Archive for ಮೇ 2008
ಮೇ ತಿಂಗಳ ಸಂಚಿಕೆ ತಯಾರಿ
Posted ಮೇ 8, 2008
on:- In: ಮಾತುಕತೆ
- 4 Comments
ಏಪ್ರಿಲ್ ತಿಂಗಳ ‘ಕಲರವ‘ ಸಂಚಿಕೆಯನ್ನು ನಿಮ್ಮ ಕೈಗಿಟ್ಟು ಕೊಂಚ ದಣಿವಾರಿಸಿಕೊಂಡು ಮೇ ತಿಂಗಳ ಸಂಚಿಕೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ.
ಪ್ರತಿ ಸಂಚಿಕೆಯಲ್ಲಿ ಮುಖಪುಟದ ಚರ್ಚೆಯಾಗಿ ಒಂದೊಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸಂಪ್ರದಾಯದ ಬಗ್ಗೆ ನಿಮಗೆ ತಿಳಿದಿರಬಹುದು. ಮೇ ತಿಂಗಳ ಸಂಚಿಕೆಯ ಮುಖಪುಟದ ವಿಷಯವಾಗಿ ನಾವು ಆಯ್ಕೆ ಮಾಡಿರುವುದು ‘ಪ್ರತಿಭಾ ಪಲಾಯನ’ ಅಥವಾ ‘Brain Drain’. ಉನ್ನತ ವ್ಯಾಸಂಗ ಪಡೆದವರು ಇತರ ದೇಶಗಳಿಗೆ ನೌಕರಿಯನ್ನರಿಸಿಕೊಂಡು ಹೋಗುವುದು ನಮ್ಮ ದೇಶಕ್ಕೆ ಯಾವ ರೀತಿಯ ನಷ್ಟವನ್ನುಂಟು ಮಾಡುತ್ತದೆ? ನಮ್ಮ ದೇಶಕ್ಕಾಗಿ ಅವರ ಪ್ರತಿಭೆಯನ್ನು ಬಳಸಿಕೊಳ್ಳುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ರಿವರ್ಸ್ ಬ್ರೈನ್ ಡ್ರೈನ್ ಅಂದರೇನು?
ಈ ಎಲ್ಲಾ ವಿಷಯಗಳ ಚರ್ಚೆಯಲ್ಲಿ ಹಾದು ಹೋಗಲಿವೆ. ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಬಹುದು. ಅದು ನಮ್ಮ ಸಂಚಿಕೆಯನ್ನು ರೂಪಿಸುವುದರಲ್ಲಿ ಸಹಕಾರಿಯಾಗಬಹುದು…
-ಸಂಪಾದಕ
ಇತ್ತೀಚಿನ ಟಿಪ್ಪಣಿಗಳು