ಕಲರವ

Archive for the ‘ಚುರುಮುರಿ’ Category

ಚುರುಮುರಿ

Posted by: uniquesupri on: March 14, 2009

ಕೆಲಸದ ಅರ್ಜಿಯನ್ನು ಗುಂಡ ಬಹಳ ಸಮಯದಿಂದ ಗುರಾಯಿಸುತ್ತಿದ್ದ. ಯಾರ ಕಾಪಿಯನೂ ಮಾಡದೇ ಎಲ್ಲಾ ಜಾಗವನ್ನು ಪ್ರಥಮ ಸಲ ತುಂಬಿದ ಬಳಿಕ ಆತ್ಮವಿಶ್ವಾಸದ ನಂತರ ಇದೊಂದು ಪ್ರಶ್ನೆ ತೀವ್ರವಾಗಿ ತಲೆ(?!) ತಿನ್ನುತಿತ್ತು. ಬಹಳ ಅಲೋಚಿಸಿದ ಬಳಿಕ ಸ್ಯಾಲರಿ ಎಕ್ಸ್ಪ್ ಪೆಕ್ಟೆಡ್ ಎದುರು ಕೊನೆಗೂ ಯೆಸ್ ಅಂತ ಬರೆದ.
ತಲೆಗೆ ಹುಳ!
ಕುಟುಂಬವೊಂದರಲ್ಲಿ ಪ್ರತಿಯೊಂದು ಮಗುವಿಗೂ ಕನಿಷ್ಠ ನಾಲ್ಕು ಮಂದಿ ಸಹೋದರರೂ, ನಾಲ್ಕು ಮಂದಿ ಸಹೋದರಿಯರೂ ಇದ್ದಾರೆಂದರೆ ಆ [...]

ಚುರುಮುರಿ ಅಕ್ಟೋಬರ್ ಸಂಚಿಕೆ

Posted by: uniquesupri on: November 15, 2008

ನಾನು ಉಪವಾಸ ಮಾಡಲ್ಲ!
ಒಮ್ಮೆ ಗಾಂಧೀಜಿ ಉಪವಾಸ ಪ್ರಾರಂಭಿಸಿದರು. ಪಕ್ಕದಲ್ಲೇ ವಲ್ಲಭಭಾಯಿ ಪಟೇಲರು ನಿಂತಿದ್ದರು. ಗಾಂಧೀಜಿ ಅವರಿಗೆ ಹೇಳಿದರು: ‘ವಲ್ಲಭ ಭಾಯಿ, ನಿಮಗೂ ಅಪ್ಪಣೆ ಕೊಡುತ್ತೇನೆ ಉಪವಾಸ ಮಾಡಬಹುದು.’
‘ಬೇಡಿ ಬಾಪೂಜಿ, ಖಂಡಿತಾ ಬೇಡಿ. ನಾನಂತೂ ಉಪವಾಸ ಪ್ರಾರಂಭಿಸೋಲ್ಲ’ ಎಂದರು ವಲ್ಲಭಭಾಯಿ.
‘ಏಕೆ?’ ಆಶ್ಚರ್ಯದಿಂದ ಕೇಳಿದರು ಗಾಂಧೀಜಿ.
‘ನೀವು ಉಪವಾಸ ಮಾಡಿದರೆ ಬೇಡ ಎಂದು ಬೇಡಿಕೊಳ್ಳುವವರು ನೂರಾರು ಜನ. ಹಾಗೆ ಮಾಡಿ ನೀವು ಉಪವಾಸ ಮಾಡುವುದನ್ನು ತಪ್ಪಿಸುತ್ತಾರೆ. ನಾನು ಉಪವಾಸ ಮಾಡಿದರೆ ಬೇಡ ಎಂದು ಹೇಳಿ ನಿಲ್ಲಿಸುವವರು ಯಾರೂ ಇಲ್ಲವಲ್ಲ!’
………………………………

ಓಹ್ ಹೌದಾ?
ಭೂಮಿಯ ಮೇಲೆ ಪ್ರತಿ [...]

ಚುರುಮುರಿ

Posted by: uniquesupri on: September 20, 2008

ಸತ್ಯ!
ವಯಸ್ಸು ಇಪ್ಪತ್ತಾದಾಗ ಮನುಷ್ಯ ಬೇರೆಯವರು ತನ್ನ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂದು ಯೋಚಿಸುತ್ತಾನೆ.
ವಯಸ್ಸು ನಲವತ್ತಾದಾಗ ಮನುಷ್ಯ ಬೇರೆಯವರು ತನ್ನ ಬಗ್ಗೆ ಏನಾದರೂ ಯೋಚಿಸಿಕೊಳ್ಳಲಿ, ನನಗೇನು ಎಂದು ಭಾವಿಸುತ್ತಾನೆ.
ವಯಸ್ಸು ಅರವತ್ತಾದಾಗ ಆತ ಬೇರೆಯವರು ಅಸಲಿಗೆ ತನ್ನ ಬಗ್ಗೆ ಯೋಚಿಸುತ್ತಲೇ ಇರಲಿಲ್ಲ ಎಂಬುದನ್ನು ಕಂಡುಕೊಳ್ಳುತ್ತಾನೆ.
…………………………..
ಹುಟ್ಟಿದಾಗ ನಾವು ಅಳುತ್ತಿದ್ದೆವು ಉಳಿದವರೆಲ್ಲಾ ಸಂಭ್ರಮಿಸುತ್ತಿದ್ದರು. ನಾವು ಹೇಗೆ ಬದುಕಬೇಕೆಂದರೆ ಸಾಯುವಾಗ ನಾವು ಸಂಭ್ರಮಿಸಬೇಕು, ಉಳಿದವರೆಲ್ಲಾ ಅಳಬೇಕು.
…………………………..
ನೀವು ನನ್ನ ಹೆಂಡತಿಯಾಗಿದ್ರೆ!
ಚರ್ಚಿಲ್ ಅವರನ್ನು ಕುರಿತು ಲೇಡಿ ಆಸ್ಟರ್ ಹೇಳಿದ್ದು:
“ನಾನು ನಿಮ್ಮ ಹೆಂಡತಿಯಾಗಿದ್ದರೆ ನಿಮಗೆ ವಿಷ ಕೊಡುತ್ತಿದ್ದೆ!”
ಥಟ್ಟನೆ ಚರ್ಚಿಲ್ [...]


Blog Stats

  • 13,245 hits

 

November 2009
M T W T F S S
« Aug    
 1
2345678
9101112131415
16171819202122
23242526272829
30