ಫೆಬ್ರವರಿ 2008 ಸಂಚಿಕೆ
ಫೆಬ್ರವರಿ ಸಂಚಿಕೆಯ ‘ಸಡಗರ’ದ ಪುಟಗಳಲ್ಲಿ ಒಲವೇ ವಿಸ್ಮಯ!
‘ಪ್ರೀತಿ ಮಾಯೆ ಹುಶಾರು’ ಅಂದವರಿದ್ದಾರೆ, ‘ಪ್ರೀತಿ ಬದುಕಿನ ನೆಲೆ’ ಅಂದವರಿದ್ದಾರೆ. ನಿಜಕ್ಕೂ ಈ ಪ್ರೀತಿ ಅಂದರೆ ಏನು? ಪ್ರೀತಿಯ ಅನುಭವ ಹೇಗಿರುತ್ತದೆ? ಪ್ರೀತಿ ಅಂತ ಮೂಗು ಮುರಿಯುವ ಹಿರಿಯರಿದ್ದಾರೆ. ಕಾಲ ಹಾಳಾಗಿ ಹೋಯ್ತು ಅಂತ ಗೊಣಗುವವರಿದ್ದಾರೆ. ಆದರೆ ಪ್ರೀತಿಗೆ ಕಾಲದ ಹಂಗಿಲ್ಲ. ನಮ್ಮ ತಾತ ಮುತ್ತಾತನ ಕಾಲದಲ್ಲೂ ಪ್ರೀತಿಯಿತ್ತು, ಪ್ರೀತಿಯಿಲ್ಲದೆ ಮನುಷ್ಯನ ಬದುಕಿಗೆ ಅರ್ಥವೇ ಇಲ್ಲವೇನೊ…
ಪ್ರೀತಿ ಅಂದರೆ ಕೇವಲ ವಯಸ್ಸಿಗೆ ಬಂದ ಹುಡುಗ ಹುಡುಗಿಯರ ನಡುವಿನ ಸಂಬಧ ಎಂದು ಭಾವಿಸಿದರೆ ನಾವು ಪ್ರೀತಿಯನ್ನು ವ್ಯಾಖ್ಯಾನಿಸುವಲ್ಲಿ ಸೋಲುತ್ತೇವೆ. ಮಮತೆ, ವಾಸ್ತಲ್ಯ, ಹೆಮ್ಮೆ, ಅಭಿಮಾನ, ದೇಶ ಭಕ್ತಿ, ದೈವ ಭಕ್ತಿ, ಪುಸ್ತಕ ಪ್ರೇಮ, ಸಹೃದಯತೆ ಅಂತೆಲ್ಲಾ ಯಾವ ಭಾವಗಳನ್ನು ಕರೆಯುತ್ತೇವೋ ಅವೆಲ್ಲಾ ಪ್ರೀತಿಯ ನದಿಯ ಹರಿವಿನ ಬೇರೆ ಬೇರೆ ಕವಲುಗಳು ಮಾತ್ರ. ಈ ಪ್ರೀತಿಯೆಂಬ ನದಿಯ ದಡದಲ್ಲಿ ಕುಳಿತು, ನದಿಯ ಆಳಕ್ಕೆ ಮುಳುಗಿ, ನದಿಯ ಮೇಲೆ ಹಾಯಿದೋಣಿಯಲ್ಲಿ ತೇಲಿದವರ ವ್ಯಾಖ್ಯಾನಗಳು ಈ ಸಂಚಿಕೆಯಲ್ಲಿ ಬರಹದ ರೂಪವನ್ನು ಪಡೆದುಕೊಂಡಿವೆ.
ಎಲ್ಲಾ ಹೇಳಿದ ನಂತರವೂ ಅಗೋಚರವಾಗಿ ಉಳಿವುದು ಪ್ರೀತಿ! ಒಲವೇ ವಿಸ್ಮಯ!
ಈ ಸಂಚಿಕೆಯ ಪಿಡಿಎಫ್ ಪ್ರತಿಯನ್ನು ಇಲ್ಲಿಂದ ಇಳಿಸಿಕೊಳ್ಳಬಹುದು.
ಈ ಸಂಚಿಕೆಯ ಹೂರಣ ಇಲ್ಲಿದೆ:
ಸಂಪಾದಕೀಯ: ಒಬ್ಬರ ಹುಳುಕನ್ನು ಒಬ್ಬರು ಹೆಕ್ಕುತ್ತಾ ಕೂರುವುದೇ ಬೆಳವಣಿಗೆಯ ಲಕ್ಷಣವೇ?
ಬೀಥೆ ಹುಯೆ ದಿನ್: ಪರಮ ಹಠಮಾರಿ ಬೈಕಿನ ಬೆನ್ನೇರಿ…
ನೆನೆಯದೆ ಇರಲಿ ಹ್ಯಾಂಗ… ಶಿರಾದಲ್ಲಿ ಕಂಡ ಮುಖ
ಮುಖ ಪುಟ ಲೇಖನ: ಒಲವೆಂಬ ವಿಸ್ಮಯ! ಪ್ರೀತಿ ಅಂದರೇನು?
ಲಲಿತ ಪ್ರಬಂಧ: ಟಾಕು-ಟೀಕು ತಾರಾನಾಥ
ದಿ ಡಿಬೇಟ್: ವ್ಯವಸ್ಥೆ ಮನುಷ್ಯನ ಬೆಳವಣಿಗೆಗೆ ಪೂರಕವೇ ಅಥವಾ ಮಾರಕವೇ?
ಪರವಾದ ವಾದ :ವ್ಯವಸ್ಥೆ ನಮ್ಮ ರಕ್ಷಣೆಗೆ ಕಟ್ಟಿಕೊಂಡ ಕೋಟೆ
ವಿರೋಧವಾದ ವಾದ: ವ್ಯವಸ್ಥೆ ಮನುಷ್ಯನ ಚೈತನ್ಯದ ಸೆರೆಮನೆ
ಲಹರಿ ಹರಿದಂತೆ: ಯುರೇಕಾ ಇದು ನನ್ನ ಐಡಿಯಾ!
ಇದು ಕಥೆಯಂತೆ: ವೈಚಾರಿಕತೆ
ಹೀಗೊಂದು ಪತ್ರ: ಈ ಸೂಕ್ಷ್ಮ ನಿನಗ್ಯಾವಾಗ ಅರ್ಥವಾಗುತ್ತದೆಯೋ…
ಇಂತಿ ನಿನ್ನ ಪ್ರೀತಿಯ: ಈ ನಂಟಿಗೇಕೆ ಹೆಸರಿನ ಹಂಗು…
ಇಂಥದ್ದೊಂದು ಪುಸ್ತಕ ಓದಿದ್ದೆ…: ಸಣ್ಣ ಕಥೆಗಳ ಜನಕ – ಮಾಸ್ತಿ
1 | ಮಾರ್ಚ್ ತಿಂಗಳ ಸಂಚಿಕೆ ಆಡುಗೆ ಮನೆಯಲ್ಲಿದೆ! « ಕಲರವ
ಮಾರ್ಚ್ 15, 2008 at 7:38 ಅಪರಾಹ್ನ
[…] ಹೌದು, ಫೆಬ್ರವರಿ ತಿಂಗಳ ಸಂಚಿಕೆಯನ್ನು ಹೊರತಂದ ದಣಿವು ಆರುವುದರೊಳಗೆ […]