Posted by: uniquesupri on: June 2, 2009
-ಬಾಲು ಪ್ರಸಾದ್.ಆರ್, ಬೆಂಗಳೂರು balamanis999@gmail.com
ಗಿರೀಶ ಭೀಮಾಪುರದ ಸಂತ ಬಸಂತ ಆಂಗ್ಲ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದನು. ಅಪ್ಪ ಸೋಮಣ್ಣ ಸರ್ಕಾರಿ ಉದ್ಯೋಗಿ. ಜೀವನೋಪಾಯಕ್ಕೆ ಚಿಂತೆಯಿಲ್ಲ. ಅಮ್ಮ ಸರೋಜಳಿಗೆ ಮನೆಯ ಕೆಲಸಕ್ಕೆ ನೆರವಾಗುವವಳು, ಕೆಲಸದಾಕೆ ಲಚ್ಚಿ.
ಲಚ್ಚಿ, ಮೂಲತಃ ಲಂಬಾಣಿ ಹುಡುಗಿ. ಬದಲಾದ ಕಾಲಕ್ಕೆ ಹೊಂದಿಕೊಂಡದ್ದರಿಂದ ಆಕೆಯನ್ನು ನೋಡಿದವರ್ಯಾರೂ ಲಂಬಾಣಿ ಎಂದು ಗುರುತಿಸುತ್ತಿರಲಿಲ್ಲ. ವಯಸ್ಸು ೧೩-೧೪ ಇದ್ದಿರಬಹುದು. ಗಿರೀಶನಿಗಿಂತ ಒಂದೆರಡು ವರ್ಷ ದೊಡ್ಡವಳು. ಅಪರೂಪಕ್ಕೊಮ್ಮೆ [...]
Posted by: uniquesupri on: May 27, 2009
ರಂಜಿತ್ ಅಡಿಗ, ಕುಂದಾಪುರ
ಬದುಕಿನಲ್ಲಿ ಸದಾ ನೆಗೆಟಿವ್ ಆಗಿ ಯೋಚಿಸುವವರನ್ನು, ಪದೇ ಪದೇ ಸೋಲುವವರನ್ನು ಜಗತ್ತು ಹೀನಾಯವಾಗಿ ನೋಡುತ್ತದೆ. ಅವರು ದೂರ ಬರುವುದು ಕಾಣುತ್ತಲೇ ಜನರಿಗೆ ‘ಅರ್ಜೆಂಟು ಕೆಲಸ’ಗಳು ನೆನಪಾಗುತ್ತವೆ. ಬೇಗ ಎರಡೂ ಕಾಲಿಗೆ ಚೆನ್ನಾಗಿ ಬುದ್ಧಿ ಹೇಳಲು ಕಾರಣಗಳು ಸಿಕ್ಕುತ್ತವೆ.
ಆದರೆ ಸದಾ ನಗೆ ಬೀರುವ, ಗೆಲ್ಲುತಲಿರುವ ವ್ಯಕ್ತಿಗೆ ಅಂಥ ಟ್ರೀಟ್ ಮೆಂಟ್ ಸಿಗುವುದಿಲ್ಲ. ಅಂಥವರನ್ನು ನೋಡಲು ಕಾಯುತ್ತಿರುತ್ತಾರೆ. ಅವರ ಜೊತೆಗೆ ಮತ್ತಷ್ಟು ಹೊತ್ತು ನಿಲ್ಲಲು ತವಕಿಸುತ್ತಿರುತ್ತಾರೆ. ಅರ್ಜೆಂಟು ಕೆಲಸಗಳೆಲ್ಲ ಪಕ್ಕಕ್ಕೆ ನಿಂತು ಯಶಸ್ವಿ ವ್ಯಕ್ತಿಗೆ [...]
Posted by: uniquesupri on: May 17, 2009
- ನವಿತಾ.ಎಸ್, ಸಾಗರ
ಈ ಸಂಜೆಯ ಬಾನಲ್ಲಿ ಇನ್ನೂ ಚುಕ್ಕಿಗಳು ಬಹಳ ಮೂಡಿಲ್ಲ. ಆದರೆ ಪ್ರೀತಿಯ ಚುಕ್ಕಿಗಳು ಅಲ್ಲಲ್ಲಿ ಜಗದ ಮನಸುಗಳಲ್ಲಿ ಮೂಡುತ್ತಿವೆ. ಜಗದ ಅಚ್ಚರಿಗೆ ಕಾರಣವೇ ಈ ಪ್ರೀತಿ. ಈ ಜಗತ್ತು ಒಂದಲ್ಲ ಒಂದು ದಿನ ನಿರ್ಮಲ ಪ್ರೇಮವನ್ನು ಪರಿಗಣಿಸಲಿದೆ. ಈ ಪ್ರೀತಿಯಲ್ಲಿ ಅದೆಂತಹ ಸೆಳೆತಗಳು, ಎಷ್ಟೋಂದು ನೋಟಗಳು! ಈ ಜಗದ ನಿಯಮಕ್ಕೆ ಮೂಲ ಕಾರಣವೇ ಪ್ರೀತಿ. ಪ್ರತಿ ಗಾಳಿಯ ಸ್ಪರ್ಶಕ್ಕೂ ಮರಗಳು ತೂಗುವುದಿಲ್ಲವೇ? ಪ್ರತಿ ಗುಟುಕಿಗೂ ಪಕ್ಷಿಗಳು ಹಪಹಪಿಸುವುದಿಲ್ಲವೇ? ಇದೆಲ್ಲವೂ ಪ್ರೀತಿಗಾಗಿ.
ಪ್ರಕೃತಿಯಲ್ಲೂ, ನಮ್ಮಲ್ಲೂ [...]
Posted by: uniquesupri on: May 16, 2009
- ಶ್ರೀಕಾಂತ್.ಎನ್.ಎಸ್, ಬೆಂಗಳೂರು
ನಮ್ಮ ನಡುವಿನ, ಈಗಿನ ಹೆಣ್ಣು ಮಕ್ಕಳ ನೆನೆದರೆ ಕಣ್ಣ ಮುಂದೆ ಬರುವುದು ಜೀನ್ಸು, ಹೈ ಹೀಲ್ಸು, ಬಳುಕುವ ನಡಿಗೆ. ಇದೆಲ್ಲದರ ಸಂಗಮವೇ, ಹುಡುಗರ ಹರಿದಿರೋ ಜೇಬು! ಒಬ್ಬ ಹುಡುಗಿ ಬಂದು ತನ್ನನ್ನು ಮಾತಾಡಿಸುತ್ತಿದ್ದಂತೆಯೇ ಹುಡುಗರಿಗೆ ಎಲ್ಲಿಲ್ಲದ ರೋಮಾಂಚನ, ಆನಂದ. ತಮ್ಮದೇ ಆದ ಲೋಕಕ್ಕೆ ಹೋಗಿಬಿಡುತ್ತಾರೆ. ಅದೇ ಗುಂಗಿನಲ್ಲಿ ಒಂದಿಷ್ಟು ಪ್ರೇಮಕಥೆಗಳು ಅವರ ಮನಸ್ಸಿನಲ್ಲಿ ಹಾದುಹೋಗುತ್ತವೆ. ಹೀಗೆ ಪ್ರೀತಿ ಅಪ್ಪಳಿಸಿದ ನಾವೆಯಾಗಿ ಅವರು ತಮ್ಮ ಸ್ವಂತಿಕೆಯನ್ನು ಮರೆಯುತ್ತಾ ಅವನತಿಯ ಹಾದಿಯನ್ನು ಹಿಡಿಯುತ್ತಾರೆ. ಇಷ್ಟೆಲ್ಲಾ ಪ್ರೀತಿ ತುಂಬಿದ [...]
Posted by: uniquesupri on: May 6, 2009
- ಬಾಲು ಪ್ರಸಾದ್.ಆರ್, ಬೆಂಗಳೂರು
ರವಿಬೆಳಗೆರೆಯವರ ಪ್ರಾರ್ಥನಾ ಶಾಲೆಯ ಯಾವುದಾದರೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕಳೆದೆರಡು ವರ್ಷಗಳಿಂದ ಅಂದುಕೊಳ್ಳೂತ್ತಿದ್ದೆ, ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಶಾಲೆಯ ಶಿಶಿರ ಸಂಭ್ರಮಕ್ಕೆ ತಪ್ಪದೇ ಹಾಜರಿದ್ದೆ. ಕಾರಣ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದವರು ಅಮರ ಯೋಧ ಸಂದೀಪ್ ಉನ್ನಿಕೃಷ್ಣನ್‌ರ ತಂದೆ ಉನ್ನಿಕೃಷ್ಣನ್ ಮತ್ತು ತಾಯಿ ಧನಲಕ್ಷ್ಮಿ. ಆ ಪುಣ್ಯವಂತರನ್ನು ನೋಡಿ, ಅವರ ಮಾತುಗಳನ್ನು ಆಲಿಸಿ ಧನ್ಯನಾಗಲು ಹೋಗಿದ್ದೆ.
“ಭಾವೋದ್ವೇಗಕ್ಕೆ ಒಳಗಾಗಬಾರದು ಅಂತ ನನ್ನ ಹೆಂಡತಿ ಮಾತು ತೊಗೊಂಡಿದ್ದಾಳೆ” – ಎಂದು ಮಾತು ಆರಂಭಿಸಿದ ಉನ್ನಿಕೃಷ್ಣನ್‌ರ ಧ್ವನಿ [...]
Posted by: uniquesupri on: November 21, 2008
He was all in his tears. A man who had demonstrated tremendous character in grilling times on court and conquered the world with a tennis racquet in hand was crying like a child who’s forcefully taken away from his mother. Yes it was Pete Samprass, the snapshots are still fresh in our memory when he [...]
Posted by: uniquesupri on: November 19, 2008
ಓಶೋ ರಜನೀಶ್ ಜಗತ್ತು ಕಂಡ ಅತ್ಯಂತ ವಿವಾದಾಸ್ಪದ ವ್ಯಕ್ತಿ. ಮಧ್ಯಪ್ರದೇಶದ ಜೈನ ಕುಟುಂಬವೊಂದರಲ್ಲಿ ಹುಟ್ಟಿದ ರಜನೀಶ್ ಬಾಲ್ಯದಿಂದಲೇ ಸ್ವತಂತ್ರ ಚಿಂತನೆಯೆಡೆಗೆ ಒಲವು ಹೊಂದಿದ್ದ. ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ತನಗೆ ಜ್ಞಾನೋದಯವಾಯಿತು ಎಂದು ಹೇಳಿಕೊಳ್ಳುವ ಈತ ಜಗತ್ತಿನ ಎಲ್ಲಾ ಧರ್ಮಗಳ ಬಗ್ಗೆ ಅತ್ಯಂತ ವಸ್ತುನಿಷ್ಠವಾದ, ಹಿಂದೆ ಯಾರೂ ಹೇಳಿರದಿದ್ದ ಸಂಗತಿಗಳನ್ನು ಹೇಳಿದ. ನಂಬಿಕೆಗಳನ್ನು ಬಿತ್ತುವ, ಆ ಮೂಲಕ ಸ್ವತಂತ್ರ ಚಿಂತನೆಯನ್ನು ನಾಶ ಮಾಡುವ ಎಲ್ಲಾ ವ್ಯವಸ್ಥೆಗಳನ್ನೂ ಖಂಡಿಸಿದ. ಮನುಷ್ಯ ತತ್‌ಕ್ಷಣಕ್ಕೆ ಮಾತ್ರ ಸ್ಪಂದಿಸಬೇಕು. ಯಾವ ಪೂರ್ವಾಗ್ರಹವಿಲ್ಲದೆ, ಭವಿಷ್ಯತ್ತಿನ [...]
Posted by: uniquesupri on: November 12, 2008
‘ಮನುಷ್ಯನು ಬೇರೆಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠ…’ ಇದನ್ನು ಹೇಳಿದವರಾರು? ‘ಮಾನವ ಜನ್ಮ ಬಹು ದೊಡ್ಡದು…’ ಹೀಗಂತ ಹೇಳಿದ್ದು ಯಾರು? ಎಲ್ಲವನ್ನೂ ಹೇಳಿಕೊಂಡಿರುವುದು ಮನುಷ್ಯರಾದ ನಾವೇ! ಹೀಗೇ ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ತನ್ನನ್ನೇ ಸರ್ವಶ್ರೇಷ್ಠ, ಎಲ್ಲಕ್ಕೂ ತಾನೇ ಆದಿ ಅಂತ್ಯ ಹೀಗೆಲ್ಲಾ ಕಲ್ಪಿಸಿಕೊಳ್ಳುತ್ತಾನೆ. ಆದರೆ ಇವೆಲ್ಲವೂ ಸತ್ಯವೆಂಬುದನ್ನು ಹೇಳುವವರ್ಯಾರೂ ಇಲ್ಲ. ಅದರಂತೆಯೇ ಈತನ ಪಾರುಪತ್ಯ ಇಲ್ಲಿಗೇ ಮುಗಿಯದು. ಇತರರೆಲ್ಲರೂ ತನ್ನಂತೆಯೇ, ತಾನು ಹೇಳಿದಂತೆಯೇ ನಡೆಯಬೇಕೆಂದು ಬಯಸುತ್ತಾನೆ. ಆದರೆ…
ಯಾರೇ ಆಗಲಿ ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರುವುದು ಅಸಾಧ್ಯ. ಮನುಷ್ಯನ ಮನಸ್ಸಿನ [...]
Posted by: uniquesupri on: October 1, 2008
- ರಂಜಿತ್ ಅಡಿಗ
ಪ್ರೀತಿಯೇ ಹಾಗೆ!
ಬದುಕಿನಲ್ಲಿ ಎಲ್ಲಾ ಸಾಧಿಸಿದವನಿಗೆ ತೃಪ್ತಿ ಸಿಗಬಹುದು. ‘ಅಬ್ಬ! ಎಲ್ಲ ಸಾಧಿಸಿದೆ… ಇನ್ನು ಸಾಕು’ ಅನ್ನಿಸಬಹುದು. ಆದರೆ ಪ್ರೀತಿಯ ವಿಷಯದಲ್ಲಿ ಎದೆಯ ಮಡಿಕೆಗೆ ಎಂದಿಗೂ ತೂತು. ಪ್ರೀತಿ ಎಷ್ಟು ಸಿಕ್ಕಿದರೂ ಅವರ ದಾಹ ನೀಗದು. ಜಗತ್ತನ್ನೇ ಗೆದ್ದೆ ಅಂದವನೂ ಪ್ರೀತಿಯ ವಿಷಯದಲ್ಲಿ ಮೊಣಕಾಲೂರಿ ಬೇಡಲೇಬೇಕು. ಹಿಡಿ ಪ್ರೀತಿಗಾಗಿ ಫಕೀರನಾಗಲೇ ಬೇಕು. ಯಾಕೆಂದರೆ…
ಪ್ರೀತಿಯೇ ಹಾಗೆ!
ಪ್ರೀತಿಯೆಂದರೆ ಎದೆಯ ಹಸಿವು. ಉಸಿರು, ನೀರು, ಆಹಾರ ದೇಹಕ್ಕೆಷ್ಟು ಅಗತ್ಯವೋ ಅಷ್ಟೇ ಅಗತ್ಯ ಹೃದಯದ ಹಸಿವು ನೀಗಲೂ ಇದೆ. ಪ್ರೀತಿ ಎಂಬುದು [...]
Posted by: uniquesupri on: September 30, 2008
The word laconic, meaning terse, pithy, expressing a meaning in few words, has an interesting origin that dates back to the Greek wars, more than 2600 years ago.
The people of Laconia, a state of ancient Greece, were famous for their valor and for their brevity of speech. They never used more words than were strictly [...]
Recent Comments