ಕಲರವ

Archive for the ‘ಹೀಗೊಂದು ಪತ್ರ’ Category

(ಹಿಂದಿನ ಸಂಚಿಕೆಯಿಂದ)
ನೀನು ನನ್ನ ಬದುಕಿನಲ್ಲಿ ಬಂದ ಮೇಲೆ ನಾನು ಅದೆಷ್ಟು ಬದಲಾಗಿ ಹೋಗಿದ್ದೆನಲ್ಲವಾ? ನಿನ್ನ ಪರಿಚಯ, ಸಾಹಚರ್ಯದಿಂದಾಗಿ ನನ್ನಲ್ಲಿ ಹೊಸತೊಂದು ಹುಮ್ಮಸ್ಸು ಹುಟ್ಟಿಕೊಂಡಿತ್ತು.  ನಿನ್ನೊಂದಿಗೆ ಪ್ರತಿದಿನ ಒಂದಷ್ಟು ಸಮಯ ಕಳೆದರೆ ವಿಲಕ್ಷಣವಾದ ಧೈರ್ಯ ಬರುತ್ತಿತ್ತು. ನೀನು ನನ್ನ ಬೆರಳುಗಳ ನಡುವೆ ನುಲಿಯುತ್ತಿರುವಾಗ ನಾನು ಇಡೀ ಜಗತ್ತನ್ನೇ ಜಯಿಸುವ ಕನಸನ್ನು ಕಾಣುತ್ತಿದ್ದೆ. ಸುತ್ತಲಿನ ಜಗತ್ತೂ ಕೊಂಚ ಬದಲಾದ ಹಾಗೆ ಅನ್ನಿಸುತ್ತಿತ್ತು. ಅದುವರೆಗೂ ಕಣ್ಣೆತ್ತಿಯೂ ನೋಡದವರೆಲ್ಲಾ ನಾನು ನಿನ್ನೊಂದಿಗಿರುವಾಗ ನಮ್ಮಿಬ್ಬರನ್ನು ದುರುದುರನೆ ನೋಡಿ ಮುಂದೆ ಹೋಗುತ್ತಿದ್ದರು. ಕೆಲವರ ಕಣ್ಣಲ್ಲಿ ನಾನು [...]

ಪ್ರೀತಿಯ ಸಿಗರೇಟೇ,
ಹೇಗಿರುವೆ… ನಿನ್ನನ್ನು ಕಂಡು ತುಂಬಾ ದಿನಗಳಾದವು ಅಲ್ಲವಾ? ನಿನಗೆ ನನ್ನ ನೆನಪಿದೆಯೋ ಇಲ್ಲವೋ ಕಾಣೆ. ಆದರೆ ನಾನು ಮಾತ್ರ ಕಳೆದ ಹದಿನೈದೋ, ಇಪ್ಪತ್ತೋ ದಿನಗಳಿಂದ ನಿನ್ನನ್ನು ನೆನದು ನೆನೆದು ವಿಪರೀತ ಹಿಂಸೆಯನ್ನು ಅನುಭವಿಸಿದ್ದೇನೆ. ಮರೆವು ಇಷ್ಟು ದುಬಾರಿ ಎಂತ ನನಗೆ ಎಂದೂ ಅನಿಸಿದ್ದೇ ಇಲ್ಲ. ಪರೀಕ್ಷೆಗಾಗಿ ಓದಿದ್ದ ವಿಷಯಗಳನ್ನು ಬಿಡು, ಉಪನಯನ ಮಾಡಿಸಿದ ಮೂರನೆಯ ದಿನಕ್ಕೆ ಅಪ್ಪ ಆಕ್ಸಿಡೆಂಟಿನಲ್ಲಿ ಉಸಿರುಬಿಟ್ಟ ದಿನದ ನೆನಪು ಮಸುಕು ಮಸುಕಾಗಿಯಾದರೂ ನೆನಪಿಲ್ಲ. ಆದರೆ ನಿನ್ನ ಮರೆಯುವುದಕ್ಕೆ ನಾನು ಪಟ್ಟ ಪಾಡಿದೆಯಲ್ಲ, [...]

ಓ ಮಾಯಾಂಗನೆ ನಗರವೇ!
ನಾನು ಕಲಾವಿದ. ನೆನಪಾಗಲಿಲ್ಲವಾ?ಊರೆಲ್ಲಾ ಸವಿ ನಿದ್ದೆಯಲ್ಲಿ ಮುಳುಗಿ ದಣಿವು ಕಳೆದುಕೊಳ್ಳುತ್ತಾ ಸವಿಗನಸು ಕಾಣುತ್ತಿರುವಾಗ ನಾನು ನದಿಯ ದಂಡೆಯ ಮೇಲೆ ಕುಳಿತು ಶುಭ್ರ ಬಿಳಿಯ ಕಾಗದಕ್ಕೆ ಬಣ್ಣದ ಕುಂಚದ ಸ್ಪರ್ಶ ನೀಡುವುದರಲ್ಲಿ ಮಗ್ನನಾಗಿರುತ್ತೇನೆ. ಮುಸ್ಸಂಜೆಯ ಹೊತ್ತಿನಲ್ಲಿ ಮರದ ಕೆಳಗೆ ಕುಳಿತು ನಾಲ್ಕು ಸಾಲು ಗೀಚಿ ಬಿಸಾಕುವುದಕ್ಕಾಗಿ ಗಂಟೆ ಗಟ್ಟಲೆ ಧ್ಯಾನಸ್ಥನಾಗಿರುತ್ತೇನೆ. [...]

ಮಾರ್ಚ್ ಎಂಟು ಬಂದಿತು, ಕಳೆದೂ ಹೋಯಿತು- ಪ್ರತಿವರ್ಷದಂತೆ. ಆ ದಿನವನ್ನು ಜಗತ್ತು ಮಹಿಳೆಯರಿಗಾಗಿ ಮೀಸಲಿಟ್ಟಿದೆ. ಆ ದಿನ ಮಹಿಳೆಗೆ ಜಗತ್ತು ಶುಭಾಶಯ ಕೋರುತ್ತದೆ. ಆಕೆಯ ಸಾಧನೆಯನ್ನು ಪತ್ರಿಕೆಗಳ ಪುರವಣಿಗಳು ಹಾಡಿ ಹೊಗಳುತ್ತವೆ. ಕೆಲವು ಕಾಲಂಗಳಲ್ಲಿ ಮಹಿಳೆಯರು ತಮ್ಮ ವಾದಗಳನ್ನು ಮುಂದಿಡುತ್ತಾರೆ. ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡುತ್ತಾರೆ. ಕೆಲವು ಇಂಗ್ಲೀಷ್ ಪತ್ರಿಕೆಗಳಲ್ಲಿ ಹೆಸರಿಲ್ಲದ ಅನಾಮಿಕ ಸಮೀಕ್ಷೆಗಳಲ್ಲಿ ಹದಿಹರೆಯದ ಹುಡುಗಿಯರು ತಮಗೆ ಇಷ್ಟಬಂದ ಹಾಗೆ ಹಾಗೂ ಇಷ್ಟವಾಗುವಷ್ಟು ಪ್ರಮಾಣದ ಬಟ್ಟೆಯನ್ನು ಹಾಕಿಕೊಂಡು ಹೊರಕ್ಕೆ ಬರಲು ಅನುಮತಿ ಕೊಡದ ಸಮಾಜದ [...]

ಇಂಥದ್ದೊಂದು ಪತ್ರವನ್ನು ನೀವು ಯಾರಿಗೂ ಬರೆದಿರಲಾರಿರಿ. ಯಾರಿಂದಲೂ ಪಡೆದಿರಲಾರಿರಿ. ಇಂತಹ ಪತ್ರ ಸಿಗುವುದು ಇಲ್ಲಿ ಮಾತ್ರ.ಇದು ‘ ಹೀಗೊಂದು ಪತ್ರ’. ಪ್ರೀತಿಯ ಬಗ್ಗೆ ಎಲ್ಲರೂ ಪುಟಗಟ್ಟಲೆ ಬರೀತಾರೆ. ಆದರೆ ಪ್ರೀತಿಗೂ ಮಾತನಾಡೋಕೆ ಏನಾದರೂ ಇದೆಯೇ?

ಹೀಗೆ ನಾನು ಪತ್ರ ಬರೆಯುತ್ತಿರುವುದು ಇದೇ ಮೊದಲು. ನಿನಗೆ ಆಶ್ಚರ್ಯವಾಗಬಹುದು, ನನಗೂ ಮಾತನಾಡುವುದಕ್ಕೆ ಇದೆಯಾ ಅಂತ ನಿನಗೆ ಅಚ್ಚರಿಯಾಗಬಹುದು. ನಾನು ಏನು, ನಾನು ಹೇಗಿದ್ದೇನೆ, ನನ್ನ ವ್ಯಾಪ್ತಿ ಏನು ಎಂಬುದರ ಬಗ್ಗೆ ಇದುವರೆಗೇ ನೀನು ದಣಿವಿಲ್ಲದೆಯೇ ಮಾತನಾಡಿದ್ದೀಯ ಈಗ ನನಗೂ ಹೇಳಿಕೊಳ್ಳುವುದಕ್ಕೆ, ವಿವರಿಸಿಕೊಳ್ಳುವುದಕ್ಕೆ, [...]


Blog Stats

  • 13,367 hits

 

November 2009
M T W T F S S
« Aug    
 1
2345678
9101112131415
16171819202122
23242526272829
30