ಕಲರವ

Archive for the ‘ಇದು ಕತೆಯಂತೆ!’ Category

- ರಂಜಿತ್ ಅಡಿಗ, ಕುಂದಾಪುರ

ಅಪ್ಪನ ಬೈಗುಳ ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಕಾರಣ ಚಿಕ್ಕದು, ಅಕ್ಕನಿಂದ ಪತ್ರ ಬಂದಿತ್ತು ಅಕ್ಕನೆಂದರೆ ನನ್ನ ಪಾಲಿಗಂತೂ ದೊಡ್ಡ ಧೈರ್ಯಸ್ಥೆ! ಅಷ್ಟುವರ್ಷ ಪ್ರೀತಿಯಿಂದ ಸಾಕಿದ ಅಪ್ಪನನ್ನು ಧಿಕ್ಕರಿಸಿ ಯಾವುದೋ ಹುಡುಗನ ಪ್ರೀತಿಯ ಮಾಯಾಮೃಗಕ್ಕೆ ಆಸೆಪಟ್ಟು, ಕಟ್ಟು ಪಾಡಿನ ಲಕ್ಷಣ ರೇಖೆಯನ್ನು ದಾಟಿದವಳು. ಸದಾ ಮುಗುದೆಯಂತೆ ಮಾಡುತ್ತಿದ್ದ ಅಕ್ಕನಿಗೆ ಅಂತಹ ಮಾನಸಿಕ ಶಕ್ತಿಯನ್ನು ನೀಡಿದ ಮಹಾನ್ ಶಕ್ತಿ ಪ್ರೇಮವೆಂದು ಅಚ್ಚರಿಪಟ್ಟಿದ್ದೆ!
ಅಪ್ಪನ ಕೋಪಕ್ಕೆ ತಲೆಕೆಡಿಸಿಕೊಳ್ಳದೆ ’ಆದದ್ದು ಆಗಿ ಹೋಯಿತು, ಇನ್ನಾದರು ಒಟ್ಟಿಗೆ ಇರೋಣ….’ ಎಂಬ [...]

ವೈಚಾರಿಕತೆ

Posted by: uniquesupri on: February 16, 2008

ಈ ಕಥೆಯನ್ನು ಬರೆದವರು ಸುಪ್ರೀತ್.ಕೆ.ಎಸ್

ಓದುತ್ತಿದ್ದ ಪುಸ್ತಕದ ವಿಚಾರ ಬಹಳ ಸೂಕ್ಷ್ಮದ್ದಾಗಿತ್ತು. ಮನುಷ್ಯನ ಮನಸ್ಸಿನ ಪದರಗಳನ್ನು ಎಳೆಯೆಳೆಯಾಗಿ ಬಿಡಿಸಿಡುತ್ತಾ ಮನುಷ್ಯನ ನಂಬಿಕೆಗಳು, ಆತನು ಬಯಸುವ ಶ್ರದ್ಧೆಯ ಮೂಲ ಸೆಲೆಗಳು, ಆತನ ಅಭದ್ರತೆಗಳನ್ನು ವಿವರವಾಗಿ ಬಿಡಿಸಿಡುತ್ತಾ ಮನುಷ್ಯ ದೇವರನ್ನು ಏಕೆ ನಂಬುತ್ತಾನೆ? ಧರ್ಮ ವಿಧಿಸುವ ಆಚರಣೆಗಳನ್ನು ಏಕೆ ಒಪ್ಪಿಕೊಳ್ಳುತ್ತಾನೆ ಎಂಬುದನ್ನು ತಾರ್ಕಿಕವಾಗಿ, ವೈಜ್ಞಾನಿಕವಾಗಿ, ಮನಃಶಾಸ್ತ್ರದ ಹಿನ್ನೆಲೆಯಲ್ಲಿ ವಿವರಿಸುವ ಪ್ರಯತ್ನವನ್ನು ಲೇಖಕ ಮಾಡಿದ್ದ. ಓದುತ್ತಾ ಓದುತ್ತಾ ಸುನೀಲನಿಗೆ ಏನೋ ಒಂದು ಬಗೆಯ ನೆಮ್ಮದಿಯ ಭಾವ ಮನಸ್ಸಿನಲ್ಲಿ ಹರಡಿದಂತಾಗುತ್ತಿತ್ತು. ಪ್ರತಿದಿನ ದೇವರ ಪೂಜೆ [...]


Blog Stats

  • 13,245 hits

 

November 2009
M T W T F S S
« Aug    
 1
2345678
9101112131415
16171819202122
23242526272829
30