Archive for ಜನವರಿ 2008
ಇದು ಯುವ ಮನಸ್ಸುಗಳ ‘ಕಲರವ’!
Posted ಜನವರಿ 29, 2008
on:ಹೌದು ಇದು ಯುವ ಮನಸ್ಸುಗಳ ‘ಕಲರವ’!
ಮನಸ್ಸಿನ ಹುಚ್ಚಾಟಗಳಿಗೆ ಮಿತಿಯೇ ಇಲ್ಲ. ಮನಸ್ಸಿನ ಹುಚ್ಚುಗಳಿಗೆ ಪೂರಕವಾದ ಅವಕಾಶ ಸಿಕ್ಕುಬಿಟ್ಟು ಸೃಷ್ಟಿಯಾದದ್ದು ‘ಕಲರವ’!
ಹದಿನೆಂಟು ಹತ್ತೊಂಭತ್ತು ವರ್ಷದ ಆಸುಪಾಸಿನ ನಾವೊಂದಿಷ್ಟು ಮಂದಿ ಗೆಳೆಯರು ಇಂತಹ ಒಂದು ಪುಟ್ಟ ಸಾಹಸವನ್ನು ಮಾಡುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ‘ಕಲರವ’ ಎಂಬ ಮಾಸ ಪತ್ರಿಕೆಯೊಂದನ್ನು ನಡೆಸಿಕೊಂದು ಬರುತ್ತಿದ್ದೇವೆ. ಬಣ್ಣ ಗೆಟ್ಟ ಕಾಗದದ ಮೇಲೆ ಝೆರಾಕ್ಸ್ ಆಗಿ ಹೊರ ಬರುತ್ತಿದ್ದ ‘ಕಲರವ’ ಈಗ ಸರ್ವಾಂಗ ಸುಂದರವಾಗಿ ಆಫ್ ಸೆಟ್ ಮುದ್ರಣ ಕಾಣುತ್ತಾ ಪ್ರತಿ ತಿಂಗಳು ಪ್ರಕಟವಾಗುತ್ತಿದೆ. ಯೌವನದ ಹೊಸ್ತಿಲಲ್ಲಿರುವ ನಮ್ಮಂತಹ ಹುಂಬರ ಕನಸುಗಳು, ಕನವರಿಕೆಗಳು, ಆತಂಕ, ಗೊಂದಲಗಳು ಪ್ರತಿ ತಿಂಗಳು ‘ಕಲರವ’ದ ಅಂಗಳದಲ್ಲಿ ಅನಾವರಣಗೊಳ್ಳುತ್ತವೆ.
ಖಾಸಗಿ ವಲಯದಲ್ಲಿ ಪ್ರಸಾರಕ್ಕೆಂದು ಪ್ರಾರಂಭಿಸಿದ ಪತ್ರಿಕೆಯ ಖಾಸಗಿ ವಲಯ ಸಾವಿರದ ಗಡಿ ಮುಟ್ಟುತ್ತಿದೆ. ನಮ್ಮ ಹುಚ್ಚುತನದ ಬಗ್ಗೆ ಆಸಕ್ತಿ ಇದ್ದರೆ, ನಮ್ಮ ಹುಂಬತನಕ್ಕೊಂದಿಷ್ಟು ಇಂಬುಕೊಡುವ ಮನಸ್ಸಿದ್ದರೆ ಚಂದಾದಾರರಾಗಿ ನಮ್ಮ ಖಾಸಗಿ ವಲಯವನ್ನು ಪ್ರವೇಶಿಸಿ…
ಪ್ರತಿಗಳು ಬೇಕಾದಲ್ಲಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 9986907526
ಇತ್ತೀಚಿನ ಟಿಪ್ಪಣಿಗಳು