ಕಲರವ

Archive for the ‘ಲಹರಿ ಹರಿದಂತೆ’ Category

ಬರದವನ ದಾರಿ ಕಾಯುತ್ತಾ…!

Posted by: ರಂಜಿತ್ on: July 8, 2009

- ರೇಶ್ಮಾ, ಉತ್ತರ ಕನ್ನಡ.
 ಹೊರಗೆ ಬಿಸಿಲಿಲ್ಲ. ಕಪ್ಪು ಮೋಡ. ಇನ್ನೇನು, ಕ್ಷಣಗಳಲ್ಲಿ ಮಳೆ ಶುರುವಾಗತ್ತೆ. ಒಳಗೆ ಎಷ್ಟು ಕೂಗಿಕೊಂಡರೂ ಕೇಳಿಸದ ಹಾಗೆ ಧೋ.. ಅಂತ ಸುರಿವ ಮಳೆ. ಕಿಟಕಿ, ಬಾಗಿಲು ಮುಚ್ಚಿ ಕುಳಿತರೆ ಕೊನೆಗೆ ವೆಂಟಿಲೇಟರ್ ನಲ್ಲಾದರೂ ನುಸುಳಿ ಒಳ ಬಂದು ಥಂಡಿ ಹುಟ್ಟಿಸುವ ಗಾಳಿ. ಅವನೂ ಇದ್ದಿದ್ದರೆ ಚೆನ್ನಾಗಿರ್ತಿತ್ತು.
       ತುಂಬಾ ಚಳಿಯಾಗುತ್ತಿದೆ. ಬಿಸಿಯಾಗಿ ಏನಾದರೂ  ಹೊಟ್ಟೆಗೆ ಬೇಕು ಅನಿಸ್ತಿದೆ. ಒಬ್ಬಳೇ ಮಾಡಿಕೊಂಡು ಕುಡೀಬೇಕಲ್ಲ ಅಂತ ಸ್ವಲ್ಪ ಉದಾಸೀನ. ಆದರೂ ಬೇಕು ಅನ್ನುತ್ತಿದೆ ಮನಸ್ಸು. ಲೋಟದ [...]

-ರಂಜಿತ್ ಅಡಿಗ, ಕುಂದಾಪುರ
 
“ಕೊಡುವುದು ಬೇಡ ಜೀವಕ್ಕೆ ಜೀವ
ಹಂಚಿಕೊಂಡರೆ ಸಾಕು ನನ್ನೊಡಲ ನೋವ”
ಎಲ್ಲ ಸಂಬಂಧಗಳೂ ಏನನ್ನಾದರೂ ಬೇಡುತ್ತವೆ. ಆದರೆ ಸ್ನೇಹ ಎಂಬ ಬಗೆಯ ಸಂಬಂಧ ಮಾತ್ರ ವಿಶಿಷ್ಟವಾದದ್ದು. ಜೊತೆಗೆ ಅಚ್ಚರಿ ಉಂಟುಮಾಡುವಂತದ್ದು ಕೂಡ. ಅದಕ್ಕೆ ರಕ್ತ ಸಂಬಂಧವಿರಬೇಕಾದ್ದಿಲ್ಲ. ತಂದೆ-ತಾಯಿಯೊಡನೆ ಮಕ್ಕಳಿಗಿರಬೇಕಾದ ಭಯ-ಭಕ್ತಿ ಬೇಡ. ಗಂಡನ ಕಿರಿಕಿರಿ ಸಹಿಸುವ ಹೆಂಡತಿಯ ಸಹನೆ ಬೇಕಿಲ್ಲ. ಸ್ನೇಹಕ್ಕೆ ಬೇಕಾದ್ದು ರಹಸ್ಯಗಳಿಲ್ಲದ ಮುಕ್ತ ಮತ್ತು ಶುದ್ಧ ಮನಸ್ಸು. ಜತೆಗೆ ಬೊಗಸೆ ಪ್ರೀತಿ. ಇವಿಷ್ಟಿದ್ದರೆ ಸ್ನೇಹಕ್ಕೆ ಸಲ್ಲುವ ಸಮಯ ಸಹ್ಯ. ಅರಿವಾಗದೇ ನೋವುಗಳೆಲ್ಲ ಮಾಯ. ಸುಖ-ದುಃಖ [...]

-ಅಂತರ್ಮುಖಿ

ನಾವು ಬುದ್ಧಿವಂತರು. ಸಮಗ್ರವಾಗಿ ಆಲೋಚಿಸದೆ, ಸರಿ ತಪ್ಪುಗಳ ನಿಷ್ಕರ್ಷೆಯನ್ನು ಮಾಡದೆ, ಉದ್ದೇಶಗಳನ್ನು ಸ್ಪಷ್ಟ ಪಡಿಸಿಕೊಳ್ಳದೆ, ಗುರಿಗಳನ್ನು ಕಂಡುಕೊಳ್ಳದೆ ನಾವು ಯಾವ ಕೆಲಸವನ್ನೂ ಮಾಡುವುದಿಲ್ಲ. ಏನನ್ನೇ ಮಾಡಬೇಕೆಂದರೂ ನಮಗೆ ಅದರಲ್ಲಿ ಒಂದು ಠಿuಡಿಠಿose ಇರಬೇಕು. ಉಪಯೋಗವಿಲ್ಲದ ಯಾವ ಕೆಲಸವನ್ನು ಮಾಡುವುದಕ್ಕೂ ನಾವು ಇಷ್ಟ ಪಡುವುದಿಲ್ಲ. ಉದ್ದೇಶವಿಲ್ಲದೆ ಮಾತನಾಡುವವರು, ಉದ್ದೇಶವಿಲ್ಲದೆ ಕೆಲಸ ಮಾಡುವವರು, ಆಕಾರವಿಲ್ಲದ ಚಿತ್ರದಲ್ಲಿ ಕುಂಚ ಅಲ್ಲಾಡಿಸುವವರು, ಏನನ್ನೂ ಹೇಳದ ಸಿನೆಮಾ ಮಾಡಿದವರು ನಮ್ಮಲ್ಲಿ ಲೂಸ್‌ಗಳು ಎಂದು ಗುರುತಿಸಲ್ಪಡುತ್ತಾರೆ. ಉದ್ದೇಶವಿಲ್ಲದೆ ನಗುತ್ತಾ ರಸ್ತೆಯಲ್ಲಿ ಸಾಗುವವನು ನಮ್ಮ ಅನುಕಂಪಕ್ಕೆ ತುತ್ತಾಗುತ್ತಾನೆ. [...]

ಇಲ್ಲಿಗೀ ಕಥೆ ಮುಗಿಯಿತು!

Posted by: uniquesupri on: October 1, 2008

‘ಆ ಕಾದಂಬರಿ ಕೊನೆಗೂ ಏನೂ conclusion ಕೊಡಲಿಲ್ಲ. ಅದು ಸಮಸ್ಯೆಗಳೊಂದಿಗೇ ಶುರುವಾಗಿ ಸಮಸ್ಯೆಗಳೊಂದಿಗೇ ಅಂತ್ಯವಾಗುತ್ತದೆ. ಅದರ ಅಂತ್ಯ ನಿನಗೇನಾದರೂ ಗೊತ್ತಾಯಿತಾ?’ ಎಂದು ಕೇಳಿದ್ದಳು ಆಕೆ.
‘ಕನ್‌ಕ್ಲೂಶನ್ ಇರಲೇ ಬೇಕಾ?’ ಕೇಳಿದ್ದೆ. ಯಾಕೋ ಹಿಂಗೆ ತುಂಬಾ ತಿಳಿದವನ ಹಾಗೆ, ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ಹಾಗೆ ಮಾತನಾಡುವ ಚಟ ಹತ್ತಿಸಿಕೊಂಡಿದ್ದೇನೆಯೋ ಎಂಬ ಆತಂಕ ಹುಟ್ಟಿಕೊಂಡಿತ್ತು. ನನ್ನ ಅಭಿಪ್ರಾಯ ಎಂದು ನಾನು ಹೇಳುವುದು ನಿಜಕ್ಕೂ ನನ್ನ ಅನಿಸಿಕೆಯೋ ಅಥವಾ ಇತರರು ಇದು ನನ್ನ ಅಭಿಪ್ರಾಯ  ಎಂದು ತಿಳಿದುಕೊಳ್ಳಲಿ ಎಂದು ಮುತುವರ್ಜಿಯಿಂದ ಫಾರ್ಮ್ ಮಾಡಿದ ಚಿಂತನೆಯೋ [...]


Blog Stats

  • 13,367 hits

 

November 2009
M T W T F S S
« Aug    
 1
2345678
9101112131415
16171819202122
23242526272829
30