ಕಲರವ

ಕವಿತೆಗೊಂದು ತಾವು: ಪಂಜರದಿ ಹಕ್ಕಿ ಸತ್ತಿದೆ

Posted by: uniquesupri on: November 17, 2008

271435806_7530553cb3

ವೀಣೆ ಇದೆ, ತಂತಿ ಇದೆ
ನುಡಿಸೋ ಬೆರಳುಗಳಲಿ
ಕಸುವು ಇದೆ
ತಾಣವಿದೆ, ಮೌನವಿದೆ
ಆಲಿಸುವ ಕಿವಿಗಳಲಿ
ಹಸಿವು ಇದೆ
ಕಂಪನದಿ ಸ್ವರ
ಕಾಣದಾಗಿದೆ.

ಪದಗಳಿವೆ, ಧ್ವನಿಗಳಿವೆ
ನಲಿಯುವ ಕೈಗಳಲಿ
ಕತ್ತಲು ಬೆಳಕಾಗಿದೆ
ಧ್ಯಾನವಿದೆ, ಅರ್ಥವಿದೆ
ಓಡುವ ಕಣ್ಣಿನಲಿ
ಬೆತ್ತಲು ಬಯಲಾಗಿದೆ
ಬೆಸೆದ ಸೇತುವೆಗೆ
ಮುಪ್ಪಾಗಿದೆ.

ರೂಪವಿದೆ, ದೀಪವಿದೆ
ಕಟೆದ ಮೂರ್ತಿಯಲಿ
ಹೊಳಪು ಇದೆ
ಭಾವವಿದೆ, ಭಕುತಿಯಿದೆ
ಜೋಡಿಸಿದ ಕರಗಳ
ಮುಡಿಪು ಇದೆ
ಪಂಜರದಿ ಪಕ್ಷಿ
ಸತ್ತಿದೆ.

- ‘ಅಂತರ್ಮುಖಿ’

1 Response to "ಕವಿತೆಗೊಂದು ತಾವು: ಪಂಜರದಿ ಹಕ್ಕಿ ಸತ್ತಿದೆ"

Olle kavithe guru…………cntinue ….i will visit ur blog regularly

Leave a Reply

Blog Stats

  • 13,367 hits

 

November 2008
M T W T F S S
« Oct   Dec »
 12
3456789
10111213141516
17181920212223
24252627282930