Posted by: uniquesupri on: July 31, 2008
ಓ ಮಾಯಾಂಗನೆ ನಗರವೇ!
ನಾನು ಕಲಾವಿದ. ನೆನಪಾಗಲಿಲ್ಲವಾ?ಊರೆಲ್ಲಾ ಸವಿ ನಿದ್ದೆಯಲ್ಲಿ ಮುಳುಗಿ ದಣಿವು ಕಳೆದುಕೊಳ್ಳುತ್ತಾ ಸವಿಗನಸು ಕಾಣುತ್ತಿರುವಾಗ ನಾನು ನದಿಯ ದಂಡೆಯ ಮೇಲೆ ಕುಳಿತು ಶುಭ್ರ ಬಿಳಿಯ ಕಾಗದಕ್ಕೆ ಬಣ್ಣದ ಕುಂಚದ ಸ್ಪರ್ಶ ನೀಡುವುದರಲ್ಲಿ ಮಗ್ನನಾಗಿರುತ್ತೇನೆ. ಮುಸ್ಸಂಜೆಯ ಹೊತ್ತಿನಲ್ಲಿ ಮರದ ಕೆಳಗೆ ಕುಳಿತು ನಾಲ್ಕು ಸಾಲು ಗೀಚಿ ಬಿಸಾಕುವುದಕ್ಕಾಗಿ ಗಂಟೆ ಗಟ್ಟಲೆ ಧ್ಯಾನಸ್ಥನಾಗಿರುತ್ತೇನೆ. [...]
Posted by: uniquesupri on: July 31, 2008
ಗುರುವಿನಂಥ ಗೆಳತಿಯೇ,
‘ಹುಡುಗಿಯರ ಜತೆ ಮಾತಾಡುವುದು ಅಂದರೇನೆ ನನಗೆ ಅಲರ್ಜಿ’, ಒಂದೇ ಮಾತಲ್ಲಿ ಹೇಳಿ ಬಿಟ್ಟಿದ್ದೆ ನಾನು. ನೀನು ಜೋರಾಗಿ ನಗುತ್ತಿದ್ದದ್ದು ನನ್ನ ರೂಂ ಮೇಟ್‌ಗೂ ಕೇಳಿತ್ತು.
‘ಹಾಗಾದರೆ ನನ್ನ ಜೊತೆಗೆ ಮಾತಾಡ್ತಿದ್ದೀಯಲ್ಲ?’ ಅದು ಮಾತೋ, ನಿನ್ನ ನಗುವೇ ಹೊರಡಿಸಿದ ಅರ್ಥವೋ ತಿಳಿಯದೆ ನಾನು ಅರೆಕ್ಷಣ ಮೌನವಾಗಿದ್ದೆ.
‘ಹುಚ್ಚಪ್ಪ, ಹುಡುಗೀರೇನು ಬೇರೆ ಗ್ರಹದಿಂದ ಇಳಿದು ಬಂದವರಲ್ಲ. ಅವರೂ ನಿನ್ನ ಹಾಗೇ ಮನುಷ್ಯರು. ದೇವರು ಎಲ್ಲಾ ಗುಣಗಳು ಇರುವ ಒಂದೇ ಜಾತಿಯ ಮನುಷ್ಯರನ್ನು ಸೃಷ್ಠಿ ಮಾಡಿಬಿಟ್ಟರೆ ಅವರಿಗೆ ಒಬ್ಬರಲ್ಲೊಬ್ಬರಿಗೆ ಆಸಕ್ತಿಯೇ ಹುಟ್ಟುವುದಿಲ್ಲ ಅನ್ನೋ [...]
Posted by: uniquesupri on: July 31, 2008
ಭಾರತದ ಪತ್ರಿಕೆಗಳಿಗೆ ಏಪ್ರಿಲ್ ಒಂದು ಎರಡು ತಿಂಗಳು ತಡವಾಗಿ ಬಂದಿತ್ತು! ಹೌದು! ಇಪ್ಪತ್ನಾಲ್ಕು ಗಂಟೆಗಳ ಕಾಲ ಅಂಗಡಿ ತೆಗೆದಿಟ್ಟುಕೊಂಡು ವದಂತಿ, ಸುಳ್ಳು ಮಾಹಿತಿ, ತಮ್ಮ ಕಲ್ಪನೆಗಳನ್ನೇ gospel truth ಎನ್ನುವಂತೆ ಜನರಿಗೆ ಉಣಬಡಿಸುವ ಟಿವಿ ಚಾನಲ್‌ಗಳು, ದಿನಕ್ಕೊಂದು ಸೆನ್ಸೇಷನ್ ಹುಟ್ಟಿಸುವಂತೆ ವರದಿ ಮಾಡುವ ಪತ್ರಿಕೆಗಳು ಅಂದು ಬೆಚ್ಚಿ ಬಿದ್ದವು, ತಮ್ಮ ಮೂರ್ಖತನವನ್ನು ಬಯಲುಗೊಳಿಸಿ ಬೆತ್ತಲಾಗಿದ್ದವು. ರಾಷ್ಟ್ರಮಟ್ಟದಲ್ಲಿ ಹೆಸರಾಗಿರುವ ಇಂಡಿಯನ್ ಎಕ್ಸ್‌ಪ್ರೆಸ್, ಟೈಮ್ಸಾಫ್ ಇಂಡಿಯ, ಟೆಲಿಗ್ರಾಫ್, ಡೆಕ್ಕನ್ ಹೆರಾಲ್ಡ್ ನಂತಹ ಪತ್ರಿಕೆಗಳೂ ಸಹ ಕೆಲವು ಬುದ್ಧಿವಂತ ಪತ್ರಕರ್ತರು ಮಾಡಿದ [...]
Posted by: uniquesupri on: July 28, 2008
ಈ ಸಂಚಿಕೆಯ ಚರ್ಚೆಯ ವಸ್ತು, ಇಪ್ಪತೊಂದನೆಯ ಶತಮಾನದ ಮಾಹಿತಿಕ್ರಾಂತಿಯ ಯುಗದಲ್ಲಿ ಶಿಕ್ಷಕರು, ಗುರು-ಶಿಷ್ಯ ಸಂಸ್ಕೃತಿ ಅಪ್ರಸ್ತುತವಾಗುತ್ತಿದೆಯೇ? ಇಲ್ಲ, ಯಾವ ಕಾಲದಲ್ಲೂ ಗುರುವಿನ ಸ್ಥಾನವನ್ನು ಯಾವುದರಿಂದಲೂ ತುಂಬಲುಸ ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ ಚೇತನ್ ಸಾಗರ್. [...]
Posted by: uniquesupri on: July 28, 2008
ಈ ಸಂಚಿಕೆಯ ಚರ್ಚೆಯ ವಸ್ತು, ಇಪ್ಪತೊಂದನೆಯ ಶತಮಾನದ ಮಾಹಿತಿಕ್ರಾಂತಿಯ ಯುಗದಲ್ಲಿ ಶಿಕ್ಷಕರು, ಗುರು-ಶಿಷ್ಯ ಸಂಸ್ಕೃತಿ ಅಪ್ರಸ್ತುತವಾಗುತ್ತಿದೆಯೇ? ಹೌದು, ಮಾಹಿತಿ ಕ್ರಾಂತಿಯ ಈ ಶತಮಾನದಲ್ಲಿ ಶಿಕ್ಷಕ ನೆಪಮಾತ್ರವಾಗಿದ್ದಾನೆ. ಶಿಕ್ಷಣ ಕ್ಷೇತ್ರವೇ ವ್ಯಾಪಾರೀಕರಣಗೊಂಡಿರುವಾಗ ಗುರು-ಶಿಷ್ಯ ಸಂಸ್ಕೃತಿ ಹಾಸ್ಯಾಸ್ಪದ ಎಂದು ವಾದಿಸಿದ್ದಾರೆ ಚಂದ್ರಶೇಖರ್ ಪ್ರಸಾದ್. [...]
Posted by: uniquesupri on: July 28, 2008
ಪಕ್ಕದ ಮನೆಯಾಕೆ ಬೆಳಿಗ್ಗೆಯಿಂದ ಹುಡುಕಾಡುತ್ತಿದ್ದರು. ಅವರ ೨ ವರ್ಷದ ಮಗು ಹಣವಿದ್ದ ಪರ್ಸನ್ನು ಎಲ್ಲೋ ಹಾಳು ಮಾಡಿತ್ತು. ಆಟದ ಸಂಭ್ರಮದಲ್ಲಿ ಗೃಹಕೃತ್ಯದಲ್ಲಿದ್ದಾಕೆ ಆ ಹೊತ್ತಿನಲ್ಲಿ ಗಮನಿಸಲಿಲ್ಲ. ಏನನ್ನೋ ಕೊಳ್ಳಬಯಸಿದಾಗ ಆ ಬಗ್ಗೆ ಗಮನಿಸಿದ್ದರು. ಹುಡುಕಾಟ ಪ್ರಾರಂಭವಾಗಿತ್ತು. ಮನೆ ಹೊರಗೆ, ಒಳಗೆ ಎಲ್ಲಾ ಕಡೆ ಹುಡುಕಾಡಿದರೂ ಪರ್ಸು ಸಿಕ್ಕಲಿಲ್ಲ. ಅಳುತ್ತಾ ಬಂದ ಆಕೆ ಪಕ್ಕದ ಮನೆಯವರ ಸಂಗಡ ಹೇಳಿಕೊಂಡರು. ಬಡವರಾದ, ವಿಧವೆ ನರಸಮ್ಮ ಅವರ ನೆರೆಮನೆಯಾಕೆ. ತಕ್ಷಣ ಅವರೊಂದಿಗೆ ಸೇರಿ ತಾವೂ ಹುಡುಕಾಡತೊಡಗಿದ್ದರು. ಹಣದ ಬೆಲೆ ನರಸಮ್ಮ ಚೆನ್ನಾಗಿ [...]
Posted by: uniquesupri on: July 28, 2008
ಸಾಮ್ರಾಟರ ಸಡಗರ!
ಅಂತರ್ಜಾಲದಲ್ಲಿ ನಗೆ ನಗಾರಿ ಡಾಟ್ ಕಾಮ್ ಎಂಬ ಬ್ಲಾಗನ್ನು ತೆರೆದುಕೊಂಡು ಹಾಸ್ಯದ ರಸಗವಳವನ್ನು ಉಣಬಡಿಸುವ ನಗೆ ಸಾಮ್ರಾಟರು ನಮ್ಮ ಪತ್ರಿಕೆಯ ಬಳಗಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಅವರ ಬ್ಲಾಗಿನ ಬರಹಗಳ ರಾಶಿಯಿಂದ ಯಾವ ಬರಹವನ್ನಾದರೂ ಆರಿಸಿಕೊಂಡು ಪ್ರಕಟಿಸಿಕೊಳ್ಳುವ ಸ್ವಾತಂತ್ರ್ಯವನ್ನು ನಮಗೆ ಕೊಟ್ಟುಬಿಟ್ಟಿದ್ದಾರೆ!
ಈ ಸಂಚಿಕೆಯಿಂದ ಪ್ರತಿ ತಿಂಗಳು ಎರಡು ಪುಟ ನಗೆ ಸಾಮ್ರಾಟರಿಗೆ [...]
Posted by: uniquesupri on: July 27, 2008
ಕೊಂಚ ತಡವಾದರೂ ಜುಲೈ ತಿಂಗಳ ಪತ್ರಿಕೆಯನ್ನು ರೆಡಿ ಮಾಡಿ ಆಗಿದೆ. ಇದು ನಮ್ಮ ಪ್ರತಿ ತಿಂಗಳ ದಿಗ್ವಿಜಯ! ಈ ತಿಂಗಳ ಸಂಚಿಕೆಯ ಪಿಡಿಎಫ್ ಪ್ರತಿಗಾಗಿ ಇಲ್ಲಿ ಚಿಟುಕಿಸಿ.
Posted by: uniquesupri on: July 27, 2008
ನಮ್ಮ ಯುವ ಪೀಳಿಗೆಯನ್ನು ನೆನೆಸಿಕೊಂಡರೆ ಅಪ್ರಯತ್ನಪೂರ್ವಕವಾಗಿ ನನ್ನೆದುರು ಬರುವುದು ತಳುಕು ಬಳುಕಿನಲ್ಲಿ ಮುಳುಗಿದ ಯುವಕರ ಚಿತ್ರಣ. ಭಾರತೀಯ ಸಂಸ್ಕೃತಿ, ಪರಂಪರೆಯ ಬಗ್ಗೆ ಅಭಿಮಾನ, ನಮ್ಮದು ಎನ್ನುವ ಭಾವ ಬೆಳೆಯುವ ಬದಲು ಅದರ ಬಗ್ಗೆ ಅಸಡ್ಡೆ ಹಾಗೂ ಅದನ್ನು ಲೇವಡಿ ಮಾಡಿ ಸುಖಿಸುವ ಮನೋಭಾವ ಬೆಳೆಯುತ್ತಿದೆ. ವಿದೇಶಿ ವಿಕೃತಿಯನ್ನು ಆಧುನಿಕತೆಯ ಹೆಸರಿನಲ್ಲಿ ಅಪ್ಪಿಕೊಳ್ಳುತ್ತಿರುವ [...]
Posted by: uniquesupri on: July 27, 2008
ಪ್ರೀತಿಯ ಮಚ್ಚಿಗಳೇ, ಎಲ್ರಿಗೂ ಈ ಮಚೆಂಪು ಮಾಡೋ ನಮಸ್ಕಾರ.
‘ಈ ನಮ್ ಜನ ಮಾತಾಡೋದೇ ಒಂದು ಮಾಡೋದೇ ಇನ್ನೊಂದು’ ಅಂತ ಗೊಣಗುತ್ತಿದ್ದೆ. As usual ನನ್ನ ಗೊಣಗಾಟವನ್ನ ಕೆಳಲಿಕ್ಕೆ ನನ್ನ ಪಕ್ಕ ಮಲ್ಲಿ ಇದ್ದ. ‘ಏನ್ ಮಚ್ಚಿ, ಮತ್ತೆ ಯಾವ್ದೋ ದೊಡ್ಡ disappointment ಆಗಿರೋ ಹಾಗಿದೆ? ಏನ್ಸಮಾಚಾರ?’ ಅಂದ. ನಾನು ಅವತ್ತು ಬೆಳ್ಗೆ [...]
Recent Comments