ಕಲರವ

Archive for ಸೆಪ್ಟೆಂಬರ್ 1st, 2008

ದೇಶ ಪ್ರೇಮ, ಹಾಗೆಂದರೆ?

ಇರುವ ಒಂದು ಭೂಮಿಗೆ ಬೇಲಿಯನ್ನು ಹಾಕಿಕೊಂಡು ನೂರಾರು ದೇಶಗಳ ಗಡಿಯನ್ನು ಕೊರೆದುಕೊಂಡು ತಾವು ಹುಟ್ಟಿದ ಭೂಪ್ರದೇಶವೊಂದರ ಮೇಲೆ ಗಾಢವಾದ ಪ್ರೇಮವನ್ನು ನಟಿಸುತ್ತಾ ಉಳಿದೆಲ್ಲಾ ಭೂಪ್ರದೇಶಗಳನ್ನು ನಿಷ್ಕೃಷ್ಟವಾಗಿ ಕಾಣುವ ಗುಣವನ್ನು ದೇಶಪ್ರೇಮ ಅನ್ನಬೇಕಾ? ದೇಶಪ್ರೇಮವೆಂಬುದು ಉದಾತ್ತ ಭಾವನೆಯಾ ಇಲ್ಲಾ ಸಂಕುಚಿತ ಮನಸ್ಸಿನ ಸೃಷ್ಟಿಯಾ? ದೇಶಪ್ರೇಮವೆಂದರೆ ಉಳಿದೆಲ್ಲಾ ದೇಶಗಳೆಡೆಗಿನ ದ್ವೇಷವಾ?

ಈ ಪ್ರಶ್ನೆಗಳು ನಮ್ಮನ್ನು ಕಾಡಲು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಕ್ಕಿಂತ ಪ್ರಶಸ್ತವಾದ ಕಾಲ ಮತ್ತೊಂದಿರದು. ಈ ವಿಷಯದ ಬಗ್ಗೆ ಈ ಸಂಚಿಕೆಯಲ್ಲೊಂದು ಡಿಬೇಟ್ ಇದೆ.
ಹಾಗೆಯೇ ಪ್ರತಿ ಪುಟದ ಮೆರುಗನ್ನು ಹೆಚ್ಚಿಸುವ ಕೊಟೇಶನ್ನುಗಳು ಸ್ವಾತಂತ್ರ್ಯದ ಬಗ್ಗೆ ಹಿಂದಿನವರು ಏನೆಂದು ಯೋಚಿಸಿದ್ದಾರೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಿವೆ.

-ಸಂ

……………………………………………………………………..

ದೇಶದ ಬಗೆಗಿನ ಒಬ್ಬನ ಪ್ರೀತಿ ನಿಜಕ್ಕೂ ಅದ್ಭುತ. ಆದರೆ ಅದು ದೇಶದ ಗಡಿಯಲ್ಲೇ ನಿಂತು ಬಿಡುವುದೇಕೆ? -ಪ್ಯಾಬ್ಲೊ ಕಸಲ್ಸ್

ದೇಶವೆಂಬುದು ಒಂದು ಭೌಗೋಳಿಕ ಪ್ರದೇಶವಲ್ಲ, ಬೆಟ್ಟಗುಡ್ಡಗಳು, ನದಿ ತೊರೆಗಳಲ್ಲ. ಅದೊಂದು ತತ್ವ. ದೇಶಪ್ರೇಮವೆಂಬುದು ಆ ತತ್ವದೆಡೆಗಿನ ನಿಷ್ಠೆ. – ಜಾರ್ಜ್ ವಿಲಿಯಂ ಕರ್ಟಿಸ್


ಹೋರಾಡುವುದಕ್ಕೆ ನನಗ್ಯಾವ ದೇಶವೂ ಇಲ್ಲ. ಇಡೀ ಭೂಮಿಯೇ ನನ್ನ ದೇಶ ಹಾಗೂ ನಾನು ವಿಶ್ವದ ಪ್ರಜೆ. -ಯುಗೆನ್.ವಿ.ಡೆಬ್ಸ್

ದೇಶಭಕ್ತಿಯೂ ಸಹ ಧರ್ಮವಿದ್ದ ಹಾಗೆ. ಅದು ಯುದ್ಧಗಳಿಗೆ ಜನ್ಮ ನೀಡುವ ಮೊಟ್ಟೆ. – ಗಯ್ ಡೇ ಮೌಪಸಂಟ್

ನನಗೂ ಆತನಿಗೂ ಯಾವುದೇ ಜಗಳವಿಲ್ಲದಿದ್ದರೂ, ನಮ್ಮಿಬ್ಬರ ರಾಜರು ಮಾಡಿದ ಜಗಳಕ್ಕಾಗಿ ನದಿಯ ಆ ಬದಿಯವನು ನನ್ನನ್ನು ಕೊಲ್ಲುತ್ತಾನೆ ಎಂದರೆ ಅದಕ್ಕಿಂತ ಮೂರ್ಖತನ ಇದ್ದೀತೆ? – ಬ್ಲೇಸ್ ಪ್ಯಾಸ್ಕಲ್

ಚಿಕ್ಕ ಪುಟ್ಟ ಕಾರಣಕ್ಕಾಗಿ ಕೊಲ್ಲಲು ಇಲ್ಲವೆ ಕೊಲ್ಲಲ್ಪಡಲು ತಯಾರಾಗಿ ನಿಲ್ಲುವುದೇ ದೇಶಭಕ್ತಿ. – ಬರ್ಟ್ರಾಂಡ್ ರಸ್ಸೆಲ್

ನೀವು ಅಲ್ಲಿ ಹುಟ್ಟಿರುವುದಕ್ಕಾಗಿ ನಿಮ್ಮ ದೇಶ ಬೇರೆಲ್ಲಾ ದೇಶಗಳಿಗಿಂತ ಶ್ರೇಷ್ಠವಾದದ್ದು ಎಂದು ನಂಬುವುದೇ ದೇಶಭಕ್ತಿ. -ಜಾರ್ಜ್ ಬರ್ನಾಡ್ ಷಾ

ನಮ್ಮ ದೇಶದ ಬಗೆಗಿರುವ ಪ್ರೀತಿಯನ್ನು ಹೆಚ್ಚಿಸಿಕೊಳ್ಳಲು ಇರುವ ಸರಿಯಾದ ಮಾರ್ಗವೆಂದರೆ ಕೆಲಕಾಲ ಬೇರೆ ದೇಶದಲ್ಲಿ ವಾಸಿಸುವುದು. -ವಿಲಿಯಂ ಶೆನ್‌ಸ್ಟೋನ್

ಒಬ್ಬ ಶ್ರೇಷ್ಠ ದೇಶಭಕ್ತನಾಗುವುದಕ್ಕಾಗಿ ನೀವು ಜಗತ್ತಿನ ಉಳಿದ ಮನುಕುಲವನ್ನು ದ್ವೇಷಿಸಬೇಕು ಎಂಬುದೇ ದುರಂತ. -ವಾಲ್ಟೇರ್‍

ದೇಶಭಕ್ತಿಯೆಂದರೆ ದೇಶದ ಜೊತೆಗೆ ನಿಲ್ಲುವುದು, ದೇಶದ ಅಧ್ಯಕ್ಷನ ಜೊತೆಗೆ ಎಂದಲ್ಲ. – ಥಿಯೋಡರ್ ರೂಸ್‌ವೆಲ್ಟ್

ನನ್ನ ಪ್ರಕಾರ ಮಾನವೀಯತೆಯೇ ದೇಶಭಕ್ತಿ. ನಾನು ದೇಶಭಕ್ತ ಏಕೆಂದರೆ ನಾನು ಮನುಷ್ಯ ಹಾಗೂ ಮಾನವೀಯತೆ ಉಳ್ಳವ. – ಮಹಾತ್ಮ ಗಾಂಧಿ

ದೇಶಭಕ್ತಿ ನರಕದ ಧರ್ಮ. – ಜೇಮ್ಸ್ ಬ್ರಾಂಚ್ ಕ್ಯಾಬೆಲ್

ನಾನು ಸೌಂದರ್ಯ ಹಾಗೂ ದೇಶಭಕ್ತಿಯನ್ನು ವ್ಯಾಖ್ಯಾನಿಸಲು ಬಯಸುವುದಿಲ್ಲ. ಪೂರ್ವನಿರ್ಧಾರಿತ ನಿಯಮಗಳಿಲ್ಲದೆ ಅವು ಹೇಗಿದೆಯೋ ಹಾಗೆ ಸ್ವೀಕರಿಸಲು ಬಯಸುತ್ತೇನೆ. – ಬಾಬ್ ಡೈಲನ್

ಒಂದು ನಾಯಿ ಚಂದ್ರನತ್ತ ಬೊಗಳಿದರೆ ಅದು ಧಾರ್ಮಿಕತೆ. ಅಪರಿಚಿತನೆಡೆಗೆ ಬೊಗಳಿದರೆ ಅದು ದೇಶಭಕ್ತಿ. – ಡೇವಿಡ್ ಸ್ಟಾರ್ ಜೋರ್ಡನ್

ಪ್ರತಿ ರಾಷ್ಟ್ರ ಉಳಿದವುಗಳಿಗಿಂತ ತಾನು ಶ್ರೇಷ್ಠ ಎಂದು ಭಾವಿಸುತ್ತದೆ, ಇದರಿಂದಲೇ ಹುಟ್ಟುವವು- ದೇಶಭಕ್ತಿ ಹಾಗೂ ಯುದ್ಧಗಳು. – ಡೇಲ್ ಕಾರ್ನೆಗಿ

ಭಿನ್ನಾಭಿಪ್ರಾಯಗಳಿರುವುದೇ ಅತ್ಯಂತ ಶ್ರೇಷ್ಠವಾದ ದೇಶಭಕ್ತಿ. – ಹೋವಾರ್ಡ್ ಝಿನ್

ದೇಶಭಕ್ತಿ ಶುರುವಾಗಬೇಕಾದ್ದು ಮನೆಯಿಂದ. – ಹೆನ್ರಿ ಜೇಮ್ಸ್


image008.jpg

I love America more than any other country in this world, and, exactly for this reason, I insist on the right to criticize her perpetually. – James A. Baldwin

It is not easy to see how the more extreme forms of nationalism can long survive when men have seen the Earth in its true perspective as a single small globe against the stars. – Arthur C. Clarke

I am not an Athenian or a Greek, but a citizen of the world. -Diogenes

Heroism on command, senseless violence, and all the loathsome nonsense that goes by the name of patriotism – how passionately I hate them! – Albert Einstein

I only regret that I have but one life to lose for my country. – Nathan Hale

A nation is a society united by a delusion about its ancestry and by common hatred of its neighbours. – William Ralph Inge

To me, it seems a dreadful indignity to have a soul controlled by geography. -George Santayana

You’ll never have a quiet world till you knock the patriotism out of the human race. – George Bernard Shaw

Patriotism is not short, frenzied outbursts of emotion, but the tranquil and steady dedication of a lifetime.
Adlai E. Stevenson

In the United States, doing good has come to be, like patriotism, a favorite device of persons with something to sell. -H.L.Mencken

Patriotism is a pernicious, psychopathic form of idiocy. – George Bernard Shaw

Our heroes are those… who… act above and beyond the call of duty and in so doing give definition to patriotism and elevate all of us…. America is the land of the free because we are the home of the brave. -David Mahoney

Patriotism varies, from a noble devotion to a moral lunacy. – W.R. Inge

The highest patriotism is not a blind acceptance of official policy, but a love of one’s country deep enough to call her to a higher plain. – George McGovern

Patriotism is often an arbitrary veneration of real estate above principles. – George Jean Nathan

For a writer only one form of patriotism exists: his attitude toward language. – Joseph Brodsky

Patriotism is the last refuge of the scoundrel. – Samuel Johnson


Blog Stats

  • 69,182 hits
ಸೆಪ್ಟೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
1234567
891011121314
15161718192021
22232425262728
2930  

Top Clicks

  • ಯಾವುದೂ ಇಲ್ಲ