Posted by: uniquesupri on: October 20, 2008
ಅಕ್ಟೋಬರ್ ತಿಂಗಳ ‘ಸಡಗರ’ ಪತ್ರಿಕೆಯ ತಯಾರಿಯಲ್ಲಿ ಮುಳುಗಿಹೋಗಿದ್ದೇನೆ. ಪತ್ರಿಕೆಯು ಸರಿಯಾದ ಸಮಯಕ್ಕೆ ಪ್ರಕಟವಾಗುವುದಿಲ್ಲ ಎಂಬುದು ನಮ್ಮ ಮೇಲಿರುವ ಆರೋಪಗಳಲ್ಲಿ ಬಹಳ ಪ್ರಮುಖವಾದದ್ದು. ಈ ಆರೋಪ ಕೇಳಿಬರದ ಹಾಗೆ ನಾವು ಕೆಲಸ ಮಾಡಬೇಕು ಎಂಬುದು ಒಂದು ಬಗೆಯ ಚಿಂತನೆಯಾದರೂ, ಪತ್ರಿಕೆಯು ಸಮಯಕ್ಕೆ ಸರಿಯಾಗಿ ಬರದದ್ದನ್ನು ಕಂಡು ಬೇಸರಗೊಳ್ಳುವ, ಅದರ ದಾರಿ ಕಾಯುತ್ತಾ ಗೊಣಗುವವರ ಸಂಖ್ಯೆ ಇಷ್ಟು ದೊಡ್ಡದಿದೆಯಲ್ಲ ಎಂದು ಸಂತೋಷ ಪಡುವುದು ನಮಗೆ ಇಷ್ಟವಾದದ್ದು. ಹಾಗಂತ ನಾವು ಸಂಪೂರ್ಣ ಬೇಜವಾಬ್ದಾರಿಯ ದಾರಿ ಹಿಡಿಯುತ್ತೇವೆ ಎಂದುಕೊಳ್ಳಬೇಡಿ. ನಮ್ಮ ಮಿತಿಯಲ್ಲೇ ಸಾಧ್ಯವಾದಷ್ಟು [...]
Posted by: uniquesupri on: October 20, 2008
ಕನ್ನಡದ ಬ್ಲಾಗುಗಳ ಆಗುಹೋಗುಗಳ ಮೇಲೊಂದು ಕಣ್ಣನ್ನಿಟ್ಟು ಅಲ್ಲಿನ ಸತ್ವಯುತವಾದ ಸಂಗತಿಗಳೆಡೆಗೆ ತಮ್ಮ ಪತ್ರಿಕೆಯ ಓದುಗರನ್ನು ಸೆಳೆಯುವ, ಹೊಸತನ್ನು ಪರಿಚಯಿಸುವ ಸಹೃದಯತೆಯಿರುವ ಕನ್ನಡಪ್ರಭದ ‘ಸಾಪ್ತಾಹಿಕ ಪುರವಣಿ’ಯ ಸಂಪಾದಕರು ಜೋಗಿ.
ನಮ್ಮ ಪತ್ರಿಕೆಯ ಬ್ಲಾಗನ್ನು ಪರಿಚಯಿಸಿ ‘ಇಲ್ಲಿಗೀ ಕಥೆ ಮುಗಿಯಿತು’ ಲೇಖನವನ್ನು ಕಳೆದ ರವಿವಾರದ (೧೯-೧೦-೨೦೦೮) ಸಾಪ್ತಾಹಿಕ ಪುರವಣಿಯನ್ನು ಪ್ರಕಟಿಸಿದ್ದಾರೆ. ನಮ್ಮ ಬೆನ್ನು ತಟ್ಟಿದ್ದಾರೆ. ನಮ್ಮ ಹುಮ್ಮಸ್ಸಿನ, ಹುಂಬತನದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಆ ಮೂಲಕ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಅವರಿಗೆ ಹಾಗೂ ಕನ್ನಡಪ್ರಭ ಪತ್ರಿಕೆಗ ನಮ್ಮ ಬಳಗದ ಕೃತಜ್ಞತೆಗಳು…
ಕನ್ನಡಪ್ರಭದಲ್ಲಿನ ಸಾಪ್ತಾಹಿಕ ಪುರವಣಿಯ [...]
Posted by: uniquesupri on: October 10, 2008
ಆಗಸ್ಟ್ ಹಾಗೂ ಸೆಪ್ಟೆಂಬರ್ ಎರಡೂ ತಿಂಗಳಿಗೆ ಸೇರಿ ಎಂಬಂತೆ ಒಂದೇ ಸಂಚಿಕೆಯನ್ನು ಮಾಡಿದ್ದಕ್ಕಾಗಿ ನಾವು ಅನೇಕರಿಂದ ಆಕ್ಷೇಪಣೆಗಳನ್ನು ಎದುರಿಸಬೇಕಾಯ್ತು. ಆದರೆ ಪರಿಸ್ಥಿತಿಗಳ ಅನಿವಾರ್ಯತೆಯಲ್ಲಿ ನಾವು ಅಸಹಯಾಕರಾಗಿದ್ದೇವೆ ಎಂದು ತಿಳಿಸಲೇಬೇಕು. ಬ್ಲಾಗುಗಳಲ್ಲಿ ಚಿಟಿಕೆ ಹೊಡೆಯುವಷ್ಟರಲ್ಲಿ ಲೇಖನಗಳನ್ನು ಪ್ರಕಟಿಸಿಬಿಡಬಹುದು. ಆದರೆ ಪತ್ರಿಕೆಯನ್ನು ಮುದ್ರಿಸಿ ಅದನ್ನು ಓದುಗರಿಗೆ ತಲುಪಿಸುವ ಕೆಲಸ ತ್ರಾಸದ್ದು. ಮೇಲಾಗಿ ಈ ಪೋಸ್ಟ್ ಆಫೀಸು, ಪ್ರೆಸ್ಸುಗಳೆಲ್ಲಾ ನಮ್ಮ ಕಾಲೇಜು ಸಮಯ ಮುಗಿಯುವುದನ್ನೇ ಕಾಯುತ್ತಿರುವಂತೆ ಮುಂಚಿಕೊಂಡು ಬಿಡುತ್ತವೆ. ನಾವು ನಾನಾ ತರಹದ ಸಾಹಸಗಳನ್ನು ಮಾಡುತ್ತಾ ಪ್ರತಿ ತಿಂಗಳ ಪತ್ರಿಕೆಯ ಕೆಲಸವನ್ನು [...]
Posted by: uniquesupri on: October 1, 2008
ಪ್ರೀತಿಯ ಸಿಗರೇಟೇ,
ಹೇಗಿರುವೆ… ನಿನ್ನನ್ನು ಕಂಡು ತುಂಬಾ ದಿನಗಳಾದವು ಅಲ್ಲವಾ? ನಿನಗೆ ನನ್ನ ನೆನಪಿದೆಯೋ ಇಲ್ಲವೋ ಕಾಣೆ. ಆದರೆ ನಾನು ಮಾತ್ರ ಕಳೆದ ಹದಿನೈದೋ, ಇಪ್ಪತ್ತೋ ದಿನಗಳಿಂದ ನಿನ್ನನ್ನು ನೆನದು ನೆನೆದು ವಿಪರೀತ ಹಿಂಸೆಯನ್ನು ಅನುಭವಿಸಿದ್ದೇನೆ. ಮರೆವು ಇಷ್ಟು ದುಬಾರಿ ಎಂತ ನನಗೆ ಎಂದೂ ಅನಿಸಿದ್ದೇ ಇಲ್ಲ. ಪರೀಕ್ಷೆಗಾಗಿ ಓದಿದ್ದ ವಿಷಯಗಳನ್ನು ಬಿಡು, ಉಪನಯನ ಮಾಡಿಸಿದ ಮೂರನೆಯ ದಿನಕ್ಕೆ ಅಪ್ಪ ಆಕ್ಸಿಡೆಂಟಿನಲ್ಲಿ ಉಸಿರುಬಿಟ್ಟ ದಿನದ ನೆನಪು ಮಸುಕು ಮಸುಕಾಗಿಯಾದರೂ ನೆನಪಿಲ್ಲ. ಆದರೆ ನಿನ್ನ ಮರೆಯುವುದಕ್ಕೆ ನಾನು ಪಟ್ಟ ಪಾಡಿದೆಯಲ್ಲ, [...]
Posted by: uniquesupri on: October 1, 2008
(ಕಳೆದ ಸಂಚಿಕೆಯಿಂದ….)
‘ನಾನಾಗಿಯೇ ಮೇಲೆ ಬಿದ್ದು ಮಾತನಾಡಿಸಲು ಹೋದರೆ ಹುಡುಗೀರು ನನ್ನನ್ನು ಚೀಪ್ ಅಂತ ನೋಡುವುದಿಲ್ಲವಾ? ನನ್ನ ಗೆಳೆಯರನೇಕರು ಹಾಗೆ ಮಾಡುವುದನ್ನು ನೋಡಿದ್ದೇನೆ. ನನಗೇ ಅವರು ಜೊಲ್ಲು ಪಾರ್ಟಿಗಳ ಹಾಗೆ ಕಾಣಿಸಿಬಿಡುತ್ತಾರೆ. ಇನ್ನು ಹುಡುಗಿಯರು ಅವರನ್ನು ಹೇಗೆ ಕಾಣಬಹುದು ಅಲ್ಲವಾ? ಅದಕ್ಕೇ ನಾನಾಗಿ ಯಾವ ಹುಡುಗಿಯನ್ನೂ ಮಾತನಾಡಿಸುವುದಿಲ್ಲ, ಎಲ್ಲಾದರೂ ಮಾತನಾಡುವ ಅವಕಾಶ ಸಿಕ್ಕರೂ ತೀರಾ ಚುಟುಕಾಗಿ, ಎಲ್ಲೂ ನನ್ನ ಆತ್ಮಾಭಿಮಾನಕ್ಕೆ ಧಕ್ಕೆಯಾಗದ ಹಾಗೆ, ಆಕೆ ಬೇರೇನನ್ನೂ ಕಲ್ಪಿಸಿಕೊಳ್ಳದ ಹಾಗೆ, ಅಸಲಿಗೆ ಇಬ್ಬರ ನಡುವೆ ಯಾವುದಾದರೂ ಸೆಳೆತಕ್ಕೆ ಆಸ್ಪದವನ್ನೂ ಕೊಡದ [...]
Posted by: uniquesupri on: October 1, 2008
- ರಂಜಿತ್ ಅಡಿಗ
ಪ್ರೀತಿಯೇ ಹಾಗೆ!
ಬದುಕಿನಲ್ಲಿ ಎಲ್ಲಾ ಸಾಧಿಸಿದವನಿಗೆ ತೃಪ್ತಿ ಸಿಗಬಹುದು. ‘ಅಬ್ಬ! ಎಲ್ಲ ಸಾಧಿಸಿದೆ… ಇನ್ನು ಸಾಕು’ ಅನ್ನಿಸಬಹುದು. ಆದರೆ ಪ್ರೀತಿಯ ವಿಷಯದಲ್ಲಿ ಎದೆಯ ಮಡಿಕೆಗೆ ಎಂದಿಗೂ ತೂತು. ಪ್ರೀತಿ ಎಷ್ಟು ಸಿಕ್ಕಿದರೂ ಅವರ ದಾಹ ನೀಗದು. ಜಗತ್ತನ್ನೇ ಗೆದ್ದೆ ಅಂದವನೂ ಪ್ರೀತಿಯ ವಿಷಯದಲ್ಲಿ ಮೊಣಕಾಲೂರಿ ಬೇಡಲೇಬೇಕು. ಹಿಡಿ ಪ್ರೀತಿಗಾಗಿ ಫಕೀರನಾಗಲೇ ಬೇಕು. ಯಾಕೆಂದರೆ…
ಪ್ರೀತಿಯೇ ಹಾಗೆ!
ಪ್ರೀತಿಯೆಂದರೆ ಎದೆಯ ಹಸಿವು. ಉಸಿರು, ನೀರು, ಆಹಾರ ದೇಹಕ್ಕೆಷ್ಟು ಅಗತ್ಯವೋ ಅಷ್ಟೇ ಅಗತ್ಯ ಹೃದಯದ ಹಸಿವು ನೀಗಲೂ ಇದೆ. ಪ್ರೀತಿ ಎಂಬುದು [...]
Posted by: uniquesupri on: October 1, 2008
‘ಆ ಕಾದಂಬರಿ ಕೊನೆಗೂ ಏನೂ conclusion ಕೊಡಲಿಲ್ಲ. ಅದು ಸಮಸ್ಯೆಗಳೊಂದಿಗೇ ಶುರುವಾಗಿ ಸಮಸ್ಯೆಗಳೊಂದಿಗೇ ಅಂತ್ಯವಾಗುತ್ತದೆ. ಅದರ ಅಂತ್ಯ ನಿನಗೇನಾದರೂ ಗೊತ್ತಾಯಿತಾ?’ ಎಂದು ಕೇಳಿದ್ದಳು ಆಕೆ.
‘ಕನ್‌ಕ್ಲೂಶನ್ ಇರಲೇ ಬೇಕಾ?’ ಕೇಳಿದ್ದೆ. ಯಾಕೋ ಹಿಂಗೆ ತುಂಬಾ ತಿಳಿದವನ ಹಾಗೆ, ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ಹಾಗೆ ಮಾತನಾಡುವ ಚಟ ಹತ್ತಿಸಿಕೊಂಡಿದ್ದೇನೆಯೋ ಎಂಬ ಆತಂಕ ಹುಟ್ಟಿಕೊಂಡಿತ್ತು. ನನ್ನ ಅಭಿಪ್ರಾಯ ಎಂದು ನಾನು ಹೇಳುವುದು ನಿಜಕ್ಕೂ ನನ್ನ ಅನಿಸಿಕೆಯೋ ಅಥವಾ ಇತರರು ಇದು ನನ್ನ ಅಭಿಪ್ರಾಯ ಎಂದು ತಿಳಿದುಕೊಳ್ಳಲಿ ಎಂದು ಮುತುವರ್ಜಿಯಿಂದ ಫಾರ್ಮ್ ಮಾಡಿದ ಚಿಂತನೆಯೋ [...]
Recent Comments