ಕಲರವ

Icon

ಇದು ಬ್ಲಾಗ್ ಲೋಕದ ‘ಸಡಗರ’!

ಗೆಳೆತನದ ಗಮ್ಮತ್ತು

ಸ್ನೇಹ!
ಬಹುಶಃ ಇದು ಪ್ರೀತಿ,ಪ್ರೇಮ, ಪ್ರಣಯದಷ್ಟು ಗೊಂದಲದ ಗೂಡಾದ ಸಂಬಂಧವಲ್ಲ. ಇದರಲ್ಲಿ ಅನವಶ್ಯಕವಾದ ಗೊಂದಲಗಳಿಲ್ಲ, ಆದರ್ಶಗಳಲ್ಲಿನ ತಿಕ್ಕಾಟವಿಲ್ಲ. ಇಲ್ಲಿ ಎಲ್ಲವೂ ನಿಚ್ಚಳ. ತಿಳಿನೀರಿನ ಕೊಳದ ಆಳದಲ್ಲಿ ಮೂಡಿದ ಬಿಂಬದ ಹಾಗೆ!
ಸ್ನೇಹವನ್ನ ಮನುಷ್ಯ ಸಂಬಧಗಳಲ್ಲೇ ಶ್ರೇಷ್ಠ ಎಂದವರಿದ್ದಾರೆ. ತಮ್ಮ ಬದುಕಿನಲ್ಲಿ ಸ್ನೇಹಕ್ಕೆ ಮೊದಲ ಪ್ರಾಶಸ್ತ್ಯದ ಮಣೆ ಹಾಕುವವರಿದ್ದಾರೆ, ಅವರ ಪ್ರಕಾರ ಸ್ನೇಹ ಚಿರಂಜೀವಿ. ಇನ್ನು ಕೆಲವರಿಗೆ ಸ್ನೇಹವೆಂಬುದು ಚದುರಂಗದ ಆಟ. ಬಲ ಪ್ರದರ್ಶನದ ಮೆರೆದಾಟ. ಸ್ನೇಹಿತರು ಅವರಿಗೆ ತಮ್ಮ ಬೆಳವಣಿಗೆಯ ಹಾದಿಯ ಮೆಟ್ಟಿಲುಗಳು.
ಹಣಕ್ಕಾಗಿ ಹಲವರು ಹತ್ತಿರಾಗುತ್ತಾರೆ, ರಕ್ಷಣೆಗಾಗಿ ಹಲವರು ಗುಂಪುಗೂಡುತ್ತಾರೆ, ಐಡೆಂಟಿಟಿ ಕಂಡುಕೊಳ್ಳಲು ಕೆಲವರು ಸ್ನೇಹವನ್ನರಸುತ್ತಾರೆ, ಬೆಳೆಯಲು ಕೆಲವರು ಸ್ನೇಹಿತರನ್ನು ಆಯ್ದುಕೊಂಡರೆ ಕೆಲವರಿಗೆ ಸಹವಾಸವೇ ದೋಷವಾಗುತ್ತದೆ. ಹಾಗಾದರೆ ನಿಜಕ್ಕೂ ಈ ಸ್ನೇಹದ ಆಂತರ್ಯವೇನು? ಇದರ ಗಮ್ಮತ್ತು ಇರೋದು ಎಲ್ಲಿ?
ಉತ್ತರದ ಹುಡುಕಾಟ ಈ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.

-ಸಂ.

Filed under: ಮಾತುಕತೆ , , , , , , , , , , , ,

Leave a Reply

ಕನ್ನಡ ದಿನಪತ್ರಿಕೆಗಳು

ಕನ್ನಡ ನಿಯತಕಾಲಿಕೆಗಳು

ಕನ್ನಡ ಪೋರ್ಟಲ್‌ಗಳು

ಕನ್ನಡ ಸಾಮಗ್ರಿ

ಕನ್ನಡ ಹಾಡುಗಳು

ಕನ್ನಡದ ಬ್ಲಾಗುಗಳು

ಚಿತ್ರ ವಾರ್ತೆ