Posted by: uniquesupri on: May 14, 2009
- ಅಂತರ್ಮುಖಿ
ದೇವರೆಂಬ ವ್ಯಕ್ತಿ ಮನುಷ್ಯ ಹಾರಿ ಬಿಡುವ ರಾಕೆಟುಗಳು ತಾಕದಷ್ಟು , ಆತನ ಉಪಗ್ರಹಗಳು ಸಂಕೇತಗಳನ್ನು ಗ್ರಹಿಸಲು ಸಾಧ್ಯವಾಗದಷ್ಟು, ಅತಿ ಸೂಕ್ಷ್ಮ ಕೆಮರಾ ಕಣ್ಣಿಗೆ ಬೀಳದಷ್ಟು, ಆತನೆಂದಾದರೊಂದು ದಿನ ತಲುಪಲು ಅಸಾಧ್ಯವಾದ ದೂರದಲ್ಲಿ ಇರುವುದು ನಿಜವೇ ಆದರೆ ಆತ ನಾನು ಆತನ ವಿಷಯವಾಗಿ ತಲೆ ಕೆಡಿಸಿಕೊಂಡು ನಂಬಿಕೆ ಅಪನಂಬಿಕೆಗಳ ಒಳಸುಳಿಗಳಲ್ಲಿ ಸಿಕ್ಕಿಕೊಂಡು, ವಾದ-ವಿವಾದ, ಸಾಕ್ಷ್ಯಾಧಾರಗಳ ಗೋಜಲಿನಲ್ಲಿ ಕಾಲು ಸಿಗಿಸಿಕೊಂಡು ನರಳಾಡಿದ್ದನ್ನು ಕಂಡು ನಸುನಗುತ್ತಿರಬಹುದು. ಆತನ ಹೆಸರಿನಲ್ಲಿ ನಾನು ರಾತ್ರಿಗಳ ನಿದ್ದೆಗಳನ್ನು ಕಳೆದುಕೊಂಡಿದ್ದು, ಕೆನ್ನೆಯ ಮುಖಾಂತರ ಹರಿದ ಕಂಬನಿಯನ್ನು [...]
Posted by: uniquesupri on: December 25, 2008
- ‘ಅಂತರ್ಮುಖಿ’
ಹೈಸ್ಕೂಲು ದಿನಗಳಿಂದಲೂ ಪತ್ರಕರ್ತರ ಬಗ್ಗೆ ನನಗೆ ವಿಲಕ್ಷಣವಾದ ಕುತೂಹಲ ಬೆಳೆದಿತ್ತು. ಯಾವ ಹಾಲಿವುಡ್ ಹೀರೋನ ಸಾಹಸಗಳಿಗೂ ಕಡಿಮೆಯಿರದ ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಚಿತ್ರ ವಿಚಿತ್ರ ಸಾಧನೆಗಳು, ಮೈಲುಗಲ್ಲುಗಳು ಹಾಗೂ ರೋಮಾಂಚನಕಾರಿ ಸಾಹಸಗಳು, ಅವುಗಳಷ್ಟೇ ಥ್ರಿಲ್ಲಿಂಗಾಗಿರುತ್ತಿದ್ದ ಅವರ ಬರವಣಿಗೆ ಪತ್ರಕರ್ತ ಎಂದರೆ ಸಿನೆಮಾದಲ್ಲಿ ಅಕರಾಳ-ವಿಕಾರಾಳವಾಗಿ ಮುಖಭಾವ ಪ್ರಕಟಿಸುತ್ತಾ ಆಕ್ರಮಣ ಮಾಡುವ ಹತ್ತಾರು ಮಂದಿ ದಾಂಢಿಗರಿಗೆ ಒದೆ ಕೊಟ್ಟು ಗರಿ ಮುರಿಯದ ಶರ್ಟನ್ನೊಮ್ಮೆ ಕೊಡವಿ ನಿಂತು ಕೈ ಬೀಸುವ ಸಣಕಲ ಹೀರೋನ ಹಾಗೆ ಎಂಬ ಭ್ರಮೆಯನ್ನು [...]
Posted by: uniquesupri on: April 24, 2008
ನಿನ್ನೆಯ ನೆನಪು ನಮ್ಮ ನಾಳೆಗೆ ಬದುಕಿನ ಹಾದಿಗೆ ಬೆಳಕಾಗಲೇ ಬೇಕಂತೇನೂ ಇಲ್ಲ. ಆದರೆ ನೆನಪುಗಳನ್ನು ಮೆಲಕು ಹಾಕುವುದರಲ್ಲಿಯೇ ಎಂಥದ್ದೋ ಒಂದು ಬಗೆಯ ಸಂತೃಪ್ತಿಯಿದೆ. ಸಮಾಧಾನವಿದೆ. ಪುಳಕವಿದೆ. ಕಳೆದ ದಿನಗಳ ನೆನಪಿನ ಹಂಗಿನಲ್ಲಿ ಮೆಲುವಾಗಿ ನರಳುವ ಅಂಕಣ ‘ಬೀಥೆ ಹುಯೆ ದಿನ್…’. ತಮ್ಮ ಬರವಣಿಗೆಯ ಪ್ರಾರಂಭವನ್ನು ನಯವಾಗಿ ನೇವರಿಸುತ್ತಾ ಅರ್ಧಕ್ಕೆ ನಿಲ್ಲಿಸಿದ ಕಥೆಗಳ ನೆನಪನ್ನು ಮೆಲುಕು ಹಾಕಿದ್ದಾರೆ ‘ಅಂತರ್ಮುಖಿ.’
ಬರವಣಿಗೆಯ ಗೀಳು ನನಗೆ ಹತ್ತನೆಯ ಎಂಟನೆಯ ತರಗತಿಯ ಆಸುಪಾಸಿನಲ್ಲೇ ಹತ್ತಿಕೊಂಡಿತ್ತಾದರೂ ಹತ್ತನೆಯ ತರಗತಿಗೆ ಕಾಲಿಡುವಷ್ಟರಲ್ಲಿ ಅದು ಜ್ವರದಂತೆ ಏರಿತ್ತು. [...]
Posted by: uniquesupri on: February 25, 2008
ನಿನ್ನೆಯ ನೆನಪು ನಮ್ಮ ನಾಳೆಗೆ ಬದುಕಿನ ಹಾದಿಗೆ ಬೆಳಕಾಗಲೇ ಬೇಕಂತೇನೂ ಇಲ್ಲ. ಆದರೆ ನೆನಪುಗಳನ್ನು ಮೆಲಕು ಹಾಕುವುದರಲ್ಲಿಯೇ ಎಂಥದ್ದೋ ಒಂದು ಬಗೆಯ ಸಂತೃಪ್ತಿಯಿದೆ. ಸಮಾಧಾನವಿದೆ. ಪುಳಕವಿದೆ. ಕಳೆದ ದಿನಗಳ ನೆನಪಿನ ಹಂಗಿನಲ್ಲಿ ಮೆಲುವಾಗಿ ನರಳುವ ಅಂಕಣ ‘ಬೀಥೆ ಹುಯೆ ದಿನ್…’. ಈ ಸಂಚಿಕೆಯ ಅಂಕಣದಲ್ಲಿ ‘ಅಂತರ್ಮುಖಿ’ ತಮ್ಮ ಬೈಕ್ ಕಲಿಕೆಯ ರಸವತ್ತಾದ ಅನುಭವವನ್ನು ಅಕ್ಷರಗಳಲ್ಲಿ ಕಡೆದಿರಿಸಿದ್ದಾರೆ.
ಬೈಕು ಓಡಿಸುವುದು ತುಂಬಾ ಸುಲಭ ಅಂದುಕೊಂಡಿದ್ದೆ. ಪ್ರೈಮರಿ ಸ್ಲೂಲಿನಲ್ಲಿರುವಾಗಲೇ ಸೈಕಲ್ ಹೊಡೆಯುವುದನ್ನು ಕಲಿತುಕೊಂಡಿದ್ದೆ. ಅನಂತರ ಹೈಸ್ಕೂಲ್ ಮೆಟ್ಟಿಲು ಏರುತ್ತಿದ್ದಂತೆಯೇ ಗೇರ್ ಇಲ್ಲದ, [...]
Recent Comments