ಕಲರವ

Archive for May 2009

ಇದು ಯುವ ಮನಸ್ಸಿನ ‘ಕಲರವ’!

Posted by: uniquesupri on: May 29, 2009

ಪ್ರತಿ ತಿಂಗಳು ‘ಸಡಗರ’ ಎಂಬ ಹೆಸರಿನಲ್ಲಿ ಮುದ್ದಾಗಿ ಮುದ್ರಣ ಕಂಡು ಹೊರ ಬರುತ್ತಿದ್ದ ನಮ್ಮ ನಾನಾ ಸಾಹಸ, ತುಂಟತನ, ಕ್ರಿಯೇಟಿವಿಟಿ, ತೆವಲುಗಳು ಇನ್ನು ಮುಂದೆ ಎಲೆಕ್ಟ್ರಾನ್ ಹರಿವಿನಲ್ಲಿ ಲೀನವಾಗಿ ಈ ಬ್ಲಾಗಿನಲ್ಲಿ ಬೆಳಕು ಕಾಣಲಿವೆ. ಜೂನ್ ಒಂದರಿಂದ ಪೂರ್ಣ ಪ್ರಮಾಣದಲ್ಲಿ ‘ಕಲರವ’ ಬ್ಲಾಗು ಅರಳಿಕೊಳ್ಳಲಿದೆ. ಎಂದೂ ತೀರದ ನಮ್ಮ ಅಕ್ಷರದ ಮೋಹಕ್ಕೆ ಈ ಬ್ಲಾಗು ಒಂದು ಸಣ್ಣ ಸಮಾಧಾನವನ್ನು ನೀಡುತ್ತದೆ ಎನ್ನುವುದು ನಮ್ಮ ನಂಬಿಕೆ.
ಈ ಯುವ ಮನಸುಗಳ ‘ಕಲರವ’ಕ್ಕೆ ಕಿವಿಗೊಡದಷ್ಟು ನಿಷ್ಕರುಣಿಗಳು ನೀವಲ್ಲ ಎಂಬುದೂ ನಮಗೆ ತಿಳಿದಿದೆ.
- [...]

- ಇಂಚರ, ಬೆಂಗಳೂರು

ನನ್ನ ಮನಸ್ಸಿಗೆ ತಟ್ಟಿದ ಸಿನೆಮಾದ ಬಗ್ಗೆ ಯೋಚನೆ ಮಾಡುತ್ತಿದ್ದಾಗ, ನೆನಪಾಗಿದ್ದು ‘ರಾಮಚಂದ್ ಪಾಕಿಸ್ತಾನಿ’.  ಮೆಹ್ರೀನ್ ಜಬ್ಬಾರ್ ಎಂಬ ಪಾಕಿಸ್ತಾನಿ ನಿರ್ದೇಶಕಿ ನಿರ್ದೇಶಿಸಿರುವ ಚಿತ್ರ.     ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ವಾಸವಾಗಿರುವ ಒಂದು ಅಲೆಮಾರಿ ಹಿಂದೂ ಕುಟುಂಬದ ಕಥೆ ಇದು. ಗಡಿಭಾಗದಲ್ಲಿ ಇವರ ನೋವುನಲಿವು, ಸ್ಥಿತಿಗತಿಗಳನ್ನು ಬಹಳ ಮನೋಜ್ಣವಾಗಿ, ಹೃದಯಸ್ಪರ್ಶಿಯಾಗುವಂತೆ ಚಿತ್ರಿಸಿದ್ದಾರೆ. ಅಮ್ಮ ನ   ಮೇಲೆ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ೭ ವರ್ಷದ ಬಾಲಕನು(ರಾಮಚಂದ್) ಮನೆಯಿಂದ ಹೊರಗೆ ಹೋಗುತ್ತಾನೆ. ಕೈಯಲ್ಲಿ ಕ್ಯಾಟರ್ ಪಿಲ್ಲರ್ ಹಿಡಿದ [...]

- ರಂಜಿತ್ ಅಡಿಗ, ಕುಂದಾಪುರ

ಅಪ್ಪನ ಬೈಗುಳ ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಕಾರಣ ಚಿಕ್ಕದು, ಅಕ್ಕನಿಂದ ಪತ್ರ ಬಂದಿತ್ತು ಅಕ್ಕನೆಂದರೆ ನನ್ನ ಪಾಲಿಗಂತೂ ದೊಡ್ಡ ಧೈರ್ಯಸ್ಥೆ! ಅಷ್ಟುವರ್ಷ ಪ್ರೀತಿಯಿಂದ ಸಾಕಿದ ಅಪ್ಪನನ್ನು ಧಿಕ್ಕರಿಸಿ ಯಾವುದೋ ಹುಡುಗನ ಪ್ರೀತಿಯ ಮಾಯಾಮೃಗಕ್ಕೆ ಆಸೆಪಟ್ಟು, ಕಟ್ಟು ಪಾಡಿನ ಲಕ್ಷಣ ರೇಖೆಯನ್ನು ದಾಟಿದವಳು. ಸದಾ ಮುಗುದೆಯಂತೆ ಮಾಡುತ್ತಿದ್ದ ಅಕ್ಕನಿಗೆ ಅಂತಹ ಮಾನಸಿಕ ಶಕ್ತಿಯನ್ನು ನೀಡಿದ ಮಹಾನ್ ಶಕ್ತಿ ಪ್ರೇಮವೆಂದು ಅಚ್ಚರಿಪಟ್ಟಿದ್ದೆ!
ಅಪ್ಪನ ಕೋಪಕ್ಕೆ ತಲೆಕೆಡಿಸಿಕೊಳ್ಳದೆ ’ಆದದ್ದು ಆಗಿ ಹೋಯಿತು, ಇನ್ನಾದರು ಒಟ್ಟಿಗೆ ಇರೋಣ….’ ಎಂಬ [...]

ರಂಜಿತ್ ಅಡಿಗ, ಕುಂದಾಪುರ

ಬದುಕಿನಲ್ಲಿ ಸದಾ ನೆಗೆಟಿವ್ ಆಗಿ ಯೋಚಿಸುವವರನ್ನು, ಪದೇ ಪದೇ ಸೋಲುವವರನ್ನು ಜಗತ್ತು ಹೀನಾಯವಾಗಿ ನೋಡುತ್ತದೆ. ಅವರು ದೂರ ಬರುವುದು ಕಾಣುತ್ತಲೇ ಜನರಿಗೆ ‘ಅರ್ಜೆಂಟು ಕೆಲಸ’ಗಳು ನೆನಪಾಗುತ್ತವೆ. ಬೇಗ ಎರಡೂ ಕಾಲಿಗೆ ಚೆನ್ನಾಗಿ ಬುದ್ಧಿ ಹೇಳಲು ಕಾರಣಗಳು ಸಿಕ್ಕುತ್ತವೆ.
ಆದರೆ ಸದಾ ನಗೆ ಬೀರುವ, ಗೆಲ್ಲುತಲಿರುವ ವ್ಯಕ್ತಿಗೆ ಅಂಥ ಟ್ರೀಟ್ ಮೆಂಟ್ ಸಿಗುವುದಿಲ್ಲ. ಅಂಥವರನ್ನು ನೋಡಲು ಕಾಯುತ್ತಿರುತ್ತಾರೆ. ಅವರ ಜೊತೆಗೆ ಮತ್ತಷ್ಟು ಹೊತ್ತು ನಿಲ್ಲಲು ತವಕಿಸುತ್ತಿರುತ್ತಾರೆ. ಅರ್ಜೆಂಟು ಕೆಲಸಗಳೆಲ್ಲ ಪಕ್ಕಕ್ಕೆ ನಿಂತು ಯಶಸ್ವಿ ವ್ಯಕ್ತಿಗೆ [...]

- ಹೇಮಾ ಪವಾರ್, ಬೆಂಗಳೂರು

ಅದ್ಯಾಕೆ ಅಷ್ಟು ರೂಡ್ ಆಗಿ ಉತ್ತರಿಸಿದೀಯ. ಅವಳು ಹುಡುಗಿ ಗೊತ್ತಿಲ್ವ ನಿನಗೆ? ಎಂದಿದ್ದಕ್ಕೆ, ‘ಹುಡುಗಿಯಾದ್ರೆ ಎರಡು ಕೊಂಬ? ಸಮಾನತೆ ಬೇಕು ಅಂತೀರ ಮತ್ತೆ ಹೀಗೆ ರಿಸರ್ವೇಶನ್ನು ಕೇಳ್ತೀರ’ ಅಂತಂದು ನಕ್ಕಿದ್ದ. ಹೌದಲ್ವ ಹುಡುಗಿ ಎಂದ ಮಾತ್ರಕ್ಕೆ ಆಕೆಯನ್ನು ವಿಶೇಷವಾಗಿ ಉಪಚರಿಸಬೇಕಿತ್ತು ಅಂತ ನನಗನ್ನಿಸಿದ್ದೇಕೆ? ಪುರುಷರೊಡನೆ ಸಮಾನತೆ ಬಯಸುವ ನಾವು, ಇತರ ಪುರುಷರಂತೆ ನಮ್ಮನ್ನು ಕಂಡಾಗ ಸ್ತ್ರೀ ಶೋಷಣೆ [...]

ದಿ ವರ್ಡಿಕ್ಟ್

Posted by: uniquesupri on: May 25, 2009

(ನಮ್ಮ ಪ್ರಯತ್ನಕ್ಕೆ ನಿಮ್ಮ ತೀರ್ಪು)
ಸಾಹಿತ್ಯದಂಬರದಲ್ಲಿ ಮತ್ತೊಂದು ಮಹಾನಕ್ಷತ್ರವೇ ಸಡಗರ
ಪತ್ರಿಕಾರಂಗದಲ್ಲಿ ಈ ರೀತಿಯ ಒಳ್ಳೆಯ ಸಡಗರದ, ಸದಭಿರುಚಿಯ ಪತ್ರಿಕೆ ತುಂಬಾ ವಿರಳ. ಅತಿ ಅಪರೂಪ. ಅಪರಿಚಿತನಾದ ನನಗೆ ಎರಡು ಪುಸ್ತಕ ಕಳುಹಿಸಿದ್ದೀರಿ, ತುಂಬಾ ಧನ್ಯವಾದಗಳು. ಇದರ ಯಶಸ್ಸಿಗಾಗಿ ನಾನು ದುಡೀತೀನಿ ಕಣ್ರಿ. ಯಾಕಂದ್ರೆ ಸಾಹಿತ್ಯದಲ್ಲಿ ದೊಡ್ಡವರ ಮಾತು ಮಾತ್ರ ನಡೆಯುತ್ತದೆ. ಆದ್ರೆ ನೀವೆಲ್ಲ ವಿದ್ಯಾರ್ಥಿಗಳು. ನನಗೆ ತುಂಬಾ ಹೆಮ್ಮೆ. ಎಷ್ಟು ಹೇಳಿದರೂ ಕಡಿಮೆ.
ಹಾಗೆಯೇ ಸರ್‌ಜಿ, ನಾನು ಬರೆದಿರುವ ಕೆಲವು ಹನಿಗವನ, ನಗೆಹನಿ ‘ಸಡಗರ’ದಲ್ಲಿ ಪ್ರಕಟಿಸಲು ಕೋರುತ್ತೇನೆ. [...]

 
- ಸುಪ್ರಿಯಾ.ಎಸ್, ಬೆಂಗಳೂರು

(ಕಳೆದ ಸಂಚಿಕೆಯಲ್ಲಿ ಮುಖಪುಟದ ವಿಷಯ ‘ಗೂಡು ಬಿಟ್ಟ ಹಕ್ಕಿಗಳು’ ಸಂಬಂಧಿಸಿದಂತೆ ಪ್ರಕಟವಾದ ಲೇಖನಗಳಿಗೆ ಪ್ರತಿಕ್ರಿಯೆಯಾಗಿ ಬಂದ ಲೇಖನ)
ಓದಿಗಾಗಿ, ಕೆಲಸಕ್ಕಾಗಿ, ಸೌಕರ್ಯಗಳಿಗಾಗಿ ಮನೆಯಿಂದ ದೂರ ಇದ್ದು ಬದುಕುವ ಪದ್ಧತಿ ಸರಿಯೇ?
ಇಲ್ಲ, ಓದು, ಕೆಲಸ ಮತ್ಯಾವುದೋ ಕಾರಣಕ್ಕೆ ಮನೆಯಿಂದ ದೂರ ಉಳಿಯುವುದು ಸರಿಯಲ್ಲ. ಇದರಿಂದ ಪರಂಪರಾಗತವಾಗಿ ಬಂದ ಬಾಂಧವ್ಯಕ್ಕೆ ಕುಂದುಂಟಾಗುತ್ತದೆ. ಮನುಷ್ಯನಿಗೆ ಸಹಜವಾಗಿ ಸಿಕ್ಕಬೇಕಾದ ಕೌಟುಂಬಿಕ ಸಂಸ್ಕಾರಗಳು ದೊರೆಯದೆ ಆತನ ವ್ಯಕ್ತಿತ್ವ ಅಪೂರ್ಣವಾಗಿ ಉಳಿಯುತ್ತದೆ.
ತಂದೆ ತಾಯಿ ಇಬ್ಬರೂ ದುಡಿಯುವ, ನಗರದ ಅನೇಕ [...]

-ರಂಜಿತ್ ಅಡಿಗ, ಕುಂದಾಪುರ

ಹಾದಿಯಲಿ ಒಂದಿಷ್ಟು ಸಿಗುತ್ತದೆ ಸಾಕಷ್ಟು ಹೋಗುತ್ತದೆ ತುಲನೆ ಮಾಡಿ ನೋಡಿದರೆ ಹೋದಷ್ಟೇ ನೋವು, ಸಿಕ್ಕಷ್ಟೂ ಸಂಭ್ರಮ…
ಜನರು ಹೇಳುವರು ತಲುಪಲಾಗದು ಗುರಿಯೆಂಬುದು ಬಹಳ ದೂರ… ಅರಿವಿದೆಯೆನಗೆ ಯಾರೂ ಹೋಗರು ಸೋತು ಕೇಳಿದರೆ ಎದೆಯ ಮಾತು.. 

ಡೇರೆ ಹಾಕಿ [...]

- ಮಚೆಂಪು

‘ಮಚ್ಚಿ ನಾಲ್ಕ್ ವರ್ಷ ನಾವ್ ಕಣ್ಣಿಗೆ ಎಣ್ಣೆ ಬಿಟ್ಕಂಡು, ಹೊಟ್ಟೆಗ್ ಇನ್ನೇನೋ ಬಿಟ್ಕಂಡು ಓದೋದ್ಯಾಕೆ?’ coffee ಬಾರ್ ಎದುರು ನಿಂತು ನಾನು ಮಲ್ಲಿ ಮಾತಾಡ್ತಿದ್ವಿ. ಬಾರ್ ಅನ್ನೋ ಹೆಸ್ರು ಕಂಡ್ ಕೂಡ್ಲೆ ನಾನು ವೇದಾಂತಿ ಆಗೋಯ್ತಿನಿ ಅನ್ನೋದು ಮಲ್ಲಿಯಾದಿಯಾಗಿ ನನ್ ದೋಸ್ತರೆಲ್ಲರ ಆರೋಪ. ಅವತ್ತೂ ಅಂಗೇ ಆಯ್ತು. ನಾನು ನಮ್ ದೇಶದ ಲಕ್ಷಾಂತರ ಮಂಡಿ engineering ಹುಡುಗ್ರ ಜೀವ್ನದ ಅರ್ಥವನ್ನೇ question ಮಾಡ್ಬಿಟ್ಟಿದ್ದೆ.
ಮಲ್ಲಿ ಕಾಫಿ ಹೀರಿ ತುಸು ಸುಧಾರಿಸ್ಕಂಡು ಶುರು ಹಚ್ಕಂಡ, ‘ನೋಡ್ ಶಿಷ್ಯ, [...]

- ಪ್ರಜ್ಞಾ, ಶಿವಮೊಗ್ಗ

“ಕವಿತೆಯೊಳಗಾ ಸೆಗೈಯು ಫಲಯಾವುದೇ ಕೀರ್ತಿ – ನೆಗಳೆಯೆಂಬುದೆ ಫಲ ವಂ” ಎಂಬ ಮಾತು ಅಕ್ಷರಶಃ ಸಾಕಾರಗೊಂಡಿದೆ, ಕುವೆಂಪುರವರ ಮಹಾರಸಋಷಿಯ ಮಹಾ ಬದುಕಿನಲ್ಲಿ ಸರಸ್ವತಿಯ ಕೃಪಾಕಟಾಕ್ಷದೊಂದಿಗೆ ಲಕ್ಷ್ಮಿಯ ಕೃಪಾಕಟಾಕ್ಷ ಅವರಿಗಿತ್ತು. ಅವರದು ಕವಿ ವ್ಯಕ್ತಿತ್ವ, ಯುಗ ಪ್ರವರ್ತಕ ವ್ಯಕ್ತಿತ್ವ, ‘ಋಷಿ ಅಲ್ಲದವನು ಕವಿಯಲ್ಲ’ ಎನ್ನುವ ಮಾತು ಅವರನ್ನು ನೋಡಿಯೇ ಹುಟ್ಟಿರಬೇಕು. ಕುವೆಂಪು ತಮ್ಮ ಕೃತಿಗಳೊಂದಿಗೆ ಯುಗವನ್ನು ಬರೆದಿರುವರು. ಯುಗ ಪ್ರವರ್ತಕರಾದ ಈ ಭೌಮ ವ್ಯಕ್ತಿತ್ವಕ್ಕೆ ಸಲ್ಲಿಸಿದ ನಮೋ [...]


Blog Stats

  • 13,367 hits

 

May 2009
M T W T F S S
« Apr   Jun »
 123
45678910
11121314151617
18192021222324
25262728293031