ಕಲರವ

Archive for ಸೆಪ್ಟೆಂಬರ್ 20th, 2008

ಸತ್ಯ!

ವಯಸ್ಸು ಇಪ್ಪತ್ತಾದಾಗ ಮನುಷ್ಯ ಬೇರೆಯವರು ತನ್ನ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂದು ಯೋಚಿಸುತ್ತಾನೆ.
ವಯಸ್ಸು ನಲವತ್ತಾದಾಗ ಮನುಷ್ಯ ಬೇರೆಯವರು ತನ್ನ ಬಗ್ಗೆ ಏನಾದರೂ ಯೋಚಿಸಿಕೊಳ್ಳಲಿ, ನನಗೇನು ಎಂದು ಭಾವಿಸುತ್ತಾನೆ.
ವಯಸ್ಸು ಅರವತ್ತಾದಾಗ ಆತ ಬೇರೆಯವರು ಅಸಲಿಗೆ ತನ್ನ ಬಗ್ಗೆ ಯೋಚಿಸುತ್ತಲೇ ಇರಲಿಲ್ಲ ಎಂಬುದನ್ನು ಕಂಡುಕೊಳ್ಳುತ್ತಾನೆ.

…………………………..

ಹುಟ್ಟಿದಾಗ ನಾವು ಅಳುತ್ತಿದ್ದೆವು ಉಳಿದವರೆಲ್ಲಾ ಸಂಭ್ರಮಿಸುತ್ತಿದ್ದರು. ನಾವು ಹೇಗೆ ಬದುಕಬೇಕೆಂದರೆ ಸಾಯುವಾಗ ನಾವು ಸಂಭ್ರಮಿಸಬೇಕು, ಉಳಿದವರೆಲ್ಲಾ ಅಳಬೇಕು.

…………………………..

ನೀವು ನನ್ನ ಹೆಂಡತಿಯಾಗಿದ್ರೆ!

ಚರ್ಚಿಲ್ ಅವರನ್ನು ಕುರಿತು ಲೇಡಿ ಆಸ್ಟರ್ ಹೇಳಿದ್ದು:
“ನಾನು ನಿಮ್ಮ ಹೆಂಡತಿಯಾಗಿದ್ದರೆ ನಿಮಗೆ ವಿಷ ಕೊಡುತ್ತಿದ್ದೆ!”
ಥಟ್ಟನೆ ಚರ್ಚಿಲ್ ಕೊಟ್ಟ ಉತ್ತರ, “ನಾನು ನಿಮ್ಮ ಗಂಡನಾಗಿದ್ದರೆ ಅದನ್ನು ಗಟಗಟನೇ ಕುಡಿದುಬಿಡುತ್ತಿದ್ದೆ.”

…………………………..

ಆರ್ಕುಟ್ಟಿನ ಅಂಗಳದಿಂದ ಹಾರಿಬಂದ ಅತಿ ಪುಟ್ಟ ಕತೆ:
“ಮೇನಕೆಯ ಶುಭ್ರಶ್ವೇತ ವಸ್ತ್ರಗಳು ಇನ್ನೂ ಮರದಬುಡದಲ್ಲೇ ಬಿದ್ದಿತ್ತು” ಅಷ್ಟು ಬೆಳ್ಳಗಿರುವ ಬಟ್ಟೆಗಳನ್ನು ತುಳಿದು ಹಾಳುಮಾಡುವ ಮನಸ್ಸಾಗದೇ ವಿಶ್ವಾಮಿತ್ರ ಮರದಿಂದ ಕೆಳಗಿಳಿಯಲೇ ಇಲ್ಲ.

…………………………..

ಓಹ್ ಹೌದಾ!

~ಜಪಾನ್ ದೇಶದ ಟೊಕಿಯೋದಿಂದ ಸುಮಾರು ಎಪ್ಪತ್ತು ಮೈಲು ಫೂರ್ವದಲ್ಲಿರುವ ಇಜೂಓಶಿಮಾ ಎಂಬ ದ್ವೀಪ ಹೆಸರುವಾಸಿ. ಯಾತಕ್ಕೆ ಅಂದಿರಾ? ಆತ್ಮಹತ್ಯೆಗೆ!
~ಚೀನಾದ ‘ಕಿವಾ’ ಜನಾಂಗದಲ್ಲಿ ಒಂದು ಸ್ವಾರಸ್ಯಕರವಾದ ಆಚರಣೆಯಿದೆ. ಹುಡುಗಿಗೆ ಹನ್ನೆರಡು  ವರ್ಷವಾದಾಗ ಆಕೆಯನ್ನು ಕೆರೆಯ ಹತ್ತಿರ ಕರೆದುಕೊಂಡು ಹೋಗಿ ಆಕೆಯ ನೆರಳಿಗೆ ಮದುವೆ   ಮಾಡುತ್ತಾರಂತೆ. ಇದರಿಂದಾಗಿ ಆಕೆಗೆ ನಿಜ ಮದುವೆಯಿಂದ ಸಂಕಷ್ಟಗಳು ಬರುವುದಿಲ್ಲ ಎಂಬ ನಂಬಿಕೆ!
~ ಜಪಾನಿಯರಲ್ಲಿ ಒಂದು ನಂಬಿಕೆಯಿದೆ: ಭೂಮಿಯ ಕೆಳಗೆ ಕ್ಯಾಟ್ ಫಿಶ್ ಅಲುಗಾಡುವುದರಿಂದ ಭೂಕಂಪ ಸಂಭವಿಸುತ್ತದೆ. ಕಾಶಿಮಾ ಎಂಬ ದೇವಮಾನವ ಆ ಕ್ಯಾಟ್ ಫಿಶ್ ಮಿಸುಕಾಡದ ಹಾಗೆ   ಹಿಡಿದುಕೊಂಡಿದ್ದಾನೆ.

…………………………..

ಹುಂಜವೂ ವಜ್ರದ ಹರಳೂ

ತನಗೂ ತನ್ನ ಕೋಳಿಗಳಿಗೂ     ಆಹಾರಕ್ಕಾಗಿ ತಿಪ್ಪೆ ಕೆದಕುತ್ತಿದ್ದ ಒಂದು ಹುಂಜಕ್ಕೆ ಒಂದು ವಜ್ರದ ಹರಳು ಸಿಕ್ಕಿತು. ಅದು ವಜ್ರದ ಹರಳಿಗೆ ಹೇಳಿತು:  “ನೀನು ನನ್ನ ಬದಲು ನನ್ನ ಯಜಮಾನನಿಗೆ ಸಿಕ್ಕಿದ್ದರೆ ಅವನು ನಿನ್ನನ್ನು ತನ್ನ ಮುಡಿಗೇರಿಸಿಕೊಂಡು ಮೆರೆಸುತ್ತಿದ್ದ. ಆದರೆ ನೀನು ನನಗೆ ಸಿಕ್ಕಿದೆ. ನಿನ್ನಿಂದ ನನಗೆ ಯಾವ ಉಪಯೋಗವೂ ಇಲ್ಲ. ನನಗೆ ಪ್ರಪಂಚದ ಎಲ್ಲ ಒಡವೆಗಳಿಗಿಂತ ಒಂದು ಕಾಳು ಬಾರ್ಲಿ ಸಿಕ್ಕಿದ್ದರೆ ಚೆನ್ನಾಗಿತ್ತು.”                (ಈಸೋಪನ ಕಥೆ)

…………………………..

ಚಾಣಾಕ್ಯ ಉವಾಚ

ಭಯ ನಿಮ್ಮನ್ನು ಸಮೀಪಿಸಿದರೆ ಆಕ್ರಮಣ ಮಾಡಿ ಅದನ್ನು ನಾಶ ಮಾಡಿಬಿಡಿ.

…………………………..

ನಾರ್ವೆಯ ಒಂದು ಊರಿನ ಹೆಸರಿದು. ಜಗತ್ತಿನ ಅತಿ ಚಿಕ್ಕ ಹೆಸರು!


Blog Stats

  • 69,182 hits
ಸೆಪ್ಟೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
1234567
891011121314
15161718192021
22232425262728
2930  

Top Clicks

  • ಯಾವುದೂ ಇಲ್ಲ