Posted by: uniquesupri on: March 31, 2009
‘ಇನ್ನು ಸಾಧ್ಯವಾಗುವುದಿಲ್ಲ’ ಎನ್ನುವ ಷರಾದೊಂದಿಗೆ ನಾನು ನನ್ನ ಮತ್ತೊಂದು ಹುಂಬತನವನ್ನು ಕೊನೆಗಾಣಿಸಬೇಕಿದೆ.
ಸುಮಾರು ಎರಡು ವರ್ಷಗಳಿಂದ ಕುಂಟುತ್ತಲೋ, ತೆವಳುತ್ತಲೋ ನಡೆಯುತ್ತಿದ್ದ ನಮ್ಮ ಪತ್ರಿಕೆಯನ್ನು ಅಧಿಕೃತವಾಗಿ ಮುಚ್ಚುವ ಸಮಯ ಬಂದಾಗಿದೆ. ಇಷ್ಟು ದಿನ ನಾನಾ ಕಷ್ಟಗಳು, ತಾಪತ್ರಯಗಳ ನಡುವೆ ಹೇಗೋ ‘ಸಡಗರ’ವನ್ನು ನಡೆಸಿಕೊಂಡು ಬರುತ್ತಿದ್ದೆವು. ಆದರೆ ಈಗ ನಾವು ಡೆಡ್ ಎಂಡ್ ತಲುಪಿದ್ದೇವೆ. ಎಲ್ಲಾ ವಿಧದಲ್ಲೂ ಹೈರಾಣಾಗಿದ್ದೇವೆ. ಆರ್ಥಿಕವಾಗಿ ಕುಗ್ಗಿಹೋಗಿದ್ದೇವೆ, ಉತ್ಸಾಹವೂ ಬತ್ತಿ ಹೋಗಿದೆ. ಈ ಸಂದರ್ಭದಲ್ಲಿ ನಮ್ಮ ಕನಸಿನ ಸಮಾಧಿಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸುವುದೊಂದೇ ಬಾಕಿ ಉಳಿದಿರುವುದು. ಈಗದನ್ನು [...]
Posted by: uniquesupri on: March 14, 2009
ಕೆಲಸದ ಅರ್ಜಿಯನ್ನು ಗುಂಡ ಬಹಳ ಸಮಯದಿಂದ ಗುರಾಯಿಸುತ್ತಿದ್ದ. ಯಾರ ಕಾಪಿಯನೂ ಮಾಡದೇ ಎಲ್ಲಾ ಜಾಗವನ್ನು ಪ್ರಥಮ ಸಲ ತುಂಬಿದ ಬಳಿಕ ಆತ್ಮವಿಶ್ವಾಸದ ನಂತರ ಇದೊಂದು ಪ್ರಶ್ನೆ ತೀವ್ರವಾಗಿ ತಲೆ(?!) ತಿನ್ನುತಿತ್ತು. ಬಹಳ ಅಲೋಚಿಸಿದ ಬಳಿಕ ಸ್ಯಾಲರಿ ಎಕ್ಸ್ಪ್ ಪೆಕ್ಟೆಡ್ ಎದುರು ಕೊನೆಗೂ ಯೆಸ್ ಅಂತ ಬರೆದ.
ತಲೆಗೆ ಹುಳ!
ಕುಟುಂಬವೊಂದರಲ್ಲಿ ಪ್ರತಿಯೊಂದು ಮಗುವಿಗೂ ಕನಿಷ್ಠ ನಾಲ್ಕು ಮಂದಿ ಸಹೋದರರೂ, ನಾಲ್ಕು ಮಂದಿ ಸಹೋದರಿಯರೂ ಇದ್ದಾರೆಂದರೆ ಆ [...]
Posted by: uniquesupri on: March 13, 2009
‘ರಿಸೆಶನ್ ಬಿಸಿ ನಿಮಗೂ ತಟ್ಟಿತಾ’ ಎಂದು ಉಡಾಫೆ ಮಾಡಿದರು ಕೆಲವರು. ದೊಡ್ಡ ದೊಡ್ಡ ಕಂಪೆನಿಗಳೆಲ್ಲ ತಮ್ಮ ಉದ್ಯೋಗಿಗಳು ಕುಡಿಯುವ ನೀರು, ಬಳಸುವ ಟಿಶ್ಯು ಪೇಪರುಗಳಲ್ಲೆಲ್ಲಾ ಉಳಿತಾಯ ಮಾಡುತ್ತ ಈ ಕಷ್ಟದ ದಿನಗಳಲ್ಲಿ ಜೀವವನ್ನುಳಿಸಿಕೊಳ್ಳಲು ಹೋರಾಡುತ್ತಿರುವಾಗ ನಾವು ಪತ್ರಿಕೆಯ ಗಾತ್ರವನ್ನು ಅರ್ಧಕ್ಕಿಳಿಸಿದ್ದು ಅನೇಕರಲ್ಲಿ ಈ ಭಾವನೆ ಹುಟ್ಟಿಸಿದೆ. ನಿಜಕ್ಕೂ ಪತ್ರಿಕೆಯೊಂದರ ನಿರ್ವಹಣೆ ಎಷ್ಟು ಕಷ್ಟದ್ದು ಎಂಬುದರ ಅರಿವು ಈಗಾಗುತ್ತಿದ್ದೆ. ಎಲ್ಲವೂ ಸರಿಯಾಗಿ ನಡೆಯುತ್ತಿದ್ದಾಗ ಕೆಲಸಗಳು ಬೆಣ್ಣೆಯಿಂದ ಕೂದಲು ತೆಗೆದಷ್ಟು ಸಲೀಸಾಗಿ ನಡೆದುಹೋಗುತ್ತವೆ. ಆದರೆ ಒಂದೊಂದೇ ಲೋಪ, ಅನನಕೂಲ ಎದುರಾದ [...]
Recent Comments