ಕಲರವ

Archive for August 2008

ಆಗಸ್ಟ್ ಸಂಚಿಕೆಯ ಮುಖಪುಟ

Posted by: uniquesupri on: August 29, 2008

ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?

‘ಹೆಣ್ಣು ಮಗಳೊಬ್ಬಳು ಭಾರತದ ರಸ್ತೆಗಳ ಮೇಲೆ ಮಧ್ಯರಾತ್ರಿಯಲ್ಲಿ ನಿರ್ಭಯವಾಗಿ ಓಡಾಡುವಂತಾದಾಗಲೇ ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ’ ಎಂದರು ಮಹಾತ್ಮಾ ಗಾಂಧಿ.
ನಮ್ಮ ದೇಶದ, ಸಮಾಜದ ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ ನಾವು ‘ಸಿಕ್ಕಿತು, ಸಿಕ್ಕಿತು’ ಎಂದು ಸಂಭ್ರಮಿಸುತ್ತಿರುವ ಸ್ವಾತಂತ್ರ್ಯವಾದರೂ ಎಂಥದ್ದು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲೇ ಬೇಕಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅಷ್ಟು ಹೋರಾಡಿದ ಮಹಾತ್ಮರು ಬಯಸಿದ್ದ ಸ್ವಾತಂತ್ರ್ಯ ಯಾವ ಬಗೆಯದ್ದು, ನಾವು ಪಡೆದಿರುವ ಸ್ವಾತಂತ್ರ್ಯ ಎಂಥದ್ದು?
ಸ್ವಾತಂತ್ರ್ಯವೆಂದರೆ ಅದು ಸ್ವೇಚ್ಛೆಯಾ? ಏನನ್ನು ಬೇಕಾದರೂ [...]

ಆಗಸ್ಟ್ ಸಂಚಿಕೆಯ ತಯಾರಿ

Posted by: uniquesupri on: August 12, 2008

ಆಗಸ್ಟ್ ಸಂಚಿಕೆಯ ತಯಾರಿ
ಜುಲೈ ಸಂಚಿಕೆಯನ್ನು ಮುಗಿಸಿ ಕೊಂಚ ದಣಿವಾರಿಸಿಕೊಂಡು ಆಗಸ್ಟ್ ತಿಂಗಳ ಸಂಚಿಕೆಯ ತಯಾರಿಗೆ ಕೈ ಹಾಕಿದ್ದೇವೆ. ಆಗಸ್ಟ್ ಸಂಚಿಕೆಯ ಮುಖಪುಟದ ವಿಷಯ ‘ಸ್ವಾತಂತ್ರ್ಯ’. ಸ್ವಾತಂತ್ರ್ಯ ಎಂದರೇನು? ೧೯೪೭ ಆಗಸ್ಟ್ ಹದಿನೈದರಂದು ನಾವು ಪಡೆದದ್ದು ಯಾವ ಬಗೆಯ ಸ್ವಾತಂತ್ರ್ಯ? ಇದನ್ನೇನಾ ನಮ್ಮ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು ಆಶಿಸಿದ್ದು. ಈ ಸ್ವಾತಂತ್ರ್ಯಕ್ಕೇನಾ ನಮ್ಮ ದೇಶದ ಲಕ್ಷಾಂತರ ಮಂದಿ ಯುವಕ-ಯುವತಿಯರು ಪ್ರಾಣ ತೆತ್ತಿದ್ದು? ನಾವು ನಿಜಕ್ಕೂ ಈಗ ಸ್ವತಂತ್ರರೇ? ನಿಜವಾದ ಸ್ವಾತಂತ್ರ್ಯವೆಂದರೆ ಹೇಗಿರಬೇಕು? ಸ್ವತಂತ್ರ ಭಾರತದಲ್ಲಿ ಪ್ರಜೆಗಳ ಚೇತನ, ಆತ್ಮಶಕ್ತಿ [...]

ಎದೆಯ ದನಿ ೧ (ಧಾರಾವಾಹಿ)

Posted by: uniquesupri on: August 2, 2008

ಬಹು ದೂರದ ಪಯಣಕ್ಕೆ ತನ್ನನ್ನು ತಾನು ತಯಾರು ಮಾಡಿಕೊಳ್ಳುತ್ತಿರುವಂತೆ ಗಂಭೀರವಾಗಿ ನಿಂತಿತ್ತು ಬಸ್ಸು. ಡ್ರೈವರ್ ಬಸ್ಸಿನ ಏಜನ್ಸಿಯ ಮಾಲೀಕನೊಂದಿಗೆ ಅದರ ಗೇರ್ ಬಾಕ್ಸ್ ಬಗೆಗೆ ಏನೋ ಕಮೆಂಟ್ ಮಾಡುತ್ತಿದ್ದ. ಕ್ಲೀನರ್ ತನ್ನ ಎಂದಿನ ಚಾಕಚಕ್ಯತೆಯಿಂದ ಬಸ್ಸಿನ ಗಾಜಿನ ಮುಖವನ್ನು ಒರೆಸುತ್ತಿದ್ದ. ಕಂಡಕ್ಟರ್ ಬಸ್ಸಿನ ಪಕ್ಕೆಯನ್ನು ಸೀಳಿಟ್ಟಂತೆ ಡಿಕ್ಕಿಯನ್ನು ತೆರೆದು ಪ್ರಯಾಣಿಕರ ಲಗೇಜುಗಳನ್ನು ಗುರುತು ಹಾಕಿ ಒಳಕ್ಕೆ ನೂಕುತ್ತಿದ್ದ. ಆಗ ತಾನೆ ಆವರಿಸುತ್ತಿದ್ದ ಕತ್ತಲೆಗೆ ಇದ್ಯಾವುದರ ಪರಿವೆಯೂ ಇದ್ದಂತೆ ಕಾಣುತ್ತಿರಲಿಲ್ಲ. ಜಗತ್ತಿನ ಕೋಟ್ಯಂತರ ಜೀವಿ ಜಂತುಗಳ ವ್ಯವಹಾರಗಳಲ್ಲಿ ಇದೂ [...]

ವಿಪರೀತ ಮಾತನಾಡುತ್ತಿದ್ದೇನಾ ಎಂಬ ಸಂಶಯ ಮೂಡುತ್ತದೆ. ಅನೇಕ ವೇಳೆ ಆತಂಕಕ್ಕೂ ಒಳಗಾಗುತ್ತೇನೆ. ಯಾರಾದರೂ ಮುಖಕ್ಕೆ ಹೊಡೆದಂತೆ ‘ಮಾತು ಜಾಸ್ತಿ ಆಯ್ತು. ಮಾತು ಕಡಿಮೆ ಮಾಡಿ ಕೆಲಸ ಜಾಸ್ತಿ ಮಾಡಬೇಕು’ ಎಂದು ಬಿಡುವರೋ ಎಂದು ಗಾಬರಿಯಾಗುತ್ತದೆ. ಹಾಗೆ ಬೈಸಿಕೊಳ್ಳಬಾರದು ಎಂದು ಎಚ್ಚರಿಕೆ ತೆಗೆದುಕೊಳ್ಳೋಣ ಎಂದು ಯೋಚಿಸುತ್ತಾ ಕುಳಿತರೆ, ಮಾತು ಎಷ್ಟು ಆಡಬೇಕು ಎಂದು [...]

ಆತ ರಾಫೆಲ್ ನಡಾಲ್!

Posted by: uniquesupri on: August 1, 2008

‘ಆದರೆ ಫೆಡರರ್‌ಗೆ ನಾನೇ ನಂಬರ್ ಒನ್!’ ಸತತ ನೂರ ಐವತ್ತು ವಾರಗಳವರೆಗೆ ಟೆನ್ನಿಸ್ ವಿಶ್ವ ರ್ಯಾಂಕಿಂಗಿನಲ್ಲಿ ಎರಡನೆಯ ಸ್ಥಾನವನ್ನು ಆಕ್ರಮಿಸಿಕೊಂಡು ಕುಳಿತಿದ್ದ ಸ್ಪೇನಿನ ಕುಡಿ ಮೀಸೆಯ ಯುವಕ ಹೀಗಂತ ಅಬ್ಬರಿಸಿದ್ದ ಪತ್ರಕರ್ತರೆದುರು. ಜುಲೈ ೬, ೨೦೦೮ರ ಸಂಜೆಗಾಗಲೇ ಆತ ಫೆಡರರ್‌ನನ್ನೂ ಸೋಲಿಸಿ ವಿಂಬಲ್ಡನ್ ಕಿರೀಟ ತೊಟ್ಟಾಗಿತ್ತು. ಸತತ ಆರು ವರ್ಷಗಳಲ್ಲಿ ಹುಲ್ಲುಗಾವಲಿನ [...]

‘ಜಿಂದಗಿ’ ಇದು ಕಾಲೇಜು ಹಂತದ ಯುವ ಮನಸ್ಸಿನ ತಳಮಳ, ಗೊಂದಲ, ಆಸೆ, ಕನಸುಗಳ ಗುಚ್ಛ.

ಆಗಿನ್ನೂ ನನಗೂ ಎಲ್ಲಾ ತಿಳಿಯುತ್ತೆ ಅಂತ [...]


Blog Stats

  • 13,367 hits

 

August 2008
M T W T F S S
« Jul   Sep »
 123
45678910
11121314151617
18192021222324
25262728293031