ಕಲರವ

Archive for the ‘ಸಂಗ್ರಹ’ Category

ಹಕ್ಕಿ ಇಲ್ಲದ ಗೂಡು!

Posted by: uniquesupri on: November 11, 2008

ಈ ತಿಂಗಳ ಸಂಚಿಕೆಯ ಮುಖಪುಟ ಲೇಖನವನ್ನು ಮನೆಯಿಂದ ದೂರ ಉಳಿಯುವ ಅನಿವಾರ್ಯತೆ ಇರುವ ಇಲ್ಲವೆ ಆಯ್ಕೆಯನ್ನು ಮಾಡಿಕೊಂಡವರ ಬಗ್ಗೆ ಚರ್ಚಿಸುವುದಕ್ಕೆ ಮೀಸಲಿಡಲಾಗಿದೆ. ಇದಕ್ಕೆ ಪೂರಕವಾಗಿ ಪ್ರತಿ ಪುಟದ ಅಡಿಯಲ್ಲಿ ಮನೆ, ಕುಟುಂಬ ವ್ಯವಸ್ಥೆ, ಜೀವನದಲ್ಲಿನ ತೃಪ್ತಿಯ ಬಗ್ಗೆ ಹಿರಿಯರು, ಬುದ್ಧಿವಂತರು, ಚಿಂತಕರು ನುಡಿದ ಸಾಲುಗಳನ್ನು ಆರಿಸಿ ಪ್ರಕಟಿಸಲಾಗಿದೆ. ಇವು ನಿಮಗಿಷ್ಟವಾಗಬಹುದು ಎಂಬ ನಿರೀಕ್ಷೆ ನಮ್ಮದು…
…………………..
ಮನುಷ್ಯ ತನಗೇನು ಬೇಕು ಎಂಬುದನ್ನು ಅರಸಿ ಜಗತ್ತೆಲ್ಲಾ ಸುತ್ತುವನು. ಕಡೆಗೆ ಅದನ್ನು ಪಡೆಯುವುದಕ್ಕೆ ಮನೆಗೆ ಹಿಂದಿರುಗುವನು.
-ಜಾರ್ಜ್ ಮೂರ್
ಪಯಣವೇ ನನ್ನ ಮನೆ.
- ಮ್ಯುರಿಯಲ್ ರುಕೇಯ್ಸರ್
ವಿದೇಶಕ್ಕೆ [...]

ದೇಶ ಪ್ರೇಮದ ಆಜೂಬಾಜು

Posted by: uniquesupri on: September 1, 2008

ದೇಶ ಪ್ರೇಮ, ಹಾಗೆಂದರೆ?
ಇರುವ ಒಂದು ಭೂಮಿಗೆ ಬೇಲಿಯನ್ನು ಹಾಕಿಕೊಂಡು ನೂರಾರು ದೇಶಗಳ ಗಡಿಯನ್ನು ಕೊರೆದುಕೊಂಡು ತಾವು ಹುಟ್ಟಿದ ಭೂಪ್ರದೇಶವೊಂದರ ಮೇಲೆ ಗಾಢವಾದ ಪ್ರೇಮವನ್ನು ನಟಿಸುತ್ತಾ ಉಳಿದೆಲ್ಲಾ ಭೂಪ್ರದೇಶಗಳನ್ನು ನಿಷ್ಕೃಷ್ಟವಾಗಿ ಕಾಣುವ ಗುಣವನ್ನು ದೇಶಪ್ರೇಮ ಅನ್ನಬೇಕಾ? ದೇಶಪ್ರೇಮವೆಂಬುದು ಉದಾತ್ತ ಭಾವನೆಯಾ ಇಲ್ಲಾ ಸಂಕುಚಿತ ಮನಸ್ಸಿನ ಸೃಷ್ಟಿಯಾ? ದೇಶಪ್ರೇಮವೆಂದರೆ ಉಳಿದೆಲ್ಲಾ ದೇಶಗಳೆಡೆಗಿನ ದ್ವೇಷವಾ?
ಈ ಪ್ರಶ್ನೆಗಳು ನಮ್ಮನ್ನು ಕಾಡಲು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಕ್ಕಿಂತ ಪ್ರಶಸ್ತವಾದ ಕಾಲ ಮತ್ತೊಂದಿರದು. ಈ ವಿಷಯದ ಬಗ್ಗೆ ಈ ಸಂಚಿಕೆಯಲ್ಲೊಂದು ಡಿಬೇಟ್ ಇದೆ. ಹಾಗೆಯೇ ಪ್ರತಿ ಪುಟದ [...]

ಎರಡು ಝೆನ್ ಕಥೆಗಳು

Posted by: uniquesupri on: July 26, 2008

ಹಣೆ ಬರಹ
ಜಪಾನಿನ ಒಂದು ಮುಖ್ಯವಾದ ಯುದ್ಧದಲ್ಲಿ ತನ್ನ ಸೈನ್ಯವು ಬಹುತೇಕ ನಾಶವಾಗಿದ್ದರೂ, ಸೈನಿಕರು ದಣಿದಿದ್ದರೂ ಸೈನ್ಯಾಧಿಕಾರಿಗೆ ಗೆಲುವು ಸಾಧ್ಯವೆಂಬ ಭರವಸೆಯಿತ್ತು. ಆದರೆ ಸೈನಿಕರು ಸಂಶಯದಲ್ಲಿದ್ದರು. ಪುನಃ ಯುದ್ಧವನ್ನು ಮುಂದುವರೆಸುವುದೆಂದು ಸೈನ್ಯಾಧಿಕಾರಿ ನಿರ್ಧರಿಸಿದ. ಸೈನ್ಯವು ಯುದ್ಧಕ್ಕೆ ತೆರಳುತ್ತಿದ್ದಾಗ ದಾರಿಯಲ್ಲಿ ಒಂದು ದೇವಾಲಯದ ಬಳಿ ಪ್ರಾರ್ಥನೆಗಾಗಿ ನಿಂತಿತು. ತನ್ನ ಸೈನಿಕರೊಂದಿಗೆ ಪ್ರಾರ್ಥನೆ ಮುಗಿಸಿದ ಬಳಿಕ [...]

ಅವನು ಲೀಡರ್

Posted by: uniquesupri on: July 20, 2008

ಹುಟ್ಟಿನಿಂದಲೇ ಒಬ್ಬ ನಾಯಕನಾಗುತ್ತಾನಾ ಇಲ್ಲವೇ ನಾಯಕನ್ನು ತಯಾರು ಮಾಡಲಾಗುತ್ತದಾ?ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ನಾಯಕತ್ವದ ಗುಣ ಜನ್ಮದತ್ತವಾದದ್ದಾ ಅಥವಾ ಪರಿಶ್ರಮದಿಂದ ಬೆಳೆಸಿಕೊಳ್ಳಬಹುದಾದದ್ದಾ? ನಾಯಕನಲ್ಲಿರಬೇಕಾದ ಗುಣಗಳು ಎಂಥವು? ಬದುಕು ನಾಯಕನನ್ನು ರೂಪಿಸುತ್ತದಾ? ಈ ಪ್ರಶ್ನೆಗಳನ್ನು ಮೂಲವಾಗಿಟ್ಟುಕೊಂಡು ಜಗತ್ತಿನಲ್ಲಿ ಲಕ್ಷಾಂತರ ಲೀಡರ್ ಶಿಪ್‌ಗೆ ಸಂಬಂಧಿಸಿದ ಪುಸ್ತಕಗಳು ಬೆಳಕು ಕಂಡಿವೆ. ಆದರೆ ಒಂದೇ ಒಂದು ಸಾಲು ಹೇಳುವ ಸತ್ಯದಷ್ಟು ಪರಿಣಾಮಕಾರಿಯಾಗಿ ಬೇರಾವ ಪುಸ್ತಕವೂ ಇರದು. ಈ ಸಂಚಿಕೆಯ ಪುಟಗಳ quoteಗಳ ತುಂಬಾ ಲೀಡರನ ಹುರುಪೇ ತುಂಬಿದೆ. -ಸಂ
…………………………
ಅಗೋ ಅಲ್ಲಿ ನನ್ನ ಜನರು ಹೋಗುತ್ತಿದ್ದಾರೆ. [...]

ಗೆಳೆತನ ವೈನ್ ಇದ್ದ ಹಾಗೆ; ಕಾಲ ಕಳೆದಷ್ಟೂ ರುಚಿಗಟ್ಟುತ್ತಾ ಹೋಗುತ್ತದೆ ಎಂಬ ಮಾತಿದೆ. ನಾವು ಬಯಸಲಿ ಬಿಡಲಿ, ನಮ್ಮ ಅರಿವಿಗೆ ಬಾರದಂತೆ ನಾವು ಗೆಳೆತನದ ನವಿರಾದ ಬಳ್ಳಿಗಳನ್ನು ನಮ್ಮ ಸುತ್ತಲೂ ಹಬ್ಬಿಸಿಕೊಂಡಿರುತ್ತೇವೆ.ನಾವು ಎತ್ತರೆತ್ತರಕ್ಕೆ ಬೆಳೆದಷ್ಟೂ, ವಿಶಾಲವಾದಷ್ಟೂ ನಮ್ಮನ್ನಪ್ಪುವ ಬಳ್ಳಿಗಳೂ ಹೆಚ್ಚಾಗುತ್ತವೆ, ಆಪ್ಯಾಯಮಾನವಾಗುತ್ತವೆ.
ಇಂತಹ ಅಪ್ಪಟ ಮಧುರ ಅನುಭೂತಿಯಾದ ಗೆಳೆತನವೆನ್ನು ಅಕ್ಷರಗಳಲ್ಲಿ ಹಿಡಿದಿಡಲು, ಪದಗಳ ಸಹಾಯದಿಂದ ಅಮೂರ್ತ ಸ್ನೇಹಕ್ಕೆ ಆಕಾರ ಕೊಡಲು ಹಲವರು ಪ್ರಯತ್ನಿಸಿದ್ದಾರೆ. ಅವರ ಆ ಪ್ರಯತ್ನಗಳ, ಅವುಗಳಲ್ಲಿನ ಯಶಸ್ಸಿನ ಭ್ರಮೆಗಳ, ಸೋಲಿನ ಶರಣಾಗತಿಯ ಝಲಕ್ಕುಗಳು ಈ ಸಂಚಿಕೆಯ [...]

ಚುರುಮುರಿ

Posted by: uniquesupri on: April 19, 2008

1714 ರಿಂದ 1727ರವರೆಗೆ ಇಂಗ್ಲೆಂಡನ್ನು ಆಳಿದ ದೊರೆ ಕಿಂಗ್ ಜಾರ್ಜ್‍ಗೆ ಇಂಗ್ಲೀಷ್ ಮಾತಾಡಲು, ಬರೆಯಲು ಬರುತ್ತಿರಲಿಲ್ಲ!
……….
ಜಗತ್ತಿನಲ್ಲೇ ಅತಿ ಪ್ರಸಿದ್ಧವಾದ ಹಾಡು ಎಂಬ ಕೀರ್ತಿಯನ್ನು ಗಳಿಸಿರುವುದು ಹುಟ್ಟು ಹಬ್ಬದ ದಿನ ಹಾಡುವ ‘ಹ್ಯಾಪಿ ಬರ್ಥ್ ಡೇ..ಟು ಯು…’ ಹಾಡು. ಇದನ್ನು ಸಂಯೋಜಿಸಿದವರು ಅಮೇರಿಕಾದ ಕೆಂಟುಕಿ ಪ್ರದೇಶದ ಇಬ್ಬರು ಶಾಲಾ ಶಿಕ್ಷಕರಾದ ಮಿಲ್ಡ್ರೆಡ್ ಹಾಗೂ ಪ್ಯಾಟಿ ಹಿಲ್ . ೧೮೯೩ರಲ್ಲಿ ಅವರು ಹೊರತಂದ ‘ಗುಡ್ ಮಾರ್ನಿಂಗ್ ಟು ಯು’ ಆಲ್ಬಮ್ಮಿನಲ್ಲಿ ಈ ಗೀತೆಯೂ ಸೇರಿತ್ತು.
……….
ಜಾನ್ ಕೆನಡಿ ತನ್ನ ಪ್ರೇಯಸಿ ಜ್ಯಾಕಲಿನ್‍ಳಿಗೆ [...]

Wicked Dictionary!

Posted by: uniquesupri on: April 19, 2008

School: A place where Papa pays and Son plays. Life Insurance: A contract that keeps you poor all your life so that you can die Rich. Nurse: A person who wakes u up to give you sleeping pills. Marriage: It’s an agreement in which a man loses his bachelor degree and a woman gains her [...]

ಪದ ಪದದಲ್ಲೂ ಲವ್ ಲವಿಕೆ!

Posted by: uniquesupri on: February 14, 2008

ಪ್ರೀತಿ ಅಂದರೆ ಏನು?
ಭೂಮಿಯ ಮೇಲೆ ಒಬ್ಬೇ ಒಬ್ಬನಿಗೂ ಉತ್ತರ ತಿಳಿದಿಲ್ಲ. ಅಸಲಿಗೆ ಇದು ಉತ್ತರ ಪಡೆಯುವಂತಹ ಪ್ರಶ್ನೆಯೇ ಅಲ್ಲವೇನೊ! ಪ್ರೀತಿಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಪ್ರೀತಿಯ ಬಗ್ಗೆ ಒಂದೊಂದು ಸಮಾಜ ಒಂದೊಂದು ನಿಲುವನ್ನು ಹೊಂದಿದೆ. ಯಾರು ಎಷ್ಟೇ ಸರಳಗೊಳಿಸಲು ಪ್ರಯತ್ನಿಸಿದರೂ ಸಂಕೀರ್ಣಗೊಳ್ಳುತ್ತಾ ಹೋಗುವ ಮಾಯೆಯಂಥದ್ದು ಈ ಪ್ರೀತಿ. ಆದರೂ ಪ್ರೀತಿಯ ಬಗ್ಗೆ ಜಗತ್ತಿನ ಬುದ್ಧಿವಂತರು, ಭಾವಜೀವಿಗಳು, ಕಲಾವಿದರು ಏನೇನು ಅಭಿಪ್ರಾಯ ಹೊಂದಿದ್ದರು ಎಂಬುದನ್ನು ತಿಳಿಯುವ ಪ್ರಯತ್ನ ಈ ಸಂಚಿಕೆಯಲ್ಲಿ ನಡೆದಿದೆ. ಇಲ್ಲಿನ ಪ್ರತಿ quoteಗಳಲ್ಲೂ ಪ್ರೀತಿಯ [...]


Blog Stats

  • 13,473 hits

 

November 2009
M T W T F S S
« Aug    
 1
2345678
9101112131415
16171819202122
23242526272829
30