ಕಲರವ

ದೇಶಪ್ರೇಮವೆಂಬುದು ಧಾರ್ಮಿಕತೆಯ ವಿಸ್ತರಣೆಯಾದಾಗ…

Posted on: ಮಾರ್ಚ್ 7, 2008

ದೂರದಲ್ಲೆಲ್ಲೋ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿದೆ ಎಂದು ಕೇಳಿ ಬರುತ್ತಿದ್ದ ಭಯೋತ್ಪಾದನೆ, ಅಲ್ಲೆಲ್ಲೋ ಒರಿಸ್ಸಾ, ಗುಜರಾಥದಲ್ಲಿ ಬಂಧಿತರಾಗುತ್ತಿದ್ದ ಉಗ್ರರು, ಅಲ್ಲೆಲ್ಲೋ ಮುಂಬೈ, ಹೈದರಾಬಾದುಗಳ ಬಳಿಯಿಂದ ಕೇಳಿಬರುತ್ತಿದ್ದ ಬಾಂಬ್ ಸ್ಫೋಟದ ಸದ್ದು ಇದೀಗ ನೇರವಾಗಿ ನಮ್ಮ ನೆಲದೊಳಗಿಂದಲೇ ಕೇಳಿಬರಲಾರಂಭಿಸಿದೆ. ಮತ್ತೆ ಅದೇ ಬಗೆಯ ಪ್ರತಿಕ್ರಿಯೆಗಳು. ಮಾಧ್ಯಮಗಳ ರಂಜಿತ ವರದಿ, ರಾಜಕಾರಣಿಗಳ ‘ಬೆಣ್ಣೆಯಿಂದ ಕೂದಲು ತೆಗೆಯುವ’ ನಾಜೂಕಿನ ಉತ್ತರಗಳು, ಶಂಕರ್ ಬಿದರಿಯವರಂತಹ ಪೋಲೀಸರಿಂದಲೇ ತದ್ವಿರುದ್ಧವಾದ ಹೇಳಿಕೆಗಳು, ಬುದ್ಧಿಜೀವಿಗಳಲ್ಲಿ ಉಸಿರಾಡಿದರೂ ಕೇಳುವಂತಹ ಸಂಶಯಾಸ್ಪದವಾದ ಮೌನ! ಇವೆಲ್ಲಾ ಎಲ್ಲೋ ದೂರದಲ್ಲಿ ನಡೆಯುತ್ತಿದ್ದ ಹಾಗೆಯೇ ಇಲ್ಲೂ ನಡೆಯುತ್ತಿವೆ.

ಈ ಎಲ್ಲಾ ಪ್ರಕ್ರಿಯೆಗಳ ನಡುವೆ ತೂರಿ ಬರುತ್ತಿರುವ ಸಿದ್ಧ ಮಾದರಿಯ ವಾದಗಳ ಬಗ್ಗೆ ಕೊಂಚ ನನ್ನ ಗಮನ ಹರಿದಿದೆ. ‘ಮುಸ್ಲೀಮರು ಯಾಕೆ ಹೀಗೆ? ಅವರು ಬದಲಾಗೋದು ಯಾವಾಗ?’ ಎಂದು ಪ್ರಾಮಾಣಿಕವಾಗಿ ಕಾಳಜಿ ವ್ಯಕ್ತ ಪಡಿಸುವವರು ಮಂಡಿಸುವ ವಾದದ ಪ್ರಕಾರ ಮುಸ್ಲೀಮರು ಬಹುಸಂಖ್ಯಾತರಾಗಿರುವ ಯಾವ ರಾಷ್ಟ್ರಗಳೂ ನೆಮ್ಮದಿಯಲ್ಲಿಲ್ಲ. ಭಾರತದಲ್ಲಿರುವ ಮುಸ್ಲೀಮರು ಎಂದಿಗೆ ಧರ್ಮಕ್ಕಿಂತ ದೇಶ ದೊಡ್ಡದು ಎಂದು ಭಾವಿಸತೊಡಗುತ್ತಾರೋ ಅಂದಿಗೆ ಇಲ್ಲಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ.wqw.png

ಇಸ್ಲಾಂ ಹೆಸರಿನಲ್ಲಿ ನಡೆಯುತ್ತಿರುವ ಮತಾಂಧತೆಯ ಕೃತ್ಯಗಳ್ಯಾವುವೂ ಕ್ಷಮಾರ್ಹವಲ್ಲ. ಧರ್ಮಾಂಧತೆ ಎಂದಿಗೂ ಮಾನವತೆಗೆ ವಿರೋಧಿಯಾದದ್ದು. ಅಸಲಿಗೆ ಒಂದು ಪಂಥ, ತತ್ವ, ಸಿದ್ಧಾಂತದ ಹೆಸರಿನಲ್ಲಿ ಬೇರೊಬ್ಬ ಮನುಷ್ಯನ ರಕ್ತ ಹರಿಸುವುದು ಎಂದಿಗೂ ಸಮ್ಮತವಾದದ್ದಲ್ಲ. ಎಲ್ಲಾ ತತ್ವಗಳಿಗಿಂತ ಮಾನವೀಯತೆ ಮೇಲು. ಈಗ ನಮ್ಮ ಚರ್ಚೆಯ ವಿಷಯಕ್ಕೆ ಬರುವುದಾದರೆ, ಭಾರತದ ಮುಸ್ಲೀಮರು ಎಂದಿಗೂ ದೇಶವನ್ನು ಧರ್ಮಕ್ಕಿಂತ ದೊಡ್ಡದು ಎಂದು ಭಾವಿಸುವುದಿಲ್ಲ ಹಾಗಾಗಿ ಅವರಿಗೆ ಶತೃ ದೇಶದ ಬಗ್ಗೆ ಯಾವಾಗಲೂ ಮನಸ್ಸಿನಲ್ಲಿ ಸಾಫ್ಟ್ ಕಾರ್ನರ್ ಇರುತ್ತದೆ, ಎನ್ನುವುದು ಕೆಲವರ ವಾದ. ಈ ದೇಶ ಹಾಗೂ ಧರ್ಮದ ವಿಚಾರವನ್ನೇ ಗಮನಿಸೋಣ. ನಾವು ಮುಸ್ಲೀಮರನ್ನು ಇನ್ನೂ ವಿದೇಶಿಯರು, ಆಕ್ರಮಣಕಾರರು ಎಂದು ಪರಿಗಣಿಸಿ ಮಾತಾಡತೊಡಗಿದರೆ ಇಂತಹ ನಿರ್ಧಾರಗಳಿಗೆ ಬರಲು ಸಾಧ್ಯ. ನಾವು ಎಂದೂ ಮುಸ್ಲೀಮರನ್ನು ನಮ್ಮ ಹಾಗೆಯೇ ದೇಶದ ಪ್ರಜೆಗಳು, ನಮ್ಮ ಹಾಗೆಯೇ ದೇಶದ ಮೇಲೆ ಹಕ್ಕುಳ್ಳವರು ಎಂದು ಭಾವಿಸಿದ್ದೇವೆಯೇ? ವೀಸಾದ ಮೇಲೆ ಕೆಲಸಕ್ಕೆ ಅಥವಾ ವಿದ್ಯಾಭ್ಯಾಸಕ್ಕೆ ಬಂದು ತಮ್ಮ ಬೇರುಗಳನ್ನೆಲ್ಲಾ ತಮ್ಮ ದೇಶದಲ್ಲೇ ಉಳಿಸಿಕೊಂಡು ತಮ್ಮ ನಿಷ್ಠೆಯನ್ನೆಲ್ಲಾ ತಮ್ಮ ದೇಶಕ್ಕೇ ಧಾರೆಯೆರೆಯುತ್ತ ಕೊನೆಗೊಂದು ದಿನ ತಮ್ಮ ದೇಶಕ್ಕೆ ವಾಪಸಾಗುವ ಪ್ರವಾಸಿಗರ ಹಾಗೆ ಮುಸ್ಲೀಮರನ್ನು ಕಾಣುವ ದೃಷ್ಟಿ ಬದಲಾಯಿಸಿಕೊಳ್ಳದೆ ಹೋದಲ್ಲಿ ಅವರಿಗೆಂದೂ ಭಾರತೀಯರು ಎಂಬ ಮನ್ನಣೆ ದೊರೆಯುವುದಿಲ್ಲ.

ಇನ್ನು ಭಾರತದ ಮುಸಲ್ಮಾನರಿಗೆ ದೇಶಕ್ಕಿಂತ ಧರ್ಮವೇ ಮೇಲು ಎಂಬ ಆರೋಪ. ಇಲ್ಲಿ ಯಾರಿಗೆ ದೇಶಕ್ಕಿಂತ ತಮ್ಮ ಧರ್ಮ ಮೇಲು ಎಂಬ ಭಾವನೆ ಇಲ್ಲ ಹೇಳಿ? ಹಿಂದೂಗಳ ಸಂಖ್ಯೆ ಹೆಚ್ಚಾಗಿರುವ ಭಾರತವನ್ನು ಒಂದು ಹಿಂದೂ ರಾಷ್ಟ್ರ ಎಂದು ಕರೆಯಬಹುದೇ? ಮುಸ್ಲೀಮರ ಪ್ರಾಬಲ್ಯವಿರುವ ದೇಶಗಳನ್ನು ಇಸ್ಲಾಮಿಕ್ ದೇಶಗಳೆಂದು ಕರೆದು ಧರ್ಮದ ಆಧಾರದ ಮೇಲೆ ದೇಶವನ್ನು ಕಟ್ಟಿಕೊಂಡ ಹಾಗೆ ನಾವು ಮಾಡಲಾದೀತೇ? ಖಂಡಿತಾ ಸಾಧ್ಯವಿಲ್ಲ. ನಮ್ಮ ಧರ್ಮ ಆ ಹಂತವನ್ನು ದಾಟಿ ಕೋಟ್ಯಂತರ ನಂಬಿಕೆಗಳಿಗೆ, ಆಚರಣೆಗೆಳಿಗೆ ದಾರಿ ಮಾಡಿಕೊಟ್ಟು ಅದೊಂದು ಜೀವನ ವಿಧಾನವಾಗಿ, ಬದುಕನ್ನು ಕಾಣುವ ದೃಷ್ಟಿಯಾಗಿದೆ. ಹೀಗಾಗಿ ಭಾರತ ಎಂದಿಗೂ ಹಿಂದೂ ರಾಷ್ಟ್ರವಾಗದು. ಹೀಗಿದ್ದಾಗ್ಯೂ ನಾವು ದೇಶಪ್ರೇಮವನ್ನು ಧಾರ್ಮಿಕ ಶ್ರದ್ಧೆಯ ಭಾಗವಾಗಿಯೇ ಬೆಳೆಸಿಕೊಂಡವರು. ಭಾರತ ನಮಗೆ ತಾಯಿ. ತಾಯಿ ನಮಗೆ ದೇವರು. ಭಾರತವನ್ನು ಭಾರತ ಮಾತೆಯ ಸ್ವರೂಪದಲ್ಲಿ ನಾವು ಆರಾಧಿಸುತ್ತೇವೆ. ದೇಶಪ್ರೇಮಕ್ಕೆ, ನೆಲದ ಮೇಲಿನ ಅಭಿಮಾನಕ್ಕೆ ನಮಗೆ ಶ್ರೀರಾಮ ಚಂದ್ರನೇ ರಾಷ್ಟ್ರೀಯ ಆದರ್ಶ. ಇವೆಲ್ಲಾ ನಮ್ಮ ಧಾರ್ಮಿಕ ನಂಬಿಕೆಗಳ ವಿಸ್ತರಣೆಯೇ ಆಗಿದೆ. ಈ ಭಾವನೆಗಾದರೂ ಸಂಪೂರ್ಣ ಹಿಂದೂ ಸಮೂಹದ ಬೆಂಬಲವಿದೆಯೇ? ಊಹುಂ, ಹಿಂದುಗಳ ಅರ್ಧದಷ್ಟು ಜನಸಂಖ್ಯೆಯಿರುವ ದಲಿತರಿಗೆ, ಹಿಂದುಳಿದವರಿಗೆ ಈ ವೈದಿಕ ಪರಂಪರೆಯ ಪ್ರತೀಕಗಳು ಒಪ್ಪಿಗೆಯಾಗುವುದಿಲ್ಲ. ಇನ್ನು ಅಲಾಹುವನ್ನು ಬಿಟ್ಟು ಉಳಿದ ಯಾವುದೂ ಪೂಜಾರ್ಹವಲ್ಲ ಎಂಬುದಾಗಿ ನಂಬಿದ ಮುಸ್ಲೀಮರಿಗೆ ಈ ದೇಶದ, ದೇಶಪ್ರೇಮದ ರೀತಿ ರಿವಾಜುಗಳು ಸಂಪೂರ್ಣವಾಗಿ ತಮ್ಮ ಧಾರ್ಮಿಕ ಭಾವನೆಗಳಿಗಿಂತ ಭಿನ್ನವಾಗಿ ಕಂಡರೆ ಅವರ ತಪ್ಪೇನು?
ಇಲ್ಲಿ ನಾವು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನು ಮತಾಂಧತೆ ಎನ್ನುವ ಹುಂಬತನಕ್ಕೆ ಕೈ ಹಾಕಬಾರದು. ರಾಮನ ಅಸ್ತಿತ್ವದ ಬಗ್ಗೆ, ರಾಮ ಸೇತುವೆಯ ಬಗ್ಗೆ ಧಾರ್ಮಿಕ ಭಾವನೆಗಳನ್ನು ದೇಶದ ಹಿತಾಸಕ್ತಿ ಅಥವಾ ಪ್ರಗತಿಗಿಂತ ಶ್ರೇಷ್ಠದ್ದಾಗಿ ಭಾವಿಸಲು ಹಿಂದೂಗಳಿಗೆ ಹೇಗೆ ಅವಕಾಶವಿದೆಯೋ ಹಾಗೆಯೇ ಇತರ ಧರ್ಮದವರಿಗೂ ಅವಕಾಶ ಲಭ್ಯವಾಗಬೇಕು. ಆದರೆ ನಮ್ಮ ಆದರ್ಶಗಳ ಕಲ್ಪನೆಗಳೆಲ್ಲಾ ಒಂದು ವರ್ಗದ ಸೃಷ್ಟಿಗಳು ಹೀಗಾಗಿ ಉಳಿದೆಲ್ಲರಿಗೂ ತಮ್ಮ ಜಾತಿ, ಮತ, ಧರ್ಮಗಳೇ ಮೊದಲ ಆದ್ಯತೆಯಾಗುತ್ತವೆ. ಅವುಗಳೇ ತಮ್ಮ ಐಡೆಂಟಿಟಿಗಳಾಗಬೇಕೆಂದು ಜನ ಬಯಸುತ್ತಾರೆ. ದೇಶದ ಐಡೆಂಟಿಟಿಯನ್ನು ಒಂದು ಧರ್ಮದ ಐಡೆಂಟಿಟಿಯಾಗಿ ಕಾಣುವ ದೃಷ್ಟಿ ಬದಲಾಗದೆ ಈ ಸಮಸ್ಯೆಗೆ ಪರಿಹಾರವಿಲ್ಲ. ನೀವೇನಂತೀರಿ…

– ಕೆ.ಎಸ್.ಎಸ್


Technorati : , , ,

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 68,988 hits
ಮಾರ್ಚ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930
31  

Top Clicks

  • ಯಾವುದೂ ಇಲ್ಲ
%d bloggers like this: