ಕಲರವ

Archive for the ‘ನಾನ್ರಿ ಎಡಿಟರ್’ Category

 
‘ಸಡಗರ’ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಕಾಲದಲ್ಲಿ ‘ನಾವು ಮಾಡುತ್ತಿರೋದು ಏನು?’, ‘ಇದನ್ನು ಮಾಡುತ್ತಿರುವುದಕ್ಕೆ ಕಾರಣವೇನು?’, ‘ಈ ಕೆಲಸ ನಾವು ಮಾಡದಿದ್ದರೆ ಏನಾದೀತು?’, ‘ಯಾರಿಗಾಗಿ ನಾವು ಈ ಕೆಲಸ ಮಾಡುತ್ತಿರುವುದು?’, ‘ನಮ್ಮ ಕೆಲಸದ ಸಾರ್ಥಕತೆ ಇರುವುದು ಯಾವುದರಲ್ಲಿ?’ ಇಂತಹ ಪ್ರಶ್ನೆಗಳನ್ನು ಎದುರಿಟ್ಟುಕೊಂಡು ಅನೇಕ ಘಂಟೆಗಳನ್ನು ಕಳೆದಿದ್ದೇನೆ. ಒಂಭತ್ತನೆಯ ತರಗತಿಯಲ್ಲಿರುವಾಗ ಪುಟ್ಟದೊಂದು ಪತ್ರಿಕೆಯನ್ನು ಶುರುಮಾಡಿ ರವಿ ಬೆಳಗೆರೆಯ ಅನುಕರಣೆಯಲ್ಲೇ ಖುಶಿ ಅನುಭವಿಸುತ್ತಿದ್ದ ಕಾಲದಿಂದ ಹಿಡಿದು ತೀರಾ ಇತ್ತೀಚಿನವರೆಗೆ, ಪತ್ರಿಕೆ ಎಂಬುದು ನನ್ನ ಐಡೆಂಟಿಟಿಯಾಗಿ ರೂಪುಗೊಳ್ಳುವವರೆಗೆ ನನ್ನನ್ನು ಪದೇ ಪದೇ ಕಾಡುತ್ತಿದ್ದ, ಕಾಡುತ್ತಿರುವ [...]

ಇವತ್ತಿನ ಪರಿಸ್ಥಿತಿಯಲ್ಲಿ ಕೋಮುವಾದ, ಮತೀಯವಾದ, ಭಯೋತ್ಪಾದನೆಯ ಬಗ್ಗೆ ಮಾತಾಡುವುದು ಅಷ್ಟು ಸುಲಭವಲ್ಲ. ಯಾವ ಸಂದರ್ಭದಲ್ಲಿ, ಯಾರ ಎದುರು ನಾವು ಮಾತಾಡುತ್ತೇವೆ ಎಂಬುದರಿಂದ ಹಿಡಿದು ಯಾವ ಸ್ಥಾನದಿಂದ ನಾವು ಮಾತಾಡುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ಇಬ್ಬರು ಹಿಂದೂಗಳು ಮಾತಾಡುವಾಗ ಭಯೋತ್ಪಾದನೆ ಹಾಗೂ ಇಸ್ಲಾಮಿನ ನಂಟಿನ ಬಗ್ಗೆ ಉಡಾಫೆಯಿಂದ ಮಾತಾಡಿಬಿಡಬಹುದು. ಆದರೆ ಅದೇ ಗೆಳೆಯರ ಗುಂಪಿನ ಮುಸ್ಲೀಂ ಯುವಕನೊಬ್ಬ ಬಂದ ತಕ್ಷಣ ಮಾತಿನ ವರಸೆ ಬದಲಾಯಿಸಿಬಿಡಬೇಕಾಗುತ್ತದೆ. ಪತ್ರಿಕೆಯ ಸಂಪಾದಕನಾದವನು, ಧಾರ್ಮಿಕ ಮುಖಂಡನಾದವನು, ಸಾಹಿತಿಯಾದವನು, ರಾಜಕಾರಣಿಯಾದವನು ತನ್ನ ಮಾತಿನ ಮೇಲೆ, ಅದು ಧ್ವನಿಸುವ [...]

ಇತ್ತೀಚೆಗೆ ಬಿಡುಗಡೆಯಾದ ಎರಡು ಹಿಂದಿ ಸಿನೆಮಾಗಳ ಬಗ್ಗೆ ಸ್ವಲ್ಪ ಬರೆಯಬೇಕು. ಒಂದು, ನಿಶಿಕಾಂತ್ ಕಾಮತ್ ನಿರ್ದೇಶನದ ‘ಮುಂಬೈ ಮೇರಿ ಜಾನ್’. ಮತ್ತೊಂದು, ನೀರಜ್ ಪಾಂಡೆಯ ನಿರ್ದೇಶನದ ಸಿನೆಮಾ ‘ಎ ವೆಡ್‌ನೆಸ್‌ಡೇ’.
ಮೇಲ್ನೋಟಕ್ಕೆ ಎರಡೂ ಸಿನೆಮಾಗಳು ಒಂದೇ ಕಥಾವಸ್ತುವನ್ನು ಹೊಂದಿರುವಂತೆ, ಒಂದೇ ಸಮಸ್ಯೆಯೊಂದಿಗೆ ವ್ಯವಹರಿಸುವಂತೆ ಕಂಡರೂ ಈ ಎರಡೂ ಸಿನೆಮಾಗಳು ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದಿವೆ. ಎರಡೂ ಚಿತ್ರಗಳು ಭಯೋತ್ಪಾದನೆಯ ಸಮಸ್ಯೆಯ ಬಗ್ಗೆ ಮಾತನಾಡುತ್ತವೆ. ಭಯೋತ್ಪಾದಕ ಕೃತ್ಯಗಳಲ್ಲಿ ಬಲಿಯಾದವರ ಬಗ್ಗೆ ಕಾಳಜಿಯಿಟ್ಟುಕೊಂಡು ರೂಪುಗೊಂಡಿವೆ.  ಮುಂಬೈ ಮೇರಿ ಜಾನ್‌ನಲ್ಲಿ ಯಾವುದೋ ಮುಖವಿಲ್ಲದ, [...]

ನಾನು ಹಾಗೂ ನನ್ನಂಥ ಕಾಲೇಜು ಹುಡುಗರು ಒಂದು ಅಪವಾದವನ್ನು ಎದುರಿಸುತ್ತಿದ್ದೇವೆ. ಇಂಜಿನಿಯರಿಂಗ್, ಮೆಡಿಸಿನ್, ಲಾ, ಎಂಬಿಎ ಹೀಗೆ ಏನಾದರೊಂದು ವೃತ್ತಿಪರ ಕೋರ್ಸುಗಳನ್ನು ಆಯ್ದುಕೊಂಡು ಓದಿನಲ್ಲಿ ತೊಡಗಿದವರಿಗೆ ಸ್ವಚಿಂತನೆ ಹಾಗೂ ಸ್ವಾರ್ಥವೇ ಹೆಚ್ಚು. ಸುತ್ತಮುತ್ತಲ ಸಮಾಜದ ಬಗ್ಗೆ, ಅದರ ರೀತಿ ನೀತಿಗಳ ಬಗ್ಗೆ ಅಸಡ್ಡೆ ಮೂಡಿರುತ್ತದೆ. ಎಲ್ಲರೂ ಒಂದಲ್ಲ ಒಂದು ದಿನ ಅಮೇರಿಕಾಗೆ ಹಾರಲು ಸಿದ್ಧರಾಗಿರುವಂತೆ ಕಾಣುತ್ತಾರೆ. ಅವರಿಗೆ ಇಲ್ಲಿನ ಎಲ್ಲಾ ಬೇರುಗಳನ್ನೂ ಕತ್ತರಿಸಿಕೊಂಡು ಹಾರಲು ಯಾವ ತೊಂದರೆಯೂ ಇಲ್ಲದ ಹಾಗೆ ಮಾಡಿಕೊಳ್ಳುವ ತವಕ. ಇಲ್ಲಿನ ಯಾವ ಸಂಗತಿಗಳೂ [...]

ಇದು ಈ ಸಂಚಿಕೆಯ ಸಂಪಾದಕೀಯ

ಕಾಫಿ ಡೇಗಳಲ್ಲಿ, ಹೊಟೇಲುಗಳಲ್ಲಿ, ಸಿನೆಮಾ ಥಿಯೇಟರುಗಳಲ್ಲಿ, ಹಾಸ್ಟೆಲ್ಲಿನ ಕಿಕ್ಕಿರಿದ ರೂಮುಗಳಲ್ಲಿ, ಮೊಬೈಲುಗಳಲ್ಲಿ, ಗಂಭೀರ ಚರ್ಚೆಗಳಲ್ಲಿ, ಬೀದಿ ದೀಪದ ಅಡಿಯ ಬೆಳಕಿನಲ್ಲಿ ಗುಂಪು ಕಟ್ಟಿದಾಗ ನಾವು ದೇಶದ ಬಗ್ಗೆ ಅಪಾರ ಕಾಳಜಿ ಉಳ್ಳವರ ಹಾಗೆ ಮಾತನಾಡುತ್ತಿರುತ್ತೇವೆ. ‘ಈ ದೇಶದ ಗತಿಯೇ ಇಷ್ಟು, ಇಲ್ಲಿದ್ದುಕೊಂಡು ನಾವು ಉದ್ಧಾರವಾಗುವುದಕ್ಕೆ ಸಾಧ್ಯವಾ? ಇಂತಹ ವ್ಯವಸ್ಥೆಯನ್ನು ನೆಚ್ಚಿಕೊಂಡು ನಾವು ದೇಶವನ್ನು ಉದ್ಧಾರ ಮಾಡಲು ಸಾಧ್ಯವಾಗುತ್ತದಾ? ನಮ್ಮ ದೇಶದ ದೊಡ್ಡ ಸಮಸ್ಯೆಯೆಂದರೆ ರಾಜಕೀಯ. ಈ ಪೊಲಿಟೀಶಿಯನ್ನುಗಳನ್ನು ಲೈನಾಗಿ ನಿಲ್ಲಿಸಿ ಶೂಟ್ ಮಾಡಬೇಕು. [...]

ಭಯೋತ್ಪಾದನೆ, ಭಯೋತ್ಪಾದಕ ಎಂಬ ಪತ್ರಿಕೆಗಳಲ್ಲಿ ಓದಿದ, ಸುದ್ದಿ ವಾಹಿನಿಗಳಲ್ಲಿ ಕೇಳಿದ ಪದಗಳು ನಮ್ಮ ಪಕ್ಕದಲ್ಲೇ ಕುಳಿತು ನಮ್ಮ ಕಿವಿಗಳೊಳಗೇ ಪಿಸುಗುಟ್ಟಿದ ಅನುಭವವಾಗುತ್ತಿದೆ. ದೂರದಲ್ಲೆಲ್ಲೋ ಅಲ್ಲ, ಇಲ್ಲೇ ನಮ್ಮ ದಾವಣಗೆರೆಯಲ್ಲಿ ಇಬ್ಬರು ಭಯೋತ್ಪಾದಕರು ಪೋಲೀಸರಿಗೆ ಸಿಕ್ಕುಬಿದ್ದಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ನಂತಹ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿನ ವಿದ್ಯಾರ್ಥಿಗಳ ನಡುವೆಯೇ ಭಯೋತ್ಪಾದನೆಯ ಬೀಜಗಳು ಮೊಳೆತಿರುವುದು ಬೆಳಕಿಗೆ ಬರುತ್ತಲಿದೆ. ನಮ್ಮ ಮಧ್ಯೆ ಓಡಾಡಿಕೊಂಡಿದ್ದ ವ್ಯಕ್ತಿಗಳು ನಮ್ಮ ನೆತ್ತರನ್ನು ನೆಲದ ಮೇಲೆ ಹರಿಸುವ ಹೊಂಚು ಹಾಕುತ್ತಿದ್ದುದನ್ನು ಅರಿಯದ ಹಾಗಿದ್ದ ನಮಗೀಗ ಬೆನ್ನ ಹುರಿಯಗಂಟ ನಡುಕ! ಹೌದು [...]


Blog Stats

  • 13,245 hits

 

November 2009
M T W T F S S
« Aug    
 1
2345678
9101112131415
16171819202122
23242526272829
30