Posted by: ರಂಜಿತ್ on: June 30, 2009
- ಹೇಮಾ ಪವಾರ್, ಬೆಂಗಳೂರು.
ಆತ್ಮಕತೆಗಳಲ್ಲಿ ಇರುವುದೆಲ್ಲವೂ ಸತ್ಯವಾ? ಸುಳ್ಳಾದರೂ ಅದನ್ನು ಪರೀಕ್ಷಿಸಲು ಬರದು
ಅಲ್ಲವೇ? ಅದೇಕೋ ಈ ಪ್ರಶ್ನೆ ತಲೆಯನ್ನು ಹೊಕ್ಕಿ ಕುಂತಿತು. ಇಷ್ಟಕ್ಕು ಒಬ್ಬ ಮನುಷ್ಯ
ತನ್ನ ಆತ್ಮಕತೆಯಲ್ಲಿ ಸತ್ಯವನ್ನೇ ನುಡಿಯಬೇಕೆಂದು ಅಪೇಕ್ಷಿಸುವುದೇ ದೊಡ್ಡ ಮೂರ್ಖತನ.
ಸತ್ಯಕ್ಕೊಂದು ಪರಿಧಿ ಹಾಕಿ ಇದರಾಚೆಗಿನದೆಲ್ಲ ಸುಳ್ಳು ಎಂದು ಹೇಳಲು ಬರುವುದೇ?
ಘಟನೆಗಳು, ಅನುಭವಗಳು, ದಾಖಲಾಗುತ್ತವೆ. ಅದರ ಸತ್ಯಾಸತ್ಯತೆ ಬರೆದವರನ್ನು ಕಾಡುತ್ತದೆ.
ಆತ್ಮಸಾಕ್ಷಿಗೆ ಹೆದರುವವರೆಲ್ಲರು ಸತ್ಯವನ್ನೇ ದಾಖಲಿಸುತ್ತಾರೆ ಎಂಬ ಮಾತುಗಳೆಲ್ಲ
ಎಷ್ಟು ಸಿನಿಕವೆನ್ನಿಸತೊಡಗಿತು. ಒಂದು ಘಟನೆಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ
ತನ್ನದೇ ಅಭಿಪ್ರಾಯಗಳನ್ನು ಹೊಂದಿರುತ್ತಾನೆ, ಅದೂ ಅವನವೇ ಎಂಬುದಕ್ಕೆ ಏನು ಸಾಕ್ಷಿ
ತಂದುಕೊಡಬಲ್ಲ? [...]
Posted by: ರಂಜಿತ್ on: June 27, 2009
- ಜ್ಞಾನಮೂರ್ತಿ, ಬೆಂಗಳೂರು.
ನಿನ್ನ ಒಳ ಜಗತ್ತಿನಲ್ಲೆಲ್ಲ ಮೂಡಿರುವ ನನ್ನುಸಿರ
ಹೆಜ್ಜೆಗಳು
ಆತನ ಸ್ಪರ್ಶಕ್ಕೆ ಮಾಸುವ ಮುನ್ನ ನೋವ
ಪೆಟ್ಟಿಗೆಯಲ್ಲಿ ಬಚ್ಚಿಟ್ಟುಕೋ
ಏಕಾಂತದಿ ನನ್ನ ಜೊತೆ ಮಿಂದು ಬಂದ
ಮನಸ್ಸನ್ನು
ಸಪ್ಪಳವಿಲ್ಲದೆ ಒಳಕರೆದುಕೋ
ಆತ ಎಚ್ಚರವಾಗುವ ಮುನ್ನ ಮನಸ್ಸಿನ
ಮೈತೊಳೆದು
ಹೊಸ ಬಟ್ಟೆ ತೊಡಿಸಿಬಿಡು
ನನ್ನ ನೆನಪುಗಳ ನಿನ್ನ ಮಗುವಿನ
ಆಟಿಕೆಗಳಾಗಿಸುವುದಾದರೆ
ಅವುಗಳೆಲ್ಲ ಆತನ ಕಾಲ್ತುಳಿತಕ್ಕೆ ಸಿಗದಂತೆ
ಎಚ್ಚರವಹಿಸು!
ನಿನ್ನೊಳಗಣ ನನ್ನ ನೆನಪ ಮೊಟ್ಟೆಗಳಿಗೆ
ಕಾವುಕೊಡುವುದ
ನಿಲ್ಲಿಸಿಬಿಡು
ಇಲ್ಲವಾದರೆ ಮೊಟ್ಟೆಯೊಡೆದ ಜೀವಗಳು ಆತನಿಗೆ
ಸತ್ಯ ಹೇಳಿಬಿಟ್ಟಾವು!
ಹರಿದ ನನ್ನ ನೆನಪುಗಳ ನೀ ಹೊಲೆಯುವಾಗ
ಆತ
ಸೂಜಿಮೊನೆಯಾಗಿ ಚುಚುತ್ತಾನೆ
ಈ ನೋವಲ್ಲೂ ನಾನು ನಿನ್ನ ಕೈ ಕೌದಿಯಾಗಿ
ಅರಳುತ್ತೇನೆ!
Posted by: ರಂಜಿತ್ on: June 25, 2009
- ನೂತನ್ ಹೆಚ್. ಬಿ., ಹಾಲಾಡಿ.
ಬೇರಿನಲ್ಲಿ ಬುತ್ತಿ ಕಟ್ಟಿಟ್ಟಿದ್ದಳು ಅಮ್ಮ
ಮರಕೆಲ್ಲಿ ಗೊತ್ತು?
ಎಲ್ಲಿಂದಲೋ ಬಂದ ರವಿಕಿರಣಕ್ಕೆ
ಮುಖ ಮಾಡಿತ್ತು!
ಮೈ ಎಲ್ಲ ಮನಮಾಡಿ ಹಸಿರುಗನಸುಗಳ ಹೊತ್ತು
ಮಂದ ಮಾರುತಕ್ಕೆ ಮೈಯ್ಯ ಮರೆತಿತ್ತು!
ಬಳುಕುವ ಬಳ್ಳಿಗೆ ಸೋತು ಅಪ್ಪಿ ಬೆಳೆದಿತ್ತು!
ಬಣ್ಣ ಬಣ್ಣಗಳ ಹಕ್ಕಿಗಳ ಸಂಸಾರ ಮೈಎಲ್ಲಾ ಹೊತ್ತು
ತಾನೊಬ್ಬನೆ ಆಕಾಶಕ್ಕೇಣಿಯಾಗುವವನೆಂದು
ಉಬ್ಬಿ ನಿಂತಿತ್ತು!
ಆಗಸವೂ ಸಿಗದೆ ಅಳುಕಿ ತಡಕಾಡಿ
ಬೇರೂ ಸಿಗದೇ ಬುತ್ತಿಯೂ ಸಿಗದೆ ಕಂಗಾಲಾಗಿತ್ತು!
ಮತ್ತೆ ಬೇರನ್ನರಸಿ ಕೆಳಗಿಳಿದಿತ್ತು!
ತಾನು ತಂದಿದ್ದ ಬುತ್ತಿ ಗೆದ್ದಲ ಗೂಡಿನಲ್ಲಿ ಜೀರ್ಣವಾಗಿತ್ತು
ಬೇರುಗಳ ಸಂಧಿಯಲ್ಲಿ ಎಲ್ಲೋ ಹಣ್ಣಾಗಿದ್ದ ಈಗ
ಮಣ್ಣಾಗಿದ್ದ ಅದರಮ್ಮ ಹೇಳಿದ್ದು
ಆತ್ಮರತಿಗೆ ಮಾತ್ರ ಕೇಳುವಂತಿತ್ತು;
’ಮಗುವೇ, ನೀನಿನ್ನೂ ಬೆಳೆಯಬೇಕಿತ್ತು!’
Posted by: ರಂಜಿತ್ on: June 23, 2009
-ಹೇಮಾ ಪವಾರ್, ಬೆಂಗಳೂರು.
ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ. ಕಳೆದ ಎರೆಡು ತಿಂಗಳಿಂದ ಒಂದಾದ ಮೇಲೊಂದು
ಓದುತ್ತಲೇ, ಇನ್ನು ಹೆಚ್ಚು ಹೆಚ್ಚು ಆತ್ಮಕತೆಗಳನ್ನೇ ಓದಬೇಕೆನಿಸಿದೆ. ಒಬ್ಬ
ವ್ಯಕ್ತಿಯು ಪ್ರಾಮಾಣಿಕವಾಗಿ ತನ್ನ ಬಗ್ಗೆ ಎಲ್ಲವನ್ನು ಬರೆದುಕೊಳ್ಳಬಲ್ಲನೆ?
ನನ್ನನ್ನು ಕಾಡಿದ ಪ್ರಶ್ನೆ ಇದು. ಆತ್ಮಕತೆ ಬರೆಯುತ್ತಿರುವವರಿಗೆ ತಮ್ಮ ಬಗ್ಗೆ
ಎಲ್ಲವನ್ನೂ ಹೇಳಿಕೊಳ್ಳಲೇಬೇಕೆಂಬ ಉಮೇದು ಉಂಟಾಗುತ್ತದೆ ಹಾಗು ಹೇಳದೆ ಹೋದರೆ ಅದೊಂದು
ತರಹದ ಚಡಪಡಿಕೆ ಮತ್ತು ಕೃತಿ ಅಪೂರ್ಣವೆಂಬ ಭಾವ ಮತ್ತೆ ಮತ್ತೆ ಕಾಡುತ್ತದೆ ಎಂಬುದು
ಆತ್ಮಕತೆಗಳ ಓದಿನಲ್ಲಿ ನಾನು ಕಂಡುಕೊಂಡ ಸತ್ಯ. ಒಬ್ಬ ವ್ಯಕ್ತಿಯ ಜೀವನದ ಘಟನೆಗಳು,
ಅದಕ್ಕೆ ಆತನು ಸ್ಪಂದಿಸಿದ ರೀತಿ, [...]
Posted by: ರಂಜಿತ್ on: June 22, 2009
-ರಂಜಿತ್ ಅಡಿಗ, ಕುಂದಾಪುರ
“ಕೊಡುವುದು ಬೇಡ ಜೀವಕ್ಕೆ ಜೀವ
ಹಂಚಿಕೊಂಡರೆ ಸಾಕು ನನ್ನೊಡಲ ನೋವ”
ಎಲ್ಲ ಸಂಬಂಧಗಳೂ ಏನನ್ನಾದರೂ ಬೇಡುತ್ತವೆ. ಆದರೆ ಸ್ನೇಹ ಎಂಬ ಬಗೆಯ ಸಂಬಂಧ ಮಾತ್ರ ವಿಶಿಷ್ಟವಾದದ್ದು. ಜೊತೆಗೆ ಅಚ್ಚರಿ ಉಂಟುಮಾಡುವಂತದ್ದು ಕೂಡ. ಅದಕ್ಕೆ ರಕ್ತ ಸಂಬಂಧವಿರಬೇಕಾದ್ದಿಲ್ಲ. ತಂದೆ-ತಾಯಿಯೊಡನೆ ಮಕ್ಕಳಿಗಿರಬೇಕಾದ ಭಯ-ಭಕ್ತಿ ಬೇಡ. ಗಂಡನ ಕಿರಿಕಿರಿ ಸಹಿಸುವ ಹೆಂಡತಿಯ ಸಹನೆ ಬೇಕಿಲ್ಲ. ಸ್ನೇಹಕ್ಕೆ ಬೇಕಾದ್ದು ರಹಸ್ಯಗಳಿಲ್ಲದ ಮುಕ್ತ ಮತ್ತು ಶುದ್ಧ ಮನಸ್ಸು. ಜತೆಗೆ ಬೊಗಸೆ ಪ್ರೀತಿ. ಇವಿಷ್ಟಿದ್ದರೆ ಸ್ನೇಹಕ್ಕೆ ಸಲ್ಲುವ ಸಮಯ ಸಹ್ಯ. ಅರಿವಾಗದೇ ನೋವುಗಳೆಲ್ಲ ಮಾಯ. ಸುಖ-ದುಃಖ [...]
Posted by: ರಂಜಿತ್ on: June 20, 2009
-ರೂಪಾ ಸತೀಶ್, ಬೆಂಗಳೂರು.
ಜೀವತಾಣದ ಜನಜಾತ್ರೆಯ ನಡುವೆ
ಕಳೆದು ಅಳೆದು ಪ್ರತಿ ಘಳಿಗೆ,
ವಿರಸದ ಏರಿಳಿತಗಳಲ್ಲಿ ಬೇಸತ್ತು ಬಡವಾಗಿದ್ದರು ಮನ….
ಜಿನುಗುತಿರಲಿ ಬಾಳೆಂಬ ಚಿಮ್ಮುವ ಚೇತನ !!
ಬಯಸಿ ಬಯಸದೆಯೋ ಹೃದಯಗಳಿಗೆ
ಆಗಿ ಹೋಗುವ ನಿಶ್ಚಿತ ಪೆಟ್ಟು ಕಲೆಗಳು,
ಅಗ್ನಿಕುಂಡದ ನೋವನ್ನು ನುಂಗಿ ಬೆಂದರು ಜೀವ….
ಬೆಳಗುತಿರಲಿ ಬಾಳೆಂಬ ಹುರಿದುಂಬಿದ ಚೇತನ !!
ಬದುಕಿನ ಲೆಕ್ಕಾಚಾರಗಳು ತಲೆಕೆಳಗಾಗುತ್ತ
ಬವಣೆಗಳನ್ನರಿತ ಗಣಿತಶಾಸ್ತ್ರಜ್ಞ ಮೇಲೆ ಕುಂತು ನೋಡುತ್ತಾ,
ನಿನ್ನ ಗಣನೆ ತಪ್ಪು ತಪ್ಪು ಎಂದು ಪ್ರತೀಸಾರಿ ಸಾರಿದರೂ….
ಆರದಿರಲಿ ಬಾಳೆಂಬ ಪ್ರಜ್ವಲಿತ ಚೇತನ !!
ತುಳಿದು ಅಳಿದು ಹೊಸಕಿಹಾಕುವ ಮಾತುಗಳ ಗಾಣ
ಹರಿದು ಒಗೆದು ಜಡಿದುಹಾಕುವ ಮನುಜಕುಲದ ತಾಣ,
ಅಲ್ಲಲ್ಲಿ ಬೀಳುವ [...]
Posted by: ರಂಜಿತ್ on: June 19, 2009
-ಹೇಮಾ ಪವಾರ್ , ಬೆಂಗಳೂರು.
ಮನಸು ಹೇಳಬಯಸಿದೆ ನೂರೊಂದು,
ತುಟಿಯ ಮೇಲೆ ಬಾರದಿದೆ ಮಾತೊಂದು,
ವಿದಾಯ ಗೆಳಯನೆ, ವಿದಾಯ ಗೆಳತಿಯೆ
ವಿದಾಯ ಹೇಳಬಂದಿರುವೆ ನಾನಿಂದು!
ಮತ್ತೊಮ್ಮೆ ಈ ಹಾಡು ಪದೇ ಪದೇ ನೆನಪಾಗುತ್ತಿದೆ. ಮೊದಲ ಬಾರಿಗೆ ಶಾಲೆಯಲ್ಲಿ
ಕೇಳಿದ್ದೆ, ಅವತ್ತು ನಮಗೆ ಅಂದರೆ ಆ ವರ್ಶದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸೆಂಡ್
ಆಫ್ ಕಾರ್ಯಕ್ರಮವಿತ್ತು. ಶಾಲೆಯ ಜೀವನ ಮುಗಿಯ ಹೊರಟಿತ್ತು, ಕಾಲೇಜಿನ ಬಣ್ಣಬಣ್ಣದ
ಬದುಕು ಆ ಕಡೆ ನಿಂತು ಕೈ ಬೀಸಿ ಕರೆಯುತಿತ್ತು. ಎಷ್ಟೇ ಪ್ರಭುದ್ದವಾಗಿ ಆಲೋಚಿಸಿದರೂ,
ಸ್ಕೂಲ್ ಯುನಿಫಾರಂನಲ್ಲಿದ್ದರೆ ನಾವು ಚಿಕ್ಕವರೆಂದೇ ದೊಡ್ಡವರ (?) ಅಭಿಪ್ರಾಯ.
ದಿನಕ್ಕೊಂದು ಬಣ್ಣದ ಬಟ್ಟೆ, [...]
Posted by: uniquesupri on: June 17, 2009
ಹಾಗೆ ನೋಡಿದರೆ ಬೇಸರಿಸಿಕೊಳ್ಳಲು ಕಾರಣಗಳೇ ಬೇಕಿಲ್ಲ. ಬೆಳಿಗ್ಗೆ ಹಾಲಿನವನು ಬರದೇ ರಜೆ ಹಾಕಿದರೂ ಮನಸ್ಸು ಮುದುಡುತ್ತದೆ.ಗೋಡೆಗೆ ನೇತು ಹಾಕಿದ ಕ್ಯಾಲೆಂಡರ್ ನ್ನು ಕಂಡರೂ ಸಾಕು, ಇಷ್ಟು ವಯಸ್ಸಾದರೂ ಎನೂ ಸಾಧಿಸದೇ ಹೋದೆನಲ್ಲಾ ಎಂಬುದು ಕೂಡ ಸಾಕು ಮನಸ್ಸು ಬೇಸರಿಸಿ ಮನದ ಚಿಪ್ಪೊಳಗೆ ಅವಿತು ಕುಳಿತುಕೊಳ್ಳಲು!
ಈ ಥರದ ಬೇಸರದ ಗಳಿಗೆಗಳು ಬಹುಶಃ ಪ್ರತಿ ವರುಷದ ಹುಟ್ಟುಹಬ್ಬದ ದಿನ ತಪ್ಪದೇ ಕಾಡುತ್ತದೆ. [...]
Posted by: uniquesupri on: June 15, 2009
ಕಣ್ಣು ಮಿಟುಕಿಸದೆ
ಆಂತರಿಕ ಯುದ್ಧಗಳಲ್ಲಿ ತೊಡಗಿದ್ದ ಜಪಾನಿನಲ್ಲಿ ಸೈನ್ಯ ಊರೊಂದಕ್ಕೆ ನುಗ್ಗಿದರೆ ಕೈಗೆ ಸಿಕ್ಕವರನ್ನೆಲ್ಲ ಕೊಂದು ಊರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದರು. ಆ ಒಂದು ಹಳ್ಳಿಯಲ್ಲಿನ ಜನರು ಸೈನ್ಯ ಆಕ್ರಮಣ ಮಾಡುವ ಮುನ್ನವೇ ತಮ್ಮ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ಪಲಾಯನ ಗೈದಿದ್ದರು.
ಹಳ್ಳಿಗೆ ದಾಳಿಯಿಟ್ಟ ಸೈನ್ಯಕ್ಕೆ ಬರಿದಾದ ಮನೆಗಳು, ಮಾರುಕಟ್ಟೆಗಳು ಕಂಡವು. ಆದರೆ ಒಂದು ವಿಹಾರದಲ್ಲಿ ವಯಸ್ಸಾದ ಒಬ್ಬ ಝೆನ್ ಗುರು ಮಾತ್ರ ಉಳಿದಿದ್ದ. ಆ ವೃದ್ಧ ಗುರುವಿನ ಬಗ್ಗೆ ಕುತೂಹಲ ಉಂಟಾಗಿ ಸೈನ್ಯದ ದಂಡನಾಯಕ [...]
Posted by: uniquesupri on: June 15, 2009
‘ಜಟಾಯು’, ಬೆಂಗಳೂರು
ಅವಳನ್ನು ನೋಡಲು ತುಂಬಾ ಹುಡುಗರು ಬರುತ್ತಿರುತ್ತಾರೆ.ಆದರೆ ಯಾರೂ ಅವಳನ್ನು ಒಪ್ಪುತ್ತಿರಲಿಲ್ಲ. ಅವಳಲ್ಲಿ ಹಣವಿಲ್ಲವೆಂದಲ್ಲ. ಅವಳ ಮೊಮ್ಮಗನೂ ತಿಂದು ತೇಗುವಷ್ಟು ಆಸ್ತಿಯಿದೆ. ಹಾಗಾದರೆ ಅವಳು ಸೌಂದರ್ಯವತಿಯಲ್ಲವೇ? ಕುರೂಪಿಯೇ? ಉಹೂಂ.. ಪದ್ಮಿನಿ ಜಾತಿಯ ಹುಡುಗಿ; ಸ್ವಂತ ಕಣ್ಣು ಬೀಳಬೇಕು ಅಂಥ ಸ್ಪುರದ್ರೂಪಿ ಹೆಣ್ಣವಳು. ಅದೂ ಅಲ್ಲವಾದರೆ, ಸಿನೆಮಾದಲ್ಲಿ ತೋರಿಸುವಂತೆ " ಹಣವಂತರೆಲ್ಲಾ ಗುಣವಿರುವವರಲ್ಲ" ಎಂದುಕೊಂಡು ಕೆಟ್ಟವಳಿರಬೇಕು ಅಂತ ಊಹಿಸುವುದಾದರೆ ಅದೂ ನಿಜವಲ್ಲ. ಅವಳು ಒಳ್ಳೆಯವಳೇ. ಅವಳಿಗಿರುವ ಒಂದೇ ಕೆಟ್ಟ(?) ಗುಣವೆಂದರೆ ನಿರೀಕ್ಷೆ! [...]
Recent Comments