ಕಲರವ

Archive for the ‘ಇತರೆ’ Category

ಹಾಗೆ ನೋಡಿದರೆ ಬೇಸರಿಸಿಕೊಳ್ಳಲು ಕಾರಣಗಳೇ ಬೇಕಿಲ್ಲ. ಬೆಳಿಗ್ಗೆ ಹಾಲಿನವನು ಬರದೇ ರಜೆ ಹಾಕಿದರೂ ಮನಸ್ಸು ಮುದುಡುತ್ತದೆ.ಗೋಡೆಗೆ ನೇತು ಹಾಕಿದ ಕ್ಯಾಲೆಂಡರ್ ನ್ನು ಕಂಡರೂ ಸಾಕು, ಇಷ್ಟು ವಯಸ್ಸಾದರೂ ಎನೂ ಸಾಧಿಸದೇ ಹೋದೆನಲ್ಲಾ ಎಂಬುದು ಕೂಡ ಸಾಕು ಮನಸ್ಸು ಬೇಸರಿಸಿ ಮನದ ಚಿಪ್ಪೊಳಗೆ ಅವಿತು ಕುಳಿತುಕೊಳ್ಳಲು!       
ಈ ಥರದ ಬೇಸರದ ಗಳಿಗೆಗಳು ಬಹುಶಃ ಪ್ರತಿ ವರುಷದ ಹುಟ್ಟುಹಬ್ಬದ ದಿನ ತಪ್ಪದೇ ಕಾಡುತ್ತದೆ. [...]

ಝೆನ್ ಕಥೆಗಳು

Posted by: uniquesupri on: April 4, 2009

ಪ್ರೀತಿ
ಝೆನ್ ಗುರು ಸುಜುಕಿ ರೋಶಿಯ ಬಳಿ ಯುವತಿಯೊಬ್ಬಳು ಬಂದಳು. ಅವರೆಡೆಗೆ ತನ್ನಲ್ಲಿರುವ ಪ್ರೀತಿಯನ್ನು ನಿವೇದಿಸಿಕೊಂಡಳು. ಇದರಿಂದಾಗಿ ತಾನು ವಿಪರೀತವಾದ ಗೊಂದಲಕ್ಕೆ ಒಳಗಾಗಿರುವುದಾಗಿ ತಿಳಿಸಿದಳು. “ಚಿಂತಿಸಬೇಡ”, ಸುಜುಕಿ ಹೇಳಿದರು “ನಿನ್ನ ಗುರುವಿನೆಡೆಗೆ ಯಾವ ಭಾವನೆಯನ್ನಾದರೂ ನೀನು ಇಟ್ಟುಕೊಳ್ಳಲು ಅವಕಾಶವಿದೆ. ಅದು ಒಳ್ಳೆಯದು. ಇಬ್ಬರಿಗೂ ಬೇಕಾದ ಸಂಯಮ ನನ್ನಲ್ಲಿದೆ.”
ಟೀ ಪಾತ್ರೆ
ಶಿಷ್ಯನೊಬ್ಬ ಗುರು ಸುಜುಕಿ ರೋಶಿಯನ್ನು ಕೇಳಿದ: “ಜಪಾನಿನಲ್ಲಿ ಟೀಪಾತ್ರೆಗಳನ್ನು ಅಷ್ಟು ನಾಜೂಕಾಗಿ ಏಕೆ ತಯಾರಿಸುತ್ತಾರೆ? ಅವು ಸುಲಭವಾಗಿ ಮುರಿದು ಹೋಗುತ್ತವೆ.” [...]

ಹಿರಿಯ ಸ್ವಾಮಿಗಳು ಇಲ್ಲಿದ್ದಾರೆ!
ಪಟ್ಟಕ್ಕೆ ಬಂದ ಕೆಲವೇ ತಿಂಗಳಲ್ಲಿ ಮರಿ ಸ್ವಾಮಿಗಳು ತೀರಿಕೊಂಡು ಬಿಟ್ಟರು. ಯಮದೂತರು ಅವರನ್ನು ನರಕಕ್ಕೆ ಎಳೆದುಕೊಂಡು ಹೋಗಿ ಒಂದು ಕೋಣೆಯಲ್ಲಿ ದೂಡಿದರು. ಮರಿ ಸ್ವಾಮಿಗಳು ಒಂದೇ ಸಮ ಕಿರುಚುತ್ತಿದ್ದರು. “ಏಯ್ ನನ್ನನ್ನು ನರಕಕ್ಕೆ ಏಕಯ್ಯಾ ತಂದಿರಿ? ನಾನು ಸ್ವಾಮಿ ಕಣಯ್ಯ, ಬಿಡಿರಯ್ಯ” ಭಟರು ಹೇಳಿದರು, “ಶ್! ಜೋರಾಗಿ ಒದರಾಡಬೇಡಿ. ಪಕ್ಕದ ಕೊಠಡಿಯಲ್ಲಿ ಹಿರಿಯ ಸ್ವಾಮಿಗಳು ನಿದ್ದೆ ಮಾಡುತ್ತಿದ್ದಾರೆ.”
ಮುಖ ಭಾವ!
ಚರ್ಚಿನ ಪ್ರಧಾನ ಗುರುಗಳು ಕಿರಿಯ ಪಾದ್ರಿಗಳ ಗುಂಪಿಗೆ ತರಬೇತಿ ನೀಡುತ್ತಿದ್ದರು. “ನೋಡಿ, ಸ್ವರ್ಗದ ವೈಭವವನ್ನು ಕುರಿತು [...]

ಎದೆಯ ದನಿ ೧ (ಧಾರಾವಾಹಿ)

Posted by: uniquesupri on: August 2, 2008

ಬಹು ದೂರದ ಪಯಣಕ್ಕೆ ತನ್ನನ್ನು ತಾನು ತಯಾರು ಮಾಡಿಕೊಳ್ಳುತ್ತಿರುವಂತೆ ಗಂಭೀರವಾಗಿ ನಿಂತಿತ್ತು ಬಸ್ಸು. ಡ್ರೈವರ್ ಬಸ್ಸಿನ ಏಜನ್ಸಿಯ ಮಾಲೀಕನೊಂದಿಗೆ ಅದರ ಗೇರ್ ಬಾಕ್ಸ್ ಬಗೆಗೆ ಏನೋ ಕಮೆಂಟ್ ಮಾಡುತ್ತಿದ್ದ. ಕ್ಲೀನರ್ ತನ್ನ ಎಂದಿನ ಚಾಕಚಕ್ಯತೆಯಿಂದ ಬಸ್ಸಿನ ಗಾಜಿನ ಮುಖವನ್ನು ಒರೆಸುತ್ತಿದ್ದ. ಕಂಡಕ್ಟರ್ ಬಸ್ಸಿನ ಪಕ್ಕೆಯನ್ನು ಸೀಳಿಟ್ಟಂತೆ ಡಿಕ್ಕಿಯನ್ನು ತೆರೆದು ಪ್ರಯಾಣಿಕರ ಲಗೇಜುಗಳನ್ನು ಗುರುತು ಹಾಕಿ ಒಳಕ್ಕೆ ನೂಕುತ್ತಿದ್ದ. ಆಗ ತಾನೆ ಆವರಿಸುತ್ತಿದ್ದ ಕತ್ತಲೆಗೆ ಇದ್ಯಾವುದರ ಪರಿವೆಯೂ ಇದ್ದಂತೆ ಕಾಣುತ್ತಿರಲಿಲ್ಲ. ಜಗತ್ತಿನ ಕೋಟ್ಯಂತರ ಜೀವಿ ಜಂತುಗಳ ವ್ಯವಹಾರಗಳಲ್ಲಿ ಇದೂ [...]

ವಿಪರೀತ ಮಾತನಾಡುತ್ತಿದ್ದೇನಾ ಎಂಬ ಸಂಶಯ ಮೂಡುತ್ತದೆ. ಅನೇಕ ವೇಳೆ ಆತಂಕಕ್ಕೂ ಒಳಗಾಗುತ್ತೇನೆ. ಯಾರಾದರೂ ಮುಖಕ್ಕೆ ಹೊಡೆದಂತೆ ‘ಮಾತು ಜಾಸ್ತಿ ಆಯ್ತು. ಮಾತು ಕಡಿಮೆ ಮಾಡಿ ಕೆಲಸ ಜಾಸ್ತಿ ಮಾಡಬೇಕು’ ಎಂದು ಬಿಡುವರೋ ಎಂದು ಗಾಬರಿಯಾಗುತ್ತದೆ. ಹಾಗೆ ಬೈಸಿಕೊಳ್ಳಬಾರದು ಎಂದು ಎಚ್ಚರಿಕೆ ತೆಗೆದುಕೊಳ್ಳೋಣ ಎಂದು ಯೋಚಿಸುತ್ತಾ ಕುಳಿತರೆ, ಮಾತು ಎಷ್ಟು ಆಡಬೇಕು ಎಂದು [...]

‘ಜಿಂದಗಿ’ ಇದು ಕಾಲೇಜು ಹಂತದ ಯುವ ಮನಸ್ಸಿನ ತಳಮಳ, ಗೊಂದಲ, ಆಸೆ, ಕನಸುಗಳ ಗುಚ್ಛ.

ಆಗಿನ್ನೂ ನನಗೂ ಎಲ್ಲಾ ತಿಳಿಯುತ್ತೆ ಅಂತ [...]

ಪುಟ್ಟದೊಂದು ಕಥೆ: ಸಂಶಯ

Posted by: uniquesupri on: July 28, 2008

ಪಕ್ಕದ ಮನೆಯಾಕೆ ಬೆಳಿಗ್ಗೆಯಿಂದ ಹುಡುಕಾಡುತ್ತಿದ್ದರು. ಅವರ ೨ ವರ್ಷದ ಮಗು ಹಣವಿದ್ದ ಪರ್ಸನ್ನು ಎಲ್ಲೋ ಹಾಳು ಮಾಡಿತ್ತು. ಆಟದ ಸಂಭ್ರಮದಲ್ಲಿ ಗೃಹಕೃತ್ಯದಲ್ಲಿದ್ದಾಕೆ ಆ ಹೊತ್ತಿನಲ್ಲಿ ಗಮನಿಸಲಿಲ್ಲ. ಏನನ್ನೋ ಕೊಳ್ಳಬಯಸಿದಾಗ ಆ ಬಗ್ಗೆ ಗಮನಿಸಿದ್ದರು. ಹುಡುಕಾಟ ಪ್ರಾರಂಭವಾಗಿತ್ತು. ಮನೆ ಹೊರಗೆ, ಒಳಗೆ ಎಲ್ಲಾ ಕಡೆ ಹುಡುಕಾಡಿದರೂ ಪರ್ಸು ಸಿಕ್ಕಲಿಲ್ಲ. ಅಳುತ್ತಾ ಬಂದ ಆಕೆ ಪಕ್ಕದ ಮನೆಯವರ ಸಂಗಡ ಹೇಳಿಕೊಂಡರು. ಬಡವರಾದ, ವಿಧವೆ ನರಸಮ್ಮ ಅವರ ನೆರೆಮನೆಯಾಕೆ. ತಕ್ಷಣ ಅವರೊಂದಿಗೆ ಸೇರಿ ತಾವೂ ಹುಡುಕಾಡತೊಡಗಿದ್ದರು. ಹಣದ ಬೆಲೆ ನರಸಮ್ಮ ಚೆನ್ನಾಗಿ [...]

ನಗೆ ನಗಾರಿ ಡಾಟ್ ಕಾಮ್

Posted by: uniquesupri on: July 28, 2008

ಸಾಮ್ರಾಟರ ಸಡಗರ!
ಅಂತರ್ಜಾಲದಲ್ಲಿ ನಗೆ ನಗಾರಿ ಡಾಟ್ ಕಾಮ್ ಎಂಬ ಬ್ಲಾಗನ್ನು ತೆರೆದುಕೊಂಡು ಹಾಸ್ಯದ ರಸಗವಳವನ್ನು ಉಣಬಡಿಸುವ ನಗೆ ಸಾಮ್ರಾಟರು ನಮ್ಮ ಪತ್ರಿಕೆಯ ಬಳಗಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಅವರ ಬ್ಲಾಗಿನ ಬರಹಗಳ ರಾಶಿಯಿಂದ ಯಾವ ಬರಹವನ್ನಾದರೂ ಆರಿಸಿಕೊಂಡು ಪ್ರಕಟಿಸಿಕೊಳ್ಳುವ ಸ್ವಾತಂತ್ರ್ಯವನ್ನು ನಮಗೆ ಕೊಟ್ಟುಬಿಟ್ಟಿದ್ದಾರೆ!
ಈ ಸಂಚಿಕೆಯಿಂದ ಪ್ರತಿ ತಿಂಗಳು ಎರಡು ಪುಟ ನಗೆ ಸಾಮ್ರಾಟರಿಗೆ [...]

ಹುಡ್ಗೀರೇ ಹಿಂಗೇನೋ? ಯಾವ್ದನ್ನಾದ್ರೂ ತೀರ ಹಚ್ಕೋಬಿಡ್ತಾರೆ, ಯಾವ್ದ್ರಿಂದ ಆದ್ರೂ ತೀರ ಹರ್ಟ್ ಆಗ್ಬಿಡ್ತಾರೆ! ಎಲ್ಲಾ ಹುಡ್ಗೀರೂ ಹೀಗೆ ಇರ್‍ತಾರೇನೋ ಅಥವಾ ನಾನು ಮಾತ್ರ ಹೀಗಾ ಗೊತ್ತಿಲ್ಲ. ಇಷ್ಟಕ್ಕೂ ಅಪ್ಪ ಅಂತ ಅನ್ನಬಾರದ್ದೇನೂ ಅಂದಿರಲಿಲ್ಲ. “ಗಂಡು ಮಕ್ಕಳಿದ್ದಿದ್ದರೆ ಯೋಚನೆ ಇರ್‍ತಿರ್‍ಲಿಲ್ಲ. ನನಗೆ ನನ್ನ ಎರಡನೇ ಮಗಳದೇ ಯೋಚನೆ” ಅಷ್ಟೆ ಅಪ್ಪ ಹೇಳಿದ್ದು. ಅದೂ ಅವರಿಗೆ ಒಂದು ಮೈನರ್ ಹಾರ್ಟ್ ಅಟ್ಯಾಕ್ ಆಗಿ ಆಸ್ಪತ್ರೆಲಿ ಇರ್‍ಬೇಕಾದ್ರೆ!
ಆ ಮಾತಲ್ಲಿ ಅಪ್ಪನ ಭಯ ಪ್ರೀತಿ ಕಾಳಜಿ ಎಲ್ಲಾ ತುಂಬಿತ್ತು ಆದ್ರೆ ನನಗೆ ಆಗ [...]

ಸಮಾಜದ ಯಾವುದೇ ವ್ಯಕ್ತಿಯನ್ನು ಪ್ರಶ್ನಿಸುವ ಹಕ್ಕು ಹೊಂದಿರುವುದಾಗಿ ಬೀಗುತ್ತಿದ್ದ ಸುದ್ದಿ ಮಾಧ್ಯಮಗಳು ಈಗ ತಾವೇ ಪ್ರಶ್ನೆಗೊಳಗಾಗುವಂತೆ ನಡೆದುಕೊಳ್ಳುತ್ತಿವೆ. ಸಮಾಜದ ಆಗುಹೋಗುಗಳ ಮೇಲೆ ನಿಗಾ ಇಡಬೇಕಾದ ಪತ್ರಕರ್ತರು ಜನರ ವಿಮರ್ಶೆಯ ಎಕ್ಸ್ ರೇ ಕಿರಣಗಳನ್ನು ಹಾಯಬೇಕಾದ ಪರಿಸ್ಥಿತಿ ಬಂದೊದಗಿದೆ. ಬದಲಾಗುತ್ತಿರುವ ಸಮಾಜದ ಸ್ಥಿತಿಗತಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಮಾಧ್ಯಮ ಜಗತ್ತು ಎಡವಿ ತಡವಿಕೊಂಡು ಹೆಜ್ಜೆ ಹಾಕುತ್ತಿದೆ. ಕುರುಡು ಅನುಕರಣೆಯಿಂದಾಗಿ ಅನೇಕಾನೇಕ ಅಧ್ವಾನಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಕಾವಲು ನಾಯಿಯ ನಿಯತ್ತಿನ ಮೇಲೆಯೇ ಸಂಶಯದ ತೂಗು ಕತ್ತಿ ನೇತಾಡುತ್ತಿದೆ. ಈ ಸಂದರ್ಭದಲ್ಲಿ ಡಿ.ವಿ.ಜಿಯವರು [...]


Blog Stats

  • 13,245 hits

 

November 2009
M T W T F S S
« Aug    
 1
2345678
9101112131415
16171819202122
23242526272829
30