ಕಲರವ

ಕಡೆಯ ವಿದಾಯ

Posted on: ಮಾರ್ಚ್ 31, 2009

‘ಇನ್ನು ಸಾಧ್ಯವಾಗುವುದಿಲ್ಲ’ ಎನ್ನುವ ಷರಾದೊಂದಿಗೆ ನಾನು ನನ್ನ ಮತ್ತೊಂದು ಹುಂಬತನವನ್ನು ಕೊನೆಗಾಣಿಸಬೇಕಿದೆ.

ಸುಮಾರು ಎರಡು ವರ್ಷಗಳಿಂದ ಕುಂಟುತ್ತಲೋ, ತೆವಳುತ್ತಲೋ ನಡೆಯುತ್ತಿದ್ದ ನಮ್ಮ ಪತ್ರಿಕೆಯನ್ನು ಅಧಿಕೃತವಾಗಿ ಮುಚ್ಚುವ ಸಮಯ ಬಂದಾಗಿದೆ. ಇಷ್ಟು ದಿನ ನಾನಾ ಕಷ್ಟಗಳು, ತಾಪತ್ರಯಗಳ ನಡುವೆ ಹೇಗೋ ‘ಸಡಗರ’ವನ್ನು ನಡೆಸಿಕೊಂಡು ಬರುತ್ತಿದ್ದೆವು. ಆದರೆ ಈಗ ನಾವು ಡೆಡ್ ಎಂಡ್ ತಲುಪಿದ್ದೇವೆ. ಎಲ್ಲಾ ವಿಧದಲ್ಲೂ ಹೈರಾಣಾಗಿದ್ದೇವೆ. ಆರ್ಥಿಕವಾಗಿ ಕುಗ್ಗಿಹೋಗಿದ್ದೇವೆ, ಉತ್ಸಾಹವೂ ಬತ್ತಿ ಹೋಗಿದೆ. ಈ ಸಂದರ್ಭದಲ್ಲಿ ನಮ್ಮ ಕನಸಿನ ಸಮಾಧಿಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸುವುದೊಂದೇ ಬಾಕಿ ಉಳಿದಿರುವುದು. ಈಗದನ್ನು ಮಾಡುತ್ತಿರುವೆ.

ಝೆರಾಕ್ಸಿನಿಂದ ಶುರುವಾಗಿ ಸಾವಿರ ಪ್ರತಿ ಪ್ರಸಾರದ ಪತ್ರಿಕೆಯಾಗಿ ಬೆಳೆದ ‘ಸಡಗರ’ ಈ ಚಿಕ್ಕ ಸಾಧನೆಗೆ ಕಾರಣಕರ್ತರಾದ ನಮ್ಮ ಓದುಗರನ್ನು ನಾವು ಅಭಿನಂದಿಸುತ್ತೇವೆ. ಇಷ್ಟು ದಿನ ನಮಗೆ ಅಕಾರಣ ಪ್ರೀತಿ ತೋರಿದ ಎಲ್ಲಾ ಚಂದಾದಾರರಿಗೂ, ಪ್ರಿಯ ಓದುಗರಿಗೂ ನಮ್ಮ ನಮನ.

ಇನ್ನು ನನ್ನ ಈ ಕನಸನ್ನು ತಮ್ಮ ಕೂಸೆಂದು ಭಾವಿಸಿ ಸಾಕಿ ಸಲುಹಿದ ನನ್ನ ಗೆಳೆಯರ ಬಳಗಕ್ಕೆ ನಾನು ಚಿರಋಣಿಯಾಗಿರುವೆ. ಅವರ ಬೆಂಬಲ, ನಿರಂತರ ಪ್ರೋತ್ಸಾಹ ಇರದಿದ್ದರೆ ನನ್ನ ಈ ಪತ್ರಿಕೆಯ ಕನಸು ನನ್ನ ಇತರೆ ನೂರಾರು ಕನಸುಗಳಂತೆ ಕತ್ತಲೆಯ ಲೋಕದ ದಾರಿ ಹಿಡಿಯುತ್ತಿದ್ದವು. ಈ ಪತ್ರಿಕೆಯ ಅಭಿವೃದ್ಧಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನೆರವಾದ ಎಲ್ಲಾ ಗೆಳೆಯರಿಗೂ ನಾನು ಮನಸಾ ವಂದಿಸುವೆ.

ಪತ್ರಿಕೆಯ ಬ್ಲಾಗಿನ ಓದುಗರಾದ  ನಿಮ್ಮನ್ನು ಮರೆಯಲಾದೀತೇ? ನಿಮಗೂ ನಮ್ಮ ತಂಡದ ಪರವಾಗಿ ಕೃತಜ್ಞತೆಗಳು.

ಇನ್ನು ಮುಂದೆ ಈ ಬ್ಲಾಗಿನಲ್ಲಿ ಯಾವ ಬರಹಗಳೂ ಪ್ರಕಟವಾಗುವುದಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. ನಿಮ್ಮ ಬೆಂಬಲ, ಸ್ನೇಹ, ಪ್ರೋತ್ಸಾಹಕ್ಕೆ ವಂದನೆಗಳು.

ಇಂತಿ,
ನಿಮ್ಮ ವಿಶ್ವಾಸಿ
ಸುಪ್ರೀತ್.ಕೆ.ಎಸ್
(ಸಂಪಾದಕ)
‘ಸಡಗರ’ ಮಾಸಪತ್ರಿಕೆ

7 Responses to "ಕಡೆಯ ವಿದಾಯ"

ಯಾಕ್ ದೊರೇ ಹಿಂಗ್ ಮಾಡ್ಬಿಟ್ಟೇ? ಅಥ್ವಾ ಇದೂನೂ ’ನಾನು ಆಸ್ತಿಕನಾದದ್ದು ಹೇಗೆ?’ ಥರ ಏಪ್ರಿಲ್ ಫೂಲಾ?

ಸುಪ್,

ಇದು ಏಪ್ರಿಲ್ ಫೂಲ್ ತಾನೆ?
– ಚೇತನಾ

ಸುಪ್ರೀತ್,

ಬೆಟ್ಟದಷ್ಟು ಮಾಡುವ ನಿರೀಕ್ಷೆ ಇಟ್ಕೊಂಡಿದ್ದೆ. ಹೀಗೆ ಬುಲ್ಡೋಜರ್ ಹರಿಸಿದ್ರೆ ಹೇಗೆ?

ಸರ್‍,

ನಾನು ಮೊನ್ನೆ ದಿನ ತಾನೇ ಈ ಪುಟಕ್ಕೆ ಭೇಟಿಕೊಟ್ಟಿದ್ದೆ. ಆಗ ಸಡಗರವನ್ನು ಸಡಗರದಿಂದ ತರಿಸಿಕೊಂಡು ಓದುವ ಎಂಬುದಾಗಿಯೂ ಯೋಚಿಸಿದ್ದೆ. ತಕ್ಷಣಕ್ಕೆ ಈ-ಪತ್ರ ಕಳಿಸಲಾಗಲಿಲ್ಲ. ಈ ದಿನ ಕಳಿಸುವ ಎಂದು ನೋಡಿದರೆ `ಅಲ್ಲಿ’ ಇದ್ದಬದ್ದ ಸಡಗರವೆಲ್ಲ ಸದ್ದಿಲ್ಲದೇ ವಿದಾಯ ಹೇಳುತ್ತಿದೆ ಎನಿಸಿ ಬೇಸರವಾಯಿತು.

ಏನೇ ಆಗಲೀ ಇಷ್ಟೆಲ್ಲಾ ಸಾಧಿಸಿದ್ದನ್ನು ಮತ್ತೊಮ್ಮೆ ಸಾಧ್ಯ ಮಾಡಿ ಪತ್ರಿಕೆಯನ್ನು ಮುಂದುವರೆಸಿ.

ಧನ್ಯವಾದಗಳು.

ಚಂದ್ರಶೇಖರರೇ,
ಚಿಂತಿಸ ಬೇಡಿ ಸಡಗರವನ್ನು ಅಂತರ್ಜಾಲ ಪತ್ರಿಕೆಯಾಗಿ ಮುಂದುವರೆಸುವ ಆಲೋಚನೆಯಲ್ಲಿದ್ದೇವೆ.

This is really sad. I had just got to know about your writings and about ‘SADAGARA’. I appreciated you guys’ efforts and liked the articles in ‘SADAGARA’. Unfortunate, you are ending it here…

I wish its a april fool prank. However, if its true, i wish you good luck to sort out all your hurdles at the earliest, so that we get to read you soon!!

We are planning to continue the magazine but not in printed form. We are thinking about publishing it online only. Please be in touch.

regards
supreeth

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 69,005 hits
ಮಾರ್ಚ್ 2009
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 1
2345678
9101112131415
16171819202122
23242526272829
3031  
%d bloggers like this: