Posted by: uniquesupri on: November 17, 2008
ಆತ ಬಲರಾಮ ಹಲವಾಯಿ ಭಾರತದ ಲಕ್ಷಾಂತರ ಕುಗ್ರಾಮಗಳಂತೆಯೇ ಇದ್ದ ಒಂದು ಗ್ರಾಮದಲ್ಲಿ ಹುಟ್ಟಿದವ. ಆತನ ತಂದೆ ತಾಯಿಗೆ ಆತನಿಗೊಂದು ಹೆಸರಿಡಬೇಕೆನ್ನುವ ಅರಿವೂ ಇರುವುದಿಲ್ಲ.ಆತನನ್ನು ಮುನ್ನಾ ಎಂದಷ್ಟೇ ಕರೆಯುತ್ತಿರುತ್ತಾರೆ. ಇಡೀ ಹಳ್ಳಿಯ ಒಡೆತನ ಜಮೀನುದಾರನ ಕೈಲಿರುತ್ತದಾದ್ದರಿಂದ ಆತನ ತಂದೆ ತಾಯಿಯಂತೆಯೇ ಅನೇಕರು ತಮ್ಮ ಬದುಕಿರುವುದು ಜಮೀನುದಾರರ ಸೇವೆ ಮಾಡುವುದಕ್ಕೆ ಎಂತಲೇ ಭಾವಿಸಿರುತ್ತಾರೆ. ಇಂಥ ಪರಿಸರದಲ್ಲಿ ಬೆಳೆದ ಬಲರಾಮ ಚೂಟಿ ಹುಡುಗ. ಶಾಲೆಗೆ ಬಂದ ಇನ್ಸ್‌ಪೆಕ್ಟರ್ ಈತನ ಬುದ್ಧಿಮತ್ತೆಯನ್ನು ಹೊಗಳುವಷ್ಟು ಚಾಲಾಕಿ.ಆದರೆ ತನ್ನ ತಂಗಿಯ ಮದುವೆಯನ್ನು ಮಾಡುವುದಕ್ಕಾಗಿ ಆತನ ಶಾಲೆಯನ್ನು [...]
Posted by: uniquesupri on: September 25, 2008
ಬ್ರಿಟೀಷರು ಬಳುವಳಿಯಾಗಿ ಬಿಟ್ಟುಕೊಟ್ಟು ಹೋದ ಭಾರತದ ಹಾಕಿ ತಂಡ ೧೯೨೮ ರಿಂದ ೧೯೫೬ರವರೆಗೆ ಅಕ್ಷರಶಃ ಇಡೀ ಜಗತ್ತನ್ನೇ ಆಳಿಬಿಟ್ಟಿತು. ಈ ಅವಧಿಯಲ್ಲಿ ಭಾಗವಹಿಸಿದ ಆರು ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಆರು ಚಿನ್ನದ ಪದಕ ಗಳಿಸಿಕೊಂಡಿತ್ತು. ಪಂದ್ಯಾವಳಿಯಲ್ಲಿ ಆಡಿದ ಇಪ್ಪತ್ನಾಲ್ಕು ಪಂದ್ಯಗಳಲ್ಲಿ ಇಪ್ಪತ್ನಾಲ್ಕನ್ನೂ ಗೆದ್ದು ಒಂದು ಪಂದ್ಯದಲ್ಲಿ ಸರಾಸರಿ ಏಳು ಗೋಲುಗಳ ಲೆಕ್ಕದಲ್ಲಿ ಸುಮಾರು ೧೭೮ ಗೋಲುಗಳನ್ನು ಗಳಿಸಿತ್ತು! ಎದುರಾಳಿಗಳಿಗೆ ಕೇವಲ ಏಳು ಗೋಲುಗಳನ್ನು ಗಳಿಸಲು ಮಾತ್ರ ಅವಕಾಶ ಕೊಟ್ಟಿತ್ತು! ಅನಂತರ ಟೊಕಿಯೋ ಹಾಗೂ ಮಾಸ್ಕೋದಲ್ಲಿ ನಡೆದ ಎರಡು ಒಲಿಪಿಂಕ್ಸಿನಲ್ಲಿ [...]
Recent Comments