ಕಲರವ

Archive for November 2008

When you say good bye…

Posted by: uniquesupri on: November 21, 2008

He was all in his tears. A man who had demonstrated tremendous character in grilling times on court and conquered the world with a tennis racquet in hand was crying like a child who’s forcefully taken away from his mother. Yes it was Pete Samprass, the snapshots are still fresh in our memory when he [...]

- ಹೇಮಾ ಪವಾರ್, ಬೆಂಗಳೂರು
ಬೆಳಿಗ್ಗೆಯಿಂದ ಆ ಮುಖಾನೇ ಕಾಡ್ತಿದೆ. ಸಿಗ್ನಲ್ನಲ್ಲಿ ಸಿಂಬಳ ಸೋರುತ್ತಿರುವ ಮಗುವನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದ ಆ ಹೆಣ್ಣಿನ ಮುಖ. ಅವಳನ್ನ ದಿನಾ ನೋಡ್ತಿದ್ದೆ, ಇವತ್ತು ಆ ಮುಖ ಪದೇ ಪದೇ ನೆನಪಾಗ್ಲಿಕ್ಕೆ ಕಾರಣ, ಪತ್ರಿಕೆಯಲ್ಲಿ ಈ ಸಿಗ್ನಲ್ ಭಿಕ್ಷುಕರ ಬಗ್ಗೆ ಓದಿದ್ದ ಲೇಖನ. ಅವರು ಮಕ್ಕಳನ್ನ ಭಿಕ್ಷೆ ಬೇಡೋಕೆ ಅಂತಾನೆ ದುಡ್ಡುಕೊಟ್ಟು ತರ್ತಾರಂತೆ!! ಒಮ್ಮೆ ಪೋಲೀಸರಿಗೆ ಸಿಕ್ಕಿಹಾಕಿಕೊಂಡ ಒಬ್ಬ ಭಿಕ್ಷುಕಿಯ ಸೆರಗಿನ ಗಂಟಲ್ಲಿ ಭರ್ತಿ ನಲವತ್ತು ಸಾವಿರ ಸಿಕ್ತಂತೆ!! ಇದೆಲ್ಲ ನಿಜವಾ? ಅವಳ [...]

-ಅಂತರ್ಮುಖಿ

ನಾವು ಬುದ್ಧಿವಂತರು. ಸಮಗ್ರವಾಗಿ ಆಲೋಚಿಸದೆ, ಸರಿ ತಪ್ಪುಗಳ ನಿಷ್ಕರ್ಷೆಯನ್ನು ಮಾಡದೆ, ಉದ್ದೇಶಗಳನ್ನು ಸ್ಪಷ್ಟ ಪಡಿಸಿಕೊಳ್ಳದೆ, ಗುರಿಗಳನ್ನು ಕಂಡುಕೊಳ್ಳದೆ ನಾವು ಯಾವ ಕೆಲಸವನ್ನೂ ಮಾಡುವುದಿಲ್ಲ. ಏನನ್ನೇ ಮಾಡಬೇಕೆಂದರೂ ನಮಗೆ ಅದರಲ್ಲಿ ಒಂದು ಠಿuಡಿಠಿose ಇರಬೇಕು. ಉಪಯೋಗವಿಲ್ಲದ ಯಾವ ಕೆಲಸವನ್ನು ಮಾಡುವುದಕ್ಕೂ ನಾವು ಇಷ್ಟ ಪಡುವುದಿಲ್ಲ. ಉದ್ದೇಶವಿಲ್ಲದೆ ಮಾತನಾಡುವವರು, ಉದ್ದೇಶವಿಲ್ಲದೆ ಕೆಲಸ ಮಾಡುವವರು, ಆಕಾರವಿಲ್ಲದ ಚಿತ್ರದಲ್ಲಿ ಕುಂಚ ಅಲ್ಲಾಡಿಸುವವರು, ಏನನ್ನೂ ಹೇಳದ ಸಿನೆಮಾ ಮಾಡಿದವರು ನಮ್ಮಲ್ಲಿ ಲೂಸ್‌ಗಳು ಎಂದು ಗುರುತಿಸಲ್ಪಡುತ್ತಾರೆ. ಉದ್ದೇಶವಿಲ್ಲದೆ ನಗುತ್ತಾ ರಸ್ತೆಯಲ್ಲಿ ಸಾಗುವವನು ನಮ್ಮ ಅನುಕಂಪಕ್ಕೆ ತುತ್ತಾಗುತ್ತಾನೆ. [...]

ಓಶೋ ಕಂಡಂತೆ ಗಾಂಧಿ!

Posted by: uniquesupri on: November 19, 2008

ಓಶೋ ರಜನೀಶ್ ಜಗತ್ತು ಕಂಡ ಅತ್ಯಂತ ವಿವಾದಾಸ್ಪದ ವ್ಯಕ್ತಿ. ಮಧ್ಯಪ್ರದೇಶದ ಜೈನ ಕುಟುಂಬವೊಂದರಲ್ಲಿ ಹುಟ್ಟಿದ ರಜನೀಶ್ ಬಾಲ್ಯದಿಂದಲೇ ಸ್ವತಂತ್ರ ಚಿಂತನೆಯೆಡೆಗೆ ಒಲವು ಹೊಂದಿದ್ದ. ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ತನಗೆ ಜ್ಞಾನೋದಯವಾಯಿತು ಎಂದು ಹೇಳಿಕೊಳ್ಳುವ ಈತ ಜಗತ್ತಿನ ಎಲ್ಲಾ ಧರ್ಮಗಳ ಬಗ್ಗೆ ಅತ್ಯಂತ ವಸ್ತುನಿಷ್ಠವಾದ, ಹಿಂದೆ ಯಾರೂ ಹೇಳಿರದಿದ್ದ ಸಂಗತಿಗಳನ್ನು ಹೇಳಿದ. ನಂಬಿಕೆಗಳನ್ನು ಬಿತ್ತುವ, ಆ ಮೂಲಕ ಸ್ವತಂತ್ರ ಚಿಂತನೆಯನ್ನು ನಾಶ ಮಾಡುವ ಎಲ್ಲಾ ವ್ಯವಸ್ಥೆಗಳನ್ನೂ ಖಂಡಿಸಿದ. ಮನುಷ್ಯ ತತ್‌ಕ್ಷಣಕ್ಕೆ ಮಾತ್ರ ಸ್ಪಂದಿಸಬೇಕು. ಯಾವ ಪೂರ್ವಾಗ್ರಹವಿಲ್ಲದೆ, ಭವಿಷ್ಯತ್ತಿನ [...]

ಇವತ್ತಿನ ಪರಿಸ್ಥಿತಿಯಲ್ಲಿ ಕೋಮುವಾದ, ಮತೀಯವಾದ, ಭಯೋತ್ಪಾದನೆಯ ಬಗ್ಗೆ ಮಾತಾಡುವುದು ಅಷ್ಟು ಸುಲಭವಲ್ಲ. ಯಾವ ಸಂದರ್ಭದಲ್ಲಿ, ಯಾರ ಎದುರು ನಾವು ಮಾತಾಡುತ್ತೇವೆ ಎಂಬುದರಿಂದ ಹಿಡಿದು ಯಾವ ಸ್ಥಾನದಿಂದ ನಾವು ಮಾತಾಡುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ಇಬ್ಬರು ಹಿಂದೂಗಳು ಮಾತಾಡುವಾಗ ಭಯೋತ್ಪಾದನೆ ಹಾಗೂ ಇಸ್ಲಾಮಿನ ನಂಟಿನ ಬಗ್ಗೆ ಉಡಾಫೆಯಿಂದ ಮಾತಾಡಿಬಿಡಬಹುದು. ಆದರೆ ಅದೇ ಗೆಳೆಯರ ಗುಂಪಿನ ಮುಸ್ಲೀಂ ಯುವಕನೊಬ್ಬ ಬಂದ ತಕ್ಷಣ ಮಾತಿನ ವರಸೆ ಬದಲಾಯಿಸಿಬಿಡಬೇಕಾಗುತ್ತದೆ. ಪತ್ರಿಕೆಯ ಸಂಪಾದಕನಾದವನು, ಧಾರ್ಮಿಕ ಮುಖಂಡನಾದವನು, ಸಾಹಿತಿಯಾದವನು, ರಾಜಕಾರಣಿಯಾದವನು ತನ್ನ ಮಾತಿನ ಮೇಲೆ, ಅದು ಧ್ವನಿಸುವ [...]

(ಹಿಂದಿನ ಸಂಚಿಕೆಯಿಂದ)
ನೀನು ನನ್ನ ಬದುಕಿನಲ್ಲಿ ಬಂದ ಮೇಲೆ ನಾನು ಅದೆಷ್ಟು ಬದಲಾಗಿ ಹೋಗಿದ್ದೆನಲ್ಲವಾ? ನಿನ್ನ ಪರಿಚಯ, ಸಾಹಚರ್ಯದಿಂದಾಗಿ ನನ್ನಲ್ಲಿ ಹೊಸತೊಂದು ಹುಮ್ಮಸ್ಸು ಹುಟ್ಟಿಕೊಂಡಿತ್ತು.  ನಿನ್ನೊಂದಿಗೆ ಪ್ರತಿದಿನ ಒಂದಷ್ಟು ಸಮಯ ಕಳೆದರೆ ವಿಲಕ್ಷಣವಾದ ಧೈರ್ಯ ಬರುತ್ತಿತ್ತು. ನೀನು ನನ್ನ ಬೆರಳುಗಳ ನಡುವೆ ನುಲಿಯುತ್ತಿರುವಾಗ ನಾನು ಇಡೀ ಜಗತ್ತನ್ನೇ ಜಯಿಸುವ ಕನಸನ್ನು ಕಾಣುತ್ತಿದ್ದೆ. ಸುತ್ತಲಿನ ಜಗತ್ತೂ ಕೊಂಚ ಬದಲಾದ ಹಾಗೆ ಅನ್ನಿಸುತ್ತಿತ್ತು. ಅದುವರೆಗೂ ಕಣ್ಣೆತ್ತಿಯೂ ನೋಡದವರೆಲ್ಲಾ ನಾನು ನಿನ್ನೊಂದಿಗಿರುವಾಗ ನಮ್ಮಿಬ್ಬರನ್ನು ದುರುದುರನೆ ನೋಡಿ ಮುಂದೆ ಹೋಗುತ್ತಿದ್ದರು. ಕೆಲವರ ಕಣ್ಣಲ್ಲಿ ನಾನು [...]

ವೀಣೆ ಇದೆ, ತಂತಿ ಇದೆ
ನುಡಿಸೋ ಬೆರಳುಗಳಲಿ
ಕಸುವು ಇದೆ
ತಾಣವಿದೆ, ಮೌನವಿದೆ
ಆಲಿಸುವ ಕಿವಿಗಳಲಿ
ಹಸಿವು ಇದೆ
ಕಂಪನದಿ ಸ್ವರ
ಕಾಣದಾಗಿದೆ.
ಪದಗಳಿವೆ, ಧ್ವನಿಗಳಿವೆ
ನಲಿಯುವ ಕೈಗಳಲಿ
ಕತ್ತಲು ಬೆಳಕಾಗಿದೆ
ಧ್ಯಾನವಿದೆ, ಅರ್ಥವಿದೆ
ಓಡುವ ಕಣ್ಣಿನಲಿ
ಬೆತ್ತಲು ಬಯಲಾಗಿದೆ
ಬೆಸೆದ ಸೇತುವೆಗೆ
ಮುಪ್ಪಾಗಿದೆ.
ರೂಪವಿದೆ, ದೀಪವಿದೆ
ಕಟೆದ ಮೂರ್ತಿಯಲಿ
ಹೊಳಪು ಇದೆ
ಭಾವವಿದೆ, ಭಕುತಿಯಿದೆ
ಜೋಡಿಸಿದ ಕರಗಳ
ಮುಡಿಪು ಇದೆ
ಪಂಜರದಿ ಪಕ್ಷಿ
ಸತ್ತಿದೆ.
- ‘ಅಂತರ್ಮುಖಿ’

ಆತ ಬಲರಾಮ ಹಲವಾಯಿ ಭಾರತದ ಲಕ್ಷಾಂತರ ಕುಗ್ರಾಮಗಳಂತೆಯೇ ಇದ್ದ ಒಂದು ಗ್ರಾಮದಲ್ಲಿ ಹುಟ್ಟಿದವ. ಆತನ ತಂದೆ ತಾಯಿಗೆ ಆತನಿಗೊಂದು ಹೆಸರಿಡಬೇಕೆನ್ನುವ ಅರಿವೂ ಇರುವುದಿಲ್ಲ.ಆತನನ್ನು ಮುನ್ನಾ ಎಂದಷ್ಟೇ ಕರೆಯುತ್ತಿರುತ್ತಾರೆ. ಇಡೀ ಹಳ್ಳಿಯ ಒಡೆತನ ಜಮೀನುದಾರನ ಕೈಲಿರುತ್ತದಾದ್ದರಿಂದ ಆತನ ತಂದೆ ತಾಯಿಯಂತೆಯೇ ಅನೇಕರು ತಮ್ಮ ಬದುಕಿರುವುದು ಜಮೀನುದಾರರ ಸೇವೆ ಮಾಡುವುದಕ್ಕೆ ಎಂತಲೇ ಭಾವಿಸಿರುತ್ತಾರೆ. ಇಂಥ ಪರಿಸರದಲ್ಲಿ ಬೆಳೆದ ಬಲರಾಮ ಚೂಟಿ ಹುಡುಗ. ಶಾಲೆಗೆ ಬಂದ ಇನ್ಸ್‌ಪೆಕ್ಟರ್ ಈತನ ಬುದ್ಧಿಮತ್ತೆಯನ್ನು ಹೊಗಳುವಷ್ಟು ಚಾಲಾಕಿ.ಆದರೆ ತನ್ನ ತಂಗಿಯ ಮದುವೆಯನ್ನು ಮಾಡುವುದಕ್ಕಾಗಿ ಆತನ ಶಾಲೆಯನ್ನು [...]

ಚುರುಮುರಿ ಅಕ್ಟೋಬರ್ ಸಂಚಿಕೆ

Posted by: uniquesupri on: November 15, 2008

ನಾನು ಉಪವಾಸ ಮಾಡಲ್ಲ!
ಒಮ್ಮೆ ಗಾಂಧೀಜಿ ಉಪವಾಸ ಪ್ರಾರಂಭಿಸಿದರು. ಪಕ್ಕದಲ್ಲೇ ವಲ್ಲಭಭಾಯಿ ಪಟೇಲರು ನಿಂತಿದ್ದರು. ಗಾಂಧೀಜಿ ಅವರಿಗೆ ಹೇಳಿದರು: ‘ವಲ್ಲಭ ಭಾಯಿ, ನಿಮಗೂ ಅಪ್ಪಣೆ ಕೊಡುತ್ತೇನೆ ಉಪವಾಸ ಮಾಡಬಹುದು.’
‘ಬೇಡಿ ಬಾಪೂಜಿ, ಖಂಡಿತಾ ಬೇಡಿ. ನಾನಂತೂ ಉಪವಾಸ ಪ್ರಾರಂಭಿಸೋಲ್ಲ’ ಎಂದರು ವಲ್ಲಭಭಾಯಿ.
‘ಏಕೆ?’ ಆಶ್ಚರ್ಯದಿಂದ ಕೇಳಿದರು ಗಾಂಧೀಜಿ.
‘ನೀವು ಉಪವಾಸ ಮಾಡಿದರೆ ಬೇಡ ಎಂದು ಬೇಡಿಕೊಳ್ಳುವವರು ನೂರಾರು ಜನ. ಹಾಗೆ ಮಾಡಿ ನೀವು ಉಪವಾಸ ಮಾಡುವುದನ್ನು ತಪ್ಪಿಸುತ್ತಾರೆ. ನಾನು ಉಪವಾಸ ಮಾಡಿದರೆ ಬೇಡ ಎಂದು ಹೇಳಿ ನಿಲ್ಲಿಸುವವರು ಯಾರೂ ಇಲ್ಲವಲ್ಲ!’
………………………………

ಓಹ್ ಹೌದಾ?
ಭೂಮಿಯ ಮೇಲೆ ಪ್ರತಿ [...]

ಪ್ರಿಯ ಆತ್ಮಬಂಧು,
ಹೌದು ನಿನ್ನ ಹೀಗಂತ ಮಾತ್ರ ಕರೆಯಲು ಸಾಧ್ಯ. ಒಮ್ಮೆ ಹೀಗೆ ಕರೆದುಬಿಟ್ಟ ನಂತರ ನನ್ನಲ್ಲಿ ಅದೆಷ್ಟು ನಿರಾಳತೆ ಆವರಿಸಿಕೊಂಡಿದೆ ಎಂಬುದು ನಿನಗೆ ತಿಳಿಯುವುದಿಲ್ಲ. ಇಷ್ಟು ವರ್ಷಗಳಲ್ಲಿ ನಾನು ನಿನ್ನಲ್ಲಿ ಹುಡುಕುತ್ತಿದ್ದದ್ದು ಏನನ್ನು ಎನ್ನುವುದು ತಿಳಿಯದೆ ಗೊಂದಲಗೊಂಡಿದ್ದೆ, ಕ್ಷಣಕ್ಷಣವೂ ಮುಂದೆ ಏನಾಗುವುದೋ ಎಂಬ ಆತಂಕದಲ್ಲೇ ನಾನು ನನ್ನ ಎಂ.ಬಿ.ಬಿ.ಎಸ್ ಮುಗಿಸಿದೆ. ರಾತ್ರಿ ಕಳೆದು ಹಗಲಾಗುವುದರೊಳಗೆ ನನ್ನ ನಿನ್ನ ನಡುವಿನ ಸಂಬಂಧ ಯಾವ ರೂಪವನ್ನು ತಳೆದು ಕಣ್ಣ ಮುಂದೆ ಎದ್ದು ನಿಂತು ಬಿಡುವುದೋ ಎಂಬ ಕಳವಳದಲ್ಲಿ ರಾತ್ರಿಗಳನ್ನು ತಳ್ಳುತ್ತಿದ್ದೆ. [...]


Blog Stats

  • 13,367 hits

 

November 2008
M T W T F S S
« Oct   Dec »
 12
3456789
10111213141516
17181920212223
24252627282930