ಕಲರವ

Archive for the ‘ಮಾತುಕತೆ’ Category

- ರಂಜಿತ್ ಅಡಿಗ, ಕುಂದಾಪುರ   adiga.ranjith@gmail.com

ಕುಂಟುತ್ತಾ ಕುಂಟುತ್ತಾ ಸಾಗುತ್ತಿದ್ದ ಸಡಗರ ಸಡನ್ನಾಗಿ ನಿಂತಿದ್ದು ಎಲ್ಲರಿಗೂ ತಿಳಿದ ವಿಚಾರ. ಮೊದಲು  ಸಡಗರ ಮುಚ್ಚಲಿದ್ದೇವೆಂದು ತಿಳಿಸಿದಾಗ ಸಂಪಾದಕರು ಏಪ್ರಿಲ್ ಫೂಲ್ ಮಾಡುತ್ತಿದ್ದಾರೇನೋ ಎಂಬ ಗುಮಾನಿ ಎಲ್ಲರಲೂ. ಪರಿಸ್ಥಿತಿಯ ಅರಿವಿದ್ದುದರಿಂದ ನಿಜ ಅನ್ನುವುದೂ ಮನ ಒಪ್ಪಲಾರದ ಸತ್ಯವಾಗಿತ್ತು. ಪತ್ರಿಕೆ ನಡೆಸಲು ಆಗುವ ಪ್ರಯಾಸಗಳಿಂದ ಹೇಗೋ ಸಾವರಿಸಿಕೊಂಡು ಮತ್ತೆ ಯಾವುದೋ ಒಂದು ದಿನ ’ ಅದು ಸುಮ್ಮನೆ ಏಪ್ರಿಲ್ [...]

ಇದು ಯುವ ಮನಸ್ಸಿನ ‘ಕಲರವ’!

Posted by: uniquesupri on: May 29, 2009

ಪ್ರತಿ ತಿಂಗಳು ‘ಸಡಗರ’ ಎಂಬ ಹೆಸರಿನಲ್ಲಿ ಮುದ್ದಾಗಿ ಮುದ್ರಣ ಕಂಡು ಹೊರ ಬರುತ್ತಿದ್ದ ನಮ್ಮ ನಾನಾ ಸಾಹಸ, ತುಂಟತನ, ಕ್ರಿಯೇಟಿವಿಟಿ, ತೆವಲುಗಳು ಇನ್ನು ಮುಂದೆ ಎಲೆಕ್ಟ್ರಾನ್ ಹರಿವಿನಲ್ಲಿ ಲೀನವಾಗಿ ಈ ಬ್ಲಾಗಿನಲ್ಲಿ ಬೆಳಕು ಕಾಣಲಿವೆ. ಜೂನ್ ಒಂದರಿಂದ ಪೂರ್ಣ ಪ್ರಮಾಣದಲ್ಲಿ ‘ಕಲರವ’ ಬ್ಲಾಗು ಅರಳಿಕೊಳ್ಳಲಿದೆ. ಎಂದೂ ತೀರದ ನಮ್ಮ ಅಕ್ಷರದ ಮೋಹಕ್ಕೆ ಈ ಬ್ಲಾಗು ಒಂದು ಸಣ್ಣ ಸಮಾಧಾನವನ್ನು ನೀಡುತ್ತದೆ ಎನ್ನುವುದು ನಮ್ಮ ನಂಬಿಕೆ.
ಈ ಯುವ ಮನಸುಗಳ ‘ಕಲರವ’ಕ್ಕೆ ಕಿವಿಗೊಡದಷ್ಟು ನಿಷ್ಕರುಣಿಗಳು ನೀವಲ್ಲ ಎಂಬುದೂ ನಮಗೆ ತಿಳಿದಿದೆ.
- [...]

ಕಡೆಯ ವಿದಾಯ

Posted by: uniquesupri on: March 31, 2009

‘ಇನ್ನು ಸಾಧ್ಯವಾಗುವುದಿಲ್ಲ’ ಎನ್ನುವ ಷರಾದೊಂದಿಗೆ ನಾನು ನನ್ನ ಮತ್ತೊಂದು ಹುಂಬತನವನ್ನು ಕೊನೆಗಾಣಿಸಬೇಕಿದೆ.
ಸುಮಾರು ಎರಡು ವರ್ಷಗಳಿಂದ ಕುಂಟುತ್ತಲೋ, ತೆವಳುತ್ತಲೋ ನಡೆಯುತ್ತಿದ್ದ ನಮ್ಮ ಪತ್ರಿಕೆಯನ್ನು ಅಧಿಕೃತವಾಗಿ ಮುಚ್ಚುವ ಸಮಯ ಬಂದಾಗಿದೆ. ಇಷ್ಟು ದಿನ ನಾನಾ ಕಷ್ಟಗಳು, ತಾಪತ್ರಯಗಳ ನಡುವೆ ಹೇಗೋ ‘ಸಡಗರ’ವನ್ನು ನಡೆಸಿಕೊಂಡು ಬರುತ್ತಿದ್ದೆವು. ಆದರೆ ಈಗ ನಾವು ಡೆಡ್ ಎಂಡ್ ತಲುಪಿದ್ದೇವೆ. ಎಲ್ಲಾ ವಿಧದಲ್ಲೂ ಹೈರಾಣಾಗಿದ್ದೇವೆ. ಆರ್ಥಿಕವಾಗಿ ಕುಗ್ಗಿಹೋಗಿದ್ದೇವೆ, ಉತ್ಸಾಹವೂ ಬತ್ತಿ ಹೋಗಿದೆ. ಈ ಸಂದರ್ಭದಲ್ಲಿ ನಮ್ಮ ಕನಸಿನ ಸಮಾಧಿಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸುವುದೊಂದೇ ಬಾಕಿ ಉಳಿದಿರುವುದು. ಈಗದನ್ನು [...]

‘ರಿಸೆಶನ್ ಬಿಸಿ ನಿಮಗೂ ತಟ್ಟಿತಾ’ ಎಂದು ಉಡಾಫೆ ಮಾಡಿದರು ಕೆಲವರು. ದೊಡ್ಡ ದೊಡ್ಡ ಕಂಪೆನಿಗಳೆಲ್ಲ ತಮ್ಮ ಉದ್ಯೋಗಿಗಳು ಕುಡಿಯುವ ನೀರು, ಬಳಸುವ ಟಿಶ್ಯು ಪೇಪರುಗಳಲ್ಲೆಲ್ಲಾ ಉಳಿತಾಯ ಮಾಡುತ್ತ ಈ ಕಷ್ಟದ ದಿನಗಳಲ್ಲಿ ಜೀವವನ್ನುಳಿಸಿಕೊಳ್ಳಲು ಹೋರಾಡುತ್ತಿರುವಾಗ ನಾವು ಪತ್ರಿಕೆಯ ಗಾತ್ರವನ್ನು ಅರ್ಧಕ್ಕಿಳಿಸಿದ್ದು ಅನೇಕರಲ್ಲಿ ಈ ಭಾವನೆ ಹುಟ್ಟಿಸಿದೆ. ನಿಜಕ್ಕೂ ಪತ್ರಿಕೆಯೊಂದರ ನಿರ್ವಹಣೆ ಎಷ್ಟು ಕಷ್ಟದ್ದು ಎಂಬುದರ ಅರಿವು ಈಗಾಗುತ್ತಿದ್ದೆ. ಎಲ್ಲವೂ ಸರಿಯಾಗಿ ನಡೆಯುತ್ತಿದ್ದಾಗ ಕೆಲಸಗಳು ಬೆಣ್ಣೆಯಿಂದ ಕೂದಲು ತೆಗೆದಷ್ಟು ಸಲೀಸಾಗಿ ನಡೆದುಹೋಗುತ್ತವೆ. ಆದರೆ ಒಂದೊಂದೇ ಲೋಪ, ಅನನಕೂಲ ಎದುರಾದ [...]

ಅಕ್ಟೋಬರ್ ತಿಂಗಳ ‘ಸಡಗರ’ ಪತ್ರಿಕೆಯ ತಯಾರಿಯಲ್ಲಿ ಮುಳುಗಿಹೋಗಿದ್ದೇನೆ. ಪತ್ರಿಕೆಯು ಸರಿಯಾದ ಸಮಯಕ್ಕೆ ಪ್ರಕಟವಾಗುವುದಿಲ್ಲ ಎಂಬುದು ನಮ್ಮ ಮೇಲಿರುವ ಆರೋಪಗಳಲ್ಲಿ ಬಹಳ ಪ್ರಮುಖವಾದದ್ದು. ಈ  ಆರೋಪ ಕೇಳಿಬರದ ಹಾಗೆ ನಾವು ಕೆಲಸ ಮಾಡಬೇಕು ಎಂಬುದು ಒಂದು ಬಗೆಯ ಚಿಂತನೆಯಾದರೂ, ಪತ್ರಿಕೆಯು ಸಮಯಕ್ಕೆ ಸರಿಯಾಗಿ ಬರದದ್ದನ್ನು ಕಂಡು ಬೇಸರಗೊಳ್ಳುವ, ಅದರ ದಾರಿ ಕಾಯುತ್ತಾ ಗೊಣಗುವವರ ಸಂಖ್ಯೆ ಇಷ್ಟು ದೊಡ್ಡದಿದೆಯಲ್ಲ ಎಂದು ಸಂತೋಷ ಪಡುವುದು ನಮಗೆ ಇಷ್ಟವಾದದ್ದು. ಹಾಗಂತ ನಾವು ಸಂಪೂರ್ಣ ಬೇಜವಾಬ್ದಾರಿಯ ದಾರಿ ಹಿಡಿಯುತ್ತೇವೆ ಎಂದುಕೊಳ್ಳಬೇಡಿ. ನಮ್ಮ ಮಿತಿಯಲ್ಲೇ ಸಾಧ್ಯವಾದಷ್ಟು [...]

ಕನ್ನಡದ ಬ್ಲಾಗುಗಳ ಆಗುಹೋಗುಗಳ ಮೇಲೊಂದು ಕಣ್ಣನ್ನಿಟ್ಟು ಅಲ್ಲಿನ ಸತ್ವಯುತವಾದ ಸಂಗತಿಗಳೆಡೆಗೆ ತಮ್ಮ ಪತ್ರಿಕೆಯ ಓದುಗರನ್ನು ಸೆಳೆಯುವ, ಹೊಸತನ್ನು ಪರಿಚಯಿಸುವ ಸಹೃದಯತೆಯಿರುವ ಕನ್ನಡಪ್ರಭದ ‘ಸಾಪ್ತಾಹಿಕ ಪುರವಣಿ’ಯ ಸಂಪಾದಕರು ಜೋಗಿ.
ನಮ್ಮ ಪತ್ರಿಕೆಯ ಬ್ಲಾಗನ್ನು ಪರಿಚಯಿಸಿ ‘ಇಲ್ಲಿಗೀ ಕಥೆ ಮುಗಿಯಿತು’ ಲೇಖನವನ್ನು ಕಳೆದ ರವಿವಾರದ (೧೯-೧೦-೨೦೦೮) ಸಾಪ್ತಾಹಿಕ ಪುರವಣಿಯನ್ನು ಪ್ರಕಟಿಸಿದ್ದಾರೆ. ನಮ್ಮ ಬೆನ್ನು ತಟ್ಟಿದ್ದಾರೆ. ನಮ್ಮ ಹುಮ್ಮಸ್ಸಿನ, ಹುಂಬತನದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಆ ಮೂಲಕ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಅವರಿಗೆ ಹಾಗೂ ಕನ್ನಡಪ್ರಭ ಪತ್ರಿಕೆಗ ನಮ್ಮ ಬಳಗದ ಕೃತಜ್ಞತೆಗಳು…
ಕನ್ನಡಪ್ರಭದಲ್ಲಿನ ಸಾಪ್ತಾಹಿಕ ಪುರವಣಿಯ [...]

ಆಗಸ್ಟ್ ಸಂಚಿಕೆಯ ಪಿಡಿಎಫ್

Posted by: uniquesupri on: October 10, 2008

ಆಗಸ್ಟ್ ಹಾಗೂ ಸೆಪ್ಟೆಂಬರ್ ಎರಡೂ ತಿಂಗಳಿಗೆ ಸೇರಿ ಎಂಬಂತೆ ಒಂದೇ ಸಂಚಿಕೆಯನ್ನು ಮಾಡಿದ್ದಕ್ಕಾಗಿ ನಾವು ಅನೇಕರಿಂದ ಆಕ್ಷೇಪಣೆಗಳನ್ನು ಎದುರಿಸಬೇಕಾಯ್ತು. ಆದರೆ ಪರಿಸ್ಥಿತಿಗಳ ಅನಿವಾರ್ಯತೆಯಲ್ಲಿ ನಾವು ಅಸಹಯಾಕರಾಗಿದ್ದೇವೆ ಎಂದು ತಿಳಿಸಲೇಬೇಕು. ಬ್ಲಾಗುಗಳಲ್ಲಿ ಚಿಟಿಕೆ ಹೊಡೆಯುವಷ್ಟರಲ್ಲಿ ಲೇಖನಗಳನ್ನು ಪ್ರಕಟಿಸಿಬಿಡಬಹುದು. ಆದರೆ ಪತ್ರಿಕೆಯನ್ನು ಮುದ್ರಿಸಿ ಅದನ್ನು ಓದುಗರಿಗೆ ತಲುಪಿಸುವ ಕೆಲಸ ತ್ರಾಸದ್ದು. ಮೇಲಾಗಿ ಈ ಪೋಸ್ಟ್ ಆಫೀಸು, ಪ್ರೆಸ್ಸುಗಳೆಲ್ಲಾ ನಮ್ಮ ಕಾಲೇಜು ಸಮಯ ಮುಗಿಯುವುದನ್ನೇ ಕಾಯುತ್ತಿರುವಂತೆ ಮುಂಚಿಕೊಂಡು ಬಿಡುತ್ತವೆ. ನಾವು ನಾನಾ ತರಹದ ಸಾಹಸಗಳನ್ನು ಮಾಡುತ್ತಾ ಪ್ರತಿ ತಿಂಗಳ ಪತ್ರಿಕೆಯ ಕೆಲಸವನ್ನು [...]

ಆಗಸ್ಟ್ ಸಂಚಿಕೆಯ ಮುಖಪುಟ

Posted by: uniquesupri on: August 29, 2008

ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?

‘ಹೆಣ್ಣು ಮಗಳೊಬ್ಬಳು ಭಾರತದ ರಸ್ತೆಗಳ ಮೇಲೆ ಮಧ್ಯರಾತ್ರಿಯಲ್ಲಿ ನಿರ್ಭಯವಾಗಿ ಓಡಾಡುವಂತಾದಾಗಲೇ ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ’ ಎಂದರು ಮಹಾತ್ಮಾ ಗಾಂಧಿ.
ನಮ್ಮ ದೇಶದ, ಸಮಾಜದ ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ ನಾವು ‘ಸಿಕ್ಕಿತು, ಸಿಕ್ಕಿತು’ ಎಂದು ಸಂಭ್ರಮಿಸುತ್ತಿರುವ ಸ್ವಾತಂತ್ರ್ಯವಾದರೂ ಎಂಥದ್ದು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲೇ ಬೇಕಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅಷ್ಟು ಹೋರಾಡಿದ ಮಹಾತ್ಮರು ಬಯಸಿದ್ದ ಸ್ವಾತಂತ್ರ್ಯ ಯಾವ ಬಗೆಯದ್ದು, ನಾವು ಪಡೆದಿರುವ ಸ್ವಾತಂತ್ರ್ಯ ಎಂಥದ್ದು?
ಸ್ವಾತಂತ್ರ್ಯವೆಂದರೆ ಅದು ಸ್ವೇಚ್ಛೆಯಾ? ಏನನ್ನು ಬೇಕಾದರೂ [...]

ಆಗಸ್ಟ್ ಸಂಚಿಕೆಯ ತಯಾರಿ

Posted by: uniquesupri on: August 12, 2008

ಆಗಸ್ಟ್ ಸಂಚಿಕೆಯ ತಯಾರಿ
ಜುಲೈ ಸಂಚಿಕೆಯನ್ನು ಮುಗಿಸಿ ಕೊಂಚ ದಣಿವಾರಿಸಿಕೊಂಡು ಆಗಸ್ಟ್ ತಿಂಗಳ ಸಂಚಿಕೆಯ ತಯಾರಿಗೆ ಕೈ ಹಾಕಿದ್ದೇವೆ. ಆಗಸ್ಟ್ ಸಂಚಿಕೆಯ ಮುಖಪುಟದ ವಿಷಯ ‘ಸ್ವಾತಂತ್ರ್ಯ’. ಸ್ವಾತಂತ್ರ್ಯ ಎಂದರೇನು? ೧೯೪೭ ಆಗಸ್ಟ್ ಹದಿನೈದರಂದು ನಾವು ಪಡೆದದ್ದು ಯಾವ ಬಗೆಯ ಸ್ವಾತಂತ್ರ್ಯ? ಇದನ್ನೇನಾ ನಮ್ಮ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು ಆಶಿಸಿದ್ದು. ಈ ಸ್ವಾತಂತ್ರ್ಯಕ್ಕೇನಾ ನಮ್ಮ ದೇಶದ ಲಕ್ಷಾಂತರ ಮಂದಿ ಯುವಕ-ಯುವತಿಯರು ಪ್ರಾಣ ತೆತ್ತಿದ್ದು? ನಾವು ನಿಜಕ್ಕೂ ಈಗ ಸ್ವತಂತ್ರರೇ? ನಿಜವಾದ ಸ್ವಾತಂತ್ರ್ಯವೆಂದರೆ ಹೇಗಿರಬೇಕು? ಸ್ವತಂತ್ರ ಭಾರತದಲ್ಲಿ ಪ್ರಜೆಗಳ ಚೇತನ, ಆತ್ಮಶಕ್ತಿ [...]

ಕೊಂಚ ತಡವಾದರೂ ಜುಲೈ ತಿಂಗಳ ಪತ್ರಿಕೆಯನ್ನು ರೆಡಿ ಮಾಡಿ ಆಗಿದೆ. ಇದು ನಮ್ಮ ಪ್ರತಿ ತಿಂಗಳ ದಿಗ್ವಿಜಯ! ಈ ತಿಂಗಳ ಸಂಚಿಕೆಯ ಪಿಡಿಎಫ್ ಪ್ರತಿಗಾಗಿ ಇಲ್ಲಿ ಚಿಟುಕಿಸಿ.


Blog Stats

  • 13,591 hits

 

December 2009
M T W T F S S
« Aug    
 123456
78910111213
14151617181920
21222324252627
28293031