Posted by: uniquesupri on: December 20, 2008
ಚಂದ್ರಯಾನ ಜುಟ್ಟಿನ ಮಲ್ಲಿಗೆಯೇ?
- ಸುಪ್ರೀತ್.ಕೆ.ಎಸ್
ಪುರಾತನ ಕಾಲದಿಂದಲೂ ಭಾರತೀಯರು ಜ್ಞಾನದ ಉಪಾಸನೆಯನ್ನು ಮಾಡುತ್ತಾ ಬಂದವರು. ಜ್ಞಾನ ಯಾವ ದಿಕ್ಕಿನಿಂದ ಬಂದರೂ ಅದನ್ನು ಸ್ವೀಕರಿಸುವ ಮನೋಭೂಮಿಕೆಯನ್ನು ಸಿದ್ಧ ಪಡಿಸಿಕೊಂಡವರು. ಭೂಮಿಯ ಮೇಲಿನ ಸಂಗತಿಗಳ ಬಗ್ಗೆ ತಿಳಿಯುತ್ತಾ ಅವರ ಹಸಿವು ದಿಗಂತದೆಡೆಗೆ ವಿಸ್ತರಿಸಿತು. ನೆಲದ ಮೇಲೆ ನೆಟ್ಟಿದ್ದ ದೃಷ್ಟಿ ಸೂರ್ಯ, ಚಂದ್ರರನ್ನು ದಾಟಿ ದೂರದ ನಕ್ಷತ್ರ ಪುಂಜಗಳವರೆಗೆ ವ್ಯಾಪಿಸಿತು. ಗ್ರಹಗಳ ಚಲನೆಯ ಬಗ್ಗೆ, ನಕ್ಷತ್ರಗಳ ಪುಂಜಗಳ ಸ್ಥಾನಗಳ ಬಗ್ಗೆ, ಗ್ರಹಣಗಳ ಬಗ್ಗೆ ತಿಳಿಯುತ್ತಾ ಅಂತರಿಕ್ಷವೆಂಬುದು ಇಡೀ ಬ್ರಹ್ಮಾಂಡದ ರಹಸ್ಯವನ್ನು ಬಿಚ್ಚಿಡುವ [...]
Posted by: uniquesupri on: December 20, 2008
ಚಂದ್ರಯಾನ ಜುಟ್ಟಿನ ಮಲ್ಲಿಗೆಯೇ?
- ಚಂದ್ರಶೇಖರ್ ಪ್ರಸಾದ್
‘ಮನುಷ್ಯ ಚಂದ್ರನವರೆಗೆ ಹೋಗಿ ಒಂದಿಶ್ಟು ಮಣ್ಣು ತಂದನೇ ವಿನಾ ಒಂದು ಹಿಡಿ ಬೆಳಕನ್ನು ತರಲಿಲ್ಲ’ – ವೀರಭದ್ರ ಚನ್ನಮಲ್ಲಸ್ವಾಮಿ.
ಭೂಮಿಯಿಂದ ಸುಮಾರು ಮೂರು ಮುಕಾಲು ಲಕ್ಷ ಕಿಮೀ ದೂರದಲ್ಲಿರುವ ಚಂದ್ರನನ್ನು ಅಪ್ಪುವ, ಆತನ ಅಂಗಳದ ಮೇಲೆ ಇಳಿದು ಭಾರತದ ತಿರಂಗ ಧ್ವಜವನ್ನು ಹಾರಿಸುವ ಮುನ್ನ ಇಲ್ಲೇ ನಮ್ಮ ನೆಲದಲ್ಲಿ ನಿಂತು ದೇಶವನ್ನು ಸರಿಯಾಗಿ ದಿಟ್ಟಿಸಿ ನೋಡೋಣ. ನೂರ ಹದಿಮೂರು ಕೋಟಿ ಮಂದಿ ಭಾರತದಲ್ಲಿ ಜೀವಿಸುತ್ತಿದ್ದಾರೆ. ಜಗತ್ತಿನ ಆರರಲ್ಲಿ ಒಂದು ಭಾಗದಷ್ಟು ಜನಸಂಖ್ಯೆ [...]
Posted by: uniquesupri on: September 28, 2008
ಈ ಸಂಚಿಕೆಯ ಡಿಬೇಟಿನ ವಿಷಯ ದೇಶಪ್ರೇಮಿ V/s ವಿಶ್ವಮಾನವ. ದೇಶಪ್ರೇಮ ವಿಶ್ವಮಾನವತೆಯನ್ನು ಹೊಂದಲು ಅಡ್ಡಿಯಾಗುತ್ತದೆಯೇ? ದೇಶಪ್ರೇಮವಿಲ್ಲದವ ವಿಶ್ವಮಾನವನಾಗಲು ಸಾಧ್ಯವಿಲ್ಲವೇ?
ದೇಶಪ್ರೇಮವಿಲ್ಲದವನು ಇಡೀ ವಿಶ್ವದ ಬಗ್ಗೆ ಅಭಿಮಾನವನ್ನು ಹೊಂದಲು ಸಾಧ್ಯವಿಲ್ಲ. ದೇಶದಲ್ಲಿನ ವೈವಿಧ್ಯತೆಯನ್ನು ಪ್ರೀತಿಸದವನು ಜಗತ್ತಿನ ಓರೆಕೋರೆಗಳನ್ನು ಸಮದೃಷ್ಠಿಯಿಂದ ಕಾಣಲಾರ ಎಂದು ವಾದಿಸಿದ್ದಾರೆ ಸುಪ್ರೀತ್.ಕೆ.ಎಸ್
ನಮ್ಮ ಆದರ್ಶಗಳು, ಕಲ್ಪನೆಗಳು ಎಷ್ಟೇ ಉದಾತ್ತವಾದರೂ ನಮ್ಮ ಹೃದಯ ಅಷ್ಟು ವಿಶಾಲವಾಗದೆ, ನಮ್ಮ ಗ್ರಹಿಕೆ ಅಷ್ಟು ಪಕ್ವವಾಗದೆ ಅವು ಯಥಾವತ್ತಾಗಿ ಅನುಷ್ಠಾನಕ್ಕೆ ಬರಲು ಸಾಧ್ಯವಾಗುವುದಿಲ್ಲ. ಸರೋವರದ ನೀರು ಎಷ್ಟೇ ಶುಭ್ರವಾದರೂ, ಎಷ್ಟೇ ಸವಿಯಾಗಿದ್ದರೂ ನಮ್ಮ ಪಾತ್ರೆ [...]
Posted by: uniquesupri on: September 28, 2008
ಈ ಸಂಚಿಕೆಯ ಡಿಬೇಟಿನ ವಿಷಯ ದೇಶಪ್ರೇಮಿ V/s ವಿಶ್ವಮಾನವ. ದೇಶಪ್ರೇಮ ವಿಶ್ವಮಾನವತೆಯನ್ನು ಹೊಂದಲು ಅಡ್ಡಿಯಾಗುತ್ತದೆಯೇ? ದೇಶಪ್ರೇಮವಿಲ್ಲದವ ವಿಶ್ವಮಾನವನಾಗಲು ಸಾಧ್ಯವಿಲ್ಲವೇ?
ದೇಶಪ್ರೇಮವೆಂಬುದು ಯುದ್ಧಗಳ ತಾಯಿ. ದೇಶಪ್ರೇಮದಿಂದ ವಿಶ್ವ ಭ್ರಾತೃತ್ವ ಅಸಾಧ್ಯವಾದ ಸಂಗತಿಯಾಗುತ್ತದೆ ಎಂದು ವಾದಿಸಿದ್ದಾರೆ ಚಂದ್ರಶೇಖರ್ ಪ್ರಸಾದ್.
ಇಬ್ಬರು ಮಕ್ಕಳು ಆಟವಾಡಲು ಅಂಗಳದಲ್ಲಿ ಕಲೆಯುತ್ತಾರೆ. ಅಲ್ಲೇ ಬಿದ್ದಿದ್ದ ಹತ್ತಾರು ಕಲ್ಲುಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಆಟದ ಓಘದಲ್ಲಿ ತಮ್ಮ ತಮ್ಮ ಕಲ್ಲುಗಳ ಮೇಲೆ ಹೆಮ್ಮೆ ಬೆಳೆಯುತ್ತದೆ. ತನ್ನದೇ ಕಲ್ಲುಗಳು ಶ್ರೇಷ್ಠ ಎಂದು ಇಬ್ಬರೂ ವಾದ ಮಾಡಲು ಶುರುಮಾಡುತ್ತಾರೆ. ಮೊದ ಮೊದಲು ಬಾಯಿಮಾತಿನಲ್ಲಿ ಶುರುವಾಗುವ [...]
Posted by: uniquesupri on: July 28, 2008
ಈ ಸಂಚಿಕೆಯ ಚರ್ಚೆಯ ವಸ್ತು, ಇಪ್ಪತೊಂದನೆಯ ಶತಮಾನದ ಮಾಹಿತಿಕ್ರಾಂತಿಯ ಯುಗದಲ್ಲಿ ಶಿಕ್ಷಕರು, ಗುರು-ಶಿಷ್ಯ ಸಂಸ್ಕೃತಿ ಅಪ್ರಸ್ತುತವಾಗುತ್ತಿದೆಯೇ? ಇಲ್ಲ, ಯಾವ ಕಾಲದಲ್ಲೂ ಗುರುವಿನ ಸ್ಥಾನವನ್ನು ಯಾವುದರಿಂದಲೂ ತುಂಬಲುಸ ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ ಚೇತನ್ ಸಾಗರ್. [...]
Posted by: uniquesupri on: July 28, 2008
ಈ ಸಂಚಿಕೆಯ ಚರ್ಚೆಯ ವಸ್ತು, ಇಪ್ಪತೊಂದನೆಯ ಶತಮಾನದ ಮಾಹಿತಿಕ್ರಾಂತಿಯ ಯುಗದಲ್ಲಿ ಶಿಕ್ಷಕರು, ಗುರು-ಶಿಷ್ಯ ಸಂಸ್ಕೃತಿ ಅಪ್ರಸ್ತುತವಾಗುತ್ತಿದೆಯೇ? ಹೌದು, ಮಾಹಿತಿ ಕ್ರಾಂತಿಯ ಈ ಶತಮಾನದಲ್ಲಿ ಶಿಕ್ಷಕ ನೆಪಮಾತ್ರವಾಗಿದ್ದಾನೆ. ಶಿಕ್ಷಣ ಕ್ಷೇತ್ರವೇ ವ್ಯಾಪಾರೀಕರಣಗೊಂಡಿರುವಾಗ ಗುರು-ಶಿಷ್ಯ ಸಂಸ್ಕೃತಿ ಹಾಸ್ಯಾಸ್ಪದ ಎಂದು ವಾದಿಸಿದ್ದಾರೆ ಚಂದ್ರಶೇಖರ್ ಪ್ರಸಾದ್. [...]
Posted by: uniquesupri on: April 24, 2008
ಈ ಸಂಚಿಕೆಯ ಚರ್ಚೆ: ಮಹಿಳೆಯ ಉಡುಪು ಹಾಗೂ ಪ್ರಚೋದನೆ. ಮಹಿಳೆ ತೊಡುವ ಪ್ರಚೋದನಾಕಾರಿ ಉಡುಪಿನಿಂದ ಆಕೆಯ ಮೇಲೆ ಅತ್ಯಾಚಾರಗಳು ನಡೆಯುತ್ತಿವೆಯೇ? ಎಲ್ಲಕ್ಕೂ ಮಹಿಳೆಯೇ ಕಾರಣವೇ? ಎಲ್ಲಾ ವಿಷಯಗಳಲ್ಲೂ ಹೆಣ್ಣನ್ನು ಬಲಿಪಶುವಾಗಿಸುವುದೇಕೆ? ಪ್ರಚೋದನೆ ಇರುವುದು ತೊಡುಗೆಯಲ್ಲಾ ಅಥವಾ ಪುರುಷನ ಕಣ್ಣುಗಳಲ್ಲಾ ಎಂದು ಕೇಳುತ್ತಾರೆ ‘ಅಂತರ್ಮುಖಿ’
ಕಳೆದ ವರ್ಷ ಪಾಕಿಸ್ತಾನದಲ್ಲಿ ನಲವತ್ತರ ಆಸುಪಾಸಿನಲ್ಲಿದ್ದ ವ್ಯಕ್ತಿಯೊಬ್ಬ ಕೈಯಲ್ಲಿ ಗನ್ ಅಡಗಿಸಿಟ್ಟುಕೊಂಡು ಬಂದು ದೇಶದ ಮಹಿಳಾ ಮಂತ್ರಿಯೊಬ್ಬಳನ್ನು ಕೊಂದು ಬಿಟ್ಟ.
ಆಕೆ ಜಿಲ್ಲಾ ಹುಮಾ ಉಸ್ಮಾನ್. ಆಕೆ ಮುವತ್ತೈದರ ಆಸುಪಾಸಿನಲ್ಲಿದ್ದ ಹೆಣ್ಣು. ಪಾಕಿಸ್ತಾನವೆಂಬ [...]
Posted by: uniquesupri on: April 24, 2008
ಈ ಸಂಚಿಕೆಯ ಚರ್ಚೆ: ಮಹಿಳೆಯ ಉಡುಪು ಹಾಗೂ ಪ್ರಚೋದನೆ. ಮಹಿಳೆ ತೊಡುವ ಪ್ರಚೋದನಾಕಾರಿ ಉಡುಪಿನಿಂದ ಆಕೆಯ ಮೇಲೆ ಅತ್ಯಾಚಾರಗಳು ನಡೆಯುತ್ತಿವೆಯೇ? ಎಲ್ಲಕ್ಕೂ ಮಹಿಳೆಯೇ ಕಾರಣವೇ? ತನ್ನ ಎಚ್ಚರಿಕೆಯಲ್ಲಿ ತಾನಿರಲು ಹೆಣ್ಣು ಪ್ರಚೋದನಕಾರಿಯಾಗಿ ಬಟ್ಟೆ ತೊಡುವುದನ್ನು ತಪ್ಪಿಸಬೇಕೇ ಹೊರತು ಅದು ಆಕೆಗೆ ಕಟ್ಟಳೆಯಾಗಬೇಕಿಲ್ಲ ಎನ್ನುತ್ತಾರೆ ಸುಪ್ರೀತ್.ಕೆ.ಎಸ್.
ಸಮಾನತೆ, ಸ್ತ್ರೀವಾದದ ಬಗ್ಗೆ ಮಾತನಾಡುವ ಮೊದಲು ನಮ್ಮ ಸಮಾಜ ಸಮಾನತೆಯ ಸಮಾಜವಾ ಎಂಬುದನ್ನು ಕೂಲಂಕುಶವಾಗಿ ಪರಿಶೀಲಿಸಬೇಕು. ನಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳು ಗಂಡಿನ ಸರಿಸಮಾನವಾಗಿ ಓದಬಹುದು, ಕೆಲಸಗಿಟ್ಟಿಸಿಕೊಳ್ಳಬಹುದು, ಸಂಪಾದನೆ ಮಾಡಬಹುದು. ಇದನ್ನೆಲ್ಲಾ ಹೆಮ್ಮೆಯಿಂದ, [...]
Posted by: uniquesupri on: February 27, 2008
ಈ ಸಂಚಿಕೆಯ ಡಿಬೇಟಿನ ವಿಷಯ “ವ್ಯವಸ್ಥೆ ಮನುಷ್ಯನ ಬೆಳವಣಿಗೆಗೆ ಮಾರಕವೇ, ಪೂರಕವೇ?” ವ್ಯವಸ್ಥೆ ಮನುಷ್ಯನ ಸಹಜವಾದ ಜೀವನೊಲ್ಲಾಸವನ್ನು ಕಟ್ಟಿಹಾಕುವ ಸೆರೆಮನೆ ಎಂದು ವಾದಿಸಿದ್ದಾರೆ ‘ಅಂತರ್ಮುಖಿ’.
ನಿಮ್ಮ ಅಭಿಪ್ರಾಯವೇನು ತಿಳಿಸ್ತೀರಲ್ಲಾ?
ಮನುಷ್ಯ ನಿಸರ್ಗದಿಂದ ದೂರಾದ ಪ್ರಕ್ರಿಯೆಯ ಮೊದಲ ಹಂತವೇ ವ್ಯವಸ್ಥೆ. ಭೂಮಿಯ ಮೇಲಿನ ಸಕಲೆಂಟು ಜೀವ ಜಂತುಗಳು ಸಹಬಾಳ್ವೆಯಿಂದ ಜೀವಿಸುವುದಕ್ಕೆ ಪ್ರಕೃತಿ ತನ್ನದೇ ಆದ ನಿಯಮಗಳನ್ನು ರೂಪಿಸಿದೆ. ಇದರಲ್ಲಿ ಪ್ರತಿಯೊಂದು ಜೀವಿಗೂ ಪ್ರತ್ಯೇಕವಾದ ಅಸ್ತಿತ್ವವಿದೆ. ಅವಕ್ಕೆ ಪ್ರಕೃತಿ ಕೊಡಮಾಡಿದ ತಮ್ಮವೇ ಆದ ಸಾಮರ್ಥ್ಯಗಳಿವೆ, ದೌರ್ಬಲ್ಯಗಳಿವೆ. ಮನುಷ್ಯ ಪ್ರಕೃತಿಯ ಅನುಸಾರವಾಗಿ ನಡೆದುಕೊಳ್ಳಲು ಇರುವ [...]
Posted by: uniquesupri on: February 27, 2008
ಈ ಸಂಚಿಕೆಯ ಡಿಬೇಟಿನ ವಿಷಯ “ವ್ಯವಸ್ಥೆ ಮನುಷ್ಯನ ಬೆಳವಣಿಗೆಗೆ ಮಾರಕವೇ, ಪೂರಕವೇ?” ವ್ಯವಸ್ಥೆ ಮನುಷ್ಯನನ್ನು ತನ್ನದೇ ಕ್ರೂರತೆ, ದೌರ್ಬಲ್ಯಗಳಿಂದ ರಕ್ಷಿಸುವ ಕೋಟೆಯಿದ್ದಂತೆ ಎಂದು ವಾದಿಸಿದ್ದಾರೆ ಸುಪ್ರೀತ್.ಕೆ.ಎಸ್.
ನಿಮ್ಮ ಅಭಿಪ್ರಾಯವೇನು ತಿಳಿಸ್ತೀರಲ್ಲಾ?
ವ್ಯವಸ್ಥೆಯು ಮನುಷ್ಯನ ಸಮಗ್ರವಾದ ಅಭಿವ್ಯಕ್ತಿಗೆ ತೊಡಕಾಗುತ್ತದೆಯೇ ಇಲ್ಲವೇ ಎಂದು ಚರ್ಚಿಸುವ ಮೊದಲು ವ್ಯವಸ್ಥೆಯ ಹುಟ್ಟಿಗೆ ಕಾರಣವಾದ ಸಂಗತಿಗಳನ್ನು ಗಮನಿಸೋಣ. ಈ ಭೂಮಿಯ ಮೇಲಿರುವ ಯಾವ ಪ್ರಕ್ರಿಯೆಗಳನ್ನೇ ಗಮನಿಸಿ, ಅಲ್ಲಿ ವ್ಯವಸ್ಥೆಯೆಂಬುದು ಎದ್ದು ಕಾಣುತ್ತದೆ. ಇಡೀ ವಿಶ್ವ ನಡೆಯುತ್ತಿರುವುದು ಅಗೋಚರವಾದ ವ್ಯವಸ್ಥೆಯ ಮೇಲೆ. ಸೂರ್ಯನ ಸುತ್ತ ಗ್ರಹಗಳು ವ್ಯವಸ್ಥಿತವಾಗಿ ಸುತ್ತುಹಾಕುತ್ತಿರುವುದರಿಂದಲೇ [...]
Recent Comments