Archive for ಫೆಬ್ರವರಿ 2009
ನಮ್ಮ ಮುಂದಿರುವ ಕೆಲವು ಯೋಜನೆ
Posted ಫೆಬ್ರವರಿ 13, 2009
on:‘ಕಲರವ’ ಎಂಬ ಹೆಸರಿನಲ್ಲಿ ಝೆರಾಕ್ಸ್ ಪ್ರತಿಯಾಗಿ ಶುರುವಾದ ನಮ್ಮ ಪತ್ರಿಕೆ ಆಫ್ ಸೆಟ್ ಮುದ್ರಣ ಕಂಡು ಎ-ನಾಲ್ಕು ಸೈಜಿಗೆ ಭಡ್ತಿ ಪಡೆದು ಬೆಳೆದದ್ದು ಸುಂದರವಾದ ಫ್ಲಾಶ್‌ಬ್ಯಾಕಿನಂತೆ ಆಗಾಗ ನಮ್ಮ ಕಣ್ಣ ಮುಂದೆ ಸುಳಿದು ಹೋಗುತ್ತದೆ. ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಸಂಚಿಕೆಗಳನ್ನು ಪ್ರಕಟಿಸಿದ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳಲು ಸಹ ನಮಗೆ ಸಮಯವಾಗಿಲ್ಲ.
ಈ ವರ್ಷಕ್ಕೆ ಕೆಲವು ಹೊಸ ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡಬೇಕೆಂದಿದ್ದೇವೆ. ಅದರ ಮೊದಲ ಹಂತವಾಗಿ ಹಳೆಯ ಎಲ್ಲಾ ಸಂಚಿಕೆಗಳನ್ನು ಡಿಜಿಟಲೈಸ್ ಮಾಡುವುದು ನಮ್ಮ ಯೋಜನೆ. ಹಳೆಯ ಎಲ್ಲಾ ಸಂಚಿಕೆಗಳನ್ನು ಪಿಡಿಎಫ್ ಪ್ರತಿಯಾಗಿಸಿ ಅಂತರ್ಜಾಲದಲ್ಲಿ ಲಭ್ಯವಾಗಿಸುವುದು ನಮ್ಮ ಮುಂದಿರುವ ಕೆಲಸ. ಜೊತೆಗೆ ಇತ್ತೀಚಿನ ಸಂಚಿಕೆಗಳನ್ನು ಇಳಿಸಿಕೊಳ್ಳಲು ನೀಡಿದ್ದ ಕೊಂಡಿಗಳು ಕೆಲಸ ಮಾಡುತ್ತಿಲ್ಲ ಎಂಬ ಕಂಪ್ಲೆಂಟುಗಳಿವೆ, ಅವನ್ನು ಸರಿ ಪಡಿಸಬೇಕು. ಇನ್ನು ಒಂದು ವಾರದಲ್ಲಿ ಅವನ್ನು ಮುಗಿಸುವ ವಿಶ್ವಾಸ ನಮಗಿದೆ.
ಜೊತೆಗೆ ಈ ತಿಂಗಳ ಸಂಚಿಕೆಯ ತಯಾರಿಯು ಭರದಿಂದ ಸಾಗಿದೆ. ಫೆಬ್ರವರಿ ಎಂಬ ಪುಟ್ಟ ತಿಂಗಳು ನೋಡು ನೋಡುವಷ್ಟರಲ್ಲೇ ಕಳೆದು ಹೋಗುತ್ತಿದೆ. ಎಲ್ಲರೂ ವ್ಯಾಲಂಟೈನ್ ದಿನ, ಪಬ್ಬು-ಮಬ್ಬಿನ ಗಲಾಟೆಯಲ್ಲಿ ಬ್ಯುಸಿಯಾಗಿದ್ದಾರೆ ನಾವು ಲವಲವಿಕೆಯ, ಹೊಸ ಗಾಳಿಯ ಸಂಚಿಕೆಯೊಂದನ್ನು ನಿಮ್ಮ ಮುಂದಿಡುವ ಕನಸು ಕಂಡಿದ್ದೇವೆ.
ಇತ್ತೀಚಿನ ಟಿಪ್ಪಣಿಗಳು