬೇಕು ಎನ್ನುವುದು ನಿನಗೆ ತಿಳಿದಿಲ್ಲ. ನೀನು ಪರಿಸರಕ್ಕೆ ಹೊಂದಿಕೊಳ್ಳಬೇಕು, ಪರಿಸರವನ್ನು ನಿನಗೆ ಹೊಂದಿಸಿಕೊಳ್ಳಬಾರದು.”
ಸಿದ್ಧತೆ
ಪೂರ್ವ ಕರಾವಳಿಯಲ್ಲಿನ ಕೇಂಬ್ರಿಜ್ ಬುದ್ಧಿಸ್ಟ್ ಸೊಸೈಟಿಯ ಕೂಟಕ್ಕೆಂದು ಸುಜುಕಿ ರೋಶಿ ಆಗಮಿಸಿದ್ದರು. ಅವರು ಕೂಟದ ಸ್ಥಳಕ್ಕೆ ಆಗಮಿಸಿದಾಗ ಪ್ರತಿಯೊಬ್ಬರೂ ಸಭಾಂಗಣವನ್ನು ತೊಳೆದು ಸ್ವಚ್ಛಗೊಳಿಸುವುದರಲ್ಲಿ ನಿರತರಾಗಿದ್ದರು. ತಾವು ಬರುತ್ತೇವೆ ಎಂದು ಹೇಳಿದ್ದಕ್ಕಿಂತ ಒಂದು ದಿನ ಮುಂಚಿತವಾಗಿ ಬಂದ ರೋಶಿಯವರನ್ನು ಕಂಡು ಎಲ್ಲರೂ ದಿಗ್ರ್ಭಾಂತರಾಗಿದ್ದರು.
ಸುಜುಕಿ ರೋಶಿ ತಮ್ಮ ಉಡುಗೆಯ ತೋಳನ್ನು ಮೇಲೇರಿಸಿಕೊಂಡು “ನನ್ನ ಆಗಮನದ ಅಮೋಘ ದಿನಕ್ಕಾಗಿ” ಎಂದು ಹೇಳಿ ಅವರೊಂದಿಗೆ ಸೇರಿ ಸಭಾಂಗಣವನ್ನು ಸ್ವಚ್ಚಗೊಳಿಸುವುದಕ್ಕೆ ಮುಂದಾದರು.
ಇತ್ತೀಚಿನ ಟಿಪ್ಪಣಿಗಳು