ಕಲರವ

ಚುರುಮುರಿ

Posted on: ಸೆಪ್ಟೆಂಬರ್ 20, 2008

ಸತ್ಯ!

ವಯಸ್ಸು ಇಪ್ಪತ್ತಾದಾಗ ಮನುಷ್ಯ ಬೇರೆಯವರು ತನ್ನ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂದು ಯೋಚಿಸುತ್ತಾನೆ.
ವಯಸ್ಸು ನಲವತ್ತಾದಾಗ ಮನುಷ್ಯ ಬೇರೆಯವರು ತನ್ನ ಬಗ್ಗೆ ಏನಾದರೂ ಯೋಚಿಸಿಕೊಳ್ಳಲಿ, ನನಗೇನು ಎಂದು ಭಾವಿಸುತ್ತಾನೆ.
ವಯಸ್ಸು ಅರವತ್ತಾದಾಗ ಆತ ಬೇರೆಯವರು ಅಸಲಿಗೆ ತನ್ನ ಬಗ್ಗೆ ಯೋಚಿಸುತ್ತಲೇ ಇರಲಿಲ್ಲ ಎಂಬುದನ್ನು ಕಂಡುಕೊಳ್ಳುತ್ತಾನೆ.

…………………………..

ಹುಟ್ಟಿದಾಗ ನಾವು ಅಳುತ್ತಿದ್ದೆವು ಉಳಿದವರೆಲ್ಲಾ ಸಂಭ್ರಮಿಸುತ್ತಿದ್ದರು. ನಾವು ಹೇಗೆ ಬದುಕಬೇಕೆಂದರೆ ಸಾಯುವಾಗ ನಾವು ಸಂಭ್ರಮಿಸಬೇಕು, ಉಳಿದವರೆಲ್ಲಾ ಅಳಬೇಕು.

…………………………..

ನೀವು ನನ್ನ ಹೆಂಡತಿಯಾಗಿದ್ರೆ!

ಚರ್ಚಿಲ್ ಅವರನ್ನು ಕುರಿತು ಲೇಡಿ ಆಸ್ಟರ್ ಹೇಳಿದ್ದು:
“ನಾನು ನಿಮ್ಮ ಹೆಂಡತಿಯಾಗಿದ್ದರೆ ನಿಮಗೆ ವಿಷ ಕೊಡುತ್ತಿದ್ದೆ!”
ಥಟ್ಟನೆ ಚರ್ಚಿಲ್ ಕೊಟ್ಟ ಉತ್ತರ, “ನಾನು ನಿಮ್ಮ ಗಂಡನಾಗಿದ್ದರೆ ಅದನ್ನು ಗಟಗಟನೇ ಕುಡಿದುಬಿಡುತ್ತಿದ್ದೆ.”

…………………………..

ಆರ್ಕುಟ್ಟಿನ ಅಂಗಳದಿಂದ ಹಾರಿಬಂದ ಅತಿ ಪುಟ್ಟ ಕತೆ:
“ಮೇನಕೆಯ ಶುಭ್ರಶ್ವೇತ ವಸ್ತ್ರಗಳು ಇನ್ನೂ ಮರದಬುಡದಲ್ಲೇ ಬಿದ್ದಿತ್ತು” ಅಷ್ಟು ಬೆಳ್ಳಗಿರುವ ಬಟ್ಟೆಗಳನ್ನು ತುಳಿದು ಹಾಳುಮಾಡುವ ಮನಸ್ಸಾಗದೇ ವಿಶ್ವಾಮಿತ್ರ ಮರದಿಂದ ಕೆಳಗಿಳಿಯಲೇ ಇಲ್ಲ.

…………………………..

ಓಹ್ ಹೌದಾ!

~ಜಪಾನ್ ದೇಶದ ಟೊಕಿಯೋದಿಂದ ಸುಮಾರು ಎಪ್ಪತ್ತು ಮೈಲು ಫೂರ್ವದಲ್ಲಿರುವ ಇಜೂಓಶಿಮಾ ಎಂಬ ದ್ವೀಪ ಹೆಸರುವಾಸಿ. ಯಾತಕ್ಕೆ ಅಂದಿರಾ? ಆತ್ಮಹತ್ಯೆಗೆ!
~ಚೀನಾದ ‘ಕಿವಾ’ ಜನಾಂಗದಲ್ಲಿ ಒಂದು ಸ್ವಾರಸ್ಯಕರವಾದ ಆಚರಣೆಯಿದೆ. ಹುಡುಗಿಗೆ ಹನ್ನೆರಡು  ವರ್ಷವಾದಾಗ ಆಕೆಯನ್ನು ಕೆರೆಯ ಹತ್ತಿರ ಕರೆದುಕೊಂಡು ಹೋಗಿ ಆಕೆಯ ನೆರಳಿಗೆ ಮದುವೆ   ಮಾಡುತ್ತಾರಂತೆ. ಇದರಿಂದಾಗಿ ಆಕೆಗೆ ನಿಜ ಮದುವೆಯಿಂದ ಸಂಕಷ್ಟಗಳು ಬರುವುದಿಲ್ಲ ಎಂಬ ನಂಬಿಕೆ!
~ ಜಪಾನಿಯರಲ್ಲಿ ಒಂದು ನಂಬಿಕೆಯಿದೆ: ಭೂಮಿಯ ಕೆಳಗೆ ಕ್ಯಾಟ್ ಫಿಶ್ ಅಲುಗಾಡುವುದರಿಂದ ಭೂಕಂಪ ಸಂಭವಿಸುತ್ತದೆ. ಕಾಶಿಮಾ ಎಂಬ ದೇವಮಾನವ ಆ ಕ್ಯಾಟ್ ಫಿಶ್ ಮಿಸುಕಾಡದ ಹಾಗೆ   ಹಿಡಿದುಕೊಂಡಿದ್ದಾನೆ.

…………………………..

ಹುಂಜವೂ ವಜ್ರದ ಹರಳೂ

ತನಗೂ ತನ್ನ ಕೋಳಿಗಳಿಗೂ     ಆಹಾರಕ್ಕಾಗಿ ತಿಪ್ಪೆ ಕೆದಕುತ್ತಿದ್ದ ಒಂದು ಹುಂಜಕ್ಕೆ ಒಂದು ವಜ್ರದ ಹರಳು ಸಿಕ್ಕಿತು. ಅದು ವಜ್ರದ ಹರಳಿಗೆ ಹೇಳಿತು:  “ನೀನು ನನ್ನ ಬದಲು ನನ್ನ ಯಜಮಾನನಿಗೆ ಸಿಕ್ಕಿದ್ದರೆ ಅವನು ನಿನ್ನನ್ನು ತನ್ನ ಮುಡಿಗೇರಿಸಿಕೊಂಡು ಮೆರೆಸುತ್ತಿದ್ದ. ಆದರೆ ನೀನು ನನಗೆ ಸಿಕ್ಕಿದೆ. ನಿನ್ನಿಂದ ನನಗೆ ಯಾವ ಉಪಯೋಗವೂ ಇಲ್ಲ. ನನಗೆ ಪ್ರಪಂಚದ ಎಲ್ಲ ಒಡವೆಗಳಿಗಿಂತ ಒಂದು ಕಾಳು ಬಾರ್ಲಿ ಸಿಕ್ಕಿದ್ದರೆ ಚೆನ್ನಾಗಿತ್ತು.”                (ಈಸೋಪನ ಕಥೆ)

…………………………..

ಚಾಣಾಕ್ಯ ಉವಾಚ

ಭಯ ನಿಮ್ಮನ್ನು ಸಮೀಪಿಸಿದರೆ ಆಕ್ರಮಣ ಮಾಡಿ ಅದನ್ನು ನಾಶ ಮಾಡಿಬಿಡಿ.

…………………………..

ನಾರ್ವೆಯ ಒಂದು ಊರಿನ ಹೆಸರಿದು. ಜಗತ್ತಿನ ಅತಿ ಚಿಕ್ಕ ಹೆಸರು!

2 Responses to "ಚುರುಮುರಿ"

ಎಲ್ಲಾ ಸರಿ, ಒಂದೇ ಒಂದು ಚೂರು ಕಷ್ಟ ಆಗಿದೆ,

ಚಾಣಕ್ಯ ಹೇಳಿರುವ “ಭಯ ನಿಮ್ಮನ್ನು ಸಮೀಪಿಸಿದರೆ ಆಕ್ರಮಣ ಮಾಡಿ ಅದನ್ನು ನಾಶ ಮಾಡಿಬಿಡಿ.” ಎಂಬುದರ ಬಗ್ಗೆ…

ಭಯ ನಿಮ್ಮನ್ನು ಸಮೀಪಿಸಿದರೆ ಆಕ್ರಮಣ ಮಾಡಿ ಅದನ್ನು ನಾಶ ಮಾಡಿ ಅನ್ನೋದು ಸರಿ ಆದರೆ ನಾಶ ಮಾಡಿದಮೇಲೆ ಬಿಡೊದ್ಯಾಕೆ (ಮಾಡಿ ಬಿಡಿ) ಅಂತ ಅರ್ಥ ಆಗಲಿಲ್ಲ ?

Just kidding.. (ಇದೊಂದು ಹಳೇ ಜೋಕು, ಪೋಲೀಸು ಕಳ್ಲನನ್ನು ಹಿಡಿದುಬಿಟ್ಟ ಎಂಬ ವಾಕ್ಯದಲ್ಲಿ, ಹಿಡಿದ ಸರಿ ಬಿಟ್ಟಾ ಯಾಕೆ?)

ಬಹಳ ಹಿಡಿಸಿದ ಅಂಶ ಅಂದರೆ ನಮಗೆ ಅರವತ್ತು ವರಷವಾದ ಮೇಲಾದರೂ ಜ್ಝ್ನಾನೊದಯ ಆಗತ್ತೆ ಅನ್ನೊ ಆಸೆ ಇಟ್ಕೋಬಹುದು ಅನ್ನೋದು!! ಅಲ್ಲಿವರೆಗೂ happy blogging

ಬಾಲರವರೇ,
ಚಾಣಕ್ಯ ಸರಿಯಾಗೇ ಹೇಳಿದ್ದಾನೆ. ಭಯವನ್ನು ಜಯಿಸಿ ಅದರ ಸಂಗತಿಯನ್ನು ಹೊತ್ತು ತಿರುಗದೇ ಅಲ್ಲೇ ಬಿಟ್ಟು ಬಿಡಬೇಕು ಎಂದು! 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 69,005 hits
ಸೆಪ್ಟೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
1234567
891011121314
15161718192021
22232425262728
2930  
%d bloggers like this: