ಕಲರವ

ಅಂಥಾ ನೆಪೋಲಿಯನ್ ಹೇಳಿದ್ದೇನು?

Posted on: ಏಪ್ರಿಲ್ 24, 2008

ಅದೊಂದು ಸೈನಿಕ ಶಾಲೆ. ಇನ್ಸ್‌ಪೆಕ್ಷನ್‌ಗಾಗಿ ಹಿರಿಯ ಸೈನ್ಯ ಅಧಿಕಾರಿಯೊಬ್ಬರು ಆ ಶಾಲೆಗೆ ಭೇಟಿಯಿತ್ತಿದ್ದಾರೆ. ವಿದ್ಯಾರ್ಥಿಗಳು ಶಿಸ್ತಿನಿಂದ ಸಾಲಾಗಿ ನಿಂತಿದ್ದಾರೆ. ಆ ಅಧಿಕಾರಿ ಒಬ್ಬೊಬ್ಬ ಹುಡುಗನ ಎದುರು ನಿಂತು ನೀನು ದೊಡ್ಡವನಾದ ಮೇಲೆ ಏನಾಗುತ್ತೀಯಾ ಎಂದು ಕೇಳುತ್ತಾ ಬರುತ್ತಿರುತ್ತಾನೆ. ಅದು ಸೈನಿಕ ಶಾಲೆಯಾಗಿದ್ದರಿಂದ ಹುಡುಗರಲ್ಲನೇಕರು ‘ನಾನೊಬ್ಬ ಶೂರ ಸೈನಿಕನಾಗುತ್ತೇನೆ’ ಎನ್ನುತ್ತಿದ್ದರು.ಕೆಲವರು ‘ನಾನು ದಿಟ್ಟ ಸೈನ್ಯಾಧಿಕಾರಿಯಾಗುತ್ತೇನೆ’ ಎಂದು ಎದೆಯುಬ್ಬಿಸಿ ಹೇಳುತ್ತಿದ್ದರು.

ಪ್ರಸನ್ನವದನನಾದ ಸೈನಿಕ ಅಧಿಕಾರಿ ಮುಂದೆ ನಡೆಯುತ್ತಾ ಆ ಹುಡುಗನ ಎದುರು ನಿಂತ. ಕುಳ್ಳಗೆ, ದುರ್ಬಲವಾಗಿ ಕಾಣುತ್ತಿದ್ದ ಆ ಹುಡುಗನಿಗೆ ‘ನೀನು ದೊಡ್ಡವನಾದ ಮೇಲೆ ಏನಾಗುತ್ತೀಯಾ?’ ಎಂದು ಕೇಳಿದರು. ಆತನ ಪ್ರಶ್ನೆಯ ಕೊನೆಗೆ ವ್ಯಂಗ್ಯ ಬೆರೆತಿದ್ದು ಎದ್ದು ಕಾಣುತ್ತಿತ್ತು. ‘ಇಡೀ ಯುರೋಪ್ ಖಂಡದ ಚಕ್ರವರ್ತಿಯಾಗುತ್ತೇನೆ’ ಕೊಂಚವೂ ವಿಚಲಿತನಾಗದೆ ಉತ್ತರಿಸಿದ ಆ ಬಾಲಕ. ಸೈನ್ಯಾಧಿಕಾರಿ ಈ ಪುಟ್ಟ ಪೋರನನ್ನು ಕೊಂಚ ಗಾಬರಿ, ಕೊಂಚ ಅನುಮಾನ, ಕೊಂಚ ಉಡಾಫೆಯ ದೃಷ್ಟಿಯಲ್ಲಿ ನೋಡುತ್ತಾ ಮುಂದಕ್ಕೆ ಹೋದ.

ಆದರೆ ಆ ಹುಡುಗ ಪಾಲಿಗೆ ಆ ಮಾತು ಕೇವಲ ಉಡಾಫೆಯ ಮಾತಾಗಿರಲಿಲ್ಲ. ಮುಂದೆ ಆತ ಇಡೀ ಯುರೋಪನ್ನು ತನ್ನ ಕಾಲಡಿ ಹಾಕಿಕೊಂಡ ಸಾಮ್ರಾಟನಾದ. ಆತ ನೆಪೋಲಿಯನ್ ಬೊನಾಪಾರ್ಟೆ! ‘ಅಸಾಧ್ಯ ಎಂಬ ಪದ ನನ್ನ ಶಬ್ಧಕೋಶದಲ್ಲೇ ಇಲ್ಲ. ಅದೇನಿದ್ದರೂ ಮೂರ್ಖರ ಶಬ್ಧಕೋಶದಲ್ಲಿ ದೊರೆಯುವ ಪದ’ ಎಂದು ಅಬ್ಬರಿಸಿದ್ದ ಆತ. ಆತ ತನ್ನ ಚೈತನ್ಯಕ್ಕೆ ಯಾವ ಅಡ್ಡಿಯೂ ಇಲ್ಲ ಎಂದು ನಂಬಿಕೊಂಡಿದ್ದ.

ಅಂಥಾ ನೆಪೋಲಿಯನ್ ವಾಟರ್ ಲೂ ಕದನದಲ್ಲಿ ೧೮೧೫ರ ಜುಲೈ ೧೫ರಂದು ಸೂತುಹೋದ. ಗೆಲ್ಲುವುದಕ್ಕಿರಲಿ, ಪ್ರಾಣ ಉಳಿಸಿಕೊಂಡು ತಪ್ಪಿಸಿಕೊಳ್ಳಲಿಕ್ಕೂ ಸಾಧ್ಯವಾಗಲಿಲ್ಲ. ಕೊನೆಗವನು ಬ್ರಿಟೀಷರಿಗೆ ಶರಣಾಗಿಬಿಟ್ಟ! ಆಫ್ರಿಕಾದ ತೀರದಲ್ಲಿರುವ ಸೇಂಟ್ ಹೆಲೆನಾ ಸೆರೆಮನೆಯಲ್ಲಿ ಆತ ಕೈಕಟ್ಟಿ ಕೂತು ಬಿಟ್ಟಿದ್ದ. ಆತನ ಅಗಾಧ ಶಕ್ತಿಯೆಲ್ಲಾ ಉಡುಗಿ ಹೋಗಿತ್ತು. ಅವನನ್ನು ವಿಷ ಹಾಕಿ ಕೊಂದರು ಎಂದು ಜನರು ಮಾತಾಡಿಕೊಂಡರೆ, ವೈದ್ಯರು ಮತ್ತು ಕೆಲವು ಇತಿಹಾಸಕಾರರು ಅವನು ಹೊಟ್ಟೆಯಲ್ಲಿನ ಕ್ಯಾನ್ಸರ್ ಗಡ್ಡೆಯಿಂದ ಸಾವನ್ನಪ್ಪಿದ ಎನ್ನುತ್ತಾರೆ.

ನೆಪೋಲಿಯನ್‌ನಂತಹ ನೆಪೋಲಿಯನ್ ಅಂದು ಸೇಂಟ್ ಹೆಲೆನ್ ಸೆರೆಮನೆಯ ಸರಳುಗಳ ಹಿಂದಿನಿಂದ ಅಂದದ್ದೇನು ಗೊತ್ತೆ? “ಎಲ್ಲವೂ ಸಾಧ್ಯ ಎಂಬುದು ಮೂರ್ಖರ ಶಬ್ಧಕೋಶದಲ್ಲಿ ದೊರೆಯುವ ಪದ.”!

ಟ್ಯಾಗ್ ಗಳು: , ,

1 Response to "ಅಂಥಾ ನೆಪೋಲಿಯನ್ ಹೇಳಿದ್ದೇನು?"

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 69,182 hits
ಏಪ್ರಿಲ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123456
78910111213
14151617181920
21222324252627
282930  

Top Clicks

  • ಯಾವುದೂ ಇಲ್ಲ
%d bloggers like this: