Archive for ಸೆಪ್ಟೆಂಬರ್ 2008
Laconic
Posted ಸೆಪ್ಟೆಂಬರ್ 30, 2008
on:The word laconic, meaning terse, pithy, expressing a meaning in few words, has an interesting origin that dates back to the Greek wars, more than 2600 years ago.
The people of Laconia, a state of ancient Greece, were famous for their valor and for their brevity of speech. They never used more words than were strictly necessary to express themselves. Philip of Macedonia, desiring to become the emperor of all Greece, raised a huge army and waged war against all the states one by one, until each acknowledged him as their overlord. Finally, he sent a letter to the Laconians, which read “If I go down into your country, I will level your great city to the ground.”
In a few days, an answer was brought back to him. It contained a single word – “If”. This short, but telling reply effectively took the wind out of his sails.
The Laconians’ brevity of speech has been immortalized in the expression laconic, which today means ‘expressing oneself in few words’.
-Abhay Kumar, II yr MBBS, BMCRI
The olympics and the Phelps
Posted ಸೆಪ್ಟೆಂಬರ್ 30, 2008
on:‘Citius’,’altius’ and ‘fortius’ says the Olympics motto, which means stronger, higher and faster and as the biggest sporting festival of the world unfolded at the ‘Bird’s Nest’, Beijing between 8th to 24th Aug the world just witnessed the physical and mental barriers being broken, records being stumbled and new ones being set. Citius, altius and fortius it was as the glory of sport notched greater heights along these 16 days. It wasn’t a bad Olympics for the Indian contingent either. With first ever individual gold and a tally of 3 medals in the Beijing games, India was placed 50th in the tables. Speaking on relative terms and with usual complacency we possess, we are extremely pleased and we couldn’t have asked for more, could we?
This Olympics is remembered for much more reasons. Reasons like it was watched by 4.4 billion viewers all around the globe which accounts to one-third of the world’s population makes Beijing Olympics very special. China, the hosts making it a golden fifty way ahead of US by 15 gold medals was also very hearting to see. The dominance of the US took a China to end it. But this Olympics is remembered as the one in which the Jamaican, Usain Bolt established his supremacy on track with three world record timings. The media called him ‘thunderous bolt’ as he was. There were moments to saviour when women’s pole vault champion crossed the bar with a world record and a massive 25 cm higher than her closest competitor, Rafa rose to the top in the world rankings and for us it was Abhinav Bindra’s gold in shooting(100m air riffle), Susheel kumar’s bronze in wrestling, vijender kumar`s bronze in boxing.
But to me the one man who stealed the show was none other than Michael Phelps. This Olympics is surely remembered as the one in which Phelps did the incredible overcoming Mark Spitz’s world record of 7 golds and making it a perfect 8! Clocking 7 world record timings and leaving the rest of the world with no chance of bettering it anymore. ”He was born to swim” as famously quoted by his coach Bob Bowman. Phelps has to his credit 14 olympics golds,6 from the previous Athens and 8 this time around at an age of 23! His is quite an interesting story. He made it to the US national team at an age of 15 and had a world record against his name in butterfly even before he was 16. Capable of swimming any stroke in the water cube, Phelps was expected to be on the podiums this time. We all knew he was a great swimmer in the making. But the perfect 8 is even something not that easy for the greats too. The heats,the semis, the finals of different strokes were all on the same day. Without even a single lapse in his focus, he was up for it with an eye always on the magical number 8 all the time. The 100m butterfly in which he held his 7th gold ahead of his countryman caviac was a treat to watch for any sports fan. Cavaic was ahead of Phelps all the time, even as they turned around and even as cavaic neared the finish line, everyone thought phelps had lost it. But only after the results were out everyone realised phelps had made it with one-hundredth of a second! I remembered a quote, “Cricket is a game of glorious uncertainities unless we have a Bradman”. Was it written he was going to win? This man played like he knew to win, didn’t he? The tags such as the greatest athelete of all time are more than enough to describe his stature without paying much heed to the validity of the statement.
The morning newspapers had their own explanation for this amazing feat. They said Phelps had a streamlined body, his upper portion of the body was longer with longer arms, his body has more propelling force, his muscles produced 1/3rd the amount of lactic acid as compared to his fellow swimmers owing to less fatigue and so on.. Trust me that didn’t separate phelps from the rest. It was his hard work and determination who got him those golds. his ability to hold on to his opponent with 1/100th of a second was what actually mattered. Can we describe his hardwork, motivation of swimming 16 to 18 kms a day, 6 days a week? Thats Phelps for you.
Whats sport without fun? When everyone spoke about players playing for national pride and personal achievement at the biggest sporting extravaganza, this question which flashed in an add seemed to have far greater relevance. Yes,whats sport without fun? And whats Olympics without the joy factor? What would your heart say when so many years of practice, so many dreams boil down to that nth second when the refree is about to pull the trigger and you find yourself on the starting line. How would you feel when you listen to those grunts of your opponents as you approach the finish line? How would you feel if its not a happy ending to your story and you are left alone amidst a full capacity crowd. Thats what makes Olympics so special and memorable. I will bet more than anything else, Phelps would’ve enjoyed his swimming..
Shreyas.K.M, RVCE
ಹೇಮಾಂತರಂಗ: ಹುಡುಗೀರ್ಯಾಕೆ ಹೀಗೆ?
Posted ಸೆಪ್ಟೆಂಬರ್ 30, 2008
on:- In: ಹೇಮಾಂತರಂಗ
- 4 Comments
– ಹೇಮಾ ಪವಾರ್, ಬೆಂಗಳೂರು
“ಅಲ್ಲವೇ ನೋಡಿದ್ರೇನೆ ಗೊತ್ತಾಗುತ್ತೆ ಜೊಲ್ಲು ಅಂತ ಅದು ಹೇಗೆ ಮಾತಾಡ್ತೀಯಾ ಅವನ ಜೊತೆ ? ಅದೇನು ಅಷ್ಟೊಂದು ಹಲ್ಲು ಗಿಂಜತಾನೆ? irritate ಆಗಲ್ವಾ ನಿಂಗೆ?” ಅಂದೆ.
“ಯಾಕಾಗಬೇಕು? ” ತಣ್ಣಗೆ ಅಂದಳವಳು.
“He is a flirt !!” ತುಸು ಜೋರಾಗೇ ಅಂದೇ ನಾನು.
“ಛೇ! ನಿನಗೆ ಗೊತ್ತಿಲ್ವೇ ಅವ್ನು ಫ್ಲರ್ಟ್ ಅಲ್ಲ. ಅವ್ನಿಗೆ ಹುಡುಗಿಯರ ಶೋಕಿ ಇದೆ
ಅಷ್ಟೇ. ಫ್ಲರ್ಟ್ ಮಾಡೋ ಕ್ವಾಲಿಟೀಸ್ ಇಲ್ಲ!!!”
“ಫ್ಲರ್ಟ್ ಮಾಡೋಕೂ ಕ್ವಾಲಿಟೀಸ್ ಬೇಕಾ?” ಇಷ್ಟಗಲ ಬಾಯಿ ತೆರೆದು ಕೇಳಿದೆ ನಾನು.
“ಬೇಡ್ವ ಮತ್ತೆ? ಅದೂ ಒಂದು ಕಲೆ. ಈಗ ನೋಡು ನನಗೆ ಲೆಕ್ಕ ಹಾಕಿದಂಗೆ 33 ಜನ boy
friends ಇದಾರೆ. ಅವರನ್ನೆಲ್ಲ ಮ್ಯಾನೇಜ್ ಮಾಡೋದು ಸುಮ್ನೇ ಅಂದುಕೊಂಡ? ಒಬ್ಬನ
ಜೊತೆಲಿದ್ದಾಗ ಇನ್ನೊಬ್ಬನ ಕಾಲ್ ಬಂದ್ರೆ ಏನು ಮಾಡಬೇಕು? ಎದುರಿಗೆ ಸಿಕ್ಕಿಬಿಟ್ಟರೆ
ಹೇಗೆ ತಪ್ಪಿಸ್‌ಕೋಬೇಕು ಅನ್ನೋದು ಎಲ್ಲರಿಗೂ ಬರೋಲ್ಲ.”
“ಇಷ್ಟಕ್ಕೂ ಅಷ್ಟೊಂದು ಹುಡುಗರ ಅವಶ್ಯಕತೆ ಏನಿದೆ ನಿನಗೆ? ಯಾವನಾದ್ರೂ ಒಬ್ಬನ ಜೊತೆ
ಇರಬಾರದ permanent ಆಗಿ?”
“ಹ್ಹೆ ಹ್ಹೆ bore ಆಗಲ್ಲವೇನೆ!! ನನಗೆ ಇದೆಲ್ಲ ಇಷ್ಟ! I enjoy flirting!!” ಅಂತ
ಕಣ್ಣು ಹೊಡೆದಳು.
ಅಷ್ಟೊತ್ತಿಗಾಗಲೆ ಅವಳ ಫೋನು ಕುಣೀತೂ. ಆ ಕಡೆಯಿಂದ ಯಾರೋ ಹುಡುಗ. “ಇನ್ನೈದು ನಿಮಿಷ ಹನೀ ಅಲ್ಲಿರ್ತೀನಿ.” ಅಂದವಳೇ ನನ್ನ ಕಡೆ ತಿರುಗಿ, “ನಾನು ಬರ್ತೀನೆ ನನ್ನ boy
friend ಕಾಯ್ತಿದಾನೇ ಬೈ.” ಅಂದಳು.
“ಇವನೆಷ್ಟನೇಯವನೆ?” ಅಂದ ತಮಾಷೆಗೆ ನಾನು.
“34th ಕಣೇ!! ಹೊಸಬಾ ಪಾಪ” ಅಂದ್ಲು.
ಅವಳ ಮಾತಿನಿಂದ ಸಾವರಿಸಿ ಕೊಳ್ಳುವಷ್ತರಲ್ಲಿ ಅವಳಾಗಲೇ ಹೊರಗಾರಿದ್ದಳು.
ಎಂಥಾ ಹುಡುಗಿ! ಯೋಚಿಸುತ್ತಿದ್ದೆ.
***
ಮನೆ ಮುಂದೇನೆ ಅವನ ಮನೆ ಕಣೇ, ನಾನು ಓಡಾಡುವಾಗ ನನ್ನೇ ನೋಡೋನು. ಹುಡುಗರು ಅಂದ್ರೇನೆ ಒಂದು ಮಾರು ದೂರ ಓಡ್ತಿದ್ದೋಳು, ಅದು ಹೇಗೆ ಅವನನ್ನ ಮಾತಾಡಿಸ್ದೆ ಅಂತ ಈಗ್ಲೂ ಅನುಮಾನ ನಂಗೆ. ವಿಪರೀತ ಇಷ್ಟ ಆಗೋಗ್ಬಿಟ್ಟಿದ್ದಾನೆ. ಸ್ಲೋಕ್ ಮಾಡ್ತಿದ್ದನಂತೆ ಗೊತ್ತಾ? ಈಗ ಬಿಟ್ಬಿಟ್ಟಿದ್ದಾನೆ, ನಂಗೋಸ್ಕರ ಅಂತ ಖುಶಿಯಿಂದ ಅವಳು ಹೇಳಿಕೊಳ್ತಿದ್ಲು. ಹುಷಾರು ಕಣೇ ಇನ್ಯಾರೋ ಸಿಕ್ರು ಅಂತ ನಿನ್ನ ಬಿಟ್ಟು ಬಿಟ್ಟಾನು ಅಂದೆ. ನನ್ನ ಮಾತು ಅವಳಿಗೆ ಇಷ್ಟವಾಗಲಿಲ್ಲ. ಸುಮ್ನಿರೆ! ನಿಂಗೆ ಯಾವಾಗ್ಲೂ ತಮಾಷೇನೇ ಅಂದು ಕೆನ್ನೆ ತಿವಿದಳು.
ಅದಾದ ಮೇಲೆ ತುಂಬಾ ದಿನಗಳವರೆಗೆ ಆಕೆ ನನಗೆ ಸಿಕ್ಕಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಮನೆಗೆ ಬಂದವಳು ತುಂಬಾ ಬೇಜಾರಲ್ಲಿದ್ದಂತೆ ಕಂಡಳು. ಯಾಕೆ ರಾಣಿ ಮಂಕಾಗಿದ್ದೀಯ ಅಂದೆ. ಒಂದು ವಾರ ಆಯ್ತು ಕಣೇ ಅವ್ನ ಮಾತಾಡ್ಸಿ ಅಂದವಳೇ ಅಳೋಕೆ ಶುರು ಮಾಡಿದ್ಲು. ಇದೊಳ್ಳೆ ಕತೆಯಾಯ್ತು,
ಅನ್ಕೊಂಡು ಸಮಾಧಾನ ಮಾಡಿ, ಏನಾಯ್ತೇ ಅಂತ ಕೇಳೋಷ್ಟರಲ್ಲಿ ಅವಳೇ ಹೇಳಿದಳು, ‘ಮೊದಮೊದಲು ತುಂಬಾ ಕೇರ್ ಮಾಡ್ತಿದ್ದ ಕಣೇ. ಸಿಗರೇಟು ಬಿಟ್ಟಿದ್ದ, ಅಪರೂಪಕ್ಕೆ ಫ್ರೆಂಡ್ಸ್ ಜೊತೆ ಸೇರಿ ಕುಡೀತಿದ್ನಂತೆ, ಅದೂ ಬಿಟ್ಟಿದೀನಿ ಅಂದ. ‘ನಾವು ವೆಜಿಟೇರಿಯನ್ಸ್ ಅಲ್ಲ, ಬೇಕಾದ್ರೆ ನಿಮ್ಮ ಜಾತಿಗೆ ಕನ್ವರ್ಟ್ ಆಗ್ತೀನಿ. ಇನ್ಮೇಲೆ ನಾನ್ ವೆಜ್ಜೂ ತಿನ್ನಲ್ಲ’ ಅಂತ ಪ್ರಾಮಿಸ್ ಮಾಡಿದ್ದ. ಆದ್ರೆ ಒಂದು ವಾರದ ಹಿಂದೆ ಮೂರ್ನಾಲ್ಕು ದಿನ ಫೋನ್ ಮಾಡಿದ್ರೂ ಸರೀಗೆ ಮಾತಾಡಿಸ್ಲಿಲ್ಲ. ಕೆಲ್ಸ ಇದೆ ಆಮೇಲೆ ಮಾಡ್ತೀನಿ ಅನ್ನೋನು, ಮತ್ತೆ ಮಾಡ್ತಲೇ ಇರ್ಲಿಲ್ಲ. ಮೊನ್ನೆ ಅವನ ಫ್ರೆಂಡ್ ಒಬ್ಬ ಸಿಕ್ಕಿದ್ದ. ಅವ್ನು ಹೇಳ್ದ, ಹೋದ ವಾರ ಮನೆಗೆ ಕುಡಿದು ಹೋಗಿದ್ನಂತೆ! ಅವ್ರಪ್ಪ ಅವ್ನಿಗೆ, ಅವ್ನ ಫ್ರೆಂಡ್ಸಿಗೆ ಬೈಯ್ದ್ರಂತೆ. ನಂಗೆ ಮೋಸ ಮಾಡ್ಬಿಟ್ಟ ಕಣೇ” ಎನ್ನುತ್ತಾ ಮತ್ತೆ ಬಿಕ್ಕಿದಳು.
ಆತ ಮೋಸ ಮಾಡೋಕೆ ಮುಂಚೆ ನೀನೇ ಮೋಸ ಹೋಗ್ಬಿಟ್ಟಿದ್ದ್ ಎಹುಡುಗಿ ಅನ್ನೋಣ ಅಂದ್ಕೊಂಡೆ, ಅವಳಿಗೆ ಹರ್ಟ್ ಆಗುತ್ತೇನೋ ಅನ್ನಿಸಿ ಸುಮ್ಮನಾದೆ. “ಸರಿ ಈಗೇನ್ಮಾಡ್ತೀಯಾ ಅಂದೆ. ಗೊತ್ತಿಲ್ಲ ಅಂದ್ಲು. ನಾನು ಹೇಳೋದು ಕೇಳು. ಅವನನ್ನ ಮರೆತು ಬಿಡು. ಇಷ್ಟಕ್ಕೆ ಗೊತ್ತಾಗಿದ್ದು ಒಳ್ಳೇದಾಯ್ತು ಅಂತ ಸುಮ್ಮನಿದ್ದು ಬಿಡು. ನಿನ್ನ ಪ್ರೀತಿಸೋ ಯೋಗ್ಯತೆ ಅವನಿಗಿಲ್ಲ. ಅವನನ್ನ ನೆನೆಸಿಕೊಂಡು ಏನು ಅಳ್ತೀ, ಅವ್ನೊಬ್ಬ ಅಯೋಗ್ಯ. ನೀನು ಏನೋ ಆದೋಳ ಥರ ಕೊರಗಬೇಡ, ಆರಾಮಾಗಿರು” ಅಂತ ಬುದ್ಧಿ ಹೇಳಿದೆ. ನೀನು ಹೇಳೋದು ಸರಿ ಕಣೇ.. ಅಂತಂದು ಹೊರಟ್ಳು. ಹುಡುಗೀರು ಎಷ್ಟು ವಿಚಿತ್ರ ಅಲ್ವಾ, ಯೋಚಿಸುತ್ತಿದ್ದೆ.
***
ಅವಳದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಹೀಗೆ ಒಂದಿನ ಸಿಕ್ಕಿದ್ಲು. “ಹೇಮಾ, ನಿಂಗೆ ಯಾವುದಾದ್ರೂ ಪಿ.ಜಿ ಹೌಸ್ ಗೊತ್ತೇನೆ, ಗೊತ್ತಿದ್ರೆ ಹೇಳೆ. ನನಗೆ ನನ್ನ ಗಂಡನ ಜೊತೆಗೆ ಇರೋಕೆ ಆಗ್ತಾ ಇಲ್ಲ. ಎಲ್ಲಾದ್ರೂ ಪೇಯಿಂಗ್ ಗೆಸ್ಟ್ ಆಗಿದ್ದು ಬಿಡ್ತೀನಿ” ಅಂದ್ಲು! “ಅದ್ಯಾಕೆ ಅಕ್ಕ! ಮದುವೆಯಾಗಿ ನಾಲ್ಕು ವರ್ಷಕ್ಕೆ ಗಂಡ ಬೇಜಾರಾದ್ನೇ?” ಅಂದೆ. “ಗಂಡ ಅಲ್ವೇ, ಬದುಕೇ ಬೇಜಾರು, ಸತ್ತೋಗಣ ಅನ್ನಿಸತ್ತೆ!” ಅಂದವಳ ಕಣ್ಣಂಚಲ್ಲಿ ನೀರಿತ್ತು.
“ಛೇ! ತಮಾಷೆಗಂದೆ ಕಣೇ. ಯಾಕಷ್ಟು ಬೇಜಾರಾಗಿದ್ದೀಯ? ಏನಾಯ್ತು?”
“ದಿನಾ ಜಗಳ ಕಣೇ. ಕೆಲಸಕ್ಕೆ ಸೇರೋವಾಗ ಇವ್ರನ್ನ ಕೇಳೇ ಸೇರಿದ್ದೀನಿ. ಕೆಲಸ ಮುಗಿಸಿ ಮನೆಗೆ ಬಂದ ಮೇಲೆ ಆಫೀಸಿನಿಂದ ಒಂದು ಫೋನು ಬರೋ ಹಾಗಿಲ್ಲ. ಯಾರದು, ಯಾರವನು, ನಿಂಗೇ ಯಾಕೆ ಫೋನ್ ಮಾಡ್ದ, ಆಫೀಸಿನಲ್ಲಿ ಬೇರೆ ಯಾರೂ ಇಲ್ವಾ, ನೀನೊಬ್ಳೇ ಕೆಲಸ ಮಾಡೋದೇನು ಅಂತೆಲ್ಲಾ ಕೇಳ್ತಾನೆ. ಮನೆಗೆ ಬರೋದು ಒಂಚೂರು ಲೇಟ್ ಆಗೋ ಹಾಗಿಲ್ಲ. ಯಾವನ ಜೊತೆ ಊರು ಸುತ್ತಿ ಬರ್ತಿದ್ದೀಯ ಅಂತಾನೆ. ಪ್ರತಿ ನಿಮಿಷಾನೂ ನಾನೇನು ಮಾಡ್ಲಿಲ್ಲ, ನಿಮ್ಮಾಣೆ, ನನ್ನಾಣೆ ಅಂತ ಜಸ್ಟಿಫೈ ಮಾಡಿಕೊಂಡೇ ಬದುಕಬೇಕು. ಮೊನ್ನೆ ಜಗಳ ಆಡಿದಾಗ ಕೋಪ ಬಂದು ಅವನ ಹಣೆಗೆ ಹೊಡೆದು ಬಿಟ್ಟೆ. ಚೂರು ರಕ್ತ ಬಂತು. ನನ್ನ ಸಾಯಿಸಿ ಇನ್ನೊಬ್ಬನ ಜೊತೆ ಓಡೋಗ್ಬೇಕು ಅಂತಿದೀಯ ಅಂತಾನೆ ಕಣೇ. ಹೇಗಿರ್ಲಿ ಹೇಳು ಇಂತಹ ಮನುಷ್ಯನ ಜೊತೆ? ಹಾಳಾದ ಕೆಲಸ ಬಿಟ್ಟುಬಿಡೋಣ ಅಂದ್ರೆ ಇವನು ತರೋ ಸಂಬಳ ಊಟಕ್ಕೇ ಸಾಲ್ದು. ಇಷ್ಟು ಓದಿ, ಇಷ್ಟು ದಿನ ಕಂಫರ್ಟಬಲ್ ಆಗಿರೋ ಕೆಲ್ಸಾನ ಬಿಟ್ಬಿಡೋದಾದ್ರೂ ಹೇಗೆ ಹೇಳು? ಜೀವನಾನೆ ಬೇಜಾರಾಗ್ಬಿಟ್ಟಿದೆ ಕಣೇ”
“ನೋಡೇ, ನನಗೆ ಗೊತ್ತಿರೋ ಹಾಗೆ ನಿನ್ನ ಗಂಡನಿಗಿಂತ ಜಾಸ್ತಿ ದುಡೀತೀಯ ನೀನು. ದಿನಾ ಜಗಳ ಆಡಿಕೊಂಡು ನೆಮ್ಮದಿ ಇಲ್ದೇ ಅವನ ಜೊತೇನೇ ಯಾಕಿದೀಯಾ? ಡಿವೋರ್ಸ್ ಮಾಡಿಬಿಡು. ಒಬ್ಬಳೇ ಬದುಕೋದು ಅಷ್ಟು ಕಷ್ಟವೇನಲ್ಲ. ನೀನು ಈಗಿರೋದಕ್ಕಿಂತ ನೂರು ಪಾಲು ಚೆನ್ನಾಗಿರಬಹುದು”, ವಿವರಿಸಿ ಹೇಳಿದೆ.
“ನೀನು ಹೇಳೋದು ಸರಿ ಕಣೇ. ಆದ್ರೆ ಜನ ಏನನ್ನಲ್ಲ, ಗಂಡನ್ನ ಬಿಟ್ಟು ಬಂದ್ರೆ ಮರ್ಯಾದೆ ಇರುತ್ತಾ?” ಆತಂಕದಿಂದ ಕೇಳಿದಳು.
“ಅನ್ನೋ ಜನ ಬಂದು ನಿನ್ನ ಗಂಡನ ಕೈಲಿ ಬೈಸಿಕೊಳ್ಳೋದಿಲ್ಲ. ಅನುಭವಿಸ್ತಾ ಇರೋಳು ನೀನು, ನೋಡೋ ಜನ ಅನ್ಲಿ, ಅವ್ರಿಗೆಲ್ಲಾ ಕೇರ್ ಮಾಡಿದ್ರೆ ಬದುಕ್ಲಿಕ್ಕೆ ಆಗುತ್ತಾ? ಯೋಚನೆ ಮಾಡು.” ಯೋಚನೆ ಮಾಡುತ್ತಿರುವವಳಂತೆ ಕಂಡಳು. ಅವಳನ್ನು ಯೋಚಿಸಲು ಬಿಟ್ಟು ನಾನು ಹೊರನಡೆದೆ.
***
ಅವಳು ಆಫೀಸಿನೋರಿಗೆ ಸ್ವೀಟ್ಸ್ ಹಂಚುತ್ತಿದ್ದಳು. ಏನು ವಿಶೇಷ ಅಂತ ವಿಚಾರಿಸಿದ್ದಕ್ಕೆ, ನನ್ನ ಮದುವೆ ಫಿಕ್ಸ್ ಆಯ್ತು ಕಣೇ! ನನ್ನಪ್ಪನ ಫ್ರೆಂಡ್ ಮಗನ ಜೊತೆ. ಇನ್ನೆರಡು ತಿಂಗಳಿಗೆ ಮದುವೆ! ಅಂತ ನಾಚಿಕೊಂಡಳು. “ಅಲ್ಲಾ!! ನಿನ್ನ ಬಾಯ್ ಫ್ರೆಂಡ್‌ಗಳ ಗತಿಯೇನೆ? ೩೪ ಹೃದಯಗಳೂ ಒಂದೇ ಸಲ ಚೂರಾಗಿ ಹೋಗ್ತವಲ್ಲೇ?!” ಅಂದೆ. “ಹೇ, ನಾನೀಗ ಅದನ್ನೆಲ್ಲಾ ಬಿಟ್ಬಿಟ್ಟಿದ್ದೀನಮ್ಮ. ಐ ಆಮ್ ಎ ಗುಡ್ ಗರ್ಲ್ ನೌ ಅಂದ್ಲು.” ಇವ್ಳು ಸಿಕ್ಕಾಗಲೆಲ್ಲಾ ಸರ್‌ಪ್ರೈಸ್ ಕೊಡ್ತಾಳೆ ಅನ್ಕೊಂಡೆ.
***
ಇವಳು ಸಿಕ್ಕು ತುಂಬಾ ದಿನವಾಗಿತ್ತು. ಅಂದು ಅಕಸ್ಮಾತ್ ದಾರಿಯಲ್ಲಿ ಸಿಕ್ಕಿದಳು. ನನ್ನನ್ನು ನೋಡಿಯೂ ನೋಡದಂತೆ ಹೋಗುತ್ತಿದ್ದಾಳೆನಿಸಿತು. ನಾನೇ ಕೂಗಿ ಕರೆದೆ. ಹೇಗಿದ್ದೀಯೇ ಅಂದೆ. ‘‘ಚೆನ್ನಾಗಿದಿದೀನೆ, ನಾನು ಬೇಗ ಹೋಗ್ಬೇಕು ಲೇಟ್ ಆಗ್ತಿದೆ. ಅವನು ಕಾಯ್ತಿರ್ತಾನೆ’’ ಅಂದ್ಲು. ‘‘ಅರೆ ನಿನ್ನ! ನೀನಿನ್ನು ಅವ್ನನ್ನ ಬಿಟ್ಟಿಲ್ವೇನೆ?”, “ಇಲೇ, ಅವತ್ತು ನಿನ್ನ ಜೊತೆ ಮಾತಾಡಿ ಬಂದ್ನಲ್ಲ, ಆ ರಾತ್ರಿ ಅವ್ನಿಗೆ ಫೋನ್ ಮಾಡಿದ್ದೆ. ಒಂದು ವಾರದಿಂದ ಮಾತಾಡಿರ್ಲಿಲ್ಲ. ಚೂರು ಮೆತ್ತಗಾಗಿದ್ದ. ಸಾರಿ ಕೇಳ್ದ. ಇನ್ಮೇಲೆ ಹಿಂಗೆ ಮಾಡಲ್ಲ ಅಂದ. ಪಾಪ ಅನ್ನಿಸ್ತು. ಹೇಗೆ ಬಿಟ್ಟು ಬಿಡೋದಕ್ಕೆ ಆಗುತ್ತೆ ಹೇಳು?” ಅಂತಂದು ನಕ್ಕಳು. ನಾನು ಏನಾದ್ರೂ ಹೇಳ್ತಿದ್ದೆನೇನೋ, ಆದ್ರೆ ಅದು ಅವಳ ತಲೆಗೆ ಹೋಗೋ ಲಕ್ಷಣ ಕಾಣಲಿಲ್ಲ ಸುಮ್ಮನಾದೆ.
***
“ಏನು ಯೋಚನೆ ಮಾಡ್ದೆ?” ಕೇಳಿದೆ. “ಯಾವ ವಿಷಯ ಕೇಳ್ತಿದ್ದೀಯ?” ಅಂದ್ಲು. “ಅಲ್ವೇ ಅವತ್ತು ಜಗಳ ಆಗಿದೆ, ಗಂಡನ ಜೊತೆ ಇರಕ್ಕಾಗಲ್ಲ. ಪಿ.ಜಿ ಹೌಸ್ ನೋಡು ಅಂದ್ಯಲ್ಲೇ, ನಮ್ಮನೆ ಹತ್ರಾನೆ ಒಂದಿದೆ, ನೋಡ್ಕಂಡು ಬರಾಣ ಅಂತ ಕೇಳಿದ್ದು.” ಆಕೆಗೆ ನೆನಪಾದಂತಾಯ್ತು, “ಅಯ್ಯೋ ಆ ವಿಷಯಾನಾ! ನನಗೆ ಮರೆತೇ ಹೋಗಿತ್ತು. ಇಲ್ವೇ, ನಮ್ಮೆಜಮಾನ್ರು ಈಗ ಪರ್ವಾಗಿಲ್ಲ. ನಾನೇ ಮನೆಗೆ ಹೋದ ಮೇಲೆ ಫೋನ್ ಸ್ವಿಚ್ ಆಫ್ ಮಾಡ್ಬಿಡ್ತೀನಿ. ಸಂಸಾರ ಅಂದಮೇಲೆ ಅಷ್ಟು ಹೊಂದಿಕೊಂಡು ಹೋಗದಿದ್ರೆ ಹ್ಯಾಗೆ ಹೇಳೂ?” ತೀರ ಆಘಾತವೇನು ಆಗಲಿಲ್ಲ ನನಗೆ. ಅವಳಿಂದ ಈ ಉತ್ತರಾನ ನಿರೀಕ್ಷಿಸಿದ್ದೆ. ನಕ್ಕು ಸುಮ್ಮನಾದೆ. ಹೆಣ್ಣೆಂದ ಮಾತ್ರಕ್ಕೆ ಎಲ್ಲಾನೂ ಸಹಿಸಿಕೊಳ್ಳಬೇಕು ಅಂತ ಏನಿಲ್ಲ. ತಾನು ಹೆಣ್ಣು ಎಂಬ ಕಾರಣಕ್ಕೆ ಎಲ್ಲವನ್ನೂ ಸಹಿಸಲು ಅವಳೇ ಸಿದ್ದಳಾಗಿ ಬಿಡ್ತಾಳೆ. ಯಾಕೋ ಇವಳನ್ನು ನೋಡಿ ಹಾಗನ್ನಿಸಿತು.
ಹೆಣ್ಣು ಚಂಚಲೆಯಾ, ಫ್ಲರ್ಟಾ, ಎಮೋಶನಲ್ಲಾ, ಮೋಸಗಾರಳಾ, ಕಷ್ಟ ಸಹಿಷ್ಣುವಾ, ಏನೋ ಹೆಣ್ಣಾದ ನನಗೂ ಅರ್ಥವಾಗಲೇ ಇಲ್ಲ. ಆದರೆ ಇವರೆಲ್ಲಾ ಬದಲಾಗೇ ಬಿಡ್ತಾರೆ ಅಂತ ನಂಬಿದ್ದ ನಾನು ಮಾತ್ರ ಮೂರ್ಖಳೆಂದು ಎದೆತಟ್ಟಿ ಹೇಳಿಕೊಳ್ಳಬಲ್ಲೆ!
ಎಲ್ರಿಗೂ hi,
ಮುಂಚೆ ಕರೆಕ್ಟ್ ಒಂದು ತಿಂಗ್ಳಿಗೆ ಕೈಸೇರುತ್ತಿದ್ದ ‘ಸಡಗರ’ ಆಮೇಲಾಮೇಲೆ ಕುಂಟುತ್ತಾ, ತೆವಳುತ್ತಾ ಹೊರಬರತೊಡಗಿದಾಗ ನಮ್ ಎಡಿಟರ್ ಸಾಹೇಬ್ರು ‘ಸಡಗರ’ವನ್ನ ಎರಡು ತಿಂಗ್ಳಿಗೆ ಒಂದ್ಸಲ ಅಂತ ಮಾಡೋಣ ಅಂದ್ರು. ನಂಗಂತೂ ಭಯಂಕರ ಬೇಜಾರಾಗೋಗಿತ್ತು. ಯಾಕೆಂದ್ರೆ ತಿಂಗ್ಳಿಗೆ ಒಂದ್ಸರಿಯಾದ್ರೂ ನನ್ನ ಕಷ್ಟ ಸುಖಾನ ನಿಮ್ಮ ಜೊತೆ ಹಂಚ್ಕಂತಾ ಇದ್ದೆ. ಎರಡು ತಿಂಗ್ಳವರ್ಗೂ ಕಾಯ್ಬೇಕು ಅಂದ್ರೆ ಕಷ್ಟ ಆಗ್ತಿತ್ತು. ಆ ದೇವ್ರು ನಮ್ ಎಡಿಟರ್ಗೆ ಒಳ್ಳೆ ಬುದ್ಧಿ ಕೊಟ್ಟು ‘ಸಡಗರ’ ತಿಂಗ್ಳಿಗೆ ಒಂದ್ಸರಿ ಮಾಡೋ ಹಂಗೆ ಮಾಡಿದ್ದಾನೆ.
ಈ ಸಲ ಒಂದು practical problemನ ಹೇಳ್ಕಳಣಾ ಅಂತ ಅನ್ನಿಸ್ತಾ ಇದೆ. ಇದು almost ನನ್ನ ಥರಾ ಇರೋ ಏಕಾಂಗಿಗಳಿಗೆ ಅನ್ವಯಿಸಿದ್ದು. ಅಂದ್ರೆ ತಮ್ಮ parentsಗೆ ಒಬ್ನೇ ಮಗ/ಮಗಳು ಇರೋರಿಗೆ. Professional collegeಗೆ ಬಂದ್ಮೇಲೆ ನಮ್ಮ internals ಮುಗಿದ ಮೇಲೋ, exam ಖತಂ ಆದ್ಮೇಲೋ ಮನೆಗೆ ಹೋಗೋದು ಸಾಮಾನ್ಯ. ಆದ್ರೆ ಊರ್‍ನಲ್ಲಿ ನಮ್ಮ friendsಉ ಸಿಗೋದು ತುಂಬಾ ಕಷ್ಟ. ಯಾಕಂದ್ರೆ ಎಲ್ರಿಗೂ ಒಂದೇ ಟೈಂಗೆ ರಜಾ ಇರೋದಿಲ್ಲ. Atleast ಮನೇಲಿ ಅಣ್ಣ ತಮ್ಮಂದಿರೋ, ಅಕ್ಕ ತಂಗಿಯರೋ ಇದ್ರೆ ಅವರ ಜೊತೆ ಜಗಳ ಮಾಡ್ಕಂಡಾದ್ರೂ time pass ಮಾಡ್ಬೋದು. ಅವ್ರೂ ಇರದಿಲ್ಲ ಅಂದ್ರೆ ಮನೆಗೆ ಹೋಗೋದೇ ಬೇಜಾರಾಗ್ಬಿಡುತ್ತೆ. ಯಾಕಂದ್ರೆ hostelನಲ್ಲಿದ್ದೋರ್‍ಗಂತೂ ಯಾರಾದ್ರೂ ಜೊತೆಗಿದ್ರೆ ಒಂದು ಥರ ‘ಹಿತ’ ಇರುತ್ತೆ ಅಲ್ವಾ?
ಕೆಲೂರು ಕೇಳ್ಬೋದು, “ಮಗಾ! ಮನೇಲಿ ಅಪ್ಪ-ಅಮ್ಮ ಇರ್ತಾರೆ. ಅವ್ರ ಜೊತೆ time pass ಮಾಡ್ಬೋದಲ್ಲ ” ಅಂತ. ಒಪ್ಕೊಂತೀನಿ. ಆದ್ರೆ ನಾನೇ ಅನುಭವಿಸಿದ ಒಂದು factಉ ಹೇಳ್ತೀನಿ. ಕೇಳಿ, ಪ್ರತಿ time ನಾನು ಮನೆಗೆ ಹೋದಾಗ, next morning ನಂದು ನಮ್ಮಮ್ಮಂದು ಒಂದು ಮುಖಾಮುಖಿ ಮಾತುಕತೆ ಇರುತ್ತೆ. ನಾನು ನನ್ನ problemsನ ಹೇಳ್ಕಂತೀನಿ. ಅವ್ಳು ಅದಕ್ಕೆ ತಕ್ಕ suggestionsಉ, promisesಉ ಎಲ್ಲ ಕೊಡ್ತಾಳೆ. ಮತ್ತೆ ನಾನೂ ಅವ್ಳ ಕಷ್ಟಾನೂ ಅಲ್ಪ ಸ್ವಲ್ಪ ಕಿವಿಗೆ ಹಾಕ್ಕಂಡು ಸಾಂತ್ವಾನ ಕೊಡ್ತೀನಿ. ನಂತರ every discussions end uo in past. ಮಾತಾಡ್ತಾ, ಮಾತಾಡ್ತಾ sudden ಆಗಿ ನಿಮ್ಮಪ್ಪ ಹಂಗಿದ್ರು, ನಿಮ್ಮಾವ ಹಿಂಗ್ಮಾಡ್ದ, ನಿಮ್ಮ ಚಿಕ್ಕಪ್ಪ ಸರಿಯಿಲ್ಲ, ನಿಮ್ಮ ದೊಡ್ಡಪ್ಪ ಪೋಲಿ ಅಂತ ಎರ್ರಾಬಿರ್ರಿ ಬಯ್ಯಾಕೆ start ಮಾಡಿತ್ತಕ್ಷಣ ನಾನು silent ಆಗಿ ಎಸ್ಕೇಪು! ಅಪ್ಪನಾದ್ರೂ ಏನ್ಮಾಡ್ತಾರೆ, ಒಂದಿಷ್ಟು advices, ಅದೂ-ಇದೂ ಅಂತ ಕೊಡ್ತಾರೆ. ಹೆಚ್ಚಂದ್ರೆ ಎರಡು ಅರ್ಥ ಇರೋ ಜೋಕು ಮಾಡ್ತಾರೆ. ಹೆಚ್ಚೇನು ಮಾಡಕ್ಕಾಗುತ್ತೆ?
So, ಮನೆಗೆ text books ಒಯ್ತೀನಿ, ಅಲ್ಲಿ ಓದ್ತೀನಿ ಅಂದ್ರೆ ಸತ್ರೂ ಆಗಲ್ಲ. ಚಿತ್ರ ಬರೀತೀನಿ, poems ಬರೀತೀನಿ ಅಂದ್ರೆ ಮನಸ್ಸು ಬರಲ್ಲ. ಹೊರಗೆ ಹೋಗಿ ‘ಕಣ್ಣು ತಂಪು’ ಮಾಡ್ಕಂಡು ಬರಣಾ ಅಂದ್ರೆ ಅಂಕಲ್ ಇದ್ದೋರು, “ಎರಡು ದಿನಕ್ಕೋಸ್ಕರ ಮನೆಗೆ ಬಂದಿದ್ದೀಯ, ಸುಮ್ನೆ ಹೊರಗೆ ತಿರುಗಾಡಿ ಯಾಕೆ ಸುಸ್ತು ಮಾಡ್ಕಂತೀಯ?” ಅಂತ dialogue ಹೊಡೆದ ತಕ್ಷಣ, ಹೊರ ಹೊಮ್ಮುತ್ತಿರುವ josh ಎಲ್ಲ ಮಾಯ! ಟಿ.ವಿ.ನಾದ್ರೂ ಎಷ್ಟು ಅಂತ ನೋಡೋದು. ನಮ್ಮನ್ನ ನೋಡಿ ಆ ಟಿ.ವಿ.ಗೇ ಬೇಜಾರಾಗಿಬಿಡುತ್ತೆ. ‘ದೇವದಾಸ್ ನನ್ಮಗ! ನಂಗೆ ಹಿಂದೆ ಕರೆಂಟ್ ಚುಚ್ಚಿ ಅದೆಷ್ಟು ಮಜಾ ತಗೊಂತಾನೆ.’ ಅಂತ ಆನ್ ಮಾಡಿದ್ರಿಂದ off ಮಾಡೋ ತನಕಾ ಉರ್ಕೊಂತಾ ಇರುತ್ತೇನೋ!
ಇನ್ನು, ಯಾರ್ದೋ ಮನೇಲಿ function ಇದೆ ಅಂತ ನಮ್ಮನ್ನ ಹೋರಿ ಥರ ಅಲ್ಲಿಗೆ ಎಳ್ಕಂಡೋದ್ರೆ, ಅಲ್ಲಿ ನೋಡ್ದೋರೆಲ್ಲ, ಯಾರನ್ನೋ interview ಮಾಡೋಥರ, “ಏನ್ರೀ, ನಿಮ್ಮಗಾನಾ? ಎಷ್ಟೆತ್ತರ ಆಗ್ಬಿಟ್ಟಿದ್ದಾನೆ. ಏನಪ್ಪಾ? ಏನ್ ಮಾಡ್ತಿದ್ದೀಯಾ? ಯಾವೂರು? ಯಾವ ವರ್ಷ? ಇನ್ನೂ ಎಷ್ಟು ವರ್ಷ? ಮುಂದೇನು? ಚೆನ್ನಾಗಿ ಓದ್ತಾ ಇದೀಯಾ? Exam ಯಾವಾಗ?” ಕಸ-ಕಡ್ಡಿ ಎಲ್ಲಾನೂ ಕೇಳ್ತಾರೆ. Silly questionsಉ. ‘ಎಷ್ಟೆತ್ತರ ಬೆಳೆದುಬಿಟ್ಟಿದ್ದಾನೆ, ಮುಂಚೆ ಎಷ್ಟು ಸಣ್ಣಕ್ಕಿದ್ದ’ ಏನು, ಎಲ್ರೂ ಸಣ್ಣಕೇ ಇರೋಕಾಗುತ್ತಾ? ನಮ್ಮ exam ಬಗ್ಗೆ ನಮಗಿಂಥಾ ಅವ್ರಿಗೇ ಹೆಚ್ಚು interestಉ. ಒಬ್ರಿಬ್ರಲ್ಲ, ಅಲ್ಲಿರೋರು ಎಲ್ರೂ ಹಿಂಗೇ. ಒಂದು board ನೇತಾಕ್ಕಂಬೇಕು ಅನ್ನಿಸ್ಬಿಟ್ಟಿರುತ್ತೆ. ಆ function Hall middleನಲ್ಲಿ ನಿಂತ್ಕಂಡು ಜೋರಾಗಿ ಅರುಚ್ಕೊಂಡು biodata ಹೇಳಣಾ ಅನ್ನಿಸುತ್ತೆ. ಅಟ್ಟಿಸ್ಕೊಂಡು ಬಂದು ಬಗ್ಗಿಸಿ ಬಾರ್ಸಿದ್ರೆ ಅಂತ ಭಯ.
ಇನ್ನು ಊರಿಗೆ ಹೋದ್ರೆ ಇನ್ನೂ ಮಜಾ. ಅಮ್ಮ ಇದ್ದೋಳು “ಎಲ್ರ ಮನೆಗೆ ಹೋಗಿ ಒಮ್ಮೆ ಮುಖ ತೋರಿಸ್ಕಂಡು ಬಾ” ಅಂತ ಆಜ್ಞೆ ಕೊಟ್ಟ ತಕ್ಷಣ, ಹೊರಡೋದು. ಪ್ರತಿ ಒಬ್ರ ಮನೇಲೂ ಅರ್ಧರ್ಧ ಗಂಟೆ ಸುಮ್ನೆ ಮುಖ-ಮುಖ ನೋಡ್ಕಂಡು ಕುಂತ್ಕಂಡ್ರೆ, ಕೊನೇಗೆ ಅವ್ರು ಕಾಫಿ ಕೊಟ್ರೆ ಹೋಗ್ತಾನೆ ಅಂತ sketch ಹಾಕ್ಕಂಡು ಒಂದು ದೊಡ್ಡ ಲೋಟದಲ್ಲಿ ಕಾಫಿ ಕೊಡ್ತಾರೆ. “ಚೆನ್ನಾಗಿ ಓದ್ಕೋ. ನಿಮ್ಮ ಆ ಬದ್ಮಾಶ್ ಚಿಕ್ಕಪ್ಪಂಗೆ ನೀನೇನು ಅಂತ ತೋರಿಸ್ಬೇಕು.’’ ಅಂತ ಒಂದು ಜ್ವಾಲೆ ಹೊತ್ತಿಸಿ ಬೀಳ್ಕೊಡ್ತಾರೆ. ಎಲ್ರ ಮನೇಲೂ ಅದೇ tank size ಲೋಟದಲ್ಲಿ coffee ಕುಡ್ದೂ ಕುಡ್ದೂ blood ಎಲ್ಲಾ decoction ಆಗ್ಬಿಟ್ಟಿರುತ್ತೆ.
ಮನೆಗೆ ಹೋದ್ರೆ ‘ಎರಡು ಮೂರು ದಿನಕ್ಕೆ’ ಅಂತ ಹೋಗೋದು. ಏನಕ್ಕೆ ಹೋಗೋದು ಅಂದ್ರೆ relaxationಗೆ ಅಂತ. Change of work is rest ಅಂತಾ ಹೇಳ್ತಾರೆ. But ಈ ರೀತಿ ಆದ್ರೆ, no work no rest. ನಾನು ತುಂಬಾ ಜನರತ್ರ discuss ಮಾಡಿದ್ದೀನಿ. ಆದ್ರೆ ಇನ್ನೂ ನಂಗೊಂದು idea ಸಿಕ್ಕಿಲ್ಲ. “ಏನೋ ಮನೆಗೋಗಿ ಏನ್ ಮಾಡೋದು ಅಂತೀಯ? ನಾಚಿಕೆ ಆಗಲ್ವಾ waste body. Enjoy ಮಾಡೋ’ ಅಂತ ಬಾಯಿಗೆ ಬಂದಂಗೆಲ್ಲ suggestion ಕೊಟ್ಟಿದ್ದಾರೆ. ಅವ್ರು ಮಾಡೋದು ಅಷ್ಟೇ. Content ಇಲ್ದಂಗೆ ಕುಯ್ಯಕ್ಕೆ ಹೇಳ್ಕೊಡ್ಬೇಕಾ?
So, at last; one request. At least ನಿಮ್ಮಲ್ಲೇ ಯಾರಾದ್ರೂ ಒಬ್ಬ ಪುಣ್ಯಾತ್ಮ “ಹಿಂಗೆ ಮಆಡು ತಮ್ಮಾ, ಬದುಕ್ಕಂಟೀಯ” ಅಂತ ಉತ್ತಮ ದಾರಿ ತೋರಿಸಿ ಕೊಟ್ರೆ “ಗುರುವೇ, ಶರಣು” ಅಂತ surrender ಆಗ್ಬಿಡ್ತೀನಿ. ಅಂತಹ golden wordsನ ನಮ್ಮ ಎಡಿಟರ್ ಸಾಹೇಬ್ರು ನನ್ನ ಕಾಲಂನ ಸ್ವಲ್ಪ ಸ್ಪೇಸಿನಲ್ಲಿ ತುಂಬುಸ್ತಾರೆ. ನನ್ನ ಪಿಟೀಲಿನ ಜೊತೆ ನಿಮ್ದು ಸ್ವಲ್ಪ remix ಇರ್ಲಿ. ಮತ್ತೊಂದು ವಿಸ್ಯ. ಈ ರೀತಿ problemಗಳು ತುಂಬಾ ಇರ್ತಾವೆ. ಅದ್ನ ನಮ್-ನಮ್ಮಲ್ಲೇ discuss ಮಾಡ್ಕಂಡು, ಒಳ್ಳೊಳ್ಳೇ ideas ಜೊತೆ ಮೇಲೆ ಬಂದ್ರೆ, ಇಂಥ ಚಿಕ್ಕ ವಿಷಯಗಳೇ ಮುಂದೆ ನಿಮ್ಮ ನಸೀಬನ್ನು ಬದಲಾಯಿಸಬಹುದು. Great people do the same normal work differently. ಹಂಗಂತ ಏನೇನೋ ಮಾಡ್ಬೇಡಿ. ಕೈ ಜೊತೆ ಮೈ ಕೂಡ ಸುಟ್ಟೋಗತ್ತೆ. Ok! So, think on every bit of work you do, ಇಷ್ಟೋತ್ತಂಕ ನನ್ನ ಭಾಷಣ ಬಿಗಿಸಿಕೊಂಡಿದ್ದಕ್ಕೆ ಧನ್ಯವಾದ.
Meet you in the next issue, Bye.
ನಿಮ್ಮ ಪ್ರೀತಿಯ
ಮಚೆಂಪು
ಅವಳೆಂದು ನೀಡಿದ ಅಂತರಂಗದ ಒಳಗೆ…
Posted ಸೆಪ್ಟೆಂಬರ್ 30, 2008
on:ಹಗಲು ಮಲಗಿತೆಂದರೆ ಸಾಕು
ಮಬ್ಬಿದಿರಿಸಿನಲಿ ಕುಣಿಯತೊಡಗುತವೆ ಕನಸುಗಳು
ಯಾರ ಒತ್ತಾಯಕ್ಕೊ ಸಿಕ್ಕು
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..
ಆಚಮನಕ್ಕೆ ತೆಗೆದಿರಿಸಿದ ಉದಕ
ಅಂಗೈಗೆ ಜಾರಿದೊಡೆ ಆವಿಯಾದುದಕೆ ಆಶ್ಚರ್ಯವಿಲ್ಲ
ನಾನು ಮಾತ್ರ ಕಾಣಬಲ್ಲೆ ವಡಬಾನಲ
ಅವಳೆಂದು ಕೊಂಡು ನೀಡಿದ ಅಂತರಂಗದ ಒಳಗೆ..
ಬದುಕು ಹಸನಾಗುವ ಬಯಕೆಗಳೆಲ್ಲ
ಆಣೆಗಳೊಡಗೂಡಿ ಭರವಸೆಗಳ ಜೋಡಿ ಮೆರೆದಿದ್ದವು
ಇಂದಿಗೂ ಒಬ್ಬಂಟಿಯಾಗಿ ಚರಿಸುತಿವೆ
ಅವಳೆಂದುಕೊಂಡು ನೀಡಿದ ಅಂತರಂಗದ ಒಳಗೆ..
ಸುಧೆ ಸೂಸುವ ಹೂದೋಟದಲಿ
ಹಾಲಾಹಲವನೆರೆದು ಹಣ್ಣು ನೀಡೆಂದು ಹೇಳಬಹುದೆ?
ಒಲವೆಲ್ಲ ಉಡುಗಿ ಹೋದ ಮೇಲೆ ಉಳಿಯಿತೇನು..?
ಅವಳೆಂದು ನೀಡಿದ ಅಂತರಂಗದ ಒಳಗೆ…
-ಸಚಿನ್ ಕುಮಾರ ಬಿ.ಹಿರೇಮಠ
- In: ದಿ ಡಿಬೇಟ್
- 2 Comments
ಈ ಸಂಚಿಕೆಯ ಡಿಬೇಟಿನ ವಿಷಯ ದೇಶಪ್ರೇಮಿ V/s ವಿಶ್ವಮಾನವ. ದೇಶಪ್ರೇಮ ವಿಶ್ವಮಾನವತೆಯನ್ನು ಹೊಂದಲು ಅಡ್ಡಿಯಾಗುತ್ತದೆಯೇ? ದೇಶಪ್ರೇಮವಿಲ್ಲದವ ವಿಶ್ವಮಾನವನಾಗಲು ಸಾಧ್ಯವಿಲ್ಲವೇ?
ದೇಶಪ್ರೇಮವಿಲ್ಲದವನು ಇಡೀ ವಿಶ್ವದ ಬಗ್ಗೆ ಅಭಿಮಾನವನ್ನು ಹೊಂದಲು ಸಾಧ್ಯವಿಲ್ಲ. ದೇಶದಲ್ಲಿನ ವೈವಿಧ್ಯತೆಯನ್ನು ಪ್ರೀತಿಸದವನು ಜಗತ್ತಿನ ಓರೆಕೋರೆಗಳನ್ನು ಸಮದೃಷ್ಠಿಯಿಂದ ಕಾಣಲಾರ ಎಂದು ವಾದಿಸಿದ್ದಾರೆ ಸುಪ್ರೀತ್.ಕೆ.ಎಸ್
ನಮ್ಮ ಆದರ್ಶಗಳು, ಕಲ್ಪನೆಗಳು ಎಷ್ಟೇ ಉದಾತ್ತವಾದರೂ ನಮ್ಮ ಹೃದಯ ಅಷ್ಟು ವಿಶಾಲವಾಗದೆ, ನಮ್ಮ ಗ್ರಹಿಕೆ ಅಷ್ಟು ಪಕ್ವವಾಗದೆ ಅವು ಯಥಾವತ್ತಾಗಿ ಅನುಷ್ಠಾನಕ್ಕೆ ಬರಲು ಸಾಧ್ಯವಾಗುವುದಿಲ್ಲ. ಸರೋವರದ ನೀರು ಎಷ್ಟೇ ಶುಭ್ರವಾದರೂ, ಎಷ್ಟೇ ಸವಿಯಾಗಿದ್ದರೂ ನಮ್ಮ ಪಾತ್ರೆ ಮಲಿನವಾಗಿದ್ದರೆ ನಮಗೆ ದಕ್ಕುವುದು ಮಲಿನವಾದ ನೀರೇ. ಚರಂಡಿಯಲ್ಲಿ ಗಂಗೆಯೇ ಹರಿದರೂ ಗಬ್ಬುನಾತವೇ ಹೊಮ್ಮುತ್ತದೆ. ನಮ್ಮ ಆದರ್ಶಗಳ ಸಂಗತಿಯೂ ಇಷ್ಟೇ. ಎಷ್ಟೇ ಉತ್ತಮವಾದ, ಸಾರ್ವತ್ರಿಕವಾದ ಚಿಂತನೆಯನ್ನು, ಜೀವನ ಧ್ಯೇಯವನ್ನು ಹೊಂದಿದ್ದರೂ ಸಹ ನಮ್ಮ ವ್ಯಕ್ತಿತ್ವದ ಸಾಮರ್ಥ್ಯಕ್ಕನುಗುಣವಾಗಿ ಅದು ಸಾಕಾರಗೊಳ್ಳುತ್ತದೆ. ಸಮಾಜದ ಸುಲಲಿತ ಆಡಳಿತಕ್ಕಾಗಿ ರೂಪುಗೊಂಡ ಶ್ರೇಣಿಕೃತ ವ್ಯವಸ್ಥೆ ಮನುಷ್ಯನ ಚೇತನವನ್ನೇ ತಿಂದುಹಾಕುವ ಕ್ರೂರ ಜಾತಿ ಪದ್ಧತಿಯಾಗಿ ರೂಪುಗೊಳ್ಳುತ್ತದೆ. ಮನುಷ್ಯನಲ್ಲಿ ಪ್ರೇಮ, ಸಹೋದರತೆಯನ್ನು ಬಿತ್ತಲು ಸ್ಥಾಪಿತವಾದ ಧರ್ಮ ಬಾಂಬುಗಳನ್ನು ಸಿಡಿಸುತ್ತದೆ. ಪ್ರಜ್ಞೆಯನ್ನು ಎತ್ತರೆತ್ತರಕ್ಕೆ ಕೊಂಡಯ್ಯಲು ಸ್ಪೂರ್ತಿಯಾಗಿ ಹುಟ್ಟಿದ ದೇವರುಗಳು ಶೋಷಣೆಯ ಸರಕಾಗುತ್ತವೆ. ಈ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯತೆ ಹಾಗೂ ದೇಶಪ್ರೇಮದ ಬಗ್ಗೆ ಚಿಂತಿಸಬೇಕಾಗುತ್ತದೆ.
‘ದೇಶಪ್ರೇಮವೆಂದರೆ, ಜಗತ್ತಿನಲ್ಲಿ ತನ್ನ ದೇಶವೊಂದೇ ಶ್ರೇಷ್ಠ ಎಂದು ನಂಬುವುದು’ ಎಂದು ಲೇವಡಿ ಮಾಡುತ್ತಾನೆ ಜಾರ್ಜ್ ಬರ್ನಾಡ್ ಶಾ. ರಾಷ್ಟ್ರ ಎಂಬ ಕಲ್ಪನೆ ವಿವಿಧ ಮನೋಭಾವದ, ವಿವಿಧ ಸಂಸ್ಕೃತಿ, ಸಂಸ್ಕಾರದ ಜನರು ಕಲೆತು ಒಂದಾಗುವುದಕ್ಕೆ ನೆರವಾಗುವ ಬದಲು ಹೊರಗಿನವರೊಡನೆ ಹೋರಾಡಲು ಒಂದಾಗುವ ಗುಂಪಾಗುತ್ತಿದೆ. ರಾಷ್ಟ್ರೀಯತೆಯ ಕಲ್ಪನೆ ನಮ್ಮ ಚಿಂತನೆಯನ್ನು, ಕಾಳಜಿಗಳನ್ನು ಸಂಕುಚಿತಗೊಳಿಸುತ್ತಿದೆ. ನಮ್ಮಲ್ಲಿ ಸ್ವಾರ್ಥವನ್ನು ಬಿತ್ತಿ ಯುದ್ಧಗಳಿಗೆ ಕಾರಣವಾಗುತ್ತಿದೆ ಎಂಬುದು ಹಲವರ ವಾದ. ಇವರ ದೃಷ್ಟಿಯಲ್ಲಿ ರಾಷ್ಟ್ರೀಯತೆ ಮನುಷ್ಯನು ‘ವಿಶ್ವ ಮಾನವ’ನಾಗುವುದಕ್ಕೆ ಅಡ್ಡಿಯಾಗಿ ನಿಂತ ತಡೆಗೋಡೆ. ಅದನ್ನು ಕುಟ್ಟಿ ಪುಡಿ ಮಾಡದಿದ್ದರೆ ಮನುಕುಲದ ಏಳಿಗೆ ಸಾಧ್ಯವಿಲ್ಲ.
ರಾಷ್ಟ್ರೀಯತೆಯ ಮಹತ್ವವೇನು ಎಂದು ಆಲೋಚಿಸುವ ಮೊದಲು ಆ ಕಲ್ಪನೆಯ ಆವಶ್ಯಕತೆ ಹುಟ್ಟಿದ್ದು ಎಲ್ಲಿ ಎಂಬುದನ್ನು ತಿಳಿಯಲು ಪ್ರಯತ್ನಿಸೋಣ. ಮನುಷ್ಯ ಸಂಘ ಜೀವಿ ಎನ್ನುತ್ತೇವೆ. ಆತ ಒಬ್ಬಂಟಿಯಾಗಿ ಬದುಕಲಾರದೆ ತನ್ನದೊಂದು ಪರಿವಾರವನ್ನು ಕಟ್ಟಿಕೊಂಡು ಅಲೆದಾಡುತ್ತಿದ್ದ. ಪ್ರತಿಯೊಬ್ಬರೂ ಆ ಪರಿವಾರದ ಸದಸ್ಯರಾದರು. ತನ್ನ ಏಳಿಗೆಯ ಬಗ್ಗೆ, ತನ್ನ ಹಸಿವಿನ ಬಗ್ಗೆ ಮಾತ್ರ ಆಲೋಚಿಸುತ್ತಿದ್ದವನ ಪರಿಧಿಗೆ ಪರಿವಾರವೂ ಸೇರಿಕೊಂಡಿತು. ಪರಿವಾರದ ಯೋಗಕ್ಷೇಮ, ಸೌಖ್ಯದ ರಕ್ಷಣೆ ಆತನ ಕರ್ತವ್ಯವಾಯಿತು. ಪರಿವಾರವೆಂಬುದು ಆತನ ವ್ಯಕ್ತಿತ್ವದ ವಿಸ್ತರಣೆಯಾಯಿತು. ಪರಿವಾರದ ಏಳಿಗೆಗಾಗಿ ತನ್ನನ್ನು ತಾನು ಬಲಿದಾನ ಮಾಡಲು ಸಿದ್ಧನಾಗುವಷ್ಟು ಗಾಢವಾಗಿ ‘ಪರಿವಾರ ಪ್ರಜ್ಞೆ’ ಆತನಲ್ಲಿ ಮನೆ ಮಾಡಿತು. ಹೀಗೆ ತಾನು, ತನ್ನದು ಎಂಬ ಲೋಕದಲ್ಲಿ ತನ್ನವರು ಎನ್ನುವ ಆಯಾಮವೂ ಸೇರಿಕೊಂಡಿತು. ತನ್ನ ಬೆಳವಣಿಗೆಯಿಂದ ಪರಿವಾರದ ಇತರರಿಗೆ ತೊಂದರೆಯಾಗಬಾರದು ಎಂಬ ನಾಗರೀಕ ಪ್ರಜ್ಞೆ ಬೆಳೆಯಿತು. ಇದರೊಂದಿಗೆ ಸಹಜವಾಗಿ ತನ್ನ ಪರಿವಾರದ ಬಗ್ಗೆ ಪೊಸೆಸಿವ್‌ನೆಸ್ ಕೂಡ ಬೆಳೆಯಿತು. ಇದರಿಂದ ಇತರ ಪರಿವಾರಗಳೊಂದಿಗೆ ವ್ಯವಹರಿಸುವಲ್ಲಿ ಹಲವು ಅಡಚಣೆಗಳನ್ನು ಆತ ಎದುರಿಸಬೇಕಾಯಿತು. ಸದಾ ಅನುಮಾನ, ಅಭದ್ರತೆಯಲ್ಲೇ ನರಳುತ್ತಾ ತನ್ನ ಪರಿವಾರದ ಹಿತ ಕಾಯುವ ಕೆಲಸ ಅವನದಾಯಿತು.
ಕಾಲ ಚಲಿಸಿದಂತೆ ಪರಿವಾರಗಳೆಲ್ಲಾ ಒಟ್ಟಾಗಿ ಕಲೆತು ನಾಗರೀಕತೆಗಳು ಹುಟ್ಟಿಕೊಂಡವು. ಗ್ರಾಮಗಳು ಮೈದಳೆದವು. ಅನೇಕ ಪರಿವಾರಗಳು ಪರಸ್ಪರ ಕೈ ಜೋಡಿಸಿ ಗ್ರಾಮವನ್ನು ಕಟ್ಟಿಕೊಂಡವು. ಪರಿವಾರ ಪ್ರಜ್ಞೆಯ ಪರಿಧಿ ಮತ್ತಷ್ಟು ವಿಸ್ತರಿಸಿ ಗ್ರಾಮವಾಯಿತು. ತಮ್ಮ ಗ್ರಾಮದ ಏಳಿಗೆಗೆ ಪರಿವಾರ ಅಥವಾ ಕುಟುಂಬವನ್ನೂ ಸಹ ತ್ಯಾಗ ಮಾಡಲು ಜನರ ಮನಸ್ಥಿತಿ ರೂಪುಗೊಂಡಿತು. ಗ್ರಾಮಗಳು ಸೇರಿ ಜಿಲ್ಲೆಯಾಗಿ, ಅನೇಕ ಜಿಲ್ಲೆಗಳ ಗುಂಪು ರಾಜ್ಯವಾಗಿ, ಹತ್ತಾರು ರಾಜ್ಯಗಳ ಸಮೂಹ ರಾಷ್ಟ್ರವಾಗಿ ಬೆಳೆಯುವಲ್ಲಿ ಮನುಷ್ಯನ ಕಾಳಜಿ, ಆಲೋಚನೆಯ ಪರಿಧಿ ವಿಸ್ತಾರವಾಗುತ್ತಾ ಬಂದಿರುವುದನ್ನು ಗಮನಿಸಬೇಕು. ಕ್ರಮೇಣ ಹೆಚ್ಚು ಹೆಚ್ಚು ಗಾಳಿಯನ್ನು ತುಂಬಿಕೊಳ್ಳುತ್ತಾ ವಿಶಾಲವಾಗುವ ಬಲೂನಿನ ಹಾಗೆ ಮನುಷ್ಯನ ಹೃದಯ ವಿಶಾಲವಾಗಲು ಇವೆಲ್ಲಾ ಹಂತಗಳು ಆವಶ್ಯಕವಾದವು.
ತನ್ನ ಕುಟುಂಬದ ಒಳಿತು, ಸ್ವಹಿತಕ್ಕಿಂತ ಮಿಗಿಲು ಎಂದೆನಿಸಿದಾಗಲಷ್ಟೇ ವ್ಯಕ್ತಿಯೊಬ್ಬ ಕುಟುಂಬದ ಪ್ರತಿಯೊಬ್ಬರ ಬಗೆಗೂ ಆದರವನ್ನು, ಸಮಭಾವವನ್ನು, ವಿಶ್ವಾಸವನ್ನು ತಾಳಲು ಸಾಧ್ಯ. ಹಾಗೆಯೇ ಗ್ರಾಮವು ತನ್ನ ಕುಟುಂಬಕ್ಕಿಂತ ಮುಖ್ಯವಾದದ್ದು ಎಂದು ಭಾವಿಸಿದಾಗ ಕುಟುಂಬಗಳ ನಡುವೆ ಹಂಚಿಕೊಂಡು ಬಾಳುವ, ಹೊಂದಿಕೊಂಡು ನಡೆಯುವ ಪ್ರಬುದ್ಧತೆ ಬರುತ್ತದೆ. ಹೀಗೆ ಮುನ್ನಡೆದು ತಮ್ಮೆಲ್ಲಾ ವಿಂಗಡಣೆಗಳಿಗಿಂತ ದೇಶವೆಂಬುದು ದೊಡ್ಡದು ಎನ್ನುವುದು ಮನಸ್ಸಿನಲ್ಲಿ ಮೂಡಿದಾಗ ಜನರು ತಮ್ಮೆಲ್ಲಾ ಪ್ರತ್ಯೇಕತೆ, ಅಸಮಾನತೆಗಳನ್ನು ಮರೆತು ಒಂದಾಗುತ್ತಾರೆ.ಈ ಎಲ್ಲಾ ಮೆಟ್ಟಿಲುಗಳನ್ನು ಹಂತ ಹಂತವಾಗಿ ಏರುತ್ತಾ ಮನುಷ್ಯ ರಾಷ್ಟ್ರದ ಕಲ್ಪನೆಯನ್ನು ಆರಾಧಿಸುವ ಹಂತವನ್ನು ತಲುಪುತ್ತಾನೆ. ಇವುಗಳೆಲ್ಲಾ ಒಂದೇ ಏಣಿಯ ಮೆಟ್ಟಿಲುಗಳು. ಒಂದಕ್ಕೊಂದು ಪೂರಕವೇ ಹೊರತು ವಿರುದ್ಧವಲ್ಲ. ಮೊದಲ ಮೆಟ್ಟಿಲು ಎರಡನೆಯ ಮೆಟ್ಟಿಲನ್ನು ಹತ್ತುವುದಕ್ಕೆ ಸಹಕಾರಿಯೇ ಹೊರತು ಎರಡನೆಯದನ್ನು ಹತ್ತದಂತೆ ತಡೆಯುವ ಕಂಟಕವಲ್ಲ. ಹೀಗಾಗಿ ಏಣಿಯ ಅತಿ ಎತ್ತರದ ಮೆಟ್ಟಿಲ ಮೇಲೆ ನಿಂತು ನಮಗೆ ಬೇಕಿರುವುದು ಇದೊಂದೇ, ಇದೇ ಶ್ರೇಷ್ಠವಾದ, ಅತ್ಯುಚ್ಛವಾದದ್ದು ಉಳಿದವೆಲ್ಲಾ ಅನುಪಯುಕ್ತ, ಕೀಳು ಎಂದು ಹೇಳುವುದು ಮೂರ್ಖತನವಲ್ಲದೆ ಮತ್ತೇನು?
ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಅತ್ಯುಚ್ಛ ಎತ್ತರವನ್ನು ತಲುಪಿಕೊಳ್ಳಬೇಕು. ಅದು ಸಹಜವಾದ ಬೆಳವಣಿಗೆ. ಮೇಲೆ ಏರುವ ಪ್ರಕ್ರಿಯೆಯಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಬಿಟ್ಟು ನಡೆಯಬೇಕಾಗುತ್ತದೆ. ರಾಜ್ಯದ ಏಳಿಗೆಗಾಗಿ ಆಲೋಚಿಸುವಾಗ ತನ್ನ ಗ್ರಾಮದ ನೆನಪು ಮಸುಕಾಗುತ್ತದೆ. ದೇಶದ ಬಗ್ಗೆ ಚಿಂತಿಸುವಾಗ ರಾಜ್ಯಗಳ ಐಡೆಂಟಿಟಿ ಅಳಿಸಿಹೋಗುತ್ತದೆ. ಆದರೆ ನಿಂತ ಮೆಟ್ಟಿಲ ಮೇಲಿನ ಮೋಹದಿಂದ ಅಲ್ಲೇ ನಿಂತು ಇದೇ ಶ್ರೇಷ್ಠ. ನಾನು ಇನ್ನು ಮುಂದೆ ಏರುವುದಿಲ್ಲ. ನನಗಿದೇ ಸಾಕು ಎಂದು ಕೂರುವುದು ನಿಜವಾದ ಸಂಕುಚಿತತೆ. ಸಂಕುಚಿತತೆಗೆ ಏಣಿಯ ಮೆಟ್ಟಿಲು ಕಾರಣವಲ್ಲ, ಅದರ ಮೇಲಿನ ಮೋಹದಿಂದ ಅದನ್ನು ಕಚ್ಚಿಕೊಂಡು ನಿಂತವನ ದೌರ್ಬಲ್ಯ ಕಾರಣ.
ಹೀಗಾಗಿ ರಾಷ್ಟ್ರೀಯತೆ ಎಂದಿಗೂ ಮನುಷ್ಯನ ಚೇತನವನ್ನು ಬಂಧಿಸುವ ಸೆರೆಮನೆಯಾಗದು. ಆತ ವಿಶ್ವಮಾನವನಾಗಲಿಕ್ಕೆ ದೇಶಪ್ರೇಮ ಎಂದಿಗೂ ಮಾರಕವಾಗದು, ಬದಲಿಗೆ ಸಹಾಯಕವಾಗುವುದು. ಆದರೆ ದೇಶಪ್ರೇಮವನ್ನು ಕೀಳಾಗಿ ಕಾಣುವವ ಎಂದಿಗೂ ವಿಶ್ವಮಾನವನಾಗಲಾರ!
ಈ ಸಂಚಿಕೆಯ ಡಿಬೇಟಿನ ವಿಷಯ ದೇಶಪ್ರೇಮಿ V/s ವಿಶ್ವಮಾನವ. ದೇಶಪ್ರೇಮ ವಿಶ್ವಮಾನವತೆಯನ್ನು ಹೊಂದಲು ಅಡ್ಡಿಯಾಗುತ್ತದೆಯೇ? ದೇಶಪ್ರೇಮವಿಲ್ಲದವ ವಿಶ್ವಮಾನವನಾಗಲು ಸಾಧ್ಯವಿಲ್ಲವೇ?
ದೇಶಪ್ರೇಮವೆಂಬುದು ಯುದ್ಧಗಳ ತಾಯಿ. ದೇಶಪ್ರೇಮದಿಂದ ವಿಶ್ವ ಭ್ರಾತೃತ್ವ ಅಸಾಧ್ಯವಾದ ಸಂಗತಿಯಾಗುತ್ತದೆ ಎಂದು ವಾದಿಸಿದ್ದಾರೆ ಚಂದ್ರಶೇಖರ್ ಪ್ರಸಾದ್.
ಇಬ್ಬರು ಮಕ್ಕಳು ಆಟವಾಡಲು ಅಂಗಳದಲ್ಲಿ ಕಲೆಯುತ್ತಾರೆ. ಅಲ್ಲೇ ಬಿದ್ದಿದ್ದ ಹತ್ತಾರು ಕಲ್ಲುಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಆಟದ ಓಘದಲ್ಲಿ ತಮ್ಮ ತಮ್ಮ ಕಲ್ಲುಗಳ ಮೇಲೆ ಹೆಮ್ಮೆ ಬೆಳೆಯುತ್ತದೆ. ತನ್ನದೇ ಕಲ್ಲುಗಳು ಶ್ರೇಷ್ಠ ಎಂದು ಇಬ್ಬರೂ ವಾದ ಮಾಡಲು ಶುರುಮಾಡುತ್ತಾರೆ. ಮೊದ ಮೊದಲು ಬಾಯಿಮಾತಿನಲ್ಲಿ ಶುರುವಾಗುವ ಜಗಳ ಕೈಕೈ ಮಿಲಾಯಿಸುವ ಹಂತವನ್ನು ಮುಟ್ಟುತ್ತದೆ. ಇಬ್ಬರೂ ಒಬ್ಬರನ್ನೊಬ್ಬರು ದ್ವೇಷಿಸಲು ಶುರು ಮಾಡುತ್ತಾರೆ. ಒಬ್ಬ ಮತ್ತೊಬ್ಬನ ಕಲ್ಲುಗಳನ್ನು ನಾಶ ಮಾಡಲಿಕ್ಕೆ ಯೋಜನೆಗಳನ್ನು ಹಾಕುತ್ತಾನೆ. ತನ್ನ ಕಲ್ಲುಗಳನ್ನು ರಕ್ಷಿಸಿಟ್ಟುಕೊಳ್ಳಲು ಸುಭದ್ರವಾದ ಬೇಲಿಯನ್ನು ಕಟ್ಟಿಕೊಳ್ಳುತ್ತಾನೆ. ತಾನು ಇಲ್ಲದಿರುವ ಸಮಯದಲ್ಲಿ ಕಲ್ಲುಗಳಿಗೆ ಅಪಾಯವಾಗಬಾರದೆಂದು ಅವನ್ನು ಕಾಯಲು ಆಳುಗಳನ್ನು ನೇಮಿಸುತ್ತಾನೆ. ತಮ್ಮ ತಮ್ಮ ಕಲ್ಲುಗಳನ್ನು ಕಾಯುವುದರಲ್ಲಿ ಪ್ರಾಣ ಬಿಟ್ಟವರನ್ನು ಮಹಾತ್ಮರು ಎಂದು ಆರಾಧಿಸುತ್ತಾರೆ.ಇಬ್ಬರೂ ವರ್ಷದ ಮುನ್ನೂರ ಅರವತ್ನಾಲ್ಕು ದಿನವೂ ಕತ್ತಿ ಮಸೆಯುತ್ತಾ ಕುಳಿತಿದ್ದು ಒಂದು ದಿನ ದ್ವೇಷ ಮರೆತು ಒಟ್ಟಾಗಿ ಕಲೆತು ಆಟವಾಡುವ ಒಪ್ಪಂದ ಮಾಡಿಕೊಳ್ಳುತ್ತಾರೆ.
ಹೇಗಿದೆ, ಕಲ್ಪನೆ? ಹಾಸ್ಯಾಸ್ಪದ ಎನಿಸುತ್ತದೆಯಲ್ಲವೇ? ಭೂಮಿಯ ಮೇಲೆ ಬುದ್ಧಿವಂತ ಜೀವಿ ಎನ್ನಿಸಿಕೊಂಡಿರುವ ಮನುಷ್ಯರು ಘನಗಂಭೀರವಾಗಿ ಮಾಡುತ್ತಿರುವುದು ಇದೇ ಕೆಲಸವನ್ನೇ. ಇರುವ ಒಂದೇ ಭೂಮಿಯ ಮೇಲೆ ಇದು ತನ್ನದು, ಇದು ನಿನ್ನದು ಎಂದು ಗೀರುಗಳನ್ನೆಳೆದು ಪಾಲು ಮಾಡಿಕೊಂಡು, ತನ್ನದನ್ನು ರಕ್ಷಿಸಿಕೊಳ್ಳುವ ಇತರರದನ್ನು ಹಾಳು ಮಾಡುವ ಸಂಭ್ರಮದಲ್ಲಿ ಮುಳುಗಿ ಏಳುತ್ತಿದ್ದಾನೆ. ಈತನ ಈ ‘ಅತಿ ಬುದ್ಧಿವಂತಿಕೆ’ಯಿಂದಲೇ ಜಗತ್ತು ಎರಡು ಮಹಾಯುದ್ಧಗಳನ್ನು ಕಂಡಿದೆ. ಅಸಂಖ್ಯಾತ ಕಾಳಗಗಳಿಗೆ ಸಾಕ್ಷಿಯಾಗಿದೆ. ತನ್ನ ಹೆಮ್ಮೆ, ಸ್ವಾರ್ಥ, ಆದರ್ಶ, ಸಿದ್ಧಾಂತ, ತತ್ವದ ಜಾತ್ರೆಯಲ್ಲಿ ಮೈಮರೆತವನಿಗೆ ಇರುವ ಇದೊಂದೇ ಭೂಮಿ ಕೇವಲ ನಮಗೆ ಮಾತ್ರವಲ್ಲ, ಇಡೀ ಜೀವ ಸಂಕುಲಕ್ಕೆ ಸೇರಿದ್ದು ಎಂಬುದು ಮರೆತುಹೋಗಿದೆ.
ಭೂಮಿಯ ಮೇಲೆ ಯಾರ ಒಡೆತನವೂ ಇರಬಾರದು ಎಂಬ ತತ್ವ ಬಹಳ ಮುಖ್ಯವಾದದ್ದು. ಒಡೆತನದ ಪ್ರಶ್ನೆ ಬಂದಾಗಲೇ ಜಗಳಗಳು, ಬಲಾ ಬಲದ ಪ್ರದರ್ಶನಗಳು, ಅಸಂಬದ್ಧ ಮೇಲಾಟಗಳು ನಡೆಯುವುದು. ಸ್ವಚ್ಛಂದವಾಗಿ ಓಡಾಡಿಕೊಂಡು ಸಿಕ್ಕಲ್ಲಿ ಸಿಕ್ಕಷ್ಟನ್ನು ತಿಂದು ಬದುಕಿ, ಬಾಳಿ, ನಲಿದು ಸವೆದು ಹೋಗುವ ಪ್ರಾಣಿಗಳಲ್ಲಿಯೂ ಸ್ವಲ್ಪ ಅಂಶದ ‘ಒಡೆತನದ’ ವರ್ತನೆ ಕಂಡುಬರುತ್ತದೆ. ಪ್ರಾಣಿಯೂ ಸಹ ತನ್ನ ಆಹಾರದ ಭದ್ರತೆಗಾಗಿ, ತನ್ನ ಗುಂಪಿನ ಹಿತಕ್ಕಾಗಿ ಸೀಮೆಗಳನ್ನು ರೂಪಿಸಿಕೊಂಡಿರುತ್ತದೆ. ಈ ಸೀಮೆಯನ್ನು ಮೀರಿ ಬರುವ ಪ್ರಾಣಿಯೊಂದಿಗೆ ಇವು ಹೋರಾಡುತ್ತವೆ. ತಮ್ಮೊಳಕ್ಕೆ ಹೊರಗಿನದನ್ನು ಸೇರಿಸಿಕೊಳ್ಳಲು ಇವು ಇಚ್ಚಿಸುವುದಿಲ್ಲ. ಇದೆಲ್ಲಾ ನಡೆಯುವುದು ತನ್ನ ಆಹಾರಕ್ಕೆ ಎಲ್ಲಿ ಕುತ್ತು ಬರುತ್ತದೆಯೋ ಎಂಬ ಅಭದ್ರತೆಯಲ್ಲಿ. ವಿವೇಚನಾಶಕ್ತಿಯಿಲ್ಲದ ಪ್ರಾಣಿಗಳು ವರ್ತಿಸಿದ ಹಾಗೆಯೇ ಮನುಷ್ಯನೂ ವರ್ತಿಸುವುದೆಂದರೆ? ಒಂದು ದೇಶದ ಪ್ರಜೆ ಮತ್ತೊಂದು ದೇಶಕ್ಕೆ ಹೋಗಬೇಕೆಂದರೆ ಅಲ್ಲಿನ ಸರಕಾರದ ಅಂದರೆ ಅಲ್ಲಿನ ಜನಗಳ ಅನುಮತಿಯನ್ನು ಪಡೆಯಬೇಕಾಗುತ್ತದೆ ಎಂದರೆ ಮನುಷ್ಯರಾಗಿ ನಮ್ಮದು ಅದೆಂಥಾ ಹಿರಿಮೆ?
ಮನುಷ್ಯ ಸರ್ವಸ್ವತಂತ್ರವಾಗಿ ಬಾಳಿ ಬದುಕಬೇಕು. ಆತನ ಎಲ್ಲಾ ಆವಶ್ಯಕತೆಗಳನ್ನು ಪೂರೈಸುವುದಕ್ಕೆ ನಿಸರ್ಗ ಸಮರ್ಥವಾಗಿದೆ. ಈ ಸೃಷ್ಟಿಯಲ್ಲಿನ ಪ್ರತಿಯೊಂದು ಸಂಪತ್ತಿನ ಮೇಲೂ ಎಲ್ಲರ ಹಕ್ಕು ಇದೆ. ತನ್ನ ಜೀವಿತಕ್ಕೆ ಎಷ್ಟು ಬೇಕೋ ಅಷ್ಟು ನಿಸರ್ಗ ಸಂಪತ್ತನ್ನು ಬಳಸಿಕೊಂಡು ಉಳಿದದ್ದನ್ನು ಹಾಳು ಮಾಡದೆ ಬದುಕಬೇಕಾದ ಹೊಣೆಗಾರಿಕೆ ಮನುಷ್ಯನ ಮೇಲಿದೆ. ಆದರೆ ದೇಶಗಳ ಗಡಿಯನ್ನು ಕೊರೆದುಕೊಂಡು ಕೂತಿರುವ ನಾವು ಮಾಡುತ್ತಿರುವುದಾದರೂ ಏನನ್ನು? ನಿಸರ್ಗದ ಸಂಪತ್ತಿನ ಮೇಲೆ ಯಜಮಾನಿಕೆಯನ್ನು ಸ್ಥಾಪಿಸಿದ್ದೇವೆ. ತಮ್ಮ ತಾತಂದಿರು, ಮುತ್ತಾತಂದಿರು ಅಲ್ಲಿ ವಾಸವಾಗಿದ್ದರು ಎಂಬ ಕಾರಣಕ್ಕೆ ಚಿನ್ನದ ಗಣಿಗಳು, ಪೆಟ್ರೋಲಿನ ಬಾವಿಗಳು ಒಂದು ದೇಶದವರ ಒಡೆತನಕ್ಕೆ ಬರುತ್ತವೆ. ಫಲವತ್ತಾದ ಭೂಮಿ, ಸಮೃದ್ಧವಾದ ಕಾಡುಗಳ ಮೇಲೆ ಇನ್ಯಾವುದೋ ದೇಶ ತನ್ನ ಮೊಹರನ್ನು ಒತ್ತುತ್ತದೆ. ಒಂದು ದೇಶದಲ್ಲಿನ ಜನರು ಕನಿಷ್ಠ ಆವಶ್ಯಕತೆಗಳ ಪೂರೈಕೆಯಾಗದೆ ಹತಾಶೆಯಲ್ಲಿ ನರಳಿ ಪ್ರಾಣಬಿಡುತ್ತಿದ್ದರೆ ಮತ್ತೊಂದು ದೇಶದಲ್ಲಿ ಅತಿಯಾಗಿ ತಿಂದು ವಿವಿಧ ರೋಗಗಳಿಗೆ ತುತ್ತಾಗಿ ಜನರು ಸಾಯುತ್ತಿದ್ದಾರೆ. ಎಲ್ಲರ ಆವಶ್ಯಕತೆಯನ್ನು ಪೂರೈಸುವುದಕ್ಕೆ ಬಳಕೆಯಾಗಬೇಕಾದ ಪ್ರಾಕೃತಿಕ ಸಂಪತ್ತಿನ ಪಾಲು ಪಡೆಯಲು ಅವುಗಳ ಮೇಲೆ ಒಡೆತನವನ್ನು ಸ್ಥಾಪಿಸಿಕೊಂಡು ಕುಳಿತವರ ಮರ್ಜಿಯನ್ನು ಕಾಯುತ್ತಾ ಕೂರಬೇಕಾಗುತ್ತೆ.
ಮನುಷ್ಯ ತನ್ನ ಬದುಕನ್ನು ಹೆಚ್ಚು ಸಂಘಟಿತವಾಗಿಸಿಕೊಳ್ಳಲು ಕುಟುಂಬ, ಗ್ರಾಮ, ರಾಜ್ಯ, ದೇಶಗಳೆಂಬ ಯುನಿಟುಗಳನ್ನು ಕಟ್ಟಿಕೊಂಡ. ಇವೆಲ್ಲಾ ಕೇವಲ ಆತನ ಸೃಷ್ಟಿ. ಆತ ಒಪ್ಪಿಕೊಂಡ ವ್ಯವಸ್ಥೆ. ನಿಜವಾಗಿ ಅಸ್ತಿತ್ವದಲ್ಲಿರುವುದು, ಬದುಕಿರುವುದು ಮನುಷ್ಯ. ಹಸಿವಾಗುವುದು ಮನುಷ್ಯನಿಗೆ, ಸಮಾಜಕ್ಕಲ್ಲ. ನೀರು ಕುಡಿಯುವವನು ಮನುಷ್ಯ ‘ಭಾರತ’ ಎಂಬ ದೇಶವಲ್ಲ. ಜ್ಞಾನ ಬೇಕಿರುವುದು ಮನುಷ್ಯನಿಗೆ, ‘ಆಫ್ರಿಕಾ’ ಎಂಬ ಭೂಭಾಗಕ್ಕಲ್ಲ. ಆಡಳಿತದ, ನಿರ್ವಹಣೆಯ ಅನುಕೂಲಕ್ಕಾಗಿ ಮಾಡಿಕೊಂಡ ಏರ್ಪಾಟುಗಳಿಂದಾಗಿ ನಮ್ಮ ಮೂಲಭೂತ ಘಟಕವಾದ ‘ವ್ಯಕ್ತಿ’ಯೇ ಕಳೆದುಹೋಗುತ್ತಿದ್ದಾನೆ. ಒಂದು ಭೂಪ್ರದೇಶದ ಹೆಸರಿಗೆ ಮತ್ತಷ್ಟು ಭೂಪ್ರದೇಶವನ್ನು ಸೇರಿಸುವ ಭ್ರಮಯೆಲ್ಲಿ, ಒಂದು ಹೆಸರಿನ ಭೂಪ್ರದೇಶವನ್ನು ಕಾಯ್ದುಕೊಳ್ಳುವ ನೆಪದಲ್ಲಿ ಲಕ್ಷಾಂತರ ಮನುಷ್ಯರ ಪ್ರಾಣ ಆಹುತಿಯಾಗುತ್ತಿದೆ. ಧರ್ಮಗಳ, ಸಿದ್ಧಾಂತಗಳ ರಕ್ಷಣೆಯಲ್ಲಿ ಹೆಸರಿನಲ್ಲಿ ಮನುಷ್ಯರು ಬದುಕನ್ನು ಕೊನೆಗಾಣಿಸಿಕೊಳ್ಳುತ್ತಿದ್ದಾರೆ. ದೇಶ, ಗಡಿ, ಪಹರೆ, ಸೈನ್ಯ ಎಂದೆಲ್ಲಾ ನಾವು ಮಾಡಿಕೊಂಡದ್ದು ಪ್ರತಿಯೊಬ್ಬ ವ್ಯಕ್ತಿಯೂ ಸ್ವಚ್ಛಂದವಾಗಿ, ಪೂರ್ಣವಾಗಿ ತನ್ನ ಬದುಕನ್ನು ಬದುಕಲು. ಆದರೆ ಈಗ ನಡೆಯುತ್ತಿರುವುದೇನು? ದೇಶ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ, ನೆಲೆಯಾಗುತ್ತಿರುವ ವೈಮನಸ್ಸುಗಳಿಗೇನಾದರೂ ಅರ್ಥವಿದೆಯೇ?
‘ದೇಶಪ್ರೇಮವೆಂಬ ಭಾವನೆಯಿಂದಾಗಿ ಯುದ್ಧಗಳು ಹುಟ್ಟುವುದು’ ಎಂಬ ಹೇಳಿಕೆಯ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಜಾಗತಿಕ ಇತಿಹಾಸದಲ್ಲಿನ ಸಾಲು ಸಾಲು ಕಾಳಗಗಳ, ಮಹಾ ಸಮರಗಳ ವಿವರಣೆಯನ್ನು ತಿರುವಿ ಹಾಕಿದರೆ ಸಾಕು. ಬೇಲಿಗಳಿಲ್ಲದ ಇಡೀ ಭೂಮಿಯನ್ನೇ ಒಂದು ದೇಶವಾಗಿ ಕಾಣಲು ದೇಶ ಪ್ರೇಮ ಅವಕಾಶ ಮಾಡಿಕೊಡುವುದಿಲ್ಲ. ದೇಶಪ್ರೇಮದ ಅಸ್ತಿತ್ವವಿರುವುದು ಸ್ಪರ್ಧೆಯಲ್ಲಿ, ಇತರ ದೇಶಗಳೊಂದಿಗಿನ ತುರಿಸಿನಲ್ಲಿ. ಹೀಗಾಗಿ ದೇಶಪ್ರೇಮವೆಂಬ ಉನ್ಮಾದ ಮನುಷ್ಯನ ಮನಸ್ಸಿನಿಂದ ಮರೆಯಾಗುವವರೆಗೂ ರಕ್ತಪಾತ, ಕೊಲೆ, ಯುದ್ಧಗಳಿಗೆ ಭೂಮಿಯ ಮೇಲೆ ಕೊರತೆಯಿರುವುದಿಲ್ಲ.
ನೀವು ಕೊಡುವ ಸಂಬಳಕ್ಕೆ…
Posted ಸೆಪ್ಟೆಂಬರ್ 28, 2008
on:ವಿಲಿಯಂ ಜಿಲೆಟ್ ಹತ್ತೊಂಬತ್ತನೆ ಶತಮಾನದ ಅಮೇರಿಕನ್ ನಟ. ಒಮ್ಮೆ ನ್ಯೂಯಾರ್ಕಿನ ಥಿಯೇಟರೊಂದರಲ್ಲಿ ಆತ ಸಾಯುವ ಮನುಷ್ಯನ ಪಾತ್ರಧಾರಿಯಾಗಿದ್ದ. ನಾಟಕವನ್ನು ನೋಡಿದ ಮಾಲೀಕನಿಗೆ ಆತನ ನಟನೆ ಇಷ್ಟವಾಗಲಿಲ್ಲ.
ಆತ ಜಿಲೆಟ್‌ನನ್ನು ಕರೆಯಿಸಿ, “ಇವತ್ತಿನ ನಿನ್ನ ಶೋ ಕೆಟ್ಟದಾಗಿತ್ತು. ಆ ಸಾಯುವ ಸಂದರ್ಭದಲ್ಲಿ ಹೇಗೆ ನಟಿಸಬೇಕು… ನೀನು ನೋಡಿದ್ರೆ ನಗುತ್ತಿದ್ದೆಯಲ್ಲಾ?” ಎಂದು ಗದರಿದ.ಅದಕ್ಕೆ ಜಿಲೆಟ್, “ನೀವು ಕೊಡುವ ಸಂಬಳವನ್ನ ನೋಡಿದರೆ ನಾನು ನಗು ನಗುತ್ತಾ ಸಾಯುವುದು ಬಿಟ್ಟು ಬೇರೇನೂ ಮಾಡಲು ಸಾಧ್ಯವಿರಲಿಲ್ಲ.”
…..
“ಗಾಳಿಯಲ್ಲಿ ಮಹಲು ಕಟ್ಟಬೇಡಿ” ಎಂಬುದೊಂದು ಹಳೆಯ ಬುದ್ಧಿ ಮಾತು. “ಗಾಳಿಯಲ್ಲಿ ಮಹಲನ್ನು ಕಟ್ಟಿ” ಎಂದರು ಮದನ ಮೋಹನ ಮಾಳವೀಯರು, “ಆದರೆ ಅವುಗಳ ಕೆಳಗೆ ಫೌಂಡೇಶನ್ ಹಾಕುವುದನ್ನು ಮರೆಯಬೇಡಿ.”
– ನಗೆ ಸಾಮ್ರಾಟ್
ಗಣೇಶ ಚತುರ್ಥಿಯ ಹಬ್ಬದ ಸಂಭ್ರಮದಲ್ಲೇ ಬಿಡುವು ಮಾಡಿಕೊಂಡು ವಿನಾಯಕ ನಗೆ ನಗಾರಿಗಾಗಿ ಕೊಟ್ಟ ಎಕ್ಸ್‌ಕ್ಲೂಸಿವ್‌ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ನಗೆ ಸಾಮ್ರಾಟ್: ಗಜಮುಖ, ವಿನಾಯಕ, ಮೂಷಿಕವಾಹನನಿಗೆ ಶರಣು ಶರಣು.
ವಿನಾಯಕ: ನಮಸ್ಕಾರ ನಮಸ್ಕಾರ ನಮಸ್ಕಾರ!
ನ.ಸಾ: ಏನು ಲಾರ್ಡ್ ಇದು, ಸಿನೆಮಾ ಹೀರೋ ಗಣೇಶ್ ಸ್ಟೈಲಲ್ಲಿ ನಮಸ್ಕಾರ?
ವಿ: ಹೌದು, ಹೌದು ಈ ಭೂಲೋಕದವರಿಗೆ ಅವರದೇ ಧಾಟಿಯಲ್ಲಿ ಮಾತಾಡಿಸಬೇಕು. ಆಗಲೇ ಆಪ್ತತೆ ಬೆಳೆಯೋದು. ಈ ಸತ್ಯವನ್ನು ನಾನು ತುಂಬಾ ಹಿಂದೇ ಕಂಡುಕೊಂಡೆ ಆದ್ರೆ ನಮ್ಮ ಇತರ ದೇವರುಗಳಿಗೆ ಇದು ಅರ್ಥವಾಗಿಲ್ಲ. ಅದಕ್ಕೇ ಭೂಲೋಕದಲ್ಲಿ ಈ ಸ್ಥಿತಿ ಇರುವುದು.
ನ.ಸಾ: ಹಾಗಂದ್ರೆ, ಅರ್ಥ ಆಗಲಿಲ್ಲ…
ವಿ: ಅರ್ಥ ಆಗದ್ದನ್ನು ಕೇಳಿ ತಿಳ್ಕೋಬೇಕು. ನೋಡ್ರಿ, ನಿಮ್ಮ ಮಹಾತ್ಮಾ ಗಾಂಧಿ ಹೇಳಿಲ್ಲವಾ, ಪ್ರಾರ್ಥನೆ ಅನ್ನೋದು ದೇವರು ಹಾಗೂ ಮಾನವನ ನಡುವಿನ ಸೇತುವೆ ಅಂತ. ಮನುಷ್ಯರಿಗೆ ದೇವರೊಂದಿಗೆ ಮಾತನಾಡಬೇಕು ಎಂಬ ಹಂಬಲವಿದೆಯೋ ಇಲ್ಲವೋ ಕಾಣೆ. ಆದರೆ ದೇವರಿಗೆ ಮಾತ್ರ ಮನುಷ್ಯನೊಂದಿಗೆ ಮಾತಾಡಬೇಕು ಎನ್ನುವ ಆಸೆ ಇದೆ. ಅದರಲ್ಲೂ ಈ ಹಿಂದೂ ದೇವರುಗಳಿದ್ದಾರಲ್ಲ, ಅವರ ಸಂಖ್ಯೆ ಮುಕ್ಕೋಟಿಗಿಂತ ಹೆಚ್ಚು. ಎಲ್ಲರಿಗೂ ಮನುಷ್ಯರೊಂದಿಗೆ ಮಾತನಾಡಬೇಕು ಎನ್ನುವ ಆಸೆ. ಏನು ಮಾಡುವುದು, ಈ ಮನುಷ್ಯರು ಅದಕ್ಕೆ ಟೈಮೇ ಕೊಡೋದಿಲ್ಲ. ಯಾವಾಗಲೂ ತಮ್ಮ ಮನೆ, ಮಕ್ಕಳು, ಬ್ಯಾಂಕ್ ಬ್ಯಾಲನ್ಸು, ತಮ್ಮ ಕ್ರಿಕೆಟ್ ಟೀಮು, ಕನಸಿನಲ್ಲೆಂಬಂತೆ ಬಂದ ಒಲಿಂಪಿಕ್ಸ್ ಚಿನ್ನದ ಪದಕ, ನ್ಯೂಕ್ಲಿಯಾರ್ ಡೀಲು ಅಂತಲೇ ತಮ್ಮ ಸಮಯವನ್ನೆಲ್ಲಾ ಕಳೆದುಬಿಡುತ್ತಾರೆ. ದೇವರೊಂದಿಗೆ ಮಾತನಾಡಲಿಕ್ಕೆ ಸಮಯವೇ ಅವರಿಗೆ ಇರುವುದಿಲ್ಲ. ದಿನದ ಇಪ್ಪತ್ನಾಲ್ಕು ತಾಸಿನಲ್ಲಿ ಒಂದರ್ಧ ಗಂಟೆಯಾದರೂ ನಮ್ಮೊಂದಿಗೆ ಕಳೆಯಲು ಅವರಿಗೆ ಬಿಡುವು ಇರೋದಿಲ್ಲ. ಈಗ ಮಾತನಾಡಿಸ ಬಹುದು ಆಗ ಮಾತನಾಡಿಸ ಬಹುದು ಎಂದು ನಮ್ಮ ದೇವಲೋಕದಲ್ಲಿ ದೇವರು ದೇವತೆಗಳು ಕಾಯುತ್ತಾ ಕೂತಿರುತ್ತಾರೆ.
ನ.ಸಾ: ಅಲ್ಲಾ, ನಾವು ಪ್ರತೀ ದಿನ ಪ್ರಾರ್ಥನೆ ಮಾಡ್ತೀವಲ್ಲ, ನಮ್ಮಲ್ಲಿ ಇಷ್ಟು ದೇವಸ್ಥಾನಗಳಿವೆ…
ವಿ: ಹೌದು ಹೌದು. ನೀವು ದಿನಕ್ಕೆ ನೂರು ಬಾರಿಯಾದರೂ ದೇವರನ್ನು ನೆನೆಯುತ್ತೀರಿ. ಆಸ್ಪತ್ರೆ, ಶಾಲೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ದೇವಸ್ಥಾನಗಳಿಗೆ ಸುತ್ತುತ್ತೀರಿ. ಆದರೆ ಎಲ್ಲ ಕಡೆಯಲ್ಲೂ ಬರೀ ನಿಮ್ಮದೇ ಆರ್ಭಟ. ಬೆಳಿಗ್ಗೆ ಎದ್ದೇಳುತ್ತಿದ್ದಂತೆಯೇ ಕೈಗಳೆರಡನ್ನೂ ಉಜ್ಜಿ ಕೊಂಡು ಮುಖಕ್ಕೆ ಹಿಡಿದು ‘ಕರಾಗ್ರೇ ವಸತೇ ಲಕ್ಷ್ಮಿ…’ ಎಂದು ಪ್ರಾರ್ಥಿಸತೊಡಗುತ್ತೀರಿ. ಲಕ್ಷ್ಮೀ, ಪಾರ್ವತಿ, ಸರಸ್ವತಿಯರು ನೀವು ಅವರನ್ನು ಕರೆಯುತ್ತಿದ್ದೀರಿ ಎಂದು ದೌಡಾಯಿಸುತ್ತಾರೆ, ಮಾತನಾಡಿಸಬಹುದು ಎಂದು ಕಾತರಿಸುತ್ತಾರೆ. ಆದರೆ ನೀವು ಅವರಿಗೆ ಮಾತನಾಡಲು ಕ್ಷಣ ಮಾತ್ರವೂ ಬಿಡುವು ದೊರೆಯದ ಹಾಗೆ ‘ನನ್ನನ್ನು ಕಾಪಾಡಿ, ನನ್ನ ಮನೆಯನ್ನು ಕಾಪಾಡಿ, ನನ್ನ ಅಂಗಡಿಯನ್ನು- ಬಿಸಿನೆಸ್ಸನ್ನು ಕಾಪಾಡಿ…’ ಎಂದು ಅಪ್ಪಣೆಗಳನ್ನು ಕೊಡಲು ಶುರುಮಾಡುತ್ತೀರಿ. ಸ್ನಾನ ಗೀನ ಮುಗಿಸಿ ದೇವರ ಮುಂದೆ ನಿಂತಾಗಲೂ ದೇವರಿಗೆ ಒಂದಕ್ಷರ ಮಾತಾಡಲೂ ಸಮಯ ಕೊಡದಂತೆ ನಿಮ್ಮ ಪ್ರವರವನ್ನೇ ಶುರು ಮಾಡಿಕೊಳ್ಳುತ್ತೀರಿ. ‘ನಂಗೆ ಎಂಬಿಎ ಸೀಟು ಸಿಗಲಿ, ನನ್ನ ಮುಖದ ಮೇಲಿನ ಮೊಡವೆ ಮಾಯವಾಗಲಿ, ನನ್ನ ಮಗಂಗೆ ತಲೇಲಿ ಐನ್‌ಸ್ಟೀನನ ಮೆದುಳು ಬರಲಿ, ಅಕ್ಕನಿಗೆ ಬೇಗ ಮದುವೆಯಾಗಿ ಬಿಡಲಿ, ಗಂಡನಿಗೆ ನೌಕರಿ ಸಿಗಲಿ..’ ಹೀಗೆ ಕಿರಾಣಿ ಅಂಗಡಿಗೆ ಸಾಮಾನು ಪಟ್ಟಿಬರೆಯುವಂತೆ ದೇವರೆದುರು ನಿಮ್ಮ ಬೇಡಿಕೆ ಪಟ್ಟಿಯನ್ನು ಹೇಳುತ್ತಾ ಕೂರುತ್ತೀರಿ. ಪಾಪ ನಿಮ್ಮ ‘ಬೇಡಿಕೆ ನಿವೇದನೆ’ಯ ಮಧ್ಯೆ ದೇವರಿಗೆ ಒಂದಕ್ಷರ ಉಸುರಲೂ ಸಾಧ್ಯವಾಗುವುದಿಲ್ಲ.
ಇನ್ನು ದೇವಸ್ಥಾನಕ್ಕೆ ಹೋಗುತ್ತೀರಿ. ಅಲ್ಲಿಯೂ ನಿಮ್ಮ ಕಿರಾಣಿ ಅಂಗಡಿ ಪಟ್ಟಿಯನ್ನು ಸಲ್ಲಿಸುವ ಕೆಲಸ ಮುಗಿಯಿತು, ಇನ್ನೇನು ಸ್ವಲ್ಪ ಬಿಡುವು ಸಿಕ್ಕಿತು ಅನ್ನುವಷ್ಟರಲ್ಲಿ ಪೂಜಾರಿ ವಕ್ಕರಿಸಿ ಬಿಡುತ್ತಾನೆ. ನೀವು ದೇವರೊಂದಿಗೆ ಮಾತನಾಡಲಿಕ್ಕೆ, ದೇವರು ನಿಮ್ಮೊಂದಿಗೆ ಮಾತನಾಡಲಿಕ್ಕೆ ಅಡ್ಡಿಯಾಗಿ ನಿಂತು ಬಿಡುತ್ತಾನೆ. ದೇವರ ಹತ್ತಿರ ನಿಮ್ಮ ಪರವಾಗಿ ಮಾತನಾಡಿದಂತೆ ಮಾಡುತ್ತಾನೆ. ನಿಮ್ಮ ಹತ್ತಿರ ದೇವರ ಪರವಾಗಿ ಮಾತನಾಡುವಂತೆ ನಟಿಸುತ್ತಾನೆ. ನೀವು ಅವನ ಮಾತನ್ನು ಕೇಳಿ ದೇವರೇ ಹಿಂಗಂದ, ಹಂಗಂದ ಎಂದು ನಂಬಿಕೊಂಡು ಜಾಗ ಖಾಲಿ ಮಾಡುತ್ತೀರಿ. ನಾನೂ ಆತ ಹೇಳಿದ್ದು ಕೇಳಿಕೊಂಡು ತೆಪ್ಪಗಿರಬೇಕು ಇಲ್ಲಾಂದ್ರೆ ಮಾರನೆಯ ದಿನದಿಂದ ಹಾಲು, ತುಪ್ಪದ ಅಭಿಷೇಕ ಕಳೆದುಕೊಳ್ಳಬೇಕಾಗುತ್ತೆ.
ನ.ಸಾ: ತುಂಬಾ ಬೇಸರದ ಸಂಗತಿ ಇದು. ಹೌದು, ಎಲ್ಲಾ ಸರಿ ಆದರೆ ನೀವೇನೋ ಹೊಸ ಸಂಗತಿ ಕಂಡುಕೊಂಡಿದ್ದೀರಿ ಅಂದ್ರಿ…
ವಿ: ಹ್ಹಾ! ಅದನ್ನೇ ಹೇಳಬೇಕಿತ್ತು. ಹೀಗೆ ದೇವರೊಂದಿಗೆ ಮಾತನಾಡಲು ಮನುಷ್ಯನಿಗೆ ಸಮಯವೇ ಸಿಕ್ಕದಂತೆ ಆಗಿರುವಾಗ ಎಂದೋ ಒಮ್ಮೆಮ್ಮೊ ಅಪರೂಪಕ್ಕೆ ಮಾತನಾಡುವ ಅವಕಾಶ ಸಿಕ್ಕಾಗಲೂ ನಮ್ಮ ದೇವರುಗಳು ಅದನ್ನು ಹಾಳು ಮಾಡಿಕೊಂಡುಬಿಡುತ್ತಾರೆ. ಹೇಗೆ, ಅಂತೀರಾ? ಇಂದಿನ ಜನರು ಮಾತಾಡುವ ಶೈಲಿಯಲ್ಲಿ, ಬಳಸುವ ಭಾಷೆಯಲ್ಲಿ ಮಾತಾಡಿದರೆ ಮಾತ್ರವಲ್ಲವೇ ಅವರಿಗೆ ಅರ್ಥವಾಗುವುದು. ಅದು ಬಿಟ್ಟು ಹಳೇ ಕಾಲದವರ ಹಾಗೆಯೇ, ‘ವತ್ಸಾ… ನಿನಗೇನು ಬೇಕು ಕೇಳುವಂತವನಾಗು..’ ಅಂತ ಮಾತಾಡಿದರೆ ಯಾರು ಕೇಳುತ್ತಾರೆ? ಅದಕ್ಕೇ ನಾನು ನನ್ನ ಲಿಂಗೋ ಬದಲಾಯಿಸಿಕೊಂಡಿದ್ದೇನೆ. ಬೆಂಗಳೂರಿನ ಯುವಕರೊಂದಿಗೆ ಮಾತಾಡುವ ರೀತಿಗೂ, ಸಾಗರದ ಹೌಸ್ ವೈಫ್ ಜೊತೆಗೆ ಮಾತಾಡುವ ರೀತಿಗೂ ವ್ಯತ್ಯಾಸವಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು.
ನ.ಸಾ: ಹೌದೌದು. ದೇವರೂ ಸಹ ಅಪ್ ಡೇಟ್ ಆಗುತ್ತ ಇರಬೇಕಲ್ಲವೇ? ಅಂದ ಹಾಗೆ ಈ ಸಲದ ಭೂಲೋಕದ ಟೂರ್ ಹೇಗಿತ್ತು?
ವಿ: ಪ್ರತೀ ವರ್ಷದ ಹಾಗೆಯೇ ಇದೆ ಮೈ ಸನ್! ಭಾರತ ಅಮೇರಿಕಾ ಆಗುವುದು ಯಾವಾಗ , ಬೆಂಗಳೂರು ಸಿಂಗಾಪುರವಾಗುವುದು ಯಾವಾಗ ಎಂದು ಸರಕಾರಗಳು ಕನಸುತ್ತಿದ್ದರೆ, ನಮ್ಮ ಹುಡುಗ ಅಮೇರಿಕಾಗೆ ಹೋಗುವುದು ಯಾವಾಗ, ತಾನು ಸಿಂಗಾಪುರದ ಪ್ರಜೆಯಾಗುವುದು ಯಾವಾಗ ಅಂತ ಜನರು ಕನಸುತ್ತಿದ್ದಾರೆ. ಇದರಲ್ಲಿ ಒಂದಿನಿತೂ ಬದಲಾವಣೆಯಾಗಿಲ್ಲ. ಅದೇ ಬೆಲೆ ಏರಿಕೆ, ಬಡವರು ಬಡತನದಲ್ಲಿ ಪ್ರಗತಿ ಸಾಧಿಸುವುದು ಧನಿಕರು ಸಿರಿತನದಲ್ಲಿ ಪ್ರಗತಿ ಸಾಧಿಸುವುದು, ಇದನ್ನೇ ಶೇ ೭ ರ ರಾಷ್ಟ್ರೀಯ ಪ್ರಗತಿ ಎಂದು ಸಂಭ್ರಮಿಸುವುದು – ಏನೂ ವ್ಯತ್ಯಾಸ ಕಂಡಿಲ್ಲ. ಆದರೆ ಒಂದು ಬಹುಮುಖ್ಯವಾದ ಬದಲಾವಣೆ ನಡೆದಿದೆ. ಇದರಿಂದ ನನ್ನ ಅಸ್ತಿತ್ವಕ್ಕೇ ಪೆಟ್ಟು ಬೀಳುತ್ತಿರುವುದರಿಂದ ನನಗೆ ಆತಂಕವಾಗಿದೆ.
ನ.ಸಾ: ಅದ್ಯಾವ ಸಂಗತಿ ಮೈಲಾರ್ಡ್!
ವಿ: ನಿಮ್ಮ ನಾಡಿನಲ್ಲಿ ಮಣ್ಣಿಗೆ ಹೊನ್ನಿನ ಬೆಲೆ ಬರುತ್ತಿದೆ ಅಲ್ಲವಾ? ಮಣ್ಣಿನಿಂದ ಕಬ್ಬಿಣ ಸಿಕ್ಕುತ್ತದೆ ಅಂದಕೂಡಲೇ ಮಣ್ಣು ಚಿನ್ನದ ಬೆಲೆಯನ್ನು ಪಡೆದುಕೊಂಡು ಬಿಟ್ಟಿದೆ. ರಿಯಲ್ ಎಸ್ಟೇಟು ದಾಂಢಿಗರು ಮಣ್ಣಿಗೆ ಉಕ್ಕಿನ ಬೇಲಿಯನ್ನು ಹಾಕಿ, ಹರಿತವಾದ ಚಾಕುವಿನಿಂದ ಕೇಕ್ ಕಟ್ ಮಾಡಿದ ಹಾಗೆ ತುಂಡು ತುಂಡು ಮಾಡಿ ಚಿನ್ನದ ಬೆಲೆಗೆ ಮಾರುತ್ತಿದ್ದಾರೆ. ಸರಕಾರಗಳು ಮಣ್ಣಿರುವುದು ಸಿರಿವಂತರು ತಮ್ಮ ಕಾರ್ಖಾನೆ ಸ್ಥಾಪಿಸುವುದಕ್ಕೇ ಹೊರತು ರೈತರು ಉಳುಮೆ ಮಾಡುವುದಕ್ಕಲ್ಲ ಎಂದು ವರ್ತಿಸುತ್ತಾ ಬಡವರ ಬಾಯಿಗೆ ಮಣ್ಣು ಹಾಕುತ್ತಿವೆ. ಇಷ್ಟೆಲ್ಲಾ ಸಂಗತಿ ಮಣ್ಣಿನ ವಿಚಾರವಾಗಿಯೇ ನಡೆಯುತ್ತಿರುವುದು.
ನ.ಸಾ: ಅದೇನೋ ಸರಿ ಲಾರ್ಡ್ ಆದರೆ ಇದರಿಂದ ನಿಮಗೇನು ತೊಂದರೆ?
ನ.ಸಾ: ತೊಂದರೆ ಇದೆ. ನೋಡಿ, ನಾನು ಹುಟ್ಟಿದ್ದು ಮಣ್ಣಿನಿಂದ. ನಮ್ಮ ತಾಯಿ ಪಾರ್ವತಿ ಪರ್ವತ ರಾಜನ ಮಗಳು. ಆಕೆಯ ಮೈಯಿಂದ ತೆಗೆದ ಮಣ್ಣಿನಿಂದಲೇ ನಾನು ಹುಟ್ಟಿದ್ದು. ನನ್ನ ದೇಹದ ಪ್ರತಿಯೊಂದು ಕಣಕಣವೂ ಮಣ್ಣೇ. ಹೀಗಾಗಿ ನಾನು ಮಣ್ಣಿನ ಮಗ! ಮಣ್ಣಿನಿಂದಾಗಿ ಇಷ್ಟೆಲ್ಲಾ ಅನ್ಯಾಯ, ಅನಾಹುತ, ಅತ್ಯಾಚಾರ, ಶೋಷಣೆ ನಡೆಯುತ್ತಿರುವುದು ನನಗೆ ಅಪಮಾನ ಮಾಡಿದ ಹಾಗೇ ಅಲ್ಲವೇ? ಪರಿಸ್ಥಿತಿ ಯಾವ ಹಂತಕ್ಕೆ ಬಂದಿದೆಯೆಂದರೆ ಚೌತಿಯ ದಿನ ನನ್ನ ಮೂರ್ತಿಯನ್ನು ಮಾಡಲೂ ಜನರಿಗೆ ಮಣ್ಣು ಸಿಕ್ಕುತ್ತಿಲ್ಲ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನ್ನು ಕಲೆಸಿ ನಿರ್ಜೀವವಾದ ಮೌಲ್ಡಿಗೆ ಸುರಿದು ನನ್ನನ್ನು ಮಾಡುತ್ತಿದ್ದಾರೆ. ಹೀಗಾದರೆ ನಾನು ಮಣ್ಣಿನ ಮಗ ಹೇಗಾದೇನು? ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮಗನಾಗಬಹುದು ಅಷ್ಟೇ! (ಇದೇ ಸುಸಂಧಿಯನ್ನು ಬಳಸಿಕೊಂಡು ‘ಮಣ್ಣಿನ ಮಗ’ ಟೈಟಲನ್ನು ಯಾರ್ಯಾರೋ ಹೈಜಾಕ್ ಮಾಡುತ್ತಿದ್ದಾರೆ)
ನ.ಸಾ: ಹೌದು ಲಾರ್ಡ್ ಇದು ನಿಜಕ್ಕೂ ದುಃಖದ ಸಂಗತಿ. ಆದರೆ ನಮ್ಮಗಳ ಕೈಗಳೂ ಕಟ್ಟಿಹೋಗಿವೆ. ನಾವೇನೂ ಮಾಡಲು ಸಾಧ್ಯವಿಲ್ಲ. ನಮ್ಮ ಅಧಿಕಾರಗಳನ್ನೆಲ್ಲಾ ಸರಕಾರಗಳ ಕೈಗೆ ಕೊಟ್ಟು ಸುಮ್ಮನಾಗಿದ್ದೇವಲ್ಲ?
ವಿ: ನೀವೆಂಥಾ ಮಡ್ಡಿಗಳು! ನಿಮ್ಮನ್ನು ನೀವು ಪ್ರಾಮಾಣಿಕರು, ಅಸಹಾಯಕರು, ಶೋಷಿತರು ಎಂದು ಅದೆಷ್ಟು ಕಾಲ ನಂಬಿಕೊಂಡು ಕಾಲ ಕಳೆಯುತ್ತೀರಿ? ನಡೆಯುತ್ತಿರುವ ಎಲ್ಲಾ ಅಕ್ರಮ, ಅನ್ಯಾಯಗಳಲ್ಲಿ ನೀವೂ ಪಾಲುದಾರರು ಎಂಬುದನ್ನು ನೆನೆಪಿಟ್ಟುಕೊಳ್ಳಿ. ಸರಕಾರವೇನು ದೇವರು ಮಾಡಿದ ವ್ಯವಸ್ಥೆಯಲ್ಲ. ನೀವೇ ಕಟ್ಟಿಕೊಂಡದ್ದು. ಅದರ ಮಂತ್ರಿಗಳೇನೂ ದೇವರ ಆಯ್ಕೆಯಲ್ಲ. ನೀವೇ ಐದು ವರ್ಷಕ್ಕೊಮ್ಮೆ ಆರಿಸಿ ಕಳುಹಿಸಿದ್ದು. ಅವರು ಲೂಟಿ ಮಾಡಿದ ರಖಮಿನಲ್ಲಿ ಸಾಧ್ಯವಾದಷ್ಟನ್ನು ಚುನಾವಣೆಯ ಸಮಯದಲ್ಲಿ ಗೆಬರಿಕೊಂಡು ಓಟು ಹಾಕುತ್ತೀರಿ. ಮತ್ತದೇ ಸರಕಾರವನ್ನು ತಂದುಕೊಳ್ಳುತ್ತೀರಿ. ಪಾಪ, ನಾಡಿನಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಕಾಳಜಿ ನಿಮಗೆ! ಹೆಚ್ಚು ಬೈಯ್ಯುವುದಕ್ಕೆ ಹೋಗುವುದಿಲ್ಲ, ಈ ಬಾರಿ ಬೆಲೆಯೇರಿಕೆಯ ಸಂಕಷ್ಟದಲ್ಲೂ ಸಹ ನನಗೆ ಹೊಟ್ಟೆ ತುಂಬಾ ಭಕ್ತಿಯ, ಶ್ರದ್ಧೆಯ ಕಾಯಿ ಕಡುಬು, ಮೋದಕಗಳನ್ನು ಪ್ರೀತಿಯಿಂದ ತಿನ್ನಿಸಿದ್ದೀರಿ. ನಿಮಗೆ ನಾನು ವಿದ್ಯಾ, ಬುದ್ಧಿಯನ್ನು ಕರುಣಿಸುತ್ತೇನೆ. ನಿಮ್ಮನ್ನು ನೀವು ಉದ್ಧಾರ ಮಾಡಿಕೊಳ್ಳಿ.
ನ.ಸಾ: ಧನ್ಯವಾದಗಳು ಲಾರ್ಡ್ ವಿಘ್ನೇಶ್ವರ, ನಗೆ ನಗಾರಿಯೊಂದಿಗಿನ ನಿಮ್ಮ ಸಂದರ್ಶನಕ್ಕಾಗಿ ಧನ್ಯವಾದಗಳು.
ವಿ: ಹ್ಹ! ಹಾಗೆ ಈ ಸಂದರ್ಶನದ ಬಗ್ಗೆ ಏನಾದರೂ ಡಿಬೇಟ್ ಮಾಡುವುದಿದ್ದರೆ ನನ್ನ ಮೇಲ್ ಐಡಿ(vnk_gaja@gmail.com) ಗೆ ಒಂದು ಮೇಲ್ ಒಗಾಯಿಸಿ.
ಹುಡುಗೀರೂ ಗಣಿತದಲ್ಲಿ ಮುಂದು!
Posted ಸೆಪ್ಟೆಂಬರ್ 26, 2008
on:-ಆಕಾಂಕ್ಷ . ಬಿ
‘ಗಣಿತವೆಂಬುದು ಮೊದಲೇ ಉಕ್ಕಿನ ಕಡಲೆ ಇದ್ದ ಹಾಗೆ. ಅದರಲ್ಲೂ ಹುಡುಗಿಯರಿಗೆ ಗಣಿತ, ಲೆಕ್ಕ ಅಂದರೆ ಅಷ್ಟಕಷ್ಟೆ. ಅವರೆಷ್ಟೇ ಕಷ್ಟ ಪಟ್ಟರೂ ಲೆಕ್ಕ ಅವರಿಗೆ ದಕ್ಕದ ವಿಷಯ. ಇದಕ್ಕೆ ಬಯಾಲಜಿಕಲ್ ಕಾರಣಗಳು ಇವೆ. ಹುಡುಗಿಯರ ಮೆದುಳಿಗೇ ಗಣಿತದ ಬಗ್ಗೆ ಮುನಿಸಿದೆ. ಅವರದು ಭಾವ ಪ್ರಧಾನವಾದ ವ್ಯಕ್ತಿತ್ವ.’ ಎಂಬ ವಾದ ತುಂಬಾ ಹಿಂದಿನಿಂದಲೂ ಚಾಲ್ತಿಯಲ್ಲಿದೆ.
ಎಸ್ಸೆಸ್ಸೆಲ್ಸಿ, ಪಿಯುಸಿಯ ಪಬ್ಲಿಕ್ ಪರೀಕ್ಷೆಗಳಲ್ಲಿ ವರ್ಷ ವರ್ಷವೂ ಹುಡುಗಿಯರೇ ಮೇಲುಗೈ ಸಾಧಿಸಿ ವಿಜಯದ ನಗೆ ಬೀರುತ್ತಾ ಪತ್ರಿಕೆಗಳ ಮುಖಪುಟಗಳನ್ನು ಆಕ್ರಮಿಸಿಕೊಳ್ಳುತ್ತಿರುವರಾದರೂ ಹುಡುಗಿಯರಿಗಿಂತ ಹುಡುಗರೇ ಲಕ್ಕದಲ್ಲಿ ಮುಂದು ಎಂದು ನಂಬಲಾಗಿತ್ತು. ಹುಡುಗರಿಗೆ ಗಣಿತವೆಂಬ ಉಕ್ಕಿನ ಕಡಲೆಯನ್ನು ಅರಗಿಸಿಕೊಳ್ಳಲು ಮೆದುಳಿನಲ್ಲಿ ನಿಸರ್ಗದತ್ತವಾದ ಕಠಿಣ ‘ಹಲ್ಲು’ಗಳಿವೆ ಎಂದು ಭಾವಿಸಲಾಗಿತ್ತು. ವಿವರಣೆಯನ್ನು ಬೇಡುವ ಪ್ರಶ್ನೆಗಳಿರುವ ಪರೀಕ್ಷೆಗಳಲ್ಲೇನೋ ಹುಡುಗಿಯರು ಹಾಗೂ ಹೀಗೂ ಮೇಲುಗೈ ಸಾಧಿಸಿಬಿಡುತ್ತಾರೆ ಆದರೆ ಅವರ ನಿಜವಾದ ಬಂಡವಾಳ ಬಯಲಾಗುವುದು ವಸ್ತುನಿಷ್ಠ ಪ್ರಶ್ನೆಗಳನ್ನು ಹೊಂದಿರುವ ಸಿಇಟಿ, ಐಐಟಿ ಪ್ರವೇಶ ಪರೀಕ್ಷೆಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ. ಪ್ರತಿ ವರ್ಷ ಸಿಇಟಿಯಲ್ಲಿ ಹುಡುಗರು ಹುಡುಗಿಯರಿಗಿಂತ ಹೆಚ್ಚಿನ ಮಟ್ಟದ ಸಾಧನೆ ಮಾಡಿರುತ್ತಾರೆ. ಐಐಟಿಗಳಿಗೆ ಪ್ರವೇಶ ಗಿಟ್ಟಿಸಿಕೊಳ್ಳುವ ವಿದ್ಯಾರ್ಥಿಗಳಲ್ಲಿ ಹುಡುಗಿಯರನ್ನು ಮೈಕ್ರೋಸ್ಕೋಪು ಹಿಡಿದು ಹುಡುಕಬೇಕು ಎಂದೆಲ್ಲಾ ಮನೋವಿಜ್ಞಾನ, ಬಯಾಲಜಿ ಹಾಗೂ ಕೆಲವು ಅಂಕಿಂಶಗಳನ್ನು ಬಳಸಿಕೊಂಡು ತಾರ್ಕಿಕವಾಗಿ ವಾದ ಮಾಡುವವರಿದ್ದರು.
ಆದರೆ ಈಗ ಈ ವಾದಗಳು ಪೊಳ್ಳು ಎಂದು ವೈಜ್ಞಾನಿಕ ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಗಣಿತವನ್ನು ಅರಗಿಸಿಕೊಳ್ಳುವುದರಲ್ಲಿ ಹುಡುಗಿಯರು ಹುಡುಗರಿಗಿಂತ ಯಾವ ರೀತಿಯಲ್ಲೂ ಕಡಿಮೆಯಿಲ್ಲ ಎಂದು ವಿಸ್ಕೋನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯ ಜಾನೆಟ್ ಹೈದ್ ತಮ್ಮ ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ವಿಶ್ವದ ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿ ಗಣಿತದಲ್ಲಿ ಪದವಿಯನ್ನು ಪಡೆಯುತ್ತಿರುವವರ ಪ್ರಮಾಣ ಶೇ ನಲವತ್ತೆಂಟು ಮುಟ್ಟಿದ್ದು ಹುಡುಗಿಯರಿಗೆ ಗಣಿತ ಇಷ್ಟವಾಗದು ಎಂಬ ಅಭುಪ್ರಾಯ ಕಪೋಲಕಲ್ಪಿತವಾದದ್ದು ಎಂದು ವಾದಿಸಿದ್ದಾರೆ. ಅಮೇರಿಕಾದ ಸುಮಾರು ಏಳು ಮಿಲಿಯನ್ ಶಾಲಾ ಮಕ್ಕಳ ಪರೀಕ್ಷಾ ಫಲಿತಾಂಶಗಳನ್ನು ಅನಲೈಸ್ ಮಾಡಿ ಈ ತೀರ್ಮಾನಕ್ಕೆ ಹೈದ್ ಅವರು ಬಂದಿದ್ದಾರೆ. ಗಣಿತದ ಕಲಿಕೆಯಲ್ಲಿ ಲಿಂಗಬೇಧ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ನಿಸರ್ಗ ಮೆದುಳಿನ ವಿನ್ಯಾಸದ ವಿಷಯದಲ್ಲಿ ಯಾವ ತಾರತಮ್ಯವನ್ನೂ ಮಾಡಿಲ್ಲ ಎಂಬುದು ಅವರ ಸ್ಪಷ್ಟ ಅಭಿಮತ.
ಭಾರತದಲ್ಲಿ ಹುಡುಗಿಯರಿಗೆ ಗಣಿತ ಕಷ್ಟವೆಂದೋ, ಅವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹುಡುಗರಿಗಿಂತ ಹಿಂದೆ ಎಂದೋ ವಾದ ಮಾಡುವವರು ಮಂಡಿಸುವ ಅಂಕಿ ಅಂಶಗಳು ಬಹುಪಾಲು ಸತ್ಯವೇ, ಆದರೆ ಅದಕ್ಕೆ ಕಾರಣವಾದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗಳನ್ನು ಗುರುತಿಸಬೇಕು. ಹೆಣ್ಣಿಗಿರುವ ಸಾಮಾಜಿಕ ಕಟ್ಟುಪಾಡು, ಆರ್ಥಿಕ ಗುಲಾಮಗಿರಿ, ನೈತಿಕತೆಯ ಬಂಧನಗಳನ್ನೆಲ್ಲಾ ನಾವು ಗಮನಕ್ಕೆ ತೆಗೆದುಕೊಳ್ಳದೆ ಹೆಣ್ಣಿನ ಸಾಮರ್ಥ್ಯವನ್ನು ನಿರ್ಧರಿಸುವುದು ತಪ್ಪಾಗುತ್ತದೆ ಎಂಬುದು ಈ ಸಂಶೋಧನೆಯಿಂದ ತಿಳಿದುಬಂದಿದೆ. ಆಟೋ ಡ್ರೈವರ್ ಇಂದ ಹಿಡಿದು ವಿಮಾನದ ಪೈಲೆಟ್ ಸ್ಥಾನದವರೆಗೆ ಎಲ್ಲವನ್ನೂ ತಾನು ನಿಭಾಯಿಸಬಲ್ಲೆ ಎಂಬುದನ್ನು ಸಾಬೀತು ಮಾಡಿ ತೋರಿಸುವ ಹೆಣ್ಣಿನ ಬಗ್ಗೆ ನಮ್ಮ ಸಮಾಜದಲ್ಲಿರುವ ಇಂತಹ ಅಸಂಖ್ಯಾತ ನಂಬಿಕೆಗಳನ್ನು ಕಿತ್ತುಹಾಕಲು ಇನ್ನೆಷ್ಟು ಸಂಶೋಧನೆಗಳು ನಡೆಯಬೇಕೋ!
ಇತ್ತೀಚಿನ ಟಿಪ್ಪಣಿಗಳು