ಕಲರವ

Archive for ಫೆಬ್ರವರಿ 14th, 2008

ಪ್ರೀತಿ ಅಂದರೆ ಏನು?

ಭೂಮಿಯ ಮೇಲೆ ಒಬ್ಬೇ ಒಬ್ಬನಿಗೂ ಉತ್ತರ ತಿಳಿದಿಲ್ಲ. ಅಸಲಿಗೆ ಇದು ಉತ್ತರ ಪಡೆಯುವಂತಹ ಪ್ರಶ್ನೆಯೇ ಅಲ್ಲವೇನೊ! ಪ್ರೀತಿಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಪ್ರೀತಿಯ ಬಗ್ಗೆ ಒಂದೊಂದು ಸಮಾಜ ಒಂದೊಂದು ನಿಲುವನ್ನು ಹೊಂದಿದೆ. ಯಾರು ಎಷ್ಟೇ ಸರಳಗೊಳಿಸಲು ಪ್ರಯತ್ನಿಸಿದರೂ ಸಂಕೀರ್ಣಗೊಳ್ಳುತ್ತಾ ಹೋಗುವ ಮಾಯೆಯಂಥದ್ದು ಈ ಪ್ರೀತಿ. ಆದರೂ ಪ್ರೀತಿಯ ಬಗ್ಗೆ ಜಗತ್ತಿನ ಬುದ್ಧಿವಂತರು, ಭಾವಜೀವಿಗಳು, ಕಲಾವಿದರು ಏನೇನು ಅಭಿಪ್ರಾಯ ಹೊಂದಿದ್ದರು ಎಂಬುದನ್ನು ತಿಳಿಯುವ ಪ್ರಯತ್ನ ಈ ಸಂಚಿಕೆಯಲ್ಲಿ ನಡೆದಿದೆ. ಇಲ್ಲಿನ ಪ್ರತಿ quoteಗಳಲ್ಲೂ ಪ್ರೀತಿಯ ಘಮ! -ಸಂ


ನಾವು ತಿಳಿದಂತೆ ಪ್ರೀತಿ ಹುಟ್ಟುವುದಿಲ್ಲ, ಕೊನೆಯಾಗುವುದಿಲ್ಲ. ಪ್ರೀತಿ ಒಂದು ಕಾಳಗ, ಒಂದು ಯುದ್ಧ, ಪ್ರೀತಿ ಎಂದರೆ ಬೆಳೆಯುವುದು ಎಂದರ್ಥ.
-ಜೇಮ್ಸ್ ಬಾಲ್ಡ್‌ವಿನ್

ಕೆಲವು ಬಾರಿ ಮಾತನಾಡಲು ಏನೂ ವಿಷಯವಿಲ್ಲದಿದ್ದರೂ ಕೇವಲ ಒಟ್ಟಿಗೆ ಕುಳಿತಿರುವ ಸುಖಕ್ಕಾಗಿ ಮಾತನಾಡುವ ಕ್ರಿಯೆ ಇದೆಯಲ್ಲ ಅದೂ ಪ್ರೀತಿಯೇ.
– ಡೇವಿಡ್ ಬ್ರೈನ್

l4.jpgಪ್ರೀತಿಸುವ ಹೃದಯ ಎಲ್ಲಾ ತಿಳುವಳಿಕೆಯ ಆರಂಭಬಿಂದು.
– ಥಾಮಸ್ ಕಾರ್ಲೈಲ್

ಪ್ರೀತಿಸುವ ಅತ್ಯುತ್ತಮವಾದ ಮಾರ್ಗವೆಂದರೆ ಅದು ಕಳೆದು ಹೋಗಬಹುದು ಎಂದು ಅರಿಯುವುದು.
– ಗಿಲ್ಬರ್ಟ್ ಚೆಸ್ಟರ್‌ಸನ್

ಪ್ರೀತಿಸಿ ಬಿಟ್ಟುಹೋಗುವುದು ಎಂದೂ ಪ್ರೀತಿಸಲ್ಪಡದಿರುವುದಕ್ಕಿಂತ ಮೇಲು.
– ವಿಲಿಯಂ ಕಾಂಗ್ರೇವ್

ನಾವೆಲ್ಲಾ ಹುಟ್ಟಿರುವುದೇ ಪ್ರೀತಿಗಾಗಿ. ಪ್ರೀತಿಯೇ ಅಸ್ತಿತ್ವದ ಸಿದ್ಧಾಂತ ಹಾಗೂ ಅದೇ ಅಂತ್ಯ ಕೂಡ.
– ಬೆಂಜಮಿನ್ ಡಿಸ್ರೇಲಿ

ಪ್ರೀತಿಯೇ ಪ್ರೀತಿಯ ಪ್ರತಿಫಲ.
-ಜಾನ್ ಡ್ರೈಡನ್

ಇಡೀ ಮಾನವಕುಲ ಪ್ರೇಮಿಯನ್ನು ಪ್ರೀತಿಸುತ್ತದೆ.
– ರಾಲ್ಫ್ ವಾಲ್ಡೋ ಎಮರ್ಸನ್

ಒಬ್ಬರಿಗೊಬ್ಬರು ಕೊಟ್ಟು ಸಹಾಯ ಮಾಡಲು ನಮ್ಮ ಬಳಿಯಿರುವ ಒಂದೇ ಒಂದು ವಸ್ತುವೆಂದರೆ ಪ್ರೀತಿ.
– ಯುರಿಪಿಡಿಸ್

ಇದುವರೆಗೂ ಯಾರೊಬ್ಬರೂ, ಕವಿಗಳೂ ಸಹ ಹೃದಯ ಎಷ್ಟು ಒಳಗೊಳ್ಳಬಲ್ಲದು ಎನ್ನುವುದನ್ನು ಅಳೆಯಲು ಸಾಧ್ಯವಾಗಿಲ್ಲ.
-ಝೆಲ್ಡಾ ಫಿಟ್ಜರ್‌ಗೆರಾಲ್ಡ್

ಇಬ್ಬರು ವ್ಯಕ್ತಿಗಳು ಒಂದಾಗಿಯೂ ಇಬ್ಬರಾಗಿರುವ ವೈರುಧ್ಯ ಪ್ರೀತಿಯಲ್ಲಿ ಮಾತ್ರ ಸಾಧ್ಯವಾಗುತ್ತದೆ.
– ಎರಿಕ್ ಫ್ರಾಮ್

ಮಾಗದ ಪ್ರೀತಿ ಹೇಳುತ್ತದೆ: ನೀನು ನನಗೆ ಬೇಕು ಏಕೆಂದರೆ ನಾ ನಿನ್ನ ಪ್ರೀತಿಸ್ತೀನಿ.
ಮಾಗಿದ ಪ್ರೀತಿ ಹೇಳುತ್ತದೆ: ನಾನಿನ್ನ ಪ್ರೀತಿಸ್ತೀನಿ ಅದಕ್ಕೆ ನೀನು ಬೇಕು.
– ಎರಿಕ್ ಫ್ರಾಮ್

ಇಬ್ಬರು ಆಟವಾಡಿ ಇಬ್ಬರೂ ಗೆಲ್ಲ್ಲುವ ಆಟ ಪ್ರೀತಿ.
-ಇವಾ ಗ್ರೆಬರ್

ಪ್ರೀತಿಯಿಲ್ಲದ ಜೀವನ ಹೂವು, ಹಣ್ಣಿಲ್ಲದ ಮರವಿದ್ದಂತೆ.
– ಖಲೀಲ್ ಗಿಬ್ರಾನ್

ಪ್ರೀತಿಸಲ್ಪಡುವ ಯಾವನು ತಾನೆ ಬಡವ?
-ಆಸ್ಕರ್ ವೈಲ್ಡ್

ಒಂದೇ ದಿಕ್ಕಿನಲ್ಲಿ ಹರಿಸಿದ ಆಳವಾದ ಪ್ರೀತಿ ನಮ್ಮನ್ನು ಇತರ ದಿಕ್ಕುಗಳನ್ನೂ ಪ್ರೀತಿಸುವಂತೆ ಮಾಡುತ್ತದೆ.
– ಅನ್ನೆ-ಸೋಫಿ ಸ್ವೆಶೀನ್

ಪ್ರೀತಿ ಒಂದೇ ಎಲ್ಲಾ ಅಲ್ಲ. ಅದು ಅಡಿಪಾಯ, ಕಾರ್ನರ್ ಸ್ಟೋನ್ ಇದ್ದಂತೆ- ಅದೇ ಇಡೀ ಕಟ್ಟಡವಾಗಲು ಸಾಧ್ಯವಿಲ್ಲ.
-ಬೆಟ್ ಡೇವಿಸ್

……………………………………………………………..

All love shifts and changes. I don’t know if you can be wholeheartedly in love all the time.

-Julie Andrews

Love takes up where knowledge leaves off.

Saint Thomas Aquinas

Love is composed of a single soul inhabiting two bodies.

Aristotle

The Eskimo has fifty-two names for snow because it is important to them; there ought to be as many for love.

Margaret Atwood

What the world really needs is more love and less paper work.

Pearl Bailey

Love takes off masks that we fear we cannot live without and know we cannot live within.

James A. Baldwin

When love is not madness, it is not love.

Pedro Calderon de la Barca

A kiss is a lovely trick designed by nature to stop speech when words become superfluous.

Ingrid Bergman

Who so loves believes the impossible.

Elizabeth Barrett Browning

Take away love and our earth is a tomb.

Robert Browning

To enlarge or illustrate this power and effect of love is to set a candle in the sun.

Robert Burton

Love is always bestowed as a gift – freely, willingly and without expectation. We don’t love to be loved; we love to love.

Leo Buscaglia

A baby is born with a need to be loved – and never outgrows it.

Frank A. Clark

Friendship often ends in love; but love in friendship – never.

Charles Caleb Colton

You will find as you look back upon your life that the moments when you have truly lived are the moments when you have done things in the spirit of love.

Henry Drummond

Gravitation is not responsible for people falling in love.

Albert Einstein

The art of love is largely the art of persistence.

Albert Ellis

You don’t have to go looking for love when it’s where you come from.

Werner Erhard

Loving is not just looking at each other, it’s looking in the same direction.

Antoine de Saint-Exupery

Love is metaphysical gravity.

R. Buckminster Fuller

Love does not dominate; it cultivates.

Johann Wolfgang von Goethe

Love is a canvas furnished by nature and embroidered by imagination.

Voltaire

First love is only a little foolishness and a lot of curiosity.

George Bernard Shaw

Love is a gross exaggeration of the difference between one person and everybody else.

George Bernard Shaw

Love is only a dirty trick played on us to achieve continuation of the species.

W. Somerset Maugham

………………………………………………………………………………………………..


Technorati : , ,

‘ಪ್ರೀತಿ ಮಾಯೆ ಹುಶಾರು’ ಅಂದವರಿದ್ದಾರೆ, ‘ಪ್ರೀತಿ ಬದುಕಿನ ನೆಲೆ’ ಅಂದವರಿದ್ದಾರೆ. ನಿಜಕ್ಕೂ ಈ ಪ್ರೀತಿ ಅಂದರೆ ಏನು? ಪ್ರೀತಿಯ ಅನುಭವ ಹೇಗಿರುತ್ತದೆ? ಪ್ರೀತಿ ಅಂತ ಮೂಗು ಮುರಿಯುವ ಹಿರಿಯರಿದ್ದಾರೆ. ಕಾಲ ಹಾಳಾಗಿ ಹೋಯ್ತು ಅಂತ ಗೊಣಗುವವರಿದ್ದಾರೆ. ಆದರೆ ಪ್ರೀತಿಗೆ ಕಾಲದ ಹಂಗಿಲ್ಲ. ನಮ್ಮ ತಾತ ಮುತ್ತಾತನ ಕಾಲದಲ್ಲೂ ಪ್ರೀತಿಯಿತ್ತು, ಪ್ರೀತಿಯಿಲ್ಲದೆ ಮನುಷ್ಯನ ಬದುಕಿಗೆ ಅರ್ಥವೇ ಇಲ್ಲವೇನೊ…

ಪ್ರೀತಿ ಅಂದರೆ ಕೇವಲ ವಯಸ್ಸಿಗೆ ಬಂದ ಹುಡುಗ ಹುಡುಗಿಯರ ನಡುವಿನ ಸಂಬಂಧ ಎಂದು ಭಾವಿಸಿದರೆ ನಾವು ಪ್ರೀತಿಯನ್ನು ವ್ಯಾಖ್ಯಾನಿಸುವಲ್ಲಿ ಸೋಲುತ್ತೇವೆ. ಮಮತೆ, ವಾಸ್ತಲ್ಯ, ಹೆಮ್ಮೆ, ಅಭಿಮಾನ, ದೇಶ ಭಕ್ತಿ, ದೈವ ಭಕ್ತಿ, ಪುಸ್ತಕ ಪ್ರೇಮ, ಸಹೃದಯತೆ ಅಂತೆಲ್ಲಾ ಯಾವ ಭಾವಗಳನ್ನು ಕರೆಯುತ್ತೇವೋ ಅವೆಲ್ಲಾ ಪ್ರೀತಿಯ ನದಿಯ ಹರಿವಿನ ಬೇರೆ ಬೇರೆ ಕವಲುಗಳು ಮಾತ್ರ. ಈ ಪ್ರೀತಿಯೆಂಬ ನದಿಯ ದಡದಲ್ಲಿ ಕುಳಿತು, ನದಿಯ ಆಳಕ್ಕೆ ಮುಳುಗಿ, ನದಿಯ ಮೇಲೆ ಹಾಯಿದೋಣಿಯಲ್ಲಿ ತೇಲಿದವರ ವ್ಯಾಖ್ಯಾನಗಳು ಈ ಸಂಚಿಕೆಯಲ್ಲಿ ಬರಹದ ರೂಪವನ್ನು ಪಡೆದುಕೊಂಡಿವೆ.

ಎಲ್ಲಾ ಹೇಳಿದ ನಂತರವೂ ಅಗೋಚರವಾಗಿ ಉಳಿವುದು ಪ್ರೀತಿ! ಒಲವೇ ವಿಸ್ಮಯ!

– ಸಾರಥಿ


Technorati : , , ,


Blog Stats

  • 69,182 hits
ಫೆಬ್ರವರಿ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
2526272829  

Top Clicks

  • ಯಾವುದೂ ಇಲ್ಲ