Posted by: ರಂಜಿತ್ on: July 7, 2009
- ರಂಜಿತ್ ಅಡಿಗ, ಕುಂದಾಪುರ
ಅವತ್ತು ನೀ ಹಾಗೆ ಬೆನ್ನು ತೋರಿ ಹೊರಡುವಾಗ ನಿನ್ನ ಕಣ್ಣು ನೋಡಬೇಕೆನ್ನಿಸಿತ್ತು ಕಣೇ. ಪ್ರೀತಿಯಿಂದ ತುಳುಕುತಿದ್ದ ಕಣ್ಣ ಭಾವವನ್ನಷ್ಟೇ ಸವಿದು ಅಭ್ಯಾಸವಾಗಿಬಿಟ್ಟಿತ್ತಲ್ಲ; ಮೋಸದ ಕಹಿಯೂ ಅರಿವಾಗಬೇಕಿತ್ತು. ಮೊದಲು ನನ್ನ ಕಂಡೊಡನೆ ತಾರೆಯಂತೆ ಜಗಮಗಿಸುತ್ತಿದ್ದ ಕಣ್ಣುಗಳಲ್ಲಿ ಈ ಬಗೆಯ ನಿರ್ಲಕ್ಷ್ಯ, ’ನಿನ್ನ ಬದುಕು ನಿನಗೆ; ಎಲ್ಲೋ ಹೇಗೋ ಬದುಕಿಕೊಂಡು ಸಾಯಿ’ ಅನ್ನುವಂಥ ದ್ವೇಷ ಹೇಗೆ ಧಗಧಗಿಸುತ್ತದೆ ಎಂದಾದರೂ ಕಾಣಬೇಕಿತ್ತು.
ಅದರಿಂದಲಾದರೂ ನಿನ್ನ ಮೇಲೊಂದಿಷ್ಟು ಸಿಟ್ಟು ಹುಟ್ಟಿ ನಿನ್ನ ಮರೆಯಲು ಸುಲಭವಾಗುತಿತ್ತಲ್ಲವೇ? ಈ ಪರಿ ರಾತ್ರಿಗಳನ್ನು, [...]
Posted by: uniquesupri on: November 13, 2008
ಪ್ರಿಯ ಆತ್ಮಬಂಧು,
ಹೌದು ನಿನ್ನ ಹೀಗಂತ ಮಾತ್ರ ಕರೆಯಲು ಸಾಧ್ಯ. ಒಮ್ಮೆ ಹೀಗೆ ಕರೆದುಬಿಟ್ಟ ನಂತರ ನನ್ನಲ್ಲಿ ಅದೆಷ್ಟು ನಿರಾಳತೆ ಆವರಿಸಿಕೊಂಡಿದೆ ಎಂಬುದು ನಿನಗೆ ತಿಳಿಯುವುದಿಲ್ಲ. ಇಷ್ಟು ವರ್ಷಗಳಲ್ಲಿ ನಾನು ನಿನ್ನಲ್ಲಿ ಹುಡುಕುತ್ತಿದ್ದದ್ದು ಏನನ್ನು ಎನ್ನುವುದು ತಿಳಿಯದೆ ಗೊಂದಲಗೊಂಡಿದ್ದೆ, ಕ್ಷಣಕ್ಷಣವೂ ಮುಂದೆ ಏನಾಗುವುದೋ ಎಂಬ ಆತಂಕದಲ್ಲೇ ನಾನು ನನ್ನ ಎಂ.ಬಿ.ಬಿ.ಎಸ್ ಮುಗಿಸಿದೆ. ರಾತ್ರಿ ಕಳೆದು ಹಗಲಾಗುವುದರೊಳಗೆ ನನ್ನ ನಿನ್ನ ನಡುವಿನ ಸಂಬಂಧ ಯಾವ ರೂಪವನ್ನು ತಳೆದು ಕಣ್ಣ ಮುಂದೆ ಎದ್ದು ನಿಂತು ಬಿಡುವುದೋ ಎಂಬ ಕಳವಳದಲ್ಲಿ ರಾತ್ರಿಗಳನ್ನು ತಳ್ಳುತ್ತಿದ್ದೆ. [...]
Posted by: uniquesupri on: October 1, 2008
(ಕಳೆದ ಸಂಚಿಕೆಯಿಂದ….)
‘ನಾನಾಗಿಯೇ ಮೇಲೆ ಬಿದ್ದು ಮಾತನಾಡಿಸಲು ಹೋದರೆ ಹುಡುಗೀರು ನನ್ನನ್ನು ಚೀಪ್ ಅಂತ ನೋಡುವುದಿಲ್ಲವಾ? ನನ್ನ ಗೆಳೆಯರನೇಕರು ಹಾಗೆ ಮಾಡುವುದನ್ನು ನೋಡಿದ್ದೇನೆ. ನನಗೇ ಅವರು ಜೊಲ್ಲು ಪಾರ್ಟಿಗಳ ಹಾಗೆ ಕಾಣಿಸಿಬಿಡುತ್ತಾರೆ. ಇನ್ನು ಹುಡುಗಿಯರು ಅವರನ್ನು ಹೇಗೆ ಕಾಣಬಹುದು ಅಲ್ಲವಾ? ಅದಕ್ಕೇ ನಾನಾಗಿ ಯಾವ ಹುಡುಗಿಯನ್ನೂ ಮಾತನಾಡಿಸುವುದಿಲ್ಲ, ಎಲ್ಲಾದರೂ ಮಾತನಾಡುವ ಅವಕಾಶ ಸಿಕ್ಕರೂ ತೀರಾ ಚುಟುಕಾಗಿ, ಎಲ್ಲೂ ನನ್ನ ಆತ್ಮಾಭಿಮಾನಕ್ಕೆ ಧಕ್ಕೆಯಾಗದ ಹಾಗೆ, ಆಕೆ ಬೇರೇನನ್ನೂ ಕಲ್ಪಿಸಿಕೊಳ್ಳದ ಹಾಗೆ, ಅಸಲಿಗೆ ಇಬ್ಬರ ನಡುವೆ ಯಾವುದಾದರೂ ಸೆಳೆತಕ್ಕೆ ಆಸ್ಪದವನ್ನೂ ಕೊಡದ [...]
Posted by: uniquesupri on: July 31, 2008
ಗುರುವಿನಂಥ ಗೆಳತಿಯೇ,
‘ಹುಡುಗಿಯರ ಜತೆ ಮಾತಾಡುವುದು ಅಂದರೇನೆ ನನಗೆ ಅಲರ್ಜಿ’, ಒಂದೇ ಮಾತಲ್ಲಿ ಹೇಳಿ ಬಿಟ್ಟಿದ್ದೆ ನಾನು. ನೀನು ಜೋರಾಗಿ ನಗುತ್ತಿದ್ದದ್ದು ನನ್ನ ರೂಂ ಮೇಟ್‌ಗೂ ಕೇಳಿತ್ತು.
‘ಹಾಗಾದರೆ ನನ್ನ ಜೊತೆಗೆ ಮಾತಾಡ್ತಿದ್ದೀಯಲ್ಲ?’ ಅದು ಮಾತೋ, ನಿನ್ನ ನಗುವೇ ಹೊರಡಿಸಿದ ಅರ್ಥವೋ ತಿಳಿಯದೆ ನಾನು ಅರೆಕ್ಷಣ ಮೌನವಾಗಿದ್ದೆ.
‘ಹುಚ್ಚಪ್ಪ, ಹುಡುಗೀರೇನು ಬೇರೆ ಗ್ರಹದಿಂದ ಇಳಿದು ಬಂದವರಲ್ಲ. ಅವರೂ ನಿನ್ನ ಹಾಗೇ ಮನುಷ್ಯರು. ದೇವರು ಎಲ್ಲಾ ಗುಣಗಳು ಇರುವ ಒಂದೇ ಜಾತಿಯ ಮನುಷ್ಯರನ್ನು ಸೃಷ್ಠಿ ಮಾಡಿಬಿಟ್ಟರೆ ಅವರಿಗೆ ಒಬ್ಬರಲ್ಲೊಬ್ಬರಿಗೆ ಆಸಕ್ತಿಯೇ ಹುಟ್ಟುವುದಿಲ್ಲ ಅನ್ನೋ [...]
Posted by: uniquesupri on: April 24, 2008
ಕಳೆದ ಸಂಚಿಕೆಯಿಂದ ಮುಂದುವರೆದದ್ದು…
ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ನಿನ್ನ ನನ್ನ ಸಂಬಂಧದ ಹಸಿ ಮಣ್ಣಿನಲ್ಲಿ ಚಿಗುರೊಡೆದಿದ್ದ ಪರಿಚಿತತೆ ಎಂಬ ಹುಲ್ಲಿನ ಎಸಳಿಗೆ ಹೆಸರನ್ನಿಟ್ಟುಬಿಡುವ ನಿನ್ನ ಉದ್ವೇಗ ಕಂಡು ನನಗೆ ನಿಜಕ್ಕೂ ದಿಗಿಲಾಗಿತ್ತು. ನಿನ್ನೊಂದಿಗೆ ನಾನು ಲ್ಯಾಬಿನಲ್ಲಿ, ಲಂಚ್ ಟೈಮಿನ ಹರಟೆಯಲ್ಲಿ, ಅಪರೂಪದ ಕಂಬೈನ್ಡ್ ಸ್ಟಡಿಯಲ್ಲಿ ಕಳೆಯುತ್ತಿದ್ದ ಸಮಯದಲ್ಲಿ ನಮ್ಮಿಬ್ಬರ ಮಧ್ಯೆ ಆವರಿಸಿಕೊಳ್ಳುತ್ತಿದ್ದ ಆಹ್ಲಾದವಿದೆಯಲ್ಲಾ, ಅದನ್ನು ನಾನು ಇಂದಿಗೂ ಅನುಭವಿಸಲು ಹಪಹಪಿಸುತ್ತೇನೆ. ಆ ದಿನಗಳಲ್ಲಿ ನಿನ್ನ ಜೊತೆಗೆ ಇರುವಾಗ ಯಾರೇನಂದುಕೊಳ್ಳುವರೋ ಎನ್ನುವ ಭಯವಿತ್ತೇ ವಿನಃ ನೀನು ನನ್ನ ಬಗ್ಗೆ ಏನಂದುಕೊಳ್ಳುವಿಯೋ ಎಂಬ [...]
Posted by: uniquesupri on: February 25, 2008
ಆತ್ಮೀಯ ಗೆಳೆಯಾ,
ಇನ್ನೇನಂಥ ಕರೆಯಲಿ ನಿನ್ನ? ನಮ್ಮ ಸಂಬಧಕ್ಕೆ ಇದಕ್ಕಿಂತ ಸೂಕ್ತವಾದ ಯಾವ ಹೆಸರನ್ನು ತಾನೆ ಇಡಲು ಸಾಧ್ಯ? ಹೀಗೆ ಸಂಬಂಧಗಳಿಗೆ ಹೆಸರಿಡುವ ಚಾಳಿಗೆ ಏನನ್ನ ಬೇಕು? ಎಲ್ಲಕ್ಕೂ ನಾವು ಹೆಸರಿಟ್ಟು, ಚೌಕಟ್ಟು ಹಾಕಿ ಹರಿವನ್ನು ನಿಲ್ಲಿಸಿಬಿಡಲು ಏಕೆ ಹವಣಿಸುತ್ತೇವೆ? ಕಣ್ಣೆದುರು ಇರುವ ನಿತ್ಯ ಹಸಿರಾದ ಜೀವನಕ್ಕಿಂತ ನಮಗೆ ಚೌಕಟ್ಟು ಹಾಕಿರಿಸಿದ ಫೋಟೊ ಏಕೆ ಇಷ್ಟವಾಗುತ್ತೆ? ಸದಾ ಹರಿಯುತ್ತಲೇ, ಸದಾ ಬದಲಾಗುತ್ತಲೇ ಇರುವ ನೀರಿನ ಹರಿವಿಗೆ ನದಿ ಅಂತ ಹೆಸರಿಟ್ಟು ಬಿಡಬಹುದೇ? ಮರ ಅಂತ ನಾವು ಕರೆದ ಭೌತಿಕ [...]
Recent Comments