Posted by: uniquesupri on: July 13, 2009
- ಸುಪ್ರೀತ್ ಕೆ. ಎಸ್, ಬೆಂಗಳೂರು.
ಪ್ರತಿನಿತ್ಯ ತಪ್ಪದೆ ಬ್ಲಾಗಿಗೆ ಬರೆಯಬೇಕು ಅಂದುಕೊಂಡಿದ್ದೆ. ಅದನ್ನೊಂದು ಸಾಧನೆ ಎನ್ನುವ ಹಾಗೆ ಭಾವಿಸಿದ್ದೆ. ಏಕೆ ದಿನನಿತ್ಯ ಬರೆಯಬೇಕು ಎಂದು ಕೇಳಿಕೊಳ್ಳುವ ತಾಳ್ಮೆ ಇರುತ್ತಿರಲಿಲ್ಲ. ಏನೋ ಉನ್ಮಾದ. ಬರೀ ಬೇಕು ಅನ್ನಿಸಿದ ತಕ್ಷಣ ಬರೆಯಲು ಶುರುಮಾಡಿಬಿಡಬೇಕು. ಏನಾದರೂ ಮಾಡಬೇಕೆಂಬ ಹುಮ್ಮಸ್ಸು ಹುಟ್ಟಿದಾಗ ದೊಡ್ಡವರು ಅದರ ಇಹಪರಗಳ ಬಗ್ಗೆ ಯೋಚಿಸಿ ಮಾಡು ಎಂದಾಗ ಹುಟ್ಟುವ ರೇಜಿಗೆಯನ್ನೇ ನಮ್ಮನ್ನು ನಾವು ನಿಧಾನಿಸಲು ಪ್ರಯತ್ನಿಸಿದಾಗ ಎದುರಿಸಬೇಕಾಗುತ್ತದೆ. ಈ ಹದಿ ವಯಸ್ಸಿನಲ್ಲಿ ಯಾವಾಗಲೂ ವಿವೇಕಕ್ಕಿಂತ ಸಂಕಲ್ಪಶಕ್ತಿ, ಕ್ರಿಯಾಶೀಲತೆಯೇ ಹೆಚ್ಚಾಗಿರುತ್ತದೆಯೇನೋ! [...]
Posted by: uniquesupri on: May 18, 2009
- ಪ್ರಜ್ಞಾ, ಶಿವಮೊಗ್ಗ
“ಕವಿತೆಯೊಳಗಾ ಸೆಗೈಯು ಫಲಯಾವುದೇ ಕೀರ್ತಿ – ನೆಗಳೆಯೆಂಬುದೆ ಫಲ ವಂ” ಎಂಬ ಮಾತು ಅಕ್ಷರಶಃ ಸಾಕಾರಗೊಂಡಿದೆ, ಕುವೆಂಪುರವರ ಮಹಾರಸಋಷಿಯ ಮಹಾ ಬದುಕಿನಲ್ಲಿ ಸರಸ್ವತಿಯ ಕೃಪಾಕಟಾಕ್ಷದೊಂದಿಗೆ ಲಕ್ಷ್ಮಿಯ ಕೃಪಾಕಟಾಕ್ಷ ಅವರಿಗಿತ್ತು. ಅವರದು ಕವಿ ವ್ಯಕ್ತಿತ್ವ, ಯುಗ ಪ್ರವರ್ತಕ ವ್ಯಕ್ತಿತ್ವ, ‘ಋಷಿ ಅಲ್ಲದವನು ಕವಿಯಲ್ಲ’ ಎನ್ನುವ ಮಾತು ಅವರನ್ನು ನೋಡಿಯೇ ಹುಟ್ಟಿರಬೇಕು. ಕುವೆಂಪು ತಮ್ಮ ಕೃತಿಗಳೊಂದಿಗೆ ಯುಗವನ್ನು ಬರೆದಿರುವರು. ಯುಗ ಪ್ರವರ್ತಕರಾದ ಈ ಭೌಮ ವ್ಯಕ್ತಿತ್ವಕ್ಕೆ ಸಲ್ಲಿಸಿದ ನಮೋ [...]
Posted by: uniquesupri on: May 15, 2009
ಜಳಜಳನೆ ಹರಿವ ನೀರಿಗೆ ತಡೆ ಬೇಕಿರಲಿಲ್ಲ ಗುರಿ ಕಡಲಾದರೂ ಒಡಲಿಗೆ ತಂಪ ಕೊಡಬೇಕಿತ್ತು!
ಸ್ಪೂರ್ತಿ ನೀಡುವ ಪ್ರಕೃತಿಗೆ ಬರ ಬೇಕಿರಲಿಲ್ಲ. ಆಕಾಶ ಬರಿದಾಗಿದ್ದರೂ ಇಳೆ ತುಂಬಾ ಹಸಿರಿರಬೇಕಿತ್ತು!
ಕನಸ ಮಾರುವ ಹುಡುಗಿಗೆ [...]
Posted by: uniquesupri on: March 31, 2009
‘ಇನ್ನು ಸಾಧ್ಯವಾಗುವುದಿಲ್ಲ’ ಎನ್ನುವ ಷರಾದೊಂದಿಗೆ ನಾನು ನನ್ನ ಮತ್ತೊಂದು ಹುಂಬತನವನ್ನು ಕೊನೆಗಾಣಿಸಬೇಕಿದೆ.
ಸುಮಾರು ಎರಡು ವರ್ಷಗಳಿಂದ ಕುಂಟುತ್ತಲೋ, ತೆವಳುತ್ತಲೋ ನಡೆಯುತ್ತಿದ್ದ ನಮ್ಮ ಪತ್ರಿಕೆಯನ್ನು ಅಧಿಕೃತವಾಗಿ ಮುಚ್ಚುವ ಸಮಯ ಬಂದಾಗಿದೆ. ಇಷ್ಟು ದಿನ ನಾನಾ ಕಷ್ಟಗಳು, ತಾಪತ್ರಯಗಳ ನಡುವೆ ಹೇಗೋ ‘ಸಡಗರ’ವನ್ನು ನಡೆಸಿಕೊಂಡು ಬರುತ್ತಿದ್ದೆವು. ಆದರೆ ಈಗ ನಾವು ಡೆಡ್ ಎಂಡ್ ತಲುಪಿದ್ದೇವೆ. ಎಲ್ಲಾ ವಿಧದಲ್ಲೂ ಹೈರಾಣಾಗಿದ್ದೇವೆ. ಆರ್ಥಿಕವಾಗಿ ಕುಗ್ಗಿಹೋಗಿದ್ದೇವೆ, ಉತ್ಸಾಹವೂ ಬತ್ತಿ ಹೋಗಿದೆ. ಈ ಸಂದರ್ಭದಲ್ಲಿ ನಮ್ಮ ಕನಸಿನ ಸಮಾಧಿಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸುವುದೊಂದೇ ಬಾಕಿ ಉಳಿದಿರುವುದು. ಈಗದನ್ನು [...]
Posted by: uniquesupri on: February 13, 2009
‘ಕಲರವ’ ಎಂಬ ಹೆಸರಿನಲ್ಲಿ ಝೆರಾಕ್ಸ್ ಪ್ರತಿಯಾಗಿ ಶುರುವಾದ ನಮ್ಮ ಪತ್ರಿಕೆ ಆಫ್ ಸೆಟ್ ಮುದ್ರಣ ಕಂಡು ಎ-ನಾಲ್ಕು ಸೈಜಿಗೆ ಭಡ್ತಿ ಪಡೆದು ಬೆಳೆದದ್ದು ಸುಂದರವಾದ ಫ್ಲಾಶ್‌ಬ್ಯಾಕಿನಂತೆ ಆಗಾಗ ನಮ್ಮ ಕಣ್ಣ ಮುಂದೆ ಸುಳಿದು ಹೋಗುತ್ತದೆ. ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಸಂಚಿಕೆಗಳನ್ನು ಪ್ರಕಟಿಸಿದ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳಲು ಸಹ ನಮಗೆ ಸಮಯವಾಗಿಲ್ಲ.
ಈ ವರ್ಷಕ್ಕೆ ಕೆಲವು ಹೊಸ ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡಬೇಕೆಂದಿದ್ದೇವೆ. ಅದರ ಮೊದಲ ಹಂತವಾಗಿ ಹಳೆಯ ಎಲ್ಲಾ ಸಂಚಿಕೆಗಳನ್ನು ಡಿಜಿಟಲೈಸ್ ಮಾಡುವುದು ನಮ್ಮ ಯೋಜನೆ. ಹಳೆಯ [...]
Posted by: uniquesupri on: December 22, 2008
ಕತ್ತಿವರಸೆಯನ್ನು ಕಲಿಯುವುದರಲ್ಲಿ ಆಸಕ್ತನಾಗಿದ್ದ ಯುವಕನೊಬ್ಬ ಝೆನ್ ಗುರುವಿನ ಬಳಿಗೆ ಬಂದ.
"ನಾನು ನಿಮ್ಮ ಬಳಿ ಕತ್ತಿವರಸೆಯ ಕೌಶಲ ಕಲಿಯಬೇಕೆಂದಿದ್ದೇನೆ. ಪರಿಣತಿಯನ್ನು ಪಡೆಯಲು ಎಷ್ಟು ಕಾಲ ಬೇಕಾದೀತು?" ಎಂದು ಕೇಳಿದ.
ತೀರ ಸಹಜವೆಂಬಂತೆ ಗುರು "ಹತ್ತು ವರ್ಷ" ಎಂದ.
"ನನಗೆ ಬೇಗ ಕಲಿಯಬೇಕೆಂದು ಇಷ್ಟ. ಪ್ರತಿ ದಿನವೂ, ದಿನಕ್ಕೆ ಹದಿನೆಂಟು ಗಂಟೆಯ ಕಾಲ ಬೇಕಾದರೆ ಅಭ್ಯಾಸ ಮಾಡಬಲ್ಲೆ. ಹಾಗಾದರೆ ಎಷ್ಟು ಕಾಲ ಹಿಡಿದೀತು?" ಆತುರದಿಂದ ಯುವಕ ಕೇಳಿದ.
ಗುರು ಒಂದು ಕ್ಷಣ ಯೋಚನೆ ಮಾಡಿ "ಇಪ್ಪತ್ತು ವರ್ಷ" ಎಂದ.
………………………………………..
ಶಿಷ್ಯನೊಬ್ಬ ಗುರುವನ್ನು ಕೇಳಿದ: [...]
Posted by: uniquesupri on: December 20, 2008
‘ಸಡಗರ’ ಇದು ಆರೇಳು ಮಂದಿ ವಿದ್ಯಾರ್ಥಿಗಳು ಸೇರಿ ನಡೆಸುತ್ತಿರುವ ಮಾಸಪತ್ರಿಕೆ. ಎ-೪ ಆಕಾರದ ಮುವತ್ತಾರು ಪುಟಗಳ ಈ ಪುಟ್ಟ ಪತ್ರಿಕೆಯಲ್ಲಿ ಬರೆಯುವವರೆಲ್ಲಾ ಯುವಕ ಯುವತಿಯರೇ.
ಈ ದೇಶ ಕಾಲದ ಯುವಕ ಯುವತಿಯರನ್ನು ಕಾಡುವ ಸಂಗತಿಗಳು, ಅವರ ಚಿಂತನೆಯನ್ನು ರೂಪಿಸುವ ವಿಷಯಗಳು ಇದರ ಹೂರಣದ ಬಹುಮುಖ್ಯ ಭಾಗವನ್ನು ಆಕ್ರಮಿಸಿಕೊಂಡಿದ್ದರೆ, ಹಸಿ ಉತ್ಸಾಹದ, ಅಪ್ಪಟ ರಚನಾತ್ಮಕತೆಯ ಬಿಂಬಿಸುವ ಬರಹಗಳಿಗೇನು ಕೊರತೆಯಿಲ್ಲ.
ಪ್ರತಿ ತಿಂಗಳು ಪ್ರಕಟವಾಗುವ ಈ ಪತ್ರಿಕೆಯಲ್ಲಿನ ಕೆಲವು ಆಯ್ದ ಬರಹಗಳನ್ನು ಈ ಬ್ಲಾಗಿನಲ್ಲಿ ಪ್ರಕಟಿಸುತ್ತೇವೆ. ಬ್ಲಾಗಿನ ಲೇಖನಗಳು ಮೆಚ್ಚುಗೆಯಾದರೆ ಖಂಡಿತವಾಗಿಯೂ ಮುದ್ರಿತ [...]
Posted by: uniquesupri on: December 20, 2008
ಚಂದ್ರಯಾನ ಜುಟ್ಟಿನ ಮಲ್ಲಿಗೆಯೇ?
- ಸುಪ್ರೀತ್.ಕೆ.ಎಸ್
ಪುರಾತನ ಕಾಲದಿಂದಲೂ ಭಾರತೀಯರು ಜ್ಞಾನದ ಉಪಾಸನೆಯನ್ನು ಮಾಡುತ್ತಾ ಬಂದವರು. ಜ್ಞಾನ ಯಾವ ದಿಕ್ಕಿನಿಂದ ಬಂದರೂ ಅದನ್ನು ಸ್ವೀಕರಿಸುವ ಮನೋಭೂಮಿಕೆಯನ್ನು ಸಿದ್ಧ ಪಡಿಸಿಕೊಂಡವರು. ಭೂಮಿಯ ಮೇಲಿನ ಸಂಗತಿಗಳ ಬಗ್ಗೆ ತಿಳಿಯುತ್ತಾ ಅವರ ಹಸಿವು ದಿಗಂತದೆಡೆಗೆ ವಿಸ್ತರಿಸಿತು. ನೆಲದ ಮೇಲೆ ನೆಟ್ಟಿದ್ದ ದೃಷ್ಟಿ ಸೂರ್ಯ, ಚಂದ್ರರನ್ನು ದಾಟಿ ದೂರದ ನಕ್ಷತ್ರ ಪುಂಜಗಳವರೆಗೆ ವ್ಯಾಪಿಸಿತು. ಗ್ರಹಗಳ ಚಲನೆಯ ಬಗ್ಗೆ, ನಕ್ಷತ್ರಗಳ ಪುಂಜಗಳ ಸ್ಥಾನಗಳ ಬಗ್ಗೆ, ಗ್ರಹಣಗಳ ಬಗ್ಗೆ ತಿಳಿಯುತ್ತಾ ಅಂತರಿಕ್ಷವೆಂಬುದು ಇಡೀ ಬ್ರಹ್ಮಾಂಡದ ರಹಸ್ಯವನ್ನು ಬಿಚ್ಚಿಡುವ [...]
Posted by: uniquesupri on: July 24, 2008
ಈ ಬರಹ ಓದುವ ಮುನ್ನವೇ ಹೇಳಿಬಿಡುತ್ತೇನೆ. ನೀವು ಅಪ್ಪಟ ಸೋಮಾರಿಯಾಗಿದ್ದರೆ ಈ ಬರಹವನ್ನು ಇಡಿಯಾಗಿ ಓದುವ ಸಂಕಲ್ಪವನ್ನಾದರೂ ಮಾಡಿಕೊಳ್ಳಿ. ಇಲ್ಲ, ನೀವು ಸೋಮಾರಿಗಳಲ್ಲ ಎಂಬ ನಂಬಿಕೆ ನಿಮಗಿದ್ದರೆ ಇದನ್ನು ಓದುವ ಕಷ್ಟವನ್ನು ತೆಗೆದುಕೊಳ್ಳಬೇಕಿಲ್ಲ!
ನಾನು ಈಗ ಮಾತನಾಡುತ್ತಿರುವುದು ತಮ್ಮಲ್ಲಿ ಸಾಮರ್ಥ್ಯವಿದ್ದರೂ ಏನನ್ನೂ ಮಾಡದೆ ಕಾಲವನ್ನು ಜಾರಿ, ಸೋರಿ ಹೋಗಲು ಬಿಟ್ಟು ಕೂರುವ ಸೋಮಾರಿ ವರ್ಗದ ಕುರಿತು. ತಮ್ಮ ಸಾಮರ್ಥ್ಯ ಮೀರಿದ ಸಂಗತಿಗಳನ್ನು ಸಾಧಿಸಲು ಪಡಬೇಕಾದ ಪ್ರಯತ್ನವನ್ನು, ಸುರಿಸಬೇಕಾದ ಬೆವರನ್ನು ಸುರಿಸಲು ಹಿಂದೆ ಮುಂದೆ ನೋಡುತ್ತಾ ಕುಳಿತುಕೊಳ್ಳುವ ಇನ್ನೊಂದು ವರ್ಗದ [...]
Posted by: uniquesupri on: July 20, 2008
ಒಂದು ಕ್ಷಮಾಪಣೆ ಕೇಳಬೇಕಿದೆ. ಮೇ ತಿಂಗಳಲ್ಲಿ ಬರಬೇಕಿದ್ದ ಪತ್ರಿಕೆ ಈಗ ಜುಲೈನಲ್ಲಿ ಹೊರಬರುತ್ತಿದೆ!
‘ಕಲರವ’ದ ಹಿಂದಿನ ಸಂಚಿಕೆ ಪ್ರಕಟವಾಗಿ ಎರಡು ತಿಂಗಳು ಕಳೆದಿವೆ. ನಿಮ್ಮ ಸಿಟ್ಟು ನ್ಯಾಯಯುತವಾದದ್ದೇ. ಆದರೂ ಪತ್ರಿಕೆ ಹೀಗೆ ಹೇಳದೇ ಕೇಳದೆ ಪ್ರಕಟವಾಗುವುದು ನಿಂತು ಹೋದರೆ ಏಳುವ ಸಹಜ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗಿದೆ.
ನಿಮಗೆ ತಿಳಿದಂತೆ ಇದು ವೃತ್ತಿಪರ ಪತ್ರಿಕೆಯಲ್ಲ. ಹಾಗಂತ ಇದರಲ್ಲಿ ಬರೆಯುವವರನ್ನು ಹವ್ಯಾಸಿ ಬರಹಗಾರರು ಎಂದು ಕರೆಯಲು ಸಹ ಸಾಧ್ಯವಾಗುವುದಿಲ್ಲ. ಬರವಣಿಗೆಯ ಹಾದಿಯಲ್ಲಿ ಅಂಬೆಗಾಲಿಡುತ್ತಾ, ತೊಡರುತ್ತಾ, ಎಡವಿ ಬೀಳುತ್ತಾ, ಸಂತೈಸಿಕೊಳ್ಳುತ್ತಾ ಮುಂದೆ ಸಾಗುವ ಹುಮ್ಮಸ್ಸನ್ನು [...]
Recent Comments