ಕಲರವ

Archive for ಮಾರ್ಚ್ 15th, 2008

ಹೌದು,
ಫೆಬ್ರವರಿ ತಿಂಗಳ ಸಂಚಿಕೆಯನ್ನು ಹೊರತಂದ ದಣಿವು ಆರುವುದರೊಳಗೆ ಮನಸ್ಸು ಮಾರ್ಚ್ ತಿಂಗಳ ಸಂಚಿಕೆಯ ಅಡುಗೆ ಮಾಡಲು ಸಿದ್ಧವಾಗಿದೆ.

ಕಳೆದ ಸಂಚಿಕೆಯಲ್ಲಿ ಪ್ರೀತಿ ಅಂದರೇನು ಎನ್ನುವ ಎಂದೂ ಉತ್ತರ ಕಾಣಲು ಸಾಧ್ಯವಿಲ್ಲದ ಪ್ರಶ್ನೆಯನ್ನು ಬೆನ್ನತ್ತಿ ಹೋದ ನಮ್ಮ ಪ್ರಯತ್ನವನ್ನು ಮೆಚ್ಚಿ ಹಲವರು ಬೆನ್ನು ತಟ್ಟಿದ್ದಾರೆ. ಆ ಪ್ರೋತ್ಸಾಹದ ಹುಮ್ಮಸ್ಸಿನಲ್ಲಿ ಈ ಬಾರಿ ನಮ್ಮ ಮುಖಪುಟದ ಚರ್ಚೆಯ ವಿಷಯವಾಗಿ ಆರಿಸಿಕೊಂಡಿರುವುದು, ‘ಫ್ರೆಂಡ್ ಶಿಪ್’. ಏನೀ ಗೆಳೆತನದ ಗಮ್ಮತ್ತು? ಏನಿದರ ಮರ್ಮ? ನಾವೊಂದಿಷ್ಟು ಮಂದಿ ಗೆಳಯರು ಕಲೆತು ಚರ್ಚೆ ಮಾಡಿ ಒಂದಷ್ಟು ಬರಹಗಳನ್ನು ತಯಾರು ಮಾಡಲಿದ್ದೇವೆ.

ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನಿಮ್ಮ ಪ್ರಕಾರ ಗೆಳೆತನ ಅಂದರೆ ಏನು? ನಿಮ್ಮ ಜೀವನದಲ್ಲಿ ಕಂಡ ಗೆಳೆತನದ ವಿವಿಧ ಮಗ್ಗಲುಗಳು ಯಾವುವು? ತಿಳಿಸ್ತೀರಲ್ಲ?


-ಸಂಪಾದಕ

Technorati Tags: ,


Blog Stats

  • 69,008 hits
ಮಾರ್ಚ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930
31