ಕಲರವ

Icon

ಇದು ಬ್ಲಾಗ್ ಲೋಕದ ‘ಸಡಗರ’!

ಮೇ ತಿಂಗಳ ಸಂಚಿಕೆ ತಯಾರಿ

ಏಪ್ರಿಲ್ ತಿಂಗಳ ‘ಕಲರವ‘ ಸಂಚಿಕೆಯನ್ನು ನಿಮ್ಮ ಕೈಗಿಟ್ಟು ಕೊಂಚ ದಣಿವಾರಿಸಿಕೊಂಡು ಮೇ ತಿಂಗಳ ಸಂಚಿಕೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ.

ಪ್ರತಿ ಸಂಚಿಕೆಯಲ್ಲಿ ಮುಖಪುಟದ ಚರ್ಚೆಯಾಗಿ ಒಂದೊಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸಂಪ್ರದಾಯದ ಬಗ್ಗೆ ನಿಮಗೆ ತಿಳಿದಿರಬಹುದು. ಮೇ ತಿಂಗಳ ಸಂಚಿಕೆಯ ಮುಖಪುಟದ ವಿಷಯವಾಗಿ ನಾವು ಆಯ್ಕೆ ಮಾಡಿರುವುದು ‘ಪ್ರತಿಭಾ ಪಲಾಯನ’ ಅಥವಾ ‘Brain Drain’. ಉನ್ನತ ವ್ಯಾಸಂಗ ಪಡೆದವರು ಇತರ ದೇಶಗಳಿಗೆ ನೌಕರಿಯನ್ನರಿಸಿಕೊಂಡು ಹೋಗುವುದು ನಮ್ಮ ದೇಶಕ್ಕೆ ಯಾವ ರೀತಿಯ ನಷ್ಟವನ್ನುಂಟು ಮಾಡುತ್ತದೆ? ನಮ್ಮ ದೇಶಕ್ಕಾಗಿ ಅವರ ಪ್ರತಿಭೆಯನ್ನು ಬಳಸಿಕೊಳ್ಳುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ರಿವರ್ಸ್ ಬ್ರೈನ್ ಡ್ರೈನ್ ಅಂದರೇನು?

ಈ ಎಲ್ಲಾ ವಿಷಯಗಳ ಚರ್ಚೆಯಲ್ಲಿ ಹಾದು ಹೋಗಲಿವೆ. ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಬಹುದು. ಅದು ನಮ್ಮ ಸಂಚಿಕೆಯನ್ನು ರೂಪಿಸುವುದರಲ್ಲಿ ಸಹಕಾರಿಯಾಗಬಹುದು…

-ಸಂಪಾದಕ

Filed under: ಮಾತುಕತೆ , , ,

4 Responses

  1. ಸಚಿನ್ ಕುಮಾರ ಬಿ.ಹಿರೇಮಠ says:

    ನಮಸ್ತೆ,
    ನಿಮ್ಮ ಬ್ಲಾಗ್ ತುಂಬಾ ಸೊಗಸಾಗಿದೆ. ನಿಮ್ಮ ಬ್ಲಾಗ್ ನ್ನು ನೋಡಿಯೇ ನಾನು ಒಂದು ಚಿಕ್ಕ ಬ್ಲಾಗ್ ಆರಂಭಿಸಿರುವೆ. ಆದಷ್ಟು ಬೇಗ ನಿಮ್ಮ ಪತ್ರಿಕ್ಗೆ ಚಂದಾದಾರನಾಗುತ್ತೇನೆ. ಅಂತರ್ಮುಖಿಯವರ ಲೇಖನಗಳು ತುಂಬಾ ಸೊಗಸಾಗಿವೆ.
    ಧನ್ಯಾವಾದಗಳು,
    ಸಚಿನ್ ಕುಮಾರ ಬಿ.ಹಿರೇಮಠ ,ಜೇವರ್ಗಿ ಜಿ:ಕಲಬುರ್ಗಿ

  2. uniquesupri says:

    ಸಚಿನ್,
    ನಮ್ಮ ಬ್ಲಾಗಿನ ಪ್ರೇರಣೆಯಿಂದ ನೀವು ಒಂದು ಬ್ಲಾಗ್ ತೆರೆದಿರುವುದು ಸಂತೋಷದ ಸಂಗತಿ. ಪತ್ರಿಕೆಯ ಬಗೆಗಿನ ನಿಮ್ಮ ಕಾಳಜಿಗೆ ನಾವು ಆಭಾರಿ….

    ಸುಪ್ರೀತ್

  3. chetana chaitanya says:

    ಬ್ಲಾಗ್ ನೀಟಾಗಿದೆ ಸುಪ್ರೀತ್. ರೆಗ್ಯುಲರ್ರಾಗಿ maintain ಮಾಡು.
    ಕಿವಿ ಹಿಂದದೆ ‘ಸಲಹೆ’ ಕೊಡ್ತಿದೀನಿ ಅಂದ್ಕೋ.

    - ಚೇತನಾ

  4. uniquesupri says:

    ಚೇತನಾಕ್ಕ,

    Irregular ಆದಾಗ ಕಿವಿ ಹಿಂಡುತ್ತಿದ್ದರೇನೆ ನಾವು ಚುರುಕಾಗೋದು….

    ಸುಪ್ರೀತ್

Leave a Reply

ಕನ್ನಡ ದಿನಪತ್ರಿಕೆಗಳು

ಕನ್ನಡ ನಿಯತಕಾಲಿಕೆಗಳು

ಕನ್ನಡ ಪೋರ್ಟಲ್‌ಗಳು

ಕನ್ನಡ ಸಾಮಗ್ರಿ

ಕನ್ನಡ ಹಾಡುಗಳು

ಕನ್ನಡದ ಬ್ಲಾಗುಗಳು

ಚಿತ್ರ ವಾರ್ತೆ