Posted by: uniquesupri on: December 26, 2008
- ಅಜಿತ ಚಂದ್ರ.ಎಸ್, ಬೆಂಗಳೂರು
ನಮ್ಮ ಬದುಕಿನ ಪಯಣ ಎಲ್ಲಿಗೆ?….. ಪ್ರಶ್ನೆ ವಿಚಿತ್ರ ಎನಿಸಿದರೆ ಅದು ಸಹಜ. ಆದರೆ ಆತ್ಮಾವಲೋಕನೆಗೆ ಕುಳಿತರೆ ಎಲ್ಲರ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದೇ ಎಂಬುದು ನನ್ನ ನಂಬಿಕೆ.
ಬದುಕು ಸಾಗುವ ಬಗೆಗೆ ಕುಳಿತು ಯೋಚಿಸಿದಾಗ ಎಲ್ಲರ ಮನಸ್ಸನ್ನು ಹೊಕ್ಕುವ ಯೋಚನೆ- ನನ್ನ ಬದುಕಿನ ಗುರಿ ಯಾವುದು?? ಅದರೆಡೆಗಿನ ಹಾದಿ ಎಷ್ಟು ಹಸನಾಗಿದೆ?? ಬದುಕಿನ ಪಯಣದ ಹಾದಿಯಲ್ಲಿ ಬಂದ ಸಂತಸದ ಆ ಮನತುಂಬಿದ ಸವಿಘಳಿಗೆಗಳು, ಅವುಗಳ ಸಿಹಿ ನೆನಪುಗಳು……. ಅಲ್ಲಲ್ಲಿ ಮನಸ್ಸನ್ನು ಕಲಕುವ, ಮರೆಯಲೇ [...]
Posted by: uniquesupri on: December 23, 2008
- ‘ಯಶೋಧತನಯ’
ಓದುವುದಕ್ಕಾಗಿಯೋ, ಕೆಲಸ ಸಿಕ್ಕ ಕಾರಣಕ್ಕೋ ಮನೆಯಿಂದ ಹೊರಗೆ ಮನೆ ಮಾಡಲು ಹೊರಟಾಗ ಕಾಡುವ ಮನದ ವಿರಹಕ್ಕೆ, ಒಂದು ಜಾತಿಯ ಬಾಯಿತಿಗೆ ‘ಹೋಂ ಸಿಕ್‌ನೆಸ್’ ಅಂತ ಹೆಸರು. ಪ್ರತಿಯೊಬ್ಬರೂ ಬಾಳಿನ ಯಾವುದೋ ಘಟ್ಟದಲ್ಲಿ ಅನುಭವಿಸಬೇಕಾದ ತಹತಹವಿದು.
ಹುಟ್ಟಿದಾಗಿನಿಂದ ‘ಪರಾವಲಂಬಿ’ ಸಸ್ಯವನ್ನು ಮನದಲ್ಲಿ ಪೋಷಿಸುತ್ತಿರುವವರೇ ಎಲ್ಲರೂ. ಮಗುವಾಗಿದ್ದಾಗ ಆಹಾರದಿಂದ ಹಿಡಿದು ಎಲ್ಲ ಕೆಲಸಕ್ಕೂ ತಾಯಿಯ ಸಹಾಯಬೇಕು. ಬೆಳೆಯುತ್ತಾ ಹೋದಂತೆ ಸ್ವಲ್ಪ ಸ್ವಲ್ಪವಾಗಿ ತಮ್ಮ ಕೆಲಸ ತಾವೇ ಮಾಡುವಷ್ಟಕ್ಕೆ ಬಂದರೂ ಮಾನಸಿಕವಾಗಿ ಪರಿವಾರದೊಡನೆ ಅವಲಂಬಿತವಾಗಿರಲೇಬೇಕು. ತಾತ್ಕಾಲಿಕವಾಗಿ ಯಾವುದೇ ಕಾರಣಕ್ಕೆ ಮನೆ [...]
Posted by: uniquesupri on: December 23, 2008
- ಪಲ್ಲವಿ.ಎಸ್, ಧಾರವಾಡ
ಬೆಳ್ಳಂಬೆಳಿಗ್ಗೆ ಒಮ್ಮೊಮ್ಮೆ ಬಸ್‌ಸ್ಟ್ಯಾಂಡ್ ಕಡೆ ಸುಮ್ಮನೇ ಹೋಗುತ್ತೇನೆ.
ಚಳಿ ಅಲ್ಲೆಲ್ಲ ಮಡುಗಟ್ಟಿ ನಿಂತಿರುತ್ತದೆ. ಉಗಿಮಂಜಾಗಿ ತೇಲುತ್ತಿರುತ್ತದೆ. ಬಸ್‌ಸ್ಟ್ಯಾಂಡ್‌ನ ಸುತ್ತಮುತ್ತಲಿನ ಹೋಟೆಲುಗಳಲ್ಲಿ ನಿಜವಾದ ಬಿಸಿ ಉಗಿ ಚಹದ ಪಾತ್ರೆಯಿಂದ, ಇಡ್ಲಿ ಸ್ಟ್ಯಾಂಡ್‌ನಿಂದ, ಕಾಯ್ದ ಎಣ್ಣೆಯಿಂದ ಏಳುತ್ತಿರುತ್ತದೆ. ಇನ್ನೂ ಬಸ್ ಬಂದಿಲ್ಲ ಎಂದು ತಮ್ಮೊಳಗೇ ಪಿಸುಗುಟ್ಟುತ್ತ ಕೂತವರ ಬಾಯಿಂದಲೂ ಅದೇ ಬಿಸಿ ಉಗಿ.
ಅವರೆಲ್ಲ ಊರಿಗೆ ಹೊರಡಲು ಕಾಯ್ದವರು. ಮೊದಲ ಬಸ್ ಬಂದು ನಿಂತಿದೆಯಾದರೂ ಅದರೊಳಗೆ ಚಾಲಕನಿಲ್ಲ. ಕಂಡಕ್ಟರ್ ಜೊತೆಗೆ ಆತ ಅಲ್ಲೆಲ್ಲೋ ಚಹ ಕುಡಿಯುತ್ತಿರಬೇಕು. ತಣ್ಣಗಿರುವ [...]
Posted by: uniquesupri on: December 23, 2008
-ರಂಜಿತ್ ಅಡಿಗ, ಕುಂದಾಪುರ
ಕಿಟಕಿಯಾಚೆ ಜೋರಾಗಿ ’ಗಣಪತಿ ಬಪ್ಪಾ ಮೊರ್ಯಾ’ ಕೇಳುತ್ತಿದೆ. ಅಸಹನೆಯಿಂದ ಕಿಟಕಿ ಮುಚ್ಚಿ ಕೂತರೆ, ಈ ಸಲ ಗೆಳೆಯರ್ಯಾರೂ ಹಬ್ಬಕ್ಕೆ ಮನೆಗೆ ಕರೆಯದೇ ಹೋದರಾ ಎಂಬ ಆಲೋಚನೆ. ಇಂಟರ್ನೆಟ್ಟು ತೆಗೆದರೆ ಸಾಕು ’ಹ್ಯಾಪಿ ಗಣೇಶ ಚತುರ್ಥಿ’ಯದೇ ರಗಳೆ. ಚುರುಗುಟ್ಟುವ ಹೊಟ್ಟೆ, ಆಗಷ್ಟೇ ಖಾಲಿಯಾದ ಅಡುಗೆ ಮನೆಯ ಡಬ್ಬಿಯನ್ನು ನೆನಪಿಸುತ್ತದೆ. ದರ್ಶಿನಿಯ ಹುಡುಗರೂ ತಮ್ಮ ಗುಂಪುಗಳಲ್ಲೇ ಹಬ್ಬ ಆಚರಿಸುತ್ತಿದ್ದಾರೆ. ಪಾತ್ರೆ ತೊಳೆಯುವ ಚಿಣ್ಣ ಇವತ್ತು ಕಾಲು ತುರಿಸಿಕೊಳ್ಳುವಂತಿಲ್ಲ. ಬಚ್ಚಲು ಮನೆಯ ಚೌಕಟ್ಟಿನಿಂದ ಹೊರಗೆ ಇಣುಕುತವೆ ಇಂದವನ ಕಣ್ಣುಗಳು. [...]
Posted by: uniquesupri on: December 22, 2008
- ಅಂತರ್ಮುಖಿ
ನಮ್ಮ ಸಮಾಜದಲ್ಲಿ ನಾವಿಷ್ಟು ಗೌರವನ್ನು, ಪ್ರಾಮುಖ್ಯತೆಯನ್ನು ಕೊಡುತ್ತಿರುವ ಕುಟುಂಬ ವ್ಯವಸ್ಥೆ ಹುಟ್ಟಿಕೊಂಡಿದ್ದೇ ಸ್ವಾತಂತ್ರ್ಯದ, ಮುಕ್ತ ಅವಕಾಶದ ಬಯಕೆಯಿಂದಾಗಿ ಎನ್ನುತ್ತಾರೆ ಬುಡಕಟ್ಟುಗಳಲ್ಲಿ ಜೀವಿಸುತ್ತಿದ್ದ ಆದಿ ಮಾನವರ ಬದುಕನ್ನು ಅಧ್ಯಯನ ಮಾಡಿದವರು. ಒಂದು ಬುಡಕಟ್ಟಿನ ಪಂಗಡದಲ್ಲಿ ಒಬ್ಬ ಬಲಿಷ್ಠವಾದ ನಾಯಕನಿರುತ್ತಾನೆ. ಆತನೇ ಇಡೀ ಪಂಗಡದ ಆಗುಹೋಗುಗಳ ಮೇಲೆ ಹಕ್ಕುಳ್ಳವನಾಗಿರುತ್ತಾನೆ. ಆತನ ಸ್ಥಾನಮಾನ ಇಡೀ ಗುಂಪಿನಲ್ಲಿ ಶ್ರೇಷ್ಠವಾಗಿರುತ್ತದೆ. ಆ ಪಂಗಡದಲ್ಲಿನ ಸಮಸ್ತ ವೈಭೋಗ, ಸುಖ, ಸಂಪತ್ತು ಆತನ ಒಡೆತನದಲ್ಲಿರುತ್ತದೆ, ಗುಂಪಿನ ಎಲ್ಲಾ ಸುಂದರ ಹೆಣ್ಣುಗಳನ್ನು ಆತನೇ ಇಟ್ಟುಕೊಂಡಿರುತ್ತಾನೆ. ಆತನು ಬಳಸಿ [...]
Posted by: uniquesupri on: September 25, 2008
ಸ್ವಾತಂತ್ರ್ಯದೆಡೆಗೆ ಮನುಷ್ಯನ ತುಡಿತ ಅದೆಷ್ಟು ಅದಮ್ಯವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ತಮ್ಮದಲ್ಲದ ತಪ್ಪಿಗೆ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು, ದಾಸ್ಯದಲ್ಲಿ ದಿನಗಳನ್ನು ದೂಡುತ್ತಾ, ಪ್ರಾಣದ ಹಂಗನ್ನೂ ತೊರೆದು ಸ್ವಾತಂತ್ರ್ಯ ದಕ್ಕಿಸಿಕೊಳ್ಳುವುದಕ್ಕಾಗಿ ನಡೆಸಿದ ಹೋರಾಟದ ಕಥನವನ್ನು ಕೇಳಬೇಕು.
ಭಾರತದ ಸ್ವಾತಂತ್ರ್ಯ ಸಂಗ್ರಾಮವೆನ್ನುವುದೇ ಮೈನವಿರೇಳಿಸುವ ಅದ್ಭುತ ಕಥಾನಕ. ಒಬ್ಬ ಧಿಂಗ್ರಾ, ಒಬ್ಬ ಭಗತ್ ಸಿಂಗ್, ಒಬ್ಬ ಆಜಾದ್, ಒಬ್ಬ ಸಾವರ್ಕರ್, ಒಬ್ಬ ಬೋಸ್, ಒಬ್ಬ ಗಾಂಧಿಯ ಜೀವನಗಾಥೆಯನ್ನು ಓದುತ್ತಾ ಹೋದಂತೆ ಇಡೀ ಭಾರತದ ಜನಮಾನಸದಲ್ಲಿ ಸ್ವಾತಂತ್ರ್ಯದೆಡೆಗೆ ಇದ್ದ ಹಂಬಲದ ತೀವ್ರತೆಯನ್ನು ಅಂದಾಜಿಸಲು ಸಾಧ್ಯವಾಗುತ್ತದೆ.
ಇನ್ನೆರಡು ಮಹಾಪಲಾಯನದ [...]
Posted by: uniquesupri on: September 25, 2008
ಕಳೆದ ಆಗಸ್ಟ್ ಹದಿನೈದರಂದು ನಾವು ಭಾರತದ ಅರವತ್ತೊಂದನೆಯ ಸ್ವಾತಂತ್ರ್ಯೊತ್ಸವವನ್ನು ಆಚರಿಸಿದೆವು. ಇದೇ ತಿಂಗಳು ಅರವತ್ತೊಂದು ವರ್ಷಗಳ ಹಿಂದೆ ನಮ್ಮ ದೇಶ ಬ್ರಿಟೀಷ್ ರಾಜರ ಅಧೀನದಲ್ಲಿತ್ತು. ಕೇವಲ ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ನಾವು ನಮ್ಮದೇ ನಾಡಿನಲ್ಲಿ ಪರದೇಶಿಗಳಂತೆ ಬದುಕುತ್ತಿದ್ದೆವು. ನಮ್ಮದೇ ಮನೆಯಲ್ಲಿ ಅಪರಿಚಿತರ ಹಾಗೆ ಅಸಹಾಯಕರ ಹಾಗೆ ದಿನದೂಡುತ್ತಿದ್ದೆವು. ಆದರೆ ಕಡೆಗೂ ನಮಗೆ ನಾವು ಬದುಕಬೇಕಾದ್ದು ಹೀಗಲ್ಲ ಎಂದು ಮನದಟ್ಟಾಯಿತು. ನಮ್ಮ ಸುತ್ತಲೂ ಕಟ್ಟಿದ್ದ ಸೆರೆಮನೆಯ ಸಲಾಕೆಗಳನ್ನು ಮುರಿಯುವಷ್ಟರ ಮಟ್ಟಿಗೆ ನಮ್ಮೊಳಗೆ ಒಂದು ಹಂಬಲ ಹುಟ್ಟಿಕೊಂಡಿತು. ದೇಶದ [...]
Posted by: uniquesupri on: April 19, 2008
ಮಾರ್ಚ್ ೨೦೦೮ರ ಸಂಚಿಕೆಯ ಮುಖಪುಟವನ್ನು ಸ್ನೇಹದ ಬಗೆಗಿನ ಚರ್ಚೆಗೆ ಮೀಸಲಿರಿಸಲಾಗಿತ್ತು. ಗೆಳೆತನ ಹುಟ್ಟುವುದು ಕೇವಲ ಪರಸ್ಪರರಲ್ಲಿನ ಆವಶ್ಯಕತೆಗಾಗಿ ಎನ್ನುತ್ತಾರೆ ಬಾಲುಪ್ರಸಾದ್.ಆರ್.
ಸ್ನೇಹ ಅಂದರೇನು?
ಒಂದೇ ಮನೋಭಾವ, ಒಂದೇ ಆಸಕ್ತಿ-ನಿರಾಸಕ್ತಿ, ಒಂದೇ ಆಯ್ಕೆ-ವಿಮುಖತೆ- ಹೀಗೆ ಹಲವು ‘ಒಂದೇ’ಗಳನ್ನು ಹೊಂದಿರುವ ಇಬ್ಬರ ನಡುವಿನ ಸಂಬಂಧವಾ? ಹೌದು ಅಂತೀನಿ. ಸ್ನೇಹ ಅಂತಸ್ತು, ಗೌರವ, ಸ್ಥಾನಮಾನಗಳ ಹಾರೈಕೆಯಲ್ಲಿ ಬೆಳೆಯುತ್ತಾ? ಅದಕ್ಕೂ ಹೌದು ಅಂತೀನಿ. ಯಾಕಂದ್ರೆ, ಸ್ನೇಹ ಹುಟ್ಟುವುದು basically ಆವಶ್ಯಕತೆಗೆ. ನಮ್ಮ ಚಿಂತನೆಗೆ ಮನ್ನಣೆಯ ಆವಶ್ಯಕತೆ, ಸಂಕಷ್ಟಕ್ಕೆ ಸಾಂತ್ವನ, ಹಾಸ್ಯಕ್ಕೆ ನಗು, ಸಾಧನೆಗೆ ಮೆಚ್ಚುಗೆ, ಸಹಾಯಕ್ಕೆ [...]
Posted by: uniquesupri on: April 19, 2008
ಮಾರ್ಚ್ ೨೦೦೮ರ ಸಂಚಿಕೆಯ ಮುಖಪುಟವನ್ನು ಸ್ನೇಹದ ಬಗೆಗಿನ ಚರ್ಚೆಗೆ ಮೀಸಲಿರಿಸಲಾಗಿತ್ತು. ಗೆಳೆತನ ಎಂಬುದು ನೀಡ್‌ಶಿಪ್ ಅಲ್ಲ ಎನ್ನುತ್ತಾರೆ ಶ್ರೇಯಸ್.ಕೆ.ಎಂ.
What is a friend? I will tell you… It is someone with whom you dare to be yourself. -Frank Crane
ಸ್ನೇಹಿತರು ಎಂದರೆ ಯಾರು ಎನ್ನುವುದಕ್ಕೆ ಬಹುಶಃ ಇದಕ್ಕಿಂತ ಉತ್ತಮವಾದ ವಿವರಣೆ ಇರಲಿಕ್ಕಿಲ್ಲವೇನೋ. ನಾವು ಯಾರೊಂದಿಗಿರುವಾಗ ನಮ್ಮ ನೈಜತೆಯನ್ನು, ನಮ್ಮತನವನ್ನು ಕಳೆದುಕೊಳ್ಳುವುದಿಲ್ಲವೋ ಆ ವ್ಯಕ್ತಿಯನ್ನೇ ನಮ್ಮ ಸ್ನೇಹಿತ ಎಂದು ಕರೆಯಬಹುದು. ನಾವು [...]
Posted by: uniquesupri on: April 19, 2008
ಮಾರ್ಚ್ ೨೦೦೮ರ ಸಂಚಿಕೆಯ ಮುಖಪುಟವನ್ನು ಸ್ನೇಹದ ಬಗೆಗಿನ ಚರ್ಚೆಗೆ ಮೀಸಲಿರಿಸಲಾಗಿತ್ತು. ಸ್ನೇಹ ಎನ್ನುವುದು ನಮ್ಮ ಮನಸ್ಸಿನ ಸ್ಥಿತಿ, ಪ್ರತಿಕ್ರಿಯಿಸುವ ವಿಧಾನ ಎನ್ನುತ್ತಾರೆ ‘ಅಂತರ್ಮುಖಿ.’
ಜನಜಂಗುಳಿಯಿಂದ ತುಂಬಿದ ರೈಲಿನಲ್ಲಿ ನಮ್ಮ ಪಕ್ಕದಲ್ಲಿ ಕುಳಿತವನೊಬ್ಬ ತನ್ನ ಹೆಸರು ಹೇಳಿ, ನಮ್ಮ ಪರಿಚಯ ಕೇಳಿಕೊಂಡ ನಂತರ ನಮ್ಮಿಬ್ಬರ ನಡುವೆ ಒಂದು ಆಪ್ಯಾಯಮಾನವಾದ ಭಾವ ಸೃಷ್ಟಿಯಾಗುತ್ತದಲ್ಲಾ, ಥೇಟ್ ಅಂಥದ್ದೇ ಭಾವನೆಗೂ, ಎಲ್ಲೋ ಅಪರಿಚಿತ ಪ್ರದೇಶದಲ್ಲಿ ಅವಘಡ ಮಾಡಿಕೊಂಡಾಗ, ಜೀವವೇ ಹೊರಕ್ಕೆ ಬರುವಷ್ಟು ಭಯ ಆವರಿಸಿಕೊಂಡಾಗ ನಾವು ಕೂಡಲೇ ಅಪ್ಪನನ್ನು ನೆನೆದು ಹಪಹಪಿಸುವ ಆಸರೆಯಿದೆಯಲ್ಲಾ- ಇವೆರಡರ [...]
Recent Comments